Tag: ಪೇಸ್ ಬುಕ್

  • ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

    ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಪೇಸ್‍ಬುಕ್, ಟ್ವಿಟ್ಟರ್, ಗೂಗಲ್‍ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಕೇಂದ್ರ ಕಂಪನಿಗಳೊಂದಿಗೆ ಸಭೆ ನಡೆಸಿ ವಾರ್ನಿಂಗ್ ನೀಡಿದೆ ಎಂದು ವರದಿಯಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಪ್ರಚಲಿತದಲ್ಲಿರುವ ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಸೇರಿ ಹಲವು ಸಾಮಾಜಿಕ ಜಾಲತಾಣಗಳೊಂದಿಗೆ ಕೇಂದ್ರ ಚರ್ಚಿಸಿದ್ದು, ಪ್ರಮುಖವಾಗಿ ಸುಳ್ಳು ಸುದ್ದಿಗಳನ್ನು ಹರಡದಂತೆ ನಿಯಂತ್ರಿಸಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಖಡಕ್ ವಾರ್ನಿಂಗ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: 24 ಗಂಟೆಯ ಒಳಗಡೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆಯಲೇಬೇಕು – ಕೇಂದ್ರ ಸರ್ಕಾರ

    ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಸಾಮಾಜಿಕ ಜಾಲತಾಣ ಕಂಪನಿಗಳ ಜೊತೆ ಚರ್ಚಿಸಿದ ಕೇಂದ್ರ, ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಹಿಡಿಯಬೇಕು. ಈ ಬಗ್ಗೆ ಕೇಂದ್ರ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದೆ ಇದ್ದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಹತ್ವದ ದಾಖಲೆಗಳನ್ನು ವಾಟ್ಸಪ್ ಮಾಡಬೇಡಿ, ಸಭೆಗಳಲ್ಲಿ ಫೋನ್ ಬಳಸಬೇಡಿ – ಕೇಂದ್ರ ಸರ್ಕಾರ ಸೂಚನೆ

    ಈಗಾಗಲೇ ಡಿಜಿಟಲ್ ಮೀಡಿಯಾದಲ್ಲಿ ದ್ವೇಷ ಬಿತ್ತುವ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಕೆಲದಿನಗಳ ಹಿಂದೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಜಾರಿಗೆ ತರಲಾದ ಹೊಸ ನಿಯಮಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ನಿಯಮದಲ್ಲಿ ಏನಿದೆ?
    ಅಶ್ಲೀಲ, ಮಾನಹಾನಿಕರ, ಆಕ್ಷೇಪಾರ್ಹ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ವಿಷಯಗಳನ್ನು ನಿಷೇಧಿಸಬೇಕು. ಸಾಮಾಜಿಕ ಜಾಲತಾಣಗಳು ಸೂಚನೆ ನೀಡಿದ ಅಥವಾ ಕೋರ್ಟ್ ಆದೇಶದ 36 ಗಂಟೆಯ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು. ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಸೈಟ್‍ಗಳು ಮಾಹಿತಿಯನ್ನು ಮೊದಲ ಹಾಕಿದವರ ಟ್ರ್ಯಾಕಿಂಗ್ ಮಾಡಬೇಕು. ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿಯನ್ನು ಒದಗಿಸಬೇಕು. ದೂರು ನೀಡಿದ 24 ಗಂಟೆಗಳ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.

    ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು. ನಿಯಮವನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ ಜಾರಿಯಾಗಬೇಕು. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರ್ಕಾರದ ಮೇಲ್ವಿಚಾರಣೆ. ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್‍ಲೈನ್ ಪೋರ್ಟಲ್ ತೆರೆಯಬೇಕು. ಕುಂದುಕೊರತೆಯನ್ನು 15 ದಿನಗಳ ಒಳಗಡೆ ಪರಿಹರಿಸಬೇಕು. ಈ ಸೇವೆ ನೀಡುವ ಟೆಕ್ ಕಂಪನಿಗಳು ಕುಂದುಕೊರತೆಯನ್ನು ನಿವಾರಿಸಲು ಅಧಿಕಾರಿಗಳನ್ನು ನೇಮಿಸಬೇಕು. ಕುಂದುಕೊರತೆಯನ್ನು ನಿವಾರಿಸುವ ಅಧಿಕಾರಿ ಭಾರತದಲ್ಲಿ ವಾಸಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು ತಿಳಿಸಿದೆ.

  • ಜೆಡಿಎಸ್ ನಲ್ಲಿ ಟಿಕೆಟ್‍ಗಾಗಿ ರೇವಣ್ಣಗೂ ಅರ್ಜಿ ಹಾಕುವ ದುರ್ಗತಿ – ಜಮೀರ್ ಹೇಳಿಕೆ ವಿರುದ್ಧದ ಟೀಕೆಗಳು ವೈರಲ್

    ಜೆಡಿಎಸ್ ನಲ್ಲಿ ಟಿಕೆಟ್‍ಗಾಗಿ ರೇವಣ್ಣಗೂ ಅರ್ಜಿ ಹಾಕುವ ದುರ್ಗತಿ – ಜಮೀರ್ ಹೇಳಿಕೆ ವಿರುದ್ಧದ ಟೀಕೆಗಳು ವೈರಲ್

    ಕೋಲಾರ: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಇರೋವರೆಗೆ ಮಾತ್ರ ಜನತಾದಳ ಪಕ್ಷ ಇರುತ್ತೆ. ಆಮೇಲೆ ಜ್ಯಾತ್ಯಾತೀತ ಜನತಾದಳ ಉಳಿಯಲು ಸಾಧ್ಯವಿಲ್ಲ ಅಂತಾ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಮತ್ತೆ ಹೇಳಿದ್ದಾರೆ.

    ಕೋಲಾರದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಹೆಚ್.ಡಿ. ರೇವಣ್ಣನವರೇ ಟಿಕೆಟ್‍ಗಾಗಿ ಅರ್ಜಿ ಹಾಕಿಕೊಳ್ಳುವ ಪರಿಸ್ಥಿತಿ ಇದೆ. ಇತ್ತೀಚಿಗಿನ ರೇವಣ್ಣ ಮಾತು ಕುಮಾರಸ್ವಾಮಿಯವರನ್ನೇ ಟಾರ್ಗೆಟ್ ಮಾಡಿದಂತಿದೆ ಅಂತ ವ್ಯಂಗ್ಯವಾಡಿದ್ದರು.

    ಜಮೀರ್ ಅಹಮದ್ ಅವರು ರೇವಣಣ ಹಾಗೂ ದೇವೇ ಗೌಡ ಅವರ ವಿರುದ್ಧ ನೀಡಿರುವ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಮೀರ್ ಒಬ್ಬ ದ್ರೋಹಿ ಎಂದು ಫೇಸ್ ಬುಕ್ ಬಳಕೆದಾರರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಕರ್ನಾಟಕ ಮಕ್ಕಳ ಕುಮಾರಣ್ಣ ಪೇಜ್ ನಲ್ಲಿ ಚರ್ಚೆ ನಡೆಯುತ್ತಿದ್ದು, ಚಾಮರಾಜಪೇಟೆ ಬಿಟ್ಟು ಬೇರೆಡೆ ನಿಲ್ಲುವಂತೆ ಜಮೀರ್ ಗೆ ಚಾಲೆಂಜ್ ಹಾಕಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಮೀರ್ ವಿರುದ್ಧದ ಟೀಕೆಗಳು ವೈರಲ್ ಆಗಿವೆ.

    ಕರ್ನಾಟಕಕ್ಕೆ ಕುಮಾರಣ್ಣ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಶಾಂತ ಕುಮಾರ ಶೆಟ್ಟಿ ಬರೆದ ಪೋಸ್ಟ್ ನ ಸಂಪೂರ್ಣ ರೂಪ ಇಲ್ಲಿದೆ ಓದಿ..

    ಚಾಮರಾಜಪೇಟೆ ಕ್ಷೇತ್ರದಲ್ಲಿ ಉಪೇಂದ್ರ ಅಭ್ಯರ್ಥಿ ಎಂದು ಮೀಡಿಯಾಗಳು ಸುದ್ದಿ ಮಾಡಿದ ಮಾತ್ರಕ್ಕೆ ತಡಬಡಾಯಿಸಿ ಮೀಡಿಯಾ ಕರೆಸಿ ಉಪೇಂದ್ರನಿಗೆ ಸಿನಿಮಾ ರಂಗದಲ್ಲಿ ಮಾರ್ಕೇಟ್ ಬಿದ್ದು ಹೋಗಿದೆ.
    ಅದಕ್ಕೆ ರಾಜಕೀಯಕ್ಕೆ ಬಂದಿದ್ದಾನೆ ಎಂದು ಬೆವರುತ್ತಾ ಹೇಳಿಕೆ ನೀಡಿದ್ದ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವ ಈ ಮನುಷ್ಯ ಇವತ್ತು ರೇವಣ್ಣರನ್ನು ಸ್ಪರ್ಧೆಗೆ ಬರಲಿ ಮೀಟರ್ ಇದ್ರೇ ಅಂತಾ ಹೇಳುತ್ತಿದ್ದಾನೆ.

    ಚಾಮರಾಜಪೇಟೆ ಬಿಟ್ಟು ಉಳಿದ 223 ಕ್ಷೇತ್ರದಲ್ಲಿ ಎಲ್ಲಿಯಾದರು ನಿಂತು ಠೇವಣಿ ಪಡೆಯಲಿ ಸಾಕು. ಕಾಂಗ್ರೆಸಿನ ಭದ್ರ ಕೋಟೆಯಾಗಿದ್ದ ಚಾಮರಾಜಪೇಟೆಯಲ್ಲಿ ನಿನ್ನನ್ನು ಗೆಲ್ಲಿಸಲು ಇದೇ ದೇವೇಗೌಡರು ಮನೆ ಮನೆಗೆ ಸುತ್ತಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಆ ಕ್ಷೇತ್ರದ ಮತದಾರರು ಮರೆತಿಲ್ಲಾ ಜಮೀರ್ ಸಾಹೇಬ್ರೇ ಅಲ್ಲಿ ನಿಮ್ಮನ್ನು ಸೋಲಿಸಲು ಕುಮಾರಣ್ಣರಂತ ಹುಲಿ, ರೇವಣ್ಣರಂತಾ ಕಲಿ ಬೇಕಾಗಿಲ್ಲ. ಒಬ್ಬ ಕಾರ್ಪೋರೇಟರ್ ಸಾಕು ನಿನ್ನಂತಾ ನಂಬಿಕೆ ದ್ರೋಹಿ ಗೆ ಬುದ್ದಿ ಕಲಿಸಲು.