Tag: ಪೆಡ್ಲರ್

  • ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಮಡಿಕೇರಿ: ಬ್ಯಾಂಕಾಕ್‌ನಿಂದ ದುಬೈಗೆ ಕೊಡಗಿನ (Kodagu) ಮೂಲಕ ದುಬಾರಿ ಬೆಲೆಯ ಮಾದಕವಸ್ತು ಹೈಡ್ರೋ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸರು (Kodagu Police) ಬೇಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇರಳ ರಾಜ್ಯದವರೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ 3.31 ಕೆಜಿ ಹೈಡ್ರೋ ಗಾಂಜಾವನ್ನು (hydro Ganja) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಆರೋಪಿಗಳಾದ ಮೆಹರೂಫ್ (37), ರವೂಫ್ (28), ನಾಸೀರ್ (26), ಹೆಚ್‌. ಯಾಹ್ಯಾಸಿ (28), ಅಕನಾಸ್ವ (26), ವಾಜೀಧ್ (26), ರಿಯಾಜ್ (44) ರನ್ನ ಮಾಲ್ ಸಮೇತ ಬಂಧನ ಮಾಡಲಾಗಿದೆ. ಆರೋಪಿಗಳು ಮಾದಕವಸ್ತುವನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ತರುತ್ತಿದ್ದರು. ನಂತರ, ದುಬೈಗೆ ವಿಮಾನದ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ‌. ಇದನ್ನೂ ಓದಿ: ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ಏನಿದು ಹೈಡ್ರೋಪೋನಿಕ್ ಗಾಂಜಾ?
    ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯುವ ಹೈಡ್ರೋ ಗಾಂಜಾ ಬ್ಯಾಂಕಾಕ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್‌ನಿಂದ ತಂದ ಮಾದಕವಸ್ತುವನ್ನು ಇಂಡಿಯಾ ಏಪೋರ್ಟ್‌ಗಳ ಮೂಲಕ ಪ್ರವಾಸಿಗರ ಸೋಗಿನಲ್ಲಿ ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಬಳಿಕ ಗೋಣಿಕೋಪ್ಪದಿಂದ ಮಡಿಕೇರಿಗೆ ತರುವಾಗ ಮಡಿಕೇರಿ ನಗರದ ಪೋಲಿಸರು 5 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

    ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

    ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕ ವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ಮಂದಿಗಳು ಭಾಗಿಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ. ಇದನ್ನೂ ಓದಿ: ಆರ್‌.ಅಶೋಕ್‌ ವಿರುದ್ಧ ಸಚಿವ ಪರಮೇಶ್ವರ್‌ ನೂರಾರು ಕೋಟಿ ಭೂ ಹಗರಣ ಬಾಂಬ್‌

  • ಡ್ರಗ್ಸ್ ಗಾಗಿ ಪೆಡ್ಲರ್ ಜೊತೆ ಅನೈತಿಕ ಸಂಬಂಧ: ಹೆಂಡತಿ ವಿರುದ್ಧವೇ ಸ್ಯಾಂಡಲ್ ವುಡ್ ನಟ ದೂರು

    ಡ್ರಗ್ಸ್ ಗಾಗಿ ಪೆಡ್ಲರ್ ಜೊತೆ ಅನೈತಿಕ ಸಂಬಂಧ: ಹೆಂಡತಿ ವಿರುದ್ಧವೇ ಸ್ಯಾಂಡಲ್ ವುಡ್ ನಟ ದೂರು

    ಸ್ಯಾಂಡಲ್ ವುಡ್ (Sandalwood) ನಟ, ನಿರ್ಮಾಪಕ ಟಿ.ಚಂದ್ರಶೇಖರ್ (T. Chandrasekhar) ಸ್ವತಃ ತನ್ನ ಹೆಂಡತಿಯ ವಿರುದ್ಧವೇ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಮೇಲ್ನೋಟಕ್ಕೆ ಕೌಟುಂಬಿಕ ಸಮಸ್ಯೆ ಅನಿಸಿದರೂ, ಹೆಂಡತಿಯ (Wife) ವಿರುದ್ಧ ಚಂದ್ರಶೇಖರ್ ಗುರುತರ ಆರೋಪ ಮಾಡಿದ್ದಾರೆ. ಇವರು ‘ಹೀಗೊಂದು ದಿನ’ ಹಾಗು ‘ಅಪ್ಪುಗೆ’ ಎಂಬ ಎರಡು ಚಿತ್ರಗಳ ನಿರ್ಮಾಪಕರು.

    ಪತ್ನಿ ಡ್ರಗ್ (Drugs) ವ್ಯಸನಿಯಾಗಿದ್ದು, ಡ್ರಗ್ಸ್ ಗಾಗಿಯೇ ಆಕೆ ಡ್ರಗ್ ಪೆಡ್ಲರ್ (Peddler) ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ಠಾಣೆಗೆ ಕೊಟ್ಟ ದೂರಿನಲ್ಲಿ ‘ನನ್ನ ಹೆಂಡತಿಯಾದ ನಮಿತಾರನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನ್ನ ಹೆಂಡತಿಯೊಂದಿಗೆ ವಾಸವಾಗಿರುತ್ತೇನೆ. ನಮಗೆ ಮಕ್ಕಳು ಇರುವುದಿಲ್ಲ. ನನ್ನ ಹೆಂಡತಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವ್ಯಸನಿಯಾಗಿರುತ್ತಾಳೆ. ಅದನ್ನು ಬಿಡಿಸಲು ಬಹಳ ಸಾರಿ ಪ್ರಯತ್ನ ಪಟ್ಟಿರುತ್ತೇನೆ. ಆದರೂ ಕದ್ದು ಮುಚ್ಚಿ ಆಕೆ ಸೇವನೆ ಮಾಡುತ್ತಿರುತ್ತಾಳೆ’ ಎಂದು ಬರೆದಿದ್ದಾರೆ.

    ಮುಂದುವರೆದು, ‘ಇತ್ತೀಚೆಗೆ ಜನವರಿಯಿಂದ ಲಕ್ಷ್ಮೀ ಶ್ ಪ್ರಭು (Lakshmish Prabhu) ಎಂಬ ಡ್ರಗ್ ಪೆಡ್ಲರ್ ನೊಂದಿಗೆ ಸ್ನೇಹೆ ಬೆಳೆಸಿಕೊಂಡು ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾಳೆ. ಅದಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳು ನನಗೆ ಸಿಕಿದ್ದು, ನಾನು ನನ್ನ ಹೆಂಡತಿಗೆ ಬುದ್ದಿ ಹೇಳಿರುತ್ತೇನೆ. ಆದರೂ ನನ್ನ ಮಾತನ್ನು ಆಕೆ ತಿರಸ್ಕಾರ ಮಾಡಿ, ಅವನೊಂದಿಗೆ ಕದ್ದು ಮುಚ್ಚಿ ಸಂಬಂಧವಟ್ಟು ಇಟ್ಟುಕೊಂಡಿರುತ್ತಾಳೆ. ಅವನು ಮಾದಕ ವಸ್ತಗಳನ್ನು ಕೊಡುತ್ತಿರುತ್ತಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಹೆಂಡತಿ ಮತ್ತು ಅವಳ ಪ್ರಿಯಕರ ತಮ್ಮ ಮೇಲೆ ಹಲ್ಲೆ ಮಾಡಿದ್ದನ್ನೂ ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಶೇಖರ್, ‘ಜೂನ್ 16, 12.30 ಗಂಟೆಯಲ್ಲಿ ನಾನು ಇಲ್ಲದ ಸಮಯದಲ್ಲಿ ಲಕ್ಷ್ಮೀಶ್ ಪ್ರಭುವನ್ನು ಮನೆಗೆ ಕರೆಯಿಸಿಕೊಂಡು ಅವನೊಂದಿಗೆ ದೈಹಿಕ ಸಂಪರ್ಕದಲ್ಲಿದ್ದಾಗ ನಾನು ಪ್ರತ್ಯಕ್ಷವಾಗಿ ನೋಡಿ ನನ್ನ ಹೆಂಡತಿಯನ್ನು ಕೇಳಿದಾಗ ನನ್ನ ಹೆಂಡತಿ ಹಾಗೂ ಅವಳ ಪ್ರಿಯಕರ ನನ್ನ ಕೈ ಕಾಲು ಹಿಡಿದುಕೊಂಡು ರಕ್ತ ಬರುವಂತೆ ಹೊಡೆದಿರುತ್ತಾರೆ. ನನ್ನ ಹೆಂಡತಿ ನನ್ನನ್ನು ಹಿಡಿದುಕೊಂಡು ಅವಳ ಪ್ರಿಯಕರ ನನ್ನ ಮೇಲೆ ಚಾಕುವಿನಿಂದ ಹಲ್ಲೇ ಮಾಡಿರುತ್ತಾರೆ’ ಎಂದು ದೂರಿನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.

    ಇತ್ತ ಪತಿಯ ಮೇಲೆ ಮರು ದೂರು ನೀಡಿರುವ ಪತ್ನಿ, ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತಿನಿ ಎಂದು ಚಂದ್ರಶೇಖರ್ ಬೆದರಿಕೆ ಹಾಕಿದ್ದಾರಂತೆ. ಅಷ್ಟಲ್ಲದೆ ದೂರುದಾರೆಯ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಲ್ಲದೆ ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ಪತ್ನಿ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪರಸ್ಪರ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರು: ವಾಟ್ಸಪ್ ಲೊಕೇಷನ್ ಹಾಗೂ ಫೋಟೋದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೇರಳ ಮೂಲದ ಮೊಹಮ್ಮದ್ ಸಕಾರಿಯ, ಶಾಮಿಲ್, ಪ್ರಣವ್, ಅನುಭವ್ ರವೀಂದ್ರನ್, ಶ್ಯಾಮ್ ದಾಸ್ ಬಂಧಿತ ಆರೋಪಿಗಳು. ನಿಗದಿತ ಸ್ಥಳದಲ್ಲಿ ಡ್ರಗ್ಸ್ ಇಟ್ಟು, ಖರೀದಿ ಮಾಡುವವರಿಗೆ ಆ ಸ್ಥಳದ ಫೋಟೋ ಮತ್ತು ಲೊಕೇಷನ್‌ನನ್ನು ವಾಟ್ಸಪ್ ಮಾಡುತ್ತಿದ್ದರು.

    ನೇರವಾಗಿ ಡ್ರಗ್ಸ್ ಪೆಡ್ಲಿಂಗ್ ಮಾಡುವವರ ಮೇಲೆ ಪೊಲೀಸರು ನಿಗಾವಹಿಸುತ್ತಿರುವ ಹಿನ್ನೆಲೆಯಲ್ಲಿ ಮರದ ಬುಡ, ಸಾರ್ವಜನಿಕರು ಓಡಾಡುವ ಜಾಗ, ವಾಕಿಂಗ್, ಜಾಗಿಂಗ್ ಮಾಡುವ ಜಾಗಗಳಲ್ಲಿ ಪೆಡ್ಲರ್‌ಗಳು ಡ್ರಗ್ಸ್ ಇಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್ ನಡೆಯುತ್ತಿರುವ ಮಾಹಿತಿ ದೊರಕಿದ್ದು, ಐವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ