Tag: ಪೂಂಚ್

  • ಅಮಿತ್‌ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ

    ಅಮಿತ್‌ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪೂಂಚ್‌ನಲ್ಲಿ (Poonch) ಒಳನುಸುಳಲು ಪ್ರಯತ್ನಿಸುತ್ತಿದ್ದ ಶಂಕಿತ ಉಗ್ರರ ಮೇಲೆ ಭಾರತೀಯ ಸೇನೆ (Indian Army) ಗುಂಡಿನ ದಾಳಿ ನಡೆಸಿದೆ.

    ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಸೋಮವಾರ (ಸೆ.1) ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ ಬಳಿಯ ನಿಯಂತ್ರಣ ರೇಖೆಯಲ್ಲಿ (LOC) ಒಳನುಸುಳಲು ಪ್ರಯತ್ನಿಸುತ್ತಿದ್ದ ಶಂಕಿತ ಉಗ್ರರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಕಳೆದೊಂದು ತಿಂಗಳ ಅವಧಿಯಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ತೀವ್ರ ಹಾನಿಯಾಗಿದೆ. ಈ ಹಿನ್ನೆಲೆ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದೇ ವೇಳೆ ಉಗ್ರರು ಒಳನುಸುಳಲು ಪ್ರಯತ್ನಿಸಿರುವುದಾಗಿ ತಿಳಿದುಬಂದಿದೆ.

    ಸೋಮವಾರ ಬೆಳಿಗ್ಗೆ 5:30ರ ಸುಮಾರಿಗೆ ಬಾಲಕೋಟ್‌ನ ವೈಟ್ ನೈಟ್ ಕಾರ್ಪ್ಸ್‌ ಪಡೆಗಳು ಎಲ್‌ಒಸಿ ಬಳಿ ಅನುಮಾನಾಸ್ಪದ ಚಲನೆಯನ್ನು ಗಮನಿಸಿದರು. ತಕ್ಷಣವೇ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಎರಡು ಕಡೆಯಿಂದಲೂ ಗುಂಡಿನ ಚಕಮಕಿ ನಡೆದಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಇದಕ್ಕೂ ಮುನ್ನ ಭಾನುವಾರ (ಆ.31) ಪೂಂಚ್‌ನಲ್ಲಿ ಪೊಲೀಸರು ಇಬ್ಬರು ಶಸ್ತ್ರಸಹಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಹಿಮಾಚಲ ಪ್ರದೇಶಕ್ಕೆ ಮತ್ತೆ ರೆಡ್ ಅಲರ್ಟ್ – ಭಾರೀ ಮಳೆ, ಭೂಕುಸಿತ, ಹಠಾತ್ ಪ್ರವಾಹ ಸಾಧ್ಯತೆ

  • ಪಾಕ್‌ ಶೆಲ್‌ ದಾಳಿಗೆ ಒಳಗಾಗಿದ್ದ ಪೂಂಚ್‌ ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ

    ಪಾಕ್‌ ಶೆಲ್‌ ದಾಳಿಗೆ ಒಳಗಾಗಿದ್ದ ಪೂಂಚ್‌ ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ

    ಶ್ರೀನಗರ: ಪಾಕಿಸ್ತಾನದ ಶೆಲ್‌ ದಾಳಿಗೆ ಒಳಗಾಗಿದ್ದ ಪ್ರಮುಖ ಧಾರ್ಮಿಕ ಸ್ಥಳ ಪೂಂಚ್‌ (Poonch) ಜಿಲ್ಲೆಯ ಗುರುದ್ವಾರಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಶನಿವಾರ ಭೇಟಿ ನೀಡಿದ್ದಾರೆ.

    ಇಂದು ಸಂಜೆ ಜಮ್ಮು & ಕಾಶ್ಮೀರದ ಪೂಂಚ್‌ ಜಿಲ್ಲೆಯ ಗುರುದ್ವಾರ ಶ್ರೀ ಗುರು ಸಿಂಗ್‌ ಸಭಾಗೆ ರಾಹುಲ್‌ ಗಾಂಧಿ ಭೇಟಿಕೊಟ್ಟರು. ಭಾರತದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ವೇಳೆ ಭಾರತದ ಪ್ರಮುಖ ಧಾರ್ಮಿಕ ಸ್ಥಳವಾದ ಗುರುದ್ವಾರವನ್ನು ಟಾರ್ಗೆಟ್‌ ಮಾಡಿ ಪಾಕಿಸ್ತಾನ ಶೆಲ್‌ ದಾಳಿ ನಡೆಸಿತ್ತು. ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಪೂಂಚ್‌ನಲ್ಲಿ ಪಾಕಿಸ್ತಾನಿ ದಾಳಿಗೆ ಒಳಗಾಗಿದ್ದ ದೇವಾಲಯ, ಗುರುದ್ವಾರ ಮತ್ತು ಮದರಸಾಗಳಿಗೆ ಇಂದು ಭೇಟಿ ನೀಡಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಆ ಪ್ರದೇಶಕ್ಕೆ ಭೇಟಿ ನೀಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

    ಶನಿವಾರ ಬೆಳಗ್ಗೆ ಜಮ್ಮು ವಿಮಾನ ನಿಲ್ದಾಣಕ್ಕೆ ಬಂದು ಹೆಲಿಕಾಪ್ಟರ್‌ನಲ್ಲಿ ಪೂಂಚ್‌ಗೆ ತೆರಳಿದರು. ಪಾಕಿಸ್ತಾನಿ ಶೆಲ್ ದಾಳಿಯಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ದುಃಖತಪ್ತ ಕುಟುಂಬಗಳನ್ನು ಭೇಟಿ ಮಾಡಿದರು. ಮೇ 7 ರಂದು ಪೂಂಚ್ ಪಟ್ಟಣದಲ್ಲಿ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ತಮ್ಮ ಇಬ್ಬರು ಸ್ನೇಹಿತರಾದ ಜೈನ್ ಅಲಿ ಮತ್ತು ಉರ್ವಾ ಫಾತಿಮಾ ಅವರನ್ನು ಕಳೆದುಕೊಂಡ ಶಾಲಾ ವಿದ್ಯಾರ್ಥಿಗಳನ್ನು ಸಹ ಇದೇ ವೇಳೆ ಭೇಟಿಯಾದರು. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಮೇ 7 ಮತ್ತು 10 ರ ನಡುವೆ ಪಾಕಿಸ್ತಾನದ ಶೆಲ್ ದಾಳಿಯಿಂದ ಅತಿ ಹೆಚ್ಚು ಹಾನಿಗೊಳಗಾದ ಪೂಂಚ್ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಹದಿಮೂರು ನಾಗರಿಕರು ಸಾವನ್ನಪ್ಪಿದ್ದರು.

    ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ರಾಹುಲ್ ಗಾಂಧಿಯವರು ಕೇಂದ್ರಾಡಳಿತ ಪ್ರದೇಶಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 25 ರಂದು ಶ್ರೀನಗರಕ್ಕೆ ಭೇಟಿ ನೀಡಿ ಭಯೋತ್ಪಾದಕ ದಾಳಿಯ ಸಮಯದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದರು.

  • ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

    ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ (Poonch) ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಸೇನೆ ಭೇದಿಸಿದ್ದು, 5 ಜೀವಂತ ಬಾಂಬ್ ವಶಕ್ಕೆ ಪಡೆದಿದೆ. ಈ ಮೂಲಕ ಭಾರತೀಯ ಸೇನೆಯು (Indian Army) ಅತಿದೊಡ್ಡ ದುರಂತವನ್ನು ತಪ್ಪಿಸಿದೆ.

    ಭಾನುವಾರ ಸಂಜೆ ಪೂಂಚ್‌ನ ಸುರನ್‌ಕೋಟ್(Surankot) ಅರಣ್ಯದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರ ಅಡಗುತಾಣದಲ್ಲಿ 5 ಸ್ಫೋಟಕಗಳು, ಐಇಡಿಯಿದ್ದ 3 ಟಿಫನ್ ಬಾಕ್ಸ್, 2 ಸ್ಟೀಲ್ ಬಕೆಟ್ ಪತ್ತೆಯಾಗಿವೆ. ಇದನ್ನೂ ಓದಿ: ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ಭದ್ರತಾ ಪಡೆಯು ಅಡಗುತಾಣದಲ್ಲಿ ಪತ್ತೆಯಾದ ಸಂಹವನ ಉಪಕರಣವನ್ನು ವಶಕ್ಕೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಭಯೋತ್ಪಾದಕ ಕೇಂದ್ರಬಿಂದುವಾಗಿದೆ. ಇದನ್ನೂ ಓದಿ: ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಭಯೋತ್ಪಾದಕರ (Terrorists) ಈ ಅಡಗುತಾಣವನ್ನು ಪತ್ತೆ ಹಚ್ಚುವ ಮೂಲಕ ಸೇನೆಯು ಅತಿದೊಡ್ಡ ದುರಂತವನ್ನೇ ತಪ್ಪಿಸಿದೆ. ಅಲ್ಲದೇ ಪಹಲ್ಗಾಮ್ ದಾಳಿಯ(Pahalgam Attack) ಬಳಿಕ ಉಗ್ರರು ಜಮ್ಮು ಕಾಶ್ಮೀರದಲ್ಲಿ ಮತ್ತೆ ದಾಳಿಗೆ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

  • ಪಾಕ್ ಮೂಲದ ಭಯೋತ್ಪಾದಕರ 1.8 ಎಕ್ರೆ ಜಾಗ ಮುಟ್ಟುಗೋಲು

    ಪಾಕ್ ಮೂಲದ ಭಯೋತ್ಪಾದಕರ 1.8 ಎಕ್ರೆ ಜಾಗ ಮುಟ್ಟುಗೋಲು

    ಶ್ರೀನಗರ: ಪಾಕಿಸ್ತಾನ (Pakistan) ಮೂಲದ ಮೂವರು ಭಯೋತ್ಪಾದಕರಿಗೆ ಸೇರಿದ 28 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಒಟ್ಟು 1.8 ಎಕ್ರೆ ಭೂಮಿಯನ್ನು ಪೂಂಚ್ (Poonch) ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪೂಂಚ್ ಜಿಲ್ಲೆಯ ಕಿರ್ನಿ ಗ್ರಾಮದ ನಜಾಬ್ ದಿನ್, ಮೊಹಮ್ಮದ್ ಲತೀಫ್ ಮತ್ತು ಕಸ್ಬಾದ ಮೊಹಮ್ಮದ್ ಬಶೀರ್ ಅಲಿಯಾಸ್ ಟಿಕ್ಕಾ ಖಾನ್‌ಗೆ ಈ ಭೂಮಿ ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೊಯ್ಲಿ ಹೇಳಿಕೆಗೆ ಕಾಂಗ್ರೆಸ್ ಸಚಿವರ ರಕ್ಷಣಾತ್ಮಕ ಹೇಳಿಕೆ – ಹೈಕಮಾಂಡ್ ಕ್ರಮ ಕೈಗೊಳ್ಳುತ್ತೆ: ಎಂಬಿಪಿ, ಲಾಡ್

    ಈ ಮೂವರು ಭಯೋತ್ಪಾದಕರು ಪಾಕಿಸ್ತಾನಕ್ಕೆ ಪಲಾಯನಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ, ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕಾರ್ಯದಲ್ಲಿ ಮೂವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: ಚಿತ್ರರಂಗ ಗೋಕಾಕ್ ಚಳವಳಿ ಮಾಡಿ ಸರ್ಕಾರವನ್ನೇ ಬೀಳಿಸಿತ್ತು: ಸಾರಾ ಗೋವಿಂದು ಎಚ್ಚರಿಕೆ

    ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಭಯೋತ್ಪಾದಕರ ಜಾಗವನ್ನು ಜಪ್ತಿ ಮಾಡಿದ್ದಾರೆ ಎಂದು ಪೂಂಚ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಫ್ಕೇತ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ನಾವು ಫಿಲ್ಟರ್ ಮಾಡ್ತಿಲ್ಲ, ಎಲ್ಲರಿಗೂ ಹಣ ಸಿಗುತ್ತೆ: ಲಕ್ಷ್ಮಿ ಹೆಬ್ಬಾಳ್ಕರ್

  • ಪೂಂಚ್‌ನಲ್ಲಿ ದುರಂತ – 300 ಅಡಿಯ ಆಳದ ಕಣಿವೆಗೆ ಬಿದ್ದ ಸೇನಾ ವಾಹನ, 5 ಮಂದಿ ಬಲಿ

    ಪೂಂಚ್‌ನಲ್ಲಿ ದುರಂತ – 300 ಅಡಿಯ ಆಳದ ಕಣಿವೆಗೆ ಬಿದ್ದ ಸೇನಾ ವಾಹನ, 5 ಮಂದಿ ಬಲಿ

    ಶ್ರೀನಗರ: 18 ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ (Army Vehicle) 300 ಅಡಿ ಆಳದ ಕಣಿವೆಗೆ ಉರುಳಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಚ್ ಜಿಲ್ಲೆಯ ಬಲ್ನೋಯಿ ಪ್ರದೇಶದಲ್ಲಿ ನಡೆದಿದೆ.

    ಮೆಂಧಾರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಡೆದ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಸದ್ಯ 5 ಮಂದಿ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರ ಪೈಕಿ ಹಲವು ಸೈನಿಕರ ಸ್ಥಿತಿ ಗಂಭೀರವಾಗಿದ್ದು ಸಾವು, ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹೊಸ ಧಾರ್ಮಿಕ ವಿವಾದ ಕೆದಕಬೇಡಿ ಎಂದಿದ್ದಕ್ಕೆ ಸಿಟ್ಟು – ಭಾಗವತ್ ವಿರುದ್ಧ ಸ್ವಾಮೀಜಿಗಳ ಆಕ್ರೋಶ

    ಜಮ್ಮು ಮತ್ತು ಕಾಶ್ಮೀರದಲ್ಲಿನ ಕಡಿದಾದ, ಪರ್ವತಮಯ ಭೂಪ್ರದೇಶದ ಕಾರಣದಿಂದಾಗಿ ಕಾರುಗಳು ಮತ್ತು ಇತರ ವಾಹನಗಳು ಕಣಿವೆ ಉರುಳುವುದು ಸಾಮಾನ್ಯ. ಆದರೆ ಇಂದು ನಡೆದ  ಘಟನೆಗೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

  • ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ಶ್ರೀನಗರ: ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (IAF) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ (Indian Army) ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸೇನೆಯು ಹೆಲಿಕಾಪ್ಟರ್ ಬಳಸಿ ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈಮಾನಿಕ ಕಣ್ಗಾವಲು ಕೂಡ ನಡೆಸಿದೆ. ಸ್ಥಳಕ್ಕೆ ಸೇನೆಯ ಅಧಿಕಾರಿಗಳು, ಗುಪ್ತಚರ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ

    ಶಹಸಿತಾರ್ ಬಳಿ ಶನಿವಾರ ಸಂಜೆ ನಡೆದ ದಾಳಿಯಲ್ಲಿ ಐವರು ಐಎಎಫ್ ಸಿಬ್ಬಂದಿ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದರು. ದಾಳಿ ನಡೆದ ಬಳಿಕ ಉಗ್ರರು ಸಮೀಪದ ಅರಣ್ಯಕ್ಕೆ ಪರಾರಿಯಾಗಿದ್ದರು. ದಾಳಿಗೆ ಉಗ್ರರು ಎಕೆ ಅಸಾಲ್ಟ್ ರೈಫಲ್, ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಮತ್ತು ಸ್ಟೀಲ್ ಬುಲೆಟ್‍ಗಳನ್ನು ಬಳಸಿದ್ದಾರೆ. ಉಗ್ರರಿಗಾಗಿ ಸೇನೆ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2003 ಮತ್ತು 2021ರ ನಡುವೆ ಈ ಭಾಗದಲ್ಲಿ ಯಾವುದೇ ಭಯೋತ್ಪಾದನಾ ದಾಳಿಗಳಿಲ್ಲದೆ ಶಾಂತಿ ನೆಲೆಸಿತ್ತು. ಕಳೆದ ವರ್ಷ ಇದೇ ಭಾಗದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆದಿತ್ತು. ಇದನ್ನೂ ಓದಿ: ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

  • ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ –  ಓರ್ವ ಯೋಧ ಹುತಾತ್ಮ

    ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ (Poonch) ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

    ಘಟನೆಯಲ್ಲಿ ಐವರು IAF ಅಧಿಕಾರಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಧಂಪುರದ ಕಮಾಂಡ್ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ರವಾನೆ ಮಾಡಲಾಗಿದೆ. ಮೂಲಗಳ ಪ್ರಕಾರ, ಉಗ್ರರು ಸುಮಾರು 30 ಸುತ್ತು ಗುಂಡು ಹಾರಿಸಿದ್ದಾರೆ. ದಾಳಿ ನಡೆಸಿದ ಬಳಿಕ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಿಡ್ನಾಪ್‌ ಕೇಸಲ್ಲಿ ಹೆಚ್‌.ಡಿ ರೇವಣ್ಣ ಅರೆಸ್ಟ್

    ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶಾಸಿತಾರ್ ಬಳಿಯ ಜನರಲ್ ಏರಿಯಾದಲ್ಲಿರುವ ವಾಯುನೆಲೆಯೊಳಗೆ ವಾಹನಗಳಿಗೆ ಭದ್ರತೆ ಒದಗಿಸಲಾಗಿದೆ. ಸೇನಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಓರ್ವ ಹುತಾತ್ಮ: ಗಾಯಗೊಂಡ ಸೈನಿಕರ ಪೈಕಿ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಯೋಧನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮುಂದುವರಿದ ಚಿಕಿತ್ಸೆ. ಉಳಿದ ಮೂವರು ಯೋಧರ ಆರೋಗ್ಯದಲ್ಲಿ ಸ್ಥಿರವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

     

  • ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಸೋಮವಾರ ಭದ್ರತಾ ಪಡೆಗಳು ಗಡಿಯಾಚೆಯಿಂದ ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು (Terrorist) ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೆಗ್ವಾರ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಕೆಲ ಭಯೋತ್ಪಾದಕರ ಚಲನವಲನಗಳನ್ನು ಗಮನಿಸಿದ್ದು, ಬಳಿಕ ಒಳನುಸುಳಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಆದರೆ ಆತನ ಮೃತದೇಹವನ್ನು ಇನ್ನೂ ಪಡೆಯಲಾಗಿಲ್ಲ ಎಂದು ಹೇಳಿದ್ದಾರೆ.

    ಸೋಮವಾರ ಮುಂಜಾನೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೂಂಚ್‌ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇಬ್ಬರು ಭಯೋತ್ಪಾದಕರು ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದು, ಅದರಲ್ಲಿ ಒಬ್ಬನನ್ನು ಕೊಲ್ಲಲಾಗಿದೆ. ಇನ್ನೊಬ್ಬ ಭಯೋತ್ಪಾದಕ ಹಿಂದಕ್ಕೆ ಓಡಲು ಪ್ರಯತ್ನಿಸಿದ್ದಾನೆ. ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಜಮ್ಮುವಿನ ಪಿಆರ್‌ಒ (ರಕ್ಷಣಾ) ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಸೊಂಟಕ್ಕೆ ಪೆಟ್ಟು- ವೃಕ್ಷ ಮಾತೆ ಆಸ್ಪತ್ರೆಗೆ ದಾಖಲು

    ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಇಡೀ ಪ್ರದೇಶದಲ್ಲಿ ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಾರೀ ಶೋಧ ನಡೆಯುತ್ತಿದೆ. ಇದನ್ನೂ ಓದಿ: ಇಂದು ಮಹತ್ವದ ಕಾವೇರಿ ನೀರಾವರಿ ಸಲಹಾ ಸಭೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ

    ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ.

    ಭಯೋತ್ಪಾದಕ ನಿಗ್ರಹದಳವನ್ನು ಬಲಪಡಿಸಲು ಅಲ್ಲಿನ ಪೊಲೀಸ್ ಪಡೆಗೆ (ಜೆಕೆಪಿ) 600 ಕ್ಕೂ ಹೆಚ್ಚು ಪೊಲೀಸರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ 42 ಹೊಸ ಗಡಿ ಭದ್ರತಾ ಪೊಲೀಸರನ್ನು ನಿಯೋಜನೆಗೆ ಮುಂದಾಗಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

    ಇತ್ತೀಚೆಗೆ ಪೂಂಚ್ (Poonch) ಹಾಗೂ ರಜೌರಿಯಲ್ಲಿ (Rajouri) ಸೇನಾ ವಾಹನದ ಮೇಲೆ ಉಗ್ರರು ದಾಳಿನಡೆಸಿ ಐವರು ಯೋಧರನ್ನು ಕೊಂದಿದ್ದರು. ಈ ಪ್ರಕರಣದ ಬೆನ್ನು ಹತ್ತಿರುವ ಸೇನೆ (Indian Army) ಸ್ಥಳೀಯರು ಉಗ್ರರಿಗೆ ಸಹಕರಿಸಿರುವ ಆರೋಪ ಮಾಡಿದೆ. ಅಲ್ಲದೆ ದಾಳಿ ನಡೆಸಿರುವ ಭಯೋತ್ಪಾದಕರು ಅಡಗಿದ್ದ ಸ್ಥಳದಲ್ಲಿ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಸ್ಫೋಟಕ್ಕೆ ಐವರು ಯೋಧರು ಬಲಿಯಾಗಿದ್ದರು. ಈ ವೇಳೆ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿತ್ತು. ಇದನ್ನೂ ಓದಿ: ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

  • ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಐವರು ಯೋಧರು ಸಾವು

    ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಐವರು ಯೋಧರು ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ (Rajouri) ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಐವರು ಯೋಧರು (Soldiers) ಸಾವನ್ನಪ್ಪಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಸೇನೆಯ (Indian Army) ವಾಹನದ ಮೇಲೆ ದಾಳಿ ನಡೆಸಿ ಐವರು ಯೋಧರ ಸಾವಿಗೆ ಕಾರಣರಾಗಿದ್ದ ಉಗ್ರರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಉಗ್ರರು ಸ್ಫೋಟಕಗಳನ್ನು ಸಿಡಿಸಿದ್ದಾರೆ. ಪರಿಣಾಮ ಐವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ (Udhampur) ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ

    ರಾಜೌರಿ ಜಿಲ್ಲೆಯ ಕಂಡಿ ಪ್ರದೇಶದ ಕೇಸ್ರಿ ಹಿಲ್‍ನ ಗುಹೆಯೊಂದರಲ್ಲಿ ಭಯೋತ್ಪಾದಕರ ತಂಡ ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ದಾಳಿ ಆರಂಭಿಸಿದೆ. ಮುನ್ನೆಚ್ಚರಿಕೆಯಾಗಿ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳನ್ನು ರವಾನಿಸಲಾಗಿದೆ. ಉಗ್ರರ ಪಡೆಯಲ್ಲಿ ಸಾವು ನೋವಿನ ವರದಿಯಾಗಿಲ್ಲ. ಸೇನೆ ಉಗ್ರರ ನೆಲೆಯನ್ನು ಸುತ್ತುವರಿದಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏ.20 ರಂದು ಪೂಂಚ್ ಜಿಲ್ಲೆಯ ಭಾಟಾ ಧುರಿಯನ್‍ನಲ್ಲಿ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಉಗ್ರರು ಸೈನಿಕರ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದರು. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ