Tag: ಪೂಜಾ ಹೆಗ್ಡೆ

  • 1.39 ಲಕ್ಷ ಮೊತ್ತದ ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ

    1.39 ಲಕ್ಷ ಮೊತ್ತದ ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ

    ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರು ಮೂಲತಃ ಮಂಗಳೂರಿನವರು. ಸಮಯ ಸಿಕ್ಕಾಗಲೆಲ್ಲಾ ಅವರು ತಮ್ಮ ಹುಟ್ಟೂರಿಗೆ ನಟಿ ಭೇಟಿ ನೀಡುತ್ತಿರುತ್ತಾರೆ. ಇದೀಗ ಉಡುಪಿಗೆ (Udupi) ಭೇಟಿ ಕೊಟ್ಟಿರುವ ಪೂಜಾ ಅವರು ದುಬಾರಿ ಮೊತ್ತದ ಲಂಗ-ದಾವಣಿಯಲ್ಲಿ ನಟಿ ಮಿಂಚಿದ್ದಾರೆ.

    ಸೌತ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಅಂದರೆ ವಿಶೇಷ ಪ್ರೀತಿಯಿದೆ. ಮುಂಬೈನಲ್ಲಿ ಸೆಟಲ್ ಆಗಿದ್ದರೂ ಕೂಡ ತಾವು ಹುಟ್ಟಿದ ಊರಿನ ಬಗ್ಗೆ ಅಭಿಮಾನವಿದೆ. ಇತ್ತೀಚೆಗೆ ನಡೆದ ಬೆಂಗಳೂರಿನ ಕಂಬಳದಲ್ಲಿ (Kambala) ಪೂಜಾ ಹೆಗ್ಡೆ ಭಾಗವಹಿಸಿದ್ದರು. ಇದಾದ ಬಳಿಕ ಈಗ ಉಡುಪಿಗೆ ಭೇಟಿ ನೀಡಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಮಿಂಚಿದ್ದಾರೆ.

    ಈ ವೇಳೆ, ಪಿಂಕ್ ಮತ್ತು ಹಸಿರು ಬಣ್ಣದ ಲಂಗ-ದಾವಣಿಯಲ್ಲಿ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಪೂಜಾ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. 1.39 ಲಕ್ಷ ಮೊತ್ತದ ದುಬಾರಿ ಮೊತ್ತದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿರೋದು ವಿಶೇಷ. ಇದನ್ನೂ ಓದಿ:‘ಹನುಮಾನ್’ ಸೀಕ್ವೆಲ್: ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ನಿರ್ದೇಶಕ

     

    View this post on Instagram

     

    A post shared by Pooja Hegde (@hegdepooja)

    ಲಂಗ-ದಾವಣಿ ಧರಿಸಿ, ಹೂ ಮುಡಿದು ಮಿಂಚುತ್ತಿರುವ ಪೂಜಾ ಲುಕ್ ನೋಡಿ ಅಭಿಮಾನಿಗಳು ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ. ಬಗೆ ಬಗೆಯ ಕಾಮೆಂಟ್‌ಗಳು ಪೂಜಾ ನಯಾ ಫೋಟೋಗೆ ಹರಿದು ಬರುತ್ತಿದೆ.

    ಕಳೆದ ವರ್ಷ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಚಿತ್ರದಲ್ಲಿ ಪೂಜಾ ನಟಿಸಿದ್ದರು. ಅದಾದ ಬಳಿಕ ಪೂಜಾಗೆ ಚಿತ್ರರಂಗದಲ್ಲಿ ಚಾರ್ಮ್ ಕಮ್ಮಿಯಾಗಿದೆ. ಹೇಳಿಕೊಳ್ಳುವಂತಹ ಅವಕಾಶಗಳು ಅವರಿಗೆ ಸಿಗುತ್ತಿಲ್ಲ.

  • ಖ್ಯಾತ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ

    ಖ್ಯಾತ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ

    ಕ್ಷಿಣ ಭಾರತದ ಖ್ಯಾತನಟಿ, ಮಂಗಳೂರು ಮೂಲದ ಪೂಜಾ ಹೆಗ್ಡೆಗೆ (Pooja Hegde) ಕೊಲೆ ಬೆದರಿಕೆ ಹಾಕಲಾಗಿದೆ ಎ‍ನ್ನುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಲಬ್ ವೊಂದರ ಉದ್ಘಾಟನೆಗೆ ಪೂಜಾ ದುಬೈಗೆ (Dubai) ಹಾರಿದ್ದರಂತೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಟಿ ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಅಲ್ಲಿಂದಲೇ ಕೊಲೆ ಬೆದರಿಕೆ (Death Threats) ಬಂದಿದೆ ಎನ್ನುವುದು ಸಮಾಚಾರದ ಸಾರ.

    ದುಬೈನಲ್ಲಿ ಗಲಾಟೆಯಾದರೂ, ಅಲ್ಲಿದ್ದಾಗ ಯಾವುದೇ ಬೆದರಿಕೆಯೂ ಬಂದಿರಲಿಲ್ಲವಂತೆ. ದುಂಬೈನಿಂದ ವಾಪಸ್ಸು ಭಾರತಕ್ಕೆ ಬಂದಾಗ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿದೆ. ಈ ಸುದ್ದಿಗೆ ಸ್ವತಃ ಪೂಜಾ ಅವರೇ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

     

    ದುಬೈಗೆ ಹೋಗಿದ್ದು ನಿಜ. ಕ್ಲಬ್ ಉದ್ಘಾಟನೆಗಾಗಿ ಅಲ್ಲಿಗೆ ಹೋಗಿದ್ದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಅಲ್ಲದೇ, ನನಗೆ ಕೊಲೆ ಬೆದರಿಕೆ ಕೂಡ ಬಂದಿಲ್ಲ. ಇದು ಯಾರೋ ಸೃಷ್ಟಿಸಿದ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ ಪೂಜಾ. ಈ ಮೂಲಕ ಗಾಸಿಪ್ ಗೆ ತೆರೆ ಕೂಡ ಎಳೆದಿದ್ದಾರೆ.

  • Kambala: ಬೆಂಗಳೂರಿನ ಕಂಬಳದಲ್ಲಿ ಭಾಗಿಯಾದ ಸಿನಿಮಾ ತಾರೆಯರು

    Kambala: ಬೆಂಗಳೂರಿನ ಕಂಬಳದಲ್ಲಿ ಭಾಗಿಯಾದ ಸಿನಿಮಾ ತಾರೆಯರು

    ತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ(Bengaluru Kambala) ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಎರಡು ದಿನಗಳ ಕಂಬಳದಲ್ಲಿ ಲಕ್ಷಾಂತರ ಜನರು ಕರಾವಳಿಯ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ ತಡರಾತ್ರಿವರೆಗೆ ಕಂಬಳದಕೋಣಗಳ ಓಟವನ್ನ ಜನರು ಕಣ್ತುಂಬಿಕೊಂಡಿದ್ದಾರೆ. ಈ ಬೆಂಗಳೂರಿನ ಕಂಬಳಕ್ಕೆ ಮತ್ತಷ್ಟು ಕಳೆ ತುಂಬಲು ಚಿತ್ರರಂಗದ ನಟ-ನಟಿಯರು ಕೂಡ ಭಾಗಿಯಾಗಿ ಕಂಬಳಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದರ್ಶನ್

    ಇಂದಿನ ಕಂಬಳಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ (Rakshit Shetty), ಉಪೇಂದ್ರ, ಪೂಜಾ ಹೆಗ್ಡೆ (Pooja Hegde), ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಬೃಂದಾ ಆಚಾರ್ಯ ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಕಂಬಳದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸ ಹುರುಪು ತುಂಬಿದ್ದರು. ಕಂಬಳದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

    ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ಕಂಬಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಆರಂಭವಾದ ಕಂಬಳಕ್ಕೆ ತಡರಾತ್ರಿವರೆಗೂ ಉತ್ಸುಕತೆಯಿಂದ ಲಕ್ಷಾಂತರ ಜನರು ಭಾಗಿಯಾದ್ರೆ, ಇಂದು ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬಂದ ಲಕ್ಷಾಂತರ ಜನರು ಕಂಬಳವನ್ನ ಕಣ್ತುಂಬಿಕೊಂಡರು. ಹಗ್ಗದ ಹಿರಿಯ, ಹಗ್ಗದ ಕಿರಿಯ, ಕೆನೆಹಲಗೆ, ಅಡ್ಡ ಪಲಾಯಿ ಹೀಗೆ ಒಂದರ ಹಿಂದೆ ಒಂದರಂತೆ ಸ್ಪರ್ಧೆ ನಡೀತಿದ್ರೆ, ನೆರೆದಿದ್ದ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರು.

    ರಾಜ, ಮಹಾರಾಜ ಕರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದ್ವು. ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರೋ ಕರಾವಳಿಯ ಜನರು ಮಾತ್ರವಲ್ಲದೇ ಸಿಲಿಕಾನ್ ಸಿಟಿ ಜನರು ಕೂಡ ಕಂಬಳ ಕಂಡು ಫುಲ್ ಖುಷ್ ಆಗಿದ್ರು.

    ಒಟ್ಟಿನಲ್ಲಿ ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದ್ದಂತೂ ನಿಜ. ‘ಕಾಂತಾರ’ (Kantara) ಚಿತ್ರದಲ್ಲಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು. ಒಂದು ಕಡೆ ಕಂಬಳ ನೋಡೋದಕ್ಕೆ ಜನರ ಸೇರಿದ್ರೆ, ಇನ್ನೊಂದಿಷ್ಟು ಜನ ತಮ್ಮ ನೆಚ್ಚಿನ ಸ್ಟಾರ್‌ಗಳನ್ನ ನೋಡೋಕೆ ಎಂದೇ ಧಾವಿಸಿದ್ದರು.

  • ಖ್ಯಾತ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆ ಮದುವೆ

    ಖ್ಯಾತ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆ ಮದುವೆ

    ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ (Pooja Hegde) ಸತತ ಸಿನಿಮಾ ಫ್ಲಾಪ್‌ಗಳ ನಂತರ ಮದುವೆಗೆ ಸಜ್ಜಾಗಿದ್ದಾರೆ. ಖ್ಯಾತ ಕ್ರಿಕೆಟಿಗನ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ಖ್ಯಾತ ಕ್ರಿಕೆಟಿಗನ (Cricketer) ಜೊತೆ ಪೂಜಾ ಹೊಸ ಬಾಳಿಗೆ (Wedding) ಕಾಲಿಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಈ ಬಗ್ಗೆ ನಟಿ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

    ಚಿತ್ರರಂಗದಲ್ಲಿ ಪೂಜಾ ಹೆಗ್ಡೆಗೆ ಐರೆನ್ ಲೆಗ್ ಎಂದು ಕರೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    ಕರಾವಳಿ ಕುವರಿ ಪೂಜಾ, ಸೌತ್- ಬಾಲಿವುಡ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಹೊಸ ಸಿನಿಮಾ ಆಫರ್‌ಗಾಗಿ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾ, ರಶ್ಮಿಕಾಗೆ ಹೆಚ್ಚಿದ ಬೇಡಿಕೆ- ಸೈಡ್ ಲೈನ್ ಆಗೋದ್ರಾ ಪೂಜಾ ಹೆಗ್ಡೆ?

    ಶ್ರೀಲೀಲಾ, ರಶ್ಮಿಕಾಗೆ ಹೆಚ್ಚಿದ ಬೇಡಿಕೆ- ಸೈಡ್ ಲೈನ್ ಆಗೋದ್ರಾ ಪೂಜಾ ಹೆಗ್ಡೆ?

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಈಗ ಮಾರ್ಕೆಟ್ ಡೌನ್ ಆಗಿದೆ. ಕೈಯಲ್ಲಿ ಒಂದೇ ಒಂದು ಸಿನಿಮಾ ಇಲ್ಲದೇ ಪರದಾಡುತ್ತಿದ್ದಾರೆ. ಚಿತ್ರರಂಗ ಅವರನ್ನ ಐರೆನ್ ಲೆಗ್ ಎಂದು ಕರೆಯುತ್ತಿದೆ. ಶ್ರೀಲೀಲಾ (Sreeleela), ರಶ್ಮಿಕಾ (Rashmika Mandanna) ಎಂಟ್ರಿಯಿಂದ ನಟಿ ಸೈಡ್ ಲೈನ್ ಆಗ್ತಿದ್ದಾರಾ?

    ಸೌತ್- ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ನಟಿ ಪೂಜಾ ಹೆಗ್ಡೆ ಇತ್ತೀಚಿಗೆ ಬೀಸ್ಟ್, ರಾಧೆ ಶ್ಯಾಮ್ (Radhe Shyam) ಸೇರಿದಂತೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಚಿತ್ರತಂಡದಲ್ಲಿ ಕಿರಿಕ್ ಮಾಡಿಕೊಂಡು ಕೆಲ ಪ್ರಾಜೆಕ್ಟ್‌ಗಳಿಂದ ಹೊರಬಂದಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಒಂದೇ ಒಂದು ಸಿನಿಮಾ ಕೂಡ ಇಲ್ಲ. ಇದನ್ನೂ ಓದಿ:‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

    ಶ್ರೀಲೀಲಾ, ರಶ್ಮಿಕಾ ಮಂದಣ್ಣಗೆ ಹೆಚ್ಚಿದ ಬೇಡಿಕೆಯಿಂದ ಕೊಂಚ ಪೂಜಾ ಮಾರ್ಕೆಟ್ ಡಲ್ ಆಗಿರೋದು ನಿಜ. ಸಿನಿಮಾ ಚಾನ್ಸ್ ಇಲ್ಲದೇ ಇರುವ ಕಾರಣ ನಟಿ ಜಾಹೀರಾತು ಪ್ರಮೋಟ್ ಮಾಡ್ತಿದ್ದಾರೆ.

    ಪ್ರತಿಭೆ ಇದ್ದರೂ ಪೂಜಾ ಎಡವಿದ್ದು ಎಲ್ಲಿ? ಸಿನಿಮಾ ಆಯ್ಕೆಯಲ್ಲಿ ಎಡವಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಒಟ್ನಲ್ಲಿ ಎಲ್ಲಾ ಅಡೆತಡೆಗಳನ್ನ ಮೀರಿ ಲೈಮ್ ಲೈಟ್‌ಗೆ ಬರುತ್ತಾರಾ ಪೂಜಾ ಹೆಗ್ಡೆ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

    ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

    ಟಾಲಿವುಡ್ (Tollywood) ಅಂಗಳದಲ್ಲಿ ಸದ್ಯ ನಾಯಕ ನಟರಿಗಿಂತ ನಟಿಯರ ಜಡೆ ಜಗಳ ಜೋರಾಗಿದೆ. ಕನ್ನಡದ ಶ್ರೀಲೀಲಾ (Sreeleela) ಮತ್ತು ‘ಸೀತಾರಾಮಂ’ ಸುಂದರಿ ಮೃಣಾಲ್ (Mrunal) ಎಂಟ್ರಿಯಿಂದ ರಶ್ಮಿಕಾ ಮಂದಣ್ಣ (Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಆಫರ್‌ಗೆ ಕತ್ತರಿ ಬಿದ್ದಿದೆ. ತೆಲುಗಿನಲ್ಲಿ ರಶ್ಮಿಕಾ, ಪೂಜಾ, ಕೃತಿ ಕಾಲ ಮುಗಿತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

    ನ್ಯಾಷನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಆಳುತ್ತಿದ್ದರು. ಸ್ಟಾರ್ ನಟರಿಗೆ ಕಿರಿಕ್ ಚೆಲುವೆನೇ ಬೇಕು ಅಂತಾ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಹಾಗೆಯೇ ಕರಾವಳಿ ಬ್ಯೂಟೀಸ್ ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೂ(Krithi Shetty) ಭಾರೀ ಹವಾ ಇತ್ತು. ‘ಉಪ್ಪೇನಾ’ ಹಿಟ್ ಆದಮೇಲೆ ಕೃತಿಗೆ ಸಾಲು ಸಾಲು ಆಫರ್ ಸಿಗುತ್ತಿತ್ತು. ಈಗ ಸ್ವಲ್ಪ ಜಾಸ್ತಿಯೇ ಆಫರ್‌ಗೆಲ್ಲಾ ಬ್ರೇಕ್ ಬಿದ್ದಿದೆ.

    ಪೆಳ್ಳಿ ಸಂದಡಿ, ಧಮಾಕಾ (Dhamaka) ಎರಡೇ ತೆಲುಗು ಸಿನಿಮಾ ಮಾಡಿದ್ರು ಶ್ರೀಲೀಲಾ, ಈ 2 ಸಿನಿಮಾದಿಂದ ನಟಿಯ ಕೆರಿಯರ್ ಚೇಂಜ್ ಆಯ್ತು. ರಶ್ಮಿಕಾ ಪಾಲಿಗೆ ಬರುತ್ತಿದ್ದ ಸಿನಿಮಾಗೆಲ್ಲಾ ಶ್ರೀಲೀಲಾ ನಾಯಕಿಯಾದರು. ಪೂಜಾ ಹೆಗ್ಡೆಗೂ ಅದೇ ಎಫೆಕ್ಟ್ ಆಗಿದೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಸಿನಿಮಾದಲ್ಲಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ಮಿಂಚಬೇಕಿತ್ತು. ಆದರೆ ಅದೀಗ ಶ್ರೀಲೀಲಾ ಪಾಲಾಗಿದೆ. 10ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿದ್ದಾರೆ.

    ಆಗಿದ್ದು ಆಯ್ತು ಅಂತಾ ರವಿತೇಜಾ ಸಿನಿಮಾದಲ್ಲಿ ಪೂಜಾ ಹೆಗ್ಡೆಗೆ ಆಫರ್ ಸಿಕ್ಕಿತ್ತು. ಆದರೆ ಆ ಸಿನಿಮಾಗೆ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ. ಸೀತಾ ರಾಮಂ ಸಕ್ಸಸ್ ನಂತರ ಸೀತಾ, ಈಗ ಸೌತ್- ಬಾಲಿವುಡ್ ಎರಡರಲ್ಲೂ ಬ್ಯುಸಿಯಿದ್ದಾರೆ. ಇನ್ನೂ ಕೃತಿ ಶೆಟ್ಟಿಗೆ ಪಾಲಿಗೆ ಸಿಕ್ಕಿದ್ದು ಪಂಚಾಮೃತ ಎನ್ನುವಂತೆ ಆಗಿದೆ. ಇದನ್ನೂ ಓದಿ:ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ದ ನಟಿ ಗರಂ

    ಒಟ್ನಲ್ಲಿ ರಶ್ಮಿಕಾ, ಪೂಜಾ, ಕೃತಿ ಜಮಾನ ನಡೆಯುತ್ತಿದ್ದ ಕಾಲ ಈಗ ಬದಲಾಗಿದೆ. ಅವರ ಸ್ಥಾನಕ್ಕೆ ಶ್ರೀಲೀಲಾ ಮತ್ತು ಮೃಣಾಲ್ ಮೇನಿಯಾ ಶುರುವಾಗಿದೆ. ಟಾಲಿವುಡ್‌ನಲ್ಲಿ ಸದ್ಯ ಶ್ರೀಲೀಲಾ- ಮೃಣಾಲ್ ಲಿಡಿಂಗ್ ಲೇಡಿಯಾಗಿ ಕಂಗೊಳಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರವಿ ತೇಜಾ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್- ಮತ್ತೋರ್ವ ನಟಿಯ ಆಗಮನ

    ರವಿ ತೇಜಾ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್- ಮತ್ತೋರ್ವ ನಟಿಯ ಆಗಮನ

    ಚಿತ್ರರಂಗದಲ್ಲಿ ಅದ್ಯಾಕೋ ಪೂಜಾ ಹೆಗ್ಡೆ(Pooja Hegde) ನಸೀಬು ಕೈ ಕೊಟ್ಟಿದೆ. ನಟಿಸಿದ ಅಷ್ಟು ಸಿನಿಮಾ ಫ್ಲಾಪ್ ಮೇಲೆ ಫ್ಲಾಪ್, ಹೊಸ ಸಿನಿಮಾದಿಂದ ನಟಿ ಔಟ್ ಆಗ್ತಿದ್ದಾರೆ. ಮಹೇಶ್ ಬಾಬು(Mahesh Babu), ಪವನ್ ಕಲ್ಯಾಣ್ (Pawan Kalyan) ಸಿನಿಮಾದಿಂದ ಕರಾವಳಿ ನಟಿ ಕಿಕ್ ಔಟ್ ಆಗಿರೋ ಬೆನ್ನಲ್ಲೇ ರವಿ ತೇಜಾ (Raviteja) ಸಿನಿಮಾದಿಂದ ಕೂಡ ಔಟ್ ಆಗಿದ್ದಾರೆ.

    ಬಾಲಿವುಡ್-ಸೌತ್ ಸಿನಿ ರಂಗದಲ್ಲಿ ಮೋಡಿ ಮಾಡ್ತಿರುವ ನಟಿ ಪೂಜಾ ಹೆಗ್ಡೆಗೆ ಇತ್ತೀಚಿನ ದಿನಗಳಲ್ಲಿ ಲಕ್ ಕೈ ಕೊಟ್ಟಿದೆ. ಯಾವುದೇ ಸಿನಿಮಾ ಮಾಡಿದ್ರು. ಸ್ಟಾರ್ ನಟರಿಗೆ ನಾಯಕಿಯಾದರು ಕೂಡ ಅವರಿಗೆ ಸಕ್ಸಸ್ ಸಿಗುತ್ತಿಲ್ಲ. ಬೀಸ್ಟ್, ರಾಧೆ ಶ್ಯಾಮ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸೇರಿದಂತೆ ಹಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣದೇ ಸೋತಿದೆ. ಇದನ್ನೂ ಓದಿ:ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

    ಸೋಲಿನ ತಲೆ ಬಿಸಿ ಬಿಟ್ಟು ಮತ್ತೆ ಸಿನಿಮಾರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಇಟ್ಟುಕೊಂಡ ನಟಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ನಟಿಸಿದ್ದರು. ಅಲ್ಲಿ ಕೆಲವು ಮನಸ್ತಾಪಗಳಾಗಿ ಹೊರಬಂದರು. ಆ ಜಾಗವನ್ನ ಶ್ರೀಲೀಲಾ (Sreeleela) ಆಕ್ರಮಿಸಿದರು. ಪವನ್ ಕಲ್ಯಾಣ್ ಹೊಸ ಸಿನಿಮಾದಲ್ಲಿಯೂ ಹಾಗೆಯೇ ಆಯಿತು. ಆ ಚಿತ್ರ ಕೂಡ ಧಮಾಕಾ (Dhamaka) ನಟಿಯ ಪಾಲಾಯಿತು. ಈಗ ಮತ್ತೊಂದು ಶಾಕ್ ನಟಿಗೆ ಎದುರಾಗಿದೆ.

    ರವಿತೇಜಾ- ನಿರ್ದೇಶಕ ಗೋಪಿ ಚಂದ್ ಮಲಿನೇನಿ ಸಿನಿಮಾಗೆ ಕರಾವಳಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ರು. ಎಲ್ಲವೂ ಫೈನಲ್ ಆಗಿತ್ತು. ಆದರೆ ಈ ಸಿನಿಮಾದಿಂದ ಕೂಡ ಪೂಜಾ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಅವರ ಜಾಗಕ್ಕೆ ‘ಸೀತಾರಾಮಂ’ ನಟಿ ಮೃಣಾಲ್ (Mrunal Thakur) ಆಯ್ಕೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೀಗೆ ಸಾಲು ಸಾಲು ಸಿನಿಮಾಗಳ ಸೋಲು, ಅವಕಾಶಗಳ ಕೊರತೆ ಇವೆಲ್ಲಾವನ್ನು ನೋಡಿ ನಟಿಗೆ ಐರೆನ್ ಲೆಗ್ ಎಂದು ಗಾಸಿಪ್ ಪ್ರಿಯರು ಕರೆಯುತ್ತಿದ್ದಾರೆ. ಮುಂದೆ ಮತ್ತೆ ಅವಕಾಶದ ಜೊತೆ ಅದೃಷ್ಟ ಬದಲಾಗುತ್ತಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಸ್‌ ಮಹಾರಾಜನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಮಾಸ್‌ ಮಹಾರಾಜನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ತೆಲುಗಿನ ಮಾಸ್ ಮಹಾ ರಾಜ ರವಿ ತೇಜ (Ravi Teja) ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಮತ್ತೆ ಗೋಪಿಚಂದ್ ಮಲಿನೇನಿ ಜೊತೆ ಕೈಜೋಡಿಸಿದ್ದಾರೆ. ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಜೊತೆ ರವಿತೇಜ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್

    ಇತ್ತೀಚಿಗೆ ನಟಿಸಿದ ರವಿತೇಜ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗುತ್ತಿದೆ. ಧಮಾಕ, ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಹೊಸ ಬಗೆಯ ಕಥೆಯನ್ನ ರವಿತೇಜ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಜೊತೆ ಕ್ಲಾಸ್ ಆಗಿ ರವಿ ತೇಜ ಮಿಂಚಲಿದ್ದಾರೆ.

    ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸಿನಿಮಾಗಳ ಸೋಲನ್ನೇ ಕಂಡಿರುವ ಪೂಜಾ ಹೆಗ್ಡೆ ಅವರು ರವಿ ತೇಜ ಅವರಿಗೆ ನಾಯಕಿಯಾಗಿ ಜೊತೆಯಾಗುತ್ತಿದ್ದಾರೆ. ಇತ್ತೀಚಿಗೆ ಮಹೇಶ್ ಬಾಬು, ಪವನ್ ಕಲ್ಯಾಣ್ ನಟನೆಯ ಸಿನಿಮಾದಿಂದ ಕಿಕ್ ಔಟ್ ಆದ ಮೇಲೆ ಈ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ನಿರ್ದೇಶಕ ಗೋಪಿ ಚಂದ್‌ ಮಲಿನೇನಿ ಅವರೇ ಪೂಜಾಗೆ ಆಫರ್‌ ನೀಡಿದ್ದಾರೆ.

    ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆಗಿನ 2 ಪ್ರಾಜೆಕ್ಟ್‌ಗಳು ಶ್ರೀಲೀಲಾ (Sreeleela) ಪಾಲಾಗಿದೆ. ಸದ್ಯ ಹೊಸ ಕಥೆ, ಆಫರ್‌ಗಾಗಿ ಕಾಯುತ್ತಿದ್ದ ಪೂಜಾ ಹೆಗ್ಡೆಗೆ ಬಂಪರ್ ಆಫರ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲನ್ನೇ ಕಂಡಿರುವ ಪೂಜಾಗೆ ಈ ಸಿನಿಮಾ ಸಕ್ಸಸ್ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ. ಮತ್ತೆ ರವಿ ತೇಜ- ಪೂಜಾ ಹೆಗ್ಡೆ ಕೆಮಿಸ್ಟ್ರಿ ತೆರೆಯ ಮೇಲೆ ಯಾವ ರೀತಿ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಮೆರಾ ಮುಂದೆ ನಾಚಿ ನೀರಾದ ಪೂಜಾ ಹೆಗ್ಡೆ

    ಕ್ಯಾಮೆರಾ ಮುಂದೆ ನಾಚಿ ನೀರಾದ ಪೂಜಾ ಹೆಗ್ಡೆ

    https://www.youtube.com/watch?v=xflCqfmmmHk

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದ್ದಕ್ಕೆ ಹತ್ತಿದ ಏಣಿಯನ್ನೇ ಮರೆತ್ರಾ ಪೂಜಾ ಹೆಗ್ಡೆ?

    ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದ್ದಕ್ಕೆ ಹತ್ತಿದ ಏಣಿಯನ್ನೇ ಮರೆತ್ರಾ ಪೂಜಾ ಹೆಗ್ಡೆ?

    ಪೂಜಾ ಹೆಗ್ಡೆ (Pooja hegde) ವಾರದಿಂದ ಸುದ್ದಿಯಲ್ಲಿದ್ದಾರೆ. ಒಂದೇ ಸಿನಿಮಾ ಬಿಟ್ಟು ಹೊರ ಬಂದಿದ್ದೇ ಕಾರಣ. ಸತತ ಸೋಲಿನಿಂದ ಒದ್ದಾಡುತ್ತಿರುವ ಪೂಜಾ ‘ಗುಂಟೂರು ಖಾರಂ’ನಿಂದ ದೂರವಾದರು. ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕಳೆದುಕೊಂಡರು. ಇದಕ್ಕೆಲ್ಲ ಯಾವ್ಯಾವುದೋ ಕಾರಣ ಎನ್ನುವ ಖಬರ್ ಹರಡಿತು. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಇದಕ್ಕೆ ಮೂಲ ಹೂರಣ ಎನ್ನುವ ಮಾತು ಹೊಗೆಯಾಡುತ್ತಿದೆ. ಯಾಕಾಗಿ ಪೂಜಾ ಖಾರ ತಿನ್ನಲು ಒಲ್ಲೆ ಎಂದರು? ಬಾಲಿವುಡ್ ನಿರ್ದೇಶಕನ ಸ್ಕೆಚ್ ಮತ್ತೇನು?

    ಪೂಜಾ ಹೆಗ್ಡೆ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಟಾಪ್ ಸ್ಟಾರ್‌ಗಳ ಜೊತೆ ಕುಣಿದರೂ ಜನರು ಕ್ಯಾರೇ ಎನ್ನಲಿಲ್ಲ. ಒಂದಾದರೂ ಹಿಟ್ ಕೊಡಬೇಕು…ಇದನ್ನೇ ಜಪ ಮಾಡಿದರೂ ದೇವರು ಆಶೀರ್ವಾದ ಮಾಡಲಿಲ್ಲ. ಇದೇ ಹೊತ್ತಲ್ಲಿ ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾಕ್ಕೆ ಬುಲಾವ್ ಬಂದಿತು. ಆದರೆ ಅದು ತಡವಾಯಿತು. ಪೂಜಾ ಕೊಟ್ಟ ಡೇಟ್ಸ್ ಮುಗಿಯಿತು. ಪೂಜಾ ಔಟ್ ಆದರು. ಆ ಜಾಗಕ್ಕೆ ಅದೇ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಕನ್ನಡದ ಶ್ರೀಲೀಲಾ ಪವಡಿಸಿ ಪಕಪಕ ನಕ್ಕರು. ಆದರೆ ಪೂಜಾ ಆ ಚಿತ್ರದಿಂದ ಹೊರ ಬೀಳಲು ಅಸಲಿ ಕಾರಣ ಇದ್ಯಾವುದೂ ಅಲ್ಲ, ಬಾಲಿವುಡ್ ಡೈರೆಕ್ಟರ್ ಕರಣ್‌ಜೋಹರ್ ಅನ್ನೋದು ಗಿಚ್ಚಿ ಗಿಲಿಗಿಲಿ.

    ಬಾಲಿವುಡ್‌ನಲ್ಲಿ ಪೂಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದ್ಯಾವುದೂ ಹೇಳಿಕೊಳ್ಳುವ ಹೆಸರು ತರಲಿಲ್ಲ. ಖುದ್ದು ಸಲ್ಮಾನ್ ಖಾನ್ ಜೊತೆ ಕುಣಿದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಕೂಡ ಮಕಾಡೆ ಮಲಗಿತು. ಟಾಲಿವುಡ್‌ನಲ್ಲಿ ಗುಂಟೂರು ಖಾರಂ ಮಾತ್ರ ಕೈಯಲ್ಲಿತ್ತು. ನಿರ್ದೇಶಕ ತ್ರಿವಿಕ್ರಮ್ ಸ್ಕ್ರೀಪ್ಟ್ ಚೇಂಜ್ ಮಾಡಿದ್ದು, ಪೂಜಾ ಪಾತ್ರಕ್ಕೆ ಕತ್ತರಿ ಹಾಕಿದ್ದು, ಶ್ರೀಲೀಲಾಗೆ (Sreeleela) ರತ್ನಗಂಬಳಿ ಹಾಸಿದ್ದಾರೆ. ಬಳಿಕ ಪೂಜಾ ಚಿತ್ರದಿಂದ ಹೊರನಡೆದಿದ್ದಾರೆ. ಅದಕ್ಕೆ ‘ನೀನು ಬ್ಯಾಡ ನಿನ್ ಸಿನಿಮಾನೂ ಬ್ಯಾಡʼ ಅಂತ ಸ್ವಾಟೆ ತಿರುವಿ ಎದ್ದು ಬಂದರಂತೆ. ಇದೇ ನಿಜವಾ ಅಥವಾ ಬೇರೆ ಯಾರಾದರೂ ಊದಿನ ಕಡ್ಡಿ ಹಚ್ಚಿದರಾ? ಆಗ ಕರಣ್ ಕುಲುಕುಲು ನಗುತ್ತಾ ಬಂದರಲ್ಲಾ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಕರಣ್ ಜೋಹರ್ (Karan Johar) ಬಾಲಿವುಡ್‌ನ ದೊಡ್ಡ ಹೆಸರು. ಅವರದೇ ಬ್ಯಾನರ್‌ನ ಎರಡು ಸಿನಿಮಾಗಳಿಗೆ ಪೂಜಾರನ್ನು ಬುಕ್ ಮಾಡಿದ್ದಾರಂತೆ. ಕಾಲಿವುಡ್, ಟಾಲಿವುಡ್‌ಗೆ ಮಾರೋ ಗೋಲಿ…ಬಾಲಿವುಡ್‌ನಲ್ಲಿ ಆಡು ಬಾ ಹೋಳಿ ಹೀಗೆ ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ನಾಲ್ಕು ಸಿನಿಮಾ ಗೋತಾ ಹೊಡೆದ ಸುಸ್ತಿನಲ್ಲಿದ್ದ ಪೂಜಾಗೆ ಕರಣ್ ಕಣ್ಣಲ್ಲಿ ಐರನ್ ಕಂಟೆಂಟ್ ಇರುವ ಕರಿಬೇವಿನ ಸೊಪ್ಪು ಕಾಣಿಸಿದೆ. ಫಲಿತಾಂಶ…ಟಾಲಿವುಡ್‌ಗೆ ಟಾಟಾ…ಬಾಲಿವುಡ್‌ನಲ್ಲಿ ಆಟ. ಜಸ್ಟ್ ಆರಂಭ. ಹತ್ತಿದ ಏಣಿ ಒದ್ದಿರುವ ಡಸ್ಕಿ ಬ್ಯೂಟಿಗೆ ಬಾಲಿವುಡ್ ಮಾವಿನ ಹಣ್ಣು ತಿನ್ನಿಸುತ್ತಾ ಅಥವಾ ಹಸಿ ಹಾಗಲಕಾಯಿ ಹಸಿಹಸಿಯಾಗಿಯೇ ಮುಕ್ಕಿಸುತ್ತಾ? ನೋಡೋಣ. ಇದೀಗ ಬಾಲಿವುಡ್‌ನಲ್ಲಿನ ಆಫರ್‌ಗೆ ಅವಕಾಶ ಕೊಟ್ಟ ಟಾಲಿವುಡ್‌ ಅನ್ನೇ ಪೂಜಾ ಮರೆತ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.