Tag: ಪೈಪ್ ಲೈನ್

  • ರಾಮನಗರಕ್ಕೆ 3 ದಿನ, ಚನ್ನಪಟ್ಟಣಕ್ಕೆ 2 ದಿನ ಕಾವೇರಿ ನೀರು ಬಂದ್

    ರಾಮನಗರಕ್ಕೆ 3 ದಿನ, ಚನ್ನಪಟ್ಟಣಕ್ಕೆ 2 ದಿನ ಕಾವೇರಿ ನೀರು ಬಂದ್

    ರಾಮನಗರ: ಜಿಲ್ಲೆಯ ರಾಮನಗರ ನಗರ ಪ್ರದೇಶ ಹಾಗೂ ಚನ್ನಪಟ್ಟಣ ನಗರ ಪ್ರದೇಶಕ್ಕೆ ಕ್ರಮವಾಗಿ ಮೂರು ಹಾಗೂ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜು ಮಾಡುವುದನ್ನು ಬಂದ್ ಮಾಡಿ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆದೇಶ ಹೊರಡಿಸಿದೆ.

    ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಹಲಗೂರು ಸಮೀಪದ ತೊರೆಕಾಡನಹಳ್ಳಿಯಿಂದ ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿದೆ. ಆದರೆ ಇದೀಗ ನೀರು ಸರಬರಾಜು ಮಾಡುವ ಮಾರ್ಗದ ಪೈಪ್ ಲೈನ್‍ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಕಾವೇರಿ ನೀರು ಸರಬರಾಜು ಮಾಡದಂತೆ ತಡೆಯಲಾಗಿದೆ.

    ತೊರೆಕಾಡನಹಳ್ಳಿಯ ಬಿಡಬ್ಲ್ಯೂಎಸ್‍ಎಸ್‍ಬಿ ಆವರಣದ ಹತ್ತಿರ ಕುಡಿಯುವ ನೀರು ಸರಬರಾಜು ಮಾಡುವ 600 ಮಿಮಿ ವ್ಯಾಸದ ಪಿಎಸ್ಪಿ ಏರು ಕೊಳವೆಯ ಮಾರ್ಗದಲ್ಲಿ ಅಧಿಕವಾಗಿ ನೀರು ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯ ಮಾಡಬೇಕಾಗಿದೆ

    ಹಾಗಾಗಿ ಇದೇ ಡಿಸೆಂಬರ್ 11 ಹಾಗೂ 12ರಂದು ಎರಡು ದಿನಗಳ ಕಾಲ ಚನ್ನಪಟ್ಟಣ ನಗರ ಪ್ರದೇಶಕ್ಕೆ ಹಾಗೂ ಡಿಸೆಂಬರ್ 11, 12, 13ರಂದು ಮೂರು ದಿನಗಳ ಕಾಲ ರಾಮನಗರ ನಗರ ಪ್ರದೇಶಗಳಿಗೆ ನೀರು ಸರಬರಾಜು ಮಾಡದಿರಲು ನಿರ್ಧರಿಸಲಾಗಿದೆ.

    ಈಗಾಗಲೇ 5 ದಿನಗಳಿಗೊಮ್ಮೆ ಇಲ್ಲವೇ ವಾರಕ್ಕೊಮ್ಮೆ, 10 ಕಾವೇರಿ ನೀರನ್ನು ರಾಮನಗರದಲ್ಲಿ ಸರಬರಾಜು ಮಾಡುತ್ತಿದ್ದರೆ, ಚನ್ನಪಟ್ಟಣದಲ್ಲಿ ಎರಡು- ಮೂರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಇದೀಗ ಪೈಪ್ ಲೈನ್ ದುರಸ್ಥಿಯಿಂದ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ.

  • ಕಾರಂಜಿಯಂತೆ ಚಿಮ್ಮಿ 22 ಕೆರೆ ಯೋಜನೆಯ ನೀರು ಪೋಲು

    ಕಾರಂಜಿಯಂತೆ ಚಿಮ್ಮಿ 22 ಕೆರೆ ಯೋಜನೆಯ ನೀರು ಪೋಲು

    ದಾವಣಗೆರೆ: ತುಂಗಭದ್ರಾ ನದಿಯಿಂದ ಪೈಪ್ ಲೈನ್ ಮುಖಾಂತರ ಜಿಲ್ಲೆಯ 22 ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಆ ಪೈಪ್ ಲೈನ್ ಒಡೆದು ಕಾರಂಜಿಯಂತೆ ಚಿಮ್ಮಿದೆ.

    ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ಪೈಪ್ ಒಡೆದು ಸಾವಿರಾರು ಲೀಟರ್ ನಷ್ಟು ನೀರು ಪೋಲಾಗಿದೆ. ಅಧಿಕಾರಿಗಳ ನಿಸ್ಕಾಳಜಿ ಬಗ್ಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳ ಯೋಜನೆ ಇದಾಗಿದ್ದು, ಕಾಮಗಾರಿ ಕಳಪೆಯಿಂದ ಪದೇ ಪದೇ ನೀರು ಪೋಲಾಗಿ ಯೋಜನೆ ಯಶಸ್ವಿಯಾಗುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿವೆ.

    ಈ ಪೈಪ್‍ಲೈನ್ ತಿಂಗಳಿಗೆ ಎರಡು ಮೂರು ಬಾರಿ ಒಡೆಯುತ್ತಿದೆ. ಬರಗಾಲದಲ್ಲಿ ನೀರಿಲ್ಲದೆ ರೈತರು ಪರದಾಡುತ್ತಿರುವ ವೇಳೆ ಈ ರೀತಿಯಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಕಾರಂಜಿಯಂತೆ ಚಿಮ್ಮುತ್ತಿದ್ದ ನೀರನ್ನು ನೋಡಿ ಖುಷಿಪಡುವುದಲ್ಲದೇ ಸೆಲ್ಫಿ ತೆಗೆದುಕೊಂಡು ಮುಂದೆ ಸಾಗುತ್ತಿದ್ದಾರೆ.

    ನೀರು ಪೋಲಾಗುತ್ತಿರುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕೂಡ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

  • ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಭಾರೀ ಮಳೆಯಾದ ಸಂದರ್ಭದಲ್ಲಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಗಳನ್ನು ನಾವು ನೋಡಿದ್ದೆವೆ. ಆದರೆ ಮುಂಬೈನ ಬೋರಿವಲಿ ಎಂಬ ಪ್ರದೇಶದಲ್ಲಿ ನೀರಿನ ಪೈಪ್ ಒಡೆದ ರಭಸಕ್ಕೆ ಬೋಲೆರೋ ವಾಹನವೊಂದು ಗಾಳಿಯಲ್ಲಿ ಹಾರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಮುಂಬೈನ ಬೋರಿವಲಿ ಮತ್ತು ಕಂಡಿವಾಲಿ ನಡುವೆ ನೀರು ಪೂರೈಸುವ ಪೈಪ್ ಲೈನ್ ಒಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಹಲವು ವಾಹನಗಳು ನೀರಿನಲ್ಲಿ ಸಿಲುಕ್ಕಿದ್ದವು. ಈ ವೇಳೆ ಸುಮಾರು 1.5 ಟನ್ ತೂಕದ ಮಹಿಂದ್ರಾ ಬೋಲೆರೊ ವಾಹನವು ನೀರಿನ ರಭಸಕ್ಕೆ ಮೇಲೆ ಹಾರಿ ಜಖಂಗೊಂಡಿದೆ. ಘಟನೆ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಘಟನೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬೈ ನೀರು ಪೂರೈಕೆ ಮಂಡಳಿ ಯಾವ ರೀತಿ ಕಾರ್ಯನಿವಹಿಸುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹಣೆ ಎಂದು ಕಿಡಿಕಾರಿದ್ದಾರೆ. ನೀರಿನ ಸಂಪರ್ಕ ವ್ಯವಸ್ಥೆ ಸರಿಯಾದ ರೀತಿ ನಿರ್ವಹಣೆ ಮಾಡದೆ ಇರುವುದರಿಂದ ಭಾರೀ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.

  • ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ

    ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ

    ಕೋಲಾರ: ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಐದು ಜನರಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸಮೀಪದ ಕದಿರೇನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಹಾಗೂ ಕುಟುಂಬಸ್ಥರು ಶೌಚಾಲಯ ನೀರನ್ನು ಮನೆ ಮುಂದೆ ಬಿಡಲಾಗುತ್ತಿದೆ ಎಂದು ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.

    ಅಪ್ಪಿರೆಡ್ಡಿ, ಶ್ರೀರಾಮಪ್ಪ, ಬಾಲ, ಆನಂದ, ಶ್ರೀರಾಮಪ್ಪ ಎಂಬವರು ದಲಿತ ಕುಟುಂಬದ ಗೌರಮ್ಮ, ನಾಗವೇಣಿ, ಮಲ್ಲಿಕಾ, ಮಹೇಶ್ ಹಾಗೂ ಶ್ರೀನಿವಾಸ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಗ್ರಾಮದಲ್ಲಿ ಒಂದು ಡಿಎಅರ್ ತುಕಡಿ ಸೇರಿದಂತೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.