Tag: ಪೇರೇಸಂದ್ರ ಪೊಲೀಸ್ ಠಾಣಾ

  • ಪ್ರೇಮ ವೈಫಲ್ಯ ಶಂಕೆ – ಯುವಕನ ಅನುಮಾನಾಸ್ಪದ ಸಾವು

    ಪ್ರೇಮ ವೈಫಲ್ಯ ಶಂಕೆ – ಯುವಕನ ಅನುಮಾನಾಸ್ಪದ ಸಾವು

    ಚಿಕ್ಕಬಳ್ಳಾಪುರ: ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುಕನೊರ್ವನ ಮೃತದೇಹ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿ ಬಳಿ ನಡೆದಿದೆ.

    28 ವರ್ಷದ ರಾಮು ಮೃತ ಯುವಕ. ಮೂಲತಃ ತಮಿಳುನಾಡು ಮೂಲದವನಾದ ಈತ, ಪೇರೇಸಂದ್ರ ಬಳಿಯ ಟಿಎಸ್‍ಕೆ ಕ್ರಷರ್ ನಲ್ಲಿ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇಂದು ಬೆಳಿಗ್ಗೆ ಮಾವಿನ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ರಾಮು ಶವ ಪತ್ತೆಯಾಗಿದೆ. ಈ ಸಂಬಂಧ ಪೇರೇಸಂದ್ರ ಠಾಣೆಯ ಪಿಎಸ್‍ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನದಲ್ಲಿ ಧಿಡೀರ್ ಏರಿಕೆ

    ಮೃತರ ಸಂಬಂಧಿಕರು ಹಾಗೂ ಕುಟುಂಬಸ್ಥರು ಬಂದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗೆ ಕಳುಹಿಸಲು ಪೊಲೀಸರು ಸೂಚಿಸಿದ್ದಾರೆ. ಮೇಲ್ನೋಟಕ್ಕೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ:ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

    ಮತ್ತೊಂದೆಡೆ ಮೃತದೇಹದ ಕಾಲುಗಳು ನೆಲಕ್ಕೆ ಸಾಕಷ್ಟು ತಾಗಿದ್ದು ಇದು ಆತ್ಮಹತ್ಯೆಯಾ ಅಥವಾ ಕೊಲೆ ನಾ ಎಂಬ ಅನುಮಾನ ಮೂಡಿದೆ. ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.