Tag: ಪೂರ್ವ ಪೊಲೀಸ್ ಠಾಣೆ

  • ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೇ ಕೊಂದ ಪಾಪಿ ತಮ್ಮ

    ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೇ ಕೊಂದ ಪಾಪಿ ತಮ್ಮ

    ಮಂಡ್ಯ: ಹಣಕಾಸಿನ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯ ನಗರದ ವಿದ್ಯಾನಗರದಲ್ಲಿ ಜರುಗಿದೆ.

    ರೇಣುಕಾಪ್ರಸಾದ್ ಎಂಬಾತ ತನ್ನ ಅಣ್ಣ ಮಹೇಶ್(45)ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರೇಣುಕಾಪ್ರಸಾದ್ ಮಹೇಶ್‍ಗೆ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನು ನೀಡಿ ಸಾಲ ಕೊಡಿಸಿದ್ದರು. ಆದರೆ ಮಹೇಶ್ ಸರಿಯಾಗಿ ಸಾಲದ ಕಂತನ್ನು ಪಾವತಿ ಮಾಡದ ಕಾರಣ ಸಂಘದವರು ರೇಣುಕಾಪ್ರಸಾದ್ ಅವರನ್ನು ನಿಮ್ಮ ಅಣ್ಣ ಕಂತು ಕಟ್ಟಿಲ್ಲ ಎಂದು ಕೇಳುತ್ತಿದ್ದರು. ಇದೇ ವಿಚಾರಕ್ಕೆ ಹಲವು ದಿನಗಳಿಂದ ಅಣ್ಣ-ತಮ್ಮಂದಿರ ನಡುವೆ ಜಗಳವಾಗುತ್ತಿತ್ತು.  ಇದನ್ನೂ ಓದಿ: ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಕಂಡ್ರೆ ಬಿಜೆಪಿಗೆ ಆಗ್ತಿರಲಿಲ್ಲ, ಈಗ ನಾಟಕ ಆಡ್ತಾರೆ: ಸಿದ್ದರಾಮಯ್ಯ

    ಮಹೇಶ್ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ನನ್ನ ವ್ಯಾಪಾರದಲ್ಲಿ ಲಾಸ್ ಆಗುತ್ತಿದೆ ಹೀಗಾಗಿ ಕಂತು ಕಟ್ಟಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದರು. ಆದರೆ ಮಹೇಶ್ ವ್ಯಾಪಾರ ಮಾಡಿದ ಹಣನ್ನು ಜೂಜಾಡಿ ಕಳೆಯುತ್ತಿದ್ದ ಎಂದು ಸಹ ಕೆಲವರು ಆರೋಪ ಮಾಡುತ್ತಿದ್ದಾರೆ.

    ಇದೇ ಕಾರಣಕ್ಕೆ ನಿನ್ನೆ ರಾತ್ರಿ ಅಣ್ಣನನ್ನು ಮನೆಯ ಹತ್ತಿರ ಕರೆಸಿಕೊಂಡು ಕಂತಿನ ವಿಚಾರವನ್ನು ಕೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಡುವ ಹಂತಕ್ಕೆ ತಲುಪಿದೆ. ಈ ಪರಿಣಾಮ ರೇಣುಕಾಪ್ರಸಾದ್ ಮಹೇಶ್‍ಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ:  ನಾನು ಕಾಂಗ್ರೆಸ್‍ಗೆ ಹೋಗ್ತೀನೆಂದು ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ: ಶಿವಲಿಂಗೇಗೌಡ

    ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೇಣುಕಾಪ್ರಸಾದ್‍ನನ್ನು ಹುಡುಕುತ್ತಿದ್ದಾರೆ.