Tag: ಪೂಜಾಗಾಂಧಿ

  • ದಂಡುಪಾಳ್ಯ 2 ಚಿತ್ರತಂಡದ ವಿರುದ್ಧ ನಟಿ ಸಂಜನಾ ಸಿಟ್ಟು

    ದಂಡುಪಾಳ್ಯ 2 ಚಿತ್ರತಂಡದ ವಿರುದ್ಧ ನಟಿ ಸಂಜನಾ ಸಿಟ್ಟು

    ಬೆಂಗಳೂರು: ದಂಡುಪಾಳ್ಯ 2 ಚಿತ್ರದ ಪ್ರಮೋಷನ್‍ಗೆ ನಟಿ ಸಂಜನಾ ಗೈರು ಹಾಜರಾಗಿದ್ದಕ್ಕೆ ಚಿತ್ರತಂಡ ಅಪ್‍ಸೆಟ್ ಆಗಿದೆ.

    ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಮೂಡಿಬಂದಿದ್ದು, ಹೈದ್ರಾಬಾದ್‍ನಲ್ಲಿ ನಡೆದ ಪ್ರಮೋಷನ್‍ಗೆ ಸಂಜನಾ ಗೈರಾಗಿದ್ರು. ದಂಡುಪಾಳ್ಯ ಪೋಸ್ಟರ್‍ಗಳಲ್ಲಿ ಸಂಜನಾ ಅವರನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಟ್ರೇಲರ್‍ನಲ್ಲೂ ಇದೇ ರೀತಿ ಆಗಿದೆ ಅಂತಾ ಸಂಜನಾ ಸಿಟ್ಟಾಗಿದ್ದಾರೆ.

    ಈ ಬಗ್ಗೆ ನಟಿ ಸಂಜನಾ ಅವರನ್ನು ಕೇಳಿದ್ರೆ, ಮಾತನಾಡೋಕೆ ಇಷ್ಟವಿಲ್ಲ. ಮೊದಲು ಲಕ್ಷ್ಮೀ ಮಂಚು ಅವರನ್ನು ಕೇಳಲಾಗಿತ್ತು, ಅವರು ಒಪ್ಪದಿದ್ದಕ್ಕೆ ನನಗೆ ಆಫರ್ ಕೊಟ್ರು. ಸಿನಿಮಾದಲ್ಲಿ ಪಾತ್ರಕ್ಕಿರುವ ಪ್ರಾಮುಖ್ಯತೆ ಹಾಗೂ ಉತ್ತಮ ಸಂಭಾವನೆಗಾಗಿ ಒಪ್ಪಿಕೊಂಡೆ. ದಂಡುಪಾಳ್ಯ 2 ಹಾಗೂ ಭಾಗ 3 ಒಟ್ಟಿಗೆ ಶೂಟಿಂಗ್ ಆಗಿದ್ದು, ನನ್ನ ಪಾತ್ರ ಎಷ್ಟರ ಮಟ್ಟಿಗೆ ಉಳಿಸಿದ್ದಾರೆ ಅನ್ನೋ ಬಗ್ಗೆ ಗೊಂದಲ ಆಗಿದೆ. ಚಿತ್ರದ ಟ್ರೇಲರ್ ನೋಡಿ ಬೇಸರ ಆಗಿದೆ ಎಂದಿದ್ದಾರೆ.

    ನನ್ನನ್ನು ಡಮ್ಮಿ ಮಾಡಿ ಪೂಜಾ ಗಾಂಧಿಯನ್ನು ಹೈಲೈಟ್ ಮಾಡಿರೋದಕ್ಕೆ ಪ್ರಮೋಷನ್‍ಗೆ ಬರಲ್ಲ ಅಂತ ಸಂಜನಾ ಚಿತ್ರತಂಡಕ್ಕೆ ಹೇಳಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.

  • ಮೈ ಜುಮ್ಮೆನಿಸುವ ದಂಡುಪಾಳ್ಯ-2 ಸಿನಿಮಾದ ಟ್ರೇಲರ್ ನೋಡಿ

    ಮೈ ಜುಮ್ಮೆನಿಸುವ ದಂಡುಪಾಳ್ಯ-2 ಸಿನಿಮಾದ ಟ್ರೇಲರ್ ನೋಡಿ

    ಬೆಂಗಳೂರು: ದಂಡುಪಾಳ್ಯ ತಂಡ ಮತ್ತೊಮ್ಮೆ ಬೆಳ್ಳಿತೆರೆಗೆ ಅಪ್ಪಳಿಸಲಿಕ್ಕೆ ಸಿದ್ಧವಾಗಿದೆ. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್‍ಗಳಿಂಗ ಸಿನಿರಸಿಕರನ್ನು ಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿರಿಸಲಿದೆ.

    ಪ್ರಥಮ ಭಾಗ ದಂಡುಪಾಳ್ಯ ಚಿತ್ರರಸಿಕರು ಹಾಗು ವಿಮರ್ಶಕರನ್ನು ಮೆಚ್ಚಿಸಿತ್ತು. ಅದರ ಮುಂದುವರೆದ ಭಾಗವೇ ದಂಡುಪಾಳ್ಯ ಭಾಗ-2. ಈಗ ಮತ್ತೆ ಆ ಕರಾಳ ಪಾತಕಿಗಳ ಮತ್ತಷ್ಟು ವಿಕೃತ ಕೃತ್ಯಗಳನ್ನ ಬೆಳ್ಳಿತೆರೆ ಮೇಲೆ ಅಷ್ಟೇ ರೋಚಕವಾಗಿ ಬಿಚ್ಚಿಡಲು ಚಿತ್ರತಂಡ ಹೊರಟಿದೆ.

    ಇಂದು ಖಾಸಗಿ ಹೋಟೆಲ್‍ನಲ್ಲಿ ಶ್ರೀನಿವಾಸ್ ರಾಜು ಸಾರಥ್ಯದ ದಂಡುಪಾಳ್ಯ 2 ಚಿತ್ರದ ಟ್ರೈಲರ್ ಲಾಂಚ್ ಮಾಡಲಾಯ್ತು. ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದಿರೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

    ಚಿತ್ರದಲ್ಲಿ ಮಕರಂದ್ ದೇಶ್‍ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.