Tag: ಪೂಜಾ ಹೆಗ್ಡೆ

  • ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರ ನಟನೆಯ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿದೆ. ಹೀಗಿರುವಾಗ ಮಹೇಶ್ ಬಾಬು (Mahesh Babu) ನಟನೆಯ ಮುಂದಿನ ಸಿನಿಮಾ ‘ಗುಂಟೂರು ಖಾರಂ’ ಪ್ರಾಜೆಕ್ಟ್‌ನಿಂದ ಪೂಜಾ ಹೆಗ್ಡೆ ಹೊರಬಂದಿದ್ದಾರೆ.

    ರಶ್ಮಿಕಾ, ಶ್ರೀಲೀಲಾ (Sreeleela) ಬಂದ ಮೇಲೆ ಪೂಜಾ ಹೆಗ್ಡೆಗೆ ಸೋಲು ಶುರುವಾಗಿದೆ. ಒಂದ್ ಕಡೆ ಸಿನಿಮಾ ಆಯ್ಕೆಯ ವಿಚಾರದಲ್ಲಿ ಸೋತರೆ, ಮತ್ತೊಂದೆಡೆ ಮಾಡಿದ ಸಿನಿಮಾವೆಲ್ಲಾ ಸೋಲುತ್ತಿದೆ. ಇತ್ತೀಚಿಗೆ ಸಲ್ಮಾನ್ ಖಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅದ್ದೂರಿ ಎಂಟ್ರಿ ಕೊಟ್ಟಿದ್ದರು. ಆದರೂ ಬಾಲಿವುಡ್‌ನಲ್ಲೂ ಲಕ್ ಇಲ್ಲದೇ ಆಯ್ತು. ಆದ್ರೂ ಅವರಿಗೆ ಅವಕಾಶಗಳೇನು ಕಮ್ಮಿಯಾಗುತ್ತಿಲ್ಲ. ಐರೆನ್ ಲೆಗ್ ಅಂತಾ ಹೆಸರು ಬರುವ ಮುನ್ನವೇ ಅವರಿಗೆ ಗೆಲುವಿನ ಅವಶ್ಯಕತೆಯಿದೆ.

    ‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಬರುವ ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಈ ಚಿತ್ರಕ್ಕಾಗಿ ಕಾಲ್‌ಶೀಟ್ ಕೊಟ್ಟಿದ್ದರು. ಆದರೆ ಈವರೆಗೆ ಚಿತ್ರೀಕರಣ ಮುಗಿದಿಲ್ಲ. ಈ ವರ್ಷ ಜೂನ್‌ನಿಂದ ಡಿಸೆಂಬರ್‌ವರೆಗೆ ಬೇರೆ ಸಿನಿಮಾಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಆ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಹೇಶ್ ಬಾಬು ಚಿತ್ರದಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಶೂಟ್‌ ಮಾಡಿದ ಭಾಗ ಮಹೇಶ್‌ ಬಾಬು ಅವರಿಗೆ ತೃಪ್ತಿ ಸಿಗದ ಕಾರಣ ಮತ್ತೊಮ್ಮೆ ರೀ-ಶೂಟ್‌ ಮಾಡಲಾಗುತ್ತಿದೆ. ಹಾಗಾಗಿ ಡೇಟ್‌ ಸಮಸ್ಯೆಯಿಂದ ಪೂಜಾ ಸಿನಿಮಾಗೆ ಬೈ ಬೈ ಹೇಳಿದ್ದಾರೆ.

    ಸದ್ಯ ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ತ್ರಿಷಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ತೇಲಿಬಿಟ್ಟಿದ್ದಾರೆ. ಈ ಹಿಂದೆ ಮಹೇಶ್ ಬಾಬು ಹಾಗೂ ತ್ರಿಷಾ ‘ಅತಡು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರಕ್ಕೂ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದರು. ‘ಪೊನ್ನಿಯಿನ್ ಸೆಲ್ವನ್’ 2 (Ponniyin Selvan 2) ಸರಣಿ ಚಿತ್ರದಿಂದ ತ್ರಿಷಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ:ಜಗ್ಗೇಶ್ ಗೆ ಕನ್ನಡ ಪಾಠ ಮಾಡಿದ ನಾಗ್ತಿ ಮೇಷ್ಟ್ರು

    ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯರಾಗಿ ಪೂಜಾ ಹೆಗ್ಡೆ, ಶ್ರೀಲೀಲಾ ಸ್ಕ್ರೀನ್  ಶೇರ್ ಮಾಡಿದ್ದರು. ಅರ್ಧ ಭಾಗ ಚಿತ್ರೀಕರಣ ಮುಗಿದಿರೋ ಬೆನ್ನಲ್ಲೇ ಪೂಜಾ ಹೆಗ್ಡೆ ಹೊರನಡೆದಿದ್ದಾರೆ. ತ್ರಿಷಾ, ಶ್ರೀಲೀಲಾ ಲೀಡ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

  • ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ಹೊಸ ಹೀರೋಯಿನ್ ಕಾಲಿಟ್ಟರೆ ಕೊಂಚ ಹಳೇ ಹೀರೋಯಿನ್‌ಗೆ ಹೊಟ್ಟೆ ಕಿಚ್ಚು ಸಹಜ. ಅದೂ ಇಬ್ಬರು ಕನ್ನಡ ನಟಿಯರ ಮಧ್ಯೆ ಶುರುವಾಗಿದೆ. ಆದರೆ ಇಬ್ಬರೂ ಕನ್ನಡಕ್ಕಿಂತ ಟಾಲಿವುಡ್‌ನಲ್ಲಿ ಹೆಚ್ಚು ಫೇಮಸ್ಸು. ಒಬ್ಬರು ಪೂಜಾ ಹೆಗ್ಡೆ (Pooja Hegde). ಇನ್ನೊಬ್ಬರು ಶ್ರೀಲೀಲಾ. ಇದೀಗ ಇವರು ಇನ್ನಿಬ್ಬರು ಸ್ಟಾರ್ಸ್  ಜೊತೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ (Sreeleela) ಕೂಡ ಕುಣಿಯುತ್ತಿದ್ದಾರೆ. ಅದಕ್ಕೇ ಹಳೆ ಹೀರೋಯಿನ್ ಪೂಜಾ ಮುಖ ಗಂಟು ಗಂಟು. ಏನಿದು ನಯಾ ಜಡೆ ಜಗಳ.?

    ಡಸ್ಕಿ ಬ್ಯೂಟಿ, ಪೂಜಾ ಹೆಗ್ಡೆ ಅವರು ಎಂಟು ವರ್ಷದಿಂದ ಟಾಲಿವುಡ್, ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಟಾಪ್ ಸ್ಟಾರ್ಸ್ ಜೊತೆ ನಟಿಸಿದ್ದಾರೆ. ಕಳೆದ ಒಂದು ವರ್ಷದಲ್ಲೇ ಐದಾರು ಸಿನಿಮಾ ಸೋತಿದ್ದಕ್ಕೆ ಹೈರಾಣಾಗಿದ್ದಾರೆ. ಆದರೂ ಅವಕಾಶ ಸಿಗುತ್ತಿವೆ. ಐರನ್ ಲೆಗ್ ಈ ಬಿರುದು ಖಾಯಂ ಆಗುವ ಮುನ್ನ ಗೆಲುವು ಬೇಕಾಗಿದೆ. ಈ ಹೊತ್ತಲ್ಲೇ ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಟಾಲಿವುಡ್ (Tollywood) ಅಂಗಳದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಹೆಚ್ಚು ಕಮ್ಮಿ ಹನ್ನೆರಡು ಸಿನಿಮಾಕ್ಕೆ ಬುಕ್ ಆಗಿದ್ದಾರೆ. ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್’ ಸಿಂಗ್,  ಮಹೇಶ್ ಬಾಬು (Mahesh Babu) ಅಭಿನಯದ ‘ಗುಂಟೂರು ಖಾರಂನಲ್ಲೂ’ ಕುಣಿಯಲಿದ್ದಾರೆ. ಆದರೆ ಈ ಎರಡು ಚಿತ್ರದಲ್ಲಿ ಪೂಜಾ ಕೂಡ ಇದ್ದಾರೆ. ಹೊಗೆ ಏಳದೇ ಇರುತ್ತಾ?‌ ಇದನ್ನೂ ಓದಿ:ನಟ ಸಂಚಾರಿ ವಿಜಯ್‌ ಅವರ 2ನೇ ವರ್ಷದ ಪುಣ್ಯಸ್ಮರಣೆ

    ನಿನ್ನೆ ಮೊನ್ನೆ ಬಂದ ಶ್ರೀಲೀಲಾ ಏಕಾಏಕಿ ಪ್ರಿನ್ಸ್ ಹಾಗೂ ಪವರ್‌ಸ್ಟಾರ್ ಜೊತೆ ನಟಿಸೋದಾ? ನಾನು ನಟಿಸೋ ಸಿನಿಮಾದಲ್ಲಿ ಚೈಲ್ಡ್ ಲೀಲಾನಾ? ಇಬ್ಬರಲ್ಲಿ ಯಾರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆಯೋ? ಇದು ಪೂಜಾ ಅನುಮಾನದ ಹುತ್ತ. ಹೀಗಾಗಿಯೇ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಗುಂಟೂರು ಖಾರಂ ಸಿನಿಮಾದ ಪೋಸ್ಟರ್‌ಗೆ ಲೈಕ್ ಒತ್ತಿಲ್ಲ. ಕಾಮೆಂಟ್ಸ್ ಒಗೆದಿಲ್ಲ ಇನ್ನು ಶೇರ್ ಮಾಡುವ ಅಪರಾಧಕ್ಕೆ ಕೈ ಹಾಕುತ್ತಾರಾ? ಇದನ್ನು ನೋಡಿ ಜನರು ಜಡೆ ಜಗಳ ಸ್ಟಾರ್ಟು ಕಮ್ಮಿ ಅಗುತ್ತಾ ಹೀಟು ಎಂದು ಟ್ರೋಲಿಸುತ್ತಿದ್ದಾರೆ. ಇದೇ ಪೂಜಾ ಈ ಚಿತ್ರದ ಪೋಸ್ಟರ್ ಪ್ರಿನ್ಸ್ ಹಾಕಿದಾಗ ಶೇರ್ ಮಾಡಿದ್ದರು. ಶ್ರೀಲೀಲಾ ಹಾಕಿದಾಗ ಸೈಲೆಂಟ್ ಸನ್ಯಾಸಿನಿ.

    ಇಬ್ಬರು ಹೀರೋಯಿನ್ಸ್ ನಡುವೆ ಜಗಳ, ಮುನಿಸು, ಕಿತ್ತಾಟ ಎಲ್ಲವೂ ಅನಾದಿ ಕಾಲದಿಂದ ಇಲ್ಲಿ ನಡೆದುಕೊಂಡು ಬಂದಿದೆ. ರಕ್ಷಿತಾ ಹಾಗೂ ರಮ್ಯಾ ಹೆಂಗೆ ನಾಲಿಗೆಯಲ್ಲಿ ಹೊಡೆದಾಡಿಕೊಂಡಿದ್ದರೆಂದು ಎಲ್ಲರಿಗೂ ಗೊತ್ತು. ಪೂಜಾ ಅಂಡ್ ಶ್ರೀಲೀಲಾ ಅದನ್ನು ಮುಂದುವರೆಸಿದ್ದಾರೆ. ಪೂಜಾ ನಟಿಸಿದ ಸಿನಿಮಾ ಸೋಲುತ್ತಿವೆ. ಶ್ರೀಲೀಲಾ ಚಿತ್ರ ಜಾಕ್‌ಪಾಟ್ ಹೊಡೆಯುತ್ತಿವೆ. ನನ್ನ ಅನ್ನಕ್ಕೆ ಎಲ್ಲಿ ಕೈ ಹಾಕಿ ತಿಂದು ತೇಗುತ್ತಾಳೋ ಲೀಲಾ ಅನ್ನೋದು ಪೂಜಾ ಸಂಕಟ. ನೀನು ಆಗ್ಲೇ ಬೋರ್ ಆಗಿದ್ದೀಯಾ, ಮದ್ವೆ ಮಕ್ಳು ಮಾಡ್ಕೊಂಡಿರು ಬಹುಶಃ ಇದು ಶ್ರೀಲೀಲಾ ಸವಾಲ್.

    ಒಟ್ನಲ್ಲಿ ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ (Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Kriti Shetty) ಅವಕಾಶಗಳು ಕಮ್ಮಿಯಾಗಿರೋದಂತೂ ನಿಜ. ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಶ್ರೀಲೀಲಾ ಲಿಸ್ಟ್‌ಗೆ ಜಮಾ ಆಗುತ್ತಿರೋದು ನೋಡಿ ಈ ನಟಿಯರಿಗೆ ತಲೆನೋವಾಗಿದೆ.

  • ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲು- ಐಟಂ ಡ್ಯಾನ್ಸ್ ಮಾಡಲು ಸಜ್ಜಾದ ಪೂಜಾ ಹೆಗ್ಡೆ

    ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲು- ಐಟಂ ಡ್ಯಾನ್ಸ್ ಮಾಡಲು ಸಜ್ಜಾದ ಪೂಜಾ ಹೆಗ್ಡೆ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರೋ ಪೂಜಾ ಹೆಗ್ಡೆ ಹೊಸ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರ್ಧಾರ ಮಾಡಿದ್ದಾರೆ.

    ಅಲ್ಲು ಅರ್ಜುನ್ ಜೊತೆ ‘ಅಲ್ಲಾ ವೈಕುಂಠಪುರಂ’ ಸಿನಿಮಾದಲ್ಲಿ ನಾಯಕಿಯಾಗಿ ಸಕ್ಸಸ್ ಕಂಡ ಪೂಜಾ ಹೆಗ್ಡೆಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಆಯ್ಕೆಗಳಲ್ಲಿ ಪೂಜಾ ಎಡವಿದ್ರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಚಿತ್ರದ ನಂತರ ಪೂಜಾ ನಟಿಸಿದ ಅಷ್ಟೂ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಚಿತ್ರ ಕೂಡ ಫ್ಲಾಪ್ ಆಗಿದೆ. ಸಲ್ಮಾನ್ ಖಾನ್‌ಗೆ (Salman Khan) ಜೋಡಿಯಾಗಿ ಪೂಜಾ ನಟಿಸಿದ್ದರು.

    ನಾಯಕಿಯರು ಕೂಡ ಐಟಂ ಡ್ಯಾನ್ಸ್ ಮಾಡಿ ಸಕ್ಸಸ್ ಕಂಡವರು ಇದ್ದಾರೆ. ದೀಪಿಕಾ ಪಡುಕೋಣೆ, ಸಮಂತಾ, ಕತ್ರಿನಾ ಕೈಫ್ ಸೇರಿದಂತೆ ಐಟಂ ಹಾಡಿಗೆ ಸೊಂಟ ಬಳುಕಿಸಿ ಗೆದ್ದಿದ್ದಾರೆ. ಇದೀಗ ಇದೇ ಹಾದಿಗೆ ಪೂಜಾ ಹೆಗ್ಡೆ ಹೆಜ್ಜೆ ಇಟ್ಟಿದ್ದಾರೆ. ಐಟಂ ಡ್ಯಾನ್ಸ್ ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ:ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಸೂಕ್ತ ಎಂದು ಕ್ಯಾತೆ ತೆಗೆದ ಐಶ್ವರ್ಯಾ ರಾಜೇಶ್

    ಪೂಜಾ ಹೆಗ್ಡೆ ಬಾಲಿವುಡ್‌ನಿಂದ ಆಫರ್ ಪಡೆಯುತ್ತಿದ್ದರೂ ಕಳೆದ ಕೆಲವು ತಿಂಗಳಿಂದ ತೆಲುಗಿನಲ್ಲಿ ಯಾವುದೇ ಸಿನಿಮಾಗೂ ಸಹಿ ಮಾಡಿಲ್ಲ. ಮಹೇಶ್ ಬಾಬು ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಸದ್ಯ ಪೂಜಾ ಬಳಿ ಯಾವುದೇ ತೆಲುಗು ಸಿನಿಮಾವಿಲ್ಲ. ಹಾಗಾಗಿ ಐಟಂ ಹಾಡುಗಳ (Item Songs) ಮೇಲೆ ಕಣ್ಣಿಟ್ಟಿದ್ದಾರೆ. ಸಮಂತಾ ಹಾಗೆ ಪೂಜಾ ಕೂಡ ಐಟಂ ಹಾಡಿನಲ್ಲಿ ಕಾಣಿಸಿಕೊಂಡು ದೊಡ್ಡ ಸಕ್ಸಸ್ ಕಾಣುತ್ತಾರಾ ಮುಂದಿನ ಸಿನಿಮಾಗಳಲ್ಲಿ ಗೊತ್ತಾಗಲಿದೆ. ಸಾಲು ಸಾಲು ಸೋಲಿನ ಬಳಿಕ ಮತ್ತೆ ಗೆಲುವಿನ ಟ್ರ‍್ಯಾಕ್‌ಗೆ ಮರಳುವುದು ತುಂಬಾ ಕಷ್ಟ. ಹಾಗಾಗಿ ಪೂಜಾ ಹೆಗ್ಡೆ ಮತ್ತೆ ಯಶಸ್ಸು ಕಾಣುತ್ತಾರ ಕಾದು ನೋಡಬೇಕಿದೆ.

  • ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳು ಸೋತಿದ್ದರೂ ಕೂಡ ಪೂಜಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಇತ್ತೀಚಿನ ಸಲ್ಮಾನ್ ಜೊತೆಗಿನ ‘ಕಿಸಿ ಕಾ ಜಾನ್ ಕಿಸಿ ಕಿ ಭಾಯ್’ (Kisi Ka Jaan Kisi Ki Jaan) ಚಿತ್ರ ಕಲೆಕ್ಷನ್‌ನಲ್ಲಿ ಫ್ಲಾಪ್ ಆಗಿದೆ. ಹೀಗಿದ್ದರೂ ಪೂಜಾಗೆ ಬಾಲಿವುಡ್‌ನಿಂದ ಮತ್ತೊಂದು ಬಿಗ್ ಪ್ರಾಜೆಕ್ಟ್ ಸಿಕ್ಕಿದೆ.

    ಪೂಜಾ ಹೆಗ್ಡೆ ಅವರು 2020ರ ನಂತರ ನಟಿಸಿದ ರಾಧೆ ಶ್ಯಾಮ್, ಬಿಸ್ಟ್, ಆಚಾರ್ಯ (Acharya) ಸಿನಿಮಾ ಸೇರಿದಂತೆ ಬರೋಬ್ಬರಿ ಆರು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಕರಾವಳಿ ಸುಂದರಿ ಪೂಜಾಗೆ ಅಂದ ಚೆಂದ, ಪ್ರತಿಭೆ ಇದ್ದರೂ ಲಕ್ ಕೈ ಕೊಟ್ಟಿದೆ. ಇದನ್ನೂ ಓದಿ:ನಾನೇನೂ ತಪ್ಪು ಮಾಡಿಲ್ಲ- ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಶೋಭಿತಾ ರಿಯಾಕ್ಷನ್

    ಬಾಲಿವುಡ್‌ನ ಡ್ಯಾಶಿಂಗ್ ಹೀರೋ ಶಾಹಿದ್ ಕಪೂರ್ (Shahid Kapoor) ನಾಯಕಿಯಾಗಿ ಪೂಜಾ ಹೆಗ್ಡೆ ಸೆಲೆಕ್ಟ್ ಆಗಿದ್ದಾರೆ. ಥ್ರಿಲ್ಲರ್ ಸಿನಿಮಾವೊಂದರಲ್ಲಿ ಶಾಹಿದ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಸಿನಿಮಾಗೆ ‘ಕೋಯಿ ಶಕ್’ ಎಂದು ಟೈಟಲ್ ಇಡಲಾಗಿದೆ. ಮೇ 8ರಿಂದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಪೂಜಾ- ಶಾಹಿದ್ ಪೇರ್ ಮೇಲೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ನೋಡಲು ಎದುರು ನೋಡ್ತಿದ್ದಾರೆ.

  • ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ಸೌತ್ ಬ್ಯೂಟಿ ಪೂಜಾ ಹೆಗ್ಡೆ ಅವರು ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿತ್ರ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹೀಗಿರುವಾಗ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ, ಮಂಗಳೂರಿಗೆ ನಟಿ ಪೂಜಾ ಹೆಗ್ಡೆ (Pooja Hegde) ಬಂದು ಇಳಿದಿದ್ದಾರೆ.

    ಕುಟುಂಬದ (Family) ಜೊತೆ ಪೂಜಾ ಹೆಗ್ಡೆ ಬಾಂಬೆಯಲ್ಲಿ ಸೆಟೆಲ್ ಆಗಿದ್ರು ಕೂಡ ಆಗಾಗ ನಟಿ ಮಂಗಳೂರಿಗೆ (Mangaluru) ಬಂದು ಹೋಗುತ್ತಾರೆ. ಪೂಜಾ ಕುಟುಂಬ ಮೂಲತಃ ಮಂಗಳೂರಿನವರಾಗಿದ್ದು, ದೈವ ಕೋಲ, ಕಟೀಲು ದೇವಸ್ಥಾನ ಅಂತಾ ಬಂದು ಹೋಗುತ್ತಾರೆ.

    ಇದೀಗ ಸಿನಿಮಾ ತೆರೆಕಂಡ ಬೆನ್ನಲ್ಲೇ ತಮ್ಮ ಕುಟುಂಬದ ಜೊತೆ ಮಂಗಳೂರಿಗೆ ಪೂಜಾ ಬಂದಿದ್ದಾರೆ. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದಿದ್ದಾರೆ. ನಾಯಿ ಜೊತೆ ಆಟವಾಡಿದ್ದಾರೆ. ಮಂಗಳೂರಿನ ರುಚಿಯಾದ ಮೀನಿನ ಊಟ ಸವಿದಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ

     

    View this post on Instagram

     

    A post shared by Pooja Hegde (@hegdepooja)

    ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿರುವ ಪೂಜಾಗೆ ಮುಂದಿನ ಚಿತ್ರವಾದರೂ ಸಕ್ಸಸ್ ತಂದು ಕೊಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • Kisi Ka Bhai Kisi Ki Jaan:ರಿಲೀಸ್‌ಗೂ ಮೊದಲೇ 23000 ಟಿಕೆಟ್‌ ಮಾರಾಟ

    Kisi Ka Bhai Kisi Ki Jaan:ರಿಲೀಸ್‌ಗೂ ಮೊದಲೇ 23000 ಟಿಕೆಟ್‌ ಮಾರಾಟ

    ಬಾಲಿವುಡ್‌ನ (Bollywood) ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿತ್ತು. ಬಿಟೌನ್ ಅಂಗಳದಲ್ಲಿ ದಕ್ಷಿಣ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಈ ವರ್ಷ ‘ಪಠಾಣ್’ (Pathaan) ಸಿನಿಮಾದ ಕಲೆಕ್ಷನ್‌ನಿಂದ ಬಾಲಿವುಡ್‌ಗೆ ಶುಕ್ರದಸೆ ಶುರುವಾಗಿದೆ. ಶಾರುಖ್ ಖಾನ್ ಸಿನಿಮಾ ನಂತರ ಈಗ ಸಲ್ಮಾನ್ ಖಾನ್ ಸಿನಿಮಾ ತೆರೆಯ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್‌ಗೂ ಮುನ್ನವೇ 23000 ಟಿಕೆಟ್ ಸೇಲ್ ಆಗಿದೆ.

    ಭಾಯಿ ಜಾನ್ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಈದ್ ಪ್ರಯುಕ್ತ ಏ.21ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಐನಾಕ್ಸ್, ಪಿವಿರ್, ಸಿನೆಪೊಲೀಸ್ ಇನ್ನಿತರೆ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್‌ಗೂ ಮೊದಲೇ ಈ ಸಿನಿಮಾದ 23000 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಹಾಗಾಗಿ ಈ ಸಿನಿಮಾ ‘ಪಠಾಣ್ʼ ಚಿತ್ರದಂತೆ ದೊಡ್ಡ ಓಪನಿಂಗ್ ಪಡೆಯುವ ನಿರೀಕ್ಷೆ ಸಿನಿಪ್ರೇಮಿಗಳಿಗೆ ಇದೆ.

    ಮಲ್ಟಿಪ್ಲೆಕ್ಸ್‌ನಲ್ಲಿ ಈವರೆಗೆ ಮುಂಗಡವಾಗಿ ಸೇಲ್ ಆಗಿರುವ ಟಿಕೆಟ್‌ಗಳ ಮೊತ್ತವೇ ಸುಮಾರು 50 ಲಕ್ಷಕ್ಕೂ ಹೆಚ್ಚಿದೆ. ಹಾಗಾಗಿಯೇ ಸಲ್ಮಾನ್ ಖಾನ್ – ಪೂಜಾ ಹೆಗ್ಡೆ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಾಟಾಗಿದೆ. ಇದನ್ನೂ ಓದಿ:ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

    ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟ್ರೈಲರ್ – ಹಾಡುಗಳಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ವೆಂಕಟೇಶ್ ಗೆಸ್ಟ್ ರೋಲ್ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಸೇರಿದಂತೆ ಕೆಲ ಸಿನಿಮಾಗಳು ಗೆಲ್ಲಾಪೆಟ್ಟಿಗೆಯಲ್ಲಿ ಸೋತಿದೆ. ಈ ವರ್ಷ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕಲೆಕ್ಷನ್ ವಿಷ್ಯ ಹಿಸ್ಟರಿ ಕ್ರಿಯೆಟ್ ಮಾಡುತ್ತಾ ಕಾದುನೋಡಬೇಕಿದೆ.

  • ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ರಾವಳಿ ಸುಂದರಿ ಪೂಜಾ ಹೆಗ್ಡೆ (Pooja Hegde) ಅವರು ಸೌತ್ ಸಿನಿಮಾಗಳಲ್ಲಿ ಮೋಡಿ ಮಾಡಿದ ಮೇಲೆ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ (Kisi Ka Bhai Kisi Ki Jaan) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಯಶ್‌ನ (Yash) ಲೆಜೆಂಡ್ (Legend) ಎಂದು ಹಾಡಿಹೊಗಳಿದ್ದಾರೆ.

    ಮೊದಲ ಬಾರಿಗೆ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಾಲು ಸಾಲು ಸಿನಿಮಾ ಸೋಲುಗಳ ಕಂಡಿರುವ ನಟಿ ಪೂಜಾ, ಗೆಲುವಿಗಾಗಿ ಎದುರು ನೋಡ್ತಿದ್ದಾರೆ. ಪ್ರಸ್ತುತ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನಂತರ ಪೂಜಾ ಲಕ್ ಬದಲಾಗುತ್ತಾ ಎಂದು ಕಾದುನೋಡಬೇಕಿದೆ.

    ಸಂದರ್ಶನವೊಂದರಲ್ಲಿ ನಟಿ ಮುಕ್ತವಾಗಿ ಮಾತನಾಡಿದ್ದಾರೆ. ಫನ್ ರೌಂಡ್‌ನಲ್ಲಿ ವಿವಿಧ ನಟರ ಫೋಟೋಗಳು ಬಂದಾಗ ಅವರ ಬಗ್ಗೆ ಮಾತನಾಡಿದ ಪೂಜಾ ಹೆಗ್ಡೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕುರಿತಾಗಿಯೂ ಸಹ ಮಾತನಾಡಿದರು. ಯಶ್ ಚಿತ್ರವನ್ನು ತೋರಿಸಿದಾಗ ಮಾತನಾಡಿದ ಪೂಜಾ ಹೆಗ್ಡೆ, ಕೆಜಿಎಫ್ (KGF) ಬಳಿಕ ರಾಕಿ ಭಾಯ್ ಕೂಡ ಲೆಜೆಂಡ್ ಆಗಿದ್ದಾರೆ. ನಾನು ಅವರ ಜೊತೆ ಹೆಚ್ಚೇನೂ ಮಾತನಾಡಿಲ್ಲ. ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ. ಆದಷ್ಟು ಬೇಗ ಅವರ ಜತೆ ನಟಿಸುತ್ತೇನೆ ಎಂದು ಹೇಳಬಹುದು ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ:‘ಎಂದೆಂದಿಗೂ ಆರ್‌ಸಿಬಿ’ ಎಂದ ನಟಿ ದಿವ್ಯಾ ಉರುಡುಗ

    ಈ ಮೂಲಕ ಯಶ್ ಜೊತೆ ನಟಿಸುವ ಆಸೆಯನ್ನು ಪೂಜಾ ಹೆಗ್ಡೆ ವ್ಯಕ್ತಪಡಿಸಿದ್ದಾರೆ. ನಟಿಯ ಹೇಳಿಕೆ ಬೆನ್ನಲ್ಲೇ ಯಶ್ ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆನೇ ನಾಯಕಿ ಎಂಬ ಮಾತುಗಳು ವ್ಯಕ್ತವಾಗುತ್ತಿದೆ. ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ.

  • ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಹೆಗ್ಡೆ ಸ್ಪಷ್ಟನೆ

    ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಹೆಗ್ಡೆ ಸ್ಪಷ್ಟನೆ

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯ ಶಾರುಖ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಸಲ್ಮಾನ್ ಖಾನ್ (Salman Khan) ಜೊತೆಗಿನ ಡೇಟಿಂಗ್ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ರಶ್ಮಿಕಾಗೆ ಗಡ್ಡ ಬೆಳೆದಿದೆ ಎಂದು ಮಾರ್ಕ್ ಮಾಡಿ ಕಾಲೆಳೆದ ಅಭಿಮಾನಿ

    ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚಿಗೆ ಚಿತ್ರದ ‘ಯೆಂಟಮ್ಮಾʼ ಸಾಂಗ್ ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆದಿತ್ತು. ರಾಮ್ ಚರಣ್- ವೆಂಕಟೇಶ್ (Venkatesh) ಕೂಡ ಈ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಾಂಗ್ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಬಳಿಕ ಚಿತ್ರದ ಟ್ರೈಲರ್‌ಗೆ ವ್ಯಾಪಕ ಮೆಚ್ಚುಗೆ ಅಭಿಮಾನಿಗಳಿಂದ ವ್ಯಕ್ತವಾಗಿತ್ತು.

    ಸಲ್ಮಾನ್ ಖಾನ್ ಅವರ ಹೆಸರು ಸಾಕಷ್ಟು ನಟಿಮಣಿಯರ ಜೊತೆ ತಳುಕು ಹಾಕಿಕೊಂಡಿದೆ. ಸಾಕಷ್ಟು ನಟಿಯರ ಜೊತೆ ಡೇಟ್ ಮಾಡಿದ್ದಾರೆ. ಮದುವೆವರೆಗೂ ಹೋಗಿ ಕೈ ತಪ್ಪಿದೆ. ಯಾಕೆ ಎಂಬ ವಿಚಾರ ಇದುವರೆಗೂ ತಿಳಿದುಬಂದಿಲ್ಲ. ಕೆಲ ತಿಂಗಳುಗಳಿಂದ ನಟಿ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಈಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.

    ನಾನು ಸಿಂಗಲ್, ನನ್ನ ಕೆರಿಯರ್ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ ಎಂದು ಸಲ್ಮಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಬ್ರೇಕ್ ಹಾಕಿದ್ದಾರೆ. ನನ್ನ- ಸಲ್ಮಾನ್ ಖಾನ್ ನಡುವೆ ಉತ್ತಮ ಸ್ನೇಹವಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

    ಇತ್ತೀಚಿನ ಪೂಜಾ ನಟನೆಯ ಸಾಲು ಸಾಲು ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಕಲೆಕ್ಷನ್ ಮಾಡಿರೋದ್ರಲ್ಲಿ ಸೋತಿದೆ. ಹಾಗಾಗಿ ಕರಾವಳಿ ಸುಂದರಿಗೆ ಈಗ ಗೆಲುವಿನ ಅವಶ್ಯಕತೆಯಿದೆ. Kisi Ka Bhai Kisi Ki Jaan ಸಿನಿಮಾ ಕೈ ಹಿಡಿಯುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ಸಿಕ್ಸ್‌ಪ್ಯಾಕ್‌ಗೆ ವಿಎಫ್‌ಎಕ್ಸ್ ಎಂದವರಿಗೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ?

    ಸಿಕ್ಸ್‌ಪ್ಯಾಕ್‌ಗೆ ವಿಎಫ್‌ಎಕ್ಸ್ ಎಂದವರಿಗೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ?

    ಬಾಲಿವುಡ್ (Bollywood) ಅಂಗಳದಲ್ಲಿ ಸಲ್ಮಾನ್ ಖಾನ್‌ಗೆ ಸಖತ್ ಬೇಡಿಕೆ ಇದೆ. ಅವರದ್ದೇ ಆದ ದೊಡ್ಡ ಫ್ಯಾನ್ ಬೇಸ್ ಇದೆ. ಹೀಗಿರುವಾಗ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಏ.21ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸದ್ಯ ಚಿತ್ರದ ಟ್ರೈಲರ್‌ನಿಂದ ಸೌಂಡ್ ಮಾಡ್ತಿದೆ. ಟ್ರೈಲರ್ ನೋಡ್ತಿದ್ದಂತೆ ಸಲ್ಲು ಬಾಯ್ ಸಿಕ್ಸ್‌ಪ್ಯಾಕ್ ವಿಎಫ್‌ಎಕ್ಸ್ ಎಂದವರಿಗೆ ಸಲ್ಮಾನ್, ವೇದಿಕೆ ಮೇಲೆ ಶರ್ಟ್ ಬಿಚ್ಚಿ ತೋರಿಸಿದ್ದಾರೆ. ಇದನ್ನೂ ಓದಿ: ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಮಾನಸ ಜೋಶಿ

    ಸಲ್ಮಾನ್ ಖಾನ್ ನಿರ್ಮಾಣದ ಸಿನಿಮಾದಲ್ಲಿ ಸಲ್ಲುಗೆ ಜೋಡಿಯಾಗಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde)ಮಿಂಚಿದ್ದಾರೆ. ರಾಮ್ ಚರಣ್ (Ramcharan), ವೆಂಕಟೇಶ್ (Venkatesh) ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಸಾಂಗ್ – ಟ್ರೈಲರ್‌ನಿಂದ ಸಿನಿಮಾ ಧೂಳೆಬ್ಬಿಸುತ್ತಿದೆ. ಟ್ರೈಲರ್‌ ಝಲಕ್‌ನಲ್ಲಿ ಸಿಕ್ಸ್‌ಪ್ಯಾಕ್‌ನಲ್ಲಿ ಮಿಂಚಿದ್ದಾರೆ.

     

    View this post on Instagram

     

    A post shared by Pooja Hegde (@hegdepooja)

    ಏಪ್ರಿಲ್ 10ರಂದು Kisi Ka Bhai Kisi Ki Jaan ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಲ್ಮಾನ್ ಖಾನ್, ಚಿತ್ರದ ನಾಯಕಿ ಪೂಜಾ ಹೆಗ್ಡೆ ಮೊದಲಾದವರು ವೇದಿಕೆ ಏರಿದರು. ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್ ಪ್ಯಾಕ್ ಉದ್ದೇಶಿಸಿ ಕೆಲವರು ಇದನ್ನು ವಿಎಫ್‌ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಶ್ರಮವಹಿಸಿ ಮಾಡಿದ ದೇಹ ಎಂಬುದನ್ನು ಸಾಬೀತು ಮಾಡಿದ್ದಾರೆ.

    ಸಲ್ಮಾನ್ ಖಾನ್‌ಗೆ ವಯಸ್ಸು 57 ಆದರೂ ಫಿಟ್‌ನೆಸ್‌ನಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸಿನಿಮಾ ಶೂಟಿಂಗ್ ಮಧ್ಯೆ ಜಿಮ್, ವರ್ಕೌಟ್ ಅಂತಾ ದೇಹದ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಹಾಗಾಗಿ ಸಿನಿಮಾದಲ್ಲಿ ಸಲ್ಲು ಕಟ್ಟು ಮಸ್ತಾಗಿ ಕಾಣಿಸಿಕೊಂಡಿದ್ದಾರೆ.

  • ಸಲ್ಮಾನ್‌ ಖಾನ್‌ ಲುಂಗಿ ಡಾನ್ಸ್‌ ಅಸಹ್ಯಕರವಾಗಿದೆ, ಸಂಸ್ಕೃತಿಯನ್ನ ಅವಮಾನಿಸಿದೆ – ಮಾಜಿ ಕ್ರಿಕೆಟರ್‌ ಕಿಡಿ

    ಸಲ್ಮಾನ್‌ ಖಾನ್‌ ಲುಂಗಿ ಡಾನ್ಸ್‌ ಅಸಹ್ಯಕರವಾಗಿದೆ, ಸಂಸ್ಕೃತಿಯನ್ನ ಅವಮಾನಿಸಿದೆ – ಮಾಜಿ ಕ್ರಿಕೆಟರ್‌ ಕಿಡಿ

    ಮುಂಬೈ: ಸಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ‘ಯೆಂಟಮ್ಮಾ’ ಸಾಂಗ್ (Yentamma Song) ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್, ದಗ್ಗುಬಾಟಿ ವೆಂಕಟೇಶ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

    ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಲಕ್ಷ್ಮಣ್‌ ಶಿವರಾಮಕೃಷ್ಣನ್‌ (Laxman Sivaramakrishnan), ಸಲ್ಮಾನ್‌ ಖಾನ್‌ ಡಾನ್ಸ್‌ ತುಂಬಾ ಅಸಹ್ಯಕರವಾಗಿದೆ, ದಕ್ಷಿಣ ಭಾರತದ ಸಂಸ್ಕೃತಿಯನ್ನ ಅವಮಾನಿಸುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಲ್ಲು ಡಾನ್ಸ್‌ ಅತ್ಯಂತ ಹಾಸ್ಯಾಸ್ಪದವಾಗಿದೆ. ಸಲ್ಮಾನ್‌ ಖಾನ್‌ ಧರಿಸಿರೋದು ಲುಂಗಿ ಅಲ್ಲ, ಧೋತಿ. ಸಾಂಪ್ರದಾಯಿಕ ಉಡುಪನ್ನ ಅಸಹ್ಯಕರವಾಗಿ ತೋರಿಸಿ, ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯನ್ನ ಇದು ಅವಮಾನಿಸಲಾಗಿದೆ ಎಂದು ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಹನಟನ ಹುಟ್ಟು ಹಬ್ಬಕ್ಕೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ರಶ್ಮಿಕಾ ಮಂದಣ್ಣ

    ಸಲ್ಮಾನ್ ಖಾನ್ ನಟನೆ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಚಿತ್ರಕ್ಕೆ ಗೆಸ್ಟ್ ಅಪಿಯರೆನ್ಸ್ ಕೊಟ್ಟಿರುವ ರಾಮ್ ಚರಣ್ – ವೆಂಕಟೇಶ್ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಪೂಜಾ ಹೆಗ್ಡೆ ಕೂಡ ನಾನೇನು ಕಮ್ಮಿ ಅಂತಾ ಭರ್ಜರಿಯಾಗಿ ಯೆಂಟಮ್ಮಾ ಸಾಂಗ್‌ಗೆ ಸ್ಟೆಪ್ ಹಾಕಿದ್ದಾರೆ.

    ಪಾಯಲ್ ದೇವ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್ ನೀಡುತ್ತಿದೆ. ಇದನ್ನೂ ಓದಿ: ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್