Tag: ಪೆಟ್ರೋಲ್ ಕಳ್ಳತನ

  • ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅಂದರ್

    ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅಂದರ್

    ಚಿಕ್ಕಮಗಳೂರು: ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನ ಮೂಡಿಗೆರೆ ತಾಲೂಕಿ‌ನ ಹಿರೇಶಿಗಿರ ಗ್ರಾಮದ ವಿಜಯ್ ಕುಮಾರ್ ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೆಟ್ರೋನೆಟ್ ಕಂಪನಿಯ ಪೈಪ್‌ಲೈನ್ ಕೊರೆದು ಟಿಪ್ಪರ್ ಲಾರಿಯೊಳಗೆ ಟ್ಯಾಂಕರ್ ಕೂರಿಸಿ ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ದೂರು ದಾಖಲಿಸಿದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ 2011ರಲ್ಲೂ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ಕಳ್ಳತನ ನಡೆಸಿತ್ತು ಎನ್ನಲಾಗಿದೆ.

    ಆರೋಪಿಗಳಿಂದ ಪೆಟ್ರೋಲ್ ತುಂಬಿದ ಟ್ಯಾಂಕರ್, ಉಪಕರಣಗಳು ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪೈಪ್‌ಲೈನ್‌ನಲ್ಲಿ ರಂಧ್ರ ಮಾಡಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಪೆಟ್ರೋನೆಟ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಇದರಲ್ಲಿ ಇನ್ನೂ ಯಾರಾದರೂ ಪಾಲ್ಗೊಂಡಿದ್ದಾರಾ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಪೊಲೀಸ್ ಠಾಣೆ ಬಳಿಯೇ ಒಂದೇ ರಾತ್ರಿ 15 ಬೈಕ್‍ಗಳಲ್ಲಿ ಪೆಟ್ರೋಲ್ ಕಳ್ಳತನ

    ಪೊಲೀಸ್ ಠಾಣೆ ಬಳಿಯೇ ಒಂದೇ ರಾತ್ರಿ 15 ಬೈಕ್‍ಗಳಲ್ಲಿ ಪೆಟ್ರೋಲ್ ಕಳ್ಳತನ

    ಮಂಡ್ಯ: ಮಳವಳ್ಳಿ ತಾಲೂಕಿನ ಪುರ ಪೊಲೀಸ್ ಠಾಣೆಗೆ ಸಮೀಪದಲ್ಲಿರುವ ಸಿದ್ದಾರ್ಥ ನಗರದಲ್ಲಿ ಒಂದೇ ರಾತ್ರಿ 15ಕ್ಕೂ ಹೆಚ್ಚು ಬೈಕ್‍ಗಳ ಪೆಟ್ರೋಲ್ ಪೈಪ್ ಕತ್ತರಿಸಿ ಪೆಟ್ರೋಲ್ ಕದಿಯಲಾಗಿದೆ.

    ಸಿದ್ದಾರ್ಥ ನಗರದ 3, 4, 5ನೇ ಕ್ರಾಸ್ ನಲ್ಲಿ ಮನೆಗಳ ಮುಂದೆ, ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್‍ಗಳ ಪೆಟ್ರೋಲ್ ಪೈಪ್ ಕತ್ತರಿಸಿ, ಪೆಟ್ರೋಲ್ ಕದ್ದಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಜೂನಿಯರ್ ಕಾಲೇಜು, ಸಿದ್ದಾರ್ಥನಗರ ಹೊಸ ಬಡಾವಣೆ ಬಳಿ ಇದೇ ರೀತಿ ಘಟನೆ ನಡೆದಿತ್ತು. ಕೆಲ ದಿನಗಳ ಅಂತರದಲ್ಲೇ ಲೀಸ್ ಠಾಣೆ ಸಮೀಪವೇ ಅದೇ ರೀತಿ ಘಟನೆ ನಡೆದಿದ್ದು, ಸಾಕಷ್ಟು ಆತಂಕಕ್ಕೀಡು ಮಾಡಿದೆ.  ಇದನ್ನೂ ಓದಿ: ದಿಢೀರ್ ಎರಡು ಹೋಳಾಗಿ ಧರೆಗುರುಳಿದ ನೂರಾರು ವರ್ಷದ ಅರಳಿಮರ

    ಬೆಳಿಗ್ಗೆ ಬೈಕ್ ತೆಗೆಯಲು ಹೋದಾಗ ಪೆಟ್ರೋಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಪೆಟ್ರೋಲ್ ಪೈಪ್, ಕತ್ತರಿಸಲಾಗಿದ್ದು, ಪೆಟ್ರೋಲ್ ಹಾಕಿಸಲು ಪರದಾಡಬೇಕಾಯಿತು. ಇದನ್ನೂ ಓದಿ: ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

    ಘಟನೆಗೆ ಸಂಬಂಧಿಸಿದಂತೆ ಬೈಕ್ ಗಳ ಮಾಲೀಕರು ದೂರು ಸಲ್ಲಿಸಲು ಪುರ ಪೊಲೀಸ್ ಠಾಣೆಗೆ ತೆರಳಿದಾಗ ದೂರು ಸ್ವೀಕರಿಸದೆ, ಸ್ಥಳಕ್ಕಾಗಮಿಸಿ ಬೀಟ್ ವ್ಯವಸ್ಥೆಯನ್ನು ಸುಧಾರಿಸುವ ಭರವಸೆಯನ್ನು ಪೊಲೀಸರು ನೀಡಿದರು. ದೂರು ಸ್ವೀಕರಿಸದ ಪೊಲೀಸರ ನಡೆ ಬಗ್ಗೆ ಬೈಕ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡನೇ ಬಾರಿ ಘಟನೆ ನಡೆದಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

  • ಮಂಡ್ಯ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ

    ಮಂಡ್ಯ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ

    ಮಂಡ್ಯ: ನಗರ ಪ್ರದೇಶದಲ್ಲಿ ರಾತ್ರಿ ವೇಳೆ ಬೈಕ್‍ಗಳಿಂದ ಪೆಟ್ರೋಲ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾತ್ರಿ ವೇಳೆ ಮನೆಯ ಕಾಂಪೌಂಡ್‍ನಲ್ಲಿ ನಿಲ್ಲಿಸಿದ ಬೈಕ್‍ಗಳಿಂದ ಪೆಟ್ರೋಲ್‍ನ್ನು ಕಳ್ಳತನ ಮಾಡಲಾಗುತ್ತಿದೆ.

    ಮಂಡ್ಯ ನಗರ ಪ್ರದೇಶ ಹಲವು ಬಡಾವಣೆಗಳಲ್ಲಿ ಈ ರೀತಿಯ ಪ್ರಕರಣಗಳು ಜರುಗುತ್ತಿವೆ. ಮಧ್ಯರಾತ್ರಿ ವೇಳೆ ಕಾಂಪೌಂಡ್‍ನಲ್ಲಿ ನಿಲ್ಲಿಸಿದ ಬೈಕ್‍ಗಳ ಪೆಟ್ರೋಲ್ ಕಳ್ಳತನವಾಗುತ್ತಿದೆ. ಸ್ಪ್ಲೆಂಡರ್, ಪಲ್ಸರ್, ಹೊಂಡಾ ಶೈನ್, ಡಿಸ್ಕವರ್ ಬೈಕ್‍ಗಳೇ ಖದೀಮರ ಟಾರ್ಗೆಟ್ ಆಗಿದ್ದು, ಈ ಬೈಕ್‍ಗಳಲ್ಲಿ ಅತೀ ಹೆಚ್ಚು ಪೆಟ್ರೊಲ್ ಕದಿಯುತ್ತಿದ್ದಾರೆ.

    ರಾತ್ರಿ ವೇಳೆ ಮಂಡ್ಯ ನಗರ ಪ್ರದೇಶದಲ್ಲಿನ ಹಾಸ್ಟೆಲ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ರೋಲ್ ಕಳ್ಳತನಕ್ಕೆ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಶೋಕಿ ಮಾಡುವ ಸಲುವಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಪೆಟ್ರೋಲ್ ಕಳ್ಳರನ್ನು ಹಿಡಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.