Tag: ಪೈರಸಿ

  • ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ನಿನ್ನೆಯಷ್ಟೇ ‘ಕೆಜಿಎಫ್ 2’ ಚಿತ್ರತಂಡವು ಪೈರಸಿ ಬಗ್ಗೆ ಮಾತನಾಡಿತ್ತು. ಪೈರಸಿ ಕಂಡು ಬಂದರೆ, ಈ ವಿಳಾಸಕ್ಕೆ ಮತ್ತು ಫೋನ್ ನಂಬರ್ ಗೆ ಸಂಪರ್ಕಿಸಿ ಎಂದು ಪೋಸ್ಟರ್ ರಿಲೀಸ್ ಮಾಡಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ದುರುಳರು ಕೆಜಿಎಫ್ 2 ಸಿನಿಮಾವನ್ನು ಪೈರಸಿ ಮಾಡಿದ್ದಾರೆ. ಇಡೀ ಸಿನಿಮಾ ಆನ್ ಲೈನ್ ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ನಿರ್ದೇಶಕ ಪ್ರಶಾಂತ್ ನೀಲ್ ನಿನ್ನೆ ಮಾತನಾಡುತ್ತಾ, ‘ಯಾರೂ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬೇಡಿ. ಚಿತ್ರದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಪೈರಸಿ ಮಾಡಿದ್ದಾರೆ ಎಂದು ಕಂಡು ಬಂದರೆ ,ಕೂಡಲೇ ದೂರು ನೀಡಿ. ಕೋಟಿ ಕೋಟಿ ಬಂಡವಾಳ ಸುರಿದು ಮಾಡಿರುವ ಸಿನಿಮಾವನ್ನು ಥಿಯೇಟರ್ ನಲ್ಲೇ ಬಂದು ನೋಡಿ’ ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಪೈರಸಿ ಕಾಟ ನಿನ್ನೆ, ಮೊನ್ನೆಯದ್ದೇನೂ ಅಲ್ಲ. ಭಾರೀ ಬಜೆಟ್ ಚಿತ್ರಗಳು ರಿಲೀಸ್ ಆದಾಗ ಪೈರಸಿ ಸಾಮಾನ್ಯ ಅನ್ನುವಂತಾಗಿದೆ. ಪೈರಸಿ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಇದ್ದರೂ, ಅದು ಹಲ್ಲು ಕಿತ್ತ ಹಾವಿನಂತಿದೆ. ಅಲ್ಲದೇ, ಪೈರಸಿ ಮಾಡುವ ಕಳ್ಳರು ಹೊರದೇಶದಿಂದ ಈ ಕೃತ್ಯವನ್ನು ಮಾಡುವುದರಿಂದ ಸುಲಭವಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. ಈ ಕಾರಣದಿಂದಾಗಿ ಧೈರ್ಯದಿಂದ ಚಿತ್ರಗಳನ್ನು ಪೈರಸಿ ಮಾಡಲಾಗುತ್ತಿದೆ.

    ಈ ಹಿಂದೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳು ಪೈರಸಿ ಆಗಿದ್ದವು. ದೂರು ಕೂಡ ನೀಡಲಾಗಿತ್ತು. ಆದರೆ, ಈವರೆಗೂ ಪೈರಸಿ ಮಾಡಿದವರ ಮೇಲೆ ಕ್ರಮ ತಗೆದುಕೊಂಡಿದ್ದು ತೀರಾ ಕಡಿಮೆ. ಕಾನೂನು ಭಯವಿಲ್ಲದ ಕಾರಣಕ್ಕಾಗಿ ಪದೇ ಪದೇ ಪೈರಸಿ ಮಾಡಲಾಗುತ್ತಿದೆ ಎನ್ನುವುದು ಸತ್ಯ. ಇದೀಗ ಕೆಜಿಎಫ್ 2 ಚಿತ್ರ ಕೂಡ ಪೈರಸಿ ದಾಳಿಗೆ ತುತ್ತಾಗಿದ್ದು, ಪೈರಸಿ ಲಿಂಕ್ ಗಳನ್ನು ತಗೆಸುವ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರತಂಡ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಸಾಮಾಜಿಕ ಜಾಲತಾಣಗಳ ಜತೆಗೆ ಕೆಲವು ಆಪ್ ಗಳಲ್ಲೂ ಕೆಜಿಎಫ್ 2 ಸಿನಿಮಾದ ಪೈರಸಿ ಕಾಪಿ ಸಿಗುತ್ತಿದ್ದು, ಅವುಗಳಿಂದ ಲಿಂಕ್ ತಗೆಸುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ಪೈರಸಿಯನ್ನು ತಡೆಗಟ್ಟಲು ಒಂದು ತಂಡವನ್ನೇ ಸಿದ್ಧಮಾಡಿದೆ.

  • ಕನ್ನಡ ಸಿನಿಮಾಗಳನ್ನು ಕಿಲ್ ಮಾಡಲು ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ: ನಿಖಿಲ್

    ಕನ್ನಡ ಸಿನಿಮಾಗಳನ್ನು ಕಿಲ್ ಮಾಡಲು ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ: ನಿಖಿಲ್

    ಹಾಸನ: ರೈಡರ್ ಚಿತ್ರ ಬಿಡುಗಡೆಯಾದ 9 ಗಂಟೆಯಲ್ಲಿ 25 ಲಕ್ಷ ಜನ ವೆಬ್ ಸೈಟ್‍ಗಳಲ್ಲಿ ಪೈರಸಿ ಚಿತ್ರ ವೀಕ್ಷಿಸಿದ್ದಾರೆ. ಪೈರಸಿಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದರೂ ಒಂದಿಷ್ಟು ಜನ ಕನ್ನಡ ಸಿನಿಮಾಗಳನ್ನು ಹಾಳು ಮಾಡಲು, ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಎಲ್ಲರೂ ಕಷ್ಟಪಟ್ಟು ಉತ್ತಮ ಕಥೆ ಆಯ್ಕೆ ಮಾಡಿ ಹೈಕ್ವಾಲಿಟಿ ಸಿನಿಮಾ ಮಾಡಿರುತ್ತೇವೆ. ಅದನ್ನು ಮೊಬೈಲ್‍ನಲ್ಲಿ ನೋಡುವುದು ಅಷ್ಟು ಚೆನ್ನಾಗಿ ಇರುವುದಿಲ್ಲ ಎಂದು ನಿಖಿಲ್ ಹೇಳಿದರು.

    ಇದೇ ವೇಳೆ ಡಿಸೆಂಬರ್ 31ರ ರಾಜ್ಯ ಬಂದ್ ಕರೆಯ ಹಿನ್ನೆಲೆಯಲ್ಲಿ ಮಾತನಾಡಿದ ನಿಖಿಲ್, ಎರಡು ವರ್ಷಗಳ ಕೊರೊನಾ ಸಂಕಷ್ಟದ ನಂತರ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಬಂದ್ ಮಾಡುವುದರಿಂದ ಕನ್ನಡ ಚಿತ್ರಗಳಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂದರು. ಇದನ್ನೂ ಓದಿ: ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಬಂದ್ ಸೀಮಿತವಾಗಬಾರದು. ಅಂತಹ ಬಂದ್ ನಮಗೆ ಅವಶ್ಯಕತೆ ಇಲ್ಲ. ಬಂದ್‍ಗೆ ಕರೆ ಕೊಟ್ಟಿರುವವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ಮನವಿ ಮಾಡಿದರು.

    ಇದೇ ಸಮಯದಲ್ಲಿ ತಂದೆ ಹೆಚ್‍ಡಿ ಕುಮಾರಸ್ವಾಮಿ, ನಿಖಿಲ್ ಸಿನಿಮಾದಲ್ಲಿ ಮುಂದುವರಿಯಲಿ ಎಂಬ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್, ಅವರ ಮಾತಿನ ಉದ್ದೇಶ ಅದಲ್ಲ. ನನ್ನನ್ನು ಒಬ್ಬ ಕಲಾವಿದನಾಗಿ ಜನರು ಗುರುತಿಸುತ್ತಿದ್ದಾರೆ. ಅದು ನನಗೆ ಹೆಮ್ಮೆ ಇದೆ. ಇದರ ಹಿನ್ನೆಲೆಯಲ್ಲಿ ನನ್ನ ತಂದೆ ಸಿನಿಮಾ ಮಾಡಬೇಕು, ಬಿಡಬಾರದು ಎಂದು ಕಿವಿಮಾತು ಹೇಳಿದ್ದಾರೆ. ನನ್ನ ವೃತ್ತಿ ಸಿನಿಮಾ. ರಾಜಕೀಯದ ವಿಚಾರ ಬಂದಾಗ ಅದರ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ

  • ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್

    ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್

    ಮಂಡ್ಯ: ಪೈರಸಿ ಒಂದು ವೈರಸ್, ತಡೆಯವುದು ಕಷ್ಟ ಎಂದು ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೈರಸಿಯನ್ನು ಗೂಂಡಾ ಕಾಯ್ದೆಯಡಿ ತಂದು ತಮಿಳುನಾಡು ಯಶಸ್ವಿಯಾಗಿದೆ. ಪೈರಸಿ ಒಂದು ವೈರಸ್, ತಡೆಯವುದು ಕಷ್ಟ. ಆದರೆ ಪೈರಸಿ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

    ಡಿಸೆಂಬರ್ 31 ರಂದು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಮಸ್ಯೆಗೆ ಪರಿಹಾರ ಸಿಗುವುದಾದರೆ ಬಂದ್ ಮಾಡಬೇಕು. ಬಂದ್‍ನಿಂದ ಯಾರಿಗೆ ಉಪಯೋಗ? ಯಾರಿಗೆ ನಷ್ಟ ಅನ್ನೋದನ್ನ ಯೋಚನೆ ಮಾಡಬೇಕು. ವಿಚಾರಗಳ ಪರ ನಿಂತಾಗ ಕೆಲವೊಮ್ಮೆ ತ್ಯಾಗ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

    ಬಂದ್‍ನಿಂದ  ಖಂಡಿತ ನಷ್ಟವಾಗುತ್ತದೆ. ಬಂದ್‍ನಿಂದ ಕೇವಲ ಸಿನಿಮಾ ಚಿತ್ರರಂಗಕ್ಕೆ  ಮಾತ್ರ ನಷ್ಟವಲ್ಲ. ಹೊಸ ವರ್ಷದ ವೇಳೆ ವ್ಯಾಪಾರಗಳು ಹೆಚ್ಚಾಗಿರುತ್ತದೆ. ಅಂದು ಬಂದ್ ಮಾಡಿದರೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ನುಡಿದರು.

    ಮಾನವೀಯತೆ ಇಂದ ಯೋಚನೆ ಮಾಡಬೇಕು. ಡಿಸೆಂಬರ್ 31 ರಂದೇ ಬಂದ್ ಮಾಡಬೇಕಾ ಅಥವಾ ಸರ್ಕಾರ ಏನು ಕ್ರಮವಹಿಸಿದ್ದಾಗ ಬಂದ್ ಮಾಡಬೇಕಾ ಯೋಚಿಸಬೇಕು. ಬಂದ್‌ಗೆ ನನ್ನ ಬೆಂಬಲ ಅಲ್ಲ, ಹೋರಾಟಕ್ಕೆ ನನ್ನ ಬೆಂಬಲ ಎಂದರು. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

    ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಿಳಿದು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಎಮ್‌ಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡಲು ಶೂನ್ಯ ಅವಧಿಯಲ್ಲಿ ಮಾತನಾಡಲು ಮನವಿ ಮಾಡಿದ್ದೆ. ಆದರೆ ಈ ಬಾರಿ ಶೂನ್ಯ ಅವಧಿ ನಡೆಯಲಿಲ್ಲ. ಹೀಗಾಗಿ ಈ ವಿಷಯ ಕುರಿತು ಗೃಹಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.

  • ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ಬೆಂಗಳೂರು: ರೈಡರ್‌ ಸಿನಿಮಾ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನಿಖಿಲ್‌ ಕುಮಾರಸ್ವಾಮಿ ಅಭಿನಯದ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ತಮಿಳು ಬ್ಲಾಸ್ಟರ್ಸ್‍ನಿಂದ ಪೈರಸಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ:   ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ


    ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದ ಲಹರಿ ವೇಲು, ಪೈರಸಿ ಒಂದು ದೊಡ್ಡ ಪಿಡಗು. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ. ಆದರೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರವನ್ನು ನಮ್ಮ ಚಿತ್ರದಲ್ಲಿ ನಟಿಸಿರುವ ಪ್ರಥಮ್ ತಿಳಿಸಿದರು. ಪೈರಸಿ ಪಿಡುಗು ಅಂತ್ಯ ಕಾಣಬೇಕು. ಕರ್ನಾಟಕದಲ್ಲಿ ಹಿಟ್ ಆಗುವ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ?

  • ರಿಲೀಸ್ ಆಗಿ 2ದಿನಕ್ಕೆ ರೈಡರ್ ಸಿನಿಮಾಗೆ ಪೈರಸಿ ಕಾಟ

    ರಿಲೀಸ್ ಆಗಿ 2ದಿನಕ್ಕೆ ರೈಡರ್ ಸಿನಿಮಾಗೆ ಪೈರಸಿ ಕಾಟ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾವನ್ನು ತೆರೆ ಮೇಲೆ ನೋಡಲು 1ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ಪೈರಸಿ ಕಾಟದಿಂದ ತಣ್ಣಿರು ಎರಚಿದಂತಾಗಿದೆ. ಉತ್ತಮ ರೆಸ್ಪಾನ್ಸ್ ಹಿನ್ನೆಲೆ ನಿಖಿಲ್ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಆದರೆ ಇತ್ತ ಸಿನಿಮಾ ಪೈರಸಿಯಾಗಿದೆ.

    ಡಿಸೆಂಬರ್ 24ಕ್ಕೆ ರಿಲೀಸ್ ಆಗಿದ್ದ ರೈಡರ್ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ಕಿಡಿಗೇಡಿಗಳಿಂದ ರೈಡರ್ ಸಿನಿಮಾ ಪೈರಸಿಯಾಗಿದೆ. ತಮಿಳ್ ರಾಕರ್ಸ್‍ನಿಂದ ರೈಡರ್‌ಗೆ ಪೈರಸಿ ಕಾಟ ಶುರುವಾಗಿದೆ. ಕಿಡಿಗೇಡಿಗಳ ವಿರುದ್ಧ ರೈಡರ್ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ:  ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಪೈರಸಿ ಆಗಿರೋ ಹಿನ್ನಲೆ ಲಹರಿ ವೇಲು ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿ, ಪೈರಸಿ ಪಿಡಗು ಸುಮಾರು 40 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರ ನಮ್ಮ ಚಿತ್ರದಲ್ಲಿ ನಟಿಸಿರೋ ಪ್ರಥಮ್ ವಿಚಾರ ತಿಳಿಸಿದ್ದರು. ಪೈರಸಿ ಪಿಡಗು ಅಂತ್ಯ ಕಾಣಬೇಕು. ನಾಳೆ ಪೊಲೀಸ್ ಕಮೀಷರ್ ಭೇಟಿ ಮಾಡಿ ಸೈಬರ್ ಕ್ರೈಂಗೆ ದೂರು ಕೊಡಲಾಗುತ್ತದೆ. ಕರ್ನಾಟಕದಲ್ಲಿ ಹಿಟ್ ಆಗೋ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:   ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ

  • ಸ್ಯಾಂಡಲ್‍ವುಡ್‍ಗೆ ಪೈರಸಿ ಭಯ – ನಿರ್ಮಾಪಕ ಸಂಘದಿಂದ ಪೊಲೀಸ್ ಕಮೀಷನರ್‌ಗೆ ದೂರು

    ಸ್ಯಾಂಡಲ್‍ವುಡ್‍ಗೆ ಪೈರಸಿ ಭಯ – ನಿರ್ಮಾಪಕ ಸಂಘದಿಂದ ಪೊಲೀಸ್ ಕಮೀಷನರ್‌ಗೆ ದೂರು

    ಬೆಂಗಳೂರು: ಕಳೆದ ಎರಡು ದಿನಗಳ ಹಿಂದಷ್ಟೇ ಕೋಟಿಗೊಬ್ಬ-3 ಚಿತ್ರವನ್ನು ಪೈರಸಿ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದ ಬೆದರಿಕೆ ಸಂದೇಶ ಹಿನ್ನೆಲೆ ನಿರ್ಮಾಪಕ ಸೂರಪ್ಪಬಾಬು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲೇ ಎಚ್ಚೆತ್ತಿರುವ ಸ್ಯಾಂಡಲ್‍ವುಡ್ ನಿರ್ಮಾಪಕ ಸಂಘವು ಕನ್ನಡ ಚಿತ್ರಗಳ ಪೈರಸಿ ತಡೆಯಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‍ಗೆ ದೂರು ನೀಡಿದೆ.

    ಥಿಯೇಟರ್ ಗಳಲ್ಲಿ ಪೂರ್ಣಾವಧಿ ಆಸನಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಕ್ಟೋಬರ್ ನಲ್ಲಿ ಸಾಲು-ಸಾಲು ಚಿತ್ರಗಳು ತೆರೆಕಾಣಲು ಸಜ್ಜಾಗಿವೆ. ಪ್ರಮುಖವಾಗಿ ಕೋಟಿಗೊಬ್ಬ-3, ಸಲಗ, ಭಜರಂಗಿ-2 ಸೇರಿದಂತೆ ಇನ್ನಿತರ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಷ್ಟಪಟ್ಟು ನಿರ್ಮಿಸಿದ ಚಿತ್ರಗಳಿಗೆ ಪೈರಸಿ ಆಗುವ ಆತಂಕ ನಿರ್ಮಾಪಕರಿಗೆ ಇರುವ ಹಿನ್ನೆಲೆಯಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ನೇತೃತ್ವದ ನಿಯೋಗ ಕಮಲ್ ಪಂತ್‍ಗೆ ಪೈರಸಿ ತಡೆಯುವ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಈ ಸಂಬಂಧ ಮಾತನಾಡಿದ ಪ್ರವೀಣ್, ಇಂದಿನಿಂದ ಥಿಯೇಟರ್ ಗಳಲ್ಲಿ ಶೇ.100ರಷ್ಟು ಪೂರ್ಣಾವಧಿ ಆಸನಕ್ಕೆ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಈ ತಿಂಗಳಿಂದ ಸಾಲು-ಸಾಲು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ. ಕೋಟ್ಯಂತರ ರೂಪಾಯಿ ಹಾಕಿ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡುತ್ತಾರೆ. ತೆರೆಗೆ ಬರಲು ಕೆಲದಿನಗಳೇ ಇರಬೇಕಾದರೆ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಪೈರಸಿ ಮಾಡುತ್ತಾರೆ. ಇದರಿಂದ ಎಷ್ಟೋ ನಿರ್ಮಾಪಕರು ಬೀದಿಗೆ ಬೀಳುತ್ತಾರೆ. ಸಂಪೂರ್ಣವಾಗಿ ಪೈರಸಿ ತಡೆಯುವ ನಿಟ್ಟಿನಲ್ಲಿ ಇಂದು ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದೇವೆ. ನಮಗೆ ಸ್ಪಂದಿಸಿರುವ ಪೊಲೀಸ್ ಆಯುಕ್ತರು ಪೈರಸಿ ತಡೆಯುವ ನಿಟ್ಟಿನಲ್ಲಿ ಸಿಸಿಬಿಯಿಂದ ಪ್ರತ್ಯೇಕವಾಗಿ ಸ್ಕ್ವಾಡ್ ಟೀಮ್ ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

    ನಿರ್ಮಾಪಕ ಕೆ.ಮಂಜು ಮಾತನಾಡಿ ಪೊಲೀಸ್ ಕಮೀಷನರ್ ಕಮಲ್‍ಪಂತ್ ಅವರು ಪ್ರತ್ಯೇಕ ಸ್ವ್ಕಾಡ್ ಟೀಮ್ ಮಾಡಿ ಪೈರಸಿ ಮಾಡುವ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಸ್ವ್ಕಾಡ್ ಟೀಮ್ ರಚನೆಯಿಂದ ನಿರ್ಮಾಪಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ತಿಂಗಳಲ್ಲಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ದಯವಿಟ್ಟು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು

  • ರಾಬರ್ಟ್ ಸಿನಿಮಾ ಪೈರಸಿ – ವ್ಯಕ್ತಿ ವಿರುದ್ಧ ಕೇಸ್ ದಾಖಲು

    ರಾಬರ್ಟ್ ಸಿನಿಮಾ ಪೈರಸಿ – ವ್ಯಕ್ತಿ ವಿರುದ್ಧ ಕೇಸ್ ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮಾರ್ಚ್ 11ರಂದು ರಾಬರ್ಟ್ ಸಿನಿಮಾ ಬಿಡುಗಡೆಗೊಂಡು ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ಭಾರೀ ಸದ್ದು ಮಾಡುತ್ತಿರುವ ರಾಬರ್ಟ್ ಸಿನಿಮಾ ಬಾಕ್ಸ್ ಆಫಿಸ್‍ನನ್ನು ಕೊಳ್ಳೆ ಹೊಡೆಯುತ್ತಿದೆ. ನಟ ದರ್ಶನ್‍ಗೆ ರಾಬರ್ಟ್ ಸಿನಿಮಾ ಹೊಸ ಇಮೇಜ್ ಜೊತೆಗೆ ಉತ್ತುಂಗಕ್ಕೆ ಏರಿಸಿದೆ.

    ಹೀಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಬರ್ಟ್ ಸಿನಿಮಾದಲ್ಲಿ ದರೋಡೆ ಮಾಡುವ ದೃಶ್ಯದ ಭಾಗವನ್ನು ಪೈರಸಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ಬೆಂಗಳೂರು ಡಿಸಿಪಿ ತಿಳಿಸಿದ್ದಾರೆ.

    ಈ ಮುನ್ನ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ, ಯಾರಾದರೂ, ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಲ್ಲಿ ಪರಿಣಾಮ ಘೋರವಾಗಿರುತ್ತದೆ. ನಾನಂತೂ ಪೈರಸಿ ಮಾಡಿದವರನ್ನು ಕೋರ್ಟ್-ಕಚೇರಿ ಅಂತ ಅಲೆಸಿ, ಅಲ್ಲೇ ತಮ್ಮ ಜೀವನವನ್ನು ಕಳೆಯುವಂತೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

  • ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ರಿಷಭ್ ಶೆಟ್ಟಿ ನಿರ್ಮಿಸಿ ನಟಿಸಿರುವ ‘ಹೀರೋ’ ಸಿನಿಮಾ ಕಳೆದ ಸಿನಿ ಶುಕ್ರವಾರ ಬಿಡುಗಡೆಯಾಗಿತ್ತು. ಇಂಟರ್ ಸ್ಟಿಂಗ್ ಕಥಾಹಂದರ, ಚಿತ್ರಕಥೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಪ್ರೇಕ್ಷಕರ ಮನಗೆದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು ಹೀರೋ ಸಿನಿಮಾ. ಇದೀಗ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಪೈರಸಿ ಹಾವಳಿಗೆ ಸಿಲುಕಿದ್ದು ಚಿತ್ರತಂಡದ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು, ಕೋವಿಡ್-19ರಿಂದ ಈಗ ಚಿತ್ರರಂಗ ಸುಧಾರಿಸಿಕೊಂಡು ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ವರ್ಷದ ನಂತರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿರಬೇಕಾದ್ರೆ ಪೈರಸಿ ಹಾವಳಿ ಮತ್ತೆ ಚಿತ್ರರಂಗಕ್ಕೆ ಮುಳುವಾಗಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಹೀರೋ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಪೈರಸಿ ಬಲೆಗೆ ಸಿಲುಕಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಚಿತ್ರತಂಡ ದೂರನ್ನು ದಾಖಲಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

    `ಹೀರೋ’ ಸಿನಿಮಾ ಪೈರಸಿ ಬಗ್ಗೆ ಚಿತ್ರದ ನಾಯಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೋವನ್ನು ಹೊರಹಾಕಿದ್ದಾರೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ಕೂಡ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಸಿನಿಮಾ ಮಾಡಿದ್ವಿ, ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಪೈರಸಿ ವಿಚಾರದಲ್ಲಿ ಚಿತ್ರಮಂದಿರಗಳ ಮಾಲೀಕರ ಬಗ್ಗೆಯೂ ರಿಷಬ್ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಚಿತ್ರಮಂದಿರಗಳಲ್ಲಿ ಕ್ಯಾಮೆರಾ, ಮೊಬೈಲ್ ತೆಗೆದುಕೊಂಡು ರೆಕಾರ್ಡ್ ಮಾಡೋದಕ್ಕೆ ಹೇಗೆ ಅನುವು ಮಾಡಿಕೊಡುತ್ತಾರೆ ಎಂದಿದ್ದಾರೆ. ಇದೇ ವೇಳೆ ಪೈರಸಿ ವೆಬ್ಸೈಟ್ಗಳ ನಿಷೇಧ ಯಾಕೆ ಆಗ್ತಿಲ್ಲ ಎಂಬುದರ ಬಗ್ಗೆಯೂ ಪ್ರಶ್ನಿಸಿದ್ದಾರೆ ರಿಷಬ್.

    ಒಟ್ನಲ್ಲಿ ಕೋವಿಡ್ 19ರಿಂದ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಪೈರಸಿ ಹಾವಳಿ ಶುರುವಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕದೆ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಚಿತ್ರರಂಗ ಹಾಗೂ ಚಿತ್ರತಂಡ ಯಾವ ರೀತಿ ಹೆಜ್ಜೆ ಇಡುತ್ತದೆ ಎನ್ನೋದನ್ನ ಕಾದು ನೋಡಬೇಕು.

  • ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕಾ ದೂರು

    ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕಾ ದೂರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪೈರಸಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನಟಿ ರಾಧಿಕಾ ಅಭಿನಯಿಸಿರುವ ಸಿನಿಮಾವನ್ನು ಆರೋಪಿಗಳು ಕಾನೂನು ಬಾಹಿರವಾಗಿ ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ರಾಧಿಕಾ ಕಿಡಿಗೇಡಿಗಳ ವಿರುದ್ಧ ಉತ್ತರ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಧಿಕಾ ನಟಿಸಿ, ನಿರ್ಮಿಸಿದ್ದ ‘ಸ್ವೀಟಿ ನನ್ನ ಜೋಡಿ’ ಸಿನಿಮಾವನ್ನು ಕಿಡಿಗೇಡಿಗಳು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ದೂರಿನಲ್ಲಿ ಏನಿದೆ?
    ಸುಮಾರು ಮೂರು ಕೋಟಿ ವೆಚ್ಚದಲ್ಲಿ ‘ಸ್ವೀಟಿ ನನ್ನ ಜೋಡಿ’ ಕನ್ನಡ ಸಿನಿಮಾವನ್ನು ನಿರ್ಮಿಸಲಾಗಿತ್ತು. ಆದರೆ ಯಾರೋ ಅಪರಿಚಿತರು ಸಿನಿಮಾ ವಿಡಿಯೋವನ್ನು ನನ್ನ ಅನುಮತಿ ಪಡೆಯದೆ ಹಾಗೂ ಗಮನಕ್ಕೆ ತರದೆ ಯೂಟ್ಯೂಬ್‍ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುವ ಮೂಲಕ ಪೈರಸಿ ಮಾಡಿದ್ದಾರೆ. ಹೀಗಾಗಿ ಸಿನಿಮಾ ಅಪ್ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ರಾಧಿಕಾ ದೂರು ನೀಡಿದ್ದಾರೆ. ಇದೀಗ ರಾಧಿಕಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

  • ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಬೆಂಗಳೂರು: ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾ ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಿಚ್ಚ, ಎಲ್ಲದಕ್ಕೂ ಒಂದು ನ್ಯಾಯ ಇದೆ. ನ್ಯಾಯ ಆಗಬೇಕು, ಆದರೆ ಅನ್ಯಾಯ ಆಗಬಾರದು. ಅನ್ಯಾಯವಾಗಿ ಯಾರು ಸಿಕ್ಕಿಹಾಕಿಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರು ತಪ್ಪಿಸಿಕೊಳ್ಳಬಾರದು. ಅಡುಗೆ ಮಾಡಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಕಾಲು ಎಡವಿ ಅನ್ನ ಚೆಲ್ಲಿದ್ದರೆ, ಬಡಿಸುವುದಕ್ಕೆ ಆಗಿಲ್ಲ ಎನ್ನುವ ನೋವು ಇರುತ್ತದೆ. ಹಾಗಂತ ಇನ್ನೊಬ್ಬರು ಮಾಡಿದ ಅಡುಗೆ ಹಾಳಾಗಬಾರದು ಎಂದರು.  ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಕನ್ನಡ ಚಿತ್ರರಂಗದಲ್ಲಿ ಈಗ ಕೆಲವರು ದೊಡ್ಡ ಸಿನಿಮಾ ಎಂದು ಮಾಡಿದಾಗ ಕೆಲವೊಂದು ವಿಷಯಗಳನ್ನು ತಡೆದುಕೊಳ್ಳಬಹುದು. ಆದರೆ ಕಳ್ಳತನ ಎಂಬುದು ಅಭ್ಯಾಸವಾದರೆ ಅದಕ್ಕೆ ಈಗಾಗಲೇ ಒಂದು ದಾರಿ ಇರುತ್ತದೆ. ಈ ದಾರಿಯಲ್ಲೂ ಮಾಡಬಹುದು ಎಂದು ನಮ್ಮವರೇ ಹೇಳಿಕೊಟ್ಟರೆ, ನಾಳೆ ಚಿಕ್ಕಪುಟ್ಟ ನಿರ್ಮಾಪಕರು ತುಂಬಾ ಕಷ್ಟದಿಂದ ಸಿನಿಮಾ ಮಾಡಿರುತ್ತಾರೆ. ಮೊದಲ ದಿನವೇ ಸಿನಿಮಾ ಪೈರಸಿಯಾದರೆ ಅವರ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಇದು ನನ್ನ ಹೋರಾಟ ಅಲ್ಲ. ಬೇರೆಯವರಿಗೆ ಈ ರೀತಿ ಆಗಬಾರದು. ಇದರಲ್ಲಿ ಜಿದ್ದುಗಿದ್ದು ಬರುವುದಿಲ್ಲ. ತಪ್ಪು ಮಾಡದೇ ಇರುವವರು ಹೆದರುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಬಿಡುಗಡೆ ಆಗಬೇಕಿದೆ. ಜೊತೆಯಲ್ಲಿ ಮನೆ ಅಡಯಿಟ್ಟು ಮಾಡಿದ ಸಿನಿಮಾಗಳು ಕೂಡ ಬಿಡುಗಡೆಗೆ ತಯಾರಿದೆ. ಈ ರೀತಿ ಯಾರಿಗೂ ಆಗುವುದು ಬೇಡ. ಆದರೆ ಈ ಉದ್ದೇಶ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

    ಅಭಿಮಾನಿಗಳಿಗೆ ಏನೂ ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಯಾರಿಗೂ ಏನೂ ಹೇಳುವುದಿಲ್ಲ. ತಪ್ಪು ಮಾಡಬೇಡಿ. ಇನ್ನೊಬ್ಬರ ಹೊಟ್ಟೆಗೆ ಹೊಡೆಯಬೇಡಿ. ನಿಮ್ಮಿಂದ ಒಳ್ಳೆಯದು ಮಾಡಲು ಆಗಲ್ಲ ಎಂದರೆ ತಪ್ಪು ಮಾಡಬೇಡಿ. ಏನಾದರೂ ಹೆಚ್ಚುಕಮ್ಮಿ ಆಗಿ ಅವರು ಹಣ ಕಳೆದುಕೊಂಡರೆ ಅವರ ಪಾಲಿಗೆ ಯಾರು ಬರುತ್ತಾರೆ. ಅವರಿಗೆ ಸಹಾಯ ಮಾಡೋಣ ಎಂದರೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ನನಗೆ ಒಂದು ವರ್ಷ ಬೇಕು. ನಮಗೆ ಮಗು ಬೇರೆ ಅಲ್ಲ, ಸಿನಿಮಾ ಬೇರೆ ಅಲ್ಲ. ಎರಡು ಒದ್ದಾಡುತ್ತಿದೆ. ನೋಡಿಕೊಂಡು ಯಾರು ಸುಮ್ಮನೆ ಇರಬಾರದು. ಯಾಕೆ ಎಲ್ಲವನ್ನು ಸುಮ್ಮನೆ ಅನುಭವಿಸಿಕೊಂಡು ಇರಬೇಕು ಎಂದು ಸುದೀಪ್ ಉತ್ತರಿಸಿದ್ದಾರೆ.