Tag: ಪೂರ್ಣಿಮಾ

  • ಚಿಕಿತ್ಸೆಗಾಗಿ ಅಮೆರಿಕಗೆ ಹೊರಟಿರುವ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಚಿಕಿತ್ಸೆಗಾಗಿ ಅಮೆರಿಕಗೆ ಹೊರಟಿರುವ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಟ ಶಿವರಾಜ್‌ಕುಮಾರ್ (Shivarajkumar) ಇಂದು (ಡಿ.18) ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿದ್ದಾರೆ. ಈ ಹಿನ್ನೆಲೆ ಪೂರ್ಣಿಮಾ ರಾಮ್‌ಕುಮಾರ್ ಕುಟುಂಬವು ಸಹೋದರ ಶಿವಣ್ಣನ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?

    ಇದೇ ಡಿ.24ರಂದು ಶಿವಣ್ಣಗೆ ಅಮೆರಿಕದಲ್ಲಿ ಸರ್ಜರಿ ನಡೆಯಲಿದೆ. ಹಾಗಾಗಿ ಇಂದು ರಾತ್ರಿ ಪತ್ನಿ ಮತ್ತು ಮಗಳೊಂದಿಗೆ ಯುಎಸ್‌ಗೆ ತೆರಳಲಿದ್ದಾರೆ. ಈ ಹಿನ್ನೆಲೆ ಮಕ್ಕಳಾದ ಧನ್ಯಾ, ಧಿರೇನ್ ಜೊತೆ ಸಹೋದರಿ ಪೂರ್ಣಿಮಾ (Poornima Ramkumar) ಬೆಂಗಳೂರಿನ ನಾಗವಾರದಲ್ಲಿರುವ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಶಿವಣ್ಣನ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ, ನೆಟ್ಟನ ನಟನನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ.

    ಇನ್ನೂ ಈಗಾಗಲೇ ಶಿವಣ್ಣ ಮನೆಗೆ ಸುದೀಪ್, ಬಿ.ಸಿ ಪಾಟೀಲ್, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ ಭೇಟಿಯಾಗಿದ್ದಾರೆ. ಶಿವಣ್ಣರನ್ನು ಸುದೀಪ್ ತಬ್ಬಿಕೊಂಡು ಸರ್ಜರಿ ಮುಗಿಸಿ ಆರಾಮ ಆಗಿ ಬನ್ನಿ ಎಂದು ಧೈರ್ಯ ತುಂಬಿದ್ದಾರೆ.

  • ಇಂದು ಮಾಜಿ ಶಾಸಕಿ ಕಾಂಗ್ರೆಸ್ ಸೇರ್ಪಡೆ- ಪೂರ್ಣಿಮಾ ದಂಪತಿಗೆ ಡಿಕೆಶಿ ಬಿಗ್ ಆಫರ್?

    ಇಂದು ಮಾಜಿ ಶಾಸಕಿ ಕಾಂಗ್ರೆಸ್ ಸೇರ್ಪಡೆ- ಪೂರ್ಣಿಮಾ ದಂಪತಿಗೆ ಡಿಕೆಶಿ ಬಿಗ್ ಆಫರ್?

    ಬೆಂಗಳೂರು: ಆಪರೇಷನ್ ಹಸ್ತದ ನಾಗಾಲೋಟ ಮುಂದುವರಿಕೆಯಾಗಿದೆ. ಒಂದೇ ತಿಂಗಳಲ್ಲಿ ಎರಡು ಆಪರೇಷನ್ ಹಸ್ತದ ಕಾರ್ಯಾಚರಣೆಯಾಗಿದ್ದು, ಇಂದು ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ (Poornima) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

    ಪತಿ ಶ್ರೀನಿವಾಸ್ ಹಾಗೂ ಹಲವು ಬೆಂಬಲಿಗರ ಜೊತೆ ಕಾಂಗ್ರೆಸ್ (Congress) ಬಾವುಟ ಹಿಡಿಯಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಕೆಆರ್ ಪುರ ಕ್ಷೇತ್ರದ ಟಿಕೆಟ್ ನೀಡೋದಾಗಿ ಪೂರ್ಣಿಮಾ ಶ್ರೀನಿವಾಸ್‍ಗೆ ಭರವಸೆ ನೀಡಲಾಗಿದೆ. ಪತಿ ಶ್ರೀನಿವಾಸ್‍ಗೆ ಪರಿಷತ್ ಸದಸ್ಯರಾಗಿ ಮಾಡುವುದಾಗಿ ಡಿಕೆಶಿ ಆಫರ್ ಕೊಟ್ಟಿದ್ದಾರಂತೆ.

    ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆ ಕೆಆರ್ ಪುರ ಮರು ವಶಕ್ಕೆ ಡಿಕೆಶಿ ದಾಳ ಉರುಳಿಸಿದ್ದು, ಹಾಲಿ ಶಾಸಕ ಬೈರತಿ ಬಸವರಾಜು ಸೋಲಿಸಲು ಪೂರ್ಣಿಮಾಗೆ ಟಿಕೆಟ್ ಕೊಡಿಸುವ ತಂತ್ರ ರೂಪಿಸಲಾಗಿದೆ. ಕೆಆರ್ ಪುರ ಕ್ಷೇತ್ರದಲ್ಲಿ ಈಗಲೂ ಪೂರ್ಣಿಮಾ ಶ್ರೀನಿವಾಸ್ ಪ್ರಭಾವ ಇದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಕೆಆರ್ ಪುರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ತಿಹಾರ್ ಜೈಲ್ ವಾರ್- ಡಿಕೆ ಬ್ರದರ್ಸ್‍ನಿಂದ ತಿರುಗುಬಾಣ ಅಸ್ತ್ರ ಪ್ರಯೋಗ

    ಕಳೆದ ಚುನಾವಣೆಯಲ್ಲೇ ಡಿಕೆಶಿ (DK Shivakumar) ಪೂರ್ಣಿಮಾಗೆ ಕೆಆರ್ ಪುರದ ಆಫರ್ ಕೊಟ್ಟಿದ್ರು. ಆದರೆ ಆಗ ಬರಲಾಗದೇ ಬಿಜೆಪಿಯಿಂದ (BJP) ಹಿರಿಯೂರು ಕ್ಷೇತ್ರದಲ್ಲೇ ಸ್ಪರ್ಧಿಸಿ ಪೂರ್ಣಿಮಾ ಪರಾಜಿತರಾಗಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತು ಆದೇಶ ಹಿಂಪಡೆದ ಬಿಜೆಪಿ

    ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತು ಆದೇಶ ಹಿಂಪಡೆದ ಬಿಜೆಪಿ

    ಚಿತ್ರದುರ್ಗ: ಚುನಾವಣೆ ಘೋಷಣೆ ಬೆನ್ನಲ್ಲೇ ಅಭ್ಯರ್ಥಿ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿರುವ ಬಿಜೆಪಿ (BJP) ಹಿರಿಯೂರು ಶಾಸಕಿ ಪೂರ್ಣಿಮಾ (Purnima) ಪತಿ ಡಿಟಿ ಶ್ರೀನಿವಾಸ್ (DT Srinivas) ಅಮಾನತು ಆದೇಶವನ್ನು ಹಿಂಪಡೆದಿದೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅವರು ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಬಂಡಾಯ (ಪಕ್ಷೇತರ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ್ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿದ್ದರು. ಈ ವೇಳೆ ಡಿಟಿ ಶ್ರೀನಿವಾಸ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

    ಆದರೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತಿಯೇ ಪತ್ನಿಗೆ ತಲೆನೋವಾಗದಿರಲಿ, ಬಿಜೆಪಿಗೆ ನಿಷ್ಠೆಯಿಂದ ಶ್ರಮಿಸಲಿ ಎಂಬ ಸದುದ್ದೇಶದಿಂದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ತಾರಕಕ್ಕೇರಿದ ಟಿಕೆಟ್ ವಾರ್- ಹಾಸನದಲ್ಲಿ ಕುಮಾರಸ್ವಾಮಿ V/S ರೇವಣ್ಣ ಫೈಟ್ ಶುರು ಆಗುತ್ತಾ?

    ಈ ಆದೇಶದಿಂದಾಗಿ ಫುಲ್ ಆಕ್ಟೀವ್ ಆಗಿರುವ ಶ್ರೀನಿವಾಸ್ ತಮ್ಮ ಪತ್ನಿ ಬೆನ್ನಿಗೆ ನಿಂತಿದ್ದು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹಗಲು, ಇರುಳೆನ್ನದೇ ಫೀಲ್ಡಿಗಿಳಿದು ಮತಭೇಟೆ ನಡೆಸುತ್ತಿದ್ದಾರೆ. ಇದು ಪೂರ್ಣಿಮಾ ಶ್ರೀನಿವಾಸ್‌ಗೆ ಬಿಜೆಪಿ ಕೊಟ್ಟಿರುವ ವರವೆನಿಸಿದೆ.

    ಹಾಗೆಯೇ ಶ್ರೀನಿವಾಸ್ ರೀ ಎಂಟ್ರಿ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀನಿವಾಸ್ ಅಭಿಮಾನಿಗಳು ಡಿಟಿಎಸ್‌ಗೆ ಸ್ವಾಗತದ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

  • ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ

    ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಮತ್ತು ಪುನೀತ್ ಸಹೋದರಿ ಪೂರ್ಣಿಮಾ ರಾಜ್ ಕುಮಾರ್ ಜಂಟಿಯಾಗಿ ಇಂದು ಬೆಂಗಳೂರಿನ ಕಾಕ್ಸ್ ಟೌನ್ ನ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದ ಐದು ಜನ ಗಂಡು ಮಕ್ಕಳಿಗೆ ‘ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ್ದಾರೆ. ಆಯಾ ಮಕ್ಕಳ ತಾಯಿಯಂದಿರು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪುನೀತ್ ಜನಿಸಿದ ಒಂದು ದಿನ ಮುಂಚೆಯೇ ತಮ್ಮ ಮಕ್ಕಳಿಗೆ ನೆಚ್ಚಿನ ನಟನ ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ಐದೂ ಮಕ್ಕಳಿಗೆ ಪುನೀತ್ ಹೆಸರಿಟ್ಟು ಹಾರೈಸಿದ ತಾರಾ ಮಾತನಾಡಿ, ‘ತಮ್ಮ ಮಕ್ಕಳಿಗೆ ಪುನೀತ್ ಅಂತ ಹೆಸರಿಡಬೇಕು ಎನ್ನುವುದು ಆ ಅಮ್ಮಂದಿರ ಆಸೆ ಆಗಿತ್ತು. ಹೀಗಾಗಿ ಪುನೀತ್ ಅವರ ಕುಟುಂಬವನ್ನು ಸಂಪರ್ಕಿಸಿ, ಅವರ ಉಪಸ್ಥಿತಿಯಲ್ಲೇ ಈ ಮಕ್ಕಳ ನಾಮಕರಣ ಮಾಡಿದ್ದೇವೆ. ಮಕ್ಕಳು ಪುನೀತ್ ರೀತಿಯಲ್ಲೇ ಜಗತ್ತಿಗೆ ಮಾದರಿ ಆಗಲಿ ಎಂದು ಹಾರೈಸಿದ್ದೇನೆ’ ಎಂದರು. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ನಾಳೆ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ. ಇದೇ ವೇಳೆಯೇ ಅವರ  ನಟನೆಯ ಕೊನೆಯ ಸಿನಿಮಾ ರಿಲೀಸ್ ಆಗುತ್ತಿದೆ. ವಾರದಿಂದ ಈ ಬಾರಿಯ ಹುಟ್ಟುಹಬ್ಬವನ್ನು ಪುನೀತ್ ಅವರ ಅನುಪಸ್ಥಿತಿಯಲ್ಲಿ ಹಾಜರಿಸಲು ನಾನಾ ರೀತಿಯಲ್ಲಿ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ.