Tag: ಪೇಟಿಎಂ

  • ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ನವದೆಹಲಿ: ಪೇಟಿಯಂ ವ್ಯಾಲೆಟ್ (Paytm Wallet) ಸೇವೆಯನ್ನು ತಾನು ಖರೀದಿ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು  ಜಿಯೋ ಫೈನಾನ್ಸ್‌ (Jio Finance) ಅಧಿಕೃತವಾಗಿ ತಿಳಿಸಿದೆ.

    ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ (RBI) ಹಲವು ನಿರ್ಬಂಧ ವಿಧಿಸಿದ ಬಳಿಕ ಪೇಟಿಎಂ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿದೆ. ಈ ಬೆನ್ನಲ್ಲೇ ಮುಕೇಶ್‌ ಅಂಬಾನಿ (Mukesh Ambani) ನೇತೃತ್ವದ ಜಿಯೋ ಫೈನಾನ್ಸ್‌ ಪೇಟಿಯಂ ವ್ಯಾಲೆಟ್ ಸೇವೆಯನ್ನು ಖರೀದಿಸಲಿದೆ ಎಂದು ವರದಿಯಾಗಿತ್ತು.

    ಈ ವರದಿಯ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ (BSE) ಜಿಯೋ ಫೈನಾನ್ಸಿಯಲ್‌ ಸರ್ವಿಸ್‌ ಲಿಮಿಟೆಡ್‌(JFSL) ತಾನು ಪೇಟಿಎಂ ವ್ಯಾಲೆಟ್‌ ಖರೀದಿಸುವುದಿಲ್ಲ ಎಂದು ತಿಳಿಸಿದೆ. ಖರೀದಿ ವಿಚಾರ ಕೇವಲ ಊಹಾತ್ಮಕ ಸುದ್ದಿಯಾಗಿದೆ. ಈ ವಿಷಯದಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದು ತಡರಾತ್ರಿ ಜಿಯೋ ಫೈನಾನ್ಸ್‌ ಫೈಲಿಂಗ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳ ಗಡಿ ದಾಟುತ್ತೆ.. ಬಿಜೆಪಿಗೆ 370 ಸೀಟು ಬರುತ್ತೆ: ಮೋದಿ ಭವಿಷ್ಯ

    ಮಾಧ್ಯಮಗಳಲ್ಲಿ ಖರೀದಿ ವರದಿ ಪ್ರಕಟವಾಗುತ್ತಿದ್ದಂತೆ ಸೋಮವಾರ ಜಿಯೋ ಫೈನಾನ್ಸ್‌ ಷೇರಿನ ಬೆಲೆ 35.30 ರೂ. (13.91%) ಏರಿಕೆಯಾಗಿ 289.05 ರೂ. ತಲುಪಿತ್ತು.

    ವ್ಯಾಲೆಟ್ ಖರೀದಿಗೆ ಸಂಬಂಧಿಸಿದಂತೆ ಪೇಟಿಯಂ ಮಾತೃ ಸಂಸ್ಥೆಯಾದ 97 ಕಮ್ಯುನಿಕೇಶನ್ ಸಂಸ್ಥೆ ಹಾಗೂ ರಿಲಯನ್ಸ್‌ ಮತ್ತು ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

    ವ್ಯಾಲೆಟ್ ಸೇವೆಯನ್ನು ಖರೀದಿ ಮಾಡಲು ಜಿಯೋ ಫೈನಾನ್ಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕಳೆದ ನವೆಂಬರ್‌ನಲ್ಲೇ ಮಾತುಕತೆಗಳು ನಡೆದಿತ್ತು. ಈಗ ಆರ್‌ಬಿಐ ನಿರ್ಬಂಧ ಹೇಳಿದ ನಂತರ ಮಾತುಕತೆ ಮತ್ತೆ ಚುರುಕುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಮೋದಿ ಭರವಸೆ

    ಕಳೆದ 3 ದಿನಗಳಲ್ಲಿ ಪೇಟಿಯಂನ ಮೌಲ್ಯ 42%ರಷ್ಟು ಕುಸಿತ ಕಂಡಿದ್ದು, 20 ಸಾವಿರ ಕೋಟಿ ನಷ್ಟ ಉಂಟುಮಾಡಿದೆ. ಕಳೆದ ಅಕ್ಟೋಬರ್‌ನಲ್ಲಿ ಪೇಟಿಎಂ ಒಂದು ಷೇರಿನ ಬೆಲೆ 998 ರೂ. ಏರಿತ್ತು. ಆದರೆ ಫೆ.5ರ ವೇಳೆ ಒಂದು ಷೇರಿನ ಮೌಲ್ಯ 438.50 ರೂ.ಗೆ ಕುಸಿದಿದೆ.

     

  • ಪೇಟಿಎಂಗೆ ನೋಟಿಸ್ ನೀಡಿದ ಆರ್‌ಬಿಐ

    ಪೇಟಿಎಂಗೆ ನೋಟಿಸ್ ನೀಡಿದ ಆರ್‌ಬಿಐ

    ಬೆಂಗಳೂರು: ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ (Violation of Rules) ಹಿನ್ನೆಲೆ ಪೇಟಿಎಂಗೆ (Paytm) ಆರ್‌ಬಿಐ (RBI) ನೋಟಿಸ್ ನೀಡಿದ್ದು, ಪೇಟಿಎಂ ಹೊಸ ಡೆಪಾಸಿಟ್ ಪಡೆಯುವಂತಿಲ್ಲ ಎಂದು ಸೂಚನೆ ನೀಡಿದೆ.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಖಾತೆ ರಚಿಸಲು ಮತ್ತು ಡೆಪಾಸಿಟ್ ಪಡೆಯುವಂತಿಲ್ಲ. ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೋಟಿಸ್ (Notice) ನೀಡಲಾಗಿದೆ. ಇದನ್ನೂ ಓದಿ: ಆಳವಾದ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ

    ಇನ್ನು ಫೆಬ್ರವರಿ 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವ್ಯಾಲಟ್, ಫಾಸ್ಟ್ಟ್ಯಾಗ್ ಇತ್ಯಾದಿ ಪ್ರೀಪೇಯ್ಡ್ ಯಂತ್ರಗಳಿಗೆ ಟಾಪ್‌ಅಪ್ ಹಾಕಿಸುವಂತಿಲ್ಲ ಎಂದು ಆರ್‌ಬಿಐ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ

  • Paytm ಮುಖ್ಯಸ್ಥರಾಗಿ ವಿಜಯ್ ಶೇಖರ್ ಮರುನೇಮಕ

    Paytm ಮುಖ್ಯಸ್ಥರಾಗಿ ವಿಜಯ್ ಶೇಖರ್ ಮರುನೇಮಕ

    ನವದೆಹಲಿ: ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ವಿಜಯ್ ಶೇಖರ್ ಅವರನ್ನು ಮರುನೇಮಕಗೊಳಿಸಲಾಗಿದೆ. ವಿಜಯ್ ಶೇಖರ್ ಅವರ ಪರವಾಗಿ ಶೇ.99.67 ರಷ್ಟು ಷೇರುದಾರರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.

    ಕಂಪನಿಯ ಶೇರುದಾರರಿಂದ ಬಹುಮತ ಪಡೆದ ವಿಜಯ್ ಶೇಖರ್ ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಮುಂದಿನ 5 ವರ್ಷಗಳಿಗೆ ಮರುನೇಮಕಗೊಂಡಿದ್ದಾರೆ. ಇದನ್ನೂ ಓದಿ: ರಕ್ತದೊತ್ತಡ, ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ – ಸುಧಾಕರ್ ಆತಂಕ

    ಶೇ.100 ಕ್ಕೆ ತುಂಬಾ ಹತ್ತಿರದಲ್ಲಿ ಮತ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿಜಯ್ ಶೇಖರ್, ಇದು ನನ್ನ ನಾಯಕತ್ವದಲ್ಲಿ ಕಂಪನಿಯ ಹೂಡಿಕೆದಾರರು ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕಂಪನಿಯ ಬೆಳವಣಿಗೆ ಹಾಗೂ ಲಾಭದಾಯಕ ಗುರಿಯ ಬಗ್ಗೆ ಅವರು ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    Live Tv
    [brid partner=56869869 player=32851 video=960834 autoplay=true]

  • Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    ನವದೆಹಲಿ: ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹಲವು ಬಳಕೆದಾರರು ದೂರು ನೀಡಿದ್ದಾರೆ. ಅಪ್ಲಿಕೇಶನ್‌ನಲ್ಲಿ ಲಾಗ್‌ಇನ್ ಹಾಗೂ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ವರದಿಯಾಗಿದೆ. ಈ ಸಮಸ್ಯೆಯನ್ನು ಪೇಟಿಎಂ ಕೂಡಾ ಒಪ್ಪಿಕೊಂಡಿದ್ದು, ದೋಷವನ್ನು ಸರಿಪಡಿಸುವುದಾಗಿ ತಿಳಿಸಿದೆ.

    ಪೇಟಿಎಂನ ಸಮಸ್ಯೆ ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈನಂತಹ ಹಲವಾರು ನಗರಗಳಲ್ಲಿ ಬಳಕೆದಾರರು ಎದುರಿಸಿರುವುದಾಗಿ ವರದಿಯಾಗಿದೆ. ದೂರು ನೀಡಿರುವ ಬಳಕೆದಾರರ ಪೈಕಿ ಶೇ.66 ರಷ್ಟು ಜನರು ಲಾಗ್‌ಇನ್ ಸಮಸ್ಯೆಯನ್ನು ಎದುರಿಸಿದ್ದಾರೆ. ಶೇ.5 ರಷ್ಟು ಜನರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಉಳಿದ ಶೇ.29 ರಷ್ಟು ಬಳಕೆದಾರರು ಇತರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್‌ನಲ್ಲಿ ಆದೇಶ

    ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಪೇಟಿಎಂ, ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದಿದೆ. ಪೇಟಿಎಂ ಅಪ್ಲಿಕೇಶನ್‌ನಲ್ಲಿ ಕೆಲವು ಬಳಕೆದಾರರು ಲಾಗ್‌ಇನ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿರಬಹುದು. ನಾವು ಈಗಾಗಲೇ ಈ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಸರಿಪಡಿಸಿದ ತಕ್ಷಣವೇ ಅದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    Live Tv
    [brid partner=56869869 player=32851 video=960834 autoplay=true]

  • ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

    ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

    ಮುಂಬೈ: ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್ ಕಾರ್ಡ್ ಟೀಂ ಇಂಡಿಯಾದ ಶೀರ್ಷಿಕೆ ಪ್ರಾಯೋಜಕ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ.

    ಶೀರ್ಷಿಕೆ ಪ್ರಯೋಜಕವಾಗಿದ್ದ ಪೇಟಿಎಂನ 7 ವರ್ಷಗಳ ಒಪ್ಪಂದ ಕೊನೆಗೊಂಡಿದೆ. ಇದೀಗ ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‍ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ. ಇದನ್ನೂ ಓದಿ: ಇಂದು ಮೂರನೇ ಏಕದಿನ ಪಂದ್ಯ – ಭಾರತದ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ

    7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. 2023ರ ವರೆಗೆ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕತ್ವ ಮಾಡಲಿದೆ ಎಂದು ಮೂಲಗಳು ವರದಿಯಾಗಿದೆ. ಪ್ರಯೋಜಕತ್ವದ ಹಕ್ಕನ್ನು ಮುಂದಿನ 10 ದಿನಗಳಲ್ಲಿ ಪೇಟಿಎಂ, ಮಾಸ್ಟರ್ ಕಾರ್ಡ್‍ಗೆ ವರ್ಗಾಹಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    2019ರ ಆಗಸ್ಟ್‌ನಲ್ಲಿ ಬಿಸಿಸಿಐ ಜೊತೆಗೆ ಪೇಟಿಎಂ ಶೀರ್ಷಿಕೆ ಪ್ರಯೋಜಕತ್ವದ ಹಕ್ಕನ್ನು ಮುಂದಿನ 4 ವರ್ಷಕ್ಕೆ ನವೀಕರಣಗೊಳಿಸಿತ್ತು. ಮುಂದಿನ ನಾಲ್ಕು ವರ್ಷದ ಪ್ರಯೋಜಕತ್ವದ ಹಕ್ಕನ್ನು 3.80 ಕೋಟಿ ರೂ.ಗೆ ಪೇಟಿಎಂ ತನ್ನದಾಗಿಸಿಕೊಂಡಿತ್ತು. ಪೇಟಿಎಂ 2015 ರಿಂದ 2019ರ ವರಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐನಿಂದ 2.4 ಕೋಟಿ ರೂ. ನೀಡಿ ಖರೀದಿತ್ತು. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಭಾರತ ತಂಡ ಹೊಸ ಪ್ರಯೋಜಕತ್ವದೊಂದಿಗೆ ಆಡುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

    ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

    ನವದೆಹಲಿ: ಅತಿ ವೇಗ ಚಾಲನೆ ಪ್ರಕರಣದಲ್ಲಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಅವರನ್ನು ಕಳೆದ ತಿಂಗಳು ದೆಹಲಿ ಪೊಲೀಸರು ಬಂಧಿಸಿ ನಂತರ ಅವರನ್ನು ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದಾರೆ.

     

    ವಿಜಯ್ ಶೇಖರ್ ಶರ್ಮಾ ಅವರು ಜಾಗ್ವಾರ್ ಲ್ಯಾಂಡ್ ರೋವರ್ ಕಾರನ್ನು ಹೊಂದಿದ್ದು, ಕಳೆದ ತಿಂಗಳು ವೇಗವಾಗಿ ಕಾರಿನಲ್ಲಿ ಬಂದು ದಕ್ಷಿಣ ದೆಹಲಿಯ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಫೆಬ್ರವರಿ 22 ರಂದು ಮದರ್ ಇಂಟರ್‍ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ವಿಜಯ್ ಶೇಖರ್ ಶರ್ಮಾ ಅವರ ಲ್ಯಾಂಡ್ ರೋವರ್ ಡಿಕ್ಕಿ ಹೊಡೆದು, ನಂತರ ವಿಜಯ್ ಶೇಖರ್ ಶರ್ಮಾ ಅವರು ಸ್ಥಳದಿಂದ ಪರಾರಿಯಾಗಿದ್ದರು. ಡಿಸಿಪಿ ಅವರ ಕಾರನ್ನು ಓಡಿಸುತ್ತಿದ್ದ ಚಾಲಕ, ಕಾನ್‍ಸ್ಟೇಬಲ್ ದೀಪಕ್ ಕುಮಾರ್ ಅವರು, ಲ್ಯಾಂಡ್ ರೋವರ್ ಕಾರಿನ ನಂಬರ್ ಬರೆದಿಟ್ಟುಕೊಂಡು ಡಿಸಿಪಿಗೆ ಮಾಹಿತಿ ನೀಡಿದ್ದಾರೆ.

    ನಂತರ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಕಾರು ಗುರುಗ್ರಾಮ್‍ನ ಕಂಪನಿಯೊಂದಕ್ಕೆ ನೋಂದಾಯಿಸಲಾಗಿದ್ದು, ಕಾರು ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ವಿಜಯ್ ಶಂಕರ್ ಶರ್ಮಾ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ ವಿಜಯ್ ಶೇಖರ್ ಶರ್ಮಾ ಅವರನ್ನು ಬಂಧಿಸಲಾಗಿತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

  • ಹೊಸ ಗ್ರಾಹಕರನ್ನು ಸೇರಿಸದಂತೆ Paytm ಗೆ ಆರ್‌ಬಿಐ ಸೂಚನೆ

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಶುಕ್ರವಾರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಸೂಚಿಸಿದೆ.

    ವರದಿಗಳ ಪ್ರಕಾರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಸೆಕ್ಷನ್ 35ಎ ಹಾಗೂ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್ 1949 ಅನ್ನು ವಿಧಿಸಿದೆ. ಹೀಗಾಗಿ ಆರ್‌ಬಿಐ ಪೇಟಿಎಂ ಹೊಸ ಗ್ರಾಹಕರನ್ನು ನಿರ್ಬಂಧಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    RBI

    ಪೇಟಿಎಂನಲ್ಲಿ ಸದ್ಯ ಐಟಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಈ ಕ್ರಮ ಮುಗಿದ ಬಳಿಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಪೇಟಿಎಂ ಡಿಸೆಂಬರ್‌ನಲ್ಲಿ ನಿಗದಿತ ಪಾವತಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಆರ್‌ಬಿಐ ಅನುಮೋದನೆಯನ್ನು ಪಡೆದಿತ್ತು. ಹೀಗೆ ತನ್ನ ಹಣಕಾಸು ಸೇವೆಗಳ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿತ್ತು. ಇದೀಗ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ.

  • ಗೂಗಲ್ ಪ್ಲೇ ಸ್ಟೋರ್‌ನಿಂದ ಔಟ್- ಗ್ರಾಹಕರಿಗೆ ಪೇಟಿಎಂ ಸ್ಪಷ್ಟನೆ

    ಗೂಗಲ್ ಪ್ಲೇ ಸ್ಟೋರ್‌ನಿಂದ ಔಟ್- ಗ್ರಾಹಕರಿಗೆ ಪೇಟಿಎಂ ಸ್ಪಷ್ಟನೆ

    ನವದೆಹಲಿ: ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಗಳಿಂದ ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಆ್ಯಪ್ ಹಾಗೂ ಪೇಟಿಎಂ ಗೇಮ್ಸ್ ಅಪ್ಲಿಕೇಶನ್‍ಗಳನ್ನು ತೆಗೆದುಹಾಕಲಾಗಿದೆ. ಗ್ಯಾಂಬ್ಲಿಂಗನ್ನು ಪ್ರೇರೆಪಿಸುವ ಆ್ಯಪ್‍ಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಗೂಗಲ್ ತನ್ನ ಕ್ರಮದ ಕುರಿತು ಸ್ಪಷ್ಟನೆ ನೀಡಿದೆ.

    ಗೂಗಲ್ ತನ್ನ ಬ್ಲಾಗ್‍ನಲ್ಲಿ ‘ಭಾರತದಲ್ಲಿ ಪ್ಲೇ ಸೋರ್ ನ ಜೂಜಾಟದ ನೀತಿಗಳ ಅರ್ಥ ಮಾಡಿಕೊಳ್ಳುವಿಕೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಶುಕ್ರವಾರ ಬರಹವನ್ನು ಪ್ರಕಟಿಸಿದೆ. ಈ ಬರಹದಲ್ಲಿ ಹೊಸ ಮಾರ್ಗದರ್ಶಿ ನಿಯಮಗಳ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ ಗ್ರಾಹಕರಿಗೆ ಸುರಕ್ಷಿತ ಅನುಭವ ಹಾಗೂ ಡೆವಲಪರ್ ಮತ್ತು ಗ್ರಾಹಕರಿಗೆಲ್ಲರಿಗೂ ಒಳಿತಾಗುವ ಜಾಗತಿಕ ನೀತಿಯನ್ನು ನಾವು ಅನುಸರಿಸುತ್ತೇವೆ ಎಂದು ಗೂಗಲ್ ಹೇಳಿದೆ.

    ಗ್ರಾಹಕರಿಗೆ ಸುರಕ್ಷಿತೆಯ ದೃಷ್ಟಿಯಿಂದ ಗೂಗಲ್ ಪ್ಲೇಯನ್ನು ರೂಪಿಸಲಾಗಿದೆ. ಇದೇ ವೇಳೆ ಡೆವಲಪರ್ ಗಳಿಗೆ ಸ್ಥಿರ ವ್ಯವಹಾರವನ್ನು ನಿರ್ಮಿಸಲು ಅಗತ್ಯವಾದ ವೇದಿಕೆಯನ್ನು ನೀಡುತ್ತಿದ್ದೇವೆ. ನಮ್ಮ ಜಾಗತಿಕ ಗೂಗಲ್ ನಿಯಮಗಳು ಯಾವಾಗಲೂ ಈ ಅಂಶಗಳೊಂದಿಗೆ ನಿರೂಪಿಸಲಾಗುತ್ತದೆ. ನಮ್ಮ ಎಲ್ಲಾ ಷೇರುದಾರರ ಒಳ್ಳೆಯದನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್ ಹೇಳಿದೆ.

    ನಮ್ಮ ಜೂಜು ನೀತಿಗೂ ಒಂದೇ ಗುರಿಯನ್ನು ಹೊಂದಿದ್ದು, ನಾವು ಆನ್‍ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್‍ಗಳಿಗೆ ಅನುಕೂಲವಾಗುವ ಯಾವುದೇ ಅಪ್ಲಿಕೇಶನ್‍ಗಳನ್ನು ಬೆಂಬಲಿಸುವುದಿಲ್ಲ. ಯಾವುದೇ ಅಪ್ಲಿಕೇಶನ್ ಗ್ರಾಹಕರನ್ನು ಹಣ ಪಾವತಿಸುವ ಟೂರ್ನಿಗಳಿಗೆ ಕರೆದೊಯ್ಯುತ್ತಿದ್ದರೆ ಇದು ನಮ್ಮ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

    ಪೇಟಿಎಂ ಸ್ಪಷ್ಟನೆ: ಪೇಟಿಎಂ ಆಂಡ್ರಾಯ್ಡ್ ಆ್ಯಪ್ ತಾತ್ಕಾಲಿಕವಾಗಿ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿಲ್ಲ. ಹೊಸದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಹಾಗೂ ಅಪ್‍ಡೇಟ್ ಮಾಡಲು ಇದರಿಂದ ಸಾಧ್ಯವಿಲ್ಲ. ಶೀಘ್ರವೇ ಮತ್ತೆ ಆ್ಯಪ್ ಲಭ್ಯವಾಗಲಿದೆ. ನಿಮ್ಮ ಹಣ ಸುರಕ್ಷಿತವಾಗಿದ್ದು, ಎಂದಿನಂತೆ ವ್ಯವಹಾರವನ್ನು ನಡೆಸಬಹುದು ಎಂದು ಹೇಳಿದೆ.

  • ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ನವದೆಹಲಿ: ಬುಧವಾರ ಒಂದೇ ದಿನ 22 ಕೊರೊನಾ ಕೇಸ್ ಪತ್ತೆಯಾಗಿದ್ದು, ಭಾರತದಲ್ಲಿ ಈಗ 29 ಮಂದಿಗೆ ಕೊರೊನಾ ಬಂದಿದೆ.

    ಹೊಸದಾಗಿ ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

    ಕೊರೊನಾ ಅತಿ ಹೆಚ್ಚು ವ್ಯಾಪಿಸುತ್ತಿರುವ ಇಟಲಿಯಿಂದ ಪೇಟಿಎಂ ಉದ್ಯೋಗಿ ಮರಳಿದ್ದರು. ಇಟಲಿಯ 16 ಮಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಚಾಲಕನಿಗೆ ಸಹ ಈಗ ಕೊರೊನಾ ಬಂದಿದೆ.

    ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದೆ. ಈ ಮೊದಲು ಕೇವಲ 10 ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು.

    ಜರ್ಮನಿಯ ಪ್ರಸಿದ್ಧ ಲುಫ್ಥಾನ್ಸ ಏರ್‍ಲೈನ್ಸ್ ತನ್ನ 750 ವಿಮಾನಗಳ ಪೈಕಿ 125 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಟಲಿಯಲ್ಲಿ 3,089 ಕೊರೊನಾ ಪ್ರಕರಣ ಪತ್ತೆಯಾಗಿದ್ದು 107 ಮಂದಿ ಮೃತಪಟ್ಟಿದ್ದಾರೆ.

  • ಉಂಡ ಮನೆಗೆ ಕನ್ನ : ಪೇಟಿಎಂ ಮುಖ್ಯಸ್ಥನಿಗೆ ಬ್ಲಾಕ್‍ಮೇಲ್‍ಗೈದ ಕಾರ್ಯದರ್ಶಿ ಅರೆಸ್ಟ್

    ಉಂಡ ಮನೆಗೆ ಕನ್ನ : ಪೇಟಿಎಂ ಮುಖ್ಯಸ್ಥನಿಗೆ ಬ್ಲಾಕ್‍ಮೇಲ್‍ಗೈದ ಕಾರ್ಯದರ್ಶಿ ಅರೆಸ್ಟ್

    ನವದೆಹಲಿ: ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಅವರಿಗೆ ಬ್ಲ್ಯಾಕ್‍ಮೇಲ್ ಮಾಡಿ 20 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಶರ್ಮ ಅವರ ಕಾರ್ಯದರ್ಶಿ ಸೋನಿಯಾ ಧವನ್ ತನ್ನ ಸಹೋದ್ಯೋಗಿ ದೇವೇಂದರ್ ಕುಮಾರ್ ಮತ್ತು ಪತಿ ರೂಪಕ್ ಜೈನ್ ಜೊತೆಗೊಡಿ ಈ ಕೃತ್ಯ ಎಸಗಿದ್ದಾಳೆ. ಸೋಮವಾರ ಮಧ್ಯಾಹ್ನ ನೋಯ್ಡಾದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಕೋಲ್ಕತ್ತಾದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

    ಕದ್ದಿದ್ದು ಹೇಗೆ?
    2010ರಲ್ಲಿ ಸ್ಥಾಪನೆಯಾದ ಪೇಟಿಎಂ ಕಂಪನಿಯಲ್ಲಿ ಸೋನಿಯಾ ಆರಂಭದಿಂದಲೂ ಶರ್ಮಾ ಅವರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಸೋನಿಯಾ ವಿಜಯ್ ಅವರ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಳು. ಈ ಸಮಯದಲ್ಲಿ ಆಕೆ ರಹಸ್ಯವಾಗಿ ಗ್ರಾಹಕರ ಮಾಹಿತಿಗಳನ್ನು ಕೋಲ್ಕತ್ತಾದಲ್ಲಿದ್ದ ಸ್ನೇಹಿತ ರೋಹಿತ್ ಚೋಮಲ್ ಕಳುಹಿಸಿದ್ದಳು.

    ಚೋಮಲ್ ಈ ಮಾಹಿತಿಯನ್ನು ಇಟ್ಟು ಕೊಂಡು ಶರ್ಮಾ ಅವರ ಸಹೋದರ ಪೇಟಿಎಂ ಉಪಾಧ್ಯಕ್ಷ ಅಜಯ್ ಶಂಕರ್ ಗೆ ಕರೆ ಮಾಡಿ, ಗ್ರಾಹಕರ ಮಾಹಿತಿ ಸೋರಿಕೆಯಾದರೆ ಕಂಪನಿಗೆ ಭಾರೀ ನಷ್ಟ ಉಂಟಾಗಲಿದೆ. ಹೀಗಾಗಿ 20 ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ.

    ಬ್ಲಾಕ್ ಮೇಲ್ ಮಾಡುತ್ತಿರುವ ವಿಚಾರ ಗೊತ್ತಾಗಿ ಶರ್ಮಾ ಅವರು ಪೊಲೀಸ್ ಠಾಣೆಯಲ್ಲಿ ತನ್ನ ಉದ್ಯೋಗಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಕಳ್ಳತನ, ಸುಲಿಗೆ, ಮೋಸ, ಅಪರಾಧದ ಅಪರಾಧ ಮತ್ತು ಪಿತೂರಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv