Tag: ಪೇಂಟ್

  • 30 ಸೆಕೆಂಡ್‍ನಲ್ಲಿ ಗೋಡೆಗೆ ಬಣ್ಣ ಬಳಿಯುವ ವ್ಯಕ್ತಿ – ವೀಡಿಯೋ ವೈರಲ್

    30 ಸೆಕೆಂಡ್‍ನಲ್ಲಿ ಗೋಡೆಗೆ ಬಣ್ಣ ಬಳಿಯುವ ವ್ಯಕ್ತಿ – ವೀಡಿಯೋ ವೈರಲ್

    ಒಂದು ವರ್ಷ ಮನೆಯಲ್ಲಿ ಕಾಲಕಳೆಯುವವರು ತಮ್ಮ ಸುತ್ತಮುತ್ತಲಿನ ಕೆಲಸವನ್ನು ಕಲಿತು ಕೊಂಡಿರುತ್ತಾರೆ. ಇನ್ನೂ ಕೆಲವರು ಆನ್‍ಲೈನ್‍ನಲ್ಲಿ ಮುಳುಗಿ ಕಾಲ ಕಳೆಯುತ್ತಾರೆ.

    ಸಾಮಾನ್ಯವಾಗಿ ನಿಮ್ಮ ಮನೆಯ ಗೋಡೆಗೆ ಬಣ್ಣ ಬಳಿಯಲು ನೀವೇ ಮುಂದಾದರೆ, ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಾ. ಆದರೆ ವ್ಯಕ್ತಿಯೊಬ್ಬ ತನ್ನ ಬಿಡುವಿನ ಸಮಯದಲ್ಲಿ ಮನೆಗೆ ಬಣ್ಣ ಬಳಿಯುವುದನ್ನೇ ತನ್ನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾನೆ.

    ಈ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ ಗೋಡೆಗೆ ಬಣ್ಣ ಬಳಿಯುವ ಚಾತುರ್ಯತೆಯನ್ನು ಹೊಂದಿದ್ದಾನೆ. ಇದೀಗ ಈ ಟಿಕ್‍ಟಾಕ್ ಬಳಕೆದಾರ ಶೇರ್ ಮಾಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ. ಜೊತೆಗೆ ಭೂಮಿ ಮೇಲೆ ಇದೆಲ್ಲಾ ಹೇಗೆ ಸಾಧ್ಯ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾನೆ.

    ವೀಡಿಯೋನಲ್ಲಿರುವ ವ್ಯಕ್ತಿಯು ಹಳದಿ ಗೋಡೆಯ ಪಕ್ಕ ಓಡಾಡುತ್ತಾ, ರೋಲರ್ ಮೂಲಕ ಬಿಳಿ ಬಣ್ಣದ ಪೇಂಟ್ ಬಳಸಿ ಜಿಗ್-ಜಾಗ್ ಸ್ಟೋಕ್ ಮಾಡಿದ್ದಾನೆ. ರೋಲರ್ ಗೋಡೆಯ ತುದಿಯನ್ನು ತಲುಪಿದ ನಂತರ ಉಳಿದ ಹಳದಿ ಬಣ್ಣ ಗೋಡೆಯ ಬಳಿ ಬೇಗನೆ ತಲುಪಿ ಬಿಳಿ ಬಣ್ಣ ಬಳೆಯುತ್ತಾನೆ. ಒಂದು ಮ್ಯಾಗಿ ಬೇಯಿಸುವುದರಷ್ಟರಲ್ಲಿ ಒಂದು ಗೋಡೆಗೆ ಸಂಪೂರ್ಣವಾಗಿ ಬಿಳಿ ಬಣ್ಣವನ್ನು ಬಳೆದಿರುತ್ತಾನೆ.

    ಈತನ ಕೈಚಳಕ್ಕೆ ಮಾರುಹೋಗಿರುವ ನೆಟ್ಟಿಗರು ಇದೀಗ ಈತನನ್ನು ಹುಡುಕಾಡುತ್ತಿದ್ದಾರೆ. ಒಬ್ಬರಂತೂ ನೀವು ಬಂದು ನಮ್ಮ ಮನೆಯ ಗೋಡೆ ಹಾಗೂ ಮೆಟ್ಟಿಲುಗಳಿಗೆ ಬಣ್ಣ ಬಳೆದು ಕೊಡುತ್ತೀರಾ? ನಾನು ನಿಮಗೆ ಒಂದು ಗಂಟೆಗೆ ಎಷ್ಟಾಗುತ್ತದೆ ಅಷ್ಟು ಹಣ ಪಾವತಿಸುತ್ತೇನೆ ಎಂದು ಕಮೆಂಟ್ ಮಾಡಿದ್ದಾನೆ.

    https://youtu.be/UmKzrMNsFPo

  • ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಪುತ್ತೂರು(ಮಂಗಳೂರು): ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳಿದ್ದುದರಿಂದ ನೆಲ, ಗೋಡೆಯ ಅರ್ಧ ಭಾಗಕ್ಕೆ ಸೆಗಣಿ ಸಾರುತ್ತಿದ್ದರು. ಆದ್ರೆ ಇದೀಗ ಸಿಮೆಂಟ್ ಬಿಲ್ಡಿಂಗ್ ಗಳು ತಲೆಯೆತ್ತುತ್ತಿದ್ದು, ಜನರು ಸೆಗಣಿ ಮುಟ್ಟುವ ಗೋಜಿಗೆ ಹೋಗಲ್ಲ. ಆದ್ರೆ ಪುತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಗೋಡೆಗೆ ಸೆಗಣಿ ಪೇಂಟ್ ಮಾಡುವ ಮೂಲಕ ವಿಶಿಷ್ಠ ಯೋಜನೆಗೆ ಕೈ ಹಾಕಿದ್ದಾರೆ.

    ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ. ಶಶಿಶೇಖರ ಭಟ್, `ಗೋ ರಂಗ್’ ಅನ್ನೋ ಯೋಜನೆ ಆರಂಭಿಸಿದ್ದಾರೆ. ನಾಟಿ ಹಸುವಿನ ಸೆಗಣಿಯನ್ನು ಬಳಸಿ ಬಣ್ಣ ತಯಾರಿಸಿ ಮನೆಯ ಗೋಡೆಗೆ ಬಳಿಯುವ ಮೂಲಕ ಯಶಸ್ಸು ಕಂಡಿದ್ದಾರೆ.

    ಐಡಿಯಾ ಬಂದಿದ್ದು ಹೇಗೆ..?
    ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿದ್ದು, ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

    ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೇಂಟ್ ತಯಾರಿಸಲು ಸಾಧ್ಯ. ಈ ಮೂಲಕ ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೇಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.

    ಪೈಂಟ್ ತಯಾರಿಸೋದು ಹೇಗೆ..?
    ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೇಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿದ್ದಾರೆ. ಬಳಿಕ ಮನೆಯ ಎಲ್ಲಾ ಕೋಣೆಗಳಿಗೂ ಬಳಿದಿದ್ದಾರೆ. ಸೆಗಣಿಯ ಈ ಪೇಂಟ್ ಅನ್ನು ಹಲವು ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಶಶಿಶೇಖರ್ ಅವರು ಹಾಕಿಕೊಂಡಿದ್ದಾರೆ.

    ಹಿಂದಿನ ಕಾಲದಲ್ಲೂ ಸೆಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಈ ಆಧುನಿಕ ಯುಗದಲ್ಲಿ ರಾಸಾಯನಿಕ ಮಿಶ್ರಿತ ಪೇಂಟ್ ಗಳನ್ನು ಬಳಸಲು ಆರಂಭವಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮನೆ ಮಂದಿಯ ಆರೋಗ್ಯದ ಮೇಲೆ ಸೆಗಣಿಯ ರೋಗ ನಿರೋಧಕ ಶಕ್ತಿಯ ಪರಿಣಾಮ ಬೀಳಲಿ ಎಂಬುದೇ ಸೆಗಣಿಯ ಪೇಂಟ್ ಮಾಡುವುದರ ಮುಖ್ಯ ಉದ್ದೇಶ ಎಂದು ಡಾ.ಶಶಿಶೇಖರ್ ಭಟ್ ಹೇಳಿದ್ದಾರೆ.

    ಬಳಕೆ ಹೇಗೆ..?
    ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೇಂಟ್ ಗಳಂತೆಯೇ ಸೆಗಣಿಯ ಪೇಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೇಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೇಂಟ್ ಅನ್ನು ಎರಡು ಬಾರಿ ಬಳಿಯಬೇಕಾಗುತ್ತದೆ. ಈ ಪೇಂಟ್ ವಾಟರ್ ಪ್ರೂಫ್ ಕೂಡಾ ಆಗಿದೆ. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಬಣ್ಣದಲ್ಲಿ ಇಲ್ಲದ ಕಾರಣ ಪೇಂಟ್ ಮಾಡುವವರು ಕೂಡ ಇಂತಹ ಪೇಂಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

    ತಾವೇ ಫಸ್ಟ್ ಟ್ರಯಲ್:
    ನಾವು ವಾಸಿಸುವ ಮನೆಯನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದೇನೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮನುಷ್ಯನ ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಇದಲ್ಲದೆ ಉಷ್ಣಾಂಶ ತಡೆಯುವ ಶಕ್ತಿ ಕೂಡ ಈ ಗೋ ರಂಗ್‍ಗೆ ಇದೆ ಎಂದು ಡಾ. ಶಶಿಶೇಖರ ಭಟ್ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ಕಲಬುರಗಿ: ಮನೆಗೆ ಹಚ್ಚುವ ಪೇಂಟ್‍ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಅನ್ನು ಕುಡಿಯುವ ನೀರೆಂದು ತಿಳಿದು ಬಾಲಕಿಯೋರ್ವಳು ಕುಡಿದು ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಬಾಲಕಿ ಸೌಮ್ಯ ಅಸ್ವಸ್ಥಗೊಂಡು ಕಲಬುರಗಿಯ ಬಸವೇಶ್ಬರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಬಾಲಕಿ ತಂದೆ ರೇವಣಸಿದ್ದಪ್ಪರು ಮನೆಗೆ ಪೇಂಟಿಂಗ್ ಮಾಡಿಸಲು ನಗರಕ್ಕೆ ಬಂದು ಪೇಂಟ್, ಪೆಂಟ್ ಬ್ರಷ್, ಥಿನ್ನರ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಮನೆಗೆ ತಂದಿದ್ದಾರೆ.

    ಈ ವೇಳೆ ಮಗಳು ಸೌಮ್ಯ ಅಪ್ಪನ ಬಳಿ ಬಂದು ನನಗೇ ಏನು ತಿನ್ನಲು ತಂದಿದಿಯಾ ಅಂತಾ ಕೇಳಿದ್ದಾಳೆ. ಆಗ ಅಪ್ಪ ಮಗಳನ್ನ ನಾ ಏನೂ ತಂದಿಲ್ಲ ಅಂತಾ ಹೇಳಿ ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕಿಯು ಅಪ್ಪ ತಂದಿಟ್ಟಿದ್ದ ಬ್ಯಾಗ್ ತೆರೆದು ನೋಡಿದ್ದಾಳೆ. ಬ್ಯಾಗ್‍ನಲ್ಲಿದ್ದ ಥಿನ್ನರ್ ಬಾಟಲನ್ನು ಕುಡಿಯುವ ನೀರಿನ ಬಾಟಲ್ ಅಂತಾ ತಿಳಿದು ಗಳಗಳನೆ ಕುಡಿದಿದ್ದಾಳೆ.

    ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿದೆ. ಸದ್ಯ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.