Tag: ಪೆಂಕಾಕ್ ಸಿಲಾತ್

  • ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ನಗರದ ‘ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು’ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಲೇಜಿನ 14 ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಸ್ನೇಹಾ ಸಂಜುಕುಮಾರ್, ನಂದಿನಿ ಶರಣಪ್ಪ, ಸ್ವಾತಿ ಪಾಂಡಪ್ಪ, ಕೋಮಲ್ ಗೋಪಾಲರಾವ್, ಮಾಲಾಶ್ರೀ ಶರಣಪ್ಪ, ದಿವ್ಯಶ್ರೀ, ದಶರಥ, ಸವಿತಾ, ಭಾಗ್ಯಶ್ರೀ, ಕಲ್ಪನಾ, ಅಶೋಕ್, ಜ್ಯೋತಿ, ವೈಶಾಲಿ, ಪ್ರಿಯಾಂಕಾ ರಾಜಕುಮಾರ್, ಸರಸ್ವತಿ ಹಾಗೂ ರೇಣುಕಾ ಚಿನ್ನದ ಸಾಧನೆ ಮಾಡಿದ ಮಕ್ಕಳು. ಇದನ್ನೂ ಓದಿ: ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR

    ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡ ವಿಜಯಪುರ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

    ವಿದ್ಯಾರ್ಥಿನಿಯರು ಆತ್ಮರಕ್ಷಣೆಗೆ ಪೆಂಕಾಕ್ ಸಿಲಾತ್, ಕರಾಟೆ ಕಲೆಗಳನ್ನು ಕಲಿಯಬೇಕು ಎಂದು ಸ್ಪರ್ಧೆಯನ್ನು ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ತರಬೇತುದಾರ ಖುದ್ದುಸ್ ಹೇಳಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

    ಪೆಂಕಾಕ್ ಸಿಲಾತ್ ಆರನೇ ಶತಮಾನದಲ್ಲಿ ಇಂಡೋನೇಷ್ಯಾದಲ್ಲಿ ಯುದ್ಧ ಕಲೆಯಾಗಿ ಬಳಸಲಾಗುತ್ತಿತ್ತು. ನಂತರ ದಕ್ಷಿಣ ಏಷ್ಯಾದ ದೇಶಗಳಲ್ಲೂ ಪ್ರಾಮುಖ್ಯತೆ ಪಡೆದುಕೊಂಡಿತು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಮನೋಜ್‍ಕುಮಾರ್ ತಿಳಿಸಿದರು.