Tag: ಪೇಶಾವರ

  • ಪಾಕಿಸ್ತಾನದ ಅಣ್ವಸ್ತ್ರಗಳು ಎಲ್ಲಾ ಮುಸ್ಲಿಮರಿಗೆ ಸೇರಿದ್ದು: ಷರಿಫ್‌ ಅಳಿಯ

    ಪಾಕಿಸ್ತಾನದ ಅಣ್ವಸ್ತ್ರಗಳು ಎಲ್ಲಾ ಮುಸ್ಲಿಮರಿಗೆ ಸೇರಿದ್ದು: ಷರಿಫ್‌ ಅಳಿಯ

    ಇಸ್ಲಾಮಾಬಾದ್: ನಮ್ಮ ಬಳಿ ಇರುವ ಅಣ್ವಸ್ತ್ರಗಳು ವಿಶ್ವದ ಎಲ್ಲಾ ಮುಸ್ಲಿಂ ಸಮುದಾಯಕ್ಕೆ (Musim Community) ಸೇರಿದ್ದು ಎಂದು ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ನವಾಜ್ ಷರೀಫ್‌ (Nawaz Sharif) ಅಳಿಯ ಕ್ಯಾ. ಮೊಹಮ್ಮದ್ ಸಫಾರ್ (Captain Muhammad Safdar) ಹೇಳಿದ್ದಾರೆ.

    ಪೇಶಾವರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಯಾಲೆಸ್ತೀನ್‌ನಲ್ಲಿ (Palestine) ದುರಂತ ನಡೆಯುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ಗಾಜಾದ ಮುಸ್ಲಿಮರಿಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿ ಎಂದು ಜನರಿಗೆ ಕರೆ ನೀಡಿದರು.

     

    ಈ ಸಂದರ್ಭದಲ್ಲಿ ನಮ್ಮ ಅಣ್ವಸ್ತ್ರಗಳು ಕೇವಲ ಪಾಕಿಸ್ತಾನಕ್ಕೆ ಮಾತ್ರ ಅಲ್ಲ. ಅದು ಎಲ್ಲಾ ಮುಸ್ಲಿಮರಿಗೂ ಸೇರಿದ್ದು, ಅದನ್ನು ಯಾರು ಬೇಕಾದರೂ ಬಳಕೆ ಮಾಡಬಹುದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    ನಾವು ತುಳಿತಕ್ಕೊಳಗಾದ ಪ್ಯಾಲೆಸ್ತೀನಿಯರ ಜೊತೆ ಇದ್ದೇವೆ. ನಮ್ಮ ಮೇಲೆ ನಡೆಯುತ್ತಿರುವ ಆಕ್ರಮಣ ತಡೆಯಲು ನಾವು ಜಿಹಾದ್‌ಗೆ ಸಿದ್ಧವಾಗಬೇಕು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಇಸ್ಲಾಮಾಬಾದ್: ಸೋಮವಾರ ಪಾಕಿಸ್ತಾನದ (Pakistan) ಪೇಶಾವರದಲ್ಲಿ (Peshawar) ಮಸೀದಿಯೊಳಗೆ (Mosque) ನಡೆದ ಆತ್ಮಾಹುತಿ ದಾಳಿಗೆ (Suicide Attack) ಇಲ್ಲಿಯವರೆಗೆ 89 ಜನರು ಮೃತಪಟ್ಟಿದ್ದಾರೆ ಹಾಗೂ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೋಮವಾರ ಮಧ್ಯಾಹ್ನ ಪೇಶಾವರದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಆತ್ಮಾಹುತಿ ದಾಳಿ ನಡೆದಿತ್ತು. ಇದರಿಂದ ಮಸೀದಿ ಛಾವಣಿ ಕುಸಿದಿದ್ದು, ಅಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದೆ. ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಇನ್ನು ಕೂಡಾ ಮುಂದುವರಿದಿದೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 89ಕ್ಕೇರಿದೆ.

    ಪ್ರತಿನಿತ್ಯ ಈ ಮಸೀದಿಯಲ್ಲಿ ಸುಮಾರು 300-400 ಜನರು ಪ್ರಾರ್ಥನೆಗಾಗಿ ಸೇರುತ್ತಾರೆ. ಸ್ಫೋಟ ಸಂಭವಿಸಿದ ಸಂದರ್ಭ 300ಕ್ಕೂ ಹೆಚ್ಚು ಜನರು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಅವಶೇಷಗಳಡಿ ಇನ್ನೂ ಹಲವರು ಸಿಕ್ಕಿ ಬಿದ್ದಿರುವ ಶಂಕೆಯಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ತಿದೆ: ಮುರ್ಮು

    ದಾಳಿಯನ್ನು ಭಯೋತ್ಪಾದನಾ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (TTP) ನಡೆಸಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಟಿಟಿಪಿ ವಕ್ತಾರ ಮೊಹಮ್ಮದ್ ಖುರಾಸಾನಿ, ಮಸೀದಿ ಅಥವಾ ಯಾವುದೇ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುವುದು ನಮ್ಮ ನೀತಿಗಳಲ್ಲಿ ಒಳಗೊಂಡಿಲ್ಲ ಎಂದಿದ್ದಾರೆ.

    ಖೈಬರ್ ಪಖ್ತುಂಖ್ವಾದ ಹಂಗಾಮಿ ಮುಖ್ಯಮಂತ್ರಿ ಮುಹಮ್ಮದ್ ಅಜಂ ಖಾನ್ ಅವರು ದಾಳಿಯಿಂದ ಸಾವನ್ನಪ್ಪಿದವರಿಗಾಗಿ ಮಂಗಳವಾರ ರಾಜ್ಯದಲ್ಲಿ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದೂ ದೇವಾಲಯ ಧ್ವಂಸ ಪ್ರಕರಣ – ಮತ್ತೆ 45 ಮಂದಿ ಆರೋಪಿಗಳ ಬಂಧನ

    ಹಿಂದೂ ದೇವಾಲಯ ಧ್ವಂಸ ಪ್ರಕರಣ – ಮತ್ತೆ 45 ಮಂದಿ ಆರೋಪಿಗಳ ಬಂಧನ

    ಪೇಶಾವರ: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 45 ಮಂದಿ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರೆ ಗ್ರಾಮದಲ್ಲಿರುವ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದ, 300ಕ್ಕೂ ಹೆಚ್ಚು ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು.

    ಹಿಂದೂ ದೇವಾಲಯ ನವೀಕರಣವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಬೆಂಬಲಿಗರು ದೇವಾಲಯವನ್ನು ಧ್ವಂಸಗೊಳಿಸಿದ್ದರು. ಹಿಂದೂ ದೇವಾಲಯ ಧ್ವಂಸ ಪ್ರಕರಣ ಹಿನ್ನಲೆಯಲ್ಲಿ ಈ ವರೆಗೆ ಒಟ್ಟು 100 ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಎಂದು ಪಾಕಿಸ್ತಾನಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ಭಾರತೀಯ ರಾಯಭಾರಿ ಕಚೇರಿ ಜನವರಿ 1 ರಂದು ಪ್ರತಿಭಟನೆ ವ್ಯಕ್ತಪಡಿಸಿತ್ತು. ದೇವಾಲಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವ್ಯಾಪಿ ಮಾನವಹಕ್ಕುಗಳ ಕಾರ್ಯಕರ್ತರು, ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಭಾರತ ಸರ್ಕಾರ ಸಹ ಅಧಿಕೃತ ಪ್ರತಿಭಟನೆ ವ್ಯಕ್ತಪಡಿಸಿತ್ತು.

    ಅಧಿಕೃತ ಅಂದಾಜಿನ ಪ್ರಕಾರ 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿದ್ದಾರೆ. ಆದರೆ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ.

  • ಪಾಕ್ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲುಶಿಕ್ಷೆ

    ಪಾಕ್ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲುಶಿಕ್ಷೆ

    ಪೇಶಾವರ: ದೇಶದ್ರೋಹ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರಫ್ ಅವರಿಗೆ ಪೇಶಾವರ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ವಿಧಿಸಿದೆ.

    ಪೇಶಾವರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಶೇಷ ನ್ಯಾಯಮಂಡಳಿಯ ತ್ರಿಸದಸ್ಯ ಪೀಠ 2:1 ಅನುಪಾತದಲ್ಲಿ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದೆ. ಈ ಮೂಲಕ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ನಾವು ತರಬೇತಿ ನೀಡಿದ್ದೇವೆ, ಲಾಡೆನ್ ನಮ್ಮ ಹೀರೋ – ಪರ್ವೇಜ್ ಮುಷರಫ್

    ಸದ್ಯ ದುಬೈನಲ್ಲಿ ನೆಲೆಸಿರುವ ಮುಷರಫ್ 1999 ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಅಧ್ಯಕ್ಷರಾಗಿದ್ದ ಮುಷರಫ್, 2007ರ ನವೆಂಬರ್ 3ರಂದು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸಿದ್ದರು. ನಂತರ ಅಧಿಕಾರಕ್ಕೆ ಏರಿದ ನವಾಜ್ ಷರೀಫ್ ನೇತೃತ್ವದ ಸರ್ಕಾರ, ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ 2013ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2014ರ ಮಾರ್ಚ್ 31ರಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.