ಜೈಪುರ: ತನ್ನೆದುರೇ ಜೋಡಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಯಿಸಿದ ಪೂಜಾರಿಯೊಬ್ಬ (Pujari) ಜೋಡಿ ಲೈಂಗಿಕ ಕ್ರಿಯಲ್ಲಿರುವಾಗಲೇ ಅವರ ಮೇಲೆ ಫಾಸ್ಟ್ ಗಂ (Superglue) ಸುರಿದು ಕೊಂದಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ. ಜೋಡಿ ಹತ್ಯೆಯಾದ 3 ದಿನಗಳ ಬಳಿಕ ಅವರಿಬ್ಬರ ಬೆತ್ತಲಾದ ಶವಗಳು ಅರಣ್ಯದಲ್ಲಿ ಪತ್ತೆಯಾಗಿದೆ.
ನವೆಂಬರ್ 18ರಂದು ಉದಯಪುರದ ಕೆಲಬಾವಾಡಿಯ ಅರಣ್ಯ ಪ್ರದೇಶದಲ್ಲಿ ಜೋಡಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮರ್ಯಾದಾ ಹತ್ಯೆಯೆಂದು ಶಂಕಿಸಲಾಗಿತ್ತು. ಬಳಿಕ ಅವರಿಬ್ಬರನ್ನೂ ಕೊಂದಿರುವ ಆರೋಪದ ಮೇಲೆ ಪೂಜಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.
ಮೃತರನ್ನು ಶಿಕ್ಷಕ ರಾಹುಲ್ ಮೀನಾ (30) ಮತ್ತು ಸೋನು ಕುನ್ವರ್ (28) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ರಾಹುಲ್ ಮತ್ತು ಸೋನು ಇಬ್ಬರೂ ಪ್ರತ್ಯೇಕ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಆದರೂ ಇವರಿಬ್ಬರು ಸಂಬಂಧ ಹೊಂದಿದ್ದು, ನಗರದ ಇಚ್ಚಪೂರ್ಣ ಶೇಷನಾಗ್ ಭಾವಜಿ ಮಂದಿರದಲ್ಲಿ ಆಗಾಗ ಭೇಟಿಯಾಗುತ್ತಿದ್ದರು.
ರಾಹುಲ್ ಸೋನು ಜೊತೆ ಸಂಬಂಧ ಹೊಂದುತ್ತಲೇ ತನ್ನ ಪತ್ನಿಯೊಂದಿಗೆ ಆಗಾಗ ಜಗಳವಾಡಲು ಪ್ರಾರಂಭಿಸಿದ್ದ. ಈ ವೇಳೆ ಆಕೆ ಭಲೇಶ್ ಕುಮಾರ್ (55) ಹೆಸರಿನ ಪೂಜಾರಿಯ ಸಹಾಯವನ್ನು ಕೋರಿದ್ದಾಳೆ. ಭಲೇಶ್ ನಗರದಲ್ಲಿ 7-8 ವರ್ಷಗಳಿಂದ ವಾಸವಿದ್ದು, ಜನರಿಗೆ ತಾಯತ ತಯಾರಿಸುತ್ತಿದ್ದ. ಆತನಿಗೆ ಸೋನುವಿನ ಪರಿಚಯವೂ ಇದ್ದು, ಆಕೆಗೆ ರಾಹುಲ್‌ನೊಂದಿಗೆ ಸಂಬಂಧವಿದ್ದ ವಿಚಾರವೂ ತಿಳಿದಿತ್ತು.
ಪೂಜಾರಿ ತನ್ನ ಹಾಗೂ ಸೋನು ಜೊತೆಗಿನ ಸಂಬಂಧವನ್ನು ತನ್ನ ಪತ್ನಿಗೆ ಹೇಳಿದ್ದಾನೆ ಎಂದು ತಿಳಿದ ರಾಹುಲ್, ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ, ಮಾನಹಾನಿ ಮಾಡುವುದಾಗಿ ಭಲೇಶ್‌ಗೆ ಬೆದರಿಕೆ ಹಾಕಿದ್ದಾನೆ. ಇಲ್ಲಿಯವರೆಗೆ ತಾನು ಗಳಿಸಿದ್ದ ಕೀರ್ತಿ ಈ ಸುಳ್ಳು ಆರೋಪದಿಂದ ಹಾಳಾಗಬಾರದೆಂಬ ಕಾರಣಕ್ಕೆ ಭಲೇಶ್ ರಾಹುಲ್ ಹಾಗೂ ಸೋನು ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಎಲ್ಲರ ಮುಂದೆ ತೋರಿಸಲು ಹಾಗೂ ತನ್ನ ಸೇಡನ್ನು ತೀರಿಸಲು ಕ್ರಿಮಿನಲ್ ಪ್ಲಾನ್ ಮಾಡಿದ್ದ.
ಭಲೇಶ್ ಸುಮಾರು 50 ಟ್ಯೂಬ್ ಫಾಸ್ಟ್ ಗಂ ಖರೀದಿಸಿ, ಅದನ್ನು ಬಾಟಲಿಗೆ ಸುರಿದು ಇಟ್ಟುಕೊಂಡಿದ್ದ. ನವೆಂಬರ್ 15ರಂದು ಸಂಜೆ ರಾಹುಲ್ ಹಾಗೂ ಸೋನು ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ, ಏಕಾಂತದಲ್ಲಿರುವಾಗ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿದ್ದಾಗ ಅವರ ಮೇಲೆ ಫಾಸ್ಟ್ ಗಂ ಅನ್ನು ಸುರಿದಿದ್ದಾನೆ. ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಎಲ್ಲರೆದುರು ಕಂಡುಬಂದರೆ ತಾನು ತಪ್ಪಿಸಿಕೊಳ್ಳಬಹುದು ಎಂಬುದು ಭಲೇಶ್‌ನ ಉದ್ದೇಶವಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ
ಪೂಜಾರಿ ರಾಹುಲ್ ಹಾಗೂ ಸೋನು ಮೇಲೆ ಫಾಸ್ಟ್ ಗಂ ಸುರಿದಾಗ ಇಬ್ಬರೂ ಸ್ವಲ್ಪ ಸಮಯ ಅಂಟಿಕೊಂಡಿದ್ದರು. ಬಳಿಕ ಇಬ್ಬರೂ ತಮ್ಮನ್ನು ತಾವು ಬೇರ್ಪಡಿಸಲು ಪ್ರಯತ್ನಿಸಿದ್ದು, ಅವರಿಬ್ಬರ ಚರ್ಮಗಳು ಕಿತ್ತು ಬರಲು ಪ್ರಾರಂಭಿಸಿವೆ. ಇಬ್ಬರೂ ಬೇರ್ಪಡುವುದನ್ನು ಕಂಡು ಪೂಜಾರಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ರಾಹುಲ್‌ನ ಕತ್ತು ಸೀಳಿ, ಸೋನುಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾನೆ. ಕೃತ್ಯ ಎಸಗಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಪೊಲೀಸರು 3 ದಿನಗಳ ಬಳಿಕ ಇಬ್ಬರ ಶವಗಳನ್ನು ಪತ್ತೆಹಚ್ಚಿದ್ದಾರೆ. ಸುತ್ತ ಮುತ್ತಲಿನ ಪ್ರದೇಶದ ಸುಮಾರು 50 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, 200 ಜನರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ದೊರೆತ ಸಾಕ್ಷಿಗಳ ಆಧಾರದ ಮೇಲೆ ಜೋಡಿಯ ಸಾವಿನ ಹಿಂದೆ ಭಲೇಶ್ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ವಶಕ್ಕೆ ಪಡೆಸು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ
Live Tv
[brid partner=56869869 player=32851 video=960834 autoplay=true]
ಚೆನ್ನೈ: ಮಾಟಕ್ಕೆ ಒಳಗಾಗಿದ್ದಾಳೆ ಎಂದು ಶಂಕಿಸಲಾದ ಮಹಿಳೆಯರಿಗೆ ಪೂಜಾರಿಯೊಬ್ಬರು ಚಾಟಿಯಿಂದ ಹೊಡೆಯುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಜಿಲ್ಲೆಯ ರಾಸಿಪುರಂ ಬಳಿಯ ನರೈಕಿನಾರ್ ಗ್ರಾಮದಲ್ಲಿ ನಡೆಸಲಾದ ಈ ಧಾರ್ಮಿಕ ಆಚರಣೆಯಲ್ಲಿ, ಪೂಜಾರಿ ಕಾಟೇರಿ (ಕೆಟ್ಟದ್ದನ್ನು ದೂರವಿಡಲು ಗ್ರಾಮಸ್ಥರು ಪ್ರಾರ್ಥಿಸುವ ದೇವತೆಯ ರೂಪ) ವೇಷಭೂಷಣವನ್ನು ಧರಿಸಿ ಹಲವಾರು ಮಹಿಳೆಯರಿಗೆ ಚಾಟಿಯಿಂದ ಹೊಡೆಯುತ್ತಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ
ವೀಡಿಯೋದಲ್ಲಿ, ಕಪ್ಪು ವಸ್ತ್ರವನ್ನು ಧರಿಸಿರುವ ಪೂಜಾರಿ ಚಾಟಿಯನ್ನು ಹಿಡಿದು ಮಾಟ ಮಂತ್ರಕ್ಕೆ ಒಳಗಾಗಿರುವ ಮಹಿಳೆಯರಿಗೆ ಹೊಡೆಯುವುದನ್ನು ಕಾಣಬಹುದು. ಪೂಜಾರಿ ಮಹಿಳೆಯರಿಗೆ ಹೊಡೆಯಲು ಹೊರಟಾಗ ಅದನ್ನು ನೋಡುತ್ತಿರುವ ಸ್ಥಳೀಯ ಜನರು ಉತ್ಸಾಹದಿಂದ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.
ಈ ಕಾರ್ಯಕ್ರಮವನ್ನು ಕುತೂಹಲದಿಂದ ನೋಡುತ್ತಿದ್ದ ಜನಸಮೂಹವು ತಮಿಳು ಭಾಷೆಯಲ್ಲಿ ಪೋಡು.. ಪೋಡು.. (ಥಳಿಸು.. ಥಳಿಸು..) ಎಂದು ಕೂಗುತ್ತಿರುತ್ತಾರೆ. ನಂತರ ಪೂಜಾರಿ ತನ್ನ ಚಾಟಿ ಎತ್ತಲು ಪ್ರಾರಂಭಿಸುತ್ತಾರೆ. ಈ ವೇಳೆ ಮಹಿಳೆ ಗೌರವದಿಂದ ತನ್ನ ಎರಡು ಕೈಗಳನ್ನು ಮಡಚಿ ನಮಸ್ಕರಿಸುತ್ತಾರೆ. ಮಡಚಿದ ಕೈಗಳನ್ನು ಮೇಲಕ್ಕೆತ್ತಿದ ನಂತರ ಪೂಜಾರಿ ಅವರನ್ನು ಚಾಟಿಯಿಂದ ಹೊಡೆಯಲು ಮುಂದಾಗುತ್ತಾರೆ.
ಈ ಒಂದು ವಿಚಿತ್ರ ಆಚರಣೆಯನ್ನು ನೋಡಲು ಅಕ್ಕಪಕ್ಕದ 18 ಗ್ರಾಮಗಳ ಜನರು ಪಾಲ್ಗೊಂಡಿದ್ದರು. 20 ವರ್ಷಗಳ ನಂತರ ನಡೆದ ಕಾರಣ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಈ ಆಚರಣೆ ನಡೆದಿರಲಿಲ್ಲ.
ನಾಮಕ್ಕಲ್ ಜಿಲ್ಲೆಯ ವರದರಾಜಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೇವಸ್ಥಾನದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುತ್ತವೆ. ಇದು ಏಪ್ರಿಲ್ 29 ರಂದು ಪ್ರಾರಂಭವಾಗಿದ್ದು, ಮೇ 30 ರಂದು ಕೊನೆಗೊಳ್ಳಲಿದೆ.
ಚಾಮರಾಜನಗರ: ಜಾತ್ರೆ ಅಂದರೆ ಅಲ್ಲಿ ದೇವರಿಗೆ ನೈವೇದ್ಯ, ಜನಸ್ತೋಮ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಎಂಬ ಕಲ್ಪನೆ ಮೂಡುತ್ತದೆ. ಆದರೆ ಗಡಿ ಜಿಲ್ಲೆಯ ಊರೊಂದರಲ್ಲಿ ನಡೆಯುವ ಜಾತ್ರೆ ವಿಚಿತ್ರ. ಅದು ವಿಜ್ಞಾನಕ್ಕೂ ಸವಾಲು ಎಸೆಯುವಂತಿದೆ.
ಹೌದು ಚಾಮರಾಜನಗರ ತಾಲೂಕು ತೆಳ್ಳನೂರು ಗ್ರಾಮದ ಉರುಕಾತಮ್ಮ ಜಾತ್ರೆ ಹಲವು ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಪೂಜಾರಿ ಮೈಮೇಲೆ ಕೆಂಡ ಸುರಿಯಲಾಗುತ್ತದೆ. ಸುಮಾರು ನೂರು ವರ್ಷಗಳಿಂದಲೂ ಈ ಆಚರಣೆ ಊರಲ್ಲಿ ಚಾಲ್ತಿಯಲ್ಲಿದೆ. ಕೊಂಡೋತ್ಸವದ ದಿನ ಬೆಳಗ್ಗೆಯೇ ಬೃಹತ್ ಗಾತ್ರದ ಸೌದೆಗಳನ್ನು ಒಟ್ಟುಗೂಡಿಸಿ ಸುಡಲಾಗುತ್ತದೆ. ಸಂಜೆ ಆರು ಗಂಟೆಗೆ ಪ್ರಾರಂಭವಾಗುವ ಕೊಂಡೋತ್ಸವದಲ್ಲಿ ಪೂಜಾರಿ ಮೈಮೇಲೆ ಸುಡುವ ಕೆಂಡ ಸುರಿಯಲಾಗುತ್ತದೆ. ಇದನ್ನೂ ಓದಿ:ಉಡುಪಿಯಲ್ಲಿ ಜೆಸಿಬಿ ಘರ್ಜನೆ – SDPI ಜಿಲ್ಲಾಧ್ಯಕ್ಷನ ಹೋಟೆಲ್ ತೆರವು
ಈ ಗ್ರಾಮ ದೇವತೆ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಈ ಊರಲ್ಲಿ ಹಾವು ಕಚ್ಚಿ ಸಾವನ್ನಪ್ಪಿರುವ ಉದಾಹರಣೆ ಇಲ್ಲ. ಎಂತಹದೇ ವಿಷ ಸರ್ಪ ಕಚ್ಚಿದರೂ ಎಷ್ಟೇ ದೂರವಿದ್ದರೂ ಸರಿ ತೆಳ್ಳನೂರಿನ ಉರುಕಾತಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ವ್ಯಕ್ತಿ ಬದುಕುಳಿಯುತ್ತಾನೆ ಎಂಬ ಪ್ರತೀತಿ ಇದೆ.
ಹಾಸನ: ಅನಾರೋಗ್ಯ ಪೀಡಿತ ಮಹಿಳೆಯನ್ನು ಗುಣಪಡಿಸುವ ನೆಪದಲ್ಲಿ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ, ಮಹಿಳೆ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪಾರ್ವತಿ (47) ಮೃತಪಟ್ಟ ಮಹಿಳೆ. ಕಳೆದ ಕೆಲದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಪೂಜಾರಿ ತಿಳಿಸಿದ್ದಾರೆ. ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಹೇಳಿ ಮಹಿಳೆ ತಲೆಗೆ ಪೂಜಾರಿ ಬೆತ್ತದಿಂದ ಹೊಡೆದಿದ್ದಾರೆ. ಇದನ್ನೂ ಓದಿ: ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ
ಹಿರಿಯಾಪಟ್ಟಣದಮ್ಮ ದೇವರ ಪೂಜಾರಿಯು ಬೆತ್ತದಿಂದ ತಲೆಗೆ ಹೊಡೆದ ಪರಿಣಾಮ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಆಕೆ ಚಿಕಿತ್ಸೆ ಫಲಕಾರಿಯಾಗದೇ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಾಮರಾಜನಗರ: ಪೂಜೆ ಮಾಡಿಕೊಂಡು ಹೋಗಪ್ಪ ಎಂದು ಗ್ರಾಮಸ್ಥರು ಪೂಜಾರಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಪೂಜಾರಿ ದೇವಸ್ಥಾನವೇ ತನ್ನದೆಂದು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ನಡೆದಿದೆ.
ಪೂಜಾರಿ ದೊಡ್ಡಯ್ಯ ಎಂಬವರು ಪ್ರತಿದಿನ ಗ್ರಾಮದ ದೊಡ್ಡಯ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಇದೀಗ ಪೂಜೆ ಮಾಡುವ ದೇವಸ್ಥಾನವನ್ನೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ತನ್ನ ಹೆಸರಿಗೆ ಸ್ವತ್ತು ನೀಡುವಂತೆ ಗ್ರಾಮಪಂಚಾಯತ್‍ಗೆ ಅರ್ಜಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮಾಡಿದ್ದಾರೆ. ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ
ದೊಡ್ಡಯ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಹೋಗುವಂತೆ ತಹಶೀಲ್ದಾರ್ ಕೆಲವರ್ಷಗಳ ಹಿಂದೆ ಸೂಚಿಸಿದ್ದರು. ಹಾಗಾಗಿ ಅಲ್ಲಿ ಪೂಜೆ ಮಾಡಿಕೊಂಡಿದ್ದ ದೊಡ್ಡಯ್ಯ ಈಗ ದೇವಸ್ಥಾನ ತನ್ನ ಆಸ್ತಿ ಎನ್ನುತ್ತಿದ್ದು, ದೇವಸ್ಥಾನ ಸಾರ್ವಜನಿಕ ಸ್ವತ್ತಾಗಿದ್ದು ಇದನ್ನು ಟ್ರಸ್ಟ್ ಗೆ ವಹಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ
ದಾಸರಹಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ಮುಚ್ಚಿದ್ದ ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಇಂದಿನಿಂದ ದೇವಾಲಯಗಳನ್ನು ತರೆಯಲಾಗಿದ್ದು, ದೇವಾಸ್ಥಾನವೊಂದರಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪ್ರತ್ಯಕ್ಷವಾಗಿದೆ.
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿರುವ ರಾಜಮಾತ ಉಚ್ಛಂಗಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅಚ್ಚರಿಯೇ ಕಾದಿದ್ದು, ದೇವರ ಗರ್ಭಗುಡಿಯ ಮೇಲೆ ಅಚ್ಚರಿ ರೂಪದಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ದರ್ಶನವನ್ನು ನೀಡಿದೆ.
ಶುಭ ಸಂಕೇತವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆಗೆ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಪೂಜೆಯನ್ನು ಸಲ್ಲಿಸಿದರೂ ಕೂಡ ಬಿಳಿ ಗೂಬೆ ದೇವಸ್ಥಾನವನ್ನು ಬಿಟ್ಟು ತೆರಳಲಿಲ್ಲ. ಸದ್ಯ ದೇವಸ್ಥಾನದ ವತಿಯಿಂದ ಬೇಕಾದ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ ಹಾಗೂ ದೇವಾಲಯಕ್ಕೆ ಬಂದಂತಹ ಭಕ್ತಾದಿಗಳಿಗೆ ಮಂಗಳಾರತಿ ಮಾತ್ರ ನೀಡಲಾಗುತ್ತಿದೆ. ಅಲ್ಲದೇ ದೇವಸ್ಥಾನದಲ್ಲಿ ಯಾವುದೇ ವಿಶೇಷ ಪೂಜೆಯನ್ನು ಹಾಗೂ ದೇವರ ಪ್ರಸಾದವನ್ನು ಕೂಡ ನೀಡಲಾಗುತ್ತಿಲ್ಲ. ದೇವಸ್ಥಾನಕ್ಕೆ ನಿಧಾನವಾಗಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ
ಚಿಕ್ಕೋಡಿ: ಕಣ್ಣು ಬಿಟ್ಟಿದ್ದ ದೇವಿ ವಿಗ್ರಹದ ಕಣ್ಣನ್ನು ಪೂಜಾರಿ ಕೈಯಿಂದಲೇ ತಹಶೀಲ್ದಾರ್ ತೆಗೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.
ದೇವಸ್ಥಾನದಲ್ಲಿನ ದೇವಿಯ ವಿಗ್ರಹ ಕಣ್ಣು ಬಿಟ್ಟಿದೆ. ಇದು ಕೊರೊನಾ ಪ್ರಪಂಚದಿಂದ ತೊಲಗುವ ಸಂದೇಶ ಎಂದು ಆ ಊರಿನ ಜನ ಗುಲ್ಲೆಬ್ಬಿಸಿದ್ದರು. ಊರಿನ ಜನ ಅಷ್ಟೇ ಅಲ್ಲದೇ ಪರ ಊರಿನ ಜನರೂ ಸಹ ದೇವಿ ಕಣ್ಬಿಟ್ಟಿದ್ದಾಳೆ ಎಂದು ದೇವಾಲಯಕ್ಕೆ ಬಂದು ಕಾಯಿ ಕರ್ಪೂರ ನೀಡಿ ದೇವಿಗೆ ಸೇವೆ ಸೇವೆ ಸಲ್ಲಿಸಿದ್ದರು. ಆದರೆ ದೇವಿ ಕಣ್ಣು ಬಿಟ್ಟಿದ್ದ ಹಿಂದಿನ ರಹಸ್ಯವನ್ನು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಬೇಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಕೆಲ ದಿನಗಳ ಹಿಂದೆ ಕಣ್ಣು ಬಿಟ್ಟಿದ್ದಳು. ಅದನ್ನ ನೋಡುವುದಕ್ಕೆಂದು ಅಲ್ಲಿ ಭಕ್ತ ಸಾಗರವೇ ಹರಿದು ಬರತೊಡಗಿತ್ತು. ಕೆಲವರಂತೂ ಇದು ಕೊರೊನಾ ಪ್ರಪಂಚವನ್ನು ಬಿಟ್ಟು ಹೊರಡುವ ಶುಭ ಸುದ್ದಿ ಎಂದೇ ಬಣ್ಣಿಸಿದ್ದರು.
ದೇವಿ ಕಣ್ಣು ಬಿಟ್ಟಿರುವ ಹಾಗೂ ಅಲ್ಲಿಗೆ ದಿನಂ ಪ್ರತಿ ಭಕ್ತರು ಭೇಟಿ ನೀಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಕಡೆಗೆ ಈ ಸುದ್ದಿ ಕಾಗವಾಡ ತಹಶೀಲ್ದಾರ್ ಪ್ರಮಿಳಾ ದೇಶಪಾಂಡೆಯವರ ಗಮನಕ್ಕೆ ಬಂದಿದೆ. ದೇವಿ ಹೇಗೆ ಕಣ್ಣು ಬಿಟ್ಟಿದ್ದಾಳೆ? ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದನ್ನ ಪರಿಶೀಲಿಸಲು ಅಲ್ಲಿಗೆ ಕಾಗವಾಡ ತಹಶೀಲ್ದಾರ್ ತಮ್ಮ ಸಿಬ್ಬಂದಿಯ ಜತೆ ತೆರಳಿ ಪರಿಶೀಲಿಸಿದಾಗ ದೇವಿ ಕಣ್ಣು ಬಿಟ್ಟಿರುವ ಹಿಂದಿನ ರಹಸ್ಯ ಗೊತ್ತಾಗಿದೆ.
ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿ ಜನರಿಗೆ ಮಂಕು ಬೂದಿ ಎರಚಲು ಯತ್ನಿಸಿದವರಿಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ದೇವಿಗೆ ಕಣ್ಣು ಬಿಡಿಸಿ ಜನರ ಬುದ್ದಿಗೆ ಮಂಕೆರಚಲು ಯತ್ನಿಸಿದ್ದವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ತಹಶೀಲ್ದಾರ್ ಇನ್ನೊಂದು ಬಾರಿ ಇಂತಹ ಕಿತಾಪತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ದೇವಿ ಕಣ್ಣು ಬಿಟ್ಟ ಪ್ರಹಸನ ಸುಖಾಂತ್ಯಗೊಂಡಿದೆ. ಇದನ್ನೂ ಓದಿ:ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು
ಬಳ್ಳಾರಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಊರ ಮುಂದಿನ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಗುಡೇಕೋಟೆ ಗ್ರಾಮದ ಹತ್ತಿರವಿರುವ ಪಂಚಲಿಂಗೇಶ್ವರ ದೇವಾಸ್ಥಾನದ ಹತ್ತಿರ ಇಂದು ಸಂಜೆ 7 ಗಂಟೆ ಸುಮಾರಿಗೆ ಕರಡಿಗಳ ಗುಂಪೊಂದು ಪ್ರತ್ಯಕ್ಷವಾಗಿದೆ. ಒಂದು ಕಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರ ಓಡಾಟ ವಿರಳವಾಗಿದೆ. ಹೀಗಾಗಿ ಆಹಾರ ಅರಸಿಕೊಂಡು ಬಂದ ಕರಡಿಗಳ ಹಿಂಡು ದೇವಸ್ಥಾನದಲ್ಲಿ ಇರಿಸಲಾಗಿದ್ದ ದೇವರ ಮುಂದಿನ ನೈವೇದ್ಯ ತಿನ್ನಲು ಬಂದಿದೆ. ದೇವಸ್ಥಾನದ ಪೂಜಾರಿ ತಮ್ಮ ಮೊಬೈಲ್ ನಲ್ಲಿ ಕರಡಿಗಳ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಇದನ್ನು ಓದಿ: ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊರೊನಾಗೆ ಬಲಿ
ಗುಡೇಕೋಟೆ ಭಾಗದಲ್ಲಿ ಹೆಚ್ಚಿನ ಕರಡಿಗಳಿದ್ದು, ಜನರ ಓಡಾಟ ವಿರಳವಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನಲ್ಲಿ ಕರಡಿಗಳ ಓಡಾಟ ಹೆಚ್ಚಾಗಿದೆ.
ಲಾಕ್‍ಡೌನ್ ನಿಂದಾಗಿ ಮಾನವನ ಪರಿಸರದ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರಾವಳಿ ಭಾಗದಲ್ಲಿ ಆಮೆಗಳು ಸಮುದ್ರ ತೀರಕ್ಕೆ ಬಂದು ಮಾನವನ ಭಯವಿಲ್ಲದೇ ಮೊಟ್ಟೆ ಇಟ್ಟು ಮರಿ ಮಾಡಲು ಆರಂಭಿಸಿದ್ದು, ಹೊನ್ನಾವರದ ಕಾಸರಗೋಡು, ಟೊಂಕ ಸೇರಿದಂತೆ ತೀರ ಪ್ರದೇಶದಲ್ಲಿ ಓಲಿವ್ ರಿಡ್ಲಿ ಎಂಬ ಜಾತಿಯ ಅಳಿವಿನಂಚಿನ ಆಮೆಗಳು ಫೆಬ್ರವರಿಯಿಂದ ಈವರೆಗೆ ಸಾವಿರಾರು ಮೊಟ್ಟೆಗಳನ್ನು ಇಟ್ಟಿದೆ. ಇದನ್ನು ಓದಿ:ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ
ಮೈಸೂರು: ಸ್ನೇಹಿತರ ಜೊತೆ ಸವಾಲು ಹಾಕಿ ಕಪಿಲಾ ನದಿಗೆ ಹಾರಿದ ಪೂಜಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ನಂಜನಗೂಡು ಪಟ್ಟಣದ ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ 53 ವರ್ಷದ ವೆಂಕಟೇಶ್ ನಾಪತ್ತೆಯಾದ ವ್ಯಕ್ತಿ. ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಈಜುವ ದುಃಸ್ಸಾಹಸಕ್ಕೆ ಹೋಗಿ ನಾಪತ್ತೆ ಆಗಿದ್ದಾರೆ.
ಸ್ನೇಹಿತರ ಜೊತೆ ಸವಾಲು ಹಾಕಿ ಶನಿವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ನಂಜನಗೂಡು ಪಟ್ಟಣದ ಹೊಸ ರೈಲ್ವೆ ಸೇತುವೆಯಿಂದ ಕಪಿಲಾ ನದಿಗೆ ಧುಮುಕಿದ ಪೂಜಾರಿ ವೆಂಕಟೇಶ್ ಮೂರು ದಿನ ಕಳೆದರು ಇನ್ನೂ ಪತ್ತೆಯಾಗಿಲ್ಲ.
ಈ ಬಗ್ಗೆ ವೆಂಕಟೇಶ್ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.