Tag: ಪೇಟಾ

  • ತನ್ನ ಬ್ಯೂಟಿ, ಆರೋಗ್ಯದ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

    ತನ್ನ ಬ್ಯೂಟಿ, ಆರೋಗ್ಯದ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

    ಮುಂಬೈ: ಮೂರು ವರ್ಷಗಳಿಂದ ನಾನು ಸಸ್ಯಹಾರಿ ಆಗಿದ್ದೇನೆ. ಇದು ನನ್ನ ಜೀವನದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

    ಅನುಷ್ಕಾ ಪೇಟಾ(ಪೀಪಲ್ ಫಾರ್ ದಿ ಎತಿಕಲ್ ಟ್ರೀಟ್‍ಮೆಂಟ್ ಆಫ್ ಆನಿಮಲ್ಸ್) ಜಾಗೃತಿ ಮೂಡಿಸುತ್ತಿದ್ದಾರೆ. ಈ ಜಾಹೀರಾತಿನಲ್ಲಿ “ನಾನು ಅನುಷ್ಕಾ ಶರ್ಮಾ, ನಾನು ಸಸ್ಯಹಾರಿ” ಎಂದು ಹೇಳಿದ್ದಾರೆ. ಈ ಜಾಹೀರಾತನ್ನು ಮಜೇನ್ ಅಬುಸ್ರಾರ್ ನಿರ್ದೇಶನ ಮಾಡಿದ್ದಾರೆ.

    ನಾನು ಸಸ್ಯಹಾರಿ ಆಗಿರುವುದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ನನಗೆ ಈಗ ಸಾಕಷ್ಟು ಶಕ್ತಿ ಇದೆ. ನಾನು ಈಗ ಆರೋಗ್ಯಕರವಾಗಿದ್ದೇನೆ ಎಂದು ಅನಿಸುತ್ತದೆ. ನನ್ನ ಆಹಾರದಿಂದ ಯಾವುದೇ ಪ್ರಾಣಿಗಳಿಗೆ ತೊಂದರೆಯಾಗುತ್ತಿಲ್ಲ ಎಂಬುದು ನನಗೆ ಖುಷಿ ಇದೆ ಎಂದು ಅನುಷ್ಕಾ ತಿಳಿಸಿದ್ದಾರೆ.

    ಅನುಷ್ಕಾ ಶರ್ಮಾ ಕಳೆದ ಮೂರುವರೆ ವರ್ಷದಿಂದ ಸಸ್ಯಹಾರಿಯಾಗಿದ್ದಾರೆ. 2015ರಲ್ಲಿ ಅನುಷ್ಕಾ ‘ಪೇಟಾ ಇಂಡಿಯಾಸ್ ಹಾಟೆಸ್ಟ್ ಸಸ್ಯಹಾರಿ ಸೆಲೆಬ್ರಿಟಿ ಹಾಗೂ 2017ರಲ್ಲಿ ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

    ಈಗಾಗಲೇ ನಟ ಅಮಿತಾಬ್ ಬಚ್ಚನ್, ಶಾಹಿದ್ ಕಪೂರ್, ಅಲಿಯಾ ಭಟ್, ರಾಜ್‍ಕುಮಾರ್ ರಾವ್, ಸೋನಂ ಕಪೂರ್, ವಿದ್ಯಾ ಬಾಲನ್, ಸನ್ನಿ ಲಿಯೋನ್ ಮಾಂಸವನ್ನು ಬಿಟ್ಟು ಸಸ್ಯಹಾರಿ ಆಗಿದ್ದಾರೆ.

  • ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಹಾಕ್ತೀಯಾ-ಪೇಟಾ ತೊಡಿಸಲು ಬಂದ ಅಭಿಮಾನಿಗೆ ಮಾಜಿ ಸಿಎಂ ಟಾಂಗ್

    ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಹಾಕ್ತೀಯಾ-ಪೇಟಾ ತೊಡಿಸಲು ಬಂದ ಅಭಿಮಾನಿಗೆ ಮಾಜಿ ಸಿಎಂ ಟಾಂಗ್

    ಮೈಸೂರು: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ್ದು, ಪೇಟಾ ತೊಡಿಸಲು ಬಂದ ಅಭಿಮಾನಿಗೆ ಜನರೇ ಟೋಪಿ ಹಾಕಿದ್ರು ನಿನ್ಯಾಕೇ ಹಾಕ್ತಿಯಪ್ಪ ಎಂದು ಸಿದ್ದರಾಮಯ್ಯ ಡೈಲಾಗ್ ಹೊಡೆದಿದ್ದಾರೆ.

    ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಅಭಿಮಾನಿ ಚಂದನ್ ಸಿದ್ದರಾಮಯ್ಯಗೆ ಸನ್ಮಾನ ಮಾಡಲು ಬಂದಿದ್ದಾರೆ. ಆಗ ಶಾಲು ಮತ್ತು ಹಾರ ಹಾಕಿದ್ದು, ಮೈಸೂರು ಪೇಟಾ ತೋಡಿಸಲು ಹೋದಾಗ, ಹೇ ಇದೇಲ್ಲ ಯಾಕಪ್ಪ ಎಂದು ಸಿದ್ದರಾಮಯ್ಯ ಎಂದಿದ್ದಾರೆ. ಆದರೂ ಚಂದನ್ ಪೇಟಾ ತೋಡಿಸುತ್ತಿದ್ದಾಗ “ಜನರೇ ಟೋಪಿ ಹಾಕಿದ್ರು ನೀನ್ಯಾಕೇ ಹಾಕ್ತೀಯಪ್ಪ” ಎಂದು ನಗುತ್ತಲೇ ಮೈಸೂರು ಪೇಟಾ ತೆಗೆದು ಇಟ್ಟು ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡು ಆಪ್ತರೊಂದಿಗೆ ಮಾತನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬುಡಸಮೇತ ಮರ ಕಿತ್ತು ಹಾಕಿದ್ದೀರಾ, ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ- ಕಾರ್ಯಕರ್ತನಿಗೆ ಪರಂ ಪ್ರಶ್ನೆ

    ವಿಧಾನಸಭೆ ಚುನಾವಣೆಯ ಫಲಿತಾಂಶದ ಹಿಂದಿನ ದಿನ ಮೈಸೂರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿನ ಬಳಿಕ ಇತ್ತ ಮುಖ ಮಾಡಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತು ಮುಜುಗರಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ಮೈಸೂರಿಗೆ ಬರಲು ಮುಂದಾಗಿರಲಿಲ್ಲ.

    ಇಂದು ಮೈಸೂರಿನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ತಂಗಲಿದ್ದು, ನಾಳೆ ಬೆಳಗ್ಗೆ ಸುಮಾರು 9.30 ಕ್ಕೆ ಖಾಸಗಿ ಹೋಟೆಲ್ ನಲ್ಲಿ ಮೈಸೂರು – ಚಾಮರಾಜನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. ಗೆದ್ದವರು ಮತ್ತು ಸೋತವರು ಜೊತೆ ಆತ್ಮಾವಲೋಕನ ಮಾಡಲಿದ್ದು, ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಬಗ್ಗೆಯೂ ನಾಳೆಯೇ ಚರ್ಚೆ ನಡೆಯಲಿದೆ.