Tag: ಪೃಥ್ವಿರಾಜ್

  • ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ : ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ

    ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ : ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ

    ಲಾರ್ (Salar) ಸಿನಿಮಾ ತಂಡದಿಂದ ಖ್ಯಾತ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ (Prithviraj) ಸುಕುಮಾರನ್ ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಕ್ರೂರ ಪಾತ್ರದ ಫಸ್ಟ್ ಲುಕ್ (First Look) ಅನ್ನು ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಈ ಅದ್ಭುತ ಪಾತ್ರ ಚಿತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಭರವಸೆ ನೀಡಿದೆ.

    ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಕೆಜಿಎಫ್ ಮಾಸ್ಟರ್ ಮೈಂಡ್‌ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ ಮತ್ತು ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ ಹಾಗೂ ಮಧು ಗುರುಸ್ವಾಮಿ, ಜಗಪತಿ ಬಾಬು, ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರವು ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಪೃಥ್ವಿರಾಜ್ ನಡುವಿನ ಮೊದಲ ಕಾಂಬಿನೇಷನ್‌ ಮತ್ತು ನೀಲ್ ಅವರ ಮೊದಲ ತೆಲುಗು ಸಾಹಸವಾಗಿದೆ. ತಮ್ಮ ಪಾತ್ರದ ಕುರಿತು ಪ್ರಭಾಸ್ (Prabhas) ಈಗಾಗಲೇ ಹೀಗೆ ಹೇಳಿದ್ದಾರೆ: “ನನ್ನ ಪಾತ್ರವು ಅತ್ಯಂತ ಹಿಂಸಾತ್ಮಕವಾಗಿದೆ, ಈ ರೀತಿಯ ಪಾತ್ರವನ್ನು ನಾನು ಈ ಮೊದಲು ಮಾಡಿಲ್ಲ.” ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ಪೃಥ್ವಿರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ ಪ್ರಶಾಂತ್ ನೀಲ್ (Prashant Neel), ‘ಪೃಥ್ವಿರಾಜ್ ಪಾತ್ರವು ಸ್ನೇಹಿತ ಮತ್ತು ಶತ್ರುವನ್ನು ಆಳವಾಗಿ ಬಿಂಬಿಸುತ್ತದೆ. ಈ ಪಾತ್ರ ಪ್ರಭಾಸ್ ಪಾತ್ರಕ್ಕೆ ಸಮನಾಗಿದೆ. ನಾವು ಬಯಸಿದ ರೀತಿಯಲ್ಲಿ; ಈ ಪಾತ್ರವನ್ನು ಪ್ರಥ್ವಿರಾಜ್‌ ಮಾತ್ರ ಮಾಡಲು ಸಾಧ್ಯ. ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ. ಈ ಹೊಸ ಅವತಾರದಲ್ಲಿ ಅಭಿಮಾನಿಗಳಿಗೆ ಅವರು ಇಷ್ಟವಾಗಲಿದ್ದಾರೆ.

    ಸಲಾರ್ 28 ಸೆಪ್ಟೆಂಬರ್ 2023 ರಂದು ತೆಲುಗು ಮತ್ತು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಆವೃತ್ತಿಗಳಲ್ಲಿ ಥಿಯೇಟ್ರಿಕಲ್ ಬಿಡುಗಡೆಗೆ ನಿಗದಿಯಾಗಿದೆ. 50ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಲಾರ್ ತಂಡವು ಇತ್ತೀಚೆಗೆ 10 ಕೋಟಿ ವೆಚ್ಚದಲ್ಲಿ ಸಮುದ್ರದ ಮಧ್ಯದಲ್ಲಿ 20 ನಿಮಿಷಗಳ ಚೇಸಿಂಗ್ ಸೀಕ್ವೆನ್ಸ್ ಅನ್ನು ಚಿತ್ರೀಕರಿಸುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ, ಡಾರ್ಕ್ ಸೆಂಟ್ರಿಕ್ ಥೀಮ್ (ಡಿಸಿಟಿ) ತಂತ್ರಜ್ಞಾನವನ್ನು ಚಿತ್ರದ ಚಿತ್ರೀಕರಣಕ್ಕೆ ಬಳಸಲಾಗುತ್ತಿದೆ, ಇದನ್ನು ಬಳಸುತ್ತಿರುವ ಮೊದಲ ಭಾರತೀಯ ಚಲನಚಿತ್ರವಾಗಿದೆ.

    400 ಪ್ಲಸ್ ಕೋಟಿ ಬಜೆಟ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸಲಾರ್ ಕೂಡ ಒಂದು. ಚಿತ್ರಕ್ಕೆ ಈಗಾಗಲೇ ಸಾಕಷ್ಟು ದೊಡ್ಡ ಭರವಸೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ ಮತ್ತು ಇದು ಸಾಹಸದಿಂದ ತುಂಬಿದ ಮಾಸ್ ಆಕ್ಷನ್ ಚಿತ್ರವಾಗಲಿದೆ. ಇದು ಚಲನಚಿತ್ರದ ನಿರ್ಮಾಣದಲ್ಲಿ ಒಳಗೊಂಡಿರುವ ಎಲ್ಲಾ ದೊಡ್ಡ ವ್ಯಕ್ತಿಗಳ ಡೆಡ್ಲಿ ಕಾಂಬಿನೇಷನ್‌ ಸಹ ಕಾಣಿಸುತ್ತದೆ. ಬಾಹುಬಲಿ ನಾಯಕನ ಜತೆ ಕೆಜಿಎಫ್ ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞರ ಕ್ರಿಯಾತ್ಮಕ ಸಹಯೋಗವನ್ನು ಅಭಿಮಾನಿಗಳು ಖಂಡಿತವಾಗಿ ತಪ್ಪಿಸಿಕೊಳ್ಳಬಾರದು. ಖಂಡಿತವಾಗಿಯೂ ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]

  • ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ರಾಜ್ಯದಲ್ಲಿ ಪಠ್ಯಪುಸ್ತಕ ಸಂಘರ್ಷ ಕೊನೆ ಮೊದಲಿಲ್ಲದೇ ನಡೆಯುತ್ತಿರುವಾಗಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿದ ಹೇಳಿಕೆಯೊಂದು ಗಮನ ಸೆಳೆದಿದೆ. ಪೃಥ್ವಿರಾಜ್ ಸಿನಿಮಾ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಅವರು, ದುರಾದೃಷ್ಟವಶಾತ್ ನಮ್ಮ ಚರಿತ್ರೆಯ ಪುಸ್ತಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರಂತಹ ರಾಜರ ಬಗ್ಗೆ ಕೇವಲ 2-3 ಸಾಲುಗಳಷ್ಟೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸದ ಪಠ್ಯಪುಸ್ತಕಗಳಲ್ಲಿ ಭಾರತೀಯ ರಾಜರ ಬಗ್ಗೆ ಜಾಸ್ತಿ ಉಲ್ಲೇಖವನ್ನು ಕಾಣುವುದಿಲ್ಲ. ದುರದೃಷ್ಟವಶಾತ್, ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಬಗ್ಗೆ ಕೇವಲ ಎರಡು-ಮೂರು ಸಾಲುಗಳಿವೆ. ಆದರೆ ಆಕ್ರಮಣಕಾರರು, ಮೊಘಲರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ ಎಂದರು.

    ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎರಡರ ಮಧ್ಯೆ ಬ್ಯಾಲೆನ್ಸ್ ಇರುವಂತೆ ಇತಿಹಾಸ ಪಠ್ಯಗಳನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಮೊಘಲರ ಆಡಳಿತದ ಬಗ್ಗೆ ತಿಳಿದುಕೊಳ್ಳುವುದು ನಮಗೆ ಮುಖ್ಯ. ಅದೇ ಸಂದರ್ಭದಲ್ಲಿ ನಮ್ಮ ರಾಜರ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಫಿಸಿದ್ದು, ಭಾರತೀಯ ಚಲನಚಿತ್ರೋದ್ಯಮವು ಜಾಗತಿಕವಾಗಿ ತೆರೆದುಕೊಳ್ಳಲು ಮೋದಿ ಅವರಿಂದ ಸಾಧ್ಯವಾಯಿತು ಎಂದು ಧನ್ಯವಾದ ಹೇಳಿದರು.

    ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ ‘ಪೃಥ್ವಿರಾಜ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಚಾರವನ್ನು ಬರದಿಂದ ಮಾಡುತ್ತಿದೆ.

  • ಕೇಂದ್ರ ಗೃಹ ಸಚಿವ ಅಮಿತಾ ಶಾ ನೋಡಲಿದ್ದಾರೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ

    ಕೇಂದ್ರ ಗೃಹ ಸಚಿವ ಅಮಿತಾ ಶಾ ನೋಡಲಿದ್ದಾರೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ

    ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೇಂದ್ರ ಸರ್ಕಾರದ ಜೊತೆ ಒಂದೊಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ರಾಷ್ಟ್ರಪ್ರೇಮವನ್ನು ಸಾರುವಂತಹ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಹೀಗಾಗಿ ಅಕ್ಷಯ್ ಕುಮಾರ್ ಸಿನಿಮಾ ಬಂದಾಗೆಲ್ಲ ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಮತ್ತು ಸಂಸದರು ಅವರು ಚಿತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

    ಈ ಬಾರಿ ಅಕ್ಷಯ್ ಕುಮಾರ್ ‘ಪೃಥ್ವಿರಾಜ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತು ಚಿತ್ರತಂಡ ಅಮಿತ್ ಶಾ ಜೊತೆ ಮಾತುಕತೆ ಕೂಡ ಆಡಿದೆ ಎಂದು ಹಾಗೂ ಅವರು ಕೂಡ ಸಿನಿಮಾವನ್ನು ನೋಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಇದೇ ಜೂನ್ 3 ರಂದು ಪೃಥ್ವಿರಾಜ್ ಸಿನಿಮಾ ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಜೂ 1 ರಂದು ಚಿತ್ರತಂಡವು ದೆಹಲಿಯಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಈ ವಿಶೇಷ ಪ್ರದರ್ಶನಕ್ಕೆ ಕೇಂದ್ರ ಹಲವು ಮಂತ್ರಿಗಳನ್ನು ಮತ್ತು ಸಂಸದರನ್ನು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಲಾಗಿದ್ದು, ಅಂದೇ ಅಮಿತ್ ಶಾ ಅವರು ಕೂಡ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಈ ಸಿನಿಮಾವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಲಾಂಛನದಲ್ಲಿ ತಯಾರಾಗಿದೆ. ಪೃಥ್ವಿರಾಜ್ ಚಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ವೀರ ಪೃಥ್ವಿರಾಜ್ ಅವರ ಹೋರಾಟದ ಕಥೆಯನ್ನು ಚಿತ್ರ ಹೊಂದಿದೆ. ಯುದ್ಧ ಸನ್ನಿವೇಶಗಳು ಸೇರಿದಂತೆ ಅಚ್ಚರಿ ಪಡೆಯುವಂತಹ ಅನೇಕ ಸನ್ನಿವೇಶಗಳು ಈ ಸಿನಿಮಾದಲ್ಲಿವೆ.

  • ಬಾಲಿವುಡ್ ಚೇತರಿಕೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್: ಮೋಡಿ ಮಾಡ್ತಾರಾ ಮಾಜಿ ವಿಶ್ವಸುಂದರಿ?

    ಬಾಲಿವುಡ್ ಚೇತರಿಕೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್: ಮೋಡಿ ಮಾಡ್ತಾರಾ ಮಾಜಿ ವಿಶ್ವಸುಂದರಿ?

    ಆರ್.ಆರ್.ಆರ್ ಮತ್ತು ಕೆಜಿಎಫ್ 2 ಸಿನಿಮಾದಿಂದಾಗಿ ಅಕ್ಷರಶಃ ನಲುಗಿದೆ ಬಾಲಿವುಡ್. ಬಿಟೌನ್ ನಲ್ಲಿ ದಕ್ಷಿಣದ ಸಿನಿಮಾಗಳು ನೂರಾರು ಕೋಟಿ ಬಾಚುತ್ತಿವೆ. ಹೀಗಾಗಿ ಅಲ್ಲಿನ ನಿರ್ಮಾಪಕರು, ನಿರ್ದೇಶಕರು ನಿದ್ದೆಗೆಟ್ಟು ಕೂತಿದ್ದಾರೆ. ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ತತ್ತರಿಸುತ್ತಿದ್ದ ಬಾಲಿವುಡ್ ನಲ್ಲಿ ಭರವಸೆಯ ಸಿನಿಮಾ ಎನ್ನುವಂತೆ ಪೃಥ್ವಿರಾಜ್ ಮೂಡಿ ಬಂದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಇಂದು ಪೃಥ್ವಿರಾಜ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಇಡೀ ಸಿನಿಮಾ ಎಷ್ಟೊಂದು ಅದ್ಧೂರಿಯಾಗಿ ಮೂಡಿ ಬಂದಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಯುದ್ಧದ ಸನ್ನಿವೇಶಗಳು ಸೇರಿದಂತೆ ಹಾಕಿರುವ ಸೆಟ್ ಸಿನಿಮಾದ ಗೆಲುವಿಗೆ ಸಾಕ್ಷಿ ಅನ್ನುವಂತಿವೆ. ಹಾಗಾಗಿ ಬಾಲಿವುಡ್ ಗೆ ಈ ಸಿನಿಮಾ ಚೇತರಿಕೆಯ ಟಾನಿಕ್ ಎಂದು ಕರೆಯಲಾಗುತ್ತಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಅದ್ಭುತವಾಗಿ ಅಕ್ಷಿ ಕಾಣಿಸಿಕೊಂಡಿದ್ದಾರೆ. ಮ್ಯಾನರಿಸಂ ಮತ್ತು ಲುಕ್ ಹೇಳಿ ಮಾಡಿಸಿದಂತಿವೆ. ಅಕ್ಷಯ್ ಕುಮಾರ್ ಜತೆ ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪಾತ್ರ ಮಾಡಿರುವುದರಿಂದ ಬಾಲಿವುಡ್ ಪಾಲಿಗೆ ಪೃಥ್ವಿರಾಜ್ ಸಿನಿಮಾ ಅಕ್ಷಯಪಾತ್ರೆ ಆಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಈ ಸಿನಿಮಾದ ಮೂಲಕ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಪೃಥ್ವಿರಾಜ್ ಇವರ ಚೊಚ್ಚಲು ನಟನೆಯ ಸಿನಿಮಾ. ಈ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನೇ ನಿರ್ವಹಿಸಿದ್ದಾರೆ. ಟ್ರೇಲರ್ ನಲ್ಲೂ ಈ ಪಾತ್ರವನ್ನು ಹೈಲೈಟ್ ಮಾಡಲಾಗಿದೆ. ಈ ಸಿನಿಮಾ ಇವರಿಗೆ ಬ್ರೇಕ್ ನೀಡುವ ಎಲ್ಲ ಸೂಚನೆಯನ್ನೂ ನೀಡಿದೆ.

    ಸದ್ಯ ಬಿಡುಗಡೆ ಆಗಿರುವ ಪೃಥ್ವಿರಾಜ್ ಟ್ರೇಲರ್ ಅದ್ದೂರಿ ಮೇಕಿಂಗ್ ನಿಂದ ಕೂಡಿದ್ದು, ಕಾಸ್ಟ್ಯೂಮ್, ಸೆಟ್, ಯುದ್ಧ ಮತ್ತು ಭಾರೀ ಗ್ರಾಫಿಕ್ಸ್ ಕಾರಣದಿಂದಾಗಿ ಕುತೂಹಲ ಮೂಡಿಸಿದೆ. ಈ ವರ್ಷದಲ್ಲಿ ತೆರೆ ಕಾಣುತ್ತಿರುವ ಮೊದಲ ಬಾಲಿವುಡ್ ನ ಅದ್ಧೂರಿ ಸಿನಿಮಾ ಇದಾಗಿದ್ದು, ಬಾಲಿವುಡ್ ಸಿನಿಮಾ ರಂಗಕ್ಕೆ ಹಿಡಿದಿರುವ ಗ್ರಹಣವನ್ನು ಈ ಸಿನಿಮಾ ಬಿಡಿಸಲಿದೆ.

  • ಕೌಟುಂಬಿಕ ಸಿನಿಮಾದಲ್ಲಿ ಮಹಾಬಲಿ

    ಕೌಟುಂಬಿಕ ಸಿನಿಮಾದಲ್ಲಿ ಮಹಾಬಲಿ

    ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್‌ ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ ’ಮಹಾಬಲಿ’ ಎನ್ನುವ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮಾಲಸಾಂಭ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ವ್ಯಾಪಾರದೊಂದಿಗೆ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಗೆಳಯ ಆರ್ಯ ಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು. ಅದರ ಪರಿಣಾಮವೇ ಚಿತ್ರ ಬರಲು ಕಾರಣವಾಯಿತು. ಅಪ್ಪಟ್ಟ ಕುಟುಂಬಸಮೇತ ನೋಡಬಹುದಾದ ಕಥೆ ಇರಲಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಇಂದಿನ ಪ್ರಪಂಚದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿದೆ. ಆತನಿಗೆ ಅವನದೇ ಆದಂತಹ ಸೀಮಿತ ಕುಟುಂಬ ಇರುತ್ತದೆ. ಅಂಥ ಒಂದು ಕುಟುಂಬದ ಮೌಲ್ಯವು ಯಾವ ಮಟ್ಟಕ್ಕೆ ಹೋಗ್ತಾ ಇದೆ. ಅದರ ಅರ್ಥ, ನಿಬಂದನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಸಾರಾಂಶವಾಗಿದೆ. ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ಪುತ್ರ ಪೃಥ್ವಿರಾಜ್‌ನನ್ನು ನಾಯಕನಾಗಿ ಪರಿಚಯಿಸಿದ್ದೇನೆ. ವೈಯಕ್ತಿಕ ಕಾರಣದಿಂದ ನಾಯಕಿ ಮಾನ್ವಿತರಾಜ್ ಬಂದಿಲ್ಲ.  ರಥಸಪ್ತಮಿ ಅರವಿಂದ ಹೊರತುಪಡಿಸಿ ಮಿಕ್ಕವರೆಲ್ಲೂ ಹೊಸಬರು. ಎಲ್ಲರಿಗೂ ತರಬೇತಿ ನೀಡಿ ಕ್ಯಾಮಾರ ಮುಂದೆ ನಿಲ್ಲಿಸಿರುವೆ ಎಂದರು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ವಾಸುದೇವ್‌ ಆಚಾಪುರ, ಕುಳ್ಳಯೋಗೀಶ್, ನಾಯಕಿಯ ತಾಯಿಯಾಗಿ ಕಾಣಿಸಿಕೊಂಡಿರುವ ಪುಷ್ಪನಾಯಕ್, ಚೇತನ್‌ಶೆಟ್ಟಿ, ಸೌಪರ್ಣಿಕ, ನೂತನ್, ಯುವರಾಜ್, ಪ್ರವೀಣ್‌ ರಾಜ್‌ಪುತ್ತೂರು, ಪ್ರದೀಪ್‌ ಮೆಂಥೆಲ್, ಉಮೇಶ್.ಕೆ.ಎಲ್, ಆಚಾರ್ಯರಾಘು ಮುಂತಾದವರ ತಾರಾಗಣದಲ್ಲಿ ಇದ್ದಾರೆ.

  • Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?

    Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?

    ಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಏ.14 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಮಾ.27ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಂಡಿದೆ. ಅವತ್ತು ಬೆಂಗಳೂರಿಗೆ ಪ್ರತಿಷ್ಠತ ಸ್ಟಾರ್ ಹೋಟೆಲ್ ನಲ್ಲಿ ಕೇವಲ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಅಂದು ಟ್ರೇಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

    ಮಾರ್ಚ್ 27ರ ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದ್ದು, ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಇದನ್ನೂ ಓದಿ : ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಅತಿಥಿಗಳು ಯಾರು?

    ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ. ಇದನ್ನೂ ಓದಿ:  ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    7 ಸಾವಿರ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್

    ಕೆಜಿಎಫ್ 2 ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳಲ್ಲಿ ಸಾವಿರ ಸಾವಿರ ಥಿಯೇಟರ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಇದನ್ನೂ ಓದಿ : ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

    ಅರೆಬಿಕ್ ಮತ್ತು ಇಂಗ್ಲಿಷ್ ನಲ್ಲಿ ಸಬ್ ಟೈಟಲ್

    ಐದು ಭಾಷೆಗಳ ಹೊರತಾಗಿ ಉಳಿದಂತೆ ಎಲ್ಲ ಭಾಷೆಯ ಚಿತ್ರಗಳಲ್ಲೂ ಇಂಗ್ಲಿಷ್ ನಲ್ಲಿ ಸಬ್ ಟೈಟಲ್ ಇರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಆದರೆ, ದುಬೈನಲ್ಲಿ ಮಾತ್ರ ಸಬ್ ಟೈಟಲ್ ಭಾಷೆ ಬದಲಾಗಲಿದೆ. ಇಲ್ಲಿ ಅರೆಬಿಕ್ ಭಾಷೆಯ ಸಬ್ ಟೈಟಲ್ ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಚೀನಾ ಸೇರಿದಂತೆ ಇತರ ಭಾಷೆಯ ಸಬ್ ಟೈಟಲ್ ಗೂ ಬೇಡಿಕೆಯಿದ್ದು, ಅಲ್ಲೆಲ್ಲ ಇಂಗ್ಲಿಷ್ ನಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

    70 ದೇಶಗಳಲ್ಲಿ ಕೆಜಿಎಫ್ 2 ಬಿಡುಗಡೆ

    ಜಪಾನ್, ಅಮೆರಿಕಾ, ಇಂಗ್ಲೆಂಡ್, ದುಬೈ ಹೀಗೆ 70ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ ನಿರ್ಮಾಪಕರು. ಈಗಾಗಲೇ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂದಿದ್ದು, ಅಷ್ಟೂ ದೇಶಗಳಲ್ಲೂ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಚಿತ್ರಕ್ಕೆ ಹೆಚ್ಚಿನ ಹಣವೂ ವಿದೇಶದಿಂದಲೇ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

    ಪ್ರಿ ರಿಲೀಸ್ ಇವೆಂಟ್ ಇಲ್ಲ

    ಕೋವಿಡ್ ನಿಯಮ ಮತ್ತು ಅಪ್ಪು ನಿಧನದಿಂದಾಗಿ ಈ ಬಾರಿ ಪ್ರಿ ರಿಲೀಸ್ ಇವೆಂಟ್ ಇರುವುದಿಲ್ಲ ಎಂದು ತಿಳಿಸಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ಪ್ರಿ ರಿಲೀಸ್ ಇವೆಂಟ್ ಮಾಡುವಂತೆ ನಿರ್ಮಾಪಕರಿಗೆ ಸಾಕಷ್ಟು ಒತ್ತಡವಿದ್ದು, ಬೇರೆ ಭಾಷೆಯಲ್ಲೂ ಪ್ರಿ ರಿಲೀಸ್ ಇವೆಂಟ್ ಮಾಡುವಂತೆ ಕೇಳುತ್ತಿದ್ದಾರೆ. ಆದರೆ, ಕೋವಿಡ್ ನಿಯಮ ಮತ್ತು ಅಪ್ಪು ನಿಧನದ ಕಾರಣದಿಂದಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿಲ್ಲ ಚಿತ್ರತಂಡ.

  • ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ –  ರಿಲೀಸ್‌ ಡೇಟ್‌ ಮುಂದಕ್ಕೆ

    ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ

    ಮುಂಬೈ: ಜನವರಿಯಲ್ಲಿ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗಬೇಕಾಗಿತ್ತು. ಆದರೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಥಿಯೇಟರ್ ಗಳಿಗೆ ಸರ್ಕಾರ ಕೆಲವು ನಿಯಮಗಳನ್ನು ಹಾಕಿದೆ. ಪರಿಣಾಮ ಜನವರಿಯಲ್ಲಿ ರಿಲೀಸ್ ಆಗಬೇಕಾಗಿದ್ದ ಹಲವು ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿದೆ.

    ಕಳೆದ ವರ್ಷವೂ ಕೋವಿಡ್ ಹಿನ್ನೆಲೆ ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿ ಈ ವರ್ಷ ರಿಲೀಸ್ ಆಗುವುದು ಪಕ್ಕಾ ಎನ್ನಲಾಗುತ್ತಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಸಖತ್ ಖುಷ್ ಆಗಿದ್ದರು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದರಿಂದ ಬಾಲಿವುಡ್ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಿರುವ ಸಿನಿಮಾಗಳ ರಿಲೀಸ್ ದಿನಾಂಕ ಮುಂದೆ ಹೋಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಲಾಕ್‍ಡೌನ್ ಆಗಲು ಬಿಡ್ಬೇಡಿ – ಮಂತ್ರಾಲಯ ಶ್ರೀ ಮನವಿ

    ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರ ‘ಪೃಥ್ವಿರಾಜ್’ ಮತ್ತು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘RRR’, ಪ್ರಭಾಸ್ ಅವರ ‘ರಾಧೆ ಶ್ಯಾಮ್’ ಮತ್ತು ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಸಿನಿಮಾಗಳ ನಿರ್ಮಾಪಕರು ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೆ ಹಾಕಲು ನಿರ್ಧರಿಸಲಾಗಿದೆ.

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

    ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಜಮೌಳಿ ನಿರ್ದೇಶನದ RRR ಸಿನಿಮಾ ಪ್ರಮುಖವಾಗಿತ್ತು. ಈ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್‍ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟಿಸಿದ್ದಾರೆ. ಚಿತ್ರವನ್ನು ಜನವರಿ 7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಫೋಷಿಸಿತ್ತು. ಆದರೆ ಈಗ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚಿತ್ರತಂಡವೇ ತಿಳಿಸಿದೆ.

    ಈ ಕುರಿತು ‘RRR’ ಸಿನಿಮಾವನ್ನು ನಿರ್ಮಿಸುತ್ತಿರುವ ‘ಡಿವಿವಿ ಎಂಟರ್‍ಟೈನ್‍ಮೆಂಟ್ಸ್’ ಜನವರಿ 1 ರಂದು ಟ್ವಿಟ್ಟರ್‌ನಲ್ಲಿ, ನಾವು ಎಲ್ಲವನ್ನು ಗಮನದಲ್ಲಿಟ್ಟುಕೊಂಡು, ಒತ್ತಾಯದ ಮೇರೆಗೆ ನಮ್ಮ ಸಿನಿಮಾದ ರಿಲೀಸ್ ಅನ್ನು ಮುಂದಕ್ಕೆ ಹಾಕಲಾಗುತ್ತಿದೆ. ಎಲ್ಲ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಲಾಗಿತ್ತು.

     

    View this post on Instagram

     

    A post shared by Taran Adarsh (@taranadarsh)

    ಅಕ್ಷಯ್ ಕುಮಾರ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ರಿಲೀಸ್ ಸಹ ಮುಂದೆ ಹೋಗುತ್ತಿದೆ. ಈ ಕುರಿತು ತರಣ್ ಆದರ್ಶ್ ಇನ್‍ಸ್ಟಾದಲ್ಲಿ, ‘ಪೃಥ್ವಿರಾಜ್’ ಸಿನಿಮಾ ಜನವರಿ 21 ರಂದು ತೆರೆಗೆ ಬರಲು ನಿರ್ಧರಿಸಲಾಗಿತ್ತು. ಆದರೆ, ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಬರೆದು ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿದ್ದರು. ಈ ಸಿನಿಮಾದ ಬಿಡುಗಡೆಯ ಹೊಸ ದಿನಾಂಕವನ್ನು ಇನ್ನೂ ತಿಳಿಸಿಲ್ಲ.

    30 ರ ಹರೆಯದಲ್ಲಿ ಕ್ರಿಕೆಟ್ ಆಡಲು ಹಿಂದಿರುಗುವ ಕ್ರಿಕೆಟಿಗನ ಕಥೆಯನ್ನು ಆಧಾರಿಸಿ ‘ಜೆರ್ಸಿ’ ಸಿನಿಮಾವನ್ನು ತಯಾರಿಸಲಾಗಿತ್ತು. ಈ ಸಿನಿಮಾವನ್ನು ಡಿಸೆಂಬರ್ 31 ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ಈ ಸಿನಿಮಾ 2019 ರ ತೆಲುಗು ಸಿನಿಮಾದ ‘ಜೆರ್ಸಿ’ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಶಾಹಿದ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್

     

    View this post on Instagram

     

    A post shared by Deepika Padukone (@deepikapadukone)

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾ ಸಹ ಜನವರಿ 25 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೋಂಕಿನ ಹಿನ್ನೆಲೆ ಈ ಸಿನಿಮಾವನ್ನು ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇಂದು ದೀಪಿಕಾ ಹುಟ್ಟುಹಬ್ಬದ ಹಿನ್ನೆಲೆ ಈ ಕುರಿತು ಅವರೇ ಇನ್‍ಸ್ಟಾದಲ್ಲಿ ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸಿನಿಮಾ ಓಟಿಟಿಯಲ್ಲಿ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.

    ಪ್ರಭಾಸ್ ಮತ್ತು ಪೂಜಾ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ಸಹ ರಿಲೀಸ್ ಮಾಡುವ ಯೋಜನೆಯಲ್ಲಿತ್ತು. ಆದರೆ ಈ ಚಿತ್ರತಂಡ ಸಹ ಸಿನಿಮಾವನ್ನು ಸಧ್ಯಕ್ಕೆ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದೆ.