Tag: ಪೃಥ್ವಿ ರಾಜ್ ಯರ್ರಾ

  • ಐಪಿಎಲ್‍ನಿಂದ ಭುವಿ ಔಟ್ – ಆಂಧ್ರದ ನ್ಯೂ ಬೌಲರ್ ಎಂಟ್ರಿ

    ಐಪಿಎಲ್‍ನಿಂದ ಭುವಿ ಔಟ್ – ಆಂಧ್ರದ ನ್ಯೂ ಬೌಲರ್ ಎಂಟ್ರಿ

    ಅಬುಧಾಬಿ: ಸನ್‍ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್-2020ಯಿಂದ ಹೊರಬಿದ್ದಿದ್ದಾರೆ.

    ಕಳೆದ ಅಕ್ಟೋಬರ್ 2ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಆಡಿದ್ದರು. ಈ ಪಂದ್ಯದ 19ನೇ ಓವರ್ ಬೌಲ್ ಮಾಡಲು ಬಂದ ಭುವಿ ಒಂದು ಬಾಲ್ ಎಸೆದು ಗಾಯದ ಸಮಸ್ಯೆಗೆ ತುತ್ತಾಗಿ ಪಂದ್ಯದಿಂದ ಹೊರ ಹೋಗಿದ್ದರು.

    ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದ ಭುವನೇಶ್ವರ್ ಕುಮಾರ್ ಅವರು ಈಗ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಭುನವೇಶ್ವರ್ ಕುಮಾರ್ ಅವರು ಡ್ರೀಮ್-11 ಐಪಿಎಲ್‍ನಿಂದ ಹೊರಬಿದ್ದಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಕೇಳಿಕೊಳ್ಳುತ್ತೇವೆ. ಅವರ ಸ್ಥಾನಕ್ಕೆ ಪೃಥ್ವಿ ರಾಜ್ ಯರ್ರಾ ಅವರು ಬರಲಿದ್ದಾರೆ ಎಂದು ತಿಳಿಸಿದೆ.

    ಸ್ನಾಯ ಸೆಳೆತದ ಸಮಸ್ಯೆಯಿಂದ ಭುವನೇಶ್ವರ್ ಕುಮಾರ್ ಅವರು ಐಪಿಎಲ್‍ನಿಂದ ಹೊರಬಿದ್ದಿದ್ದಾರೆ. ಅವರಿಗೆ 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಬೇಕಿದ್ದು, ಅವರು ಈ ಬಾರಿಯ ಐಪಿಎಲ್‍ನಿಂದ ಹೊರನಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಬಾರಿಯ ಐಪಿಎಲ್‍ನಲ್ಲಿ ಹೈದರಬಾದ್ ಪರ 4 ಪಂದ್ಯಗಳನ್ನು ಆಡಿದ್ದ ಭುವಿ 3 ವಿಕೆಟ್ ಪಡೆದುಕೊಂಡಿದ್ದರು. ಅವರ ಅನುಪಸ್ಥಿತಿ ಹೈದರಾಬಾದ್ ತಂಡವನ್ನು ಕಾಡಲಿದ್ದು, ಡೆತ್ ಓವರ್ ಬೌಲಿಂಗ್ ಸಮಸ್ಯೆ ತಂಡಕ್ಕೆ ಎದುರಾಗಿದೆ.

    ಯಾರು ಈ ಪೃಥ್ವಿರಾಜ್?
    ಗಾಯದ ಸಮಸ್ಯೆಯಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಅವರ ಜಾಗಕ್ಕೆ ಹೈದರಾಬಾದ್ ತಂಡ ಯುವ ವೇಗಿ ಪೃಥ್ವಿ ರಾಜ್ ಯರ್ರಾ ಅವರನ್ನು ಕರೆತಂದಿದೆ. ಪೃಥ್ವಿ ರಾಜ್ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಆಂಧ್ರ ರಾಜ್ಯ ತಂಡಲ್ಲಿ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದಾರೆ. ಜೊತೆಗೆ 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ಆಡಿದ್ದಾರೆ.