Tag: ಪೈರಸಿ

  • ದರ್ಶನ್ ನಟನೆಯ ‘ಕಾಟೇರ’ ಪೈರಸಿ- ಓರ್ವನ ಬಂಧನ

    ದರ್ಶನ್ ನಟನೆಯ ‘ಕಾಟೇರ’ ಪೈರಸಿ- ಓರ್ವನ ಬಂಧನ

    ನ್ನಡದ ಕಾಟೇರ (Katera) ಸಿನಿಮಾ ಕಳೆದ ವಾರದಿಂದ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಚಿತ್ರದ ಪೈರಸಿ ಹೊರ ಬಂದಿತ್ತು. ಪೈರಸಿ ಲಿಂಕ್ ಗಳನ್ನು ಸಾಕಷ್ಟು ಜನರು ಹಂಚಿಕೊಂಡಿದ್ದರು. ಈ ಕುರಿತಂತೆ ಚಿತ್ರತಂಡವು ಪೈರಸಿ (Piracy)  ಮಾಡುವವರು ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಪೈರಸಿ ಮಾಡುವವರ ವಿರುದ್ಧ ಸ್ವತಃ ದರ್ಶನ್ (Darshan) ಗುಡುಗಿದ್ದರು.

    ಪೈರಸಿ ಲಿಂಕ್ ಗಳು ಹೆಚ್ಚೆಚ್ಚು ಶೇರ್ ಆಗುತ್ತಿದ್ದಂತೆಯೇ ಅದನ್ನು ಮಾಡುವವರ ಹುಡುಕಾಟಕ್ಕೆ ಚಿತ್ರತಂಡ ಮುಂದಾಗಿತ್ತು. ಕೊನೆಗೂ  ಪೈರಸಿ ಮಾಡಿ, ಆ ಲಿಂಕ್ ಅನ್ನು ನಲವತ್ತು ರೂಪಾಯಿಗೆ ಮಾರುತ್ತಿದ್ದ ರಾಯಚೂರಿ ಜಿಲ್ಲೆಯ, ದೇವದುರ್ಗ ತಾಲೂಕಿನ ಗಂಗನಾಯಕ್ ತಾಂಡದ ಮೌನೇಶ್ ಎನ್ನುವನನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿದ್ದು, ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ. ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿರುವ ಹಿನ್ನೆಲೆಯಲ್ಲಿ ವಿದೇಶದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

     

    ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿತ್ತು. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಪೈರಸಿಗೆ ‘ಡಂಕಿ’ ಬಲಿ: ಮೊದಲ ದಿನವೇ ಚಿತ್ರತಂಡಕ್ಕೆ ಶಾಕ್

    ಪೈರಸಿಗೆ ‘ಡಂಕಿ’ ಬಲಿ: ಮೊದಲ ದಿನವೇ ಚಿತ್ರತಂಡಕ್ಕೆ ಶಾಕ್

    ಶಾರುಖ್ ಖಾನ್ (Shahrukh Khan) ನಟನೆಯ ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.

    ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ.

     

    ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ.

  • ಜವಾನ್ ಪೈರಸಿ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟ ಶಾರುಖ್

    ಜವಾನ್ ಪೈರಸಿ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟ ಶಾರುಖ್

    ಬಾಕ್ಸ್ ಆಫೀಸಿನಲ್ಲಿ ಭಾರೀ ಕಮಾಲ್ ಮಾಡುತ್ತಿರುವ ಜವಾನ್ ಚಿತ್ರಕ್ಕೆ ಪೈರಸಿ (Piracy) ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಥಿಯೇಟರ್ ನಲ್ಲಿ ಶೂಟ್ ಮಾಡಲಾದ ಜವಾನ್ ಸಿನಿಮಾವನ್ನು ದುರುಳರು ರಿಲೀಸ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ಈ ಲಿಂಕ್ ಅನ್ನು ಹಂಚಿಕೊಳ್ಳುವವರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ ಶಾರುಖ್ ಖಾನ್.

    ಸ್ವತಃ ಶಾರುಖ್ ಖಾನ್ (Shah Rukh Khan) ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇವರ ಪತ್ನಿ ಗೌರಿ ಖಾನ್ ಇದರ ನಿರ್ಮಾಪಕರು. ಹಾಗಾಗಿ ಪೈರಸಿ ಮಾಡುವವರ ವಿರುದ‍್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಈಗಾಗಲೇ ಅವರು ಮುಂಬೈನ ಸಾಂತಾಕ್ರೂಜ್ ವೆಸ್ಟ್ ಪೊಲೀಸ್ ಠಾಣೆಗೆ ದೂರು (Police Complaint) ನೀಡಿದ್ದಾರೆ. ಜೊತೆಗೆ ಪೈರಸಿ ಪತ್ತೆ ಹಚ್ಚುವಂತಹ ಏಜೆನ್ಸಿಗಳನ್ನೂ ಅವರು ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    ‘ಜವಾನ್’ (Jawan) ಸಿನಿಮಾ ಚಿತ್ರಮಂದಿರಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೇ ಜವಾನ್ 2 (Jawan 2) ಬರುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಶಾರುಖ್- ವಿಜಯ್ ಸೇತುಪತಿ (Vijay Sethupathi) ಜುಗಲ್‌ಬಂದಿ ಜವಾನ್ ಸಿನಿಮಾದಲ್ಲಿ ವರ್ಕೌಟ್ ಆಗಿದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಶಾರುಖ್‌ಗೆ ‘ಜವಾನ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅವರ ಉತ್ತರ ಜವಾನ್ 2 ಬರುವ ಬಗ್ಗೆ ಸೂಚನೆ ಕೊಟ್ಟಿದೆ.

    ಅಭಿಮಾನಿಯೊಬ್ಬರು, ಸರ್, ನೀವೇಕೆ ಕಾಳಿ ವಿಜಯ್ ಸೇತುಪತಿ ಜೊತೆಗೆ ಡೀಲ್ ಮಾಡಿಕೊಳ್ಳಲಿಲ್ಲ? ನಾನು ವಿಜಯ್ ಸೇತುಪತಿ ಸರ್‌ಗೆ ದೊಡ್ಡ ಅಭಿಮಾನಿ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ನಾನು ಕೂಡ ವಿಜಯ್ ಸರ್‌ಗೆ ದೊಡ್ಡ ಅಭಿಮಾನಿ. ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡು ಬಂದಿದ್ದೇನೆ. ಈಗ ಬೇರೆಯವರ ಕಪ್ಪು ಹಣವನ್ನು ಹೊರ ತೆಗೆಯುವುದಕ್ಕೆ ಕಾಯುತ್ತಿದ್ದೇನೆ. ವೀಸಾಗಾಗಿ ಕಾಯುತ್ತಿದ್ದೇನೆ ಎಂದು ಟ್ಟೀಟ್ ಮಾಡಿದ್ದಾರೆ. ಈ ಟ್ವೀಟ್ ಜವಾನ್ 2 ಬರುವ ಬಗ್ಗೆ ಸೂಚನೆ ನೀಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

     

    ಜವಾನ್‌ನಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ಸೀನ್ ಇಡಲಾಗಿದೆ. ಅದಕ್ಕೆ ತಕ್ಕಂತೆ ಶಾರುಖ್ ಟ್ವೀಟ್ ಕೂಡ ಹೋಲಿಕೆಯಾಗುತ್ತಿದೆ. ಜವಾನ್ ಸೀಕ್ವೆಲ್ ಬಂದೇ ಬರುತ್ತೆ ಅಂತಾ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ. ‘ಜವಾನ್ 2’ ಬರುವ ಬಗ್ಗೆ ಈ ಮೂಲಕ ನಟ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಪೈರಸಿ ಮಾಡಿದರೆ 3 ವರ್ಷ ಜೈಲೂಟ ಫಿಕ್ಸ್: ಸಚಿವ ಠಾಕೂರ್

    ಸಿನಿಮಾ ಪೈರಸಿ ಮಾಡಿದರೆ 3 ವರ್ಷ ಜೈಲೂಟ ಫಿಕ್ಸ್: ಸಚಿವ ಠಾಕೂರ್

    ಲವಾರು ವರ್ಷಗಳಿಂದ ಪೈರಸಿ (Piracy) ಹಾವಳಿಗೆ ಚಿತ್ರೋದ್ಯಮ ನಲುಗಿ ಹೋಗಿತ್ತು. ಪೈರಸಿಯನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸರಕಾರಗಳನ್ನು ಚಿತ್ರೋದ್ಯಮ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಪೈರಸಿ ಕಡಿವಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಭಾರೀ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸುವಂತಹ ಬಿಲ್ ಅನ್ನೂ ಪಾಸು ಮಾಡಿದೆ.

    ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) ಲೋಕಸಭೆಯಲ್ಲಿ ‘ಸಿನಿಮಾಟೋಗ್ರಫಿ ಬಿಲ್ 2023 (Cinematography Bill 2023) ಅನ್ನು ಮಂಡಿಸುವ ವೇಳೆ ಪೈರಸಿ ಮಾಡುವವರಿಗೆ ಇನ್ಮುಂದೆ ಕೋಟಿಗಟ್ಟಲೆ ದಂಡ ಹಾಕಲು ನಿರ್ಧರಿಸಿರುವ ಕುರಿತು ವಿವರಣೆ ನೀಡಿದರು. ಯಾವುದೇ ಸಿನಿಮಾವನ್ನು ಪೈರಸಿ ಮಾಡಿದರೆ, ಸಿನಿಮಾಗೆ ಆದ ಖರ್ಚಿನ ಶೇಕಡಾ 5ರಷ್ಟು ದಂಡ ಹಾಕಲಾಗುವುದು ಎಂದಿದ್ದಾರೆ.

     

    ‘ಚಿತ್ರರಂಗದ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುತ್ತಿದ್ದೇವೆ. ಸಿನಿಮಾ ಪೈರಸಿ ಮಾಡಿದರೆ ಭಾರೀ ಮೊತ್ತದ ದಂಡದ ಜೊತೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಲಾಗುವುದು. ಅಲ್ಲದೇ, ಪೈರಸಿ ಮಾಡುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗುವುದು. ಅಲ್ಲದೇ ಸೆನ್ಸಾರ್ (Censorship)ಪತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ’ ಎಂದರು ಅನುರಾಗ್ ಠಾಕೂರ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಪೈರಸಿ ತಡೆ ಮಸೂದೆಗೆ ಒಪ್ಪಿಗೆ: ಬದಲಾವಣೆ ಏನು?

    ಸಿನಿಮಾ ಪೈರಸಿ ತಡೆ ಮಸೂದೆಗೆ ಒಪ್ಪಿಗೆ: ಬದಲಾವಣೆ ಏನು?

    ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಕ್ಕೆ (Cinematograph Bill) ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಸಿನಿಮಾಗಳ ಪೈರಸಿ (Piracy) ತಡೆಗಟ್ಟುವಲ್ಲಿ ಈ ಮಸೂದೆ ರಕ್ಷಾಕವಚವಾಗಿ ನಿಲ್ಲಲಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ‘ಇಂಟರ್ ನೆಟ್ ನಲ್ಲಿ ಸಿನಿಮಾ ಪೈರಸಿ ಪಸರಿಸುವುದನ್ನು ಈ ಮಸೂದೆ ಕಟ್ಟುನಿಟ್ಟಾಗಿ ತಡೆಗಟ್ಟುತ್ತದೆ’ ಎಂದಿದ್ದಾರೆ.

    ಅಷ್ಟೇ ಅಲ್ಲದೇ ಸೆನ್ಸಾರ್ (Censorship) ಮಂಡಳಿಯು ಕೊಡುವ ಚಲನಚಿತ್ರ ಪ್ರಮಾಣಪತ್ರದಲ್ಲೂ ಬದಲಾವಣೆ ಆಗಲಿದೆ. ಈಗಾಗಲೇ ಯಾವ ವಯಸ್ಸಿನವರು ಎಂತಹ ಸಿನಿಮಾ ನೋಡಬಹುದು ಎನ್ನುವುದಕ್ಕೆ ಯುಎ, ಯು, ಎ, ಸಿ ಪ್ರಮಾಣಪತ್ರವನ್ನು ಕೊಡಲಾಗುತ್ತಿದೆ. ಈ ಪ್ರಮಾಣ ಪತ್ರದಲ್ಲಿ ಬದಲಾವಣೆ ಆಗಲಿದೆ ಎನ್ನುತ್ತದೆ ಮಸೂದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಈ ಮಸೂದೆಯನ್ನು ಮುಂದಿನ ಸಂಸತ್ ಕಲಾಪದ ವೇಳೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ವಿವಾದಗಳು ಇಲ್ಲದೇ ಈ ಮಸೂದೆ ಪಾಸಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಅನುರಾಗ್ ಠಾಕೂರ್. ವಯಸ್ಸಿನ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸಿ ಎನ್ನುವ ಬೇಡಿಕೆ ತಮ್ಮುಂದೆ ಇದ್ದ ಕಾರಣಕ್ಕಾಗಿ ಮಸೂದೆ ತರಲಾಗಿದೆ ಎಂದಿದ್ದಾರೆ.

  • ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಾಯ್ಕಾಟ್ (Boycott) ನಡುವೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಪೈರಸಿ (Piracy) ಚಿತ್ರತಂಡಕ್ಕೆ ಶಾಕ್ ನೀಡಿದೆ. ಸಿನಿಮಾ ರಿಲೀಸ್ ಗೂ ಮೊದಲೇ ಹಲವು ವೆಬ್ ಸೈಟ್ ಗಳಲ್ಲಿ ಸಿನಿಮಾವನ್ನು ಲೀಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆಯೂ ಕೂಡ ಪಠಾಣ್ ಸಿನಿಮಾದ ಟ್ರೈಲರ್ ಕೂಡ ಒಂದು ದಿನ ಮುಂಚೆಯೇ ಲೀಕ್ ಆಗಿತ್ತು.

    ಹಿಂದೂ ಧರ್ಮಕ್ಕೆ ಸಿನಿಮಾ ತಂಡ ಅವಮಾನ ಮಾಡಿದೆ ಎನ್ನುವ ಕಾರಣಕ್ಕಾಗಿ ಕೆಲವರು ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಂಚು ಮಾಡಿ ಸಿನಿಮಾವನ್ನು ಸೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಹಣದಾಹಿ ಕೆಲ ವೆಬ್ ಸೈಟ್ ಗಳು ಸಿನಿಮಾ ರಿಲೀಸ್ ದಿನವೇ ಇಡೀ ಚಿತ್ರವನ್ನು ಲೀಕ್ ಮಾಡಿವೆ. ಹಾಗಾಗಿ ಚಿತ್ರತಂಡಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಸ್ವತಃ ಶಾರುಖ್ ಖಾನ್ ಅವರೇ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ನೀಡಿದಕ್ಕೆ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಆದರೆ, ಹಲವು ಅಡೆತಡೆಗಳನ್ನು ಅವರು ಎದುರಿಸುವುದು ಅನಿವಾರ್ಯವಾಗಿದೆ. ಕೆಲ ರಾಜ್ಯಗಳಲ್ಲಂತೂ ವಿಪರೀತ ತೊಂದರೆ ಮಾಡಲಾಗುತ್ತಿದೆ. ಥಿಯೇಟರ್ ಗೆ ನುಗ್ಗಿ ಪ್ರದರ್ಶನವನ್ನು ನಿಲ್ಲಿಸಲಾಗುತ್ತಿದೆ.

    ಈ ಪ್ರತಿಭಟನೆ ಕರ್ನಾಟಕದಲ್ಲೂ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ಕಡೆ ಚಿತ್ರಪ್ರದರ್ಶನ ನಿಲ್ಲಿಸುವಂತೆ ಥಿಯೇಟರ್ ಗೆ ಮುತ್ತಿಗೆ ಹಾಕುವಂತಹ ಕೆಲಸಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಸಿನಿಮಾಗಳಿಗೆ ತೊಂದರೆ ಮಾಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರೂ, ಜನರು ಮಾತ್ರ ಪ್ರತಿಭಟನೆಯನ್ನು ಕೈ ಬಿಟ್ಟಿಲ್ಲ. ಹಲವು ಕಡೆ ಮತ್ತೆ ಬಾಯ್ಕಾಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ  ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ 24 ಗಂಟೆ ಒಳಗೆ ಪೈರಸಿ ಆಗಿದೆ. ಪೈರಸಿಗೆ ಕಠಿಣ ಶಿಕ್ಷೆಯಿದ್ದರೂ, ಅದನ್ನು ತಡೆಗಟ್ಟಲು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡರೂ, ಪೈರಸಿ ಮಾತ್ರ ನಿಲ್ಲುತ್ತಿಲ್ಲ. ವಿಕ್ರಾಂತ್ ರೋಣ ಸಿನಿಮಾ ಕೂಡ ಪೈರಸಿ ಆಗಿದ್ದು, ಮುಳಬಾಗಿಲು ಸರ್ಕಾರಿ ವಸತಿ ಶಾಲೆಯಲ್ಲಿ ಈ ಸಿನಿಮಾದ ಪೈರಸಿಯನ್ನು ತೋರಿಸುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವಸತಿ ಶಾಲೆಯಲ್ಲಿದ್ದ ಮಕ್ಕಳು ಪೈರಸಿ ಸಿನಿಮಾ ವೀಕ್ಷಿಸಿದ್ದಾರೆ.

    ವಸತಿ ಶಾಲೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪೈರಸಿಯನ್ನು ನೋಡುವ ವಿಡಿಯೋವನ್ನು ಚಿತ್ರೀಕರಣ ಮಾಡಿರುವ ವಿದ್ಯಾರ್ಥಿಯೊಬ್ಬ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸುದೀಪ್ ಅಭಿಮಾನಿಗಳು ವಸತಿ ಶಾಲೆಯ ಮೇಲ್ವಿಚಾರಕರಿಗೆ ಕರೆ ಮಾಡಿ, ತರಾಟೆಗೆ ತಗೆದುಕೊಂಡಿದ್ದಾರೆ. ಕೂಡಲೇ ವಿಡಿಯೋ ಮೂಲಕ ಕ್ಷಮೆ ಕೇಳಬೇಕು ಇಲ್ಲವೆ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ವಿಕ್ರಾಂತ್ ರೋಣ ಸಿನಿಮಾ ಪೈರಸಿ ಆಗುವ ವಿಚಾರವನ್ನು ಈ ಮೊದಲೇ ಸುದೀಪ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದು ಪೈರಸಿಯಲ್ಲಿ ನೋಡುವಂತಹ ಸಿನಿಮಾವಲ್ಲ, ಥಿಯೇಟರ್ ಗೆ ಬನ್ನಿ ಎಂದು ಮನವಿ ಮಾಡಿದ್ದರು. ಅಲ್ಲದೇ, ಪೈರಸಿ ಆಗಿದ್ದು ಕಂಡು ಬಂದಲ್ಲಿ ಸಿನಿಮಾ ಟೀಮ್ ಗೆ ತಿಳಿಸಿ ಎಂದು ಹೇಳಿದ್ದರು. ವಸತಿ ಶಾಲೆಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ರಮಕ್ಕಾಗಿ ಅಭಿಮಾನಿಗಳು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಷ್ಟೊಂದು ಅಡೆತಡೆ ಯಾಕೆ? ಇನ್ನೂ ನಿಂತಿಲ್ಲ ಅಪಪ್ರಚಾರ

    ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಷ್ಟೊಂದು ಅಡೆತಡೆ ಯಾಕೆ? ಇನ್ನೂ ನಿಂತಿಲ್ಲ ಅಪಪ್ರಚಾರ

    ಳೆದ ಗುರುವಾರವಷ್ಟೇ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಬಿಡುಗಡೆಯಾಗಿ 24 ಗಂಟೆಯೊಳಗೆ ದುರುಳರು ಸಿನಿಮಾವನ್ನು ಲೀಕ್ ಮಾಡಿದ್ದರು. ಪೈರಸಿ ಮಾಡುವ ಮೂಲಕ ಚಿತ್ರತಂಡಕ್ಕೆ ಟೆನ್ಷನ್ ನೀಡಿದ್ದರು. ಪೈರಸಿಯನ್ನು ಕೊಲ್ಲುವುದಕ್ಕಾಗಿ ಏನೆಲ್ಲ ಸರ್ಕಸ್ ಮಾಡಿದರೂ ಕಳ್ಳರು ಮಾತ್ರ ಸಿನಿಮಾ ಕದಿಯುವುದನ್ನು ನಿಲ್ಲಿಸಲಿಲ್ಲ. ಆದರೂ, ನಿರಂತರ ಪ್ರಯತ್ನ ನಡೆದೇ ಇದೆ. ಈ ಮಧ್ಯೆ ಮತ್ತೊಂದು ಕೆಲಸಕ್ಕೆ ವಿರೋಧಿಗಳು ಮುಂದಾದರು. ಸಿನಿಮಾ ಬಗ್ಗೆ ಅಪಪ್ರಚಾರಕ್ಕೆ ನಿಂತರು.

    ಗುರುವಾರ ಮಧ್ಯಾಹ್ನದಿಂದ ಸಿನಿಮಾ ಬಗ್ಗೆ ವಿರೋಧಿಗಳು ಅಪಪ್ರಚಾರ ಶುರು ಮಾಡಿದರು. ಸಿನಿಮಾ ಚೆನ್ನಾಗಿಲ್ಲ, ಕಥೆ ಹಿಡಿಸಲಿಲ್ಲ, ನಿರ್ದೇಶಕರು ಹಾಗೆ ಮಾಡಿದ್ದಾರೆ, ಸುದೀಪ್ ಹೀಗೆ ಮಾಡಿದ್ದರೆ ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನೋಡುಗರ ಮನಸ್ಸನ್ನು ಬೇರಡೆ ಸೆಳೆಯುವ ಪ್ರಯತ್ನ ಮಾಡಿದರು. ಹೀಗೆ ಅಪಪ್ರಚಾರ ಮಾಡುತ್ತಿರುವುದು ಯಾರು ಎನ್ನುವ ಹುಡುಕಾಟ ಕೂಡ ನಡೆಯಿತು. ಮತ್ತೋರ್ವ ನಟನ ಅಭಿಮಾನಿಗಳ ತಲೆಗೆ ಅದನ್ನು ಕಟ್ಟಲೂ ನೋಡಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪಗಳು ಶುರುವಾದವು. ಇದನ್ನೂ ಓದಿ:ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

    ಸುದೀಪ್ ಅವರ ಸಿನಿಮಾಗೆ ಇಂತಹ ಕಾಟ ಕೊಡುವುದು ಇದೇ ಮೊದಲೇನೂ ಅಲ್ಲ. ಪೈಲ್ವಾನ್ ಸಿನಿಮಾಗೂ ಹೀಗೆಯೇ ಮಾಡಲಾಯಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿ ಮಾಡಿದರು, ಸೋಷಿಯಲ್ ಮೀಡಿಯಾದಲ್ಲಿ ಅದರ ಲಿಂಕ್ ಹಂಚಿಕೊಂಡರು. ಅಲ್ಲದೇ, ಸಿನಿಮಾ ಬಗ್ಗೆಯೂ ನೆಗೆಟಿವ್ ಕಾಮೆಂಟ್ ಹರಿಬಿಟ್ಟರು. ಕೊನೆಗೂ ಪೈರಸಿ ಮಾಡಿದ ಹುಡುಗನನ್ನು ಕಂಡು ಹಿಡಿಯಲಾಯಿತು. ಸ್ವತಃ ಸುದೀಪ್ ಅಭಿಮಾನಿಗಳೇ ಆ ಹುಡುಗನನ್ನು ಹಿಡಿದು ತಂದಿದ್ದರು. ಕೇಸ್ ಆಯಿತು. ಈ ಬಾರಿಯೂ ಅಂಥದ್ದೇ ಕೆಲಸ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲವು ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾದ ಲಿಂಕ್ ಲಭ್ಯವಾಗಿದ್ದು, ಅವುಗಳನ್ನು ಡಿಲಿಟ್ ಮಾಡಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಬಹುಕೋಟಿ ಬಜೆಟ್ ಸಿನಿಮಾಗಳು ರಿಲೀಸ್ ಆದಾಗ ಪೈರಸಿ ಆಗುವುದು ಸಾಮಾನ್ಯ. ಆದರೆ, ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ ಎನ್ನುವುದೇ ಇಲ್ಲಿ ಮುಖ್ಯ.

    ವಿಕ್ರಾಂತ್ ರೋಣ ಸಿನಿಮಾ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದೆ ನಿಜ. ಇದು ಸಿನಿಮಾ ತಂಡಕ್ಕೂ ಅರಿವಿತ್ತು. ಹಾಗಾಗಿಯೇ ಸುದೀಪ್ ಅವರು ಪೈರಸಿ ಕುರಿತು ಮಾತನಾಡುತ್ತಾ, ಇದು ಮೊಬೈಲ್‌ನಲ್ಲಿ ನೋಡುವಂತಹ ಸಿನಿಮಾವಲ್ಲ. ಸಿಕ್ಕರೆ ಖಂಡಿತಾ ನೀವು ನೋಡಿ. ಆದರೆ, ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದ ನಂತರವೂ ನೀವು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುತ್ತೀರಿ. ಆ ರೀತಿಯಲ್ಲಿದೆ ಎಂದಿದ್ದರು. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ನಿರ್ದೇಶಕ ಅನೂಪ್ ಭಂಡಾರಿಯವರು ಒಂದು ಪೋಸ್ಟರ್ ರಿಲೀಸ್ ಮಾಡಿ, ವಿಕ್ರಾಂತ್ ರೋಣ ಪೈರಸಿ ಆಗಿದ್ದು ಕಂಡು ಬಂದರೆ ಕೂಡಲೇ ಸೈಬರ್ ಠಾಣೆ ಅಥವಾ ಅವರೇ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು. ಆ ಪೋಸ್ಟರ್ ಕೂಡ ಭಾರೀ ವೈರಲ್ ಆಗಿತ್ತು. ಯಾರು, ಎಷ್ಟೇ ತಡೆದರೂ ಈ ಪೈರಸಿ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೂ ಪೈರಸಿಗೆ ತುತ್ತಾಗಿತ್ತು.

    ವಿಕ್ರಾಂತ್ ರೋಣ ಸಿನಿಮಾವನ್ನು ಪೈರಸಿಯಲ್ಲಿ ನೋಡಿದರೆ ಅದನ್ನು ಆಸ್ವಾದಿಸುವುದು ಕಷ್ಟ. ಯಾಕೆಂದರೆ, ಬಹುತೇಕ ಸಿನಿಮಾ ಕತ್ತಲಿನಲ್ಲೇ ನಡೆಯುತ್ತದೆ. ಹಾಗೂ 3 ಡಿಯಲ್ಲಿ ರಿಲೀಸ್ ಆಗಿದೆ. ಆ ಖುಷಿಯೇ ಬೇರೆ ಮತ್ತು ದೃಶ್ಯ ವೈಭವವನ್ನು ಥಿಯೇಟರ್ ನಲ್ಲಿಯೇ ನೋಡಿ ಅನುಭವಿಸಬೇಕು. ಹಾಗಾಗಿ ಪೈರಸಿಯಾದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಚಿತ್ರತಂಡದ್ದು.

    Live Tv
    [brid partner=56869869 player=32851 video=960834 autoplay=true]

  • ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ವರೆಗೂ ಯಶ್ ಅವರನ್ನು ಅಭಿಮಾನಿಗಳು ‘ರಾಕಿಂಗ್ ಸ್ಟಾರ್’ ಎಂದು ಕರೆಯುತ್ತಿದ್ದರು. ಕೆಜಿಎಫ್ ಸಿನಿಮಾ ಬಂದ ಮೇಲೆ ‘ರಾಕಿ ಭಾಯ್’ ಕೂಡ ಆದರು. ಇದೀಗ ಯಶ್ ಅವರನ್ನು ಅಭಿಮಾನಿಗಳು ‘ಬಾಸ್’ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನದಿಂದಲೇ ‘ಯಶ್ ಬಾಸ್’ ಎಂದು ಕರೆಯುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ‘ಬಾಸ್’ ಪದವನ್ನು ಯಶ್ ಕೂಡ ಎಂಜಾಯ್ ಮಾಡುತ್ತಾರೆ. ಅವರ ಕಾರಿನ ಸಂಖ್ಯೆ ‘8055’ ಇದನ್ನು ಸ್ಟೈಲ್ ಆಗಿ ಇಂಗ್ಲಿಷ್ ನಲ್ಲಿ ‘ಬಾಸ್’ ಎಂದು ಕಾಣುವಂತೆ ಬರೆಸಲಾಗಿದೆ. ಅಲ್ಲದೇ, ಇದೀಗ ಅವರ ಕನಸು ಕೂಡ ನನಸಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ‘ಬಾಸ್’ ಎಂದು ಕರೆಯುವ ಮೂಲಕ ಹೊಸ ಖುಷಿಗೆ ಕಾರಣರಾಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ‘ಯಶ್ ಬಾಸ್’ ಟ್ವಿಟರ್ ನಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಯಶ್ ಅಭಿಮಾನಿಗಳು ಏನೇ ಪೋಸ್ಟ್ ಮಾಡಿದರೂ, ಹ್ಯಾಶ್ ಟ್ಯಾಗ್ ಅನ್ನು ಯಶ್ ಬಾಸ್ ಎಂದೇ ಬರೆಯುತ್ತಿದ್ದಾರೆ. ಹಾಗಾಗಿ ಟ್ರೆಂಡಿಂಗ್ ನಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ.