Tag: ಪೃಥ್ವಿ ಅಂಬಾರ್

  • ಶೂಟಿಂಗ್ ಮುಗಿಸಿದ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ

    ಶೂಟಿಂಗ್ ಮುಗಿಸಿದ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ

    ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ (Pruthvi Ambaar) ಹಾಗೂ ಧನ್ಯಾ ರಾಮ್‌ಕುಮಾರ್ (Dhanya Ramkumar) ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಚೌಕಿದಾರ್’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ (ಡಿ.23) ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಯಿತು. ಈ ವೇಳೆ, ಇಡೀ ಚಿತ್ರತಂಡ ಭಾಗಿಯಾಗಿತ್ತು. ಬಳಿಕ ಸುದ್ದಿಗೋಷ್ಠಿಯಲ್ಲಿ ‘ಚೌಕಿದಾರ್’ (Chowkidar) ಕಲಾವಿದರು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.

    ಪೃಥ್ವಿ ಅಂಬಾರ್ ಮಾತನಾಡಿ, ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಬೇಕು ಯಾವ ರೀತಿ ಬೇಕು ಅನ್ನೋದನ್ನು ಅವರು ಹೇಳಿ ಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್‌ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕ ಜರ್ನಿ ನನಗೆ ಸ್ಫೂರ್ತಿ ಎಂದು ತಿಳಿಸಿದರು.

    ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. 2025ರ ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. 4 ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ ಅವರ ಕಥೆಯನ್ನು ನಾವು ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿ ಕುಮಾರ್ ಸರ್ ಹಾಗೂ ಪೃಥ್ವಿ ತಂದೆ- ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

    ಧನ್ಯಾ ರಾಮ್ ಕುಮಾರ್ ಮಾತನಾಡಿ, ‘ಚೌಕಿದಾರ್’ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲಿ ಪಾತ್ರ ಸಿಕ್ಕಿರುವುದು ಖುಷಿ ಜೊತೆಗೆ ಹೆಮ್ಮೆ ಇದೆ. ಈ ಸಿನಿಮಾದಿಂದ ನನಗೆ ಕಲಿಯುವುದು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆಯ ನಟಿಯಾಗಿ ಬಂದಿದ್ದೇನೆ ಎನಿಸಿತು. ಸಾಯಿಕುಮಾರ್ ಸರ್, ಧರ್ಮ ಸರ್, ಸುಧಾ ರಾಣಿ ಮೇಡಂ, ಶ್ವೇತಾ ಮೇಡಂ, ಪೃಥ್ವಿ ಇವರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಿರ್ಮಾಪಕರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.

    ಸಾಯಿ ಕುಮಾರ್ ಮಾತನಾಡಿ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು , ಕುಂಬಳಕಾಯಿ ಕೂಡ ಇಲ್ಲೇ ಒಡೆಯಲಾಗಿದೆ. ಯಾವ ಸಿನಿಮಾಗೂ ಇದು ಆಗಿಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ‌ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ಚೌಕಿದಾರ್ ಸಿನಿಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞಾನರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ಸರಿಪೋದ ಶನಿವಾರ, ಲಕ್ಕಿ ಭಾಸ್ಕರ್ 100 ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ ಎಂದು ಶುಭಕೋರಿದರು.

    ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ಚೌಕಿದಾರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ‘ಡೈಲಾಗ್ ಕಿಂಗ್’ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಮತ್ತಿತರ ತಾರಾಬಳಗ ಚಿತ್ರದಲ್ಲಿದೆ.

    ‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ‘ಚೌಕಿದಾರ್’ ಚಿತ್ರ ಮೂಡಿ ಬಂದಿದೆ.

  • ‘ಚೌಕಿದಾರ್’ಗೆ ಮುಹೂರ್ತದ ಸಂಭ್ರಮ- ಪೃಥ್ವಿ ಅಂಬಾರ್‌, ಧನ್ಯಾ ಹೊಸ ಸಿನಿಮಾ

    ‘ಚೌಕಿದಾರ್’ಗೆ ಮುಹೂರ್ತದ ಸಂಭ್ರಮ- ಪೃಥ್ವಿ ಅಂಬಾರ್‌, ಧನ್ಯಾ ಹೊಸ ಸಿನಿಮಾ

    ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್ (Pruthvi Ambaar) ನಟಿಸುತ್ತಿರುವ ‘ಚೌಕಿದಾರ್’ (Chowkidaar) ಸಿನಿಮಾಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಮುಹೂರ್ತ ನೆರವೇರಿದೆ. ಚಿತ್ರದ ನಿರ್ಮಾಪಕರಾದ ಕಲ್ಲಹಳ್ಳಿ ಚಂದ್ರಶೇಖರ್ ಕ್ಲ್ಯಾಪ್ ಮಾಡಿದರೆ, ಸಾಯಿಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

    ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಮನೆ ಕುಡಿ ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಮುಹೂರ್ತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಸಿನಿಮಾ ಹಂಚಿಕೊಂಡಿತು. ಇದನ್ನೂ ಓದಿ:ಪವಿತ್ರಾಗೌಡ ದರ್ಶನ್‌ ಪತ್ನಿ ಅಲ್ಲ: ಪೊಲೀಸ್‌ ಆಯುಕ್ತರಿಗೆ ವಿಜಯಲಕ್ಷ್ಮಿ ಪತ್ರ

    ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ಇದು ನನ್ನ ಆರನೇ ಸಿನಿಮಾ. ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾದ ನಿರ್ಮಾಪಕರು. ರಥಾವರ ಹಿಟ್ ಆದಮೇಲೆ ನನಗೆ ಒಂದು ಸಿನಿಮಾ ಮಾಡಿ ಎಂದು ಕೇಳುತ್ತಿದ್ದರು. ಪೃಥ್ವಿ ಅವರನ್ನು ಲವರ್ ಬಾಯ್ ರೀತಿ ತೋರಿಸಿದ್ದಾರೆ. ಬೇರೆ ರೀತಿ ಟ್ರೈ ಮಾಡಬೇಕು ಎಂಬ ಆಸೆಯಿಂದ ಕಥೆ ಹೇಳಿದೆ. ಅವರು ಒಕೆ ಎಂದರು. ಅವರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಜೋಶ್ ನೋಡಿ ಖುಷಿಯಾಯ್ತು. ಧನ್ಯ ಮೇಡಂ, ಸಾಯಿಕುಮಾರ್ ಸರ್, ಧರ್ಮ ಸರ್ ಎಲ್ಲರೂ ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ನಟ ಪೃಥ್ವಿ ಅಂಬಾರ್ ಮಾತನಾಡಿ, ತಾಯಿ ಆಶೀರ್ವಾದದಿಂದ ಚೌಕಿದಾರ್ ಸಿನಿಮಾಗೆ ಚಾಲನೆ ಸಿಕ್ಕಿದೆ. ಖುಷಿ ದಿನ ಇವತ್ತು. ಕಥೆ ಕೇಳಿದಾಗ ನನಗೆ ಅನಿಸಿದ್ದು, ನಾನು ಈ ಪಾತ್ರ ಮಾಡಲು ಸಾಕಷ್ಟು ಎಫರ್ಟ್ ಹಾಕಬೇಕು ಎಂದು ನನಗೆ ಗೊತ್ತಾಯ್ತು, ಪ್ರಿಪೇರ್ ಆಗಲು ಟೈಮ್ ಬೇಕು ಎಂದೆ. ಅದರಂತೆ ಅವರು ನನಗೆ ಟೈಮ್ ಕೊಟ್ಟರು, ಅಲ್ಲಿಂದ ನನ್ನ ಜರ್ನಿ ಶುರುವಾಯ್ತು. ಒಂದು ದಿನ ಟೀಸರ್ ಶೂಟ್ ಮಾಡಿದ್ದೇವೆ. ಬಹಳ ಖುಷಿ. ಲಕ್ಕಿ ಫೀಲ್ ಮಾಡುತ್ತೇನೆ. ಜೀವನದ ಬಗ್ಗೆ ಬಹಳ ಅನುಭವವಿದೆ. ಕಂಪ್ಲೀಟ್ ಫ್ಯಾಮಿಲಿ ಜೊತೆಗೆ ಬೇರೆ ಎಲಿಮೆಂಟ್ ಮಿಕ್ಸ್ ಮಾಡಲಾಗಿದೆ. ಚೌಕಿದಾರ್ ಟೈಟಲ್ ಕೊಡುವ ವೈಬ್ಸ್ ಕಥೆಯಲ್ಲಿರುತ್ತದೆ ಎಂದರು.

    ಸಾಯಿಕುಮಾರ್ ಮಾತನಾಡಿ, ಬಹಳ ಸಂತೋಷವಾಗುತ್ತಿದೆ. ಮುಂದಿನ ವರ್ಷ ನಟನಾಗಿ 50 ವರ್ಷ ಕಂಪ್ಲೀಟ್ ಆಗುತ್ತಿದೆ. ಕಾರಣ ಇದಕ್ಕೆಲ್ಲಾ ಅಪ್ಪ ಅಮ್ಮ. ನೀವು ಕನ್ನಡ ಸಿನಿಮಾ ಮಾಡಬೇಕು ಎಂದು ಅಮ್ಮ ಹೇಳುವವರು. ಕನ್ನಡ ಜರ್ನಿಗೂ 30 ವರ್ಷವಾಯ್ತು. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರ ಚಾಲೆಂಜ್. ಈಗ ಹದಿನೈದು ಸಿನಿಮಾ ನಡೆಯುತ್ತಿದೆ. ಚಂದ್ರಶೇಖರ್ ಸಿನಿಮಾ ಗ್ಲಿಂಪ್ಸ್ ಚೆನ್ನಾಗಿದೆ. ನನ್ನ ತಮ್ಮ ಕೂಡ ಅದ್ಭುತ ಡೈರೆಕ್ಟರ್ ಎಂದರು. ಚೌಕಿದಾರ್ ಕಥೆ ಕೇಳಿದೆ ಎಮೋಷನ್ ಡ್ರಾಮಾ. ನಾನು ತುಳು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಪೃಥ್ವಿ ಹೀರೋ. ನಾನು ಅದರಲ್ಲಿ ಪೊಲೀಸ್. ಕಥೆ ಚೆನ್ನಾಗಿದೆ. ಪೃಥ್ವಿಗೆ ನಾನು ಚೌಕಿದಾರ್, ನನಗೆ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್. ಇದು ಒಂದೊಳ್ಳೆ ಪ್ರಯತ್ನ ಎಂದರು.

    ನಟಿ ಧನ್ಯಾ ರಾಮ್ ಕುಮಾರ್ (Dhanya Ramkumar) ಮಾತನಾಡಿ, ಚಂದ್ರಸರ್ ಇಬ್ಬರಿಗೂ ಧನ್ಯವಾದ. ಚೌಕಿದಾರ್ ಸಿನಿಮಾದಲ್ಲಿ ನನಗೆ ನಟಿಸಲು ಅವಕಾಶ ನೀಡಿದಕ್ಕೆ. ಪೃಥ್ವಿ ಅವರು, ಧರ್ಮ ಸರ್, ಸಾಯಿಕುಮಾರ್ ಸರ್ ನಟರ ಜೊತೆ ನಾನು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.


    ವಿದ್ಯಾಶೇಖರ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈವರೆಗೆ ಸಿನಿಮಾದಲ್ಲಿ ಲವರ್ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ಕಥಾಹಂದರ ಹೊಂದಿರುವ ಚೌಕಿದಾರ್ ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

  • ಪ್ಯಾನ್ ಇಂಡಿಯಾ ಸಿನಿಮಾಗೆ ಧನ್ಯಾ ರಾಮ್‌ಕುಮಾರ್ ನಾಯಕಿ

    ಪ್ಯಾನ್ ಇಂಡಿಯಾ ಸಿನಿಮಾಗೆ ಧನ್ಯಾ ರಾಮ್‌ಕುಮಾರ್ ನಾಯಕಿ

    ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಕುಡಿ ಧನ್ಯಾ ರಾಮ್ ಕುಮಾರ್ (Dhanya Ramkumar) ಪೃಥ್ವಿ ಅಂಬಾರ್‌ಗೆ (Pruthvi Ambaar) ಜೋಡಿಯಾಗಿ ನಟಿಸುತ್ತಿದ್ದಾರೆ.

    ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ (Chowkidar) ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಿತರಾಗಿದ್ದ ಧನ್ಯಾ ಇತ್ತೀಚೆಗಷ್ಟೇ ‘ದ ಜಡ್ಜಮೆಂಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ‘ಕಾಲಪತ್ತರ್’ ರಿಲೀಸ್‌ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ‘ಚೌಕಿದಾರ್’ ಬಳಗ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಕಿರುತೆರೆಯಲ್ಲಿ ಶುರುವಾಗಲಿದೆ ಪಾರ್ವತಿ ಜಗನ್ಮಾತೆಯಾದ ಕಥೆ ‘ಶ್ರೀ ದೇವಿ ಮಹಾತ್ಮೆ’

    ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್‌ಟೈನರ್.

    ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ 3ರಂದು ಬಂಡಿ ಮಹಾಕಾಳಿ ದೇಗುಲದಲ್ಲಿ ‘ಚೌಕಿದಾರ್’ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

  • ‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

    ‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

    ‘ದಿಯಾ’ ಪೃಥ್ವಿ ಅಂಬಾರ್ (Pruthvi Ambar) ಮತ್ತು ‘ರಥಾವರ’ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಪೃಥ್ವಿ ಈಗ ‘ಚೌಕಿದಾರ್’ (Chowkidaar) ಆಗಿದ್ದಾರೆ. ಕೆಂಪು ಬಣ್ಣದ ಅಕ್ಷರದ ಮೂಲಕ ಚಿತ್ರತಂಡ ಚೌಕಿದಾರ್ ರಿವೀಲ್ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Actor Srimurali) ಇದೀಗ ಚಂದ್ರಶೇಖರ್ ಬಂಡಿಯಪ್ಪ ಅವರ 6ನೇ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದು, ಚೌಕಿದಾರ್ ಟೈಟಲ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.

    ‘ಚೌಕಿದಾರ್’ ಟೈಟಲ್ ಕೇಳಿದ ತಕ್ಷಣ ಇದು ಮಾಸ್ ಸಿನಿಮಾ ಎಂದುಕೊಳ್ಳಬೇಡಿ. ಇದು ಪಕ್ಕ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ. ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರುತ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್‌ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು ಕಟ್ಟಿಕೊಟ್ಟಿರುವ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಯಾವ ರೀತಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆಂಬುದು ಕುತೂಹಲ ಪ್ರೇಕ್ಷಕರಲ್ಲಿದೆ. ಇದನ್ನೂ ಓದಿ:ಮದುವೆಯಾದರೆ ಖುಷಿಯಾಗಿರುತ್ತೇನೆ ಎಂಬ ಭರವಸೆಯಿಲ್ಲ: ‘ಮೊನಾಲಿಸಾ’ ನಟಿ

    ಪ್ರತಿಭಾನ್ವಿತ ನಟ ಪೃಥ್ವಿ ಜೊತೆಗಿನ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಈ ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡದ ಒಂದೊಂದಾಗಿ ಮಾಹಿತಿ ನೀಡಲಿದೆ.

    ‘ಆನೆ ಪಟಾಕಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ಬಂಡಿಯಪ್ಪ ಆ ಬಳಿಕ ‘ರಥಾವರ’ ಸಿನಿಮಾ ಮೂಲಕ ದೊಡ್ಡ ಹೆಸರು ಪಡೆದುಕೊಂಡರು. ಆ ಬಳಿಕ ‘ತಾರಕಾಸುರ’ ಸಿನಿಮಾ ಮಾಡಿ ಗೆದ್ದರು. ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್‌ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ‘ರೆಡ್ ಕಾಲರ್’ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

    ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರುತ್ತಿದ್ದಾರೆ.

  • ‘ದಿಯಾ’ ಫ್ಲೇವರ್‌ನಲ್ಲಿ ‘ಜೂನಿ’ ಕ್ಯಾರೆಕ್ಟರ್‌ ಟೀಸರ್‌ ಅನಾವರಣ – Chef ಆದ ಪೃಥ್ವಿ ಅಂಬಾರ್

    ‘ದಿಯಾ’ ಫ್ಲೇವರ್‌ನಲ್ಲಿ ‘ಜೂನಿ’ ಕ್ಯಾರೆಕ್ಟರ್‌ ಟೀಸರ್‌ ಅನಾವರಣ – Chef ಆದ ಪೃಥ್ವಿ ಅಂಬಾರ್

    ಸ್ಯಾಂಡವುಲ್‌ನಲ್ಲಿ ‘ದಿಯಾ’ (Dia) ಅನ್ನುವ ಸಿನಿಮಾ ಬಂದಿತ್ತು. ಈ ಚಿತ್ರದ ನಾಯಕ ಪೃಥ್ವಿ ಅಂಬಾರ್ (Pruthvi Ambaar) ಅದ್ಭುತವಾಗಿಯೇ ಅಭಿನಯಿಸಿದ್ದರು. ಇದೀಗ ಅಂತಹದ್ದೆ ಪ್ರೇಮಕಥೆಯ ಹೊತ್ತು ಬಂದಿರುವ ‘ಜೂನಿ’ ಕ್ಯಾರೆಕ್ಟರ್ ಟೀಸರ್ ಅನಾವರಣಗೊಂಡಿದೆ. ‘ಜೂನಿ’ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೆಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಸಖತ್ ಇಂಪ್ರೆಸಿವ್ ಆಗಿದೆ ಕ್ಯಾರೆಕ್ಟರ್ ಟೀಸರ್.

    ‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ‘ಜೂನಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಟೈಟಲ್ `ಜೂನಿ’ ಸಿನಿಮಾದಲ್ಲಿ ನಾಯಕಿ ರಿಷಿಕಾ ನಾಯಕ್ ನಟಿಸಿದ್ದಾರೆ.

    ‘ಜೂನಿ’ (Juni) ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ.’ದಿಯಾ’ (Dia Film) ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ನಡಿ ಮೋಹನ್ ಕುಮಾರ್ ಎಸ್ ಹಣ ಹಾಕಿದ್ದು, ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ‘ಜೂನಿ’ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

  • ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ

    ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ

    ಚಂದನವನದ ನಟ ಪೃಥ್ವಿ ಅಂಬಾರ್ ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ. ಪೃಥ್ವಿ ಅಂಬಾರ್ ಅವರ ತಾಯಿ ಸುಜಾತ ವೀರಪ್ಪ ಅಂಬಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು(ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

    ಸುಜಾತ ಅವರು ವೀರಪ್ಪ ಅಂಬಾರ್ ಅವರ ಧರ್ಮಪತ್ನಿಯಾಗಿದ್ದು, ಹಾರ್ಟ್ ಪ್ರಾಬ್ಲಮ್‍ನಿಂದ ಬಳಲುತ್ತಿದ್ದರು. ಆದರೆ ಇಂದು ಈ ಸಮಸ್ಯೆ ಹೆಚ್ಚಾಗಿ ಸುಜಾತ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳೂರಿನಲ್ಲಿ ಇಂದು ನಡೆಯಲಿದೆ. ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಗಳನ್ನು ಮಾಡಿದ್ದಾರೆ.

    ಸುಜಾತ ಅವರ ಪುತ್ರ ಪೃಥ್ವಿ ಅಂಬಾರ್ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು, ದಿಯಾ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರದಲ್ಲಿ ಪೃಥ್ವಿ ನಟಿಸಿದ್ದಾರೆ. ಇವರ ಸಿನಿಮಾಗಳು ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದು, ಈ ಖುಷಿಯಲ್ಲಿ ಇರಬೇಕಾದ ಕುಟುಂಬ ದುಃಖದಲ್ಲಿ ಮುಳುಗಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆ : ಅಕ್ಟೋಬರ್ 28ಕ್ಕೆ ತೆರೆಗೆ

    ಪೃಥ್ವಿ ಅಂಬಾರ್ ಅವರು ಸಿನಿಮಾರಂಗಕ್ಕೆ ಪ್ರವೇಶಿಸುವ ಮೊದಲು ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಇವರು 2014ರಲ್ಲಿ ಬಿಡುಗಡೆಯಾದ ಬರ್ಕೆ ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದ್ದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ಪಿಲಿಬೈಲ್ ಯಮುನಕ್ಕ, ಇದನ್ನು ಕೆ.ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಕನ್ನಡ ಧಾರವಾಹಿ ‘ಜೊತೆ ಜೊತೆಯಲಿ’ಯಲ್ಲಿ ‘ನೀಲ್’ ಪಾತ್ರದಲ್ಲಿ ಇವರು ನಟಿಸಿದ್ದರು.

    Live Tv
    [brid partner=56869869 player=32851 video=960834 autoplay=true]