Tag: ಪೆಟ್ರೋಲಿಯಂ

  • ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

    ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

    ನವದೆಹಲಿ: ಕಚ್ಚಾ ತೈಲವನ್ನು ಅಗ್ಗದ ದರದಲ್ಲಿ ರಷ್ಯಾದಿಂದ ಖರೀದಿ ಮಾಡುತ್ತಿರುವ ಭಾರತ ಈಗ ದ್ರವೀಕೃತ ನೈಸರ್ಗಿಕ ಅನಿಲವನ್ನು(LNG) ಕಡಿಮೆ ದರದಲ್ಲಿ ಖರೀದಿ ಮಾಡಿದೆ.

    ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್(ಜಿಎಸ್‌ಪಿಸಿ) ಮತ್ತು ಗೇಲ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಕಂಪನಿಗಳು ಇತ್ತೀಚೆಗೆ ರಷ್ಯಾದಿಂದ ಹಲವಾರು ಎಲ್‌ಎನ್‌ಜಿ ಸ್ಪಾಟ್ ಶಿಪ್‌ಮೆಂಟ್‌ಗಳನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ – ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ಈ ವಿಚಾರದ ಬಗ್ಗೆ ತಿಳಿದ ವ್ಯಕ್ತಿಗಳು ಮಾಹಿತಿ ನೀಡಿದ್ದು, ಮತ್ತಷ್ಟು ಖಾಸಗಿ ಮಾಹಿತಿಗಳನ್ನು ಅವರು ನೀಡಲು ನಿರಾಕರಿಸಿದ್ದಾರೆ. ಜಿಎಸ್‌ಪಿಸಿ, ಗೇಲ್‌ ಮತ್ತು ಭಾರತದ ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ಎಲ್‌ಎನ್‌ಜಿ ಮೇಲೆ ಯಾವುದೇ ನೇರ ನಿರ್ಬಂಧಗಳಿಲ್ಲ. ಆದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲ ದೇಶಗಳು ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ರಷ್ಯಾದಿಂದ ಎಲ್‌ಎನ್‌ಜಿ ಖರೀದಿಯನ್ನು ಸ್ಥಗಿತಗೊಳಿಸಿದೆ.

  • ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಪತ್ತೆ – 5 ಸಾವಿರ ಲೀಟರ್ ಡೀಸೆಲ್ ಜಪ್ತಿ

    ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಪತ್ತೆ – 5 ಸಾವಿರ ಲೀಟರ್ ಡೀಸೆಲ್ ಜಪ್ತಿ

    ಚಾಮರಾಜನಗರ: ಎಗ್ಗಿಲ್ಲದೆ ನಡೆಯುತ್ತಿದ್ದ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ಚಾಮರಾಜನಗರ ಜಿಲ್ಲೆ ಆಹಾರ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಕರಿಕಲ್ಲು ಕ್ವಾರಿಗಳಿಗೆ ತಮಿಳುನಾಡಿನಿಂದ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಸರಬರಾಜು ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್‍ಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಇಳಿಸುವಾಗ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು

    ದಾಳಿ ವೇಳೆ 5 ಸಾವಿರ ಲೀಟರ್ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ವಶಪಡಿಸಿಕೊಂಡು, ಚಾಲಕನನ್ನು ಹಿಡಿದು ಅಧಿಕಾರಿಗಳು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

  • ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ನವದೆಹಲಿ: ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

    ಹೌದು. ಸದ್ಯ ಈಗ ಪ್ರತಿ ತಿಂಗಳು ಎಲ್‌ಪಿಜಿ ದರ ಪರಿಷ್ಕರಣೆ ಆಗುತ್ತಿದೆ. ಪ್ರತಿ ತಿಂಗಳು ದರ ಪರಿಷ್ಕರಣೆ ಆಗುತ್ತಿರುವುದು ತೈಲ ಕಂಪನಿಗಳಿಗೆ ಸಮಸ್ಯೆ ಆಗುತ್ತಿರುವ ಕಾರಣ ಈಗ ವಾರಕ್ಕೊಮ್ಮೆ ದರ ಪರಿಷ್ಕರಣೆ ಬಯಸಿವೆ.

    ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    ಈ ಹಿಂದೆ ಪೆಟ್ರೋಲ್,‌ ಡೀಸೆಲ್‌ ದರ ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿದಿನ ಪರಿಷ್ಕರಣೆ ಆಗುತ್ತಿದ್ದ ಕಾರಣ ತೈಲ ಬೆಲೆ ಏರಿಕೆ/ ಇಳಿಕೆ ಆಗಿದ್ದರೂ ದರ ಪರಿಷ್ಕರಣೆ ಕೂಡಲೇ ಆಗುತ್ತಿರಲಿಲ್ಲ. ಆದರೆ 2017ರ ಜೂನ್‌ 16ರ ನಂತರ ದೇಶದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗೆ ಅನುಗುಣವಾಗಿ  ಪ್ರತಿನಿತ್ಯ ಪೆಟ್ರೋಲ್, ಡೀಸೆಲ್‌ ದರ ಬೆಳಗ್ಗೆ 6ಗಂಟೆಗೆ ಪರಿಷ್ಕರಣೆ ಆಗುತ್ತಿದೆ.

    ಕಳೆದ ನವೆಂಬರ್‌ನಲ್ಲಿ ಸಬ್ಸಿಡಿ ಸಹಿತ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 597 ರೂ. ಇತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಕಾರಣ ಈಗ 697 ರೂ.ಗೆ ಏರಿಕೆಯಾಗಿದೆ.

    ವಾರಕ್ಕೊಮ್ಮೆ ದರವನ್ನು ಪರಿಷ್ಕರಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ತೈಲ ಕಂಪನಿಗಳಿಗೆ ದೊಡ್ಡ ಸಮಸ್ಯೆ ಆಗುವುದಿಲ್ಲ. ಈಗ ತಿಂಗಳಿಗೊಮ್ಮೆ ದರ ಪರಿಷ್ಕರಣೆ ಇದ್ದಾಗ ದರ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪನಿಗಳೇ ಹೊರಬೇಕಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ವಾರಕ್ಕೊಮ್ಮೆ ಎಲ್‌ಪಿಜಿ ದರ ಪರಿಷ್ಕರಣೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದೆ.

  • ಬೆಂಕಿ ಹಚ್ಚಿದರೆ ಉರಿಯುತ್ತಿದೆ ಬಾವಿ ನೀರು!

    ಬೆಂಕಿ ಹಚ್ಚಿದರೆ ಉರಿಯುತ್ತಿದೆ ಬಾವಿ ನೀರು!

    ಮಂಗಳೂರು: ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡು ಬಂದಿದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಮೀಪದ ಕಾನಕೆರೆ ಎಂಬಲ್ಲಿ ಈ ಘಟನೆ ನಡೆಯುತ್ತಿದೆ.

    ಕಾನಕೆರೆಯ ನಾಲ್ಕು ಬಾವಿಗಳ ನೀರಿನಲ್ಲಿ ಪೆಟ್ರೋಲಿಯಂ ಅಂಶ ಕಂಡು ಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಾನಕೆರೆ ಪ್ರದೇಶ ಜನವಸತಿ ಹೊಂದಿದ್ದು, ಇಲ್ಲಿ ಹಲವು ತೆರೆದ ಬಾವಿಗಳಿವೆ. ಈ ಪೈಕಿ ನಾಲ್ಕು ಬಾವಿಗಳಲ್ಲಿನ ನೀರು ಪೆಟ್ರೋಲ್ ವಾಸನೆಯಿಂದ ಕೂಡಿದ್ದು, ಬೆಂಕಿ ಕೊಟ್ಟರೆ ಹೊತ್ತಿ ಉರಿಯುತ್ತಿದೆ.

    ಕಳೆದ ಎರೆಡು ದಿನಗಳಿಂದ ಇಂತಹ ಪ್ರಕರಣ ನಡೆಯುತ್ತಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ರಾತ್ರಿ ಬಾವಿಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದರೂ ರಾತ್ರಿಯವರೆಗೆ ಅಗ್ನಿಶಾಮಕ ದಳ ಇತ್ತ ಆಗಮಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಪಂಪ್‍ನ ತೈಲ ಬಾವಿ ಲೀಕೇಜ್ ಆಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

    https://www.youtube.com/watch?v=uE3r9qZoJWk&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv