Tag: ಪೆಟ್ರೋಲ್ ಟೊಮೆಟೊ

  • ಡೀಸೆಲ್, ಪೆಟ್ರೋಲ್ ಬೆಲೆಗೆ ಸೆಡ್ಡು ಹೊಡೆಯುತ್ತಿದೆ ಟೊಮೆಟೊ ರೇಟ್

    ಡೀಸೆಲ್, ಪೆಟ್ರೋಲ್ ಬೆಲೆಗೆ ಸೆಡ್ಡು ಹೊಡೆಯುತ್ತಿದೆ ಟೊಮೆಟೊ ರೇಟ್

    ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೆಲದಿನಗಳ ಹಿಂದೆ ಗಗನಕ್ಕೇರಿತ್ತು. ಬಳಿಕ ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸಿದ ಪರಿಣಾಮ ಸ್ಪಲ್ಪ ಹತೋಟಿಯಲ್ಲಿದೆ. ಇದೀಗ ಟೊಮೆಟೊ ಬೆಲೆ ತೈಲ ಬೆಲೆಗೆ ಸೆಡ್ಡು ಹೊಡೆಯುವ ರೀತಿ ಏರಿಕೆ ಕಂಡಿದೆ.

    ತೈಲ ಬೆಲೆ ಹತೋಟಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ದೇಶದಾದ್ಯಂತ ತರಕಾರಿ ಬೆಲೆ ಗಗನಕ್ಕೇರಿದೆ. ಅದರಲ್ಲೂ ಎಲ್ಲಾ ಅಡುಗೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಟೊಮೆಟೊ ಬೆಲೆ ಆಂಧ್ರಪ್ರದೇಶದಲ್ಲಿ ಹೊಲ್‍ಸೇಲ್ ಮಾರ್ಕೇಟ್‍ನಲ್ಲಿ 130 ರೂ.ಗೆ ತಲುಪಿದೆ. ಹಾಗಾಗಿ ಇದೀಗ ಜನಸಾಮಾನ್ಯರು ಪೆಟ್ರೋಲ್‍ಗಿಂತ ದುಬಾರಿಯಾಗಿರುವ ಟೊಮೆಟೊ ರೇಟ್ ನೋಡಿ ದಂಗಾಗಿದ್ದಾರೆ. ಪೆಟ್ರೋಲ್‌ ಬಲೆ ಲೀಟರ್‌ಗೆ ಇದೀಗ 100 ರಿಂದ 101 ರೂ. ಆಸುಪಾಸಿನಲ್ಲಿದ್ದರೆ, ಡೀಸೆಲ್‌ 85 ರಿಂದ 86 ರೂ. ಆಸುಪಾಸಿನಲ್ಲಿದೆ. ಇದನ್ನೂ ಓದಿ: ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧ: ಆರ್. ಅಶೋಕ್

    ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮವಾಗಿ ತರಕಾರಿ ಬೆಲೆ ಏರಿಕೆ ಕಂಡಿದೆ. ಆಂಧ್ರ ಕರ್ನಾಟಕದಲ್ಲಿ ಇನ್ನೆನೂ ಕಟಾವಿಗೆ ಸಿದ್ಧವಾಗಿದ್ದ ತರಕಾರಿ ನೆರೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪರಿಣಾಮ ಟೊಮೊಟೊ ಬೆಲೆ ಸುಡುತ್ತಿದೆ. ಕರ್ನಾಟಕದಲ್ಲಿ ಟೊಮೆಟೊ ಕೆಜಿಗೆ 85 ರಿಂದ 90 ರೂ ಆಸುಪಾಸಿನಲ್ಲಿದ್ದರೆ, ಆಂಧ್ರಪ್ರದೇಶದಲ್ಲಿ 100 ರಿಂದ 130 ರೂ. ವರೆಗಿದೆ. ಚೆನ್ನೈನಲ್ಲಿ 100 ರಿಂದ 120 ರೂ. ಆಗಿದ್ದು ಜನಸಾಮಾನ್ಯರು ಟೊಮೆಟೊ ಬೆಲೆ ನೋಡಿ ಕಂಗಾಲಾಗಿದ್ದು, ಇದಕ್ಕಿಂತ ತೈಲ ಬೆಲೆ ವಾಸಿ ಎನ್ನುತ್ತಿದ್ದಾರೆ. ಇದನ್ನೂ ಓದಿ: ಮುಂಡಗೋಡಿಗೆ ಗಜ ರಾಜನ ಹಿಂಡು ಎಂಟ್ರಿ – ಭತ್ತ, ಕಬ್ಬು ಸ್ವಾಹಾ