Tag: ಪೃಥ್ವಿ ಶೆಟ್ಟಿ

  • ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಂಜನಾ ಮನೆ ಮೇಲಿನ ದಾಳಿಗೆ ಮೂವರು ವ್ಯಕ್ತಿಗಳ ಜೊತೆಗಿನ ಒಡನಾಟ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ನಟಿ ಸಂಜನಾ ಆಪ್ತ ರಾಹುಲ್, ಪ್ರಶಾಂತ್ ರಾಂಕಾ ಕೊಟ್ಟ ಹೇಳಿಕೆಯ ಎಲ್ಲಾವನ್ನ ಇಟ್ಟುಕೊಂಡು ಸಿಸಿಬಿ ಸೋಮವಾರ ರಾತ್ರಿ ಸರ್ಚ್ ವಾರೆಂಟ್ ಪಡೆದಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ದಾಳಿ ಮಾಡಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಸಂಜನಾ-ಪೃಥ್ವಿ ಶೆಟ್ಟಿ:
    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಸದ್ಯಕ್ಕೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಸಂಜನಾ-ರಾಹುಲ್ ಲಿಂಕ್:
    ರಾಹುಲ್ ನಟಿ ಸಂಜನಾ ಗಲ್ರಾನಿ ಆಪ್ತನಾಗಿದ್ದು, ರಾಹುಲ್‍ನನ್ನು ರಾಕಿ ಬ್ರದರ್ ಎನ್ನುತ್ತಾರೆ. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದು, ರಾಹುಲ್ ಜೊತೆ ಶ್ರೀಲಂಕಾ ಕ್ಯಾಸಿನೋಗಳಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಜೊತೆಗೆ ರಾಹುಲ್ ಡ್ರಗ್ ಪೆಡ್ಲರ್ ಆಗಿದ್ದು, ಸೆಲೆಬ್ರಿಟಿ ಪಾರ್ಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಸಂಜನಾ ಹೆಸರು ಬಾಯಿಬಿಟ್ಟಿದ್ದನು. ಅಲ್ಲದೇ ರಾಹುಲ್ ಮೊಬೈಲ್‍ನಲ್ಲಿದ್ದ ಪಾರ್ಟಿ ಫೋಟೋ ಕೂಡ ಸೀಜ್ ಮಾಡಲಾಗಿದೆ.

     

    ಸಂಜನಾ_ಪ್ರಶಾಂತ್ ರಾಂಕಾ ಲಿಂಕ್:
    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ನಾಲ್ಕನೇಯ ಆರೋಪಿಯಾಗಿದ್ದು, ವಿದೇಶಿಯೊಂದಿಗೆ ಡ್ರಗ್ಸ್ ವ್ಯವಹಾರದಲ್ಲಿ ನೇರ ಸಂಪರ್ಕ ಹೊಂದಿದ್ದನು ಎಂದು ತಿಳಿದು ಬಂದಿದೆ. ಪ್ರಶಾಂತ್ ರಾಂಕಾ ಜೊತೆ ನಟಿ ಸಂಜನಾ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ಸಂಪರ್ಕ ಇದ್ದ ಬಗ್ಗೆ ಮೊಬೈಲ್‍ನಲ್ಲಿರುವ ಫೋಟೋ, ಕರೆ ಸಾಕ್ಷ್ಯ ಸುಳಿವು ನೀಡಿದೆ. ಈ ಸುಳಿವನ್ನು ಬೆನ್ನತ್ತಿದ ಸಿಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.

    ನಟಿ ಸಂಜನಾಗೆ ನೋಟಿಸ್ ಕೊಟ್ಟರೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯನ್ನ ಇಟ್ಟುಕೊಂಡು ಸಿಸಿಬಿ ದಿಢೀರ್ ದಾಳಿ ಮಾಡಿದೆ.

  • ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಬೆಂಗಳೂರು: ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ಮತ್ತು ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಆರೋಪ ಏನು?
    ಡ್ರಗ್ಸ್‌ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

    ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಪಾರ್ಟಿಗಳಲ್ಲಿ ಏನು ಬಳಕೆ ಆಗುತ್ತಿತ್ತು? ಯಾರೆಲ್ಲ ಬರುತ್ತಿದ್ದರು ಎಂಬುದರ ಬಗ್ಗೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಪ್ತನ ಮೇಲೆ ಎಫ್‌ಐಆರ್‌ :
    ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ಸೆ.4 ರಂದು ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಈ ಎಫ್‌ಐಆರ್‌ನಲ್ಲಿ ಸಂಜನಾ ಆಪ್ತ ರಾಹುಲ್‌ ಹೆಸರು ಸಹ ಉಲ್ಲೇಖವಾಗಿತ್ತು. ಒಟ್ಟು 12 ಮಂದಿ ಆರೋಪಿಗಳ ಪೈಕಿ ರಾಹುಲ್‌ 11ನೇ ಆರೋಪಿಯಾಗಿದ್ದಾನೆ. ವಿಚಾರಣೆಯ ವೇಳೆ ಈತ ಸಂಜನಾ ಪಾಲ್ಗೊಳ್ಳುತ್ತಿದ್ದ ಹೈ ಎಂಡ್‌ ಪಾರ್ಟಿ ಬಗ್ಗೆ ಮಾಹಿತಿ ನೀಡಿದ್ದಾನೆ. ಮಹತ್ವದ ಸ್ಯಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಸಂಜನಾ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.