Tag: ಪೆನ್

  • ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ

    ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಮಪತ್ರ ಸಲ್ಲಿಸುವಾಗ ಸಹಿ ಮಾಡಲು ಬಳಸುವ ಪೆನ್ನಿನ (Pen) ವಿಶೇಷತೆ ಹಾಗೂ ಅದನ್ನು ಯಾರು ನೀಡಿದ್ದಾರೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

    ಹೌದು. ಗುಜರಾತ್‍ನ (Gujarat) ಅಹಮದಾಬಾದ್‍ನಲ್ಲಿ ನಡೆದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ (Pramukh Swami Maharaj Shatabdi Mahotsav) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸ್ವಾಮಿ ಮಹಾರಾಜ್ ಅವರೊಂಗಿನ ಕೆಲವು ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ತಾವು ಚುನಾವಣೆಯಲ್ಲಿ ಸಹಿ ಹಾಕುತ್ತಿರುವ ಪೆನ್‍ನ್ನು ನೀಡಿದವರು ಅವರೇ ಎಂದು ತಿಳಿಸಿದ್ದಾರೆ.

    ಸ್ವಾಮಿ ಮಹಾರಾಜ್ ಅವರನ್ನು ಸ್ಮರಿಸುತ್ತಾ ಮಾತನಾಡಿದ ಅವರು, 2002ರ ಚುನಾವಣೆಯಲ್ಲಿ ರಾಜ್‍ಕೋಟ್‍ನಿಂದ ಸ್ಪರ್ಧಿಸಿದ್ದೆ. ಆ ಸಂದರ್ಭದಲ್ಲಿ ನನಗೆ ಇಬ್ಬರು ಸಂತರು ಪೆನ್ನುಗಳನ್ನು ನೀಡಿದ್ದರು. ಆ ಪೆನ್ನಿನ ಜೊತೆಗೆ ಒಂದು ಕಾಗದವು ಇತ್ತು. ಆ ಕಾಗದದಲ್ಲಿ ಸ್ವಾಮಿ ಮಹಾರಾಜ್ ಅವರು ಈ ಪೆನ್ನನ್ನು ನೀಡಿರುವುದಾಗಿ ಬರೆದಿತ್ತು. ಅಷ್ಟೇ ಅಲ್ಲದೇ ನಾಮಪತ್ರ ಸಲ್ಲಿಸುವಾಗ ಈ ಪೆನ್‍ನಿಂದಲೇ ಸಹಿ ಮಾಡಿ ಎಂದು ಬರೆದಿತ್ತು ಎಂದು ನೆನಪಿಸಿಕೊಂಡರು.

    ಅದಾದ ಬಳಿಕ ರಾಜ್‍ಕೋಟ್‍ನಲ್ಲಿ ನಾಮಪತ್ರ ಸಲ್ಲಿಸುವಾಗ ಅದೇ ಪೆನ್‍ನ್ನು ಬಳಸಿದ್ದೆ. ಆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೆ. ಅಂದಿನಿಂದ ಇಲ್ಲಿಯವರೆಗೆ ಸಹಿ ಮಾಡುವಾಗ ಅದೇ ಪೆನ್‍ಬಳಸುತ್ತಿದ್ದೇನೆ ಎಂದು ತಾವು ಬಳಸುವ ಪೆನ್ನಿನ ಕುರಿತು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ

    2002ರಲ್ಲಿ ಗುಜರಾತ್‍ನ ರಾಜ್‍ಕೋಟ್‍ನಿಂದ ಗೆದ್ದು ವಿಧಾನ ಸಭೆಯನ್ನು ಪ್ರವೇಶಿಸಿದರು. ಅದಾದ ಬಳಿಕ 2014ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಪ್ರಧಾನಿ ಆದರು. 2ನೇ ಬಾರಿಗೆ 2019ರಲ್ಲಿಯೂ ವಾರಣಾಸಿಯಿಂದ ಗೆಲುವು ಸಾಧಿಸಿ 2ನೇ ಬಾರಿಗೆ ಪ್ರಧಾನಮಂತ್ರಿ ಆಗಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌

    Live Tv
    [brid partner=56869869 player=32851 video=960834 autoplay=true]

  • ಪೆನ್‍ಗಾಗಿ ಗೆಳತಿಯನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ ಬಾಲಕಿ

    ಪೆನ್‍ಗಾಗಿ ಗೆಳತಿಯನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ ಬಾಲಕಿ

    ಜೈಪುರ: ಪೆನ್ ವಾಪಸ್ ಕೊಡು ಎಂದು ಮನೆಗೆ ಬಂದ ಗೆಳತಿಯನ್ನೇ 10 ವರ್ಷದ ಬಾಲಕಿಯೊಬ್ಬಳು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಘಟನೆ ರಾಜಸ್ಥಾನದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಶನಿವಾರ ಜೈಪುರದಲ್ಲಿ 12 ವರ್ಷದ ಬಾಲಕಿ ತನ್ನ ಕ್ಲಾಸ್‍ಮೇಟ್ ಮನೆಗೆ ಹೋಗಿದ್ದಳು. ಈ ವೇಳೆ ಬಾಲಕಿ ಮನೆಯಲ್ಲಿ ಆಕೆಯ ಪೋಷಕರು ಇರಲಿಲ್ಲ. ಆಗ ಶಾಲೆಯಲ್ಲಿ ತನ್ನ ಬಳಿ ಕಸಿದುಕೊಂಡಿದ್ದ ಪೆನ್ನನ್ನು ವಾಪಸ್ ಕೊಡು ಎಂದು ಸಂತ್ರಸ್ತೆ ಕೇಳಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಬಾಲಕಿ ಕಬ್ಬಿಣದ ರಾಡ್‍ನಿಂದ ಗೆಳತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಳು. ಪರಿಣಾಮ ಸಂತ್ರಸ್ತೆ ಪಕ್ಕೆಲುಬು, ಹೊಟ್ಟೆ ಹಾಗೂ ತಲೆಗೆ ಗಂಭೀರ ಗಾಯವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

    ಮನೆಗೆ ಬಂದ ತಾಯಿಗೆ ನಡೆದ ಘಟನೆ ಬಗ್ಗೆ ಬಾಲಕಿ ವಿವರಿಸಿದಳು. ಆಗ ಬೇರೆ ದಾರಿ ತೋಚದೆ ಮಗಳನ್ನು ಕಾಪಾಡಲು ಸಂತ್ರಸ್ತೆ ಮೃತದೇಹಕ್ಕೆ ಕಲ್ಲನ್ನು ಕಟ್ಟಿ ತಾಯಿ ಕೊಳವೊಂದರಲ್ಲಿ ಎಸೆದು ಬಂದಿದ್ದಳು. ಬಳಿಕ ಪತಿ ಮನೆಗೆ ಬಂದ ಮೇಲೆ ಮಗಳ ಕೃತ್ಯದ ಬಗ್ಗೆ ತಾಯಿ ತಿಳಿಸಿದಳು. ಆಗ ತಂದೆ ಕೊಳದಲ್ಲಿದ್ದ ಮೃತದೇಹವನ್ನು ಹೊರತೆಗೆದು ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದು ಸಾಕ್ಷ್ಯಗಳನ್ನು ನಾಶ ಮಾಡಿದ್ದನು.

    ಇತ್ತ ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲ ಎಂದು ಸಂತ್ರಸ್ತೆ ಪೋಷಕರು ಹುಡುಕಾಟ ನಡೆಸಿದರು. ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ಹೆತ್ತವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದಾಗ ಗುರುವಾರ ಸಂತ್ರಸ್ತ ಬಾಲಕಿ ಮೃತದೇಹ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

    ಈ ಸಂಬಂಧ ತನಿಖೆ ನಡೆಸಿದಾಗ ಸಂತ್ರಸ್ತೆಯನ್ನು ಕೊಲೆ ಮಾಡಿರುವ ವಿಚಾರ ತಿಳಿದುಬಂದಿದ್ದು, ಆಕೆಯ ಕ್ಲಾಸ್‍ಮೇಟ್ ಬಾಲಕಿಯೇ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿ ಬಾಲಕಿ ಹಾಗೂ ಕೃತ್ಯದ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಆಕೆಯ ಹೆತ್ತವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಸಿಎಂ ಬಳಿಯಿದೆ ಆತಂಕ ನಿವಾರಿಸುವ ಮಂತ್ರದಂಡದ ಪೆನ್

    ಸಿಎಂ ಬಳಿಯಿದೆ ಆತಂಕ ನಿವಾರಿಸುವ ಮಂತ್ರದಂಡದ ಪೆನ್

    ಬೆಂಗಳೂರು: ಶತಾಯ ಗತಾಯ ಸರ್ಕಾರ ರಚಿಸಲೇಬೇಕು ಸಿಎಂ ಆಗಲೇಬೇಕು ಎಂದು ಹಠಕ್ಕೆ ಬಿದ್ದು ಸರ್ಕಾರ ರಚಿಸಿದ ಬಿ.ಎಸ್ ಯಡಿಯೂರಪ್ಪನವರನ್ನು ಒಂದು ಶಕ್ತಿ ಕಾಯುತ್ತಿದೆಯಂತೆ. ಹಾಗಿದ್ರೆ ಆ ಒಂದು ಶಕ್ತಿ ಅವರ ಬಳಿ ಇರುವವರೆಗೂ ಬಿಎಸ್‍ವೈ ಅವರನ್ನ ಅಧಿಕಾರದಿಂದ ಇಳಿಸಲು ಸಾಧ್ಯವೇ ಇಲ್ವ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಹೌದು. ಸಿಎಂ ಯಡಿಯೂರಪ್ಪನವರ ಮಹಾನ್ ಶಕ್ತಿಯ ರಹಸ್ಯ ಅಡಗಿರುವುದು ಒಂದು ಪೆನ್ನಿನಲ್ಲಿ. ಸಿಎಂ ಅವರು ಸದಾ ತಮ್ಮ ಜೇಬಿನಲ್ಲಿ ಕಪ್ಪು ಬಣ್ಣದ ಪೆನ್ನೊಂದನ್ನು ಇಟ್ಟುಕೊಳ್ಳುತ್ತಿದ್ದಾರೆ. ಆ ಪೆನ್ನನ್ನು ಕೊಟ್ಟಿದ್ದು ಗೌರಿಗದ್ದೆಯ ದತ್ತಾತ್ರೆಯ ಆಶ್ರಮದ ವಿನಯ್ ಗುರೂಜಿ. ಯಡಿಯೂರಪ್ಪ ಜುಲೈ 26 ರಂದೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಮೊದಲೇ ಭವಿಷ್ಯ ನುಡಿದಿದ್ದ ಗುರೂಜಿ, ಪೆನ್ ಒಂದನ್ನ ಯಡಿಯೂರಪ್ಪನವರಿಗೆ ಗಿಫ್ಟ್ ಆಗಿ ಕಳುಹಿಸಿಕೊಟ್ಟಿದ್ದರು. ಅದೇ ಪೆನ್ನನ್ನು ಪ್ರಮಾಣ ವಚನ ಸ್ವೀಕರಿಸುವಾಗ ಬಳಸಿ ಎಂದು ಸಲಹೆ ಕೂಡ ನೀಡಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ರಾಜಭವನದ ಅಧಿಕಾರಿ ಕೊಟ್ಟ ಪೆನ್ನನ್ನು ನಿರಾಕರಿಸಿ ಗುರೂಜಿ ಕೊಟ್ಟ ಪೆನ್ನಿನಲ್ಲೇ ಸಹಿ ಮಾಡಿದ್ದರು. ಈಗಲೂ ಪ್ರತಿ ಫೈಲಿಗೆ ಸಹಿ ಹಾಕುವಾಗಲು ಗುರೂಜಿ ಕೊಟ್ಟ ಪೆನ್ನನ್ನೇ ಬಳಸುತ್ತಿದ್ದಾರೆ. ಅಲ್ಲದೆ ಸಿಎಂ ಯಡಿಯೂರಪ್ಪ ಸದಾ ಆ ಪೆನ್ನನ್ನು ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ರಚಿಸುವಾಗಲೂ ಸಾಕಷ್ಟು ಅಗ್ನಿ ಪರೀಕ್ಷೆ ಎದುರಿಸಿದ ಸಿಎಂ ಬಿಎಸ್‍ವೈ, ಸಂಪುಟ ರಚನೆಯ ವೇಳೆಯೂ ಸಾಕಷ್ಟು ಕಸರತ್ತು ನಡೆಸಿ ಅಡ್ಡಿ ಆತಂಕಗಳನ್ನು ಎದುರಿಸಿದ್ದರು.

    ಪ್ರಮಾಣ ವಚನ ಸ್ವೀಕರಿಸಿ ಮೊದಲ ಸಹಿ ಹಾಕುವಲ್ಲಿಂದ ಸದಾ ಆ ಪೆನ್ನನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಿ ಶುಭವಾಗುತ್ತದೆ ಎಂದು ಗುರೂಜಿ ಹೇಳಿದ್ದಾರಂತೆ. ಆ ಪೆನ್ನು ತಮಗೆ ಎದುರಾಗುವ ಎಲ್ಲಾ ಅಡ್ಡಿ ಆತಂಕವನ್ನ ನಿವಾರಿಸುವ ಮಂತ್ರ ದಂಡ ಎಂಬುದು ಸಿಎಂ ಯಡಿಯೂರಪ್ಪನವರ ನಂಬಿಕೆಯಾಗಿದೆ. ಆದ್ದರಿಂದ ಎಲ್ಲಾ ಕೆಲಸಕ್ಕೂ ಅದೇ ಪೆನ್ನು ಬಳಸುವ ಮೂಲಕ ಸಿಎಂ ಯಡಿಯೂರಪ್ಪ ತಮ್ಮ ಅದೃಷ್ಟದ ಮಂತ್ರ ದಂಡ ಆ ಪೆನ್ನು ಅನ್ನೋ ನಂಬಿಕೆ ಇಟ್ಟುಕೊಂಡು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳತೊಡಗಿದ್ದಾರೆ ಎನ್ನಲಾಗಿದೆ.

  • ಅಪಘಾತದ ವೇಳೆ ಬಿದ್ದ ರಭಸಕ್ಕೆ ಗಲ್ಲಕ್ಕೆ ಚುಚ್ಚಿಕೊಳ್ತು ಜೇಬಲ್ಲಿದ್ದ ಪೆನ್ನು!

    ಅಪಘಾತದ ವೇಳೆ ಬಿದ್ದ ರಭಸಕ್ಕೆ ಗಲ್ಲಕ್ಕೆ ಚುಚ್ಚಿಕೊಳ್ತು ಜೇಬಲ್ಲಿದ್ದ ಪೆನ್ನು!

    ಕಲಬುರಗಿ: ಜೇಬಿನಲ್ಲಿರುವ ಪೆನ್ನು ಅಪಘಾತದ ನಂತರ ಗಲ್ಲಕ್ಕೆ ಚುಚ್ಚಿದ ವಿಚಿತ್ರ ಘಟನೆ ಕಲಬುರಗಿ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ನಡೆದಿದೆ.

    ಪೇದೆಯಾದ ಗುಲಾಬ್ಸಾಬ್ ಎಂಬ ಕರ್ತವ್ಯ ನಿರ್ವಹಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಪಾಲಿಕೆ ಮುಂಭಾಗದಲ್ಲಿ ಬರುತ್ತಿದ್ದಂತೆ ಬೈಕ್ ಸ್ಕೀಡ್ ಆಗಿ ಬಿದ್ದಿದೆ. ಅಷ್ಟರಲ್ಲೇ ಅವರ ಸಹಾಯಕ್ಕೆ ಜನ ಧಾವಿಸಿದ್ದಾರೆ.

    ವಿಚಿತ್ರ ಎಂಬತೆ ಜೇಬಿನಲ್ಲಿನ ಪೆನ್ನು ಗಲ್ಲದ ಅರ್ಧದಷ್ಟು ಒಳಗೆ ಹೋಗಿರುವುದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳಕಾಗಮಿಸಿದ ಬೈಕ್ ಅಂಬುಲೆನ್ಸ್ ನ ಸಿಬ್ಬಂದಿ ಪ್ರಥಮ ಹಂತದ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  • ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಶ್ರೀನಗರ: ಬರೆಯುತ್ತಿದ್ದಂತೆಯೇ ಪದಗಳನ್ನು ಲೆಕ್ಕ ಹಾಕುವಂತಹ ಅಪರೂಪದ ಪೆನ್ ಒಂದನ್ನು 9 ವರ್ಷದ ಬಾಲಕನೊಬ್ಬ ಕಂಡುಹುಡುಕಿದ್ದಾನೆ.

    ಉತ್ತರ ಕಾಶ್ಮೀರದ ಗುರೇಜ್ ವ್ಯಾಲಿಯ ಪ್ರೊಡಿಗಿ ನಿವಾಸಿ ಮೂರನೇ ತರಗತಿಯಲ್ಲಿ ಓದುತ್ತಿರುವ ಮುಜಾಫರ್ ಅಹಮ್ಮದ್ ಖಾನ್ “ಕೌಂಟಿಂಗ್ ಪೆನ್” ಕಂಡುಹಿಡಿದಿದ್ದಾನೆ.

    ಈ ಪೆನ್ ನ ಹಿಂಭಾಗದಲ್ಲಿ ಕವಚವೊಂದಿದೆ. ಅಲ್ಲದೇ ಸಣ್ಣದಾದ ಎಲ್‍ಸಿಡಿ ಮಾನಿಟರ್ ನ್ನು ಕೂಡ ಪೆನ್ ಗೆ ಅಳವಡಿಸಲಾಗಿದೆ. ಹೀಗಾಗಿ ನಾವು ಬರೆಯುತ್ತಿದ್ದಂತೆಯೇ ಅದು ಅಕ್ಷರಗಳನ್ನು ಲೆಕ್ಕ ಮಾಡುತ್ತದೆ. ಅಲ್ಲದೇ ಇದರ ಇನ್ನೊಂದು ವಿಶೇಷತೆ ಏನೆಂದರೆ ನೀವು ಎಷ್ಟು ಅಕ್ಷರಗಳನ್ನು ಬರೆದಿದ್ದೀರಿ ಅನ್ನೋ ಮೆಸೇಜ್ ನಿಮ್ಮ ಮೊಬೈಲ್ ಗೂ ಬರುತ್ತದೆ ಅಂತ ಬಾಲಕ ತಿಳಿಸಿದ್ದಾನೆ.

    ಪೆನ್ ಕಂಡುಹಿಡಿದಿದ್ದು ಯಾಕೆ?
    ಕಳೆದ ಬಾರಿ ಪರೀಕ್ಷೆಯನ್ನು ನಾನು ಕಡಿಮೆ ಪದಗಳನ್ನು ಬರೆದಿದ್ದರಿಂದ ನನಗೆ ಕಡಿಮೆ ಅಂಕಗಳು ಬಂದಿತ್ತು. ಇದರಿಂದ ನಾವು ಯೋಚನೆ ಮಾಡಲು ಆರಂಭಿಸಿದೆ. ಆ ಕ್ಷಣದಿಂದಲೇ ನನ್ನ ಸಮಯ ಉಳಿಸಿಕೊಳ್ಳಲು ಏನಾದ್ರೂ ಕಂಡುಹಿಡಿಯಬೇಕು ಅನ್ನೋದನ್ನು ಚಿಂತಿಸಿದೆ. ಹೀಗಾಗಿ ಕೊನೆಗೆ ಕೌಂಟಿಂಗ್ ಪೆನ್ ಕಂಡುಹಿಡಿದೆ ಅಂತ ಬಾಲಕ ವಿವರಿಸಿದ್ದಾನೆ.

    ರಾಷ್ಟ್ರಪತಿ ಮೆಚ್ಚುಗೆ:
    ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಯೋಜಿಸಿದ್ದ ಆವಿಷ್ಕಾರ ಮತ್ತು ವಾಣಿಜ್ಯೋದ್ಯಮ ಉತ್ಸವದಲ್ಲಿ ಮುಜಾಫ್ಫರ್ ತನ್ನ ‘ಕೌಂಟಿಂಗ್ ಪೆನ್’ ಪ್ರದರ್ಶಿಸಿದ್ದ. ಮುಜಾಫ್ಫರ್ ಆವಿಷ್ಕರಿಸಿರುವ ಅಪರೂಪ ‘ಕೌಂಟಿಂಗ್ ಪೆನ್’ ಉತ್ಸವದಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಕೂಡ ಪುಟ್ಟ ಬಾಲಕನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.