Tag: ಪೂರಕ ಪರೀಕ್ಷೆ

  • ಪಿಯುಸಿ ಉತ್ತರ ಪತ್ರಿಕೆ ಸ್ಕ್ಯಾನಿಂಗ್, ಮರು ಮೌಲ್ಯಮಾಪನಕ್ಕೆ ಶುಲ್ಕ ಎಷ್ಟು?

    ಪಿಯುಸಿ ಉತ್ತರ ಪತ್ರಿಕೆ ಸ್ಕ್ಯಾನಿಂಗ್, ಮರು ಮೌಲ್ಯಮಾಪನಕ್ಕೆ ಶುಲ್ಕ ಎಷ್ಟು?

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಜೂನ್ 8ರಿಂದ 20ವರೆಗೆ ಪರೀಕ್ಷೆ ನಡೆಯಲಿದೆ.

    ಮರು ಮೌಲ್ಯಮಾಪನ, ಮರು ಎಣಿಗೆ ಅರ್ಜಿ ಸಲ್ಲಿಸಲು ಮೇ 14 ಕೊನೆ ದಿನಾಂಕ ಆಗಿದ್ದು, ಮರು ಮೌಲ್ಯಮಾಪನ ಒಂದು ವಿಷಯಕ್ಕೆ 1,670 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಶೇ.59.56 ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡ ಫಸ್ಟ್

    ಪರೀಕ್ಷಾ ಅಕ್ರಮ ಎಸೆಗಿದ 17 ವಿದ್ಯಾರ್ಥಿಗಳು ಡಿಬಾರ್ ಆಗಿದ್ದು, ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಹಾಗೂ ಮರು ಮೌಲ್ಯಮಾಪನ ಶುಲ್ಕ ಪಾವತಿಸಲು ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಒಂದು ವಿಷಯಕ್ಕೆ 530 ರೂಪಾಯಿ ಆಗಿದ್ದು, ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಮೇ 7 ಕೊನೆ ದಿನಾಂಕವಾಗಿದೆ.  

    ಈ ಬಾರಿ ಉನ್ನತ ಶ್ರೇಣಿಯಲ್ಲಿ 54,692 ವಿದ್ಯಾರ್ಥಿಗಳು ಪಾಸಾಗಿದ್ದು, 2,13,611 ಪ್ರಥಮ ದರ್ಜೆ, 82,532 ದ್ವಿತೀ ದರ್ಜೆ, 57,586 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.  

  • ಯಾದಗಿರಿ: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

    ಯಾದಗಿರಿ: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

    ಯಾದಗಿರಿ: ರಾಜ್ಯಾದ್ಯಂತ ಇಂದು ಪಿಯುಸಿ ಪೂರಕ ಪರೀಕ್ಷೆ ನಡೆಯುತ್ತಿದ್ದು ಮೊದಲ ದಿನವೇ ಯಾದಗಿರಿಯ ಜಿಲ್ಲೆಯ ಸುರಪುರ ಪಟ್ಟಣದ ಪರೀಕ್ಷಾ ಕೆಂದ್ರದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿರುವುದು ಬಯಲಾಗಿದೆ.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆಯುತ್ತಿದ್ದ ಸಮಾಜಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ್ದು, ಇದಕ್ಕೆ ಪರೀಕ್ಷಾ ಮೇಲ್ವಿಚಾರಕರೇ ಸಾಥ್ ನೀಡಿದ್ದಾರೆ ಅಂತ ಆರೋಪ ಕೇಳಿಬಂದಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರೋ ಪಿಯು ಪ್ರಭಾರಿ ಉಪ-ನಿರ್ದೇಶಕರಾದ ಗುರಲಿಂಗಪ್ಪ, ನಕಲು ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.