Tag: ಪೂಜಾರ

  • ಬೌಂಡರಿಗಳ ಸುರಿಮಳೆ – ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ಬೌಂಡರಿಗಳ ಸುರಿಮಳೆ – ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಟಿ20 ಮಾದರಿಯಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಟಿ20 ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಸೌರಾಷ್ಟ್ರ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಪೂಜಾರ ಕೇವಲ 61 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 31 ವರ್ಷದ ಪೂಜಾರ ಟೆಸ್ಟ್ ಕ್ರಿಕೆಟ್ ಸ್ಟಾರ್ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದು, ರೈಲ್ವೇಸ್ ತಂಡದ ವಿರುದ್ಧ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ದಾರೆ. 29 ಎಸೆತಗಳಲ್ಲೇ ಅರ್ಧ ಶತಕ ಗಳಿಸಿದರೆ, ಬಳಿಕ 32 ಎಸೆತದಲ್ಲಿ 50 ರನ್ ಅರಿದು ಬಂದಿತ್ತು.

    ಪಂದ್ಯದಲ್ಲಿ ರಾಬಿನ್ ಉತ್ತಪ್ಪ 31 ಎಸೆತಗಳಲ್ಲಿ 46 ರನ್ ಗಳಿಸಿ ಪೂಜಾರ ಅವರಿಗೆ ಸಾಥ್ ನೀಡಿದರು. ಆದರೆ ಅರ್ಧ ಶತಕದ ಸನಿಹದಲ್ಲಿ ಅಮಿತ್ ಮಿಶ್ರಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. 20 ಓವರ್ ಗಳ ಅಂತ್ಯಕ್ಕೆ ಸೌರಾಷ್ಟ್ರ 3 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ಆಶೀಶ್ ಯಾದವ್ ರೈಲ್ವೇಸ್ ತಂಡದ ಪರ 4 ಓವರ್ ಗಳಲ್ಲಿ 30 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪರಿಣಾಮಕಾರಿ ಬೌಲರ್ ಎನಿಸಿಕೊಂಡರು. ಗೆಲ್ಲಲು 189 ರನ್ ಗುರಿ ಬೆನ್ನತ್ತಿದ ರೈಲ್ವೇಸ್ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿ ಜಯ ಪಡೆಯಿತು.

    ಪೂಜಾರ ಟಿ20 ಮಾದರಿಯಲ್ಲಿ 58 ಪಂದ್ಯಗಳನ್ನು ಆಡಿದ್ದು, 1,096 ರನ್ ಸಿಡಿಸಿದ್ದಾರೆ. ಈ ಹಿಂದೆ 2016 ರಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ಪೂಜಾರ 81 ರನ್ ಗಳಿಸಿದ್ದು ಅವರ ಅಧಿಕ ಮೊತ್ತ ಆಗಿತ್ತು. 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ನಲ್ಲಿ ಆಡಿದ್ದ ಪೂಜಾರ ಬಳಿಕ ಐಪಿಎಲ್‍ನಲ್ಲಿ ಭಾಗವಹಿಸಿರಲಿಲ್ಲ. ವಿಶ್ವಕಪ್ ಬಳಿಕ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪೂಜಾರ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಕಿಂಗ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಟೀಂ ಇಂಡಿಯಾ – ಪೂಜಾರ ಸ್ಟೆಪ್ ನೋಡಿ

    ವಾಕಿಂಗ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಟೀಂ ಇಂಡಿಯಾ – ಪೂಜಾರ ಸ್ಟೆಪ್ ನೋಡಿ

    ಸಿಡ್ನಿ: ಸರಣಿಯಲ್ಲಿ 521 ರನ್ ಸಿಡಿಸಿ ಮಿಂಚಿದ್ದ ಚೇತೇಶ್ವರ ಪೂಜಾರ ಟೀಂ ಇಂಡಿಯಾದ ಸಂಭ್ರಮಾಚರಣೆಯ ವೇಳೆ ಮಾಡಿರುವ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ.

    ಅಂತಿಮ ಟೆಸ್ಟ್ ಡ್ರಾದಲ್ಲಿ ಮುಕ್ತಾಯವಾದ ಹಿನ್ನೆಲೆಯಲ್ಲಿ 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾದ ಆಟಗಾರರು ವಿಭಿನ್ನವಾಗಿ ವಾಕಿಂಗ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವೇಳೆ ಪೂಜಾರ ಸ್ಟೆಪ್ ಹಾಕಿರಲಿಲ್ಲ. ಇದನ್ನು ಗಮನಿಸಿದ ಉಳಿದ ಆಟಗಾರರು ಪೂಜಾರ ಅವರನ್ನು ಮುಂದಕ್ಕೆ ದೂಡಿದರು. ಅಷ್ಟೇ ಅಲ್ಲದೇ ರಿಷಬ್ ಪಂತ್ ಪೂಜಾರ ಅವರ ಕೈಯನ್ನು ಹಿಡಿದು ಡ್ಯಾನ್ಸ್ ಮಾಡಿಸಿದರು.

    ಸರಣಿ ಗೆದ್ದ ಬಳಿಕ ಸುದ್ದಿಗೋಷ್ಠಿಯ ವೇಳೆ ಈ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ, ಈ ಪ್ರಶ್ನೆಯನ್ನು ರಿಷಬ್ ಪಂತ್ ಗೆ ಕೇಳಬೇಕು. ರಿಷಬ್ ಮುಂದೆ ಬಂದು ಡ್ಯಾನ್ಸ್ ಮಾಡಿದಾಗ ನಾವೆಲ್ಲರೂ ಅದೇ ಸ್ಟೆಪ್ ಫಾಲೋ ಮಾಡಿದೇವು. ಆದರೆ ಈ ಸರಳ ಸ್ಟೆಪ್ ಅನ್ನು ಪೂಜಾರ ಮಾಡಲಿಲ್ಲ. ಇದರಲ್ಲಿ ನಿಮಗೆ ಪೂಜಾರ ಎಷ್ಟು ಸರಳ ವ್ಯಕ್ತಿ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

    ಭಾರತೀಯ ಕಾಲಮಾನ  ಬೆಳಗ್ಗೆ  11.22ಕ್ಕೆ ಈ ವಿಡಿಯೋ ಅಪ್ಲೋಡ್ ಆಗಿದ್ದು, 1 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದರೆ, 4 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದನ್ನೂ ಓದಿ: ಟೆಸ್ಟ್ ಸರಣಿ ಗೆದ್ದು ಆಸೀಸ್ ನೆಲದಲ್ಲಿ ವಿಶೇಷ ಸಾಧನೆಗೈದ ಟೀಂ ಇಂಡಿಯಾ

    ಈ ಪಂದ್ಯದಲ್ಲಿ 193 ರನ್ ಮತ್ತು ಸರಣಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಚೇತೇಶ್ವರ ಪೂಜಾರ ಅರ್ಹವಾಗಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ 443 ರನ್ ಗಳಿಗೆ ಡಿಕ್ಲೇರ್ – ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಿಂದಿಕ್ಕಿದ ಪೂಜಾರ

    ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ 443 ರನ್ ಗಳಿಗೆ ಡಿಕ್ಲೇರ್ – ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಿಂದಿಕ್ಕಿದ ಪೂಜಾರ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 443 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ.

    ಪಂದ್ಯದ 2ನೇ ದಿನದಾಟದ ಮುಕ್ತಾಯಕ್ಕೆ ಕೆಲವೇ ಓವರ್ ಗಳು ಬಾಕಿ ಇರುವ ವೇಳೆ ಅಚ್ಚರಿ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಈ ವೇಳೆ ಟೀಂ ಇಂಡಿಯಾ 169.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿತ್ತು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 2ನೇ ದಿನದಾಟದ ಅಂತ್ಯಕ್ಕೆ 6 ಓವರ್ ಗಳಲ್ಲಿ ವಿಕೆಟ್ 8 ರನ್ ಗಳಿಸಿದೆ.

    2ನೇ ದಿನದಾಟವನ್ನು 2 ವಿಕೆಟ್‍ಗೆ 215 ರನ್ ಗಳಿಂದ ಆರಂಭಿಸಿದ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಭರ್ಜರಿ ಶತಕ, ಕೊಹ್ಲಿ 82 ರನ್ ಕಾಣಿಕೆ ಹಾಗೂ ರೋಹಿತ್ ಶರ್ಮಾರ ಅರ್ಧ ಶತಕ (63* ರನ್) ನೆರವಿನಿಂದ ತಂಡದ ಮೊತ್ತ 400 ರನ್ ಗಡಿ ದಾಟಲು ನೆರವಾಯಿತು. ಅಂತಿಮ ಹಂತದಲ್ಲಿ ಅನುಭವಿ ಆಟಗಾರ ರಹಾನೆ 34 ರನ್ ಹಾಗೂ ರಿಷಬ್ ಪಂತ್ ರ ಬಿರುಸಿನ 39 ರನ್ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು. ಮೆಲ್ಬರ್ನ್ ಕ್ರೀಡಾಂಗಣದ ಪಿಚ್ ವಿಭಿನ್ನವಾಗಿ ವರ್ತಿಸುತ್ತಿದ್ದು, 2ನೇ ದಿನದಾಟದ ವೇಳೆ ಪೂಜಾರ ಹಾಗೂ ರಹಾನೆ ಔಟಾದ ರೀತಿ ಇದಕ್ಕೆ ಸಾಕ್ಷಿಯಾಗಿದೆ. ಬೌಲಿಂಗ್ ವೇಳೆ ಚೆಂಡು ಬೌನ್ಸ್ ಆಗದೆ ನೇರವಾಗಿ ವಿಕೆಟ್ ನತ್ತ ನುಗ್ಗಿತ್ತು, ಈ ವೇಳೆ ಪೂಜಾರ ಬೌಲ್ಡ್ ಆದರೆ ರಹಾನೆ ಎಲ್‍ಬಿಡಬ್ಲ್ಯು ಬಲೆಗೆ ಸಿಲುಕಿ ಔಟಾದರು.

    https://twitter.com/telegraph_sport/status/1078176442100391937?

    ಸರಣಿಯಲ್ಲಿ 2ನೇ ಶತಕ ಸಿಡಿಸಿದ ಪೂಜಾರ ವೃತ್ತಿ ಜೀವನದ 17 ನೇ ಟೆಸ್ಟ್ ಶತಕವನ್ನು 112 ಇನ್ನಿಂಗ್ಸ್ ಗಳಲ್ಲಿ ಪೂರೈಸಿದರು. ಆ ಮೂಲಕ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಶತಕಗಳ ಸಾಧನೆಯನ್ನು ಸರಿಗಟ್ಟಿದರು. 188 ಇನ್ನಿಂಗ್ಸ್ ಗಳಲ್ಲಿ ಗಂಗೂಲಿ 16 ಶತಕಗಳನ್ನು ಸಿಡಿಸಿದ್ದರೆ, ವಿವಿಎಸ್ ಲಕ್ಷ್ಮಣ್ 225 ಇನ್ನಿಂಗ್ಸ್ ಗಳಲ್ಲಿ 17 ಶತಕಗಳನ್ನು ಸಿಡಿಸಿದ್ದಾರೆ.

    ಉಳಿದಂತೆ ಆಸೀಸ್ ತಂಡದ ಪರ ಕಮ್ಮಿನ್ಸ್ 3 ಮತ್ತು ಸ್ಟಾರ್ಕ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಆರಂಭಿಕರಾದ ಫಿಂಚ್ 3 ರನ್, ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿದ್ದಾರೆ.

    https://twitter.com/telegraph_sport/status/1078153465489178624?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv