Tag: `ಪೆಳ್ಳಿ ಸಂದಡಿ’

  • ಪ್ರಿನ್ಸ್‌ ಮಹೇಶ್‌ ಬಾಬುಗೆ ʻಭರಾಟೆʼ ಬ್ಯೂಟಿ ಜೋಡಿ

    ಪ್ರಿನ್ಸ್‌ ಮಹೇಶ್‌ ಬಾಬುಗೆ ʻಭರಾಟೆʼ ಬ್ಯೂಟಿ ಜೋಡಿ

    ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು `ಸರ್ಕಾರು ವಾರಿ ಪಾಟ’ ಚಿತ್ರ ರಿಲೀಸ್‌ಗೆ ರೆಡಿಯಿದೆ. ಅದರ ಬೆನ್ನಲ್ಲೇ ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ ಭರಾಟೆ ಬ್ಯೂಟಿ ಶ್ರೀಲೀಲಾ ತೆರೆಹಂಚಿಕೊಳ್ತಿದ್ದಾರೆ.

    ಮಹೇಶ್ ಬಾಬು ಬಹುನಿರೀಕ್ಷಿತ `ಸರ್ಕಾರು ವಾರಿ ಪಾಟ’ ಇದೇ ಮೇ 12ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಒಂದಿಷ್ಟು ಚಿತ್ರಗಳು ಮಹೇಶ್ ಬಾಬು ಅವರ ಲಿಸ್ಟ್‌ನಲ್ಲಿದೆ. ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಹೊಸ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ಈ ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ ಸ್ಪೆಷಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

    `ಕಿಸ್’, ಭರಾಟೆ, `ಬೈ ಟು ಲವ್’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ನಟಿ ಶ್ರೀಲೀಲಾ ಬಳಿಕ `ಪೆಳ್ಳಿಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ತೆಲುಗು ನಟ ನಿತಿನ್ ಜತೆ ಮತ್ತು ಸೂಪರ್‌ ಸ್ಟಾರ್‌ ರವಿತೇಜಾ ನಟನೆಯ `ಧಮಾಕಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವಾಗಲೇ ಮಹೇಶ್ ಬಾಬು ಚಿತ್ರಕ್ಕೆ ಶ್ರೀಲೀಲಾಗೆ ಬುಲಾವ್ ಬಂದಿದೆ. ಇದನ್ನೂ ಓದಿ: ಪೂಜಾ ಹೆಗ್ಡೆಗೆ ಬೆನ್ನಬಿಡದ ಸೋಲು: ಸತತ ಮೂರು ಸಿನಿಮಾಗಳು ಫ್ಲಾಪ್

    ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆಗೆ ಪವರ್‌ಫುಲ್ ಪಾತ್ರದ ಮೂಲಕ ಕನ್ನಡತಿ ಶ್ರೀಲೀಲಾ ಸಾಥ್ ಕೊಡೋದು ಫಕ್ಕಾ ಅಂತಾ ಟಿಟೌನ್‌ನಲ್ಲಿ ಸುದ್ದಿ ಸದ್ದು ಮಾಡ್ತಿದೆ. ಒಟ್ನಲ್ಲಿ ಕನ್ನಡದ ನಟಿಗೆ ಪರಭಾಷೆ ಚಿತ್ರಗಳಲ್ಲಿ ಹೈಪ್ ಕ್ರಿಯೇಟ್ ಆಗಿರೋದು ಸಹಜವಾಗಿ ಶ್ರೀಲೀಲಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ನೆಚ್ಚಿನ ನಟಿಯ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್

    ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್

    ನ್ನಡ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡ್ತಿದ್ದಾರೆ ಕನ್ನಡದ ಬೆಡಗಿಯರು. ಅವರ ಸಾಲಿಗೆ ಈಗಾಗಲೇ ಭರಾಟೆ ಬೆಡಗಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದ ಇವರು, ಕೆಲವೇ ಸಮಯದಲ್ಲೇ ಬೇರೆ ಸಿನಿಮಾ ರಂಗ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.

    ಸಾಮಾನ್ಯವಾಗಿ ಕನ್ನಡದಲ್ಲಿ ಅವಕಾಶ ಕಡಿಮೆಯಾದಾಗ ಬೇರೆ ಸಿನಿಮಾ ರಂಗದ ಕಡೆ ಮುಖ ಮಾಡಿದಿದ್ದೆ. ಆದರೆ, ಸ್ಯಾಂಡಲ್‌ವುಡ್‌ನಲ್ಲೇ ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ತೆಲುಗು ಚಿತ್ರಗಳಿಂದಲೂ ನಟಿ ಶ್ರೀಲೀಲಾಗೆ ಬುಲಾವ್ ಬರುತ್ತಿದೆ. ತೆಲುಗಿನ `ಪೆಳ್ಳಿ ಸಂದಡಿ’ ಚಿತ್ರದ ನಂತರ ಟಾಲಿವುಡ್ ನಟ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

    ತೆಲುಗಿನ ಟ್ಯಾಲೆಂಟೆಡ್ ಆಕ್ಟರ್ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ವಕ್ಕಂತA ವಂಶಿ ನಿರ್ದೇಶನದ ಚಿತ್ರದಲ್ಲಿ ನಿತಿನ್‌ಗೆ ಭರಾಟೆ ಕ್ವೀನ್ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ನಿತಿನ್ ಲವರ್‌ಬಾಯ್ ಲುಕ್ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರೀಲೀಲಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರಂತೆ. ಇದನ್ನು ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

    ನಟ ನಿತಿನ್ ಅವರ ಹೋಮ್ ಪ್ರೊಡಕ್ಷನ್ `ಶ್ರೇಷ್ಠ ಮೂವೀಸ್’ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು. ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ನೆರೆವೇರಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. `ಪೆಳ್ಳಿ ಸಂದಡಿ’ ಚಿತ್ರದ ನಂತರ ಸ್ಟಾರ್ ನಟ ರವಿ ತೇಜಾ, ನಿತಿನ್ ಜೊತೆ ನಟಿಸ್ತಿರೋ ಶ್ರೀಲೀಲಾ, ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.