Tag: ಪೆಂಟಗನ್ ಸಿನಿಮಾ

  • `ನೀಲಿ ಚಿತ್ರದಲ್ಲಿ ಆಕ್ಟ್ ಮಾಡ್ತೀರಾ’ ಎಂದು ಕೇಳಿದ ಯೂಟ್ಯೂಬರ್‌ಗೆ ತನಿಷಾ ಖಡಕ್‌ ಕ್ಲಾಸ್

    `ನೀಲಿ ಚಿತ್ರದಲ್ಲಿ ಆಕ್ಟ್ ಮಾಡ್ತೀರಾ’ ಎಂದು ಕೇಳಿದ ಯೂಟ್ಯೂಬರ್‌ಗೆ ತನಿಷಾ ಖಡಕ್‌ ಕ್ಲಾಸ್

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು Pentagon ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ನಟಿ ತನಿಷಾ ಮುಜುಗರದ ಸನ್ನಿವೇಶವೊಂದು ಎದುರಾಗಿದೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    `ಪೆಂಟಗನ್’ ಸಿನಿಮಾ ಇದೇ ಏಪ್ರಿಲ್ 7ಕ್ಕೆ ತೆರೆಗೆ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಕಾಮನ ಬಿಲ್ಲು (Kamana Billu) ಎಂಬ ಹಾಡಿನಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಂದರ್ಶನದಲ್ಲಿ ಯೂಟ್ಯೂಬರ್, ನಟಿಗೆ ನ್ಯೂಡ್ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ನಟಿ ತನಿಷಾ ಗರಂ ಆಗಿದ್ದಾರೆ. ಅಷಕ್ಕೂ ಆಗಿದ್ದೇನು?

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸುತ್ತಾರೆ. ಇದನ್ನೂ ಓದಿ:ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ಇದೇ ವೇಳೆ ಯೂಟ್ಯೂಬರ್‌ನ `ಪೆಂಟಗನ್’ ಚಿತ್ರತಂಡ ತರಾಟೆಗೆ ತೆಗೆದುಕೊಂಡಿದೆ. ಯೂಟ್ಯೂಬರ್ ವಿರುದ್ಧ ನಟಿ ತನಿಷ ಕುಪ್ಪಂಡ ಮತ್ತು ಚಿತ್ರತಂಡ ಕಿಡಿಕಾರಿದೆ. ತಮ್ಮ ಆಕ್ರೋಶವನ್ನ ತನಿಷಾ ಕುಪ್ಪಂಡ ಹೊರಹಾಕಿದ್ದಾರೆ.

  • ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

    ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

    ಗಾಗಲೇ ಕನ್ನಡದಲ್ಲಿ ಸಾಕಷ್ಟು ಬಯೋಪಿಕ್ ಚಿತ್ರಗಳು ಬಂದಿವೆ. ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಲಿದೆ. ಇದು ಪೂರ್ಣ ಪ್ರಮಾಣದಲ್ಲಿ ಬಯೋಪಿಕ್ ಅಲ್ಲದೇ, ಇದ್ದರೂ, ಮಾಜಿ ರೌಡಿ, ಹಾಲಿ ಕನ್ನಡಪರ ಹೋರಾಟಗಾರನೊಬ್ಬನ ಕಥೆಯನ್ನು ಚಿತ್ರ ಮಾಡಲಾಗುತ್ತಿದೆ. ಆದರೆ, ಆ ಡಾನ್ ಯಾರು? ಏನು ಕಥೆ ಎನ್ನುವ ವಿಚಾರ ಮಾತ್ರ ಚಿತ್ರತಂಡ ಗುಟ್ಟಾಗಿ ಇಟ್ಟಿದೆ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ಭೂಗತ ಜಗತ್ತಿನ ಚಟುವಟಿಕೆಯಲ್ಲಿದ್ದ ಕೆಲವರು ಕನ್ನಡ ಪರ ಸಂಘಟನೆ ಕಟ್ಟಿಕೊಂಡು, ಹೋರಾಟ ಮಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ಈ ಸಿನಿಮಾ ಯಾರ ಕುರಿತಾದದ್ದು ಎನ್ನುವುದೇ ಸಸ್ಪೆನ್ಸ್.  ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ಗುರು ದೇಶಪಾಂಡೆ ಸಾರಥ್ಯದಲ್ಲಿ ಪೆಂಟಗನ್ ಸಿನಿಮಾ ಮೂಡಿ ಬರುತ್ತಿದೆ. ಐದು ಜನ ನಿರ್ದೇಶಕರು, ಐದು ಕಥೆಗಳನ್ನು ಈ ಸಿನಿಮಾದಲ್ಲಿ  ಹೇಳುತ್ತಿದ್ದಾರೆ. ಆ ಐದು ಕಥೆಗಳಲ್ಲಿ ಒಂದು ಕನ್ನಡ ಪರ ಹೋರಾಟಗಾರನ ಕುರಿತಾದದ್ದುಆಗಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ, ಆಕಾಶ್ ‍ಶ್ರೀವತ್ಸ, ಚಂದ್ರ  ಮೋಹನ್, ಕಿರಣ್ ಕುಮಾರ್ ತಲಾ ಒಂದೊಂದು ಕಥೆಗೆ ನಿರ್ದೇಶನ ಮಾಡಿದ್ದರೆ, ಕನ್ನಡ ಪರ ಹೋರಾಟಗಾರನ ಕಥೆಗೆ ಗುರು ದೇಶಪಾಂಡೆ ನಿರ್ದೇಶಕರು. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

    ಈಗಾಗಲೇ ನಾಲ್ಕೂ ಕಥೆಗಳ ಚಿತ್ರೀಕರಣ ಮುಗಿದಿದ್ದು, ಐದನೇ ಕಥೆಯಾದ ಕನ್ನಡ ಪರ ಹೋರಾಟಗಾರನ ಕಥೆಯ ಚಿತ್ರೀಕರಣ ಕೂಡ ಕೊನೆಯ ಹಂತದಲ್ಲಿದೆ. ಈ ಪಾತ್ರವನ್ನು ಖ್ಯಾತ ನಟ ಕಿಶೋರ್ ಮಾಡುತ್ತಿದ್ದಾರೆ. ಅಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ, ನಟಿ ಅಶ್ವಿನಿ ಗೌಡ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.