Tag: ಪೂರ್ವದಿಂದ ಪಶ್ಚಿಮ ಯಾತ್ರೆ

  • ಭಾರತ್‌ ಜೋಡೋ ಯಾತ್ರೆ ಆಯ್ತು.. ಈಗ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಗೆ ಕಾಂಗ್ರೆಸ್‌ ಪ್ಲಾನ್‌

    ಭಾರತ್‌ ಜೋಡೋ ಯಾತ್ರೆ ಆಯ್ತು.. ಈಗ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಗೆ ಕಾಂಗ್ರೆಸ್‌ ಪ್ಲಾನ್‌

    ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (ದಕ್ಷಿಣದಿಂದ ಉತ್ತರ) ಭಾರತ್‌ ಜೋಡೋ ಯಾತ್ರೆ (Bharat Jodo Yatra) ಮೂಲಕ ದೇಶದ ಗಮನ ಸೆಳೆದಿದ್ದ ಕಾಂಗ್ರೆಸ್‌ (Congress) ಈಗ ಪೂರ್ವದಿಂದ ಪಶ್ಚಿಮಕ್ಕೆ (East to West) ಮತ್ತೊಂದು ಯಾತ್ರೆ ಕೈಗೊಳ್ಳಲು ಪ್ಲಾನ್‌ ಮಾಡಿದೆ.

    ಕಾಂಗ್ರೆಸ್‌ನ ಮತ್ತೊಂದು ಯಾತ್ರೆ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ (Jairam Ramesh) ಮಾಹಿತಿ ಹಂಚಿಕೊಂಡಿದ್ದಾರೆ. ಸಾಕಷ್ಟು ಉತ್ಸಾಹ ಮತ್ತು ಶಕ್ತಿ ಇದೆ. ವೈಯಕ್ತಿಕವಾಗಿ ಇದು ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯ ಸ್ವರೂಪವು, ದಕ್ಷಿಣದಿಂದ ಉತ್ತರಕ್ಕೆ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನಗೀಗ 52 ವಯಸ್ಸು.. ಈಗಲೂ ಸ್ವಂತ ಮನೆಯೇ ಇಲ್ಲ: ರಾಹುಲ್‌ ಗಾಂಧಿ

    ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯು ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ನಡೆಯಬಹುದು ಎಂದು ಜೈರಾಮ್‌ ಸುಳಿವು ಕೊಟ್ಟಿದ್ದಾರೆ.

    ಈ ಮಾರ್ಗದಲ್ಲಿ ಕಾಡುಗಳು, ನದಿಗಳು ಹೆಚ್ಚಾಗಿವೆ. ಪ್ರಮುಖವಾಗಿ ಇದು ಪಾದಯಾತ್ರೆಯಾಗಲಿದೆ. ಹೊಸ ಯಾತ್ರೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಜೈರಾಮ್ ರಮೇಶ್, ಮುಂಬರುವ ಏಪ್ರಿಲ್ ಮತ್ತು ನವೆಂಬರ್‌ನಲ್ಲಿ ರಾಜ್ಯಗಳಿಗೆ ಚುನಾವಣೆಗಳು ನಡೆಯಬಹುದು. ಹೀಗಾಗಿ ಜೂನ್‌ಗಿಂತ ಮೊದಲು ಅಥವಾ ನವೆಂಬರ್‌ಗಿಂತ ಮೊದಲು ಯಾತ್ರೆಯನ್ನು ಕೈಗೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

    ಈ ಯಾತ್ರೆಯು ಭಾರತ್ ಜೋಡೋ ಯಾತ್ರೆಗಿಂತ ಕಡಿಮೆ ಅವಧಿಯದ್ದಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಈ ಬಗ್ಗೆ ಹೆಚ್ಚಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.