Tag: ಪೂಜಾ ಹೆಗಡೆ

  • ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಅವಕಾಶ ಕೊಟ್ಟ ಗುಂಟೂರು ಖಾರಂ

    ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಅವಕಾಶ ಕೊಟ್ಟ ಗುಂಟೂರು ಖಾರಂ

    ಹೇಶ್ ಬಾಬು (Mahesh Babu) ಮುಖ್ಯ ಭೂಮಿಕೆಯ ಗುಂಟೂರು ಖಾರಂ (Guntur Kharam) ಸಿನಿಮಾಗೆ ನಾಯಕಿ ಯಾರು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇದೆ. ಪೂಜಾ ಹೆಗಡೆ (Pooja Hegde) ಬಿಟ್ಟು ಹೋದ ಸ್ಥಾನವನ್ನು ತುಂಬುವವರು ಯಾರು? ಎನ್ನುವ ಪ್ರಶ್ನೆ ಮೂಡಿತ್ತು. ಶ್ರೀಲೀಲಾ, ತ್ರಿಷಾ ಸೇರಿದಂತೆ ಹಲವರು ಹೆಸರು ನಾಯಕಿ ಸ್ಥಾನಕ್ಕಾಗಿ ಕೇಳಿ ಬಂದಿತ್ತು. ಈ ಎಲ್ಲ ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಮಣೆ ಹಾಕಿದೆ ಚಿತ್ರತಂಡ.

    ಹೌದು, ಈ ಹಿಂದೆ ಕನ್ನಡದ ನಟಿ ಶ್ರೀಲೀಲಾ ಅಥವಾ ಸ್ಟಾರ್ ನಟಿ ತ್ರಿಷಾ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಇದೀಗ ಬಂದ ಮಾಹಿತಿಯ ಪ್ರಕಾರ, ಯುವ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಎಂಟ್ರಿಯಾಗಿದೆ.  ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ಮೀನಾಕ್ಷಿ. ಆನಂತರ ಸಿನಿಮಾ ರಂಗವನ್ನು ಪ್ರವೇಶ ಮಾಡಿದವರು. ಹಿಟ್ : ದಿ ಸೆಕೆಂಡ್ ಕೇಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಮೀನಾಕ್ಷಿ ನಾಯಕಿಯಾಗಿ ನಟಿಸುತ್ತಿದ್ದರೆ, ಹಾಟ್ ಬ್ಯೂಟಿ ರಮ್ಯಾ ಕೃಷ್ಣ (Ramya Krishna) ವಿಶೇಷ ಪಾತ್ರವೊಂದನ್ನು ಮಾಡಲಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿನಿ ಪಾತ್ರ ಮಾಡಿದ್ದ ರಮ್ಯಾ ಕೃಷ್ಣ ಅಲ್ಲಿಂದ ಅವರು ಮತ್ತೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಮಹೇಶ್ ಬಾಬು ಸಿನಿಮಾವನ್ನು ರಮ್ಯಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗಾಗಿಯೇ ಪಾತ್ರವನ್ನು ಹಿಗ್ಗಿಸಿದ್ದಾರಂತೆ ಚಿತ್ರತಂಡ.

     

    ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಬರುವ ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಕಾರಣದಿಂದಾಗಿ ಶೂಟಿಂಗ್ ಮುಂದೂಡಲ್ಪಟ್ಟಿತ್ತು. ಕೆಲವು ದೃಶ್ಯಗಳನ್ನು ರೀಶೂಟ್ ಮಾಡುವಂತೆ ಮಹೇಶ್ ಬಾಬು ತಿಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಎಲ್ಲ ಪಕ್ಕಾ ಮಾಡಿಕೊಂಡೇ ಈ ಬಾರಿ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ನಟಿ ಪೂಜಾ ಹೆಗಡೆ ‘ಗುಂಟೂರು ಖಾರಂ’ ಬಿಡೋಕೆ ಕರಣ್ ಜೋಹಾರ್ ಕಾರಣನಾ?

    ನಟಿ ಪೂಜಾ ಹೆಗಡೆ ‘ಗುಂಟೂರು ಖಾರಂ’ ಬಿಡೋಕೆ ಕರಣ್ ಜೋಹಾರ್ ಕಾರಣನಾ?

    ಪೂಜಾ ಹೆಗಡೆ (Pooja Hegde) ವಾರದಿಂದ ಸುದ್ದಿಯಲ್ಲಿದ್ದಾರೆ. ಒಂದೇ ಸಿನಿಮಾ ಬಿಟ್ಟು ಹೊರ ಬಂದಿದ್ದೇ ಕಾರಣ. ಸತತ ಸೋಲಿನಿಂದ ಒದ್ದಾಡುತ್ತಿರುವ ಪೂಜಾ ‘ಗುಂಟೂರು ಖಾರಂ’ (Guntur Kharam) ನಿಂದ ದೂರವಾದರು. ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕಳೆದುಕೊಂಡರು. ಇದಕ್ಕೆಲ್ಲ ಯಾವ್ಯಾವುದೋ ಕಾರಣ ಎನ್ನುವ ಖಬರ್ ಹರಡಿತು. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಇದಕ್ಕೆ ಮೂಲ ಹೂರಣ ಎನ್ನುವ ಮಾತು ಹೊಗೆಯಾಡುತ್ತಿದೆ. ಯಾಕಾಗಿ ಪೂಜಾ ಖಾರ ತಿನ್ನಲು ಒಲ್ಲೆ ಎಂದರು? ಬಾಲಿವುಡ್ ನಿರ್ದೇಶಕನ ಸ್ಕೆಚ್ ಮತ್ತೇನು? ಗುಂಟೂರು ಪೂಜಾ ಸಜಾ ಕಥನ ನಿಮ್ಮ ಮುಂದೆ.

    ಪೂಜಾ ಹೆಗಡೆ ಕಳೆದ ನಾಲ್ಕು ವರ್ಷಳಿಂದ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಟಾಪ್ ಸ್ಟಾರ್ಸ್ ಜೊತೆ ಕುಣಿದರೂ ಜನರು ಕ್ಯಾರೇ ಎನ್ನಲಿಲ್ಲ. ಒಂದಾದರೂ ಹಿಟ್ ಕೊಡಬೇಕು. ಇದನ್ನೇ ಜಪ ಮಾಡಿದರೂ ದೇವರು ಆಶೀರ್ವಾದ ಮಾಡಲಿಲ್ಲ. ಇದೇ ಹೊತ್ತಲ್ಲಿ ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾಕ್ಕೆ ಬುಲಾವ್ ಬಂದಿತು. ಆದರೆ ಅದು ತಡವಾಯಿತು. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಪೂಜಾ ಕೊಟ್ಟ ಡೇಟ್ಸ್ ಮುಗಿಯಿತು. ಪೂಜಾ ಔಟ್ ಆದರು. ಆ ಜಾಗಕ್ಕೆ ಅದೇ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಕನ್ನಡದ ಶ್ರೀಲೀಲಾ (Srileela) ಪವಡಿಸಿ ಪಕಪಕ ನಕ್ಕರು. ಆದರೆ ಪೂಜಾ ಆ ಚಿತ್ರದಿಂದ ಹೊರ ಬೀಳಲು ಅಸಲಿ ಕಾರಣ ಇದ್ಯಾವುದೂ ಅಲ್ಲ, ಬಾಲಿವುಡ್ ಡೈರೆಕ್ಟರ್ ಕರಣ್‌ ಜೋಹರ್ (Karan Johar) ಅನ್ನೋದು ಗಿಚ್ಚಿ ಗಿಲಿಗಿಲಿ.

    ಬಾಲಿವುಡ್‌ನಲ್ಲಿ (Bollywood) ಪೂಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದ್ಯಾವುದೂ ಹೇಳಿಕೊಳ್ಳುವ ಹೆಸರು ತರಲಿಲ್ಲ. ಖುದ್ದು ಸಲ್ಮಾನ್ ಖಾನ್ ಜೊತೆ ಕುಣಿದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಕೂಡ ಅಂಗಾತ ಮಲಗಿತು. ಟಾಲಿವುಡ್‌ನಲ್ಲಿ ಗುಂಟೂರು ಖಾರಂ ಮಾತ್ರ ಕೈಯಲ್ಲಿತ್ತು. ನಿರ್ದೇಶಕ ತ್ರಿವಿಕ್ರಮ್ ಸ್ಕಿಪ್ಟ್ ಚೇಂಜ್ ಮಾಡಿದ್ದು, ಪೂಜಾ ಪಾತ್ರಕ್ಕೆ ಕತ್ತರಿ ಹಾಕಿದ್ದು, ಶ್ರೀಲೀಲಾಗೆ ರತ್ನಗಂಬಳಿ ಹಾಸಿದ್ದು. ಇದೆಲ್ಲ ಒಂದೇ ಕುಕ್ಕರಿನಲ್ಲಿ ಬೆಂದಾಗ ಪೂಜಾ ಕುದ್ದು ಹೋಗದೇ ಇರುತ್ತಾರಾ? ಅದಕ್ಕೆ `ನೀನು ಬ್ಯಾಡ ನಿನ್ ಸಿನಿಮಾನೂ ಬ್ಯಾಡ…’ ಅಂತ ಸ್ವಾಟೆ ತಿರುವಿ ಎದ್ದು ಬಂದರಂತೆ. ಇದೇ ನಿಜವಾ ಅಥವಾ ಬೇರೆ ಯಾರಾದರೂ ಊದಿನ ಕಡ್ಡಿ ಹಚ್ಚಿದರಾ? ಆಗ ಕರಣ್ ಕುಲುಕುಲು ನಗುತ್ತಾ ಬಂದರಲ್ಲಾ.

    ಕರಣ್ ಜೋಹರ್ ಬಾಲಿವುಡ್‌ನ ದೊಡ್ಡ ಹೆಸರು. ಅವರದೇ ಬ್ಯಾನರ್‌ನ ಎರಡು ಸಿನಿಮಾಗಳಿಗೆ ಪೂಜಾರನ್ನು ಬುಕ್ ಮಾಡಿದ್ದಾರಂತೆ. `ಕಾಲಿವುಡ್, ಟಾಲಿವುಡ್‌ಗೆ ಮಾರೋ ಗೋಲಿ. ಬಾಲಿವುಡ್‌ನಲ್ಲಿ ಆಡು ಬಾ ಹೋಳಿ…’ ಹೀಗೆ ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ನಾಲ್ಕು ಸಿನಿಮಾ ಗೋತಾ ಹೊಡೆದ ಸುಸ್ತಿನಲ್ಲಿದ್ದ ಪೂಜಾಗೆ ಕರಣ್ ಕಣ್ಣಲ್ಲಿ ಐರನ್ ಕಂಟೆಂಟ್ ಇರುವ ಕರಿಬೇವಿನ ಸೊಪ್ಪು ಕಾಣಿಸಿದೆ. ಫಲಿತಾಂಶ ಟಾಲಿವುಡ್‌ಗೆ ಟಾಟಾ ಬಾಲಿವುಡ್‌ನಲ್ಲಿ ಆಟ. ಜಸ್ಟ್ ಆರಂಭ. ಹತ್ತಿದ ಏಣಿ ಒದ್ದಿರುವ ಡಸ್ಕಿ ಬ್ಯೂಟಿಗೆ ಬಾಲಿವುಡ್ ಮಾವಿನ ಹಣ್ಣು ತಿನ್ನಿಸುತ್ತಾ ಅಥವಾ ಹಸಿ ಹಾಗಲಕಾಯಿ ಹಸಿಹಸಿಯಾಗಿಯೇ ಮುಕ್ಕಿಸುತ್ತಾ? ನೋಡೋಣ. ಕಾಯೋಣ.

  • ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಮಿಳು ಸಿನಿಮಾ ರಂಗದಿಂದ ಸೂಪರ್ ಸುದ್ದಿಯೊಂದು ಬಂದಿದೆ. ದಕ್ಷಿಣದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮುಂದಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಪೂಜಾ ಹೆಗಡೆ ಹೆಸರು ಕೇಳಿ ಬರುತ್ತಿತ್ತು, ಇದೀಗ ಪೂಜಾರನ್ನು ಸೈಡ್ ಹಾಕಿ, ವಿಜಯ್ ನಟನೆಯ ಸಿನಿಮಾಗೆ ಐದು ಕೋಟಿ ಸಂಭಾವನೆ ಪಡೆಯುವ ಮೂಲಕ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರಂತೆ ರಶ್ಮಿಕಾ.

    ದಳಪತಿ ವಿಜಯ್ ಜೊತೆ ಸದ್ಯ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರಕ್ಕೆ ಅವರು ತಗೆದುಕೊಂಡ ಸಂಭಾವನೆ ಬರೋಬ್ಬರಿ 5 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ದಕ್ಷಿಣದ ನಟಿಯರು ಇಷ್ಟು ಬೇಗ ಯಾರೂ ಪಡೆದಿಲ್ಲ ಎನ್ನುವುದು ಮತ್ತೊಂದು ದಾಖಲೆ. ಅತೀ ಹೆಚ್ಚು ಸಂಭಾವನೆ ಮತ್ತು ಹೆಚ್ಚು ಸಿನಿಮಾಗಳನ್ನು ನಟಿಸುತ್ತಿರುವ ಪಟ್ಟಿಯಲ್ಲೂ ರಶ್ಮಿಕಾಗೆ ಮೊದಲ ಸ್ಥಾನ ಸಿಕ್ಕಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ ಅವರು ಆರು ಸಿನಿಮಾಗಳಲ್ಲಿ ಸದ್ಯ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮಗುವಿನೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಪ್ರಣಿತಾ ಸುಭಾಷ್ ಭೇಟಿ

    ಪೂಜಾ ಹೆಗಡೆ ಈವರೆಗೂ 3.50 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಏಕಾಏಕಿ ರಶ್ಮಿಕಾ ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳುವ ಮೂಲಕ ಪೂಜಾರನ್ನು ಹಿಂದಿಕ್ಕಿದ್ದಾರೆ. ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವ ಮೂಲಕ ಇತರ ನಾಯಕಿಯರನ್ನು ಅಚ್ಚರಿಗೆ ದೂಡಿದ್ದಾರೆ. ಪುಷ್ಪಾ ಯಶಸ್ಸಿನ ನಂತರ ರಶ್ಮಿಕಾ ಸಂಭಾವನೆ ಎರಡ್ಮೂರು ಬಾರಿ ಏರಿಕೆಯಾಗಿದೆ ಎನ್ನಲಾಗುತ್ತಿದೆ.

    Live Tv

  • ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ನ್ನಡತಿ, ದಕ್ಷಿಣದ ಖ್ಯಾತ ಸ್ಟಾರ್ ನಟಿ ಪೂಜಾ ಹೆಗಡೆ ಸಾಲು ಸಾಲು ಸಿನಿಮಾಗಳ ಸೋಲಿನಿಂದಾಗಿ ಕಂಗೆಟ್ಟಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ಸ್ಟಾರ್ ನಟರ ಜತೆಯೇ ತೆರೆ ಹಂಚಿಕೊಂಡಿದ್ದರೂ, ಚಿತ್ರಗಳ ಸೋಲಿನಿಂದಾಗಿಯೇ ಪೂಜಾ ನೊಂದುಕೊಂಡಿದ್ದಾರೆ. ಆದರೂ, ತಮಗೆ ಸಿಗುತ್ತಿರುವ ಅವಕಾಶಗಳಿಗೇನೂ ಕಡಿಮೆ ಇಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಪ್ರಭಾಸ್ ಜೊತೆ ನಟಿಸಿದ್ದ ‘ರಾಧೆ ಶ್ಯಾಮ್’ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲಿಲ್ಲ. ಚಿತ್ರಕ್ಕೆ ಒಂದೊಳ್ಳೆ ವಿಮರ್ಶೆ ಕೂಡ ಬರಲಿಲ್ಲ. ಪ್ರಭಾಸ್ ಮತ್ತು ಪೂಜಾ ಹಿಟ್ ಜೋಡಿ ಆಗುವ ಕನಸನ್ನು ನುಚ್ಚು ನೂರು ಮಾಡಿತು ರಾಧೆ ಶ್ಯಾಮ್ ಸಿನಿಮಾ. ನಂತರ ಬಂದ ವಿಜಯ್ ಜತೆಗಿನ ಬಿಸ್ಟ್ ಕೂಡ ಪೂಜಾರನ್ನು ಕೈ ಹಿಡಿಯಲಿಲ್ಲ. ಓಪನಿಂಗ್ ಚೆನ್ನಾಗಿಯೇ ತಗೆದುಕೊಂಡರೂ, ನಂತರ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸೋಲುಂಡಿತು. ಮೊನ್ನೆಯಷ್ಟೇ ರಿಲೀಸ್ ಆಗಿರುವ ಆಚಾರ್ಯ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಇದೇ ವರ್ಷದಲ್ಲೇ ತೆರೆಕಂಡ ಈ ಮೂರು ಸಿನಿಮಾಗಳು ಭಾರೀ ಬಜೆಟ್ ಚಿತ್ರಗಳಾಗಿದ್ದವು. ಇದ್ದವರೆಲ್ಲ ಸೂಪರ್ ಸ್ಟಾರ್ ಗಳು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರಗಳನ್ನು ರಿಲೀಸ್ ಮಾಡಲಾಗಿತ್ತು. ಆದರೂ, ಪೂಜಾ ಅವರ ಅದೃಷ್ಟವನ್ನು ಈ ಸಿನಿಮಾಗಳು ಬದಲಿಸಲಿಲ್ಲ. ಹೀಗೆಲ್ಲ ಆದರೂ, ಅವರಿಗೆ ಅವಕಾಶಗಳಿಗೇನೂ ಕೊರತೆ ಆಗಿಲ್ಲವಂತೆ. ಬಾಲಿವುಡ್ ನಿಂದಲೂ ಆಫರ್ ಬರುತ್ತಿದ್ದು, ಪಾತ್ರಗಳಿಗೆ ಗಟ್ಟಿತನವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಪೂಜಾ.

  • ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.

  • ಅಭಿಮಾನಿಯನ್ನೇ ಬಲಿ ತೆಗೆದುಕೊಂಡ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ

    ಅಭಿಮಾನಿಯನ್ನೇ ಬಲಿ ತೆಗೆದುಕೊಂಡ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ

    ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ‘ರಾಧೆ ಶ್ಯಾಮ್’ ಸಿನಿಮಾದ ನೆಗೆಟಿವ್ ವಿಮರ್ಶೆ ಮತ್ತು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ಈ ಅಭಿಮಾನಿಗೆ ಸಿನಿಮಾ ರುಚಿಸಲಿಲ್ಲ ಎನ್ನುವ ಕಾರಣಕ್ಕಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗುತ್ತಿದೆ. ಹಾಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ಧಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಕರ್ನೂಲಿನ ತಿಲಕ್ ನಗರದ 24ರ ವಯಸ್ಸಿನ ಹಾರ್ಡ್ ಕೋರ್ ಅಭಿಮಾನಿ ರವಿತೇಜ, ಬಹುತೇಕ ಪ್ರಭಾಸ್ ನಟನೆಯ ಚಿತ್ರಗಳನ್ನು ನೋಡಿಕೊಂಡು ಬೆಳೆದವನು.  ಮನೆತುಂಬಾ ಪ್ರಭಾಸ್ ಚಿತ್ರಗಳನ್ನೇ ಇಟ್ಟುಕೊಂಡವನು. ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಯ ಮುಂಚೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ. ಈ ಅತೀವ ನಿರೀಕ್ಷೆಯೇ ಅವನನ್ನು ಬಲಿ ತಗೆದುಕೊಂಡಿದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಪ್ರಭಾಸ್ ಅಭಿಮಾನಿಗಳು ಇಂತಹ ಹುಚ್ಚಾಟಗಳನ್ನು ಮಾಡುವುದು ಇದೇ ಮೊದಲೇನೂ ಅಲ್ಲ. ರಾಧೆ ಶ್ಯಾಮ್ ಟೀಸರ್ ಬಿಡುಗಡೆ ಬಿಳಂಬವಾದಾಗಲೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿದ್ದರು. ಬೇಗ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ನಾನಾ ರೀತಿಯಲ್ಲಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಪ್ರಭಾಸ್ ಮತ್ತು ಪೂಜಾ ಹೆಗಡೆ ಕಾಂಬಿನೇಷನ್ ನ ರಾಧೆ ಶ್ಯಾಮ್ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಅಷ್ಟೇನೂ ಕಮಾಯಿ ಮಾಡಲಿಲ್ಲ. ತಮಿಳು ಸಿನಿಮಾವೊಂದರ ಕಥೆಯನ್ನೇ ಈ ಸಿನಿಮಾ ಹೋಲುತ್ತಿದೆ ಎನ್ನುವ ಮಾತೂ ಕೇಳಿ ಬಂದಿತ್ತು.

  • ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಮಿಳಿನಲ್ಲಿ ನಂಬರ್ ಒನ್ ನಟಿ ಸ್ಥಾನಕ್ಕೆ ಇಬ್ಬರು ನಾಯಕಿಯರ ಪೈಪೋಟಿ ನಡೆದಿದೆ. ಇಬ್ಬರೂ ಕನ್ನಡದ ಮೂಲದವರು ಎನ್ನುವುದು ವಿಶೇಷ. ಕಳೆದ ವರ್ಷ ಈ ಇಬ್ಬರೂ ನಟಿಯರ ಸಿನಿಮಾಗಳು ಸಮಗತಿಯಲ್ಲಿ ಸಾಗಿದ್ದವು. ತಲಾ ಐದೈದು ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆಗೆ ಇವರು ಪಾತ್ರರಾದರು. ಒಂದೇ ಸಮಯದಲ್ಲೇ ಇಬ್ಬರೂ ಸಂಭಾವನೆಯನ್ನೂ ಹೆಚ್ಚಿಸಿಕೊಂಡರು. ಬಾಲಿವುಡ್ ಗೂ ಹೋಗಿ ಬಂದರು. ಹೀಗಾಗಿ ಇಬ್ಬರ ಮಧ್ಯ ಭಾರೀ ಪೈಪೋಟಿ ಎದುರಾಗಿದೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಅಂದುಕೊಂಡಂತೆ ಆಗಿದ್ದರೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ  (‘ದಳಪತಿ 66’) ಪೂಜಾ ಹೆಗ್ಡೆ ನಾಯಕಿ ಎನ್ನಲಾಗಿತ್ತು. ಈ ಮಧ್ಯೆ ಕಿಯಾರಾ ಹೆಸರು ಕೇಳಿ ಬಂದಿತ್ತು. ಪೂಜಾ ಅಥವಾ ಕಿಯಾರಾ ಅವರೇ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎಂದು ತಮಿಳು ಚಿತ್ರರಂಗ ಹೇಳಿತ್ತು. ಆದರೆ, ಇದೀಗ ಚಿತ್ರಣವೇ ಬದಲಾಗಿದೆ. ಈ ಇಬ್ಬರೂ ನಾಯಕಿಯರು ಅವಕಾಶವಂಚಿತರಾಗಿ ಅವರ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!

    ಈವರೆಗೂ ತಮಿಳಿನ ಸ್ಟಾರ್ ಗಳ ಜತೆಯೇ ಹೆಚ್ಚಾಗಿ ನಟಿಸಿರುವ ರಶ್ಮಿಕಾ, ಈವರೆಗೂ ದಳಪತಿ ವಿಜಯ್ ಅವರ ಜತೆ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ತಮಿಳಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ನಾಯಕಿಯ ಆಯ್ಕೆಯನ್ನು ಇನ್ನಷ್ಟ ಅಧಿಕೃತಗೊಳಿಸಬೇಕಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಈಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕಾ, ಇದೀಗ ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ವೊಂದನ್ನು ಶುರು ಮಾಡಿದ್ದಾರೆ. ಮೊದಲ ದಿನವೇ ತಮ್ಮ ‘ಎಕ್ಸ್’ಗಳ ಬಗ್ಗೆ ಏನೂ ಕೇಳಬೇಡಿ ಎಂದು ವಾರ್ನ್ ಕೂಡ ಮಾಡಿದ್ದಾರೆ.

  • ನಾಗಚೈತನ್ಯ ಜೊತೆ ರೊಮ್ಯಾನ್ಸ್ ಮಾಡೋ ಚಾನ್ಸ್ ಮಿಸ್ ಮಾಡ್ಕೊಂಡ್ರಾ ರಶ್ಮಿಕಾ?

    ನಾಗಚೈತನ್ಯ ಜೊತೆ ರೊಮ್ಯಾನ್ಸ್ ಮಾಡೋ ಚಾನ್ಸ್ ಮಿಸ್ ಮಾಡ್ಕೊಂಡ್ರಾ ರಶ್ಮಿಕಾ?

    ಬೆಂಗಳೂರು: ಹಿಟ್ ಸಿನಿಮಾ ಗೀತಾ ಗೋವಿಂದಂ ನಂತರ ನಿರ್ದೇಶಕ ಪರಶುರಾಮ್ ಇದೀಗ ನಾಗಚೈತನ್ಯ ಜೊತೆ ಸಿನಿಮಾ ಮಾಡುತ್ತಿದ್ದು, ಇದು ಕಾಮಿಡಿ ಹಾಗೂ ಮನರಂಜನೆಯಾಧರಿತ ಚಿತ್ರವಾಗಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಕುರಿತು ತೀವ್ರ ಕುತೂಹಲ ಮೂಡಿದ್ದು, ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗಡೆ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.

    ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಯಕ ನಟಿಯರ ಆಯ್ಕೆ ಕುರಿತು ನಿರ್ದೇಶಕ ಪರಶುರಾಮ್ ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದು, ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಗೀತಾ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಅವರ ಪರ್ಫಾರ್ಮೆನ್ಸ್ ನೋಡಿ, ಇವರನ್ನೇ ಆಯ್ಕೆ ಮಾಡಬೇಕೆಂದು ನಿರ್ದೇಶಕರು ಅಂದುಕೊಂಡಿದ್ದರು. ಅಲ್ಲದೆ ರಶ್ಮಿಕಾ ಅಭಿನಯದ ಹಲವು ಚಿತ್ರಗಳು ಯಶಸ್ಸು ಕಂಡಿದ್ದರಿಂದ ಕಿರಿಕ್ ಬೆಡಗಿಯನ್ನೇ ನಾಗಚೈತನ್ಯ ಜೋಡಿಯಾಗಿಸಲು ಮುಂದಾಗಿದ್ದರು. ಆದರೆ ಇದಕ್ಕೆ ವಿಘ್ನ ಎದುರಾಗಿದೆ.

    ಒಂದೆಡೆ ನಿರ್ದೇಶಕರು ರಶ್ಮಿಕಾ ಕಡೆ ಮನಸ್ಸು ಮಾಡಿದರೆ, ನಿರ್ಮಾಪಕರು ಪೂಜಾ ಹೆಗಡೆ ಕುರಿತು ಒಲವು ತೋರಸಿದ್ದಾರಂತೆ. ಹೀಗಾಗಿ ನಾಯಕಿಯರ ಆಯ್ಕೆ ಕಗ್ಗಂಟಾಗಿದೆ. ಅಲ್ಲದೆ ನಿರ್ಮಾಪಕರ ಈ ಹಿಂದಿನ ಚಿತ್ರದ ಸಂದರ್ಭದಲ್ಲಿ ಪೂಜಾ ಫ್ಯಾನ್ಸಿ ಅಡ್ವಾನ್ಸ್ ಪಡೆದಿದ್ದಾರೆಂತೆ. ಹೀಗಾಗಿ ಪೂಜಾ ಹೆಗಡೆ ಕುರಿತು ನಿರ್ಮಾಪಕರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಚಿತ್ರವನ್ನು 14 ರೀಲ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರ ನಿರ್ಮಿಸುತ್ತಿದೆ.

    ಈ ಹಿಂದೆ ‘ಒಕ ಲೈಲಾ ಕೋಸಂ’ ಚಿತ್ರದಲ್ಲಿ ಸಹ ನಾಗಚೈತನ್ಯ ಹಾಗೂ ಪೂಜಾ ಹೆಗಡೆ ಜೋಡಿ ಒಂದಾಗಿತ್ತು. ಆದರೆ ಬಾಕ್ಸ್ ಆಫೀಸಿನಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ. ಪ್ರಸ್ತುತ ನಾಗಚೈತನ್ಯರ ತಮ್ಮ ಅಖಿಲ್ ಅವರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.

    ನಾಗಚೈತನ್ಯ ಅವರ ಸಿನಿಮಾಗೂ ಪೂಜಾ ಹೆಗಡೆಯವರೇ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಈಗಾಗಲೇ ರಶ್ಮಿಕಾ ಅವರಿಗೆ ಹೆಚ್ಚು ಆಫರ್‍ಗಳು ಬರುತ್ತಿದ್ದು, ಭೀಷ್ಮ ಸಕ್ಸಸ್ ನಂತರ ಹಲವು ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ.

    ಪ್ರಸ್ತುತ ರಶ್ಮಿಕಾ ಮಂದಣ್ಣ ತಮಿಳು ನಟ ಕಾರ್ತಿಯವರ ‘ಸುಲ್ತಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ತೆಲುಗಿಗೂ ಡಬ್ ಆಗುತ್ತಿದೆ. ಅಲ್ಲದೆ ಬಹುದಿನಗಳ ಗ್ಯಾಪ್ ನಂತರ ಇದೀಗ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದು, ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.