Tag: ಪೂಜಾ ಹೆಗ್ಡೆ

  • ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ನ್ನಡದ ಬ್ಯೂಟಿ ಶ್ರೀಲೀಲಾಗೆ (Sreeleela) ಪರಭಾಷೆಯಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗದೆ ಇದ್ರೂ ಅವಕಾಶಗಳಿಗೆ ಕೊರತೆಯೇನು ಇಲ್ಲ. ಆದರೆ ಇದೀಗ ನಟಿ ಬಂಪರ್ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಕರಾವಳಿ ಬೆಡಗಿ ಪೂಜಾ ಹೆಗ್ಗೆ (Pooja Hegde) ಎಂಟ್ರಿ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್ ನಟ ವರುಣ್ ಧವನ್ (Varun Dhawan) ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಶ್ರೀಲೀಲಾ ಆಯ್ಕೆಯಾಗಿದ್ದರು. ಎರಡು ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇತ್ತು. ಆದರೆ ಶ್ರೀಲೀಲಾ ಆಯ್ಕೆಯಾಗಿದ್ದ ಪಾತ್ರಕ್ಕೆ ಈಗ ಪೂಜಾರನ್ನು ಫೈನಲ್ ಮಾಡಲಾಗಿದೆ. ಶ್ರೀಲೀಲಾರನ್ನು ಆ ಪಾತ್ರದಿಂದ ಹೊರಗಿಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

    ಇನ್ನೂ ಈ ಹಿಂದೆ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು. ಆ ನಂತರ ಪೂಜಾ ಬದಲು ಶ್ರೀಲೀಲಾಗೆ ಚಿತ್ರತಂಡ ಮಣೆ ಹಾಕಿತ್ತು. ಆ ಚಿತ್ರ ರಿಲೀಸ್ ಆಗಿ ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಇನ್ನೂ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ. ಈ ಎರಡು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

  • ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ

    ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ

    ನ್ನಡದ ಕೆವಿಎನ್ ಪ್ರೋಡಕ್ಷನ್ಸ್ ನಿರ್ಮಾಣದ ‘ದಳಪತಿ 69’ (Thalapathy 69) ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು (ಅ.4) ಅದ್ಧೂರಿಯಾಗಿ ನಡೆಯಿತು. ಮುಹೂರ್ತ ಕಾರ್ಯಕ್ರಮದ ಫೋಟೋಗಳನ್ನು ನಿರ್ಮಾಣ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

    ವಿಜಯ್ ದಳಪತಿ ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಹೊಸ ಸಿನಿಮಾಗೆ ಇಂದು ಚಾಲನೆ ನೀಡಲಾಗಿದೆ. ‘ದಳಪತಿ 69’ ಚಿತ್ರದಲ್ಲಿ ವಿಜಯ್ ಜೊತೆ ಯಾರೆಲ್ಲಾ ನಟನೆ ಮಾಡ್ತಾರೆ ಎಂದು ಚಿತ್ರತಂಡ ರಿವೀಲ್ ಮಾಡಿದ ಬೆನ್ನಲ್ಲೇ ಈಗ ಸಿನಿಮಾ ಮುಹೂರ್ತ ಚೆನ್ನೈನಲ್ಲಿ ನೆರವೇರಿದೆ.

    ಈ ಕಾರ್ಯಕ್ರಮದಲ್ಲಿ ಕೆವಿಎನ್ ಸಂಸ್ಥೆಯ ನಿರ್ಮಾಪಕರು, ವಿಜಯ್ ದಳಪತಿ, ಪೂಜಾ ಹೆಗ್ಡೆ, ಅನಿಮಲ್ ನಟ ಬಾಬಿ ಡಿಯೋಲ್ ಸೇರಿದಂತೆ ಅನೇಕರು ಭಾಗಿದ್ದರು.

    ಇನ್ನೂ ಈ ಚಿತ್ರವು ವಿಜಯ್ ನಟಿಸಲಿರುವ ಕೊನೆಯ ಸಿನಿಮಾ ಆಗಿದ್ದು, ರಾಜಕೀಯ ಕುರಿತು ಸಿನಿಮಾ ಮೂಡಿ ಬರಲಿದೆ ಎನ್ನಲಾಗಿದೆ.

  • Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಕ್ಸಸ್ ಸಿಗದೆ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಕಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಮ್ಮೆ ಸ್ಟಾರ್ ನಟ ವಿಜಯ್ ದಳಪತಿಗೆ (Vijay Thalapathy) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಅಫಿಷಿಯಲ್ ಆಗಿ ತಿಳಿಸಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

    ವಿಜಯ್ ನಟನೆಯ ಕೊನೆಯ ಸಿನಿಮಾ ‘ದಳಪತಿ 69ನೇ’ (Thalapathy 69) ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಪೂಜಾ ಹೆಗ್ಡೆ ಗಿಟ್ಟಿಸಿಕೊಂಡಿದ್ದಾರೆ.

     

    View this post on Instagram

     

    A post shared by KVN Productions (@kvn.productions)

    ಈ ಹಿಂದೆ ಕೂಡ 2022ರಲ್ಲಿ ತೆರೆಕಂಡ ‘ಬೀಸ್ಟ್’ ಚಿತ್ರದಲ್ಲಿ ವಿಜಯ್‌ಗೆ ಪೂಜಾ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಈಗ ಮತ್ತೆ ವಿಜಯ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇನ್ನೂ ಬಾಬಿ ಡಿಯೋಲ್ (Bobby Deol) ಕೂಡ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.

    ಅಂದಹಾಗೆ, ಶಾಹಿದ್ ಕಪೂರ್ ಜೊತೆ ‘ದೇವ’, ಸೂರ್ಯ 44, ಅಹಾನ್ ಶೆಟ್ಟಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

    ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳ ಸೋಲನ್ನು ಕಂಡಿರುವ ಹಿನ್ನೆಲೆ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ತಮಿಳಿನ ಹೊಸ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪೂಜಾಗೆ ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಗುತ್ತಿಲ್ಲ. ಆದರೆ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟ ರಾಘವ್ ಲಾರೆನ್ಸ್ (Raghava Lawrence) ನಟನೆಯ ‘ಕಾಂಚನಾ ಪಾರ್ಟ್ 4’ನಲ್ಲಿ (Kanchana 4) ದೆವ್ವದ (Ghost) ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟಿಯನ್ನು ಕೇಳಲಾಗಿದೆಯಂತೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಆದರೆ ನಟಿ ಒಪ್ಪಿಕೊಂಡ್ರಾ? ಎಂಬುದರ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ.

    ದೆವ್ವ ಪಾತ್ರವಾಗಿದ್ದರೂ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಒಂದು ವೇಳೆ, ಈ ಪಾತ್ರ ಒಪ್ಪಿದ್ದೇ ಆದರೆ ಹೊಸ ಪಾತ್ರದಲ್ಲಿ ನಟಿ ಕಾಣಿಸಿಕೊಂಡಂತೆ ಆಗುತ್ತದೆ. ಜಸ್ಟ್‌ ವೈರಲ್‌ ಆಗುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಪೂಜಾರನ್ನು ದೆವ್ವ ಪಾತ್ರದಲ್ಲಿ ನೋಡಲು ಕಾಯುತ್ತಿದ್ದಾರೆ. ಇದನ್ನೂ ಓದಿ:ಮಾಧ್ಯಮಗಳನ್ನು ನೋಡಿ ಅಸಭ್ಯ ಸನ್ನೆ ಮಾಡಿದ ದರ್ಶನ್

    ಅಂದಹಾಗೆ, ಶಾಹಿದ್ ಕಪೂರ್ (Shahid Kapoor) ನಟನೆಯ ದೇವ ಚಿತ್ರದಲ್ಲಿ ಪೂಜಾ ಹೀರೋಯಿನ್ ನಟಿಸಿದ್ದಾರೆ. ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರಕ್ಕೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ, ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡುತ್ತಿದ್ದಾರೆ.

  • ಸಿನಿಮಾಗೆ ಬ್ರೇಕ್ ಕೊಟ್ಟು ಜಂಗಲ್‌ನಲ್ಲಿ ಪೂಜಾ ಹೆಗ್ಡೆ ಸುತ್ತಾಟ

    ಸಿನಿಮಾಗೆ ಬ್ರೇಕ್ ಕೊಟ್ಟು ಜಂಗಲ್‌ನಲ್ಲಿ ಪೂಜಾ ಹೆಗ್ಡೆ ಸುತ್ತಾಟ

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಿನಿಮಾಗೆ ಕೆಲಸಕ್ಕೆ ಬ್ರೇಕ್ ಕೊಟ್ಟು ವಿದೇಶದ ಜಂಗಲ್‌ನಲ್ಲಿ ನಟಿ ಸುತ್ತಾಟ ನಡೆಸಿದ್ದಾರೆ. ಟ್ರೇಕ್ಕಿಂಗ್‌ನ ಸುಂದರ ಫೋಟೋಗಳನ್ನು ಪೂಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು ನಟಿ ವಿದೇಶಕ್ಕೆ ಹಾರಿದ್ದಾರೆ. ಕಾಡಿನ ಗ್ರೀನರಿ ಮಧ್ಯೆ ನಿಂತು ಪ್ರಕೃತಿಯನ್ನು ನೋಡಿ ಖುಷಿಪಟ್ಟಿರುವ ಚೆಂದದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಈ ವೇಳೆ, ಶರ್ಟ್‌ ಮತ್ತು ಶಾರ್ಟ್‌ ಜೀನ್ಸ್‌ ಧರಿಸಿ ಮಿಂಚಿದ್ದಾರೆ. ಇದನ್ನೂ ಓದಿ:‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್‌ ನೀಡಿದ ಮಹೇಶ್ ಬಾಬು

     

    View this post on Instagram

     

    A post shared by Pooja Hegde (@hegdepooja)


    ಅಂದಹಾಗೆ, ನಟಿಯ ಖಾಸಗಿ ವಿಚಾರಕ್ಕೆ ಬರೋದಾದ್ರೆ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಹೆಸರು ಕೇಳಿ ಬರುತ್ತಿದೆ. ಕೆಲ ತಿಂಗಳುಗಳ ಹಿಂದೆ ನಟಿಯ ಕುಟುಂಬದ ಜೊತೆ ರೋಹನ್ ಕಾಣಿಸಿಕೊಂಡಿದ್ದರು. ಇದು ಇಬ್ಬರ ಡೇಟಿಂಗ್ ಸುದ್ದಿ ಮತ್ತಷ್ಟು ಪುಷ್ಠಿ ನೀಡಿತ್ತು.

    ಇನ್ನೂ ಶಾಹಿದ್ ಕಪೂರ್ ಜೊತೆ `ದೇವ’ (Deva) ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಪುತ್ರನ ಜೊತೆ ಸಿನಿಮಾ, ತಮಿಳು ನಟ ಸೂರ್ಯ ನಟನೆಯ 44ನೇ (Suriya 44) ಚಿತ್ರಕ್ಕೂ ಇವರೇ ನಾಯಕಿಯಾಗಿದ್ದಾರೆ.

  • Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ

    Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ

    ಮಿಳು ನಟ ಸೂರ್ಯಗೆ (Tamil Actor Suriya) ಇಂದು (ಜು.23) 49ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ಈ ದಿನ ಸೂರ್ಯ ಫ್ಯಾನ್ಸ್‌ಗೆ ಹೊಸ ಚಿತ್ರದ ಅಪ್‌ಡೇಟ್ ಮೂಲಕ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಗ್ಯಾಂಗ್‌ಸ್ಟರ್ ಅವತಾರದಲ್ಲಿ ನಟ ಎಂಟ್ರಿ ಕೊಟ್ಟಿದ್ದಾರೆ.

    ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜ್ ಜೊತೆ 44ನೇ (Suriya 44) ಸಿನಿಮಾಗಾಗಿ ಸೂರ್ಯ ಕೈಜೋಡಿಸಿದ್ದಾರೆ. ಸಮುದ್ರದ ಸಮೀಪ ಇರುವ ಕೋಟೆಯಿಂದ ಸಿಗರೇಟ್ ಸೇದುತ್ತಾ ಖಡಕ್ ಆಗಿ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಈ ಸದ್ಯ ಸಿನಿಮಾದ ಮೊದಲ ತುಣುಕು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ:ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ಸಾಧುಕೋಕಿಲ

    ಈ ಚಿತ್ರದಲ್ಲಿ ಗ್ಯಾಂಗ್ ಒಂದರ ಲೀಡರ್ ಆಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕಥೆ ವಿಭಿನ್ನವಾಗಿದ್ದು, ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ‘ಕಂಗುವ’ ಸಿನಿಮಾದ ಕೆಲಸದ ನಡುವೆ 44ನೇ ಚಿತ್ರದ ಶೂಟಿಂಗ್‌ನಲ್ಲಿಯೂ ಸೂರ್ಯ ತೊಡಗಿಸಿಕೊಂಡಿದ್ದಾರೆ.


    ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಜೊತೆ ಸೂರ್ಯ ರೊಮಾನ್ಸ್ ಮಾಡಲಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ಭಾರೀ ನಿರೀಕ್ಷೆಯಿದೆ.

  • ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ

    ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ

    ರಾವಳಿ ನಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿಸುತ್ತಿರುವ ಸಿನಿಮಾ ಹಿಟ್ ಆಗದೇ ಇದ್ದರೂ ಪೂಜಾಗೆ ಇರುವ ಬೇಡಿಕೆಯೇನು ಕಮ್ಮಿಯಾಗಿಲ್ಲ. ಸದ್ಯ ಕಾಲಿವುಡ್ ನಟ ಸೂರ್ಯ ಜೊತೆ ನಟಿಸಲು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

    ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾ, ಅಹಾನ್ ಶೆಟ್ಟಿ ಜೊತೆ ಸಂಕಿ ಸಿನಿಮಾದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮಿಳಿನ ನಟ ಸೂರ್ಯ (Actor Suriya) ಜೊತೆ ನಟಿಸುವ ಅವಕಾಶ ಪೂಜಾಗೆ ಸಿಕ್ಕಿದೆ.

    ಇದುವರೆಗೂ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಸೂರ್ಯ ನಟನೆಯ 44ನೇ (Suriya 44) ಸಿನಿಮಾದಲ್ಲಿ ನಟಿಸಲು 4 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ

    ತೆಲುಗಿನಲ್ಲಿ ಅದ್ಯಾಕೋ ಪೂಜಾಗೆ ಅದೃಷ್ಟ ಖುಲಾಯಿಸುತ್ತಿಲ್ಲ. ಆದರೆ ಬಾಲಿವುಡ್‌ನಲ್ಲಿ ನಟಿಗೆ ಉತ್ತಮ ಅವಕಾಶಗಳೇ ಅರಸಿ ಬರುತ್ತಿವೆ. ಹಾಗಾಗಿ ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ.

  • ತಮಿಳಿನಲ್ಲಿ ಬಿಗ್‌ ಚಾನ್ಸ್-‌ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿ

    ತಮಿಳಿನಲ್ಲಿ ಬಿಗ್‌ ಚಾನ್ಸ್-‌ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿ

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಕೆರಿಯರ್‌ನಲ್ಲಿ ಯಶಸ್ಸು ಸಿಗದೇ ಇದೀಗ ಮತ್ತೆ ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ತಮಿಳಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯಗೆ (Actor Suriya) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

    ಪೂಜಾ ಹೆಗ್ಡೆಗೆ ಅವಕಾಶಗಳು ಸಿಗುತ್ತಿವೆ ಆದರೆ ಯಶಸ್ಸು ಸಿಗುತ್ತಿಲ್ಲ. ಹಾಗಾಗಿ ನಟಿ ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಪೂಜಾ ಮೊದಲು ಬಣ್ಣ ಹಚ್ಚಿದ್ದೇ ತಮಿಳು ಸಿನಿಮಾಗೆ ಆ ನಂತರ ಅವರು ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಬ್ಯುಸಿಯಾದರು. ಈಗ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಮತ್ತು ಸೂಕ್ತ ಕಥೆ ಸಿಕ್ಕಿದೆ. ಹಾಗಾಗಿ ಮತ್ತೆ ತಮಿಳಿನಲ್ಲಿ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ನಟ ಸೂರ್ಯ ‘ಕಂಗುವ’ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ರಜನಿಕಾಂತ್ ನಟಿಸಿದ ಪೆಟ್ಟಾ, ಮಹಾನ್ ಚಿತ್ರಗಳಿಗೆ ಇವರೇ ನಿರ್ದೇಶನ ಮಾಡಿದ್ದರು. ಈಗ ಸೂರ್ಯ ಮತ್ತು ಪೂಜಾ ಹೆಗ್ಡೆಗೆ ಕಾರ್ತಿಕ್ ಸುಬ್ಬರಾಜ (Karthik Subbaraj) ನಿರ್ದೇಶನ ಮಾಡಲಿದ್ದಾರೆ. ಸೂರ್ಯ ನಟಿಸಲಿರುವ 44ನೇ (Suriya 44) ಚಿತ್ರಕ್ಕೆ ಪೂಜಾ ನಾಯಕಿ ಎಂದು ಅಧಿಕೃತ ಘೋಷಣೆ ಕೂಡ ಮಾಡಿದ್ದಾರೆ.

    ಮೊದಲ ಬಾರಿಗೆ ಸೂರ್ಯ ಮತ್ತು ಪೂಜಾ ಜೊತೆಯಾಗುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಯಶಸ್ಸಿಗಾಗಿ ಎದುರು ನೋಡ್ತಿರುವ ನಟಿಗೆ ಈ ತಮಿಳು ಚಿತ್ರ ಕೈಹಿಡಿಯುತ್ತಾ ಎಂದು ಕಾಯಬೇಕಿದೆ.

    ಅಂದಹಾಗೆ. ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನ ಜೊತೆ ಹೊಸ ಚಿತ್ರ, ನಾಗಚೈತನ್ಯ ಜೊತೆ ತೆಲುಗು ಚಿತ್ರವೊಂದು ನಟಿ ಒಪ್ಪಿಕೊಂಡಿದ್ದಾರೆ.

  • ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ ನಟನೆಯ ಸಿನಿಮಾ ಶುರುವಾಗೋದು ಯಾವಾಗ?

    ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ ನಟನೆಯ ಸಿನಿಮಾ ಶುರುವಾಗೋದು ಯಾವಾಗ?

    ಕುಡ್ಲದ ಸುಂದರಿ ಪೂಜಾ ಹೆಗ್ಡೆಗೆ (Pooja Hegde) ಟಾಲಿವುಡ್‌ನಲ್ಲಿ ಬೇಡಿಕೆ ಕಮ್ಮಿಯಾದ ಬೆನ್ನಲ್ಲೇ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರನ ಜೊತೆ ಪೂಜಾ ಸಿನಿಮಾ ಮಾಡಲಿದ್ದಾರೆ. ಹೊಸ ಸಿನಿಮಾಗೆ ಚಿತ್ರೀಕರಣ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಮೊದಲ ಬಾರಿಗೆ ಅಹಾನ್ ಶೆಟ್ಟಿ (Ahan Shetty) ಜೊತೆ ಪೂಜಾ ಹೆಗ್ಡೆ ಸಿನಿಮಾ ಮಾಡುತ್ತಿದ್ದಾರೆ. ಕೆಲ ದಿನಗಳ ಈ ಚಿತ್ರದ ಅನೌನ್ಸ್ ಕೂಡ ಆಗಿತ್ತು. ಈಗ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಜೂನ್ 6ರಿಂದ ಪೂಜಾ ಹೊಸ ಪ್ರಾಜೆಕ್ಟ್‌ಗೆ ಚಾಲನೆ ಸಿಗಲಿದೆ. ‘ಸಂಕಿ’ (Sanki Film) ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ

    ಈಗಾಗಲೇ ಹೃತಿಕ್ ರೋಷನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಜೊತೆ ನಟಿಸಿರುವ ಪೂಜಾ ಹೆಗ್ಡೆ ಇದೀಗ ಅಹಾನ್ ಶೆಟ್ಟಿ ಜೊತೆಗಿನ ರೊಮ್ಯಾನ್ಸ್ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಸಂಕಿ’ ಅಹಾನ್‌ ಶೆಟ್ಟಿ ಜೊತೆ ರೊಮ್ಯಾನ್ಸ್‌ ಮಾಡಲು ಪೂಜಾ ಹೆಗ್ಡೆ ಸಜ್ಜಾಗಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ಪೂಜಾ ಸಿನಿಮಾಗಿಂತ ಹೆಚ್ಚಾಗಿ ರೋಹನ್‌ ಮೆಹ್ರಾ ಜೊತೆಗಿನ ಡೇಟಿಂಗ್‌ ವಿಚಾರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡ್ತಾರಾ ಎಂದು ಕಾದುನೋಡಬೇಕಿದೆ.

  • ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ರಾವಳಿ ಕುವರಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಕ್ಸಸ್‌ಗಾಗಿ ತಮಿಳು ರಿಮೇಕ್ ಸಿನಿಮಾದ ಮೊರೆ ಹೋಗಿದ್ದಾರೆ. ತಮಿಳಿನ ಸ್ಟಾರ್ ಜಯಂ ರವಿ ನಟಿಸಿರುವ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದ್ದು, ಯಶಸ್ಸಿಗಾಗಿ ಪೂಜಾ ಹೊಸ ಹೆಜ್ಜೆ ಇಟ್ಟಿದ್ದಾರೆ.

    ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳಿಗಿಂತ ದಕ್ಷಿಣ ಸಿನಿಮಾಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ಹಾಗಾಗಿ ಸೌತ್‌ನಲ್ಲಿ ಈಗಾಗಲೇ ಹಿಟ್ ಆಗಿರುವ ಚಿತ್ರವನ್ನು ಬಾಲಿವುಡ್‌ನಲ್ಲಿ ತೋರಿಸಲು ಸ್ಕೆಚ್ ಹಾಕಿದ್ದಾರೆ. ಜಯಂ ರವಿ ಮತ್ತು ರಾಶಿ ಖನ್ನಾ ನಟನೆಯ ‘ಆದಂಗ ಮಾರು’ ಹಿಂದಿಯಲ್ಲಿ ಮೂಡಿ ಬರಲಿದೆ. ಇದನ್ನೂ ಓದಿ:ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

    ‘ಆದಂಗ ಮಾರು’ ಚಿತ್ರದ ಹಿಂದಿಗೆ ರಿಮೇಕ್‌ನಲ್ಲಿ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಸಂಕಿ’ (Sanki Film) ಎಂದು ಕೂಡ ಟೈಟಲ್ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.

    ತಮಿಳಿನಲ್ಲಿ ಹಿಟ್ ಆಗಿರುವ ಸಿನಿಮಾ ಬಾಲಿವುಡ್‌ನಲ್ಲಿಯೂ ಹಿಟ್ ಆಗಲಿದೆ ಎಂಬ ಭರವಸೆಯಲ್ಲಿ ಈ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಬಾಲಿವುಡ್‌ ಸಂಕಿ ಚಿತ್ರ ಪೂಜಾ ಕೆರಿಯರ್‌ನಲ್ಲಿ ಅದೃಷ್ಟ ತಂದು ಕೊಡುತ್ತಾ? ಕಾದುನೋಡಬೇಕಿದೆ.