ತೆಲುಗಿನ ಮೇಜರ್ ಸಿನಿಮಾದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ ಅಡವಿ ಶೇಷ ನಟಿಯೊಬ್ಬರಿಗೆ ಮುಜುಗರ ಪಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅಡವಿ ಶೇಷ ಮಾತಿನಿಂದಾಗಿ ಆ ನಟಿ ಗರಂ ಆಗಿದ್ದಾರೆ. ‘ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅಡವಿ ಶೇಷ ಅವರಿಗೆ ನಿರೂಪಕರು ಪ್ರಶ್ನೆಯೊಂದನ್ನು ಕೇಳುತ್ತಾರೆ. ಆ ಪ್ರಶ್ನೆಗೆ ತಡವರಿಸದೇ, ತಕ್ಷಣವೇ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸುತ್ತಾರೆ.

ಅಂದುಕೊಂಡಂತೆ ಆಗಿದರೆ ಮೇಜರ್ ಸಿನಿಮಾದಲ್ಲಿ ಅಡವಿ ಶೇಷ ಜೊತೆ ಕನ್ನಡತಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸಬೇಕಿತ್ತು. ಪಾತ್ರ ಮಾಡಲು ಪೂಜೆ ಒಪ್ಪಿಕೊಂಡಿದ್ದರು. ಆನಂತರ ಸಿನಿಮಾದಿಂದ ಆಚೆ ಬಂದರು. ಈ ಸಿನಿಮಾದಲ್ಲಿ ನಟಿಸಲು ಪೂಜಾ 2 ಕೋಟಿ ಸಂಭಾವನೆ ಕೇಳಿದರು ಎನ್ನುವ ಸುದ್ದಿ ಹರಿದಾಡಿತು. ಈ ಕಾರಣಕ್ಕಾಗಿಯೇ ಸಿನಿಮಾದಿಂದ ಅವರನ್ನು ಕೈ ಬಿಡಲಾಯಿತು ಎಂದೂ ಹೇಳಿದರು. ಆದರೆ, ಅಸಲಿ ವಿಷಯವೇ ಬೇರೆ ಇತ್ತು. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

ಪೂಜಾ ಹೆಗ್ಡೆ ಪ್ರತಿಭಾನ್ವಿತ ಕಲಾವಿದೆ. ಅವರದ್ದೇ ಆದ ಅಭಿಮಾನಿ ಬಳಗವಿದೆ. ಸಿನಿಮಾದಿಂದ ಸಿನಿಮಾಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡು ಬಂದಿದ್ದಾರೆ ನಿಜ. ಆದರೆ ಮೇಜರ್ ಸಿನಿಮಾದಿಂದ ಅವರು ಆಚೆ ಬರಲು ಕಾರಣ, ಸಂಭಾವನೆ ಅಲ್ಲ. ಅಡವಿ ಶೇಷ ಜೊತೆ ನಟಿಸೋಕೆ ಆಗದೇ ಇರುವ ಕಾರಣಕ್ಕಾಗಿ ಸಿನಿಮಾದಿಂದ ಆಚೆ ಬಂದಿದ್ದರು ಎನ್ನುವುದು ಅಸಲಿ ವಿಚಾರ. ಅದು ಅಡವಿ ಶೇಷ ಅವರಿಗೂ ಗೊತ್ತಿತ್ತು. ಈ ಕಾರಣಕ್ಕಾಗಿಯೇ ಅವರು ಟಾಕ್ ಶೋ ನಲ್ಲಿ ಪೂಜಾ ಹೆಗ್ಡೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ನೀವು ಯಾವ ನಟಿಯ ಜೊತೆ ಕಿಸ್ ಮಾಡಲು ಹಿಂಜರಿಯುತ್ತೀರಿ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, ‘ಪೂಜಾ ಹೆಗ್ಡೆ’ ಎಂದು ಹೇಳುವ ಮೂಲಕ ನಟಿಗೆ ಅವಮಾನಿಸಿದ್ದಾರೆ. ಈ ಪ್ರಶ್ನೋತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಂತಹ ಸುಂದರಿ ಹುಡುಗಿಗೆ ಕಿಸ್ ಮಾಡಲ್ಲ ಅಂತ ಹೇಳಿದ ವಿಚಾರಕ್ಕೆ ಸ್ವತಃ ಅಡವಿ ಶೇಷ ಟ್ರೋಲ್ ಆಗಿದ್ದಾರೆ. ನೀನು ಹೀರೋನಾ? ಎಂದು ಹಲವರು ಪ್ರಶ್ನಿಸಿದ್ದರು.












ಚಿತ್ರರಂಗದಲ್ಲಿ ಯಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. `ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. `ಮಫ್ತಿ’ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.
ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಪ್ತಿ ನಿರ್ದೇಶಕ ನರ್ತನ್ ಸಿನಿಮಾಗೆ ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಕೈ ಜೋಡಿಸಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ದಕ್ಷಿಣದ ಸ್ಟಾರ್ ನಾಯಕಿಯನ್ನೇ ಆಯ್ಕೆ ಮಾಡಿದ್ದಾರೆ. ಕರಾವಳಿ ಮೂಲದ ನಟಿ ದಕ್ಷಿಣ ಭಾರತದ ಬೊಟ್ಟಬೊಮ್ಮ ಸುಂದರಿ ಪೂಜಾ ಹೆಗ್ಡೆ ಯಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: 





