Tag: ಪೇಪರ್

  • ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಲಕ್ನೋ: ಬಾಂದ್ರಾ ಟರ್ಮಿನಸ್ – ಲಕ್ನೋ (Bandra Terminus – Lucknow) ಜಂಕ್ಷನ್ ವೀಕ್ಲಿ ಎಸ್‍ಎಫ್ ಎಕ್ಸ್‌ಪ್ರೆಸ್‍ನಲ್ಲಿ (Junction Weekly SF Express) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಐಆರ್‌ಸಿಟಿಸಿ ಕ್ಯಾಂಟಿನ್‍ನಿಂದ ನೀಡಲಾದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ ಕಂಡುಬಂದಿದೆ.

    ಈ ಸಮೋಸಾ ಫೋಟೋವನ್ನು ಅಜಿತ್ ಕುಮಾರ್ ಎಂಬ ಪ್ರಯಾಣಿಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ ನಾನು ಭಾನುವಾರ ಲಕ್ನೋಗೆ ಪ್ರಯಾಣಿಸುವಾಗ ತಿನ್ನಲು ಒಂದು ಸಮೋಸಾ (Samosa) ಖರೀದಿಸಿದೆ. ಕೆಲವು ಭಾಗಗಳನ್ನು ತಿಂದ ಬಳಿಕ ಕೊನೆಯಲ್ಲಿ ಸಣ್ಣದೊಂದು ಯೆಲ್ಲೋ ಕಲರ್ ಪೇಪರ್ ತುಂಡನ್ನು ನೋಡಿದೆ. ಇದನ್ನು ರೈಲು ಸಂಖ್ಯೆ 20921 ಬಾಂದ್ರಾ-ಲಕ್ನೋ ರೈಲಿನಲ್ಲಿ ಐಆರ್‌ಸಿಟಿಸಿ ಸಿಬ್ಬಂದಿಯಿಂದ ಖರೀದಿಸಿದ್ದೆ. ಶನಿವಾರ ನಾನು ಈ ರೈಲನ್ನು ಹತ್ತಿದ್ದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಸರ್ ನಿಮಗೆ ಈ ರೀತಿ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ದಯವಿಟ್ಟು ಪಿಎನ್‍ಆರ್ ಮತ್ತು ಮೊಬೈಲ್ ಸಂಖ್ಯೆಯನ್ನು ಡಿಎಂನಲ್ಲಿ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

    ಈ ವಿಚಾರವಾಗಿ ಅನೇಕ ಮಂದಿ ಟ್ವೀಟ್ ಮಾಡಿದ್ದು, ಟಿಕೆಟ್ ದೃಢೀಕರಣ ಸೇರಿದಂತೆ ರೈಲ್ವೆ ವ್ಯವಸ್ಥೆಯಲ್ಲಿನ ಎಲ್ಲವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪ್ರಮುಖವಾಗಿ ಎಲ್ಲದ್ದಕ್ಕೂ ಅವರು ಶುಲ್ಕ ವಿಧಿಸುತ್ತಾರೆ. ಇದರಿಂದ ಬಡವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ, ಅಭಿವೃದ್ಧಿಶೀಲ ಭಾರತವು ಹಣವನ್ನು ಕಸಿದುಕೊಳ್ಳುತ್ತಿದೆ ಎಂದು ಕಾಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿ- ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಎರಡು ವರ್ಷದಲ್ಲಿ ಮೂರು ಕೋಟಿ ಪೇಪರ್ ಉಳಿಸಿದ ಸುಪ್ರೀಂ ಕೋರ್ಟ್

    ಎರಡು ವರ್ಷದಲ್ಲಿ ಮೂರು ಕೋಟಿ ಪೇಪರ್ ಉಳಿಸಿದ ಸುಪ್ರೀಂ ಕೋರ್ಟ್

    ನವದೆಹಲಿ: A4 ಸೈಜ್ ಪುಟಗಳಲ್ಲಿ ಡಬಲ್ ಸೈಡ್ ಪ್ರಿಂಟಿಂಗ್‌‌ನಿಂದಾಗಿ ಎರಡು ವರ್ಷದಲ್ಲಿ ಮೂರು ಕೋಟಿ ಪೇಪರ್‌‌ಗಳನ್ನು ಸುಪ್ರೀಂ ಕೋರ್ಟ್ ಉಳಿಸಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರ ಆರಂಭಿಕವಾಗಿ ಫಲ ನೀಡಿದೆ.

    2020ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಹೇಮಂತ್ ಗುಪ್ತಾ ಅವರ ಸಮಿತಿಯು ಪೇಪರ್‌ನಲ್ಲಿ ಸಿಂಗಲ್ ಸೈಡ್ ಪ್ರಿಂಟಿಂಗ್ ಬದಲು A4 ಶೀಟ್‌ನಲ್ಲಿ ಡಬಲ್ ಸೈಡ್ ಪ್ರಿಂಟಿಂಗ್ ಮಾಡಲು ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಪೇಪರ್ ಉಳಿಸುವುದು ಆ ಮೂಲಕ ಮರಗಳ ಸಂರಕ್ಷಣೆಗೆ ಈ ಶಿಫಾರಸು ಮಾಡಲಾಗಿತ್ತು.

    ಪರಿಸರದಲ್ಲಿ ಮರಗಳು ಉಳಿಯಬೇಕು ಮತ್ತು ಆಮ್ಲಜನಕದ ಪ್ರಮಾಣದ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಾದರಿಯಾಗಬೇಕು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಸಮಿತಿ ನೀಡಿದ್ದ ಶಿಫಾರಸು ಅಂಗೀಕರಿಸಿ ಜಾರಿಗೆ ತಂದಿದ್ದರು.

    ನ್ಯಾ. ಭಟ್ ಮತ್ತು ಗುಪ್ತಾ ಸಮಿತಿ ವರದಿಗೆ ಆರಂಭದಲ್ಲಿ ವಿರೋಧ ಕೇಳಿ ಬಂದಿತ್ತು. ಆದರೆ ಏಪ್ರಿಲ್ 1, 2020ರಲ್ಲಿ, ನ್ಯಾಯಾಲಯವು ಫೈಲಿಂಗ್ ಅನ್ನು A4 ಗಾತ್ರದ ಪೇಪರ್‌ಗಳಲ್ಲಿ ಮಾಡಬೇಕೆಂದು ಆದೇಶಿಸಿತು. ಈ ಹಿಂದೆ ಕಾನೂನು ಗಾತ್ರದ ಕಾಗದವು 35.56 cm x 21.59 cm ಅನ್ನು ಹೊಂದಿತ್ತು. ಇದು A4 ಶೀಟ್ ಕಾಗದಕ್ಕಿಂತ ಸರಿಸುಮಾರು 23 ರಷ್ಟು ದೊಡ್ಡದಾಗಿತ್ತು. ಇದನ್ನೂ ಓದಿ: ಟಿವಿ ಚರ್ಚೆಗೆ ಮೋದಿ ಆಹ್ವಾನಿಸಿದ್ದ ಪಾಕ್ ಪ್ರಧಾನಿಗೆ ಖಡಕ್ ಉತ್ತರ ಕೊಟ್ಟ ಶಶಿ ತರೂರ್

    ಕೊಲ್ಕತ್ತಾ, ತ್ರಿಪುರಾ, ಕೇರಳ, ದೆಹಲಿ, ಅಲಹಾಬಾದ್ ಮತ್ತು ಮುಂಬೈ ಹೈಕೋರ್ಟ್‌ಗಳು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ A4 ಸೈಜ್ ಪೇಪರ್ ಅನ್ನು ಬಳಕೆ ಮಾಡುತ್ತಿವೆ. ವಿಸ್ಲ್ ಫಾರ್ ಪಬ್ಲಿಕ್ ಇಂಟರೆಸ್ಟ್ (WHIP) ಎಂಬ ಸಂಘಟನೆಯ ಮೂವರು ಕಾನೂನು ವಿದ್ಯಾರ್ಥಿಗಳು 2019ರ ಅಕ್ಟೋಬರ್‌ನಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರದ ಮೂಲಕ A4 ಸೈಜ್ ಪೇಪರ್ ಅನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಬಳಸುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ತರಕಾರಿ ಸಾಗಿಸುವ ನೆಪದಲ್ಲಿ 65 ಕ್ವಿಂಟಾಲ್ ಅಕ್ರಮ ಅಕ್ಕಿ ಸಾಗಾಟ

  • ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಬೆಳಗಾವಿ: ಶಾಲೆ ಕಲಿತು ದೊಡ್ಡ ಅಧಿಕಾರಿಯಾಗುವ ಗುರಿ, ಆದರೆ ಕಿತ್ತು ತಿನ್ನುವ ಬಡತನ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಯನ್ನು ಕಳೆದುಕೊಂಡ ಬಾಲಕ ಶಾಲೆ ಬಿಟ್ಟು ಹಾಲು, ಪೇಪರ್ ಹಂಚಿ ನಂತರ ಪಿವೂನ್ ಕೆಲಸ ಮಾಡುತ್ತ ಕುಟುಂಬವನ್ನ ಸಲಹುತ್ತಿದ್ದಾನೆ.

    ಈತನ ಹೆಸರು ಆನಂದ ನಾಯಿಕ. ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ನಿವಾಸಿ. ಚಿಕ್ಕ ವಯಸ್ಸಿನಲ್ಲಿಯೆ ತಂದೆ-ತಾಯಿಯನ್ನು ಕಳೆದುಕೊಂಡ ಆನಂದನಿಗೆ ಶಾಲೆ ಕಲಿತು ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಗುರಿಯಿದೆ. ಬೆಳಗಾವಿಯ ಚಿಕ್ಕೂಂಬಿ ಮಠದ ಅನಾಥ ಆಶ್ರಮದಲ್ಲಿ ಇದ್ದು ಎಸ್‍ಎಸ್‍ಎಲ್‍ಸಿ ವರಗೆ ವ್ಯಾಸಂಗ ಮಾಡಿ 70% ಅಂಕ ಪಡೆದಿದ್ದಾನೆ.

    ಆದರೆ ಮನೆಯಲ್ಲಿ ಇಳಿವಯಸ್ಸಿನ ಅಜ್ಜಿ ಜೊತೆಗೆ ಚಿಕ್ಕ ವಯಸ್ಸಿನ ತಂಗಿಯ ದಿನ ಹೊಟ್ಟೆ ತುಂಬಿಸುವ ಜವಾಬ್ದಾರಿ ಆನಂದನ ಮೇಲೆದೆ. ಅಜ್ಜಿ ಹಾಗೂ ತಂಗಿಯ ಹೊಟ್ಟೆ ತುಂಬಿಸಲು ಆನಂದ ಹಾಲು, ಪೇಪರ್ ಹಂಚಿ ಸಂಘ- ಸಂಸ್ಥೆಯೊಂದರಲ್ಲಿ ಪಿವೂನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ಪಿಗ್ಮಿ ಕಲೆಕ್ಷನ್ ಮಾಡಿ ಬಂದ ಆದಾಯದಿಂದ ಮನೆ ನಡೆಸುತ್ತಿದ್ದಾನೆ.

    ಆನಂದ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ಹೊತ್ತು ವ್ಯಾಸಂಗವನ್ನು ತ್ಯಜಿಸಿ ದುಡುಮೆ ಮಾಡುತ್ತಿರುವುದು ವಿಶಾದನಿಯ. ಕಲಿಯುವ ವಯಸ್ಸಿನಲ್ಲಿ ದುಡಿಯುವ ಜವಾಬ್ದಾರಿ ಬಂದಿದ್ದು ತಮ್ಮ ಕ್ಲಾಸ್‍ಮೇಟ್ ಸ್ಥಿತಿಯನ್ನು ಕಂಡು ಅಯ್ಯೋ ಅನ್ನಿಸುತ್ತದೆ ಎಂದು ಗೆಳೆಯ ಶಿವರಾಜ ಹೇಳುತ್ತಾರೆ.

    ತೊಂದರೆಯಲ್ಲಿರುವ ಆನಂದ ನಾಯಿಕ್‍ಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಹಾಯ ಬೇಕಾಗಿದೆ. ಸಹೃದಯ ದಾನಿಗಳು ಸಹಾಯ ಮಾಡಿದ್ದಲ್ಲಿ ವ್ಯಾಸಂಗ ಮುಂದುವರೆಸಿ ಗುರಿ ತಲುಪುವ ಹಂಬಲ ಆನಂದನದು.