Tag: ಪೂಜಾಗಾಂಧಿ

  • ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    – ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು

    ಕೊಪ್ಪಳ: ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು ಎಂದು ನಟಿ ಪೂಜಾಗಾಂಧಿ ಗ್ಯಾಂಗ್ ರೇಪ್ ವಿರುದ್ಧ ಕಿಡಿಕಾರಿದ್ದಾರೆ.

    ಮೈಸೂರು ಯುವತಿ ಗ್ಯಾಂಗ್ ರೇಪ್ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಕೇಳಿ ತುಂಬಾ ಬೇಸರವಾಗಿದೆ. ಇಂತಹ ಪ್ರಕರಣಗಳು ಬೇರೆ ಬೇರೆ ರಾಜ್ಯದಲ್ಲಿ ನಡೆಯುತ್ತಿದ್ದನ್ನು ಕೇಳಿದ್ದೇವೆ. ಆದರೆ ಅಂತಹ ಘಟನೆ ಈಗ ಮೈಸೂರಿನಲ್ಲಿ ನಡೆದಿದೆ. ಇದು ನಿಜಕ್ಕೂ ಬೇಸರದ ಸಂಗತಿ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನೀಚ ಕೃತ್ಯ ಮಾಡುವವರಿಗೆ ಪೊಲೀಸರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ: ಅರಗ ಜ್ಞಾನೇಂದ್ರ

    ಈ ರೀತಿಯ ಘಟನೆಗಳಿಂದ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು. ಎಲ್ಲರ ಮನೆಯ ಹೆಣ್ಣು ಮಕ್ಕಳು ಒಂದೆ. ಕಾನೂನು ಪ್ರಕಾರ ಏನು ಕ್ರಮ ಇದೆಯೋ ಆ ಕ್ರಮ ಜರುಗಿಸಬೇಕು. ಬೇರೆಯವರು ಅತ್ಯಾಚಾರ ಮಾಡುವುದಕ್ಕೆ ಮುಂಚೆ ನೂರು ಬಾರಿ ಯೋಚಿಸಬೇಕು ಆ ರೀತಿಯ ಶಿಕ್ಷೆ ನೀಡಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:  ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

    ಸಣ್ಣ ಸಣ್ಣ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇಂತಹ ಮನಸ್ಥಿತಿಯವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾನು ಕಾನೂನನ್ನು ಗೌರವಿಸುತ್ತೇನೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳಿಂದ ಎಲ್ಲ ಮಹಿಳೆಯರು ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಬರಬೇಕು ಎಂದು ತಿಳಿಸಿದ್ದಾರೆ.

    ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಳವಾಡಿಯಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲಿಸರು ಇದೀಗ ಅವರನ್ನು ಮೈಸೂರಿಗೆ ಕರೆತಂದು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಅತ್ಯಾಚಾರ ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು: ಸಾ.ರಾ ಮಹೇಶ್

  • ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬೆಂಗಳೂರು: ಸ್ಯಾಂಡಲ್‍ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೂಜಾಗಾಂಧಿಯವರು ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

    ಹೌದು. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು.

    ಬಿಜೆಪಿ ಮುಖಂಡನ ಜೊತೆ ರೂಂ ಬುಕ್ ಮಾಡಿ ಆತಿಥ್ಯ ಸ್ವೀಕರಿಸಿದ್ದ ನಟಿ, 26 ಲಕ್ಷ ರೂಪಾಯಿ ಬಿಲ್ ಕಟ್ಟದೆ ಹೋಟೆಲಿಗೆ ಸತಾಯಿಸುತ್ತಿದ್ದರು. ಅಲ್ಲದೆ ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. ಒಟ್ಟಿನಲ್ಲಿ ಓರ್ವ ಸ್ಟಾರ್ ನಟಿಯ ಬಳಿ ಬಿಲ್ ಕಟ್ಟಲೂ ಹಣ ಇರಲಿಲ್ಲವೇ? ನಾಲ್ಕೂವರೆ ಲಕ್ಷ ಹಣ ಕೊಡದೇ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

  • ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು

    ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು

    ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ.

    ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್ ( ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದಾರೆ.

    ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಓರ್ವ ಸ್ಟಾರ್ ನಟಿಯ ಬಳಿ ಬಿಲ್ ಕಟ್ಟಲೂ ಹಣ ಇರಲಿಲ್ಲವೇ. ನಾಲ್ಕೂವರೆ ಲಕ್ಷ ಹಣ ಕೊಡದೇ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

  • 3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    ಬೆಂಗಳೂರು: ಶಾಸಕರಿಗಿಂತ ಸ್ಯಾಂಡಲ್‍ವುಡ್‍ನ ನಟಿ ನಗರದಲ್ಲಿ ಪವರ್ ಫುಲ್ ಆಗಿದ್ದು, ಬೆಂಗಳೂರಿನ ಶಾಸಕರುಗಳು ಬಿಡಿಎಯಲ್ಲಿ ಕೆಲಸ ಆಗ್ತಿಲ್ಲ ಅಂತ ಹೇಳಿದ್ರೂ ಕೆಲಸ ಮಾತ್ರ ಆಗುತ್ತಿರಲಿಲ್ಲ. ಆದರೆ ಈ ನಟಿಯ ಕಡೆಯ ಫೈಲ್ ಬಂದರೆ ಬಿಡಿಎಯಲ್ಲಿ ನೀರು ಕುಡಿದಷ್ಟೆ ಸಲಿಸಾಗಿ ಕೆಲಸ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.

    ನಟಿ ಪೂಜಾ ಗಾಂಧಿ, 2-3 ಬಾರಿ ಗೆದ್ದ ಶಾಸಕರಿಗಿಂತ 5 ವರ್ಷದಲ್ಲಿ 3 ಪಕ್ಷ ಬದಲಿಸಿದ್ದಾರೆ. ನಟಿ ಮಣಿಯ ಕೆಲಸ ಬಿಡಿಎಯಲ್ಲಿ ನಡೆಯುತ್ತದೆ. ನಮ್ಮ ಕೆಲಸ ನಡೆಯಲ್ಲ ಎಂದು ನಗರದ ಕಾಂಗ್ರೆಸ್ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ.

     

    ನಾವು ಶಾಸಕರಾಗುವ ಬದಲು ಬಣ್ಣ ಹಚ್ಚಿಕೊಂಡರೆ ಕೆಲಸ ಆಗುತ್ತಾ ಅಂತ ನಗರದ ಕಾಂಗ್ರೆಸ್ ಶಾಸಕರು ಗರಂ ಆಗಿ ಡಿಸಿಎಂ ಪರಮೇಶ್ವರ್ ರನ್ನ ಕೇಳಿದ್ದಾರೆ. ಅಷ್ಟೇ ಅಲ್ಲದೇ ಏನು ಮಾಡುತ್ತೀರೋ ಗೊತ್ತಿಲ್ಲ ಸರ್ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಬದಲಿಸಿ ಅಂತ ಶಾಸಕರಾದ ಬೈರತಿ ಬಸವರಾಜು ಹಾಗೂ ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಶಾಸಕರ ತಂಡ ಡಿಸಿಎಂ ಪರಮೇಶ್ವರ್ ಗೆ ದೂರು ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳು ಕಳೆದರೂ ಬಿಡಿಎಯಲ್ಲಿ ಮೊದಲಿನ ವೇಗದಲ್ಲಿ ಕೆಲಸ ಆಗುತ್ತಿಲ್ಲ ಎಂಬುದು ಕಾಂಗ್ರೆಸ್ ಶಾಸಕರ ದೂರಾಗಿದೆ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರನ್ನ ಬದಲಿಸಿ ಅಂತ ನಗರದ ಕಾಂಗ್ರೆಸ್ ಶಾಸಕರು ಮೊದಲೇ ಡಿಸಿಎಂ ಪರಮೇಶ್ವರ್  ದೂರು ನೀಡಿದ್ದರು. ಎರಡು ಮೂರು ಬಾರಿ ಗೆದ್ದ ಶಾಸಕರುಗಳಾದ ನಮ್ಮ ಕೆಲಸವೇ ಬಿಡಿಎಯಲ್ಲಿ ಆಗುತ್ತಿಲ್ಲ. ಆದರೆ ನಟಿ ಪೂಜಾ ಗಾಂಧಿ ಕೆಲಸ ಮಾತ್ರ ಬಿಡಿಎಯಲ್ಲಿ ಸಲಿಸಾಗಿ ಆಗುತ್ತೆ ಅಂತ ಕಾಂಗ್ರೆಸ್ ಶಾಸಕರು ಡಿಸಿಎಂ ಪರಮೇಶ್ವರ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ರಾಕೇಶ್ ಸಿಂಗ್

    ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ದೂರು ನೀಡಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬದಲಿಸಿ ಅಂತ ಒತ್ತಡ ಹೇರಿದ್ದರು. ಒಂದೇ ಕೆಲಸಕ್ಕೆ ನಾವು ಹತ್ತಾರು ಬಾರಿ ಬಿಡಿಎ ಮೆಟ್ಟಿಲು ಹತ್ತಿ ಇಳಿಯಬೇಕು. ಆದರೆ ನಟಿ ಪೂಜಾ ಗಾಂಧಿ ಕಡೆಯಿಂದ ಬರುವ ಫೈಲ್‍ ಗೆ ಮಾತ್ರ ಕೂಡಲೆ ಪ್ರತಿಕ್ರಿಯೆ ಸಿಗುತ್ತದೆ ಯಾಕೆ ಅನ್ನೋದು ಶಾಸಕರ ಪ್ರೆಶ್ನೆ ಆಗಿದೆ.

    ರಾಜಕೀಯದಲ್ಲಿ ಏನೂ ಅಲ್ಲದೆ 3-4 ಪಕ್ಷ ಬದಲಿಸಿದ ಪೂಜಾಗಾಂಧಿಗೆ ಇರುವ ಬೆಲೆ, ಮೂರು ಮೂರು ಬಾರಿ ಗೆದ್ದು ಶಾಸಕರಾದ ನಮ್ಮ ಮಾತಿಗೆ ಇಲ್ವಾ ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಮ್ಮ ಸಮಸ್ಯೆ ಬಗೆ ಹರಿಸಿ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಮೊದಲು ಬದಲಿಸಿ ಅಂತ ಪಟ್ಟು ಹಿಡಿದಿದ್ದರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    ಶಾಸಕರ ಒತ್ತಾಯಕ್ಕೆ ಮಣಿದು ಸ್ವಲ್ಪ ಸಮಯಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೀನಿ ಅಂತ ಪರಮೇಶ್ವರ್ ಶಾಸಕರನ್ನ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವ್ಯಾಪಾರಿ ಮಹಿಳೆಯಿಂದ ನಟಿ ಪೂಜಾ ಗಾಂಧಿಗೆ ತರಾಟೆ

    ವ್ಯಾಪಾರಿ ಮಹಿಳೆಯಿಂದ ನಟಿ ಪೂಜಾ ಗಾಂಧಿಗೆ ತರಾಟೆ

    ಶಿವಮೊಗ್ಗ: ಕರ್ನಾಟಕ ಲೋಕಸಭಾ ಉಪಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದ್ದು, ಜಿಲ್ಲೆಯಲ್ಲಿ ನಟಿ ಪೂಜಾಗಾಂಧಿ ಅವರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಪೂಜಾಗಾಂಧಿ ಚುನಾವಣಾ ಪ್ರಚಾರದ ವೇಳೆ ಪೇಚಿಗೆ ಸಿಲುಕಿದ್ದಾರೆ.

    ಪೂಜಾಗಾಂಧಿ ಎಸ್.ಎನ್. ಮಾರ್ಕೆಟ್ ನಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತ ಯಾಚನೆ ಮಾಡಲು ಬಂದಿದ್ದರು. ಈ ವೇಳೆ ಸಿಲಿಂಡರ್ ರೇಟ್ ಹೆಚ್ಚಾಗಿದೆ, ಡೀಸೆಲ್, ಪೆಟ್ರೋಲ್ ರೇಟು ಹೆಚ್ಚಾಗಿದೆ. ಗಾಂಧಿ ಬಜಾರ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಈಗ ವೋಟ್ ಕೇಳುವುದಕ್ಕೆ ಬಂದಿದ್ದೀರಿ ಎಂದು ವ್ಯಾಪಾರಿ ಮಹಿಳೆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನನ್ನೊಬ್ಬಳಿಗೆ ಇಷ್ಟು ಕಷ್ಟವಾಗಿದೆ. ಬೇರೆಯವರಿಗೆ ನನಗಿಂತಲೂ ಹೆಚ್ಚು ಕಷ್ಟ ಆಗುತ್ತಿದೆ. ವ್ಯಾಪಾರ ಮಾಡಬೇಕು, ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಇದರ ಜೊತೆಗೆ ಎಲ್ಲಾ ರೇಟು ಹೀಗೆ ಹೆಚ್ಚಾದರೆ ನಾವು ಬದುಕೋದು ಹೇಗೆ ಎಂದು ಮಹಿಳೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಗೆ ಸಮಾಧಾನ ಮಾಡುವಲ್ಲಿ ಪೂಜಾಗಾಂಧಿ ಸೋತಿದ್ದು, ಬಳಿಕ ಸ್ಥಳಿಯ ಮುಖಂಡರು ವ್ಯಾಪಾರಿ ಮಹಿಳೆಗೆ ಸಮಾಧಾನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ನಟಿ ಪೂಜಾ ಗಾಂಧಿಗೆ ಬಿಗ್ ರಿಲೀಫ್

    ರಾಯಚೂರು: ಕಳೆದ ನಾಲ್ಕೂವರೆ ವರ್ಷಗಳಿಂದ ನಟಿ ಪೂಜಾಗಾಂಧಿ ರಾಯಚೂರಿನಲ್ಲಿ ಎದುರಿಸುತ್ತಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೊನೆಗೂ ಮುಕ್ತಿ ಪಡೆದಿದ್ದಾರೆ.

    ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್ ಸಾಕ್ಷ್ಯಾಧಾರ ಕೊರತೆಯಿಂದ ಪೂಜಾಗಾಂಧಿ ಖುಲಾಸೆಯಾಗಿದ್ದಾರೆ ಎಂದು ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಪ್ರಕರಣ?
    2013 ರಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಅಂದಿನಿಂದಲೂ ಪೂಜಾಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದರು.

    ಈ ಪ್ರಕರಣದ ಆರೋಪದಿಂದ ಈಗ ಪೂಜಾಗಾಂದಿ ಮುಕ್ತಿಯಾಗಿದ್ದಾರೆ ಎಂದು ಪೂಜಾಗಾಂಧಿ ಪರ ವಕೀಲ ನಾಗರಾಜ್ ನಾಯಕ ಹೇಳಿದ್ದಾರೆ. ತೀರ್ಪಿನಿಂದ ತುಂಬಾ ಖುಷಿಯಾಗಿದೆ. ಪ್ರಕರಣ ಮುಗಿದರೂ ರಾಯಚೂರಿಗೆ ಮತ್ತೆ ಮತ್ತೆ ಬರ್ತಿನಿ ಎಂದು ಪೂಜಾಗಾಂಧಿ ಹೇಳಿದ್ದಾರೆ. ಹೊಸ ವರ್ಷವನ್ನ ಪ್ರತಿ ದಿನದಂತೆ ಖುಷಿಯಾಗಿ ಸ್ವಾಗತಿಸುತ್ತೇನೆ. ನಾನು ಯಾವಾಗ ಮದುವೆ ಆಗುತ್ತೇನೆ ಆಗ ಹೇಳುತ್ತೇನೆ ಎಂದು ಪೂಜಾಗಾಂಧಿ ಹೇಳಿದರು.

  • ನ್ಯಾಯ ಸಿಕ್ಕರೆ ರಾಯಚೂರಿಗೆ 108 ತೆಂಗಿನಕಾಯಿ ಒಡೆಯುತ್ತೇನೆ: ನಟಿ ಪೂಜಾ ಗಾಂಧಿ

    ನ್ಯಾಯ ಸಿಕ್ಕರೆ ರಾಯಚೂರಿಗೆ 108 ತೆಂಗಿನಕಾಯಿ ಒಡೆಯುತ್ತೇನೆ: ನಟಿ ಪೂಜಾ ಗಾಂಧಿ

    ರಾಯಚೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿರುವ ನಟಿ ಪೂಜಾ ಗಾಂಧಿ ತಮಗೆ ನ್ಯಾಯ ಸಿಕ್ಕರೆ ತಾನು ನಿಂತ ಕ್ಷೇತ್ರ ರಾಯಚೂರು ನಗರಕ್ಕೆ 101 ತೆಂಗಿನಕಾಯಿ ಒಡೆಯುವುದಾಗಿ ಹೇಳಿದ್ದಾರೆ.

    ವಿಚಾರಣೆ ಹಿನ್ನೆಲೆ ರಾಯಚೂರಿನ ಜೆಎಂಎಫ್ ಸಿ ಎರಡನೇ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬಂದ ಬಳಿಕ ಮಾತನಾಡಿದ ಅವರು, ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ನಟ ಉಪೇಂದ್ರ ಹೊಸ ಪಕ್ಷ ಕಟ್ಟಿರುವುದಕ್ಕೆ ಶುಭ ಕೋರಿದ ನಟಿ, ಅವರನ್ನು ಬೆಂಬಲಿಸುವುದಾಗಿ ಹೇಳಿದರು.

    ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಲಾಗಿದ್ದು, ಅಂದೇ ಅಂತಿಮ ತೀರ್ಪು ಹೊರಬರಲಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಅನುಮತಿ ಪಡೆಯದೇ ಪ್ರಚಾರಕ್ಕೆ ವಾಹನ ಬಳಸಿದ್ದ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಡಿಸೆಂಬರ್ 4ಕ್ಕೆ ಅಂತಿಮ ತೀರ್ಪು ಹೊರಬೀಳಲಿದೆ.

  • ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ- ಬೆಳಿಗ್ಗೆಯಿಂದ ನಗರ ಸಂಚಾರ ಮಾಡಿದ ಪೂಜಾಗಾಂಧಿ

    ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ- ಬೆಳಿಗ್ಗೆಯಿಂದ ನಗರ ಸಂಚಾರ ಮಾಡಿದ ಪೂಜಾಗಾಂಧಿ

    ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ನಟಿ ಪೂಜಾಗಾಂಧಿ ರಾಯಚೂರಿಗೆ ಬಂದಿದ್ದು, ಬೆಳಿಗ್ಗೆಯಿಂದ ನಗರ ಸಂಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಓಡಾಡಿದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

    ನಗರದ ತೀನ್ ಕಂದಿಲ್ ವೃತ್ತದಲ್ಲಿ ಸಾಧಿಕ್ ಟೀ ಅಂಗಡಿಯಲ್ಲಿ ಟೀ ಕುಡಿದು, ಟೀ ಅಂಗಡಿ ಮಾಲೀಕನೊಂದಿಗೆ ಸೆಲ್ಫಿ ತೆಗೆದುಕೊಂಡರು. ಬಳಿಕ ಆರ್‍ಟಿಓ ವೃತ್ತದ ಬಳಿಯ ವೈಟ್ ಹೌಸ್ ಎಕ್ಸಿಬಿಷನ್ ಗೆ ತೆರಳಿ ಅಭಿಮಾನಿಗಳೊಂದಿಗೆ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ ಅಂತ ಪೂಜಾಗಾಂಧಿ ತಿಳಿಸಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್‍ಆರ್ ಕಾಂಗ್ರೆಸ್ ನಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರಕ್ಕೆ ಅನುಮತಿಯಿಲ್ಲದ ವಾಹನ ಬಳಿಸಿದ್ದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದಾರೆ.

    ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಜೆಎಂಎಫ್ ಸಿ-2 ರಲ್ಲಿ ವಿಚಾರಣೆ ನಡೆಯಲಿದ್ದು ಪದೇ ಪದೇ ವಿಚಾರಣೆಗೆ ಗೈರಾದ ಹಿನ್ನೆಲೆ ಅಕ್ಟೋಬರ್ 26 ರಂದು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದ ನ್ಯಾಯಾಧೀಶರು ಮುಂದೆ ವಿಚಾರಣೆಗೆ ಗೈರಾಗದಂತೆ ಎಚ್ಚರಿಕೆ ನೀಡಿದ್ದರು.

     

  • ನಟಿ ಪೂಜಾ ಗಾಂಧಿಗೆ ರಿಲೀಫ್

    ನಟಿ ಪೂಜಾ ಗಾಂಧಿಗೆ ರಿಲೀಫ್

    ರಾಯಚೂರು: 2013ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ಭೀತಿ ಎದುರಿಸುತ್ತಿದ್ದ ನಟಿ ಪೂಜಾಗಾಂಧಿಗೆ ಕೋರ್ಟ್ ಜಾಮೀನು ನೀಡಿದೆ.

    ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಇಂದು ವಿಚಾರಣೆ ವೇಳೆ ನ್ಯಾಯಾಧೀಶರು ಪೂಜಾಗಾಂಧಿಯನ್ನು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದರು. ನ್ಯಾಯಾಲಯವು ಪೂಜಾಗಾಂಧಿಗೆ ಒಂದು ಲಕ್ಷ ರೂ. ಶ್ಯೂರಿಟಿ ಹಾಗೂ ಮುಂದಿನ ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಎಚ್ಚರಿಕೆ ನೀಡಿ ಷರತ್ತುಬದ್ಧ ಜಾಮೀನು ನೀಡಿದೆ. ಮುಂದಿನ ವಿಚಾರಣೆಯನ್ನ ನವೆಂಬರ್ 3 ಕ್ಕೆ ಮುಂದೂಡಿದೆ.

    ಕಸ್ಟಡಿಗೆ ಒಳಪಡಿಸಿದ ವೇಳೆ ಪೂಜಾಗಾಂಧಿ ಇಂದು ಮಧ್ಯಾಹ್ನ ಊಟ ಬಿಟ್ಟು ಚಾಕೋಲೇಟ್ ತಿಂದು ಹೊಟ್ಟೆ ತುಂಬಿಸಿಕೊಂಡರು.

    ಇದನ್ನೂ ಓದಿ: ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

  • ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ರಾಯಚೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನೆಲೆ ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ ಕಾಡುತ್ತಿದೆ.

    ರಾಯಚೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಪೂಜಾಗಾಂಧಿಗೆ ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಶಿಕ್ಷೆ ನೀಡಿದ್ದಾರೆ. ಕುಳಿತುಕೊಳ್ಳದಿದ್ದರೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಹೇಳಿದ್ದಾರೆ.

    ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ಸಿಗಬಹುದು ಇಲ್ಲಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

    ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು.

    ಈಗಾಗಲೇ ಒಂದು ಬಾರಿ ಜಾಮೀನನ್ನ ನ್ಯಾಯಾಲಯ ರದ್ದುಗೊಳಿಸಿದೆ. ಈ ಬಾರಿ 50 ಸಾವಿರ ರೂ. ದಂಡ, 2 ಲಕ್ಷ ಶ್ಯೂರಿಟಿಯೊಂದಿಗೆ ಜಾಮೀನು ನೀಡುವ ಸಾಧ್ಯತೆ ಇದೆ.

    ಕೋರ್ಟ್ ನಲ್ಲಿರುವ ಪೂಜಾ ಗಾಂಧಿಗೆ ಮಧ್ಯಾಹ್ನದ ಊಟ ಇಲ್ಲದ ಕಾರಣ ಚಾಕ್ಲೇಟ್ ತಿಂದಿದ್ದಾರೆ.