Tag: ಪೂಜಾ ಹೆಗ್ಡೆ

  • ತೆಲುಗಿನ ಹೊಸ ಸಿನಿಮಾ ಒಪ್ಪಿಕೊಂಡ ಪೂಜಾ ಹೆಗ್ಡೆ

    ತೆಲುಗಿನ ಹೊಸ ಸಿನಿಮಾ ಒಪ್ಪಿಕೊಂಡ ಪೂಜಾ ಹೆಗ್ಡೆ

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಕಳೆದ ವರ್ಷ ಮಹೇಶ್ ಬಾಬು (Mahesh Babu) ಸಿನಿಮಾದಿಂದ ಹೊರಬಂದ್ಮೇಲೆ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಪುನೀತ್ ನಟನೆಯ ‘ಅಂಜನಿಪುತ್ರ’ ಮರು ಬಿಡುಗಡೆ

    ಹಲವು ವರ್ಷಗಳ ನಂತರ ಪೂಜಾ ಹೆಗ್ಡೆ ಮತ್ತೆ ನಾಗಚೈತನ್ಯಗೆ ನಾಯಕಿಯಾಗಿ ನಟಿಸಲಿದ್ದಾರೆ. ನಾಗಚೈತನ್ಯ ‘ತಾಂಡೇಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ಹರಿಪ್ರಿಯಾ, ವಸಿಷ್ಠ ಸಿಂಹ ದಂಪತಿ

    ಹಿಂದಿ ಹಲವು ಬ್ಯುಸಿಯಿರುವ ಇರುವ ನಟಿ, ನಿರ್ದೇಶಕ ಕಾರ್ತಿಕ್ ದಂಡು ಬರೆದ ಕಥೆ ಕೇಳಿ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2024ರ ಅಕ್ಟೋಬರ್ ಶೂಟಿಂಗ್ ಶುರುವಾಗಲಿದೆ. 10 ವರ್ಷಗಳ ನಂತರ ಮತ್ತೆ ನಾಗಚೈತನ್ಯ ಹೊಸ ಚಿತ್ರಕ್ಕಾಗಿ ಸಾಥ್ ನೀಡಿದ್ದಾರೆ ಪೂಜಾ.

    2014ರಲ್ಲಿ ‘ಒಕಾ ಲೈಲಾ ಕೋಸಮ್’ ಚಿತ್ರದ ಮೂಲಕ ಟಾಲಿವುಡ್‌ಗೆ (Tollywood) ನಟಿ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಇಬ್ಬರೂ ಜೋಡಿಯಾಗಿ ಅಭಿಮಾನಿಗಳ ಗಮನ ಸೆಳೆದಿದ್ದರು. ಈಗ ಮತ್ತೆ ಈ ಜೋಡಿ ಒಂದಾಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

  • ಜ್ಯೂ.ಎನ್‌ಟಿಆರ್‌ ಸಿನಿಮಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಪೂಜಾ ಹೆಗ್ಡೆ

    ಜ್ಯೂ.ಎನ್‌ಟಿಆರ್‌ ಸಿನಿಮಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಪೂಜಾ ಹೆಗ್ಡೆ

    ಕುಡ್ಲದ ಸುಂದರಿ ಪೂಜಾ ಹೆಗ್ಡೆ ಇತ್ತೀಚೆಗೆ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ, ಮತ್ತೆ ಸಿನಿಮಾದ ವಿಚಾರವಾಗಿ ಪೂಜಾ ಹೆಗ್ಡೆ (Pooja Hegde) ಚಾಲ್ತಿಗೆ ಬಂದಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ಹೊಸ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ.

    ಜ್ಯೂ.ಎನ್‌ಟಿಆರ್- ಜಾನ್ವಿ ಕಪೂರ್ (Janhvi Kapoor) ನಟನೆಯ ‘ದೇವರ’ (Devara Film) ಸಿನಿಮಾಗೆ ಪೂಜಾ ಹೆಗ್ಡೆ ಎಂಟ್ರಿ ಕೊಡಲಿದ್ದಾರೆ. ನಟಿಸಲು ಅಲ್ಲ, ಬದಲಿಗೆ ತಾರಕ್ ಜೊತೆ ಸ್ಪೆಷಲ್ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲು ಬರುತ್ತಿದ್ದಾರೆ. ಸೂಪರ್ ಆಗಿರೋ ಐಟಂ ಹಾಡಿಗೆ ನಟಿ ಸೊಂಟ ಬಳುಕಿಸಲಿದ್ದಾರೆ. ಇದನ್ನೂ ಓದಿ:ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    ಈಗಾಗಲೇ ‘ದೇವರ’ ಚಿತ್ರತಂಡ ಪೂಜಾಗೆ ಸಂಪರ್ಕಿಸಿದೆ. ಐಟಂ ಸಾಂಗ್ ಬಗ್ಗೆ ಮಾತನಾಡಿ ಆಗಿದೆ. ನಟಿ ಕೂಡ ಓಕೆ ಎಂದಿದ್ದಾರೆ. ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಬರುವವರೆಗೂ ಕಾಯಬೇಕಿದೆ.

    ಅಂದಹಾಗೆ, 2018ರಲ್ಲಿ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಪೂಜಾ ನಟಿಸಿದ್ದರು. ಇದೀಗ 2ನೇ ಬಾರಿ ಈ ಹಿಟ್ ಕಾಂಬಿನೇಷನ್ ದೇವರ ಚಿತ್ರದ ಮೂಲಕ ಒಂದಾಗುತ್ತಿದೆ.

  • ಪೂಜಾ ಹೆಗ್ಡೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ರೋಹನ್- ಮದುವೆ ಯಾವಾಗ ಎಂದ ನೆಟ್ಟಿಗರು?

    ಪೂಜಾ ಹೆಗ್ಡೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ರೋಹನ್- ಮದುವೆ ಯಾವಾಗ ಎಂದ ನೆಟ್ಟಿಗರು?

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಕೆಲದಿನಗಳಿಂದ ಬಾಲಿವುಡ್ ನಟ ರೋಹನ್ ಮೆಹ್ರಾ (Rohan Mehra) ಜೊತೆ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬೆನ್ನಲ್ಲೇ ಪೂಜಾ ಕುಟುಂಬದ ಜೊತೆ ರೋಹನ್ ಕಾಣಿಸಿಕೊಂಡಿದ್ದಾರೆ.

    ತಂದೆ ಮಂಜುನಾಥ್ ಹೆಗ್ಡೆ ಹುಟ್ಟುಹಬ್ಬದಂದು ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿ ಕುಟುಂಬದ ಜೊತೆ ನಟಿ ಕಾಲ ಕಳೆದಿದ್ದಾರೆ. ವಿಶೇಷ ಅಂದರೆ, ಇವರ ಜೊತೆ ಬಾಲಿವುಡ್ ನಟ ರೋಹನ್ ಮೆಹ್ರಾ ಕೂಡ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟ ನೆನಪಿರಲಿ ಪ್ರೇಮ್- ಪೋಸ್ಟರ್ ಔಟ್

     

    View this post on Instagram

     

    A post shared by Snehkumar Zala (@snehzala)

    ರೆಸ್ಟೋರೆಂಟ್‌ನಿಂದ ಹೊರಬರುವಾಗ ತಮ್ಮ ಕುಟುಂಬದ ಜೊತೆ ಖುಷಿಯಿಂದ ಪೂಜಾ ಹೆಗ್ಡೆ ಹೊರಬಂದಿದ್ದು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ರೋಹನ್ ಕೂಡ ಕಾಣಿಸಿಕೊಂಡು ಕ್ಯಾಮೆರಾಗೆ ಬೈ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಬರೋದನ್ನು ನೋಡಿ ಇಬ್ಬರ ಮದುವೆ ಯಾವಾಗ? ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕ್ತಿದ್ದಾರೆ ನೆಟ್ಟಿಗರು.

    ಸದ್ಯ ಪೂಜಾ ಹೆಗ್ಡೆ ‘ದೇವ’ (Deva) ಸಿನಿಮಾದಲ್ಲಿ ಶಾಹಿದ್ ಕಪೂರ್‌ಗೆ (Shahid Kapoor) ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆ ಸುನೀಲ್ ಶೆಟ್ಟಿ ಪುತ್ರನ ಹೊಸ ಚಿತ್ರಕ್ಕೆ ಕೂಡ ಪೂಜಾ ಹೀರೋಯಿನ್ ಆಗಿದ್ದಾರೆ. ತೆಲುಗಿನ ನಟ ನಾನಿ ಸಿನಿಮಾಗೂ ನಾಯಕಿಯಾಗಿ ಇವರೇ ಬುಕ್ ಆಗಿದ್ದಾರೆ.

  • 45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

    45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

    ಕುಡ್ಲದ ಚೆಲುವೆ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿ ನಟಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ. ಐಷಾರಾಮಿ ಮನೆ ಖರೀದಿ ಮಾಡಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.

    ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿದ್ದಂತೆ ಈಗ ತೆಲುಗಿನಲ್ಲಿಯೂ ನಟಿಗೆ ಕರೆ ಬರುತ್ತಿದೆ. ಇದನ್ನೂ ಓದಿ:ಸೌಂದರ್ಯ ಜಗದೀಶ್ ಆತ್ಮಹತ್ಯೆ- ಗೆಳೆಯ ಶ್ರೇಯಸ್ ಹೇಳಿದ್ದೇನು?

    ಶಾಹಿದ್ ಕಪೂರ್ (Shahid Kapoor) ಜೊತೆ ಹೊಸ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಮುಂಬರುವ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಾನಿ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿದೆ.

  • 10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

    10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮತ್ತೆ ಟಾಲಿವುಡ್‌ಗೆ (Tollywood) ಮರಳಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದಿಂದ ಹೊರಬಂದ್ಮೇಲೆ, ಬಾಲಿವುಡ್‌ನತ್ತ ಮುಖ ಮಾಡಿದ್ದ ನಟಿ ಮತ್ತೆ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 10 ವರ್ಷಗಳ ನಂತರ ಮತ್ತೆ ‘ಒಕಾ ಲೈಲಾ ಕೋಸಂ’ ಜೋಡಿ ಒಂದಾಗುತ್ತಿದೆ.

    ಸಿನಿಮಾ ಕೆರಿಯರ್ ಶುರು ಮಾಡಿದ ನಟನ ಜೊತೆಯೇ ಪೂಜಾ ಹೆಗ್ಡೆ ರೊಮ್ಯಾನ್ಸ್ ಮಾಡೋಕೆ ಶುರು ಮಾಡಿದ್ದಾರೆ. ‘ಒಕಾ ಲೈಲಾ ಕೋಸಂ’ (Oka Laila Kosam) ಚಿತ್ರದಲ್ಲಿ ನಾಗಚೈತನ್ಯಗೆ (Nagachaitanya) ನಾಯಕಿಯಾಗಿ ಪೂಜಾ ಹೆಗ್ಡೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈಗ 10 ವರ್ಷಗಳ ನಂತರ ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ಕುಡ್ಲದ ಬೆಡಗಿ ನಾಯಕಿಯಾಗಿದ್ದಾರೆ.

    ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ವರ್ಮಾ ದಂಡು ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಗಚೈತನ್ಯ ನಾಯಕನಾಗಿ ನಟಿಸಿದ್ದಾರೆ. ಆ್ಯಕ್ಷನ್ ಜೊತೆ ಲವ್ ಸ್ಟೋರಿ ಸಿನಿಮಾ ತೋರಿಸೋಕೆ ರೆಡಿಯಾಗಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಯೋಚಿಸಿದ್ದಾರೆ. ಹೊಸ ಕಥೆಯಲ್ಲಿ ನಾಗಚೈತನ್ಯ- ಪೂಜಾ ಹೆಗ್ಡೆ ಜೋಡಿಯನ್ನು ನೋಡಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ. ಇದನ್ನೂ ಓದಿ:ಡಿಸಾರ್ಜ್ ಆದ ಶಿವಣ್ಣ: ನಾಗವಾರದ ನಿವಾಸಕ್ಕೆ ಆಗಮನ

    ಅಂದಹಾಗೆ, ಪೂಜಾ ಹೆಗ್ಡೆ ಕೈಯಲ್ಲಿ ಸುನೀಲ್ ಶೆಟ್ಟಿ ಪುತ್ರನ ಜೊತೆಗಿನ ಹೊಸ ಸಿನಿಮಾ, ಶಾಹಿದ್ ಕಪೂರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಬಾಲಿವುಡ್ ಪ್ರಾಜೆಕ್ಟ್‌ಗಳಿವೆ.

  • ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ

    ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮೊದಲ ಬಾರಿಗೆ ಬಾಯ್‌ಫ್ರೆಂಡ್ (Boyfriend) ಜೊತೆ ಕಾಣಿಸಿಕೊಂಡಿದ್ದಾರೆ. ಗೆಳೆಯನ ಜೊತೆ ಕಾರಿನಲ್ಲಿ ಕುಳಿತು ಹೋಗುವಾಗ ಕ್ಯಾಮೆರಾ ಕಣ್ಣಿಗೆ ನಟಿ ಸೆರೆಯಾಗಿದ್ದಾರೆ. ಈ ಸುದ್ದಿ ಕೇಳಿ ಪೂಜಾ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ ಹೆಸರು ಸಾಕಷ್ಟು ನಟರ ಜೊತೆ ಸೇರಿಕೊಂಡಿತ್ತು. ಅದರಲ್ಲೂ ಸಲ್ಮಾನ್ ಖಾನ್ (Salman Khan) ಜೊತೆ ಡೇಟಿಂಗ್ ಮಾಡ್ತಿದ್ದಾರೆ ಪೂಜಾ ಅಂತ ಹೆಚ್ಚು ಸುದ್ದಿಯಾಗಿತ್ತು. ಆ ನಂತರ ಆ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ಸಿಕ್ಕಿತ್ತು. ಇದೀಗ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನಾನಿ ನಟನೆಯ 33ನೇ ಸಿನಿಮಾ ಅನೌನ್ಸ್ : ಒಂದಾಯ್ತು ‘ದಸರಾ’ ಜೋಡಿ

    ಹೋಟೆಲ್‌ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ (Rohan Mehra) ಜೊತೆ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಪೂಜಾ ಸೆರೆಯಾಗಿದ್ದಾರೆ. ಕ್ಯಾಮೆರಾ ಕಾಣಿಸುತ್ತಿದ್ದಂತೆ ನಟಿ ನಾಚಿ ನೀರಾಗಿದ್ದಾರೆ. ಕ್ಯಾಮೆರಾಗೆ ಸರಿಯಾಗಿ ಮುಖ ತೋರಿಸದೇ ಕುಳಿತಿದ್ದಾರೆ. ನಟಿಯ ಈ ನಡೆ ನೋಡಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ.

    ಕಳೆದ ವರ್ಷ ನಟಿಯ ಮನೆಯಲ್ಲಿ ಮದುವೆ ಮಾತುಕತೆ ನಡೆದಿದೆ ಎಂದು ಸುದ್ದಿಯಾಗಿತ್ತು. ಸತತ ಸಿನಿಮಾಗಳ ಸೋಲುಗಳ ಬೆನ್ನಲ್ಲೇ ನಟಿ ಮದುವೆ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಕಳೆದ ಜನವರಿಯಲ್ಲಿ ಪೂಜಾ ಸಹೋದರ ರಿಷಬ್ ಹೆಗ್ಡೆ ಮದುವೆ ಕೂಡ ಅದ್ಧೂರಿಯಾಗಿ ಜರುಗಿತ್ತು. ಹಾಗಾಗಿ ಪೂಜಾ ಮದುವೆ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿತ್ತು. ಇದೀಗ ಅಂತೆ ಕಂತೆ ಸುದ್ದಿಗೆಲ್ಲಾ ಬ್ರೇಕ್‌ ಹಾಕಿ, ರೋಹನ್ ಮೆಹ್ರಾ ಜೊತೆ ಸಂಬಂಧವನ್ನು ನಟಿ ಅಧಿಕೃತಪಡಿಸುತ್ತಾರಾ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಕಾದುನೋಡಬೇಕಿದೆ.

    ಸದ್ಯ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಹೊಸ ಲವ್‌ಸ್ಟೋರಿ ಮೂಲಕ ಸಂಚಲನ ಸೃಷ್ಟಿಸೋಕೆ ಸಜ್ಜಾಗಿದ್ದಾರೆ.

  • ಐರೆನ್ ಲೆಗ್ ಎಂದು ಕೆಣಕುವವರಿಗೆ ಕೆಲಸದ ಮೂಲಕ ಉತ್ತರ ಕೊಟ್ರು ಪೂಜಾ ಹೆಗ್ಡೆ

    ಐರೆನ್ ಲೆಗ್ ಎಂದು ಕೆಣಕುವವರಿಗೆ ಕೆಲಸದ ಮೂಲಕ ಉತ್ತರ ಕೊಟ್ರು ಪೂಜಾ ಹೆಗ್ಡೆ

    ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆಗೆ (Pooja Hegde) ಸದ್ಯದ ಮಟ್ಟಿಗೆ ಸಕ್ಸಸ್ ಸಿಗದೇ ಇದ್ದರೂ ಸಿನಿಮಾ ಅವಕಾಶಗಳು ಮಾತ್ರ ಕಮ್ಮಿಯಾಗಿಲ್ಲ. ಅಹಾನ್ ಶೆಟ್ಟಿ ಜೊತೆ ನಟಿಸಲಿರುವ ಪ್ರಾಜೆಕ್ಟ್‌ವೊಂದಿಗೆ ಶಾಹಿದ್ ಕಪೂರ್ (Shahid Kapoor) ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಐರೆನ್ ಲೆಗ್ ಎಂದು ಕೆಣಕಿ ಮಾತನಾಡುತ್ತಿದ್ದವರಿಗೆ ನಟಿ ಬ್ಯಾಕ್ ಟು ಬ್ಯಾಕ್ ಅವಕಾಶ ಪಡೆಯುತ್ತಿದ್ದಾರೆ.

    ಇತ್ತೀಚೆಗಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ಗೆ ಪೂಜಾ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ದಿಲ್ಲದೇ ಶಾಹಿದ್ ಕಪೂರ್ ನಟನೆಯ ‘ದೇವಾ’ ಸಿನಿಮಾದ ಚಿತ್ರೀಕರಣದಲ್ಲಿ ಪೂಜಾ ಭಾಗಿಯಾಗಿದ್ದಾರೆ.

    ಮೊದಲ ಬಾರಿಗೆ ಶಾಹಿದ್ ಕಪೂರ್ ಜೊತೆ ಪೂಜಾ ಜೋಡಿಯಾಗಿ ನಟಿಸುತ್ತಿದ್ದಾರೆ. ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ದೇವಾ ಸಿನಿಮಾ ಕಳೆದ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಎಲ್ಲೂ ಬಿಟ್ಟು ಕೊಡುತ್ತಿರಲಿಲ್ಲ. ಈಗ ಮುಂಬೈನಲ್ಲಿ ಸೆಕೆಂಡ್‌ ಶೆಡ್ಯೂಲ್‌ ಶೂಟಿಂಗ್‌ ಭರದಿಂದ ನಡೆಯುತ್ತಿದೆ.

    ಈ ಚಿತ್ರವನ್ನು ಮಲಯಾಳಂನ ಹೆಸರಾಂತ ನಿರ್ಮಾಪಕ ರೋಶನ್ ಆಂಡ್ರ್ಯೂಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದೇವಾ ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಪುಷ್ಪ’ಗಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಜಾಹ್ನವಿ ಕಪೂರ್

    ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಬಾಯ್ ಕಿಸಿ ಕೀ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಡೆಯದಾಗಿ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಈಗ ಒಂದು ವರ್ಷ ನಂತರ ಮತ್ತೆ ಪೂಜಾ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನೇಹಾ ಶೆಟ್ಟಿ ಅವರಂತಹ ನಟಿಮಣಿಯರ ಮಧ್ಯೆ ಪೂಜಾ ಹೆಗ್ಡೆಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಐರೆನ್ ಲೆಗ್ ನಟಿ ಎಂದು ಕಿಡಿಕಾರುವವರಿಗೆ ಸೈಲೆಂಟ್ ಆಗಿ ತಮ್ಮ ಸಿನಿಮಾದ ಅಪ್‌ಡೇಟ್ ಮೂಲಕ ನಟಿ ಉತ್ತರ ನೀಡುತ್ತಿದ್ದಾರೆ.

  • ಸೋಲಿನ ಸುಳಿಯಲ್ಲಿರುವ ಪೂಜಾ ಹೆಗ್ಡೆಗೆ ‘ಸಂಕಿ’ ಸಿನಿಮಾ ಕೈಹಿಡಿಯುತ್ತಾ?

    ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆಗೆ (Pooja Hegde) ಬಂಪರ್ ಅವಕಾಶವೊಂದು ಸಿಕ್ಕಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದ ಪೂಜಾ ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಐರೆನ್ ಲೆಗ್ ಆಗಿ ಹೈಲೆಟ್ ಆಗಿರುವ ಹುಡುಗಿ ಪೂಜಾಗೆ ಈ ಚಿತ್ರದ ಕೈ ಹಿಡಿಯುತ್ತಾ? ‘ಸಂಕಿ’ ಚಿತ್ರದ ಬಗ್ಗೆ ಏನಿದೆ ಅಪ್‌ಡೇಟ್ಸ್. ಇಲ್ಲಿದೆ ಮಾಹಿತಿ.

    ‘ಕಿಸಿ ಕಾ ಬಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಜೊತೆ ಪೂಜಾ ಹೆಗ್ಡೆ (Pooja Hegde) ಕಡೆಯದಾಗಿ ನಟಿಸಿದ್ದರು. ಅದಾದ ನಂತರ ಸಿನಿಮಾ ಆಫರ್ಸ್ ಕಮ್ಮಿಯಾಗಿತ್ತು. ಮತ್ತೆ ಟಾಲಿವುಡ್‌ಗೆ ಮುಖ ಮಾಡ್ತಾರೆ ಐರೆನ್ ಲೆಗ್ ನಟಿ ಎಂದೇ ಸುದ್ದಿ ಹಬ್ಬಿತ್ತು. ಆದರೆ ಫ್ಯಾನ್ಸ್ಗೆ ಈಗ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಇತ್ತೀಚೆಗೆ ನಟಿಸಿದ ಪೂಜಾ ಹೆಗ್ಡೆ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಸ್ಟಾರ್ ನಟರ ಸಿನಿಮಾದಿಂದ ಪೂಜಾ ಕಿಕ್ ಔಟ್ ಆಗಿದ್ದು ಇದೆ. ‌’ಸಂಕಿ’ (Sanki) ಬಾಲಿವುಡ್ ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸಂಕಿ ಗೆದ್ದರೆ ಪೂಜಾ ಹೆಗ್ಡೆಗೆ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರೆ. ಹಾಗಾದ್ರೆ ‘ಸಂಕಿ’ ಸಿನಿಮಾ ಹೇಗಿರಲಿದೆ?

    ‘ಸಂಕಿ’ (Sanki) ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿಗೆ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಕೆರೆಬೇಟೆ’ ಅನುಭವಕ್ಕೆ ಥ್ರಿಲ್ ಆದ ಚಿಲ್ಲರ್ ಮಂಜು

    ‘ಸಂಕಿ’ ಚಿತ್ರವು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದೆ. ‘ಆಶಿಕಿ 2’ ಸಿನಿಮಾದಂತೆ ಆಧುನೀಕರಿಸಿ ಸಂಕಿ ಸಿನಿಮಾ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ‘ಸಂಕಿ’ ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿಯಾಗಿರಲಿದೆ. ಅಹಾನ್ ಶೆಟ್ಟಿ- ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಜುಲೈನಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ 7 ಹಾಡುಗಳು ಇರಲಿದೆ.

    ಮುಂದಿನ ವರ್ಷ ಪ್ರೇಮಿಗಳ ದಿನ ಫೆ.14ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೊಚ್ಚ ಹೊಸ ಲವ್ ಸ್ಟೋರಿ ಹೇಳೋಕೆ ಅಹಾನ್- ಪೂಜಾ ಹೆಗ್ಡೆ ಸಜ್ಜಾಗಿದ್ದಾರೆ. ಇದನ್ನೂ ಓದಿ:ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಯಾಮಿ ಗೌತಮ್

    2021ರಲ್ಲಿ ‘ತಡಪ್’ ಚಿತ್ರದ ಮೂಲಕ ಅಹಾನ್ ಶೆಟ್ಟಿ ಬಾಲಿವುಡ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ಪೂಜಾ ಹೆಗ್ಡೆ (Pooja Hegde) ಜೊತೆ ಅಹಾನ್ ಶೆಟ್ಟಿ (Ahan Shetty) ನಟಿಸುತ್ತಿರೋದ್ರಿಂದ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡ್ತಾರಾ ಕಾದುನೋಡಬೇಕಿದೆ.

  • ಸುನೀಲ್ ಶೆಟ್ಟಿ ಪುತ್ರನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಸುನೀಲ್ ಶೆಟ್ಟಿ ಪುತ್ರನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಬಂಪರ್ ಅವಕಾಶವೊಂದು ಸಿಕ್ಕಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದ ಪೂಜಾ ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ನಟಿ ಕೈಜೋಡಿಸಿದ್ದಾರೆ.

    ‘ಕಿಸಿ ಕಾ ಬಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಜೊತೆ ಪೂಜಾ ಹೆಗ್ಡೆ ಕಡೆಯದಾಗಿ ನಟಿಸಿದ್ದರು. ಅದಾದ ನಂತರ ಸಿನಿಮಾ ಆಫರ್ಸ್ ಕಮ್ಮಿಯಾಗಿತ್ತು. ಮತ್ತೆ ಟಾಲಿವುಡ್‌ಗೆ ಮುಖ ಮಾಡ್ತಾರೆ ಐರೆನ್ ಲೆಗ್ ನಟಿ ಎಂದೇ ಸುದ್ದಿ ಹಬ್ಬಿತ್ತು. ಆದರೆ ಫ್ಯಾನ್ಸ್‌ಗೆ ಈಗ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ‘ಸಂಕಿ’ (Sanki) ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿಗೆ (Ahan Shetty) ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಮುಂದಿನ ವರ್ಷ ಪ್ರೇಮಿಗಳ ದಿನ ಫೆ.14ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೊಚ್ಚ ಹೊಸ ಲವ್ ಸ್ಟೋರಿ ಹೇಳೋಕೆ ಅಹಾನ್- ಪೂಜಾ ಹೆಗ್ಡೆ (Pooja Hegde) ಸಜ್ಜಾಗಿದ್ದಾರೆ. ಇದನ್ನೂ ಓದಿ:ವಿನಯ್ ಗೌಡ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ಕೊಟ್ಟ ಪತ್ನಿ

    2021ರಲ್ಲಿ ‘ತಡಪ್’ (Tadap) ಚಿತ್ರದ ಮೂಲಕ ಅಹಾನ್ ಶೆಟ್ಟಿ ಬಾಲಿವುಡ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ಪೂಜಾ ಹೆಗ್ಡೆ ಜೊತೆ ಅಹಾನ್ ಶೆಟ್ಟಿ ನಟಿಸುತ್ತಿರೋದ್ರಿಂದ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡ್ತಾರಾ ಕಾದುನೋಡಬೇಕಿದೆ.

  • ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್

    ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್

    ರಾವಳಿ ನಟಿ ಪೂಜಾ ಹೆಗ್ಡೆ (Pooja Hegde) ಅವರ ಅದೃಷ್ಟ ಕೈ ಕೊಟ್ಟಿದೆ. ಚಿತ್ರರಂಗದಲ್ಲಿ ಎಂತಹ ಪಾತ್ರ ಮಾಡಿದ್ದರೂ ಪೂಜಾಗೆ ಸಕ್ಸಸ್ ಕೈಹಿಡಿಯುತ್ತಿಲ್ಲ. ಇದರ ನಡುವೆ ಟಾಲಿವುಡ್ ನಟ ಸಾಯಿ ಧರಂ ತೇಜ್ (Sai Dharam Tej) ಸಿನಿಮಾದಿಂದ ಪೂಜಾ ಹೆಗ್ಡೆ ಔಟ್ ಆಗಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ವಿಜಯ್ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲಿಸಿದ್ದಾರೆ- ರಶ್ಮಿಕಾ

    ಕಡೆಯದಾಗಿ ಪೂಜಾ ಹೆಗ್ಡೆ ಅವರು ಕಳೆದ ವರ್ಷ ಸಲ್ಮಾನ್ ಖಾನ್ (Salman Khan) ಜೊತೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ ಯಾವುದೇ ಸಿನಿಮಾದಲ್ಲೂ ಪೂಜಾ ನಟಿಸಿಲ್ಲ. ಮಹೇಶ್ ಬಾಬು ಸಿನಿಮಾದಿಂದ ಪೂಜಾ ಕಿರಿಕ್ ಮಾಡಿಕೊಂಡು ಹೊರಬಂದಿದ್ದರು. ಈಗ ತೆಲುಗಿನ ಸಿನಿಮಾ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ.

    ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಅವರೇ ಹೊರಬಂದಿದ್ದಾರೆ. ಆದರೆ ಅವರ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಈ ಸಿನಿಮಾದಲ್ಲಿ ಪೂಜಾ ಪಾತ್ರಕ್ಕೆ ಗ್ಲ್ಯಾಮರ್ ಇಲ್ಲ ಎಂದು ಸಾಯಿ ಧರಂ ತೇಜ್ ಚಿತ್ರವನ್ನು ಕೈಬಿಟ್ಟಿದ್ದಾರೆ. ತಮ್ಮ ಅಭಿಮಾನಿಗಳು ಗ್ಲ್ಯಾಮರಸ್ ಪಾತ್ರದಲ್ಲಿ ನೋಡಲು ಇಷ್ಟಪಡುತ್ತಾರೆ. ನಾಯಕಿಯ ಪಾತ್ರವು ಡಿ- ಗ್ಲ್ಯಾಮ್‌ ಲುಕ್‌ನಲ್ಲಿ ಮೂಡಿ ಬರಲಿದೆ. ಚಿತ್ರದಲ್ಲಿ ಹೆಚ್ಚು ದೃಶ್ಯಗಳು ಬಿಳಿ ಸೀರೆ ಧರಿಸಿ ಜೈಲಿನಲ್ಲಿ ಕುಳಿತಿರುವಂತಹ ಪಾತ್ರ ಇದಾಗಿದೆ. ಹಾಗಾಗಿ ನಟಿ ಈ ಸಿನಿಮಾದಿಂದ ಹೊರಬಂದಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ಪೂಜಾ ಹೆಗ್ಡೆ ಅವರು ಮಂಗಳೂರು ಮತ್ತು ಉಡುಪಿಗೆ ಆಗಮಿಸಿದ್ದರು. ತಮ್ಮ ಸಂಬಂಧಿಕರ ಮದುವೆಯಲ್ಲಿ ನಟಿ ಮಿಂಚಿದ್ದರು. ಅದಷ್ಟೇ ಅಲ್ಲ, ಬೆಂಗಳೂರಿನ ಕಂಬಳದಲ್ಲೂ ಭಾಗಿಯಾಗಿ ಕನ್ನಡ, ತುಳು ಭಾಷೆ ಮಾತನಾಡುವ ಮೂಲಕ ಪೂಜಾ ಗಮನ ಸೆಳೆದಿದ್ದರು.