Tag: ಪೈಲೆಟ್

  • Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

    Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

    ಜೈಪುರ: ಭಾರತೀಯ ವಾಯುಪಡೆಯ (IAF) ಜಾಗ್ವಾರ್ ವಿಮಾನ (Jaguar Fighter Jet) ತರಬೇತಿ ವೇಳೆ ಪತನಗೊಂಡ ಪರಿಣಾಮ ಇಬ್ಬರು ಪೈಲೆಟ್‌ಗಳು (Pilots) ಸಾವನ್ನಪ್ಪಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಭಾನೋಡ ಗ್ರಾಮದಲ್ಲಿ ನಡೆದಿದೆ.

    ದೈನಂದಿನ ತರಬೇತಿ ವೇಳೆ ಬಾನೋಡಾ ಗ್ರಾಮದ ಕೃಷಿ ಭೂಮಿಯಲ್ಲಿ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿಯಲು ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಘಟನೆಯಲ್ಲಿ ನಾಗರಿಕ ಆಸ್ತಿ-ಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ. ಮಧ್ಯಾಹ್ನ 1:25ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಮಾರ್ಗ ಬಸ್ ಸಂಚಾರಕ್ಕೆ ಪೊನ್ನಣ್ಣ ಚಾಲನೆ

  • ಹೆಚ್ಚು ಯೂಟ್ಯೂಬ್ ವ್ಯೂಗಾಗಿ ವಿಮಾನ ಪತನ – ಹುಚ್ಚಾಟಗೈದವನಿಗೆ 20 ವರ್ಷ ಜೈಲು

    ಹೆಚ್ಚು ಯೂಟ್ಯೂಬ್ ವ್ಯೂಗಾಗಿ ವಿಮಾನ ಪತನ – ಹುಚ್ಚಾಟಗೈದವನಿಗೆ 20 ವರ್ಷ ಜೈಲು

    ಲಾಸ್ ಏಂಜಲೀಸ್: ಯೂಟ್ಯೂಬ್‌ನಲ್ಲಿ (You Tube) ಹೆಚ್ಚು ವ್ಯೂ ಗಳಿಸುವ ಸಲುವಾಗಿ ವಿಮಾನ ಪತನ ಮಾಡಿ ಹುಚ್ಚಾಟ ಮಾಡಿದ ಪೈಲೆಟ್ (Pilot) ಯೂಟ್ಯೂಬರ್‌ಗೆ ಫೆಡರಲ್ ಜೈಲ್ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಲೊಂಪೋಕ್‌ನ (Lompoc) ಟ್ರೆವರ್ ಡೇನಿಯಲ್ ಜಾಕೋಬ್ (29) ತಪ್ಪೊಪ್ಪಿಕೊಂಡ ಯೂಟ್ಯೂಬರ್ ಪೈಲೆಟ್. ಜಾಕೋಬ್ ಮನವಿ ಒಪ್ಪಂದದ ಪ್ರಕಾರ, ತಾನೊಬ್ಬ ಅನುಭವಿ ಪೈಲಟ್ ಮತ್ತು ಸ್ಕೈಡ್ರೈವರ್ ಆಗಿದ್ದು, ವಾಲೆಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯಿಂದ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದಾನೆ. ಪ್ರಾಯೋಜಕತ್ವದ ಒಪ್ಪಂದದ ಪ್ರಕಾರ ಜಾಕೋಬ್ ಪೋಸ್ಟ್ ಮಾಡುವ ಯೂಟ್ಯೂಬ್ ವಿಡಿಯೋದಲ್ಲಿ ಕಂಪನಿಯ ವಾಲೆಟ್ ಅನ್ನು ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ನವಂಬರ್ 24, 2021ರಂದು ಜಾಕೋಬ್ (Trevor Daniel Jacob) ತನ್ನ ವಿಮಾನದಲ್ಲಿ ಲೊಂಪೋಕ್ ಸಿಟಿ ವಿಮಾನ ನಿಲ್ದಾಣದಿಂದ ಮ್ಯಾಮತ್ ಲೇಕ್ಸ್‌ಗೆ ಹೊರಟಿದ್ದ. ಈ ವೇಳೆ ತಾನು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹಾರಿದ್ದು, ವಿಮಾನ ಅಪಘಾತಕ್ಕೀಡಾಗಿದೆ ಎಂದು ಮನವಿ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಾನೆ. ವಿಮಾನ ಹಾರಾಟ ನಡೆಸುವ ಮೊದಲು ವಿಮಾನದ ವಿವಿಧ ಭಾಗಗಳಲ್ಲಿ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಿ ಬಳಿಕ ಪ್ಯಾರಾಚೂಟ್ ಸಹಾಯದಿಂದ ಹಾರಿ ಸೆಲ್ಫಿ ಸ್ಟಿಕ್‌ನಲ್ಲಿ ಅಳವಡಿಸಲಾಗಿದ್ದ ವಿಡಿಯೋ ಕ್ಯಾಮರಾ ಮೂಲಕ ವಿಮಾನ ಅಪಘಾತಕ್ಕೀಡಾಗುವ ವಿಡಿಯೋವನ್ನು ಮಾಡಲಾಗಿದೆ. ಆತನ ಹಾರಾಟದ ವಿಡಿಯೋ ರೆಕಾರ್ಡ್‌ಗಳು ಮತ್ತು ವಿಮಾನ ಪತನದ ಡೇಟಾವನ್ನು ಪಡೆದು ತನಿಖೆ ನಡೆಸಲಾಗಿತ್ತು. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!

    ನವಂಬರ್ 26ರಂದು ಜಾಕೋಬ್ ವಿಮಾನ ಪತನದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ಮಾಹಿತಿಯನ್ನು ನೀಡಿದ್ದಾನೆ. ವಿಮಾನ ಪತನದ ಬಗ್ಗೆ ಎನ್‌ಟಿಎಸ್‌ಬಿ ತನಿಖೆ ಆರಂಭಿಸಿದೆ. ಅಲ್ಲದೇ ಜಾಕೋಬ್‌ಗೆ ವಿಮಾನ ಪತನದ ಅವಶೇಷಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿತ್ತು. ವಿಮಾನ ಪತನದ ವಿಡಿಯೋಗಳು ಹಾಗೂ ಅಪಘಾತದ ಸ್ಥಳವನ್ನು ತೋರಿಸಲು ಜಾಕೋಬ್ ಒಪ್ಪಿಕೊಂಡಿದ್ದ. ಇದಾದ ಮೂರು ದಿನಗಳ ನಂತರ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನ ಪತನದ ಬಗ್ಗೆ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು. ಇದನ್ನೂ ಓದಿ: ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಮನವಿ ಒಪ್ಪಂದದ ಪ್ರಕಾರ, ಅವಶೇಷಗಳ ಸ್ಥಳವು ತನಗೆ ತಿಳಿದಿಲ್ಲ ಎಂದು ಜಾಕೋಬ್ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಆದರೆ ವಾಸ್ತವವಾಗಿ ಜಾಕೋಬ್ ತನ್ನ ಸ್ನೇಹಿತನೊಂದಿಗೆ ಹೆಲಿಕಾಪ್ಟರ್ ಮೂಲಕ ವಿಮಾನ ಪತನವಾದ ಸ್ಥಳಕ್ಕೆ ಹೋಗಿ ಅಲ್ಲಿದ್ದ ಅವಶೇಷಗಳನ್ನು ಟ್ರಕ್‌ನ ಟ್ರೈಲರ್‌ಗೆ ಲೋಡ್ ಮಾಡಿ ಅಲ್ಲಿಂದ ಲ್ಯಾಂಪೋಕ್ ಸಿಟಿ ವಿಮಾನನಿಲ್ದಾಣದ ಹ್ಯಾಂಗರ್‌ನಲ್ಲಿ ಇಳಿಸಿದ್ದಾನೆ. ಬಳಿಕ ಅದರ ಅವಶೇಷಗಳನ್ನು ವಿಮಾನ ನಿಲ್ದಾಣದ ಕಸದ ತೊಟ್ಟಿ ಸೇರಿದಂತೆ ಹಲವೆಡೆ ಹಾಕಿ ನಾಶಪಡಿಸಲಾಗಿದೆ. ಇದು ಫೆಡರಲ್ ಅಧಿಕಾರಿಗಳ ತನಿಖೆಯನ್ನು ಅಡ್ಡಿಪಡಿಸುವ ಸಲುವಾಗಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ.ಇದನ್ನೂ ಓದಿ: ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ಅದೇ ವರ್ಷ ಡಿಸೆಂಬರ್ 23ರಂದು ಜಾಕೋಬ್ ತನ್ನ ಯೂಟ್ಯೂಬ್‌ನಲ್ಲಿ ‘ಐ ಕ್ರ್ಯಾಶ್ಡ್ ಮೈ ಏರೋಪ್ಲೇನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಆ ವಿಡಿಯೋ ವಾಲೆಟ್ ಪ್ರಚಾರವನ್ನು ಒಳಗೊಂಡಿದ್ದು, ವಿಮಾನದಿಂದ ಪ್ಯಾರಾಚೂಟ್ ಮೂಲಕ ಹಾರುವುದು ಮತ್ತು ವಿಮಾನ ಪತನವಾಗುವ ದೃಶ್ಯವನ್ನು ಒಳಗೊಂಡಿದೆ. ವಿಡಿಯೋ ಮೂಲಕ ಹಣ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿರುವುದಾಗಿ ಜಾಕೋಬ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ


    ಘಟನೆಯ ಬಳಿಕ ಎಫ್‌ಎಎ ಏಪ್ರಿಲ್ 2022ರಲ್ಲಿ ಜಾಕೋಬ್‌ನ ಪೈಲೆಟ್ ಪರವಾನಗಿಯನ್ನು ರದ್ದುಗೊಳಿಸಿತ್ತು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್ಪೋರ್ಟೇಷನ್ ಇನ್ಸ್ಪೆಕ್ಟರ್ ಜನರಲ್ ಕಚೇರಿ ಈ ಪ್ರಕರಣವನ್ನು ತನಿಖೆ ನಡೆಸಿತ್ತು. ಇದನ್ನೂ ಓದಿ: ನನ್ನ ಮಕ್ಕಳ ಮೇಲಾಣೆ – ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ: ಟ್ರಂಪ್

  • ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ಮುಂಬೈ: ಮುಂಬೈ ಕರಾವಳಿ ತೀರ ಪ್ರದೇಶದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ (Indian Navy Helicopter) ತುರ್ತು ಭೂಸ್ಪರ್ಶವಾಗಿದೆ‌ (Emergency Landing). ಕೂಡಲೇ ನೌಕಾಪಡೆಯ ಗಸ್ತು ನೌಕೆಯ ಮೂಲಕ ಹುಡುಕಾಟ ನಡೆಸಿ, ರಕ್ಷಣಾ ಕಾರ್ಯಚರಣೆ ಮೂಲಕ ಮೂವರು ಪೈಲಟ್‌ಗಳನ್ನು ರಕ್ಷಿಸಲಾಗಿದೆ. ಈ ಬಗ್ಗೆ ನೌಕಾಪಡೆ ತನಿಖೆಗೆ ಆದೇಶಿಸಿದೆ.

    ಘಟನೆ ಬಗ್ಗೆ ನೌಕಾಪಡೆ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ನೀಡಿದೆ. ಭಾರತೀಯ ನೌಕಾಪಡೆ ALH ಮುಂಬೈನಿಂದ ತೀರಕ್ಕೆ (Mumbai Coast) ಹತ್ತಿರದಲ್ಲಿದೆ. ತಕ್ಷಣದ ನೌಕಾ ಗಸ್ತು ಕ್ರಾಫ್ಟ್ ಮೂಲಕ ಹೆಲಿಕಾಪ್ಟರ್‌ನಲ್ಲಿದ್ದ ಮೂವರ ಸಿಬ್ಬಂದಿಯನ್ನು ರಕ್ಷಿಸಲಾಯಿತು ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಸೇನೆಯ ಶಸ್ತ್ರಸಜ್ಜಿತ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಎಚ್) ಪತನಗೊಂಡು ಅದರಲ್ಲಿದ್ದ ಐವರು ಸಿಬ್ಬಂದಿ ಮೃತಪಟ್ಟಿದ್ದರು. ಅಪಘಾತದ ನಂತರ, ದೇಶದಲ್ಲಿ ಸೇವೆಯಲ್ಲಿರುವ 300ಕ್ಕೂ ಹೆಚ್ಚು ALH ಗಳನ್ನು ಮುನ್ನೆಚ್ಚರಿಕೆ ಭಾಗಯಾಗಿ ಸುರಕ್ಷತಾ ತಪಾಸಣೆ ನಡೆಸಲಾಗಿತ್ತು. ಇದನ್ನೂ ಓದಿ: ದೆಹಲಿ ಮದ್ಯನೀತಿ ಹಗರಣ – KCR ಪುತ್ರಿ ಕವಿತಾಗೆ ED ಸಮನ್ಸ್

    ಅದಕ್ಕೂ ಮುನ್ನ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ಪತನಗೊಂಡು ಅದರ ಪೈಲಟ್‌ಗಳಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಈ ವರ್ಷದ ಆರಂಭದಲ್ಲಿ ರಾಜ್ಯ ರಾಜಧಾನಿ ಭೋಪಾಲ್‌ನಿಂದ 400 ಕಿಮೀ ದೂರದಲ್ಲಿರುವ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಪತನಗೊಂಡು ತರಬೇತಿ ವಿಮಾನದ ಪೈಲಟ್ ಸಾವನ್ನಪ್ಪಿದ್ದರು. ಇದನ್ನೂ ಓದಿ: ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

  • ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    ನವದೆಹಲಿ: ಬೋಯಿಂಗ್ 737 ವಿಮಾನದ ಕಾಕ್‍ಪಿಟ್ ಬಲಭಾಗದಲ್ಲಿ ‘ಶಿಳ್ಳೆ’ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನ ದೆಹಲಿಗೆ ಮರಳಿದೆ.

    ಈ ಕುರಿತಂತೆ ವಿಮಾನದ ಪ್ರಾಥಮಿಕ ಭೂ ತಪಾಸಣೆ ವೇಳೆ ಯಾವುದೇ ರಚನಾತ್ಮಕ ನ್ಯೂನತೆ ಕಂಡುಬಂದಿಲ್ಲವಾದರೂ, ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

    2022ರ ಸೆಪ್ಟೆಂಬರ್ 4ರಂದು ವಿಸ್ತಾರಾ ಬಿ737-800 ವಿಮಾನ ವಿಟಿ-ಟಿಜಿಬಿ ಯುಕೆ 951 (ದೆಹಲಿ-ಮುಂಬೈ) ವಿಮಾನ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಾಕ್‍ಪಿಟ್‍ನ ಬಲಭಾಗದಲ್ಲಿ ಶಿಳ್ಳೆ ಸದ್ದು ಕೇಳಿ ಬಂದಿದ್ದರಿಂದ ದೆಹಲಿಗೆ ಮರಳಿತು. ಇದನ್ನೂ ಓದಿ: ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ- ಪುತ್ತೂರು ಮತ್ತು ಸುಳ್ಯದ 32 ಕಡೆ NIA ದಾಳಿ

    ವಿಸ್ತಾರಾ – ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ ಲಿಮಿಟೆಡ್ (ಎಸ್‍ಐಎ) ಜಂಟಿ ಉದ್ಯಮವಾಗಿದ್ದು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್‍ಗಳು ಹಿಂದಿರುಗಲು ನಿರ್ಧರಿಸಿದರು. ಹೀಗಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಯಿತು ಮತ್ತು ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆಗೊಳಿಸಲಾಯಿತು ಏರ್‌ಲೈನ್ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಒಟ್ಟಿಗೆ ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು

    ಒಟ್ಟಿಗೆ ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು

    ಬೀದರ್: ಜಿಲ್ಲೆಯ ವಾಯುಪಡೆ ಸ್ಟೇಷನ್‍ನಲ್ಲಿ ಒಟ್ಟಿಗೆ ಫೈಟರ್ ಜೆಟ್ ಹಾರಿಸುವ ಮೂಲಕ ಭಾರತೀಯ ವಾಯುಪಡೆಯಲ್ಲೇ ತಂದೆ- ಮಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಬೀದರ್‌ನ ಐಎಎಫ್ ಸ್ಟೇಷನ್‍ನಲ್ಲಿ ತಂದೆ- ಮಗಳ ಜೋಡಿ ಹಾಕ್- 132 ವಿಮಾನ ಒಟ್ಟಿಗೆ ಹಾರಿಸಿದೆ. ಈ ಮೂಲಕ ಭಾರತೀಯ ವಾಯುಪಡೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು

    ಫ್ಲೈಯಿಂಗ್ ಆಫೀಸರ್ ಮಗಳು ಅನನ್ಯಾ ಶರ್ಮಾ ಹಾಗೂ ಏರ್ ಕಮಾಂಡರ್ ತಂದೆ ಸಂಜಯ್ ಶರ್ಮಾರಿಂದ ಮೊದಲ ಬಾರಿಗೆ ಈ ಇತಿಹಾಸ ಸೃಷ್ಟಿಸಲಾಗಿದೆ. ಭಾರತೀಯ ವಾಯು ಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ- ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಮಗಳು ಅನನ್ಯಾ ಉನ್ನದ ಯುದ್ಧ ವಿಮಾನದಲ್ಲಿ ಪದವಿ ಪಡೆದು ತರಬೇತಿ ಪಡೆಯುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ. ಇದನ್ನೂ ಓದಿ: ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್

    Live Tv
    [brid partner=56869869 player=32851 video=960834 autoplay=true]

  • ಛತ್ತೀಸ್‍ಗಢದಲ್ಲಿ ಹೆಲಿಕಾಪ್ಟರ್ ಪತನ- ಇಬ್ಬರು ಸಾವು

    ಛತ್ತೀಸ್‍ಗಢದಲ್ಲಿ ಹೆಲಿಕಾಪ್ಟರ್ ಪತನ- ಇಬ್ಬರು ಸಾವು

    ರಾಯ್ಪುರ್: ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲೆಟ್ ಸಾವನ್ನಪ್ಪಿದ ಘಟನೆ ಛತ್ತೀಸ್‍ಗಢದ ರಾಯ್ಪುರ್‌ದ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಘಟನೆಯಲ್ಲಿ ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡಾ ಮತ್ತು ಕ್ಯಾಪ್ಟನ್ ಎಪಿ ಶ್ರೀವಾಸ್ತವ ಸಾವನ್ನಪ್ಪಿದ್ದಾರೆ. ಪೈಲಟ್‍ಗಳು ಹೆಲಿಕಾಪ್ಟರ್ ಇಳಿಸಲು ಯತ್ನಿಸಿದ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರೂ ಪೈಲಟ್‍ಗಳು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರಿರಲಿಲ್ಲ.

    ಮನ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ಪುರ್‌ದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಅಭ್ಯಾಸದ ವೇಳೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.  ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

    ಅಪಘಾತಕ್ಕೆ ತಕ್ಷಣವೇ ಕಾರಃಣ ಏನು ಎಂದು ತಿಳಿದು ಬಂದಿರಲಿಲ್ಲವಾಗಿತ್ತು. ನಿಖರವಾದ ಕಾರಣವನ್ನು ಖಚಿತ ಪಡಿಸಿಕೊಳ್ಳಲು ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಮತ್ತು ಛತ್ತೀಸ್‍ಗಢ ಸರ್ಕಾರವು ತಾಂತ್ರಿಕ ತನಿಖೆಯನ್ನು ಕೈಗೊಂಡಿದೆ.

    ಹೆಲಿಕಾಪ್ಟರ್ ದುರಂತದ ಬಗ್ಗೆ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತ ಅಪಘಾತದಲ್ಲಿ, ನಮ್ಮ ಪೈಲಟ್‍ಗಳಾದ ಕ್ಯಾಪ್ಟನ್ ಪಾಂಡ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

  • ತೆಲಂಗಾಣದಲ್ಲಿ ತರಬೇತಿನಿರತ ವಿಮಾನ ಪತನ – ಮಹಿಳಾ ಪೈಲೆಟ್, ಟ್ರೈನಿ ಪೈಲೆಟ್ ಸಾವು

    ತೆಲಂಗಾಣದಲ್ಲಿ ತರಬೇತಿನಿರತ ವಿಮಾನ ಪತನ – ಮಹಿಳಾ ಪೈಲೆಟ್, ಟ್ರೈನಿ ಪೈಲೆಟ್ ಸಾವು

    ಹೈದರಾಬಾದ್: ತೆಲಂಗಾಣದಲ್ಲಿ ತರಬೇತಿನಿರತ ವಿಮಾನವೊಂದು ಪತನಗೊಂಡಿದೆ. ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ್ದು, ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ.

    ಮೃತದುರ್ದೈವಿಯನ್ನು ತಮಿಳುನಾಡು ಮೂಲದ ಜಿ.ಮಹಿಮಾ(28) ಎಂದು ಗುರುತಿಸಲಾಗಿದೆ. ವಿಮಾನ – ಫ್ಲೈಟೆಕ್ ಏವಿಯೇಷನ್ ಸೆಸ್ನಾ 152 – ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೆರ್ಲಾದಿಂದ ಟೆಕ್ ಆಫ್ ಆಗಿತ್ತು.  ಇದನ್ನೂ ಓದಿ: ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಹಾರುತ್ತಿದ್ದ ವಿಮಾನ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆದ್ದಪುರ ಮಂಡಲ, ತುಂಗತ್ತುರಿ ಗ್ರಾಮದ ಕೃಷಿ ಕ್ಷೇತ್ರದಲ್ಲಿ ನೆಲಕ್ಕೆ ಅಪ್ಪಳಿಸುವ ಮುನ್ನವೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ವಿಮಾನ ಕೆಳಕ್ಕೆ ಬಿದ್ದ ಶಬ್ದ ಕೇಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತರು ಬೆಚ್ಚಿ ಬಿದ್ದಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ವಿಮಾನ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ನೋಡಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ವಿಮಾನವು ಫ್ಲೈಟೆಕ್ ಏವಿಯೇಷನ್ ಅಕಾಡೆಮಿ ಎಂಬ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ್ದು, ಮಹಿಮಾ ಈ ಸಂಸ್ಥೆಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದರು.  ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧದಲ್ಲಿ ಮೋದಿ ಮಧ್ಯಸ್ಥಿಕೆಯನ್ನ ಎಲ್ಲರೂ ಬಯಸುತ್ತಿದ್ದಾರೆ: ಹೇಮಾಮಾಲಿನಿ

  • ಬೆಂಗಳೂರಿನಿಂದ ಹೊರಟ ಗೋ ಫಸ್ಟ್ ವಿಮಾನ ತುರ್ತು ಭೂಸ್ಪರ್ಶ

    ಬೆಂಗಳೂರಿನಿಂದ ಹೊರಟ ಗೋ ಫಸ್ಟ್ ವಿಮಾನ ತುರ್ತು ಭೂಸ್ಪರ್ಶ

    ನಾಗ್ಪುರ : ಬೆಂಗಳೂರಿನಿಂದ ಇಂದು ಬೆಳಗ್ಗೆ ಪಾಟ್ನಾಕ್ಕೆ ಹೊರಟಿದ್ದ ಗೋ ಫಸ್ಟ್ ವಿಮಾನ ನಾಗ್ಪುರ್‌ನಲ್ಲಿ ತುರ್ತು ಲ್ಯಾಡಿಂಗ್ ಮಾಡಿದೆ ಎಂದು ನಾಗ್ಪುರ್‌ ವಿಮಾನ ನಿಲ್ದಾಣ ಅಧಿಕಾರಿ ಅಭೀದ್ ರುಹಿ ತಿಳಿಸಿದ್ದಾರೆ. ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    139 ಮಂದಿ ಪ್ರಯಾಣಿಕರೊಂದಿಗೆ ಹಾರಾಟ ಆರಂಭಿಸಿದ್ದ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೈಲೆಟ್ ನಾಗ್ಪುರ್‌ನಲ್ಲಿ ತುರ್ತು ಲ್ಯಾಡಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ

    ಈ ಬಗ್ಗೆ ಗೋ ಫಸ್ಟ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಇಂಜಿನ್‍ನಲ್ಲಿ ದೋಷ ಕಂಡು ಬಂದಿರುವ ಬಗ್ಗೆ ಕಾಕ್‍ಪಿಟ್‍ನಲ್ಲಿ ಎಚ್ಚರಿಕೆ ಗಂಟೆ ಕೇಳಿ ಬಂದಿತ್ತು. ಈ ಹಿನ್ನಲೆ ಪೈಲೆಟ್‌ ನಾಗ್ಪುರ್‌ನಲ್ಲಿ ತುರ್ತು ಲ್ಯಾಂಡ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿನ ಭೀತಿ – ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಪುನಾರಂಭ ಅನುಮಾನ

    ಎಲ್ಲ ಪ್ರಯಾಣಿಕರಿಗೂ ನಾಗ್ಪುರ ವಿಮಾನ ನಿಲ್ದಾಣದಲ್ಲೇ ಉಪಾಹಾರ ವ್ಯವಸ್ಥೆ ಮಾಡಿದ್ದು, ಸಂಜೆ 4:45ಕ್ಕೆ ಪಾಟ್ನಾಗೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಇಂಜಿನಿಯರಿಂಗ್ ತಂಡದಿಂದ ವಿಮಾನವನ್ನು ಪರಿಶೀಲಿಸಲಾಗುತ್ತಿದೆ ಎಂದು ಗೋ ಫಸ್ಟ್ ವಕ್ತಾರರು ತಿಳಿಸಿದ್ದಾರೆ.

  • ಪೈಲಟ್ ಲುಕ್‍ನಲ್ಲಿ ಕಾಣಿಸಿಕೊಂಡ ಗ್ಲಾಮರ್ ಚೆಲುವೆ ಕಂಗನಾ

    ಪೈಲಟ್ ಲುಕ್‍ನಲ್ಲಿ ಕಾಣಿಸಿಕೊಂಡ ಗ್ಲಾಮರ್ ಚೆಲುವೆ ಕಂಗನಾ

    ಮುಂಬೈ: ಬಾಲಿವುಡ್‍ನಲ್ಲಿ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುವ ನಟಿ ಕಂಗನಾ ರಣಾವತ್ ವಾಯುಸೇನೆ ಸಮವಸ್ತ್ರದಲ್ಲಿ ಮಿಂಚುತ್ತಿರುವ ಫೋಟೋ ವೈರಲ್ ಆಗುತ್ತಿದೆ.

    ಇತ್ತೀಚೆಗಷ್ಟೇ ಯೂರೋಪ್‍ನಲ್ಲಿ ಧಾಕಡ್ ಸಿನಿಮಾದ ಶೂಟಿಂಗ್ ಮುಗಿಸಿ, ಅದೇ ಖುಷಿಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಕೆಲವೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಕಂಗನಾ, ಇದರ ಬೆನ್ನೆಲ್ಲೇ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಚಿತ್ರೀಕರಣ ವೇಳೆ ಕಂಗನಾ ವಾಯುಸೇನೆ ಸಮವಸ್ತ್ರದಲ್ಲಿರುವ ಫೋಟೋವನ್ನು ಆಗಸ್ಟ್ 21ರಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಹೌದು, ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜೊತೆ ಗ್ಲಾಮರ್ ಲುಕ್‍ನಲ್ಲಿ ಮಿಂಚುತ್ತಿದ್ದ ಕಂಗನಾ ಇದೇ ಮೊದಲ ಬಾರಿಗೆ ತೇಜಸ್ ಸಿನಿಮಾದಲ್ಲಿ ವಾಯು ಸೇನೆಯ ಪೈಲಟ್ ಆಗಿ ಬಣ್ಣಹಚ್ಚುತ್ತಿದ್ದಾರೆ. ಸದ್ಯ ಈ ಸಿನಿಮಾಕ್ಕಾಗಿ ಕಂಗನಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದು, ಚಿತ್ರೀಕರಣದ ವೇಳೆ ಸೆರೆಹಿಡಿಯಲಾದ ಫೋಟೋವೊಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

     

    View this post on Instagram

     

    A post shared by Kangana Ranaut (@kanganaranaut)

    ಫೋಟೋದಲ್ಲಿ ಕಂಗನಾ ವಾಯು ಸೇನೆಯ ಪೈಲಟ್ ಆಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಜೊತೆಗೆ ನನ್ನ ಮುಂದಿನ ಮಿಷನ್ ತೇಜಸ್ ಇಂದಿನಿಂದ ಆರಂಭವಾಗುತ್ತಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

  • ಅತ್ಯಂತ ಕಿರಿಯ ವಯಸ್ಸಿನಲ್ಲೇ ಪೈಲಟ್ – ಕಾಶ್ಮೀರಿ ಯುವತಿಯಿಂದ ಸಾಧನೆ

    ಅತ್ಯಂತ ಕಿರಿಯ ವಯಸ್ಸಿನಲ್ಲೇ ಪೈಲಟ್ – ಕಾಶ್ಮೀರಿ ಯುವತಿಯಿಂದ ಸಾಧನೆ

    ಶ್ರೀನಗರ: ಕಾಶ್ಮೀರದ ಯುವತಿಯೊಬ್ಬರು ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕಾಶ್ಮೀರದ ಆಯೇಷಾ ಅಜೀಜ್ (25) ಭಾರತದ ಅತ್ಯಂತ ಕಿರಿಯಾ ಮಹಿಳಾ ಪೈಲಟ್ ಆಗಿರುವ ಇವರು ಬೇರೆ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

    ಆಯೇಷಾ 15 ವರುಷದವಳಾಗಿದ್ದಾಗ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಈ ಮೂಲಕವಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪೈಲಟ್ ಲೈಸೆನ್ಸ್ ಪಡೆದ ಕಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ರಷ್ಯಾದ ಸೋಜೋಲ್ ಏರ್‍ಬೇಸ್‍ನಲ್ಲಿ ಮಿಗ್-29 ಜೆಟ್ ಹಾರಾಟ ತರಬೇತಿಯನ್ನು 2012ರಲ್ಲೇ ಪಡೆದಿದ್ದಾರೆ. ವಿಮಾನ ಹಾರಾಟ ಪದವಿಯನ್ನು ಬಾಂಬೆ ಫ್ಲೈಯಿಂಗ್ ಕ್ಲಬ್‍ನಿಂದ ಪಡೆದುಕೊಂಡಿದ್ದಾರೆ.2017 ರಲ್ಲಿ ಲೈಸೆನ್ಸ್ ಪಡೆದು ಇದೀಗ ಪೈಲಟ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.

    ಕಾಶ್ಮೀರದ ಮಹಿಳೆಯರು ಶಿಕ್ಷಣದ ವಿಚಾರದಲ್ಲಿ ಉತ್ತಮವಾದ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಅನೇಕ ಯುವತಿಯರು ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡುತ್ತಿದ್ದಾರೆ. ಈ ಸವಾಲನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ನನ್ನ ಸಾಧನೆಯಲ್ಲಿ ನನ್ನ ಹೆತ್ತವರ ಪಾಲಿದೆ. ನನ್ನ ಕಲಿಕೆಗೆ ಅವರು ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಆಯೇಷಾ ಅಜೀಜ್ ಹೇಳಿಕೊಂಡಿದ್ದಾರೆ.