Tag: ಪೂರ್ಣಚಂದ್ರ ತೇಜಸ್ವಿ

  • ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ

    ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ

    ಬೆಂಗಳೂರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕುವೆಂಪು ಅವರ ಚಿಂತನೆ ಹಾಗೂ ನೆರಳಿನಿಂದ ಹೊರಬಂದು ಅವರದ್ದೇ ಚಿಂತನೆಗಳನ್ನು ರೂಢಿಸಿಕೊಂಡ ವಿಶಿಷ್ಟ ಹಾಗೂ ಅದ್ಭುತ ಸಾಹಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah ) ಸ್ಮರಿಸಿದರು.

    ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುನಿಸ್ವಾಮಿ ಆ್ಯಂಡ್ ಸನ್ಸ್, ಎಂ.ಚಂದ್ರಶೇಖರ್ ಪ್ರತಿಷ್ಠಾನ ಬೆಂಗಳೂರು ಹಾಗೂ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ‘ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’- ಹದಿನಾಲ್ಕು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ವಿಭಿನ್ನ ಚಿಂತಕ
    ಕುವೆಂಪು ಅವರು ಒಬ್ಬ ಮಹಾನ್ ಕವಿಯಾದರೂ ತೇಜಸ್ವಿಯವರು ಅವರದ್ದೇ ವಿಭಿನ್ನ ಆಲೋಚನೆಗಳನ್ನು ಬೆಳೆಸಿಕೊಂಡು ಒಬ್ಬ ಪರಿಸರವಾದಿ, ಸಾಹಿತಿಯಾಗಿ ಬೆಳೆದರು. ತೇಜಸ್ವಿಯವರೊಂದಿಗಿನ (Poornachandra Tejaswi) ತಮ್ಮ ಹಲವು ವರ್ಷಗಳ ಸಂಬಂಧವನ್ನು ಮೆಲುಕು ಹಾಕಿದ ಮುಖ್ಯಮಂತ್ರಿ, ರಾಮದಾಸ್ ಎಂಬ ಕನ್ನಡ ಪ್ರಾಧ್ಯಾಪಕರಿಗೆ ಸ್ನೇಹಿತರಾಗಿದ್ದ ತೇಜಸ್ವಿಯವರು ಮೈಸೂರಿಗೆ ಬಂದಾಗ ರಾಮದಾಸ್ ಅವರ ಮನೆಯಲ್ಲಿ ಭೇಟಿ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದರು.

    ಸಾಮಾಜಿಕ ಬದಲಾವಣೆ ಬಗ್ಗೆ ಕಾಳಜಿ
    ತೇಜಸ್ವಿಯವರು ಸಾಹಿತಿಯಾಗಿ ಮಾತನಾಡುವುಕ್ಕಿಂತಲೂ ಸಮಾಜದ ಬದಲಾವಣೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅವರಲ್ಲಿ ಹೊಸ ಚಿಂತನೆಗಳಿದ್ದವು. ಸ್ನೇಹಜೀವಿ ಹಾಗೂ ಸ್ನೇಹಿತರ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದರು. ತೇಜಸ್ವಿ ಅವರ ಮಾತುಗಳನ್ನು ಕೇಳಲು ನಾನು ಬಹಳ ಉತ್ಸುಕನಾಗಿರುತ್ತಿದ್ದೆ ಎಂದರು. ತೇಜಸ್ವಿ ಅವರ ತೋಟದಲ್ಲಿ ಉಳಿಯಬೇಕು ಎಂದು ನನಗೆ ಬಹಳ ಸಾರಿ ಕೇಳಿದ್ದರು. ಆದರೆ ಉಳಿದುಕೊಳ್ಳುವ ಸಂದರ್ಭ ಒದಗಿ ಬರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಸಿಎಂ ಸಿದ್ದರಾಮಯ್ಯ

    ಸಮಯ ದೊರೆತಾಗ ಪುಸ್ತಕ ಓದುವೆ
    ತೇಜಸ್ವಿ ಕನ್ನಡನಾಡು ಕಂಡ ಅದ್ಭುತ ಲೇಖಕ. ಅವರ ಕೃತಿ ಜಗತ್ತು ಪುಸ್ತಕಗಳನ್ನು 14 ಸಂಪುಟಗಳಲ್ಲಿ ಶಿವಾರೆಡ್ಡಿಯವರ ಸಂಪಾದಕತ್ವದಲ್ಲಿ ಇಂದು ಲೋಕಾರ್ಪಣೆ ಮಾಡಲಾಗಿದೆ. ಸಮಯ ದೊರೆತಾಗ ಪುಸ್ತಕಗಳನ್ನು ಓದಲು ಪ್ರಯತ್ನ ಮಾಡಲಾಗುವುದು ಎಂದರು.

    ಕೃತಿಗಳನ್ನು ಹೊರತರುವಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಕೃತಿಗಳನ್ನು ಸಂಪಾದಿಸಲು ಕೂಡ ಅಪಾರವಾದ ಕೆಲಸ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪ್ರೊ.ರವಿವರ್ಮ ಕುಮಾರ್. ಈ ಸಂದರ್ಭದಲ್ಲಿ ಮಾತನಾಡಿದರು. ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ಎಂ.ಸಿ ನರೇಂದ್ರ, ತೇಜಸ್ವಿ ಅವರ ಪುತ್ರಿಯರಾದ ಸುಸ್ಮಿತಾ ಹಾಗೂ ಈಶಾನ್ಯೆ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ.ಕೃಷ್ಣಾ ಮೊದಲಾದವರು ಉಪಸ್ಥಿತರಿದ್ದರು.

  • ‘ಹೆಜ್ಜಾರು’ವಿನ ಬ್ರೇಕ್ ಅಪ್ ಸಾಂಗ್ ರಿಲೀಸ್ : ಏನೇ ಸಿಕ್ತು ಮಳ್ಳಿ ನಿಂಗೆ?

    ‘ಹೆಜ್ಜಾರು’ವಿನ ಬ್ರೇಕ್ ಅಪ್ ಸಾಂಗ್ ರಿಲೀಸ್ : ಏನೇ ಸಿಕ್ತು ಮಳ್ಳಿ ನಿಂಗೆ?

    ನ್ನಡದ ಮೊಟ್ಟ ಮೊದಲ ಪ್ಯಾರಲಲ್ ಸ್ಟೋರಿ ಮೂವಿ ಎಂಬ ಹೆಗ್ಗಳಿಕೆಯೊಂದಿಗೆ ತೆರೆಗೆ ಬರಲು ಸಿದ್ದವಾಗಿದೆ ಹೆಜ್ಜಾರು (Hejjaru) ಸಿನಿಮಾ. ಚಿತ್ರ ತಂಡ ಈಗ ತನ್ನ ಸಿನಿಮಾದ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ. ಅದರ ಮೊದಲ ಹಂತವಾಗಿ ಚಿತ್ರದ ಮೊದಲನೇ ಹಾಡನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಕಡಿಮೆ ಸಮಯದಲ್ಲೇ ಅದು ಹಿಟ್ ಲಿಸ್ಟ್ ಸೇರಿರುವ ಸಂಭ್ರಮದಲ್ಲಿದೆ ಚಿತ್ರತಂಡ. ‘ನೀನೇ ಸಾಕಿದಾ ಗಿಣಿ’ ಹಾಡಿನಿಂದ (Song)  ‘ಹಂಗೋ ಹಿಂಗೋ ಇದ್ದೇ ನಾನು’ ಹಾಡಿನವರೆಗೂ ಹಿಟ್ ಆಗಿರುವ ಲೆಜೆಂಡರಿ ಬ್ರೇಕಪ್ ಹಾಡುಗಳ ಸಾಲಿಗೆ ‘ಏನೇ ಸಿಕ್ತು ಮಳ್ಳಿ ನಿಂಗೆ?’ ಕೂಡ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ನಿರ್ದೇಶಕ ಹರ್ಷಪ್ರಿಯ (Harshapriya) ಅವರ ಅಭಿಪ್ರಾಯ.

    ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಅವರು ಕಥೆಯ ಇನ್ಟೆನ್ಸಿಟಿ ಬೇಡುವ ವಿಶೇಷ ರೀತಿಯ ಹಾಡುಗಳನ್ನು ಕಂಪೋಸ್ ಮಾಡಿದ್ದು ಈ ಹಾಡಿಗಾಗಿ ತಾವು ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿರುವುದಕ್ಕೆ  ಕೇಳುಗರಿಗೆ ಧನ್ಯವಾದ ತಿಳಿಸಿದ್ದಾರೆ, ಹಿಟ್ ಸಾಂಗ್ಗಳ ಸರದಾರ ವಿಜಯ್ ಪ್ರಕಾಶ್ (Vijay Prakash) ಅವರ ಧ್ವನಿ ಈ  ಹಾಡಿಗಿದೆ.  ಇನ್ನು ಕಿರುತೆರೆಯ ಪುಟ್ಟಗೌರಿ ಮದುವೆ, ಅಕ್ಕ, ಗೀತಾ, ನಾಗಿಣಿ 2. ರಾಣಿ, ರಾಮಾಚಾರಿ ಮೊದಲಾದ ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಕೆ ಎಸ್ ರಾಮ್ ಜೀ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಭಜರಂಗಿ ಮೋಹನ್ ಕೊರಿಯಾಗ್ರಫಿಯಲ್ಲಿ ಮೂಡಿ ಬಂದಿರುವ ಹುಕ್ ಸ್ಟೆಪ್ಗಳು ಈಗಿನ್ ರೀಲ್ಸ್ ಪ್ರಿಯರಿಗೆ ಹಬ್ಬವಾಗಿವೆ.

    ಮೊದಲ ಬಾರಿ ಹಿರಿತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಭಗತ್ ಆಳ್ವಾ ತಮ್ಮ ಮೊದಲ ಚಿತ್ರದಲ್ಲೇ ಇಂತಹದ್ದೊಂದು ಮಾಸ್ ಸಾಂಗಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ ಖುಶಿಯಲ್ಲಿದ್ದು ಜನರ ಪ್ರತಿಕ್ರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.  ಖಾಸಗಿ ಪುಟಗಳು ಚಿತ್ರದಿಂದ ಪರಿಚಿತರಾಗಿರುವ ಲಿಯೋನಿಲ್ಲ ಶ್ವೇತಾ ಡಿಸೋಜಾ ಹೆಜ್ಜಾರು ಚಿತ್ರದ ನಾಯಕ ನಟಿಯಾಗಿದ್ದು , ವಿಶಿಷ್ಟ ಪಾತ್ರಕ್ಕೆ ಜೀವತುಂಬಿದ್ದಾರೆ. ಹತ್ತಾರು ಹಿಟ್ ಧಾರಾವಾಹಿಗಳು ಮತ್ತು ಸಿನೆಮಾಗಳ ಗೀತರಚನಕಾರರಾಗಿ ಜನಪ್ರಿಯರಾಗಿದ್ದ ಹರ್ಷಪ್ರಿಯ  ಅವರು ಹೆಜ್ಜಾರು ಚಿತ್ರದ ಮೂಲಕ ನಿರ್ದೇಶಕರಾಗಿದ್ದು, ಸಿನೆಮಾದ  ಎಲ್ಲ ಹಾಡುಗಳನ್ನೂ ಅವರೇ ಬರೆದಿದ್ದಾರೆ.

    ತಮ್ಮ ಗರಡಿಯಲ್ಲಿ ಪಳಗಿದ ಹರ್ಷಪ್ರಿಯ ಅವರ ಈ ಗೀತೆಯನ್ನು ಮೆಚ್ಚಿರುವ ಪ್ರೇಮಕವಿ ಕಲ್ಯಾಣ್ ತಮ್ಮ ಶಿಷ್ಯನ ಮೊದಲ ಚಿತ್ರಕ್ಕೆ ಶುಭಕೋರಿದ್ದಾರೆ. ಜೊತೆಗೆ ಕನ್ನಡದ ಹಿರಿಯ ನಿರ್ದೇಶಕರುಗಳಾದ ಪ್ರೇಮ್ ಮತ್ತು ಶಶಾಂಕ್ ರವರು ಹಾಡಿನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು, ಸಿನೆಮಾ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

    ಚಿತ್ರದ ಕಾನ್ಸೆಪ್ಟ್ ಹೊಸದಾಗಿದ್ದು, ಪೋಸ್ಟರ್, ಪ್ರೊಮೋಷನಲ್ ಪ್ರೋಮೋಗಳಲ್ಲೂ ಚಿತ್ರತಂಡ ಹೊಸ ಹೊಸ ರೀತಿಯ ಪ್ರಯೋಗ ಮಾಡುತ್ತಿದೆ. ಭರವಸೆಯ ಪೋಷಕ ನಟ  ಗೋಪಾಲ್ ದೇಶಪಾಂಡೆ ಪ್ರಮುಖ ಪಾತ್ರದಲ್ಲಿದ್ದಾರೆ.  ಮತ್ತು ನಾಯಕ, ನಿರ್ದೇಶಕ  ನವೀನ್ ಕ್ರಷ್ಣ ಮೊದಲ ಬಾರಿಗೆ ನೆಗಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣಾ ಬಾಲರಾಜ್ ಕೂಡ  ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಖಾಕಿ ತೊಟ್ಟು ಎಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಹೆಜ್ಜಾರುವಿನ ಪಾತ್ರ ಹೊಸ ಬಗೆಯದು ಅಂತ ನಟ ಮುನಿ ಹೇಳಿಕೊಂಡಿದ್ದಾರೆ. ಕ್ಯಾಮೆರಾ ಹಿಂದೆಯೇ  ಬಿಸಿಯಾಗಿದ್ದ ವಿನೋದ್ ಭಾರತಿ ನಿರ್ದೇಶಕರ ಕೋರಿಕೆಗೆ ಒಪ್ಪಿ ಕ್ಯಾಮೆರಾ ಮುಂದೆ ಬಂದಿದ್ದು ಇವರೊಂದಿಗೆ ಬಹಳಷ್ಟು ರಂಗಭೂಮಿಯ ಹೊಸ ಕಲಾವಿದರನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

     

    ಈಗಾಗಲೇ ಚಿತ್ರ ಫೂಟೇಜ್ ನೋಡಿರುವವರು ಅಮರ್ ಗೌಡ ಅವರ ಕ್ಯಾಮೆರಾ ಕೈಚಳಕವನ್ನು ಮೆಚ್ಚಿದ್ದು ಮಲೆನಾಡಿನ ಮಳೆಯನ್ನು ಅವರು ಸೆರೆ ಹಿಡಿದಿರುವ ರೀತಿ ನೋಡುಗರಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಭಟ್ ಸಂಭಾಷಣೆ ಬರೆದಿದ್ದು ನರಸಿಂಹ ಸಾಹಸ ಸಂಯೋಚನೆ ಮಾಡಿದ್ದಾರೆ. ಗಿರೀಶ್ ಕನಕಪುರ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸ್ ಆಗುವುದರ ಜೊತೆಗೆ ಕಲಾ ವಿಭಾಗವನ್ನೂ ನಿಭಾಯಿಸಿದ್ದಾರೆ, ಅಜಿತ್ ಡ್ರಾಕುಲಾ ಸಂಕಲನ ಮಾಡಿದ್ದು.. ದಯಾನಂದ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

    ‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

    ತೀಶ್ ನೀನಾಸಂ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ, ಅಯೋಗ್ಯ ಸಿನಿಮಾದ ‘ಏನಮ್ಮಿ ಏನಮ್ಮಿ’ ಹಾಡು 108 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ದಾಖಲೆ ಬರೆದಿತ್ತು. ಇದೀಗ ಮತ್ತೆ ಈ ಜೋಡಿಯ ‘ಸಂಜೆ ಮೇಲೆ ಸುಮ್ನೆ ಹಂಗೆ’ (Sanje Mele) ಹಾಡು ವೈರಲ್ ಆಗಿದೆ. ನಿನ್ನೆಯಷ್ಟೇ ರಿಲೀಸ್ ಆಗಿರುವ ‘ಮ್ಯಾಟ್ನಿ’ (Matinee) ಸಿನಿಮಾದ ಈ ಗೀತೆ ಕಡಿಮೆ ಅವಧಿಯಲ್ಲೇ ಆರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್ ಆಗುತ್ತಿದೆ.

    ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಗೀತೆಗೆ ವಿಜಯ್ ಪ್ರಕಾಶ್ (Vijay Prakash) ದನಿಯಾಗಿದ್ದಾರೆ. ಇಡೀ ಹಾಡನ್ನು ಕಲರ್ ಫುಲ್ ಸೆಟ್ ನಲ್ಲಿ ಚಿತ್ರೀಕರಿಸಿದ್ದಾರೆ ನಿರ್ದೇಶಕ ಮನೋಹರ್. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸಖತ್ತಾಗಿ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಸತೀಶ್ ಮತ್ತು ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ಇರುವುದರಿಂದ ಹಾಡುಗಳು (Songs)ನಿರೀಕ್ಷೆ ಮೂಡಿಸಿದ್ದವು.

    ಏನಮ್ಮಿ ಏನಮ್ಮಿ ಅಂತ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ಜೋಡಿ ಸತೀಶ್ ನೀನಾಸಂ- ರಚಿತಾ ರಾಮ್ ಫೇರ್ ಮತ್ತೆ ಮ್ಯಾಟ್ನಿ ಸಿನಿಮಾದ ಮೂಲಕ ಒಂದಾಗಿದ್ದರಿಂದ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ  ಮನೋಹರ್ ಕಾಂಪಳ್ಳಿ ಕೂಡ ‘ಮ್ಯಾಟ್ನಿ’ ಸಿನಿಮಾವನ್ನು ತಯಾರಿಸಿದ್ದಾರೆ ಎನ್ನುವ ಮಾತಿದೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

    ‘ಮ್ಯಾಟ್ನಿ’ಯ ಟೀಸರ್ ಕಲರ್ ಫುಲ್ ಸೆಟ್, ಮನ ಸೆಳೆಯೋ ಬ್ಯಾಗ್ರೌಂಡ್ ಮ್ಯೂಸಿಕ್, ರಚ್ಚು ಲುಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡಿದ್ದರೆ, ಸತೀಶ್ ನೀನಾಸಂ ಪ್ರೇಮ ನಿವೇದನೆ, ಪ್ರೀತಿಯ ಸಾಲುಗಳು ಕಣ್ಮನ ಸೆಳೆದಿದ್ದವು.  ಮನೋಹರ್ ಕಾಂಪಲಿ ಇಬ್ಬರು ಸ್ಟಾರ್ ಜೋಡಿಗೆ ಸರಿ ಹೊಂದುವಂತಹ ಒಂದೊಳ್ಳೆ ಕಥೆ ಹೆಣೆದಿದ್ದು ನಿರ್ದೇಶಕನಾಗಿ ತಮ್ಮನ್ನು ಸಹ ಪ್ರೂವ್ ಮಾಡಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.

    ರೋಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಮ್ಯಾಟ್ನಿ ಚಿತ್ರದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲವರ್ ಬಾಯ್ ಅವತಾರವೆತ್ತಿದ್ದಾರೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸತೀಶ್ ಹಾಗೂ ರಚ್ಚು ಜೋಡಿ ಹಿಟ್ ನೀಡಿದ್ದು, `ಮ್ಯಾಟ್ನಿ’ ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆಯೂ ಹೆಚ್ಚಿದೆ.

    ಸದ್ಯ ಇದೊಂದು ಲವ್ ಸ್ಟೋರಿ ಎಂದಿರುವ ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.  ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಚಿತ್ರವನ್ನು ನಿರ್ಮಿಸಿದ್ದು, ಲೂಸಿಯ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಸಿನಿಮಾಟೋಗ್ರಫಿ. ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

     

    ಸತೀಶ್ ನೀನಾಸಂಗೆ(Satish Ninasum) ರಚಿತಾ ರಾಮ್ ಮಾತ್ರ ನಾಯಕಿಯಲ್ಲ, ಅದಿತಿ ಪ್ರಭುದೇವ (Aditi Prabhudeva) ಕೂಡ ನಟಿಸಿದ್ದಾರೆ. ರಚಿತಾ ರಾಮ್, ಅದಿತಿ ಪಾತ್ರಕ್ಕೂ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಮ್ಯಾಟ್ನಿ ಮೂಲಕ ಡಿಫರೆಂಟ್ ಆಗಿರೋ ಕಥೆ ಹೇಳೋದ್ದಕ್ಕೆ ಈ ಸ್ಟಾರ್ಸ್ ರೆಡಿಯಾಗಿದ್ದಾರೆ. ಮ್ಯಾಟ್ನಿ ಶೋ ಯಾವಾಗ ಎಂಬುದೇ ಈಗ ಪ್ರಶ್ನೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೇರ್ ಡೆವಿಲ್ ಮುಸ್ತಾಫಾಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ

    ಡೇರ್ ಡೆವಿಲ್ ಮುಸ್ತಾಫಾಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ

    ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಕೃತಿ ಆಧರಿಸಿದ ಶಶಾಂಕ್ ನಿರ್ದೇಶನದ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಈ ಹಿಂದೆ ಮನವಿ ಸಲ್ಲಿಸಿತ್ತು. ಚಿತ್ರತಂಡದ ಮನವಿಯನ್ನು ಪುರಸ್ಕರಿಸಿರುವ ಸರಕಾರ, ಚಿತ್ರಕ್ಕೆ ರಿಯಾಯಿತಿ ನೀಡಿದೆ.

    ತೆರಿಗೆ ವಿನಾಯಿತಿ (Tax Exemption) ನೀಡಿದರೆ, ಸಿನಿಮಾ ಮತ್ತಷ್ಟು ಜನರಿಗೆ ತಲುಪಲು ಸಾಧ್ಯವಾಗಬಹುದು ಹಾಗೂ ಕಡಿಮೆ ದರದಲ್ಲಿ ಚಿತ್ರ ತೋರಿಸಲು ಉತ್ಸಾಹ ಬರಬಹುದು ಎಂದು ಈ ಸಂದರ್ಭದಲ್ಲಿ ಚಿತ್ರತಂಡ ಹೇಳಿಕೊಂಡಿತ್ತು.  ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಸೇರಿದಂತೆ ಹಲವರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಎಲ್ಲರ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು

    ಚಿತ್ರದ ಗೆಲುವಿಗೆ ಚಿತ್ರತಂಡ ಹೇಳಿದ್ದೇನು?

    ಕಂಟೆಂಟ್ ಆಧಾರಿತ ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕಪ್ರಭು ಯಾವತ್ತೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಇದು ಡೇರ್ ಡೆವಿಲ್ ಮುಸ್ತಾಫಾ (Dare devil Mustafa) ಸಿನಿಮಾ ವಿಚಾರದಲ್ಲಿ ಪ್ರೂವ್ ಆಗಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಕಥೆಯಾಧಾರಿತ ಸಿನಿಮಾವಾಗಿರುವ ಡೇರ್ ಡೆವಿಲ್ ಮುಸ್ತಾಫಾ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಹಲವು  ವಾರಗಳ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮ ಆಯೋಜಿಸಿತ್ತು. ಕೇಕ್ ಕಟ್ ಮಾಡಿ ಸಕ್ಸಸ್ ಖುಷಿಯನ್ನು ಮಾಧ್ಯಮದವರ ಜೊತೆ ಹಂಚಿಕೊಂಡರು.

    ಡಾಲಿ ಧನಂಜಯ್ (Dolly Dhananjay) ಮಾತನಾಡಿ, ನಾನು ಇಲ್ಲಿ ಕುಳಿತು ಈ ಗೆಲುವನ್ನು ಸಂಭ್ರಮವನ್ನು ನೋಡಲು ಬಂದೆ. ನಾನು ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್ ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿದ್ದೀರಾ. contribution is the greatest philosophy ಎಂಬುದನ್ನು ನಾನು ನಂಬಿದ್ದೇನೆ. ಒಳ್ಳೆದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದು ತಿಳಿಸಿದರು.

    ನಿರ್ದೇಶಕ ಶಶಾಂಕ್ ಸೋಗಲ್ (Shashank Sogal)  ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು ಅಂತ ಫೋಕಸ್ ಮಾಡಿದ್ದೆ. ಎಂಜಿನಿಯರಿಂಗ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವೆ ಎಂದಾಗ ನಮ್ಮನ್ನು ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಧನಂಜಯ್ ಸರ್ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿರುವುದು. ಜನಕ್ಕೆ ರೀಚ್ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್ ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

    ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದೀರಾ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

     

    ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

  • ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಗೆದ್ದ ಡೇರ್ ಡೆವಿಲ್ ಮುಸ್ತಾಫಾ

    ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಗೆದ್ದ ಡೇರ್ ಡೆವಿಲ್ ಮುಸ್ತಾಫಾ

    ಕಂಟೆಂಟ್ ಆಧಾರಿತ ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕಪ್ರಭು ಯಾವತ್ತೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಇದು ಡೇರ್ ಡೆವಿಲ್ ಮುಸ್ತಾಫಾ (Dare devil Mustafa) ಸಿನಿಮಾ ವಿಚಾರದಲ್ಲಿ ಪ್ರೂವ್ ಆಗಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಕಥೆಯಾಧಾರಿತ ಸಿನಿಮಾವಾಗಿರುವ ಡೇರ್ ಡೆವಿಲ್ ಮುಸ್ತಾಫಾ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಮೂರನೇ ವಾರ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮ ಆಯೋಜಿಸಿತ್ತು. ಕೇಕ್ ಕಟ್ ಮಾಡಿ ಸಕ್ಸಸ್ ಖುಷಿಯನ್ನು ಮಾಧ್ಯಮದವರ ಜೊತೆ ಹಂಚಿಕೊಂಡರು.

    ಡಾಲಿ ಧನಂಜಯ್ (Dolly Dhananjay) ಮಾತನಾಡಿ, ನಾನು ಇಲ್ಲಿ ಕುಳಿತು ಈ ಗೆಲುವನ್ನು ಸಂಭ್ರಮವನ್ನು ನೋಡಲು ಬಂದೆ. ನಾನು ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್ ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿದ್ದೀರಾ. contribution is the greatest philosophy ಎಂಬುದನ್ನು ನಾನು ನಂಬಿದ್ದೇನೆ. ಒಳ್ಳೆದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದು ತಿಳಿಸಿದರು.

    ನಿರ್ದೇಶಕ ಶಶಾಂಕ್ ಸೋಗಲ್ (Shashank Sogal)  ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು ಅಂತ ಫೋಕಸ್ ಮಾಡಿದ್ದೆ. ಎಂಜಿನಿಯರಿಂಗ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವೆ ಎಂದಾಗ ನಮ್ಮನ್ನು ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಧನಂಜಯ್ ಸರ್ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿರುವುದು. ಜನಕ್ಕೆ ರೀಚ್ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್ ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

    ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದೀರಾ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

    ಮುಸ್ತಾಫಾ ಪಾತ್ರಧಾರಿ ಶಿಶಿರ್‌ ಬೈಕಾಡಿ ಮಾತನಾಡಿ, ಇಂತಹ ಒಳ್ಳೆ ತಂಡದ ಜೊತೆ ಸಿನಿಮಾ ಮಾಡಲು ಅದೃಷ್ಟ ಮಾಡಿದ್ದೇನೆ. ನನ್ನ ಮೊದಲ ಸಿನಿಮಾಗೆ ಇಷ್ಟು ಮಟ್ಟದ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಜನ ಸ್ವೀಕರಿಸುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಜನ ತುಂಬಾ ಪ್ರೀತಿ ಮಾಡ್ತಿದ್ದಾರೆ ಎಂದು ಸಂಸತಪಟ್ಟಿರು.

    ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

    ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ರಾಜ್ಯ ಹಾಗೂ ಹೊರ ದೇಶದಲ್ಲಿ 80ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ಮೂರನೇ ವಾರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕಾ, ಯುರೋಪ್ ದೇಶದಲ್ಲಿ ರಿಲೀಸ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಗೆ ಭರಪೂರ ಪ್ರತಿಕ್ರಿಯೆ ದೊರೆಯುತ್ತಿದೆ.

  • ವಿದೇಶಕ್ಕೆ ಹೊರಟ ‘ಡೇರ್ ಡೆವಿಲ್ ಮುಸ್ತಾಫಾ’

    ವಿದೇಶಕ್ಕೆ ಹೊರಟ ‘ಡೇರ್ ಡೆವಿಲ್ ಮುಸ್ತಾಫಾ’

    ಸ್ಯಾಂಡಲ್ ವುಡ್ ನಲ್ಲೀಗ ಡೇರ್ ಡೆವಿಲ್ ಮುಸ್ತಾಫಾನ (Daredevil Mustafa) ಹವಾ ಜೋರಾಗಿದೆ. ಕಳೆದ ವಾರ ತೆರೆಗೆ ಬಂದ ಈ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಕನ್ನಡಿಗರು ಬಿಗಿದಪ್ಪಿ ಕೊಂಡಾಡುತ್ತಿರುವ ಡೇರ್ ಡೆವಿಲ್ ಮುಸ್ತಾಫ್ ಅಮೋಘ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ. ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಜನ ಥಿಯೇಟರ್ ಗೆ ಬರೋದಿಕ್ಕೆ ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಕಣ್ತುಂಬಿಕೊಂಡು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.‌

    ಕಳೆದ ಆರೇಳು ತಿಂಗಳಿನಿಂದ ಥಿಯೇಟರ್ ನಲ್ಲಿ ಯಾವ ಸಿನಿಮಾಗೂ‌ ಸಿಗದ ರೆಸ್ಪಾನ್ಸ್ ಮುಸ್ತಾಫಾನ ಪಾಲಾಗಿದೆ.  ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಸೆಂಟರ್ ಸೆಂಟರ್ ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪೂಚಂತೇ ಪ್ರಪಂಚದಲ್ಲಿ ಪಯಣಿಸಿರುವ ಪ್ರೇಕ್ಷಕಪ್ರಭು ಇದು ಹೃದಯ ಬೆಸೆಯುವ ಕಥೆ. ಪ್ರತಿಯೊಬ್ಬರು ಇಂತಹ ಚಿತ್ರ ಮಿಸ್ ಮಾಡದೇ ನೋಡಬೇಕು ಎನ್ನುತ್ತಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಚಿತ್ರಕ್ಕೆ ಈ ಮಟ್ಟಿಗಿನ ವಿಮರ್ಶೆ ಹಾಗೂ ಬೇಡಿಕೆ ಸಿಗುತ್ತಿರುವ ಬೆನ್ನಲ್ಲೆ ವಿದೇಶದಲ್ಲಿ ಡೇರ್ ಡೆವಿಲ್ ಮುಸ್ತಾಫಾನ ದರ್ಶನಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ವಾರ ಅಮೆರಿಕಾ ಹಾಗೂ ಯುರೋಪ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮುಂದಿನ ವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಸೇರಿದಂತೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪೂರ್ಣಚಂದ್ರ ತೇಜಸ್ವಿಯವರ (Purnachandra Tejaswi) ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ (Shashank Sogal) ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

    ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್  (Dolly Dhananjay)ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

  • ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ಯೂಟ್ಯೂಬರ್ ಡಾ ಬ್ರೊ (Dr Bro) ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿ. ಕನ್ನಡದ ಫೇಮಸ್ ಯೂಟ್ಯೂಬರ್ ಇದೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಬದಲಿಗೆ, ಹೊಸ ತಂಡವೊಂದರ ಸಿನಿಮಾಗೆ ಹಿನ್ನೆಲೆ ಧ್ವನಿ ನೀಡಿ ಸಾಥ್ ನೀಡಿದ್ದಾರೆ.

    ಪೂರ್ಣಚಂದ್ರ ತೇಜಸ್ವಿ (Poornachandra Tejasvi) ಅವರ ‘ಡೇರ್ ಡೆವಿಲ್ ಮುಸ್ತಾಫಾ’ (Daredevil Musthafa) ಕತೆಯನ್ನು ಅದೇ ಹೆಸರಿನಲ್ಲಿ ಸಿನಿಮಾ ತೆರೆಯ ಮೇಲೆ ತರಲಾಗುತ್ತಿದ್ದು, ಹೊಸಬರೇ ಮಾಡಿರುವ ಈ ಪ್ರಯತ್ನಕ್ಕೆ ಡಾ ಬ್ರೋ ಬೆಂಬಲ ನೀಡಿದ್ದಾರೆ. ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಲಾಗುತ್ತಿದೆ.ಸದ್ಯ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಟ್ರೈಲರ್‌ ಬಿಡುಗಡೆ ಆಗಿದ್ದು, ಟ್ರೈಲರ್‌ನಲ್ಲಿ  ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕತೆ ಬಗ್ಗೆ ಡಾ ಬ್ರೋ ಹಿನ್ನೆಲೆ ಧ್ವನಿ ನೀಡಿದ್ದಾರೆ. ಮೂರು ನಿಮಿಷದ ಟ್ರೈಲರ್‌ನಲ್ಲಿ ಹಲವು ಭಾರಿ ಡಾ ಬ್ರೋ ಧ್ವನಿ ಕೇಳಿ ಬರುತ್ತದೆ.

    ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ಟ್ರೈಲರ್‌ ಎಲ್ಲರ ಗಮನ ಸೆಳೆಯುತ್ತಿದೆ. ರೆಟ್ರೊ ಮಾದರಿಯ ಕತೆಯನ್ನು ಆಹ್ಲಾದಕರ ರೀತಿಯಲ್ಲಿ ತೆರೆಗೆ ತಂದಿರುವ ಕುರುಹು ಟ್ರೈಲರ್‌ನಲ್ಲಿ ಎದ್ದು ಕಾಣುತ್ತದೆ. ಈ ತಂಡ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಕತೆಯನ್ನು ಆಧುನಿಕ ಸಿನಿಮಾ ವ್ಯಾಕರಣಕ್ಕೆ ಒಗ್ಗುವಂತೆ ಕಮರ್ಷಿಯಲ್ ಮಾದರಿಯಲ್ಲಿಯೇ ಸೊಗಸಾಗಿ ನಿರ್ದೇಶಕ ಶಶಾಂಕ್ ಸೋಗಲ್ (Director Shashank Sogal) ಕಟ್ಟಿದ್ದಾರೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

    ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ನಿರ್ಮಾಣವಾಗಿದೆ. ಕನ್ನಡ ಚಿತ್ರರಸಿಕರನ್ನು ಬೇರೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

  • ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು, ಸದಸ್ಯರ ನೇಮಕಾತಿ ಆದೇಶ ವಾಪಸ್‌

    ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು, ಸದಸ್ಯರ ನೇಮಕಾತಿ ಆದೇಶ ವಾಪಸ್‌

    ಬೆಂಗಳೂರು: 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕಾತಿ ಸಂಬಂಧ ಹೊರಡಿಸಿದ ಆದೇಶವನ್ನು ಸರ್ಕಾರ ವಾಪಸ್‌ ಪಡೆದಿದೆ.

    ಕೆಲವರಿಂದ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನ ನಿರಾಕರಣೆ, ನೇಮಕಾತಿಯಲ್ಲಿ ಕೆಲವು ಎಡವಟ್ಟುಗಳು ನಡೆದ ಹಿನ್ನೆಲೆಯಲ್ಲಿ ಆದೇಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾಪಸ್‌ ಪಡೆದಿದೆ. ಇದನ್ನೂ ಓದಿ: ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

    ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ತೇಜಸ್ವಿ ಪತ್ನಿ ರಾಜೇಶ್ವರಿ ಅವರನ್ನು ನೇಮಕ ಮಾಡಲಾಗಿತ್ತು. ರಾಜೇಶ್ವರಿ ಅವರು ಕಳೆದ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು. ನಿಧನರಾಗಿದ್ದರೂ ಸರ್ಕಾರ ಮತ್ತೆ ಅವರ ಹೆಸರನ್ನು ಆಯ್ಕೆ ಮಾಡಿದ್ದಕ್ಕ ಟೀಕೆ ವ್ಯಕ್ತವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

    ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

    ಬೆಂಗಳೂರು: ವೈಯಕ್ತಿಕ ಕಾರಣಗಳಿಂದಾಗಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಅಂಕಣಗಾರ, ಸೂಕ್ಷ್ಮ ಸಂವೇದನೆಯ ಲೇಖಕ, ಚಲನಶೀಲ ಸಂಶೋಧಕ ನರೇಂದ್ರ ರೈ ದೇರ್ಲ ಹೇಳಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಎಡವಟ್ಟು – ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ

    ಪೋಸ್ಟ್‌ನಲ್ಲಿ ಏನಿದೆ?
    ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ’ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ.

    ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ. ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ. ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಇದನ್ನೂ ಓದಿ: ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಮಯವಿಲ್ಲ- ಸರ್ಕಾರದ ಹುದ್ದೆ ನಿರಾಕರಿಸಿದ ಸೂಲಿಬೆಲೆ

    ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟ ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು. ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ. ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ. ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ಚಿಕ್ಕಮಗಳೂರು: ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು. ಹೀಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಚಿಕಿತ್ಸೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ರಾಜೇಶ್ವರಿ ತೇಜಸ್ವಿ 1966ರಲ್ಲಿ ತನಗಿಂತ ಒಂದು ವರ್ಷದ ಕಿರಿಯ ಪೂರ್ಣಚಂದ್ರ ತೇಜಸ್ವಿ ಅವರನ್ನ ಮದುವೆಯಾಗಿದ್ದರು. ಹೆಣ್ಣು ಮಕ್ಕಳು ಕೂಡ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ (ಡಿಗ್ರಿ) ಮತ್ತು ಎಂ.ಎ ಮಾಡಿದ್ದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. ಆ ನಂತರ ಇವರ ಬದುಕಿನ ದಿಕ್ಕೇ ಬದಲಾಯಿತು.

    1966ರಲ್ಲಿ ತೇಜಸ್ವಿ ಅವರನ್ನ ಮದುವೆಯಾದ ವಿವಾಹವಾದರು. ಬಳಿಕ ಪತಿ ಜೊತೆ ಸೇರಿ ಪುಸ್ತಕ ಪ್ರೇಮವನ್ನ ಬೆಳೆಸಿಕೊಂಡಿದ್ದರು. ಹಲವು ಪುಸ್ತಕಗಳನ್ನ ಬರೆದಿದ್ದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರು ಬರೆದ ಮೊದಲ ಪುಸ್ತಕ. ಈಗ ಆ ಪುಸ್ತಕ ಐದನೇ ಮುದ್ರಣ ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿ ವರ ಎರಡನೆಯ ಪುಸ್ತಕ. ಪುಸ್ತಕ ಪ್ರೇಮದ ಜೊತೆ ಇವರ ಹವ್ಯಾಸವೂ ವಿಭಿನ್ನವಾಗಿದೆ. ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಸ್ಟ್ಯಾಂಪ್ ಕಲೆಕ್ಟ್ ಮಾಡಲು ಪ್ರೇರೇಪಿಸುತ್ತಿದ್ದರು. ಜಗತ್ತು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದರು ಇ.ಮೇಲ್ ಇದ್ದರೂ ಅಪರೂಪದ ಸ್ಟ್ಯಾಂಪ್ ಕಲೆಕ್ಟ್ ಮಾಡಿದ್ದಾರೆ.

    ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ತೇಜಸ್ವಿ ನಿಧನದ ನಂತರ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದರು. ತೇಜಸ್ವಿ ಅವರ ನಿಧನದ ದಿನ ಅವರ ಕೊಠಡಿ ಹೇಗಿತ್ತೋ ಇಂದಿಗೂ ಹಾಗೆ ಇದೆ. ಒಂದೇ ಒಂದು ಪೇಪರ್ ಕೂಡ ಅಲುಗಾಡದಂತೆ ನೋಡಿಕೊಂಡಿದ್ದಾರೆ. ತೇಜಸ್ವಿ ಅವರಿಗೆ ಪ್ರಾಣಿಗಳೆಂದರೆ ಬಲು ಇಷ್ಟ. ಅದಕ್ಕಾಗಿ ರಾಜೇಶ್ವರಿ ಅವರು ಕೂಡ ಮನೆಯಲ್ಲಿ ನಾಲ್ಕೈದು ನಾಯಿಗಳನ್ನ ಸಾಕಿಕೊಂಡು ಪ್ರೀತಿಯಿಂದ ಸಾಕುತ್ತಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

    ತೇಜಸ್ವಿ ಅವರ ನೆನಪಿನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ರಾಜೇಶ್ವರಿ ಅವರ ಮನೆಗೆ ಆ ನಾಯಿಗಳೇ ಕಾವಲುಗಾರರು. ತೇಜಸ್ವಿ ಅವರು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಕೆರೆ ಬಳಿ ವಾಕ್ ಮಾಡಿಕೊಂಡು ಬದುಕುತ್ತಿದ್ದರು. ತೇಜಸ್ವಿ ಅವರ ನೆಚ್ವಿನ ಸ್ಕೂಟರ್ ರನ್ನ ದಿನಕ್ಕೆ ಹತ್ತಾರು ಬಾರಿ ನೋಡುತ್ತಿದ್ದರು. ತೇಜಸ್ವಿ ಅವರು ಬಳಸುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಜೋಪಾನ ಮಾಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದ ಯುವಜನತೆ ” ನೀವು ಪುಸ್ತಕ ಓದುತ್ತೀರಾ, ಯಾವ ಪುಸ್ತಕ ಓದಿದ್ದೀರಾ, ಏನು ಸ್ಟೋರಿ ಎಂದು ಕೇಳುತ್ತಿದ್ದರು. ಪುಸ್ತಕ ಓದುವುದಿಲ್ಲ ಎಂದರೆ ಬೈಯುತ್ತಿದ್ದರು. 2007ರಲ್ಲಿ ಪತಿ ತೇಜಸ್ವಿ ಅವರ ನಿಧನದ ಬಳಿಕ ಅವರ ನೆನಪಲ್ಲಿ ತೇಜಸ್ವಿ ಅವರು ಬದುಕುತ್ತಿದ್ದ ಜಾಗದಲ್ಲೇ ಬದುಕುತ್ತಿದ್ದರು. ಮಕ್ಕಳು ಕರೆದರೂ ಬೆಂಗಳೂರಿಗೆ ಹೋಗಿರಲಿಲ್ಲ. ಇಂದು ಅವರು ಇಹಲೋಕ ತ್ಯಜಿಸಿರೋದು ಲಕ್ಷಾಂತರ ಅಭಿಮಾನಿಗಳಿಗೆ ನೋವು.ತಂದಿದೆ.