`ಜೋಶ್’ (Josh Film) ಚಿತ್ರದಲ್ಲಿ ರಾಕೇಶ್ ಅಡಿಗಗೆ (Rakesh Adiga) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಲಗ್ಗೆಯಿಟ್ಟ ನಟಿ ಪೂರ್ಣ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ (Baby Bump) ಫೋಟೋಶೂಟ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರುವ ಪೂರ್ಣ (Actress Purnaa) ಅವರು ಉದ್ಯಮಿ ಶಾನಿದ್ (Shanid) ಜೊತೆ ಕಳೆದ ವರ್ಷ ಅಕ್ಟೋಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗಷ್ಟೇ ನಟಿ ಪೂರ್ಣ ಅವರ ಬೇಬಿ ಶವರ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್
ಉದ್ಯಮಿ ಶಾನಿದ್ ಆಸಿಫ್ ಜೊತೆ ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿರುವ ನಟಿ ಮೊದಲ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ನಟಿ ಪೂರ್ಣ ಅಲಿಯಾಸ್ ಶಮ್ನಾ ಕಾಸಿಮ್ ಅವರು ಕನ್ನಡದ ಜೋಶ್, ರಾಧನ ಗಂಡ, ರಮೇಶ್ ಅರವಿಂದ್ (Ramesh Aravind) ಜೊತೆ `100′ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಜೋಶ್, 100, ರಾಧನ ಗಂಡ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡಿದ್ದ ನಟಿ ಪೂರ್ಣ ಅಲಿಯಾಸ್ ಶಮ್ನಾ ಕಾಸಿಮ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿ ಪೂರ್ಣ ಬೇಬಿ ಶವರ್ ಕಾರ್ಯಕ್ರಮದ ಸಂಭ್ರಮದಲ್ಲಿದ್ದಾರೆ.
ಬಹುಭಾಷಾ ನಟಿ ಪೂರ್ಣ ಇದೀಗ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಪೂರ್ಣ ಕಳೆದ 2022ರ ಅಕ್ಟೋಬರ್ 25ರಂದು ಶನಿದ್ ಅಸಿಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದುಬೈ ಮೂಲದ ಉದ್ಯಮಿ ಶನಿದ್ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದರು. ಇದನ್ನೂ ಓದಿ: `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್
ಈಗ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನದ ಸಂಭ್ರಮದ ನಡುವೆ ಬೇಬಿ ಶವರ್ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ಕೆಂಪು ಬಣ್ಣದ ಸೀರೆಯಲ್ಲಿ ನಟಿ ಮಿರ ಮಿರ ಅಂತಾ ಮಿಂಚಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇನ್ನೂ ಮದುವೆಯಾಗಿ ಕೆಲವೇ ತಿಂಗಳಿಗೆ ನಟಿ ಪೂರ್ಣ (Actress Purnaa) ತಾಯಿಯಾಗುತ್ತಿರುವ ಗುಡ್ ನ್ಯೂಸ್ ನೀಡಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇನ್ನೂ ಪತಿ ಶನಿದ್ ಅನುಪಸ್ಥಿತಿಯಲ್ಲಿ ನಟಿಯ ಬೇಬಿ ಶವರ್ ಕಾರ್ಯಕ್ರಮ ನಡೆದಿದೆ.
Live Tv
[brid partner=56869869 player=32851 video=960834 autoplay=true]
ಸೌತ್ ಬ್ಯೂಟಿ ಶಮ್ನಾ ಕಾಸಿಂ ಇತ್ತೀಚೆಗಷ್ಟೇ ಶಾನಿದ್ ಆಸಿಫ್ ಆಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಟಿ ಪೂರ್ಣ ತಮ್ಮ ಮೊದಲ ರಾತ್ರಿಯಂದು ಪತಿ ಕೊಟ್ಟಿರುವ ಗಿಫ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಕನ್ನಡದ ʻಜೋಶ್ʼ(Josh Actress) ಸಿನಿಮಾ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಪೂರ್ಣ(Poorna) ಅಲಿಯಾಸ್ ಶಮ್ನಾ ಕಾಸಿಂ ಸದ್ಯ ತಮ್ಮ ವೈವಾಹಿಕ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ನೀಡಿ, ದಾಂಪತ್ಯ ಜೀವನದತ್ತ ಮುಖ ಮಾಡಿದ್ದಾರೆ. ಸದ್ಯ ತನ್ನ ಮೊದಲ ರಾತ್ರಿಯಂದು ಪತಿ ಕೊಟ್ಟಿರುವ ದುಬಾರಿ ಗಿಫ್ಟ್ ಬಗ್ಗೆ ಪೂರ್ಣ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ
ದುಬೈನ(Dubai) ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸಂಸ್ಥಾಪಕ ಮತ್ತು ಸಿಇಒ ಶಾನಿದ್ ಅವರನ್ನ ಪ್ರೀತಿಸಿ, ಪೂರ್ಣ ಮದುವೆಯಾಗಿದ್ದರು. ಮದುವೆಗೂ ಮುನ್ನವೇ 2700 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದರು. ತನ್ನ ಫಸ್ಟ್ ನೈಟ್‌ನಲ್ಲಿ ಪತ್ನಿಗೆ ದುಬಾರಿ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ `ಜೋಶ್’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಪೂರ್ಣ ಈಗ ಹಸೆಮಣೆ ಏರಲು ಸಜ್ಜಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, ಪತಿಯನ್ನು ಪರಿಚಯಿಸುವ ಮೂಲಕ ತಮ್ಮ ಮದುವೆಯ ಕುರಿತು ನಟಿ ಪೂರ್ಣ ರಿವೀಲ್ ಮಾಡಿದ್ದಾರೆ.
`ಜೋಶ್’ ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷಾ ಸಿನಿಮಾಗಳಲ್ಲಿ ಛಾಪೂ ಮೂಡಿಸಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಶಾಮ್ನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
`ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ’ ಎಂದು ಸಂತಸದ ವಿಚಾರವನ್ನು ನಟಿ ಪೂರ್ಣ ಹಂಚಿಕೊಂಡಿದ್ದಾರೆ. ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ. ನೆಚ್ಚಿನ ನಟಿಯ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.
ಚಿತ್ರ: 100 ನಿರ್ದೇಶನ: ರಮೇಶ್ ಅರವಿಂದ್ ನಿರ್ಮಾಪಕ: ಎಂ ರಮೇಶ್ ರೆಡ್ಡಿ, ಉಮಾ ಸಂಗೀತ: ರವಿ ಬಸ್ರೂರು ಛಾಯಾಗ್ರಹಣ: ಸತ್ಯ ಹೆಗ್ಡೆ ತಾರಾಬಳಗ: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ಮಾಲತಿ ಸುದೀರ್, ಪ್ರಕಾಶ್ ಬೆಳವಾಡಿ, ವಿಶ್ವ ಕರ್ಣ ಇತರರು.
ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ 100 ಸಿನಿಮಾ ಟ್ರೇಲರ್ ಮೂಲಕ ಚಿತ್ರರಸಿಕರಲ್ಲಿ ಬಹಳ ನಿರೀಕ್ಷೆ ಮೂಡಿಸಿತ್ತು. ತಂತ್ರಜ್ಞಾನ ಇಂದು ನಮ್ಮ ದಿನನಿತ್ಯದ ಕೆಲಸಗಳನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ನಮ್ಮ ಬದುಕಿಗೆ ಮಾರಕವೂ ಆಗಿದೆ. ಅದರ ಮೇಲಿನ ಹಗುರಾದ ಮನೋಭಾವದ ಬದಲಾಗಿ ಎಚ್ಚರಿಕೆಯೂ ಇರಬೇಕು ಎಂಬ ಸೂಕ್ಷ್ಮ ಸಂದೇಶ ಹೊತ್ತ ಮನರಂಜನಾತ್ಮಕ ಸಿನಿಮಾ 100.
ನಾಯಕ ವಿಷ್ಣು ಒಬ್ಬ ದಕ್ಷ ಪೊಲೀಸ್ ಅಧಿಕಾರಿ. ನಿಷ್ಠಾವಂತ ಅಧಿಕಾರಿಯಾಗಿ ಹೆಸರುಗಳಿಸಿಕೊಂಡಿದ್ದ ವಿಷ್ಣುಗೆ ತಾಯಿ, ತಂಗಿ, ಪತ್ನಿ, ಮಗಳು ಒಳಗೊಂಡ ಮುದ್ದಾದ ಕುಟುಂಬವೂ ಇರುತ್ತದೆ. ಸಮಾಜದಲ್ಲಿ ಒಬ್ಬ ಒಳ್ಳೆ ವ್ಯಕ್ತಿಯಾಗಿ ಕುಟುಂಬವನ್ನೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವ ವ್ಯಕ್ತಿ ವಿಷ್ಣು. ಹೀಗಿರುವಾಗ ಉನ್ನತ ಅಧಿಕಾರಿಗಳು ಕೆಲವರ ಪೋನ್ ಟ್ಯಾಪ್ ಮಾಡಿ ರಿಪೋರ್ಟ್ ನೀಡಲು ವಿಷ್ಣುಗೆ ಹೇಳಿರುತ್ತಾರೆ. ಆಗಲೇ ಉದ್ಯಮಿಗಳು, ರಾಜಕಾರಣಿಗಳು, ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳ ಕರಾಳ ಜಗತ್ತು ವಿಷ್ಣುಗೆ ಗೋಚರಿಸುತ್ತದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರ ಜೀವನದ ಜೊತೆ ಆಟವಾಡುತ್ತಾ, ಫ್ಲರ್ಟ್ ಮಾಡುತ್ತಿದ್ದ ಹರ್ಷನ ನಂಬರ್ ಟ್ಯಾಪ್ ಮಾಡಿದಾಗ ಬಹುದೊಡ್ಡ ಶಾಕ್ ಕಾದಿರುತ್ತದೆ. ಆತ ಉದ್ಯಮಿಯ ಪತ್ನಿ ಜೊತೆಗಲ್ಲದೆ ತನ್ನ ಪತ್ನಿ ಹಾಗೂ ತಂಗಿ ಜೊತೆಗೂ ಮಾತನಾಡಿರುವ ಆಡಿಯೋ ಕೇಳಿಸಿಕೊಂಡು ಶಾಕ್ ಗೆ ಒಳಗಾಗುತ್ತಾನೆ. ಆ ಶಾಕ್ ನಿಂದ ಹೊರಬರಬೇಕು ಎನ್ನುವಷ್ಟರಲ್ಲೇ ಇಲ್ಲಿವರೆಗೆ ದಾಖಲಿಸಿದ ಪೋನ್ ಟ್ಯಾಪ್ ವಿವರಗಳು, ಆಡಿಯೋ ಫೈಲ್ ಲೀಕ್ ಆಗಿ ವಿಷ್ಣು ಸಂಕಷ್ಟಕ್ಕೆ ಸಿಲುಕುತ್ತಾನೆ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡಲ್ಲೂ ಸಂಕಷ್ಟಕ್ಕೆ ಸಿಲುಕುವ ವಿಷ್ಣು ತನ್ನ ಕೆಲಸವನ್ನು ಉಳಿಸಿಕೊಳ್ಳುವುದರ ಜೊತೆಗೆ ಕುಟುಂಬವನ್ನು ದೊಡ್ಡ ಗಂಡಾಂತರದಿಂದ ಹೇಗೆ ಪಾರು ಮಾಡುತ್ತಾನೆ ಎನ್ನುವುದೇ 100 ಸಿನಿಮಾದ ಕಥಾಹಂದರ. ಹಾಗಂತ ಇದಿಷ್ಟೇ ಸಿನಿಮಾನ ಅಂದ್ಕೋಬೇಡಿ ಇದರಾಚೆಗೂ ಮನಮುಟ್ಟುವ, ಕಣ್ತೆರೆಸುವ ಸೂಕ್ಷ್ಮಾತಿ ಸೂಕ್ಷ್ಮಗಳು ಸಿನಿಮಾದಲ್ಲಿವೆ. ಅದಕ್ಕೆ ನೀವು ಸಿನಿಮಾ ನೋಡಲೇಬೇಕು. ಇದನ್ನೂ ಓದಿ: ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ
ಫ್ಯಾಮಿಲಿ ಥ್ರಿಲ್ಲರ್ ಹಾಗೂ ಸೈಬರ್ ಕ್ರೈಂ ಕಥಾಹಂದರಕ್ಕೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಿನಿಮಾದಲ್ಲಿದೆ. ಅದುವೇ ಸಿನಿಮಾ ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸಿ ಥ್ರಿಲ್ ನೀಡುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲದೊಂದಿಗೆ ಹಿಡಿದಿಡುತ್ತದೆ. ಊಹೆಗೂ ನಿಲುಕದ ರೋಚಕ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳ ಕಬಂದ ಬಾಹು ನಮ್ಮನ್ನು ಆವರಿಸಿರುವ ಪರಿ ಹಾಗೂ ಅದರಿಂದ ಜೀವ ಹಾಗೂ ಜೀವನದ ಮೇಲೆ ಆಗುತ್ತಿರುವ ಕುತ್ತನ್ನು ಬಹಳ ಪರಿಣಾಮಕಾರಿಯಾಗಿ ಉತ್ತಮ ಸಂಭಾಷಣೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ಇದನ್ನೂ ಓದಿ: ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ
ವಿಷ್ಣು ಪಾತ್ರದಲ್ಲಿ ರಮೇಶ್ ಅರವಿಂದ್ ನಟನೆ ಬಗ್ಗೆ ಎರಡು ಮಾತಿಲ್ಲ. ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಪೂರ್ಣ ಗಮನ ಸೆಳೆಯುತ್ತಾರೆ. ಗ್ಲ್ಯಾಮರ್ ಪಾತ್ರಗಳ ಮೂಲಕ ಕಣ್ಮನ ಸೆಳೆಯುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕನ ತಂಗಿ ಹಿಮಾ ಪಾತ್ರದಲ್ಲಿ ಹೋಮ್ಲಿಯಾಗಿ ಕಾಣಸಿಕೊಂಡಿದ್ದು ಎಲ್ಲರಿಗೂ ಇಷ್ಟವಾಗುತ್ತಾರೆ. ಖಳ ನಟನಾಗಿ ಹರ್ಷ ಪಾತ್ರಧಾರಿ ವಿಶ್ವ ಕರ್ಣ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿ ಕೋಟೆ, ಮಾಲತಿ ಸುದೀರ್ ತಮ್ಮ ಪಾತ್ರವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಹೆಚ್ಚೇನು ವಿಶೇಷತೆ ಅನ್ನಿಸದಿದ್ದರೂ ನೋಡಿಸಿಕೊಂಡು ಹೋಗುತ್ತದೆ. ಗುರು ಕಶ್ಯಪ್ ಸಂಭಾಷಣೆ ಸಿನಿಮಾದ ಮುಖ್ಯ ಆಕರ್ಷಣೆ ಅಂದ್ರೆ ತಪ್ಪಾಗೋದಿಲ್ಲ. ಮೈನವಿರೇಳಿಸೋ ಸಾಹಸ ದೃಶ್ಯಗಳು ಶಿಳ್ಳೆ ಗಿಟ್ಟಿಸಿಕೊಂಡರೂ ಕೊನೆಯಲ್ಲಿ ಬರುವ ಫೈಟಿಂಗ್ ಸೀನ್ ಕೊಂಚ ಅಭಾಸ ಎನ್ನಿಸಿದರೂ ಕಮರ್ಶಿಯಲ್ ದೃಷ್ಟಿಯಲ್ಲಿ ನೋಡಿದಾಗ ಅವಶ್ಯ ಎನಿಸುತ್ತದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಜೊತೆಗೆ ಪೋಷಕರು ಕೂಡ ಮಿಸ್ ಮಾಡ್ದೆ ನೋಡಲೇಬೇಕಾದ ಸಿನಿಮಾ 100.
ಎಸ್.ಟೀಂ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಎಲ್ ಲಕ್ಷ್ಮೀ ನಿರ್ಮಿಸುತ್ತಿರುವ ನ್ಯಾಚುರಲ್, ಥ್ರಿಲ್ಲರ್ ಜಾನರ್ ನ ಹೊಸಬರ ಸಿನಿಮಾ ಸುವರ್ಣ ಸುಂದರಿ. ಚರಿತ್ರೆ ಭವಿಷ್ಯತ್ತನ್ನು ಹಿಂಬಾಲಿಸುತ್ತದೆ ಎಂಬ ಅಡಿ ಬರಹವನ್ನು ಸುವರ್ಣ ಸುಂದರಿ ಹೊಂದಿದೆ. ಈ ಸಿನಿಮಾವನ್ನು ಎಂ.ಎಸ್.ಎನ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಇದೇ ಮೇ 31ರಂದು ಸಿನಿಮಾ ರಿಲೀಸ್ ಆಗಲಿದೆ.
ಇತ್ತೀಚಿಗೆ ಸುವರ್ಣ ಸುಂದರಿ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಡೈರೆಕ್ಟರ್ ಸೂರ್ಯ ಮಾತಾಡುತ್ತಾ, ಸುವರ್ಣಸುಂದರಿ ಚಿತ್ರದಲ್ಲಿ ವಿಎಫ್‍ಎಕ್ಸ್ ಗಾಗಿ ಒಂದು ವರ್ಷದವರೆಗೂ ಕೆಲಸ ನಡೆಯಿತು. ಟೈಂ ತೆಗೆದುಕೊಂಡರು. ಔಟ್ ಪುಟ್ ಅದ್ಭುತವಾಗಿ ಬಂದಿದೆ. ಈಗಿನ ಕನ್ನಡ ಚಿತ್ರಗಳಲ್ಲಿ ಸ್ಕ್ರೀನ್ ಪ್ಲೇ ಬೇಸ್ಡ್ ಚಿತ್ರಗಳಲ್ಲಿ ಒಳ್ಳೆಯ ಪ್ರಶಂಸೆಗಳಿವೆ. ಅದೇ ರೀತಿಯಲ್ಲಿ ಸುವರ್ಣಸುಂದರಿ ಮೂರು ಜನ್ಮಗಳ ಕಾನ್ಸೆಪ್ಟ್ ನಿಂದ ಇಂಟ್ರೆಸ್ಟಿಂಗ್ ಸ್ಕ್ರೀನ್ ಪ್ಲೇಯೊಂದಿಗೆ ಮಾಡಿದ್ದೇವೆ. ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಕಮರ್ಷಿಯಲ್ ಆಗಿ ಪಕ್ಕಾ ಹಿಟ್ ಆಗಬಹುದೆಂಬ ನಂಬಿಕೆಯಲ್ಲಿದ್ದೇವೆ ಎಂದಿದ್ದಾರೆ.
ನಿರ್ಮಾಪಕಿ ಲಕ್ಷ್ಮೀ ಮಾತನಾಡಿ, ಸುವರ್ಣ ಸುಂದರಿ ಚಿತ್ರದ ಟ್ರೇಲರ್ ಸಾಧಾರಣ ಪ್ರೇಕ್ಷಕರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರಿಗೂ ಇಷ್ಟವಾಗಿದೆ. ಬಜೆಟ್ ಹೆಚ್ಚಾದರೂ ಕ್ವಾಲಿಟಿ ಔಟ್ ಪುಟ್ ನೋಡಿದ ಮೇಲೆ ಸಿನಿಮಾ ಗೆಲ್ಲುವುದರ ಬಗ್ಗೆ ತುಂಬಾ ಕಾನ್ಫಿಡೆಂಟ್ ಆಗಿ ಇದ್ದೀವಿ. ಶೀಘ್ರದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಮೇ 31ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದರು.
ಸುವರ್ಣ ಸುಂದರಿಯಲ್ಲಿ ಜಯಪ್ರದ, ಪೂರ್ಣ, ಸಾಕ್ಷಿ, ಇಂದ್ರ, ರಾಮ್ ಮುದ್ದು ಕುಮಾರಿ, ಸಾಯಿ ಕುಮಾರ್, ತಿಲಕ್, ಅವಿನಾಶ್, ಜಯ ಜಗದೀಶ್, ಸತ್ಯ ಪ್ರಕಾಶ್ ಇನ್ನಿತರರು ನಿಟಿಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ರಾಮ ಸುಂಕರ ಸಾಹಸ ಸಂಯೋಜನೆಯನ್ನು ಮಾಡುತ್ತಿದ್ದಾರೆ. ಯುವ ಮಹಂತಿ ಛಾಯಾಗ್ರಹಣ, ನಾಗು ಕಲಾ ನಿರ್ದೇಶನ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ.
ಎರಡು ವರ್ಷದ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ‘ಸುವರ್ಣ ಸುಂದರಿ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ. 1508 ರಿಂದ 2018ರವರೆಗಿನ ನಾಲ್ಕು ತಲೆಮಾರಿನ ಕತೆ ಈ ಚಿತ್ರದಲ್ಲಿದೆ. ಶ್ರೀ ಕೃಷ್ಣದೇವರಾಯರ ಅವಧಿಯಲ್ಲಿ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಸನ್ನಿವೇಶಗಳಿಗೆ ವಿಶೇಷವಾಗಿ ಬಳಸಲಾಗಿದೆ.
ಮೈ ನವಿರೇಳಿಸುವ ರೋಚಕ ಸ್ಟಂಟ್ಸ್ ಗಳು ಈ ಚಿತ್ರದಲ್ಲಿರಲಿವೆ. ಸುವರ್ಣ ಸುಂದರಿಗಾಗಿ ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್‍ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್ ಬಳಸಲಾಗಿದೆ. ನಾಯಕಿಯಾಗಿ ಡೆಹರಾಡೂನ್ ಮೂಲದ ಸಾಕ್ಷಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾರಂಭದ ಅವಧಿಯಲ್ಲಿ ಸಾಯಿಕುಮಾರ್ ಪಾತ್ರವಿರುತ್ತದೆ. ಹಾಗೆಯೇ 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಮತ್ತೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದಾ ಪಾತ್ರದ ವಿವರವನ್ನು ಚಿತ್ರತಂಡ ಇನ್ನೂ ಜಾಹೀರು ಮಾಡಿಲ್ಲ. ಈ ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.
ಇತಿಹಾಸ ವಿಷಯದಲ್ಲಿ ಪದವಿ ಪಡೆದುಕೊಂಡಿರುವ ಎಂ.ಎಸ್.ಎನ್.ಸೂರ್ಯ ಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅವರ ಸಹೋದರಿ ನಿರ್ಮಾಪಕಿಯಾಗಿದ್ದಾರೆ. ಬಾಹುಬಲಿ-2 ಚಿತ್ರದ ಸೆಕೆಂಡ್ ಕ್ಯಾಮರಾಮೆನ್ ಯಲ್ಲಮಹಂತಿ ಈಶ್ವರ್ ಛಾಯಾಗ್ರಹಣವಿದ್ದು, ರಾಮ್ ಸುಂಕರ ಸಾಹಸ ಸಂಯೋಜಿಸಿದ್ದಾರೆ.
ಅನುಷ್ಕಾ ಶೆಟ್ಟಿ ಅಭಿನಯದ ಆರುಂಧತಿ ನಿರ್ಮಾಣದ ಸಂದರ್ಭದಲ್ಲಿ ತಂತ್ರಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ. ಆದರೆ ಸುವರ್ಣ ಸುಂದರಿಗೆ ಈಗಿನ ಅಪ್‍ಡೇಟೆಡ್ ಟೆಕ್ನಾಲಜಿಯನ್ನು ಬಳಸಿಕೊಂಡಿರುವುದರಿಂದ ದೃಶ್ಯಗಳು ಮತ್ತಷ್ಟು ನೈಜವಾಗಿ ಮೂಡಿಬಂದಿವೆ. ಇದೆಲ್ಲದರ ಪರಿಣಾಮವೆನ್ನುವಂತೆ ಆರು ಕೋಟಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಸುವರ್ಣ ಸುಂದರಿ ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆಯಂತೆ. ಆದರೂ ಇದಕ್ಕೆಲ್ಲಾ ಚಿಂತೆ ಮಾಡದೆ ಎಂ.ಎನ್.ಲಕ್ಷೀ ಖರ್ಚು ಮಾಡಿದ್ದಾರೆ. ಈ ಚಿತ್ರವು ಇದೇ 31ರಂದು ರಾಜ್ಯದ್ಯಂತ ತೆರೆ ಕಾಣುವ ಸಾಧ್ಯತೆ ಇದೆ.
ಬೆಂಗಳೂರು: ಬಾಹುಬಲಿ ಚಿತ್ರ ನೋಡಿ ಅದರ ಅದ್ಧೂರಿತನಕ್ಕೆ ಮಾರು ಹೋಗದವರಿಲ್ಲ. ಆದರೀಗ ಅಂಥಾದ್ದೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದಕ್ಕೆ ಕಾರಣವಾಗಿರೋದು ಎಸ್ ಟೀಮ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮಹೂರ್ತ ಫಿಕ್ಸಾಗಿದೆ.
ಇದೇ 19ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒಂದು ಟ್ರೈಲರ್ ಮತ್ತು ಪೋಸ್ಟರ್ ಗಳೇ ಜನಮನ ಸೆಳೆದಿದ್ದವು. ಇದೀಗ ಪ್ರೇಕ್ಷಕರಿಗೆ ಎರಡನೇ ಟ್ರೈಲರ್ ನೋಡೋ ಅವಕಾಶ ಸಿಗಲಿದೆ. ಸೂರ್ಯ ನಿರ್ದೇಶನದ ಈ ಚಿತ್ರ ನಾಲ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!
ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ಧೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.
ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ 45 ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.