ಪೇ ಸಿಎಂ ಕ್ಯಾಂಪೇನ್ ಬಗ್ಗೆ ಮೊದಲೇ ಏಕೆ ತಿಳಿಯಲಿಲ್ಲ? ಅಭಿಯಾನ ನಡೆಯುವ ತನಕ ಸರ್ಕಾರ ಏನ್ ಮಾಡುತ್ತಿತ್ತು? ಪೇ ಸಿಎಂ ಕ್ಯಾಂಪೇನ್ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪೇ ಸಿಎಂ ಕೌಂಟರ್ ಅಟ್ಯಾಕ್‍ನಲ್ಲಿ ಸಿಎಂ ಮತ್ತು ಟೀಂ ವಿಫಲವಾಗಿದೆ. ಎಲೆಕ್ಷನ್ ಸಮಯದಲ್ಲಿ ಸಚಿವರು, ನಾಯಕರ ಸಪ್ಪೆ ವರ್ತನೆ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: `ಪೇ ಸಿಎಂ’ (PayCM) ಅಭಿಯಾನ ಯಶಸ್ವಿಯಾದ ಕೂಡಲೇ ಕಾಂಗ್ರೆಸ್ (Congress) ಮತ್ತೆ ಅಖಾಡಕ್ಕೆ ಇಳಿದಿದೆ. ಪೇ ಸಿಎಂ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಅನ್ನೋ ನಿರ್ಧಾರವನ್ನ ತೆಗೆದುಕೊಂಡಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಬಳಿಕ ತಾಲೂಕು (Taluk), ಬೂತ್, ಗ್ರಾಮ ಪಂಚಾಯತಿ (Gram Panchayat) ಮಟ್ಟದಲ್ಲೂ ಅಭಿಯಾನ ಶುರು ಮಾಡೋದಕ್ಕೆ ಪ್ಲ್ಯಾನ್ ಮಾಡಿದೆ.
ಪ್ರತಿ ಗ್ರಾಮ ಪಂಚಾಯತಿ ಮಟ್ಟ ಹಾಗೂ ಬೂತ್ ಮಟ್ಟದಲ್ಲೂ (Boot Level) ಪೇ ಸಿಎಂ ಅಭಿಯಾನ (PayCm Campain) ಆಗಬೇಕು. ಅಂತ ಗ್ರಾಮ ಪಂಚಾಯಿತಿ. ಮತ್ತು ಬೂತ್ ಮಟ್ಟದ ಕಾರ್ಯಕರ್ತರಿಗೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಟಾರ್ಗೆಟ್ ನೀಡಿದ್ದಾರೆ ಎನ್ನಲಾಗಿದೆ. ಟಾರ್ಗೆಟ್ ರೀಚ್ ಆಗಲೇಬೇಕು ಅಂತ ಲಿಖಿತ ಆದೇಶ ಹೊರಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ
ಗ್ರಾಮಗಳಲ್ಲಿರುವ ಪಕ್ಷದ ಅಧ್ಯಕ್ಷರು, ಬೂತ್ ಅಧ್ಯಕ್ಷರು ಅಭಿಯಾನ ಮಾಡಬೇಕು. ಪ್ರತಿಯೊಬ್ಬರ ಬಾಯಲ್ಲಿ ಪೇ ಸಿಎಂ ಮಾತು ಉಳಿಯಬೇಕು. ಎಲ್ಲಾ ಜನರಿಗೂ 40 ಪರ್ಸೆಂಟ್ ಭ್ರಷ್ಟಾಚಾರ ಪೇ ಸಿಎಂ ಅಭಿಯಾನ ಮುಟ್ಟಬೇಕು. ಗ್ರಾಮಗಳಲ್ಲಿ ಗೋಡೆಗಳು, ಸಾರ್ವಜನಿಕ ಜಾಗದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಬೇಕು. ಪೇ ಸಿಎಂ ಪೋಸ್ಟರ್ ಮೂಲಕ ಸರ್ಕಾರದ ವಿರುದ್ಧ ಜನಾಂದೋಲನ ನಡೆಸಬೇಕು. ಪೇ ಸಿಎಂ ಪೋಸ್ಟರ್‌ಗಳು ಅಗತ್ಯ ಇದ್ದರೇ ಪ್ರತಿ ಗ್ರಾಮಗಳಿಗೂ ಪೋಸ್ಟರ್‌ಗಳನ್ನ ರಾಜ್ಯ ಕಚೇರಿಯಿಂದ ಕಳಿಸಿಕೊಡಲಾಗುತ್ತದೆ ಅಂತಾ ಸಂದೇಶ ರವಾನೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೀದರ್: ಪೇ ಸಿಎಂ (Pay CM) ಅಭಿಯಾನದಲ್ಲಿ ಲಿಂಗಾಯತರಿಗೆ (Lingayats), ವೀರಶೈವರಿಗೆ ಹಾಗೂ ಬಿಜೆಪಿ (BJP) ಮುಖಂಡರಿಗೆ ಅವಮಾನವಾಗುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರ್‌ನಲ್ಲಿ (Bidar) ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಂದರೆ ಇದರಲ್ಲಿ ಜಾತೀಯತೆ ತರುತ್ತಿದ್ದಾರೆ. ಬಿಜೆಪಿಯಲ್ಲಿರುವ ಲಿಂಗಾಯತರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ಅವರೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
2011 ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ, ಜೈಲಿಗೆ ಕಳುಹಿಸಿದವರು ಯಾರು? 2021 ರಲ್ಲಿ ಸರ್ಕಾರ ರಚನೆಯಾದ ಮೇಲೆ ವಯಸ್ಸಾಗಿದೆ ಎಂದು ಕಣ್ಣೀರು ಹಾಕಿಸಿ, ರಾಜೀನಾಮೆ ಕೊಡಿಸಿದ್ದು ಬಿಜೆಪಿಯವರೇ ಅಲ್ಲವೇ? ಆಗ ಲಿಂಗಾಯತ, ವೀರಶೈವರಿಗೆ ಅವಮಾನ ಆಗಿದ್ದು, ಬಿಜೆಪಿ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್
ಇಂದು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಿಂಗಾಯತ, ವೀರಶೈವರಿಗೆ ಅವಮಾನ ಎಂದು ಹೇಳುತ್ತಿರುವುದು ಖಂಡನೀಯವಾಗಿದೆ. ಪೇ ಸಿಎಂ ಅಭಿಯಾನ ಜಾತಿ, ಧರ್ಮ, ಮತದ ಹೋರಾಟ ಅಲ್ಲ. ಪಿಎಸ್‌ಐ, ಉಪನ್ಯಾಸಕರು, ಶಿಕ್ಷಕರ ನೇಮಕಾತಿ ಸೇರಿದಂತೆ ರಾಜ್ಯದ ಯಾವುದೇ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಅದರ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅವರೆಲ್ಲಾ ಸಿಎಂ ಆಗಿದ್ದಾಗ ಬೀಗರ ಊಟ, ಮದುವೆಗೆ ಬರ್ತಿದ್ರು, ಬೊಮ್ಮಾಯಿ ಅಭಿವೃದ್ಧಿ ಕೆಲಸಕ್ಕೆ ಬರ್ತಿದ್ದಾರೆ: ಪ್ರತಾಪ್ ಸಿಂಹ
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಕಾಂಗ್ರೆಸ್ (Congress) ಪಕ್ಷದಿಂದ ನಡೆಸುತ್ತಿರುವ ಪೇ ಸಿಎಂ ಅಭಿಯಾನವೊಂದು ಡರ್ಟಿ ಪಾಲಿಟಿಕ್ಸ್ (Dirty Politics) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಚಿತ್ರದುರ್ಗ (Chitradurga) ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ ನಡೆಯುತ್ತಿರುವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ (Shri Shivakumar Shivacharya Swamiji) 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನ ಕಾಂಗ್ರೆಸ್ ನಾಯಕರ ನೈತಿಕ ಅಧಃಪತನ ತೋರಲಿದೆ. ಪೇ ಸಿಎಂ (Pay CM) ಅಭಿಯಾನದ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದ್ದು, ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಸಿದ್ದರಾಮಯ್ಯ (Siddaramaiah) ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಿಎಫ್‍ಐ (PFI) ಮತ್ತು ಎಸ್‍ಡಿಪಿಐ (SDPI) ಕಚೇರಿ, ಮುಖಂಡರ ಮನೆ ಮೇಲೆ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಎನ್‍ಐಎ ಹಾಗೂ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿದ್ದಾನೆಂದು 18 ತಿಂಗಳು ಮನೆಯಲ್ಲೇ ಶವ ಇಟ್ಕೊಂಡಿದ್ದ ಕುಟುಂಬ
ಮುಂಬರುವ ವಿಧಾನಸಭೆ ಚುನಾವಣೆ (Vidhansabhe Election) ಹಿನ್ನೆಲೆಯಲ್ಲಿ ವಿವಿಧ ಸಮೀಕ್ಷೆಗಳು ನಡೆಸಲಾಗುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಹೆಚ್ಚಿನ ಸಂಖ್ಯೆ ಗಳಿಸಲಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಜನರ ನಾಡಿ ಮಿಡಿತ ನಮಗೂ ಗೊತ್ತಿದೆ. 35 ವರ್ಷ ನಾವೂ ರಾಜಕಾರಣ ಮಾಡಿದ್ದು, ಮುಂದಿನ ದಿನಗಳಲ್ಲಿ ತಾವುಗಳೇ ನೋಡುತ್ತೀರಾ ಎಂದಿದ್ದಾರೆ. ಇದನ್ನೂ ಓದಿ: ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಚುನಾವಣೆ (Election) ಹತ್ತಿರ ಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ನಿನ್ನೆ ಕಾಂಗ್ರೆಸ್‍ನವರು ‘PAY CM’ ಅಭಿಯಾನ ನಡೆಸಿದ್ದರು. ಈ ಬೆನ್ನಲ್ಲೇ ಬಿಜೆಪಿಯವರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಅಭಿಯಾನವೊಂದನ್ನು ನಡೆಸಿದ್ದರು.
ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವಿರುದ್ಧ ಕಾಂಗ್ರೆಸ್ ಅಭಿಯಾನ (Congress Campaign) ದ ಬೆನ್ನಲ್ಲೇ ಎಫ್‍ಐಆರ್ (FIR) ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Dinesh GunduRao) ಅವರು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್ ದಾಖಲು
ಟ್ವೀಟ್‍ನಲ್ಲೇನಿದೆ..?: ‘PAY CM’ ಪೋಸ್ಟರ್ ಗೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್ (Congress) ಸೋಶಿಯಲ್ ಮೀಡಿಯಾದ ಐವರನ್ನು ಬಂಧಿಸಿದ್ದಾರೆ. ಆದರೆ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಸೋಶಿಯಲ್ ಮೀಡಿಯಾದವರ ಬಂಧನವೇಕಿಲ್ಲ?. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ.? ಇದ್ಯಾವ ಕುರುಡು ನ್ಯಾಯ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದ್ದಾರೆ.
3 BJP ಸೋಶಿಯಲ್ ಮೀಡಿಯಾದ ವಿಕೃತಿಗೆ ನಾನು ಸೇರಿದಂತೆ ಹಲವು ಕಾಂಗ್ರೆಸಿಗರು ಬಲಿಪಶುಗಳಾಗಿದ್ದಾರೆ.
ನಮ್ಮದೇ ಸರ್ಕಾರವಿದ್ದಾಗಲೂ ಕೂಡ BJP ಸೋಶಿಯಲ್ ಮೀಡಿಯಾ ಕಾಂಗ್ರೆಸ್ ನಾಯಕರ ಫೋಟೋ ವಿರೂಪಗೊಳಿಸಿ ಅಂಕೆಯಿಲ್ಲದ ವಿಕೃತಿ ಮೆರೆದಿತ್ತು.
ಆದರೆ ಟೀಕೆ ಟಿಪ್ಪಣಿ ರಾಜಕೀಯದ ಸಹಜ ವಿದ್ಯಾಮಾನ. ಹಾಗಾಗಿ ನಾವು BJPಯವರಂತೆ ಪೊಲೀಸರ ಮೊರೆ ಹೋಗಿರಲಿಲ್ಲ
‘PAY CM’ ಎಂಬ ಕೇವಲ ಒಂದೇ ಒಂದು ಪೋಸ್ಟರ್ ಗೆ ರಾಜ್ಯ ಸರ್ಕಾರ ಹಾವು ತುಳಿದಂತೆ ಬೆಚ್ಚಿಬಿದ್ದಿದೆ. ಬಿಜೆಪಿ ಸೋಶಿಯಲ್ ಮೀಡಿಯಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಷ್ಟು ಕಾಂಗ್ರೆಸ್ ನಾಯಕರ ಮೇಲೆ ಕಪೋಲಕಲ್ಪಿತ ಸುಳ್ಳುಗಳನ್ನು ಹರಡಿ ವಿಕೃತಿ ಮೆರೆದಿಲ್ಲ. ಈಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಯವರಿಗಿದೆಯೇ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ
4 ಎದುರಾಳಿಗೆ ಕೆಸರು ಎರಚಿ, ಅವರು ನಮಗೆ ಮೊಸರು ಎರಚಲಿ ಎಂದು ಬಯಸಬಾರದು. ಇನ್ನೊಬ್ಬರ ಮೇಲೆ ಕೆಸರು ಎರಚಿದರೆ, ತಮಗೂ ಕೆಸರನ್ನೇ ಎರಚುತ್ತಾರೆ ಎಂಬ ಕಟು ಸತ್ಯವನ್ನು ಬೊಮ್ಮಾಯಿಯವರು ಅರಿಯಬೇಕು. BJP ಸೋಶಿಯಲ್ ಮೀಡಿಯಾ ಸುಳ್ಳು ಹರಡುವಾಗ ಇದೇ ಬೊಮ್ಮಾಯಿಯವರು ವಿಕೃತ ಆನಂದ ಅನುಭವಿಸಿದ್ದರು. ಈಗ ತಮಗೇ ಚುಚ್ಚಿಕೊಂಡ ಮೇಲೆ ಆ ನೋವು ಅರಿವಾಗುತ್ತಿದೆ.
ಬಿಜೆಪಿ ಸೋಶಿಯಲ್ ಮೀಡಿಯಾದ ವಿಕೃತಿಗೆ ನಾನು ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಬಲಿಪಶುಗಳಾಗಿದ್ದಾರೆ. ನಮ್ಮದೇ ಸರ್ಕಾರವಿದ್ದಾಗಲು ಕೂಡ ಬಿಜೆಪಿ (BJP) ಸೋಶಿಯಲ್ ಮೀಡಿಯಾ ಕಾಂಗ್ರೆಸ್ ನಾಯಕರ ಫೋಟೋ ವಿರೂಪಗೊಳಿಸಿ ಅಂಕೆಯಿಲ್ಲದ ವಿಕೃತಿ ಮೆರೆದಿತ್ತು. ಆದರೆ ಟೀಕೆ ಟಿಪ್ಪಣಿ ರಾಜಕೀಯದ ಸಹಜ ವಿದ್ಯಾಮಾನ. ಹಾಗಾಗಿ ನಾವು BJPಯವರಂತೆ ಪೊಲೀಸರ ಮೊರೆ ಹೋಗಿರಲಿಲ್ಲ.
ಎದುರಾಳಿಗೆ ಕೆಸರು ಎರಚಿ, ಅವರು ನಮಗೆ ಮೊಸರು ಎರಚಲಿ ಎಂದು ಬಯಸಬಾರದು. ಇನ್ನೊಬ್ಬರ ಮೇಲೆ ಕೆಸರು ಎರಚಿದರೆ, ತಮಗೂ ಕೆಸರನ್ನೇ ಎರಚುತ್ತಾರೆ ಎಂಬ ಕಟು ಸತ್ಯವನ್ನು ಬೊಮ್ಮಾಯಿಯವರು ಅರಿಯಬೇಕು. ಬಿಜೆಪಿ ಸೋಶಿಯಲ್ ಮೀಡಿಯಾ ಸುಳ್ಳು ಹರಡುವಾಗ ಇದೇ ಬೊಮ್ಮಾಯಿಯವರು ವಿಕೃತ ಆನಂದ ಅನುಭವಿಸಿದ್ದರು. ಈಗ ತಮಗೇ ಚುಚ್ಚಿಕೊಂಡ ಮೇಲೆ ಆ ನೋವು ಅರಿವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ವಿಧಾನ ಪರಿಷತ್ (Legislative Councils) ಕಲಾಪದಲ್ಲಿಂದು `ಪೇ ಸಿಎಂ’ (PayCM) ವಿಷಯ ಸದ್ದು ಗದ್ದಲಕ್ಕೆ ಕಾರಣವಾಯ್ತು. ಪ್ರತಿಪಕ್ಷ – ಆಡಳಿತ ಪಕ್ಷಗಳ ನಡುವೆ ಭಿತ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷ ನಾಯಕ ಹರಿಪ್ರಸಾದ್ (BK Hariprasad) ಪೇ ಸಿಎಂ (CM) ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರನ್ನ ಉಗ್ರಗಾಮಿಗಳ ರೀತಿ ರಾತ್ರೋ ರಾತ್ರಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಅಂತ ಒತ್ತಾಯ ಮಾಡಿದರು.
ಇದಕ್ಕೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಉತ್ತರಿಸಿ, ಕಾನೂನು ಎಲ್ಲರಿಗೂ ಒಂದೇ. ಸಿಎಂ ಬಗ್ಗೆ ಹೀಗೆ ಮಾಡಿದರೆ ಸಹಿಸೋಕೆ ಆಗುತ್ತಾ? ತಪ್ಪು ಮಾಡಿರೋರಿಗೆ ಶಿಕ್ಷೆ ಆಗುತ್ತೆ ಎಂದರು. ಈ ವೇಳೆ ಗದ್ದಲ ಗಲಾಟೆ ಪ್ರಾರಂಭವಾಯ್ತು. ಸಚಿವ ಅಶೋಕ್ (Minister Ashok) ಇದು ಕಾಂಗ್ರೆಸ್ (Congress) ನ ಹೇಡಿತನ ಅಂತ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ RSS ಮುಖ್ಯಸ್ಥ ಮೋಹನ್ ಭಾಗವತ್
ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಗದ್ದಲ ಗಲಾಟೆ ಹಿನ್ನಲೆಯಲ್ಲಿ ಕಲಾಪವನ್ನ 10 ನಿಮಿಷಗಳ ಕಾಲ ಸಭಾಪತಿಗಳು ಮುಂದೂಡಿದರು.
ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಜೆಡಿಎಸ್ (JDS) ಸದಸ್ಯ ಭೋಜೇಗೌಡ ಮಾತನಾಡುತ್ತಾ, ಸಾಮಾಜಿಕ ಜಾಲತಾಣದ ವೈರಲ್ ವಿಷಯ ಮತ್ತು ಬಿಜೆಪಿ ಎದುರೇಟು ಎನ್ನುವ ಕುರಿತು ಕ್ಯೂಆರ್ ಕೋಡ್ ವಿಚಾರ ಚರ್ಚೆಗೆ ಬಂದಿರೋದು ಕಿಡಿಗೇಡಿಗಳ ಕೃತ್ಯ. ನನ್ನ ಹೆಸರಲ್ಲಿ ಕ್ಯೂಆರ್ ಕೋಡ್ ಮಾಡಿದರೆ ನಾವು ಪ್ರಶ್ನೆ ಮಾಡಬಾರದಾ? ಇಂತಹ ಕಿಡಿಗೇಡಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದೆ – ಲಂಚ ತಿಂದರೆ ಅಪರಾಧವಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ: ಸಿದ್ದು
ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಭೋಜೇಗೌಡ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಪೇ-ಸಿಎಂ ಹೆಸರಿನಲ್ಲಿ ಇಂತಹ ಕೃತ್ಯ ಸರಿಯಲ್ಲ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆಶಿ (DK Shivakumar) ಯದ್ದು ಕ್ಯೂಆರ್ (QR Code) ಕೋಡ್ ಮಾಡಲಾಗಿದೆ. ಅದರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದಿದ್ದಾರೆ. ನೀವು ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಗೌರವ ಉಳಿದರೆ ಎಲ್ಲರದ್ದೂ ಉಳಿಯಲಿದೆ ಹೋದರೆ ಎಲ್ಲರದ್ದೂ ಹೋಗಲಿದೆ. ಹೀಗಾದರೆ ಸಾರ್ವಜನಿಕ ಜೀವನದಲ್ಲಿರಲು ಸಾಧ್ಯವಿಲ್ಲ. ನಾವೆಲ್ಲರೂ ಇಲ್ಲಿ ಒಂದೇ. ಸಿಎಂ ಅವರನ್ನೇ ಹೀಗೆ ಮಾಡಿದರೆ ಹೇಗೆ. ಚಾರಿತ್ರ‍್ಯವಧೆ ನೋಡಿಕೊಂಡು ಕೂರಬೇಕಾ? ನಿಮ್ಮ ಕಡೆಯವರ ಬಗ್ಗೆ ಕ್ರಮ ಇಲ್ಲ ಎಂದರೆ ದೂರು ಕೊಡಿ ಕ್ರಮ ಕೈಗೊಳ್ಳೋಣ ಎಂದರು.
ಸಿಎಂ ಇಷ್ಟು ಹಣ ಹಾಕು ಎಂದರೆ ಬೇರೆ-ಬೇರೆ ವೇದಿಕೆ ಇದೆ ಅಲ್ಲಿ ಮಾಡಲಿ. ಸಾರ್ವಜನಿಕವಾಗಿ ಈ ರೀತಿ ಮಾಡಿದರೆ ಹೇಗೆ? ನಾಳೆ ಹರಿಪ್ರಸಾದ್‌ಗೆ ಹೀಗೆ ಮಾಡಿದರೂ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು. ನಾವು ನೀವು ಜಗಳ ಆಡುವುದು ಬೇರೆ ಸಾರ್ವಜನಿಕವಾಗಿ, ನಗ್ನವಾಗಬೇಕಾ? ಸಿನಿಮಾ, ನಾಟಕದಲ್ಲಿ ಹರಿಕಥೆಯಲ್ಲಿ ಕುಳಿತು ಟೀಕೆ ಮಾಡುವುದೇ ಶಾಸಕ, ಸಚಿವರನ್ನೇ. ನಮ್ಮ ಗೌರವವನ್ನು ಇನ್ನಷ್ಟು ಕೆಳಕ್ಕೆಳೆಯುವುದು ಬೇಡ ಎಂದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಹಿಂದೆ ನಮ್ಮ ಸರ್ಕಾರದ ವೇಳೆ ಸಿದ್ದರಾಮಯ್ಯರನ್ನ ನಿದ್ದೆರಾಮಯ್ಯ ಎಂದಾಗ ನಿಮ್ಮನ್ನು ಬಂಧಿಸಿದ್ದವಾ? 10 ಪರ್ಸೆಂಟ್ ಎಂದಾಗ ವಿಶ್ವಗುರುವನ್ನು ಬಂಧಿಸಿದ್ದರಾ? ಬಿ.ಟಿ ಲಲಿತಾ ನಾಯಕ್‌ರಿಗೆ 9 ಕೊಲೆ ಪತ್ರ ಬಂದಿರುವ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ (HD Kumaraswamy), ಹರಿಪ್ರಸಾದ್ ಕೊಲ್ಲುತ್ತೇವೆ ಎಂದು ಮೂರು ಪತ್ರದಲ್ಲಿದ್ದರೂ ಏನು ಕ್ರಮ ಕೈಗೊಂಡಿದ್ದೀರಾ. ಈಗ ಈ ವಿಚಾರದಲ್ಲಿ ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದೀರಾ? ಹಿಂದೆಲ್ಲಾ ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ನಮ್ಮ ಸಾಮಾಜಿಕ ಜಾಲತಾಣದವರೇನು ಉಗ್ರರಾ ರಾತ್ರೋರಾತ್ರಿ ಮನೆಯವರನ್ನು ಹೆದರಿಸಿ ಬಂಧಿಸಿದ್ದೀರಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚರ್ಚೆ ಮಾಡುವುದಿದ್ದರೆ ನೋಟಿಸ್ ಕೊಡಲಿ. ಪ್ರಶ್ನೋತ್ತರ ನಿಲ್ಲಿಸಿ ಚರ್ಚೆಗೆ ಅವಕಾಶ ಬೇಡ ಎಂದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, 40 ಪರ್ಸೆಂಟ್ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಸಿದ್ದ ಎಂದು ಸಿಎಂ ಹೇಳಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಸಿಎಂ, ಇಂದು ನಾಳೆ ಸದನ ಇದೆ 40 – 100 ಪರ್ಸೆಂಟ್ ಎಲ್ಲ ಚರ್ಚೆಗೆ ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದ್ದರು.
ಈ ವೇಳೆ ಮಾತನಾಡಿದ ಹರಿಪ್ರಸಾದ್, ಮೂರಲ್ಲ ಹತ್ತು ತಲೆಮಾರು ಚರ್ಚೆ ಆಗಲಿ. ಅಮಾಯಕರನ್ನು ರಾತ್ರಿ 2 ಗಂಟೆಗೆ ಬಂಧಿಸಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಯಾರು ಅಮಾಯಕರು ಎಂದು ಟಾಂಗ್ ನೀಡಿದರೆ, ನೀವು ನ್ಯಾಯಾಧೀಶರಾ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಸದನದಲ್ಲಿ ಗದ್ದಲದ ನಡುವೆಯೂ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಮಾಸ್ಕ್ ಗೆ ಪ್ರತಿಯಾಗಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ ಬಿಜೆಪಿ ಸದಸ್ಯರು, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಹಗರಣ, ಕೆಪಿಎಸ್ಸಿ ಹಗರಣ, ಬಿಟ್ ಕಾಯಿನ್ ಹಗರಣದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಸದಸ್ಯರ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ಭಿತ್ತಿಪತ್ರ ಪ್ರದರ್ಶಿಸಿದರು.
ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಪ್ರಶ್ನೋತ್ತರ, ಲಿಖಿತ ಮೂಲಕ ಉತ್ತರ, ಶೂನ್ಯವೇಳೆ ಮುಗಿಸಿದ ಸಭಾಪತಿಗಳು ಶಾಸನ ರಚನೆ ಕಲಾಪ ಕೈಗೆತ್ತಿಕೊಂಡರು. ಕರ್ನಾಟಕ ವಿಶ್ವ ವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಡಿಸಿದ ಮಾಧುಸ್ವಾಮಿ ಅಂಗೀಕಾರಕ್ಕೆ ಮನವಿ ಮಾಡಿದರು. ಕಾಂಗ್ರೆಸ್ ಗದ್ದಲದ ನಡುವೆ ಯಾವುದೇ ಚರ್ಚೆ ಇಲ್ಲದೇ ಧ್ವನಿಮತದ ಮೂಲಕ ಅಂಗೀಕರಿಸಿದರು.
ಈ ವೇಳೆ ಗದ್ದಲದಲ್ಲಿ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ನ ಮರಿತಿಬ್ಬೇಗೌಡ, ಕಾಂಗ್ರೆಸ್ ನ ಸಲೀಂ ಅಹಮದ್ ತಾವು ಕುಳಿತುಕೊಳ್ಳುವ ಪೀಠದ ಮೇಲೆ ನಿಂತು ಪ್ರತಿಭಟನೆ ನಡೆಸಿದರು. ವಿಧೇಯಕ ಅಂಗೀಕಾರದ ವೇಳೆ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಬಳಿ ಬಂದು ಪೀಠ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಾರ್ಷಲ್ ಗಳು ಸಭಾಪತಿಗಳ ಪೀಠದ ಸುತ್ತುವರಿದು ರಕ್ಷಣೆ ನೀಡಿದರು. ನಂತರ ಕಲಾಪವನ್ನು ಸಭಾಪತಿ ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆ ಆದರೂ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಭಿತ್ತಿಪತ್ರ ಪ್ರದರ್ಶನ ನಡೆಸಿದರು. ಪರ ವಿರೋಧ ಘೋಷಣೆ ಕೂಗಿದರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾರ್ಷಲ್ ಗಳ ದಂಡನಾಯಕರು ಮಾರ್ಷಲ್ ಗಳಿಗೆ ನಿರ್ದೇಶನ ನೀಡಿದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರನ್ನು ಹೊರ ಕಳಿಸಲಾಯಿತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪೇ ಸಿಎಂ (Pay CM) ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಪೇ ಸಿಎಂ ಕಾಂಗ್ರೆಸ್ ಅಭಿಯಾನ (Congress Campaign) ಹಿನ್ನೆಲೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮಾಜಿ ಮುಖ್ಯಸ್ಥ ಬಿ.ಆರ್.ನಾಯ್ಡು (BR Naidu), ಪವನ್, ಗಗನ್ ಎಂಬಾತನನ್ನು ಹೈ ಗ್ರೌಂಡ್ಸ್ ಪೊಲೀಸರು (High Grounds Police) ಬಂಧಿಸಿದ್ದರು. ಇದೀಗ ಸಿಆರ್‌ಪಿಸಿ 107 ಅಡಿ ಬಾಂಡ್ ಬರೆಸಿಕೊಂಡು ಪೊಲೀಸರು ಮೂವರನ್ನು ಬಿಡುಗಡೆ ಮಾಡಿದ್ದಾರೆ.
ಈವರೆಗೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಾದ ಸಂಜಯ್ ಹಾಗೂ ವಿಶ್ವಮೂರ್ತಿಯನ್ನು ಪಕ್ಷದ ನಾಯಕರು ಸರೆಂಡರ್ ಮಾಡಿಸಿದ್ದರು. ಆದರೆ ಇನ್ನೂ ಮೂವರಿಗಾಗಿ ಪೊಲೀಸರು ಕಾಯುತ್ತಿದ್ದು, ಪೋಸ್ಟರ್ ಅಂಟಿಸಿದ ಐದು ಮಂದಿಯನ್ನು ನಾಲ್ಕು ಗಂಟೆ ವೇಳೆಗೆ ಕೋರ್ಟ್ ಮುಂದೆ ಹೈ ಗ್ರೌಂಡ್ಸ್ ಪೊಲೀಸರು ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ʼPAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ
ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ (Srinivas Gowda) ಅವರು, ಸದ್ಯ ಬಿ.ಆರ್. ನಾಯ್ಡು ರನ್ನ ಬಿಡುಗಡೆ ಮಾಡಲಾಗಿದೆ. ಪವನ್, ಗಗನ್ ಬಿಡುಗಡೆಗೆ ಪ್ರಕ್ರಿಯೆ ನಡೆಸಲಾಗುತ್ತಿದೆ. ನಂತರ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಲಾಗಿದೆ. ಇನ್ನೂ 3 ಜನರನ್ನ ಕರೆತರಲಾಗುತ್ತಿದೆ. ಸಂಜೆ ಐವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ನಾವೇ ಪೇಸಿಎಂ ಪೋಸ್ಟರ್ ಅಂಟಿಸ್ತೇವೆ: ಡಿಕೆಶಿ
ರಾಹುಲ್ ಗಾಂಧಿಯ ಕರ್ನಾಟಕ ಸ್ಟ್ರಾಟಜಿ ತಂಡದ ಸುನಿಲ್ ಕುಂದಗೋಳ ತಂಡ ಈ ಅಭಿಯಾನದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್, ಈ ವಿಚಾರದಲ್ಲಿ ದಿನಕ್ಕೊಂದು ಅಸ್ತ್ರ ಪ್ರಯೋಗಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಲು ಪ್ರಯತ್ನ ನಡೆಸಿದೆ. ಬುಧವಾರ ಯುಪಿಐ ಪೇಮೆಂಟ್ ಆಪ್ `ಪೇಟಿಎಂ ಮಾದರಿಯಲ್ಲಿ `ಪೇ ಸಿಎಂ’ ಪೋಸ್ಟರ್‌ಗಳನ್ನು ಅಂಟಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಚಾಟಿ ಬೀಸಿದೆ. ಇತ್ತ ಪೋಸ್ಟರ್ ಅಭಿಯಾನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಸರ್ಕಾರ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದ ಹಲವೆಡೆ PayCM ಪೋಸ್ಟರ್ ಅಂಟಿಸಿದನ್ನು ನೋಡಿ ಸಿಎಂ ಬೊಮ್ಮಾಯಿ(Basavaraj Bommai) ಗರಂ ಆದ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಗರಂ ಆದ ಬೆನ್ನಲ್ಲೇ ಪೊಲೀಸರು ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.
ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ. ಸದ್ಯಕ್ಕೆ ಒಂದು ಎಫ್‌ಐಆರ್ ಮಾತ್ರ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ(Pratap Reddy) ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ
ಪೋಸ್ಟರ್ ಅಂಟಿಸಿದವರ ಪತ್ತೆಗೆ ಮುಂದಾಗುತ್ತಿರುವ ಪೊಲೀಸರು ಈಗ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಎಂ ನಿವಾಸದ ರಸ್ತೆ, ಸಿದ್ದರಾಮಯ್ಯ ಸರ್ಕಾರಿ ನಿವಾಸದ ರಸ್ತೆ ಸೇರಿದಂತೆ ಹಲವು ಕಡೆ ಅಂಟಿಸಲಾಗಿತ್ತು. ಈಗ ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಪೇ ಸಿಎಂ ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.
ಕರ್ನಾಟಕ ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಪೋಸ್ಟರ್ ಅಂಟಿಸುವುದನ್ನು ನಿಷೇಧಿಸಲಾಗಿದೆ. ಆರೋಪ ಸಾಬೀತಾದರೆ ಗರಿಷ್ಠ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
Live Tv
[brid partner=56869869 player=32851 video=960834 autoplay=true]
ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಮಾಡಲು ಸಿದ್ಧತೆ ನಡೆಸಿದೆ. ಹಿರಿಯ ನಾಯಕರ ಗಮನಕ್ಕೆ ತಂದು ಅಭಿಯಾನ ನಡೆಸಲು ಮುಂದಾಗಿದೆ.
ಬೇಡಾಗಿದ್ದಾರೆ ಹೆಸರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೋಟೋ ಪ್ರಕಟಿಸಿದೆ ನಿಮ್ಮ ಹತ್ತಿರ ಇವರನ್ನ ಸುಳಿದಾಡಲು ಬಿಡಬೇಡಿ. ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಂತ ಕಾಲೆಳೆದು ಪೋಸ್ಟರ್ ರಚಿಸಿದೆ.
ಕಾಂಗ್ರೆಸ್ ಪೋಸ್ಟರ್‌ಗೆ ಪ್ರತಿಯಾಗಿ ಬಿಜೆಪಿ ಕೌಂಟರ್ ಕೊಟ್ಟರೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಫೋಟೋ ಇರುವ ಸ್ಕ್ಯಾನ್ ರೀಡ್ ಆಗುತ್ತಿಲ್ಲ.
Live Tv
[brid partner=56869869 player=32851 video=960834 autoplay=true]