Tag: ಪೂಜಾ ಹೆಗ್ಡೆ

  • ಟ್ವಿಟ್ಟರ್ ಟ್ರೇಂಡಿಂಗ್‌ನಲ್ಲಿ ಪೂಜಾ ಹೆಗ್ಡೆ:‌ ಕಾನ್ ಫೆಸ್ಟಿವಲ್‌ನಲ್ಲಿ ಪೂಜಾ ಮಿಂಚಿಂಗ್

    ಟ್ವಿಟ್ಟರ್ ಟ್ರೇಂಡಿಂಗ್‌ನಲ್ಲಿ ಪೂಜಾ ಹೆಗ್ಡೆ:‌ ಕಾನ್ ಫೆಸ್ಟಿವಲ್‌ನಲ್ಲಿ ಪೂಜಾ ಮಿಂಚಿಂಗ್

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವ ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಫೋಟೋಗಳು ಟ್ವಿಟ್ಟರ್‌ನಲ್ಲಿ ಟ್ರೇಂಡಿಂಗ್‌ನಲ್ಲಿದೆ. ಪೂಜಾ ಲುಕ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Pooja Hegde (@hegdepooja)

    ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಪೂಜಾ ಹೆಗ್ಡೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿದ್ದಾರೆ. ಕಾನ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋ ಮತ್ತು ವಿಡಿಯೋ ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಲಾಂಗ್ ಗೌನ್‌ನಲ್ಲಿ ಪೂಜಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

     

    View this post on Instagram

     

    A post shared by Pooja Hegde (@hegdepooja)

    ಈಗಾಗಲೇ ದಕ್ಷಿಣ ಭಾರತದ ಸಾಕಷ್ಟು ತಾರೆಯರ ಜತೆ ಪೂಜಾ ಹೆಗ್ಡೆ ಕೂಡ ಕಾಣಿಸಿಕೊಂಡಿದ್ದು, ಚೆಂದದ ಡ್ರೇಸ್ ತೊಟ್ಟು ಮಿರ ಮಿರ ಅಂತಾ ಮಿಂಚಿದ್ದಾರೆ. ಇನ್ನು ಕಾನ್ ಫೆಸ್ಟಿವಲ್‌ನಲ್ಲಿ ಮತ್ತೊಂದು ವಿಶೇಷ ಅಂದ್ರೆ ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಕಾನ್ ಫೆಸ್ಟಿವಲ್ ಪ್ರದರ್ಶನಗೊಳ್ಳಲಿದೆ.

  • ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವ ಸಿನಿಮಾ ತಾರೆಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾನ್ ಸಿನಿಮೋತ್ಸವಕ್ಕೆ ಭರ್ಜರಿ ಚಾಲನೆ ನೀಡಿದ್ದು, ಎಲ್ಲಾ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮೋತ್ಸವಕ್ಕೆ ಸಾಥ್ ನೀಡಿದ್ದಾರೆ. ವಿಶ್ವದ ಪ್ರಸಿದ್ಧ ಚಿತ್ರೋತ್ಸವವಾಗಿರುವ ಕಾನ್ ಫೆಸ್ಟಿವಲ್ ಅಂದ್ರೆ ತಾರೆಯರಿಗೆ ಹಬ್ಬ. ರಂಗು ರಂಗಿನ ಹಬ್ಬದಲ್ಲಿ ಸ್ಟಾರ್‌ಗಳು ಮಿಂಚಿರೋ ಫೋಟೋಗಳು ಇದೀಗ ವೈರಲ್ ಆಗಿದೆ.

    ಬಾಲಿವುಡ್ ಸ್ಟಾರ್‌ಗಳ ಜತೆ ದಕ್ಷಿಣದ ಸ್ಟಾರ್ ಸೆಲೆಬ್ರೆಟಿಗಳು ಕೂಡ ಸಾಥ್ ನೀಡಿದ್ದಾರೆ. ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ, ಮಾಧವನ್, ನಯನತಾರಾ, ನಟಿ ಊರ್ವಶಿ ಬಾಲಿವುಡ್ ಸ್ಟಾರ್ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಹೀಗೆ ಸಾಕಷ್ಟು ತಾರೆಯರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಕಾನ್ ಫೆಸ್ಟಿವಲ್‌ನಲ್ಲಿ ಮತ್ತೊಂದು ವಿಶೇಷ ಅಂದ್ರೆ ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ.

  • ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಟಿ ಪೂಜಾ ಹೆಗ್ಡೆ ಟಾಲಿವುಡ್‌ನ ಪ್ರತಿಭಾವಂತ ಕಲಾವಿದೆ, ಇತ್ತೀಚೆಗೆ ಈ ನಟಿಯ ಸಾಲು ಸಾಲು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋತಿತ್ತು. ಆದರೆ ಈಗ ಬಂಪರ್ ಆಫರ್‌ಗಳು ಪೂಜಾಗೆ ಅರಸಿ ಬರುತ್ತಿವೆ. ಇದೀಗ ನಟ ವಿಜಯ್ ದೇವರಕೊಂಡ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ.

    ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ಪ್ರತಿಭಾವಂತ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಅದ್ಯಾಕೋ ಅವರಿಗೆ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದ್ರರಲ್ಲಿ ಸೋತಿದೆ. ಆದರೂ ಪೂಜಾಗೆ ಭರ್ಜರಿ ಆಫರ್‌ಗಳು ಅರಸಿ ಬರುತ್ತಿದೆ. ಇದೀಗ ನಟ ವಿಜಯ್ ದೇವರಕೊಂಡ ಜತೆ ರೊಮ್ಯಾನ್ಸ್ ಮಾಡಲು ಪೂಜಾ ರೆಡಿಯಾಗಿದ್ದಾರೆ.

    ಪೂಜಾ ಹೆಗ್ಡೆ ನಟಿಸಿರೋ ಚಿತ್ರಗಳು ಸೋಲು ಕಂಡಿವೆ ಆದರೂ ಅವರ ಡಿಮ್ಯಾಂಡ್ ಎನು ಕಮ್ಮಿಲ್ಲ ಆಗಿಲ್ಲ. ಸಿನಿಮಂದಿ ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೀತಾ ಇದ್ರು. ನಿರ್ಮಾಪಕರು ಕ್ಯಾರೆ ಎನ್ನದೇ ಪೂಜಾನೇ ಬೇಕು ಅಂತಾ ಅಫರ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ಚಿತ್ರ `ಜನಗಣಮನ’ ಸಿನಿಮಾಗೆ ನಾಯಕಿಯಾಗಿ ಪೂಜಾ ಅವರನ್ನೇ ಫೈನಲ್ ಮಾಡಲಾಗಿದೆ. ಇದನ್ನೂ ಓದಿ: ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    `ಜನಗಣಮನ’ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಚಿತ್ರಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಾರ್ಮಿ ಕೌರ್ ಪ್ರೋಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಜಯ್ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಲು ಸಾಲು ಸೋಲುಗಳನ್ನೇ ಕಂಡಿರೋ ಪೂಜಾಗೆ ಈ ಪ್ರಾಜೆಕ್ಟ್ನಿಂದ ಲಕ್ ಬದಲಾಗುತ್ತಾ ಅಂತಾ ಕಾದು ನೋಡಬೇಕಿದೆ.

  • ಉಡುಪಿಯ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂಜಾ ಹೆಗ್ಡೆ

    ಉಡುಪಿಯ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂಜಾ ಹೆಗ್ಡೆ

    ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಹೆಗ್ಡೆ ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಮಂಗಳವಾರದಂದು ಶುಭದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಪೂಜೆಯಲ್ಲಿ ತಮ್ಮ ಕುಟುಂಬದವರೊಂದಿಗೆ ನಟಿ ಪೂಜಾ ಹೆಗ್ಡೆ ಭಾಗಿಯಾಗಿದ್ದರು. ದೇವರ ಕಾಪು ಮಾರಿಗುಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆರ್ಶೀವಾದ ಪಡೆದರು. ಈ ಹಿಂದೆಯೂ ಸಾಕಷ್ಟು ಬಾರಿ ಮಾರಿಗುಡಿಗೆ ಬಂದಿದ್ದ ಪೂಜಾ ಹೆಗ್ಡೆ ತಮಗಿರುವ ಅಗಾಧ ಭಕ್ತಿ ಮತ್ತು ದೇವಿಯ ಮೇಲಿರುವ ನಂಬಿಕೆಯನ್ನು ವ್ಯಕ್ತಪಡಿಸಿದರು.

    ಕುಟುಂಬದ ಸದಸ್ಯರೊಂದಿಗೆ ಕುಟುಂಬದ ಆವರಣದಲ್ಲಿ ಕೆಲ ಕಾಲ ಕಳೆದರು. ಭೇಟಿಯ ವೇಳೆ ಸ್ಥಳೀಯರೊಂದಿಗೆ ಪೂಜಾ ತುಳು ಭಾಷೆನಲ್ಲೇ ಮಾತಾಡಿದರು. ಬಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ಪೂಜಾ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾಗಿದ್ದಾರೆ. ಇದನ್ನೂ ಓದಿ: ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಸಾಕಷ್ಟು ಸಿನಿಮಾಗಳ ಮೂಲಕ ಸಕ್ಸಸ್ ಕಂಡಿದ್ದ ನಟಿ, ಇತ್ತೀಚೆಗೆ ರಿಲೀಸ್ ಆಗಿದ್ದ ಮೂರು ಚಿತ್ರಗಳು ಗಳಿಕೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈಗ ಪೂಜಾ ತವರಿಗೆ ಮರಳಿ ದೇವರ ದರ್ಶನ ಪಡೆದಿರುವುದರು ಕುತೂಹಲ ಮೂಡಿಸಿದೆ.

  • ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿದ ಆಚಾರ್ಯರು: ಮೆಗಾ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

    ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿದ ಆಚಾರ್ಯರು: ಮೆಗಾ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

    ಮೆಗಾಸ್ಟಾರ್ ಚಿರಂಜೀವಿ ಹಾಗೂ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ಅಭಿನಯಿಸಿರುವ ಆಚಾರ್ಯ ಚಿತ್ರ ಏಪ್ರಿಲ್ 29 ರಂದು ಜಗತ್ತಿನಾದ್ಯಂತ ತೆರೆ ಕಂಡಿತ್ತು. ಚಿತ್ರವು ಬಾಕ್ಸಾಫೀಸ್‍ನಲ್ಲಿ ಅಷ್ಟೇನು ಹೇಳಿಕೊಳ್ಳುವಷ್ಟು ಕಮಾಲು ಮಾಡದೆ ನೀರಸ ಪ್ರದರ್ಶನ ತೋರಿದೆ.

    ಚಿತ್ರದಲ್ಲಿ ಇಬ್ಬರು ಮಹಾನ್ ಕಲಾವಿದರಿದ್ದರು. ಸಿನಿಮಾದ ಮೇಕಿಂಗ್ ಸರಿ ಇಲ್ಲ ಎನ್ನುವ ಕಾರಣಕ್ಕೇ ಪ್ರೇಕ್ಷಕರು ದೂರ ಸರಿಯಿತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಈಗ ಈ ಚಿತ್ರ ಜಗತ್ತಿನಾದ್ಯಂತ ಹಣ ಗಳಿಸಲು ಹೆಣಗಾಡುತ್ತಿದೆ. ಇದನ್ನೂ ಓದಿ: ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 18ನೇ ದಿನವೂ ರಾಕಿಭಾಯ್ ಅಬ್ಬರ: 400 ಕೋಟಿಯತ್ತ `ಕೆಜಿಎಫ್ 2′

    ಮೂರು ದಿನಗಳಲ್ಲಿ ಆಚಾರ್ಯ ವಿಶ್ವಾದ್ಯಂತ 73.1 ಕೋಟಿ ಕಲೆಕ್ಷನ್ ಮಾಡಿದ್ದು, ಥಿಯೇಟರ್‌ಗಳಲ್ಲಿ ಇನ್ನೇನೂ ಬಹಳ ದಿನ ರನ್ ಆಗುವ ಹಂತದಲ್ಲಿಲ್ಲ. ವರದಿಯ ಪ್ರಕಾರ ಚಿತ್ರದ ಥಿಯೇಟ್ರಿಕಲ್ ರೈಟ್ಸ್ 140 ಕೋಟಿ ರೂ. ಸಂಗ್ರಹವನ್ನು ನೋಡಿದರೆ ಆಚಾರ್ಯರು ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗುವುದಂತು ಗ್ಯಾರಂಟಿ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ಮೊದಲವಾರಂತ್ಯದಲ್ಲಿ ಚಿತ್ರವೂ ಕೇವಲ ರೂ. 73 ಕೋಟಿ ಕಲೆಕ್ಷನ್ ಮಾಡಿದ್ದು, ಆರ್‍ಆರ್‍ಆರ್ ಮತ್ತು ಕೆಜಿಎಫ್-ಚಾಪ್ಟರ್ 2 ಚಿತ್ರದ ಅಬ್ಬರದಿಂದಾಗಿ ಚಿತ್ರ ತಂಡಕ್ಕೆ ದೊಡ್ಡ ನಿರಾಸೆಯಾಗಿದೆ. ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದು, ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದಾರೆ.

  • ಒಂದೇ ಪ್ರಾಜೆಕ್ಟ್‌ನಲ್ಲಿ ವಿಕ್ಕಿ ಕೌಶಲ್- ಪೂಜಾ ಹೆಗ್ಡೆ?

    ಒಂದೇ ಪ್ರಾಜೆಕ್ಟ್‌ನಲ್ಲಿ ವಿಕ್ಕಿ ಕೌಶಲ್- ಪೂಜಾ ಹೆಗ್ಡೆ?

    ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟಿ ಪೂಜಾ ಹೆಗ್ಡೆ ಇದೀಗ ಹೊಸ ಪ್ರಾಜೆಕ್ಟ್ನಲ್ಲಿ `ಉರಿ’ ಖ್ಯಾತಿಯ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ ವಿಕ್ಕಿ ಮತ್ತು ಪೂಜಾ ಜತೆಯಿರೋ ಫೋಟೋ ವೈರಲ್ ಆಗುತ್ತಿದೆ.

    ಇತ್ತೀಚಿನ ಪೂಜಾ ಹೆಗ್ಡೆ ನಟನೆಯ `ರಾಧೆ ಶ್ಯಾಮ್’ ಮತ್ತು `ಬೀಸ್ಟ್’ ಎರಡು ಚಿತ್ರಗಳು ಬಾಕ್ಸ್ಆಫೀಸ್‌ನಲ್ಲಿ ಸೋತಿತ್ತು. ಆದ್ರು ಪೂಜಾ ಕಾಲ್‌ಶೀಟ್‌ಗೆ ಡಿಮ್ಯಾಂಡ್‌ಯೇನು ಕಮ್ಮಿಯಾಗಿಲ್ಲ. ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಈಗ ಬಿಟೌನ್ ಹ್ಯಾಡ್‌ಸಮ್ ವಿಕ್ಕಿ ಕೌಶಲ್ ಜತೆ ಹೊಸ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.

    ಅಭಯ್ ರಾಹಾ ನಿರ್ಮಾಣದಲ್ಲಿ ಹೊಸ ಜಾಹಿರಾತಿನಲ್ಲಿ ವಿಕ್ಕಿ ಮತ್ತು ಪೂಜಾ ಒಟ್ಟಿಗೆ ನಟಿಸಿದ್ದಾರೆ. ಈಗಾಗಲೇ ಜಾಹಿರಾತಿನ ಚಿತ್ರೀಕರಣ ನಡೆದಿದೆ. ಈ ವೇಳೆ ನಿರ್ಮಾಪಕ ಅಭಯ್ ರಾಹಾ ಜತೆ ವಿಕ್ಕಿ ಕೌಶಲ್ ಮತ್ತು ಪೂಜಾ ಹೆಗ್ಡೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ: ಸಮಂತಾ ನಟನೆಯ `ಓ ಅಂಟಾವ ಮಾಮ’ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ

    ಇನ್ನು ಪೂಜಾ ಲಿಸ್ಟ್ನಲ್ಲಿ ರಾಮ್‌ಚರಣ್ ಜತೆ `ಆಚಾರ್ಯ’, ಸಲ್ಮಾನ್ ಖಾನ್ ಜತೆ `ಕಭಿ ಈದ್ ಕಭಿ ದೀಪಾವಳಿ’ ರಣ್‌ವೀರ್ ಸಿಂಗ್ ಜೊತೆ `ಸರ್ಕಸ್’, ಮಹೇಶ್ ಬಾಬು ಜತೆ ಹೊಸ ಚಿತ್ರ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಿವೆ. ಇನ್ನು ವಿಕ್ಕಿ ಕೌಶಲ್ ಕೂಡ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

    ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

    ಟಾಲಿವುಡ್ ಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಇದೇ ಏಪ್ರಿಲ್ 29ಕ್ಕೆ ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿ ಪೂಜಾ ಹೆಗ್ಡೆ ಫೋಟೋ ಕಿಕ್ಲಿಸಿಕೊಳ್ಳುವಾಗ ರೊಮ್ಯಾನ್ಸ್ ಮಾಡ್ತಿರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಆಚಾರ್ಯ’ ಚಿತ್ರ ತೆರೆಗೆ ಅಪ್ಪಳಿಸಲು ದಿನಗಣನೆ ಶುರುವಾಗಿದೆ. ಜೊತೆಗೆ ಚಿತ್ರತಂಡದ ಭರ್ಜರಿ ಪ್ರಮೋಷನ್ ಕೂಡ ಜೋರಗಿದೆ. ಇತ್ತೀಚೆಗೆ ನಡೆದ `ಆಚಾರ್ಯ’ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ರಾಮ್‌ಚರಣ್, ಚಿರಂಜೀವಿ, ಪೂಜಾ ಹೆಗ್ಡೆ ಫೋಟೋ ಕ್ಲೀಕ್ ಮಾಡಿಸಿಕೊಳ್ತಿದ್ದರು. ನಂತರ ವೇದಿಕೆಯಿಂದ ಹೋಗುವಾಗ ಚಿರಂಜೀವಿ ಅವರು ಗಾಳಿಪಟದ ದಾರದ ರೀತಿಯಲ್ಲಿ ಸೀರೆ ಎಳೆಯುವಂತೆ ಕಾಣಿಸಿದೆ.  ನಟಿ ಪೂಜಾ ಮತ್ತೆ ನಗು ನಗುತ್ತಾ ಬರುವಾಗ ಮಗ ರಾಮ್‌ಚರಣ್‌ಗೆ ಹೋಗು ಅಂತಾ ಹೇಳಿರೋ ರೀತಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹೀಗೆ ಸಹನಟಿ ಜೊತೆ ಮೆಗಾಸ್ಟಾರ್‌ ಚಿರಂಜೀವಿ ಮಾಡ್ತಿರೋ ವಿಡಿಯೋ ಬಾರೀ ವೈರಲ್ ಆಗಿದೆ.

    ಈ ವಿಡಿಯೋಸ್ ರೀ-ಟ್ವೀಟ್ ಮಾಡಿ, ಸ್ವೀಟೇಷ್ಟ್ ಎವರ್ ಜೋಯಿವರ್ ಅಂತಾ ಟ್ವಿಟ್ ಮಾಡಿದ್ದಾರೆ. ಬೊಟ್ಟಬೊಮ್ಮ ಮತ್ತು ಮೆಗಾಸ್ಟಾರ್ ಆಫ್‌ಸ್ಕ್ರೀನ್‌ಗೆ ಪ್ರೇಂಡ್‌ಶಿಪ್ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು: ರೆಡಿಯಾಗ್ತಿದ್ದಾರೆ ಪ್ರಶಾಂತ್ ನೀಲ್

    ಇನ್ನು ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೇಲರ್‌ನಿಂದ ಸಖತ್ ಸೌಂಡ್ ಮಾಡಿರೋ `ಆಚಾರ್ಯ’ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕಾಗಿ ಕಾಯ್ತಿದ್ದಾರೆ.

  • ಬ್ಯಾಡ್ ಬಾಯ್ ಅಡ್ಡಾದಲ್ಲಿ `ಪುಷ್ಪ’ ಮ್ಯೂಸಿಕ್ ಡೈರೆಕ್ಟರ್

    ಬ್ಯಾಡ್ ಬಾಯ್ ಅಡ್ಡಾದಲ್ಲಿ `ಪುಷ್ಪ’ ಮ್ಯೂಸಿಕ್ ಡೈರೆಕ್ಟರ್

    ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಟನೆಯ `ಕಭಿ ಈದ್ ಕಭಿ ದಿವಾಲಿ’ ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. `ಪುಷ್ಪ’ ಚಿತ್ರದ ಮ್ಯೂಸಿಕ್ ಮೂಲಕ ಮೋಡಿ ಮಾಡಿದ್ದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇದೀಗ ಈ ಚಿತ್ರತಂಡಕ್ಕೆ ಸಾಥ್ ಕೊಡ್ತಿದ್ದಾರೆ.

    ಫರ್ಹಾದ್ ಸಮ್ಜಿ ನಿರ್ದೇಶನದಲ್ಲಿ ಮೂಡಿ ಬರಲಿರುವ `ಕಭಿ ಈದ್ ಕಭಿ ದಿವಾಲಿ’ ಚಿತ್ರ ಶೂಟಿಂಗ್‌ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದು, ಚಿತ್ರಕ್ಕೆ `ಪುಷ್ಪ’ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

    `ಕಭಿ ಈದ್ ಕಭಿ ದಿವಾಲಿ’ ಚಿತ್ರ ಫ್ಯಾಮಿಲಿ ಎಂಟರ್‌ಟೈನರ್ ಜತೆಗೆ ಆಕ್ಷನ್ ಸ್ಟೋರಿಯಾಗಿದ್ದು, ಇದೇ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇನ್ನು ಚಿತ್ರಕ್ಕೆ ಮಣಿಕಂದನ್ ಛಾಯಾಗ್ರಹಣವಿರಲಿದೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಮಿಂಚಿಂಗ್: ನಟಿಯ ಲುಕ್ಕಿಗೆ ಬಿಟೌನ್‌ ಸ್ಟಾರ್ಸ್‌ ಫಿದಾ

    ಭಿನ್ನ ಕಂಟೆಂಟ್ ಜತೆಗೆ ಡಿಫರೆಂಟ್ ಟೈಟಲ್ ಹೊತ್ತು ಬರುತ್ತಿರುವ ಈ ಚಿತ್ರ ಡಿಸೆಂಬರ್ 30, 2022ಕ್ಕೆ ತೆರೆಗೆ ಅಪ್ಪಳಿಸಲಿದೆ. ವಿಭಿನ್ನ ಕಥೆ ಜತೆ ಬರುತ್ತಿರೋ ಸಲ್ಮಾನ್ ಮತ್ತು ಪೂಜಾ ಅವರನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಪೂಜಾ ಹೆಗ್ಡೆಗೆ ಐರೆನ್ ಲೆಗ್ ಅಂತಾ ಕರೆದ ದಳಪತಿ ವಿಜಯ್ ಫ್ಯಾನ್ಸ್!

    ಪೂಜಾ ಹೆಗ್ಡೆಗೆ ಐರೆನ್ ಲೆಗ್ ಅಂತಾ ಕರೆದ ದಳಪತಿ ವಿಜಯ್ ಫ್ಯಾನ್ಸ್!

    ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಲಕ್ಕಿ ಚಾರ್ಮ್ ಎಂದೇ ಫೇಮಸ್ ಆಗಿರೋ ಪೂಜಾ ಹೆಗ್ಡೆ ಇದೀಗ ಸಿನಿಮಾಗಳಿಗಿಂತ ಟ್ರೋಲ್ ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ದಳಪತಿ ವಿಜಯ್ ಫ್ಯಾನ್ಸ್ ಅದ್ಯಾಕೋ ಪೂಜಾ ಹೆಗ್ಡೆ ಮೇಲೆ ಕಿಡಿಕಾರಿದ್ದಾರೆ. ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೆದು ಟ್ರೋಲ್ ಮಾಡ್ತಿದ್ದಾರೆ.

    ಕರಾವಳಿ ಬ್ಯೂಟಿ ಪೂಜಾ ಅಭಿನಯಿಸಿರುವ `ಅರವಿಂದ ಸಮೇತ ವೀರ ರಾಘವ’, ʻಅಲ್ಲಾ ವೈಕುಂಠಪುರಂಮುಲೋʼ, ʻಮಹರ್ಷಿʼ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಈಗ ಪೂಜಾ ನಟನೆಯ `ರಾಧೆ ಶ್ಯಾಮ್’ ಮತ್ತು `ಬೀಸ್ಟ್’ ಚಿತ್ರಗಳು ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮಾಡೋದರಲ್ಲಿ ಸೋತಿದೆ. ಹಾಗಾಗಿ ದಳಪತಿ ವಿಜಯ್ ಫ್ಯಾನ್ಸ್ ಪೂಜಾ ಮೇಲೆ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ʻರಾಧೆ ಶ್ಯಾಮ್‌ʼ ಮತ್ತು ʻಬೀಸ್ಟ್‌ʼ ಚಿತ್ರದ ಸೋಲಿಗೆ ಪೂಜಾರನ್ನ ಹೊಣೆ ಮಾಡ್ತಿದ್ದು, ವಿಜಯ್‌  ಅಭಿಮಾನಿಗಳು ಪೂಜಾರನ್ನು ಐರೆನ್ ಲೆಗ್ ಎಂದು ಟ್ರೋಲ್ ಮಾಡ್ತಿದ್ದಾರೆ.  ಇವರ ಜತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಸೇರಿಕೊಂಡಿದ್ದಾರೆ. ಸದ್ಯ ಸಾಲು ಸಾಲು ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿರೋ ಪೂಜಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಪೂಜಾ ನಟನೆಯ ಮುಂದಿನ ಚಿತ್ರಗಳ ಸಕ್ಸಸ್ ಟ್ರೋಲಿಗರಿಗೆ ಉತ್ತರವಾಗುತ್ತಾ ಅಂತಾ ಕಾದುನೋಡಬೇಕಿದೆ.

  • ಬೊಟ್ಟಬೊಮ್ಮ ಬೆಡಗಿಗೆ ಡ್ಯಾನ್ಸ್ ಫ್ಲೋರ್ ರೆಡಿ: `ಎಫ್ 3′ ಸೆಟ್‌ನಲ್ಲಿ ಪೂಜಾ ಹೆಗ್ಡೆ

    ಬೊಟ್ಟಬೊಮ್ಮ ಬೆಡಗಿಗೆ ಡ್ಯಾನ್ಸ್ ಫ್ಲೋರ್ ರೆಡಿ: `ಎಫ್ 3′ ಸೆಟ್‌ನಲ್ಲಿ ಪೂಜಾ ಹೆಗ್ಡೆ

    ಕ್ಷಿಣ ಭಾರತದ ಸದ್ಯ ಬ್ಯುಸಿಯೆಸ್ಟ್ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಸಾಲು ಸಾಲು ಸ್ಟಾರ್ ನಟರ ಚಿತ್ರಗಳಲ್ಲಿ ಕರಾವಳಿ ಬ್ಯೂಟಿ ನಟಿಸುತ್ತಿದ್ದಾರೆ. ಇದೀಗ ಸ್ಟಾರ್ ನಟ ವೆಂಕಟೇಶ್ ಮತ್ತು ವರುಣ್ ತೇಜ್ ನಟನೆಯ `ಎಫ್ 3′ ಚಿತ್ರದಲ್ಲಿ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಲು ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಟಾಲಿವುಡ್‌ನ ಬ್ಯೂಟಿ ಜೊತೆ ಪ್ರತಿಭೆಯಿರೋ ನಟಿ ಪೂಜಾ ಹೆಗ್ಡೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗ್ತಿದೆ. `ಅಲ್ಲಾ ವೈಕುಂಠಪುರಂಮುಲೋʼ ಬಾಕ್ಸ್ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆದಮೇಲಂತೂ ಪೂಜಾ ಎಲ್ಲಿಲ್ಲದ ಬೇಡಿಕೆ ಕ್ರಿಯೇಟ್ ಆಗಿತ್ತು.

    ಇತ್ತೀಚಿನ `ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ರು. ಕಲೆಕ್ಷನ್ ಅಷ್ಟು ಕಮಾಲ್ ಮಾಡದೇಯಿದ್ರು. ಪೂಜಾ ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಾಲು ಸಾಲು ಪ್ರಾಜೆಕ್ಟ್ಗಳು ಪೂಜಾರನ್ನ ಅರಸಿ ಬರುತ್ತಿದೆ. ಸದ್ಯ ನಟ ವೆಂಕಟೇಶ್ ಮತ್ತು ವರುಣ್ ತೇಜ್ ಅಭಿನಯ `ಎಫ್ 3′ ಚಿತ್ರಕ್ಕೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲು 1 ಕೋಟಿ ಸಂಭಾವನೆ ಪಡೆದಿದ್ದು, ಇದೀಗ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಇದನ್ನೂ ಓದಿ:ಇಂಥದ್ದೊಂದು ‘ಕಿಸ್’ (Kiss) ಗಾಗಿ ಆರು ವರ್ಷ ಕಾದಿದ್ದ ಆಲಿಯಾ ಭಟ್

    `ಎಫ್ 3′ ಚಿತ್ರ ಮೇ 27ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸದ್ಯ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲು ಪೂಜಾ ಹೆಗ್ಡೆ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಹಿಂದೆಯೇ ರಾಮ್ ಚರಣ್ ನಟನೆಯ `ರಂಗಸ್ಥಳಂ’ ಚಿತ್ರದಲ್ಲಿ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿ ಬಂದಿದ್ರು. ಆ ಸಾಂಗ್ ಬಿಗ್ ಹಿಟ್ ಕೂಡ ಆಗಿತ್ತು. ಇದೀಗ ಸ್ಪೆಷಲ್ ಸಾಂಗ್‌ನಿಂದ ಹಲ್‌ಚಲ್ ಎಬ್ಬಿಸಲು ಕರಾವಳಿ ಬ್ಯೂಟಿ ಪೂಜಾ ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿ ಪೂಜಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.