Tag: ಪುಷ್ಪ 2

  • ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅನಿಮಲ್, ಪುಷ್ಪ 2, ಛಾವಾ ಈ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಇದರ ನಡುವೆ ನಟಿಯ ಬರ್ತ್‌ಡೇ ಆಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹುಟ್ಟುಹಬ್ಬದ ಬಗ್ಗೆ ಉತ್ಸುಕರಾಗಿರೋ ನಟಿ, ಇದೀಗ ನನಗೆ 29 ವರ್ಷ ಆಗ್ತಿದೆ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ನನ್ನ ಹುಟ್ಟುಹಬ್ಬದ ತಿಂಗಳು ಬಂದಿದೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್‌ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದನ್ನು ಆಚರಿಸುವ ಸಮಯ ಎಂದು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ನಟಿಗೆ ಬರ್ತ್‌ಡೇ (Birthday) ವಿಶ್ಸ್ ತಿಳಿಸಲು ಪ್ರಾರಂಭಿಸಿದ್ದಾರೆ.

    ಅಂದಹಾಗೆ, ಇದೇ ಏ.5ರಂದು ರಶ್ಮಿಕಾ ಮಂದಣ್ಣ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಈಗಿನಿಂದಲೇ ಅಭಿಮಾನಿಗಳ ಕಡೆಯಿಂದ ನಟಿಯ ಬರ್ತ್‌ಡೇ ಸೆಲೆಬ್ರೇಶನ್‌ಗೆ ಜೋರಾಗಿ ತಯಾರಿ ನಡೆಯುತ್ತಿದೆ.

  • ರಶ್ಮಿಕಾ ಮಂದಣ್ಣ ಅದ್ಭುತ ನಟಿ: ಹೊಗಳಿದ ಸಲ್ಮಾನ್ ಖಾನ್

    ರಶ್ಮಿಕಾ ಮಂದಣ್ಣ ಅದ್ಭುತ ನಟಿ: ಹೊಗಳಿದ ಸಲ್ಮಾನ್ ಖಾನ್

    ಬಾಲಿವುಡ್ ನಟ ಸಲ್ಮಾನ್ ಖಾನ್ ‘ಸಿಕಂದರ್’ (Sikandar) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಮೀರ್ ಖಾನ್ (Aamir Khan), ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಸಲ್ಮಾನ್ (Salman Khan) ಭಾಗಿಯಾಗಿದ್ದಾರೆ. ಈ ವೇಳೆ, ರಶ್ಮಿಕಾ ಮಂದಣ್ಣ ಶ್ರಮ ಜೀವಿ, ಅದ್ಭುತ ನಟಿ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಎಲ್ಲವೂ ದೇವರಿಗೆ ಬಿಟ್ಟಿದ್ದು: ಕೊನೆಗೂ ಲಾರೆನ್ಸ್‌ ಬಿಷ್ಣೋಯ್‌ ಬೆದರಿಕೆ ಬಗ್ಗೆ ಸಲ್ಮಾನ್‌ ಮಾತು

    ಸಂದರ್ಶನದಲ್ಲಿ ಸಲ್ಮಾನ್‌ ಮಾತನಾಡಿ, ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಾರ್ಡ್ ವರ್ಕರ್, ಆಕೆ ಅದ್ಭುತ ನಟಿ. ನಾವು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದಾಗ, ಅವರು ಬೆಳಿಗ್ಗೆ 6 ಗಂಟೆಗೆ ಸಿದ್ಧರಾಗಿ ‘ಪುಷ್ಪ 2’ (Pushpa 2) ಚಿತ್ರೀಕರಣದಲ್ಲಿ ಇರುತ್ತಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದ ನಂತರ, ಅವರು ನಮ್ಮೊಂದಿಗೆ ಶೂಟಿಂಗ್‌ಗೆ ಬರುತ್ತಿದ್ದರು. ಅವರಿಗೆ ಜ್ವರ ಬಂದಾಗಲೂ, ನಟಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದರು. ಇನ್ನೂ ಅವರು ಒಂದು ಸೆಟ್‌ನಿಂದ ಮತ್ತೊಂದು ಸೆಟ್‌ಗೆ ಹೋಗುವ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ:ಶೃತಿ ನಾರಾಯಣನ್ ಕಾಸ್ಟಿಂಗ್ ಕೌಚ್ ವೀಡಿಯೋ ಲೀಕ್- ಇನ್ಸ್ಟಾ ಖಾತೆ ಪ್ರೈವೇಟ್ ಮಾಡಿದ ನಟಿ

    ಅವರನ್ನು ನೋಡಿದಾಗ ನನಗೆ ನನ್ನ ಹಳೆಯ ದಿನಗಳು ನೆನಪಾಗುತ್ತಿದ್ದವು. 25 ವರ್ಷಗಳ ಹಿಂದೆ, ಆಮಿರ್ ಖಾನ್, ನಾನು ಮತ್ತು ಇನ್ನೂ ಅನೇಕರು 2ರಿಂದ 3 ಶಿಫ್ಟ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆವು. ರಶ್ಮಿಕಾ ಈಗ ದಿನಕ್ಕೆ ಎರಡರಿಂದ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಸಲ್ಮಾನ್ ಖಾನ್ ತಮ್ಮ ಕೆರಿಯರ್‌ನ ಆರಂಭಿಕ ದಿನಗಳನ್ನು ಸ್ಮರಿಸಿದರು.

    ಇನ್ನೂ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ನಟನೆಯ ‘ಸಿಕಂದರ್’ ಸಿನಿಮಾ ಇದೇ ಮಾ.30ರಂದು ರಿಲೀಸ್ ಆಗಲಿದೆ. ಲಕ್ಕಿ ನಟಿ ರಶ್ಮಿಕಾರಿಂದ ಸಲ್ಮಾನ್ ಕೆರಿಯರ್‌ಗೆ ಬ್ರೇಕ್ ಸಿಗುತ್ತಾ? ಮತ್ತೆ ಹಿಟ್ ನೀಡ್ತಾರಾ ಎಂದು ಕಾದುನೋಡಬೇಕಿದೆ.

  • ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ

    ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ

    ನ್ನಡದ ನಟಿ ಶ್ರೀಲೀಲಾ (Sreeleela) ಬಾಲಿವುಡ್‌ನಲ್ಲಿ (Bollywood) ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ‘ಪುಷ್ಪ 2’ ಖ್ಯಾತಿಯ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. 2025ರಲ್ಲಿ ನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. ಇದನ್ನೂ ಓದಿ:ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ಶ್ರೀಲೀಲಾ ನಟಿಸುತ್ತಿರುವ ಸಿನಿಮಾಗಳು ಗೆಲುತ್ತಿಲ್ಲ. ಹಾಗಂತ ಅವರಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಅಲ್ಲು ಅರ್ಜುನ್‌ ಜೊತೆ ‘ಕಿಸ್ಸಿಕ್‌’ ಹಾಡಿಗೆ ಹೆಜ್ಜೆ ಹಾಕಿದ್ಮೇಲೆ ಶ್ರೀಲೀಲಾ ಮೇಲಿನ ಕ್ರೇಜ್‌ ಹೆಚ್ಚಾಗಿದೆ. ಹಾಗಾಗಿ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅನುರಾಗ್ ಬಸು ನಿರ್ದೇಶನದಲ್ಲಿ ಕಾರ್ತಿಕ್ ಆರ್ಯನ್‌ಗೆ (Karthika Aryan) ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ತಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಕುರಿತಾದ ಸಿನಿಮಾ ಆಗಿದೆ.

    ಇನ್ನೂ ಕನ್ನಡದ ‘ಜ್ಯೂನಿಯರ್’ (Junior) ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಗೆ ಶ್ರೀಲೀಲಾ ಜೋಡಿಯಾಗಿದ್ದಾರೆ.

    ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ (Ibrahim Ali Khan) ಜೋಡಿಯಾಗಿ ಅವರು ಕಾಣಿಸಿಕೊಳ್ತಿದ್ದಾರೆ. ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ. ಸಿನಿಮಾದ ವರ್ಕ್ ಶಾಪ್‌ಗೆ ಭಾಗಿಯಾಗುತ್ತಿದ್ದಾರೆ. ಜೊತೆಗೆ ಪಾತ್ರಕ್ಕಾಗಿ ತಯಾರಿ ನಡೆಯುತ್ತಿದೆ. ಇದರೊಂದಿಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಶ್ರೀಲೀಲಾರನ್ನು ಸಂಪರ್ಕಿಸಿ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದೆ.

    ಇನ್ನೂ ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದಲ್ಲಿ ಅವರು ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್‌ಗೆ (Sivakarthikeyan) ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ.

    ಇನ್ನೂ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿಯೂ ನಟಿಗೆ ಉತ್ತಮ ಪಾತ್ರ ಸಿಕ್ಕಿದೆ.

    ‘ರಾಬಿನ್‌ಹುಡ್’ ಚಿತ್ರದಲ್ಲಿ ನಿತಿನ್‌ಗೆ (Nithin) 2ನೇ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಾ.28ರಂದು ರಿಲೀಸ್ ಆಗಲಿದೆ. ರವಿತೇಜ ಜೊತೆ ಮತ್ತೊಂದು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ.

  • ‘ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ

    ‘ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ

    ‘ಪುಷ್ಪ’, ‘ಪುಷ್ಪ 2’ (Pushpa 2) ಸಿನಿಮಾಗಳ ಸಕ್ಸಸ್ ಬಳಿಕ ಬಾಲಿವುಡ್‌ನ ಸ್ಟಾರ್ ನಟನಿಗೆ ನಿರ್ದೇಶನ ಮಾಡಲು ಸುಕುಮಾರ್ (Sukumar) ಸಜ್ಜಾಗಿದ್ದಾರೆ. ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್‌ಗೆ (Sharukh Khan) ಸುಕುಮಾರ್ ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

    ಗ್ರಾಮೀಣ ಭಾಗದ ರಾಜಕೀಯ ಕುರಿತಾದ ಕಥೆಯನ್ನು ಶಾರುಖ್ ಮೂಲಕ ತೋರಿಸಲು ಸುಕುಮಾರ್ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಕಿಂಗ್ ಖಾನ್ ಶಾರುಖ್ ಕೂಡ ಕಥೆ ಇಷ್ಟವಾಗಿ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಪುಸ್ತಕ ರೂಪದಲ್ಲಿ ಪುನೀತ್‌ ರಾಜ್‌ಕುಮಾರ್ ಜೀವನಗಾಥೆ- ‘ಅಪ್ಪು’ ಜೀವನ ಚರಿತ್ರೆ ಬರೆದ ಅಶ್ವಿನಿ

    ಇನ್ನೂ ಮಗಳು ಸುಹಾನಾರನ್ನು ಅದ್ಧೂರಿಯಾಗಿ ಲಾಂಚ್ ಮಾಡಬೇಕೆಂದಿದ್ದಾರೆ. ಅದಕ್ಕಾಗಿ ‘ಕಿಂಗ್’ ಸಿನಿಮಾದಲ್ಲಿ ಮಗಳೊಂದಿಗೆ ಶಾರುಖ್ ಕೂಡ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಆ ನಂತರ ‘ಪಠಾಣ್ 2’ ಮತ್ತು ಸುಕುಮಾರ್ ಜೊತೆಗಿನ ಸಿನಿಮಾದತ್ತ ಗಮನ ಕೊಡಲಿದ್ದಾರೆ.

    ಸುಕುಮಾರ್ ಅವರು ರಾಮ್ ಚರಣ್ ಜೊತೆಗಿನ ಸಿನಿಮಾ ಹಾಗೂ ‘ಪುಷ್ಪ ಪಾರ್ಟ್ 3’ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ನಂತರ ಶಾರುಖ್ ಜೊತೆ ಕೈಜೋಡಿಸಲಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಗೆದ್ದು ಬೀಗಿದ ಹಾಗೇ ಬಾಲಿವುಡ್‌ನಲ್ಲೂ ಸದ್ದು ಮಾಡ್ತಾರಾ? ಸುಕುಮಾರ್‌ ಎಂದು ಕಾದುನೋಡಬೇಕಿದೆ.

  • ಫ್ಯಾನ್ಸ್‌ಗೆ ಸಿಹಿಸುದ್ದಿ-‌ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 3’ ಬಗ್ಗೆ ಸಿಕ್ತು ಬಿಗ್‌ ನ್ಯೂಸ್

    ಫ್ಯಾನ್ಸ್‌ಗೆ ಸಿಹಿಸುದ್ದಿ-‌ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 3’ ಬಗ್ಗೆ ಸಿಕ್ತು ಬಿಗ್‌ ನ್ಯೂಸ್

    ಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಭರ್ಜರಿ ಸಕ್ಸಸ್ ಕಂಡಿದೆ. ಇದರ ಮೂರನೇ ಪಾರ್ಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ‘ಪುಷ್ಪ 3’ ಬರುವ ಬಗ್ಗೆ ನಿರ್ಮಾಪಕ ರವಿ ಶಂಕರ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

    ‘ಪುಷ್ಪ 2’ನಲ್ಲಿ ರಕ್ತಚಂದನ ಕಳ್ಳಸಾಗಣೆಯಲ್ಲಿ ದೊಡ್ಡ ಡಾನ್ ಆಗಿ ಪುಷ್ಪರಾಜ್ ಬೆಳೆದಿದ್ದಾರೆ. ಶ್ರೀವಲ್ಲಿಗಾಗಿ ಸಿಎಂ ಅನ್ನೇ ಬದಲಿಸುವಷ್ಟು ಹಣ, ತಾಕತ್ತು ಪುಷ್ಪರಾಜ್‌ಗೆ ಇದೆ. ವಿಲನ್‌ಗೂ ಪುಷ್ಪರಾಜ್‌ಗೂ ನಡುವಿನ ಜಿದ್ದಾಜಿದ್ದಿಯಲ್ಲಿ 3ನೇ ಭಾಗ ಬರುವ ಬಗ್ಗೆ ಚಿತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿರುವಾಗ ‘ಪುಷ್ಪ 3’ ಚಿತ್ರವು 2028ರಲ್ಲಿ ನಿರೀಕ್ಷಿಸಬಹುದು ಎಂದು ನಿರ್ಮಾಪಕ ತಿಳಿಸಿದ್ದಾರೆ.

    ಸದ್ಯ ಅಲ್ಲು ಅರ್ಜುನ್ (Allu Arjun) ಅವರು ಅಟ್ಲಿ ಹಾಗೂ ತ್ರಿವಿಕ್ರಮ್ ಜೊತೆ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಈ ಎರಡು ಚಿತ್ರಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಇದರ ಬಳಿಕವೇ ‘ಪುಷ್ಪ 3’ ಅನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಇತ್ತ ಡೈರೆಕ್ಟರ್ ಸುಕುಮಾರ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಕೂಡ ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಮುಂದಿನ 3 ವರ್ಷಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ. 2028ರ ವೇಳೆಗೆ ಚಿತ್ರ ರಿಲೀಸ್ ಆಗಲಿದೆ ಎಂದು ರವಿ ಶಂಕರ್ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿದ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಇನ್ನೂ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದರು. ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದರು. ಪಾರ್ಟ್ 3ರಲ್ಲೂ ಫಹಾದ್ ಹವಾ ಮುಂದುವರೆಯಲಿದೆ.

  • ರಶ್ಮಿಕಾ ಮಂದಣ್ಣಗೆ ಟೀಕೆ- ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ರಶ್ಮಿಕಾ ಮಂದಣ್ಣಗೆ ಟೀಕೆ- ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಟಿ ರಶ್ಮಿಕಾ ಮಂದಣ್ಣಗೆ ಶಾಸಕ ರವಿ ಗಣಿಗ (Ravi Ganiga) ಟೀಕಿಸಿದ್ದರ ಹಿನ್ನೆಲೆ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಭಯ ಹುಟ್ಟಿಸಲಾಗಿದೆ ಎಂದು ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ಕೊಡವ ಸಂಘಟನೆಯಿಂದ (Kodava Organization) ಪತ್ರ ಬರೆಯಲಾಗಿದೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್

    ಮತ್ತೆ ರಶ್ಮಿಕಾ ವಿರುದ್ಧ ರವಿ ಗಣಿಗ ನಾಲಿಗೆ ಹರಿಬಿಟ್ಟಿದ್ದಕ್ಕೆ ಕೊಡವ ಸಂಘಟನೆ ನಟಿಯ ಬೆನ್ನಿಗೆ ನಿಂತಿದೆ. ರಶ್ಮಿಕಾ ಅವರನ್ನು ಬೆದರಿಸಿ ಭಯ ಹುಟ್ಟಿಸಲಾಗಿದೆ. ಅವರು ಅತಿಸೂಕ್ಷ್ಮ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರನ್ನು ಬೆದರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಹಾಗಾಗಿ ಶಾಸಕನ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ನಾಚಪ್ಪ ಆಗ್ರಹಿಸಿದ್ದಾರೆ.

    ಇತ್ತೀಚೆಗೆ ಚಿತ್ಸೋತ್ಸವಕ್ಕೆ ಕರೆದರೆ ರಶ್ಮಿಕಾ ಟೈಮ್ ಇಲ್ಲ ಅಂತಾರೆ ಎಂದು ನಟಿಯ ವಿರುದ್ಧ ರವಿ ಗಣಿಗ ಕೆಂಡಕಾರಿದ್ದರು. ಈ ಬೆನ್ನಲ್ಲೇ ನಟಿಗೆ ಭದ್ರತೆ ಬೇಕು ಅಂತ ಕೊಡವ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ರವಿ ಗಣಿಗ ಮತ್ತೆ ಪತ್ರಿಕ್ರಿಯೆ ನೀಡಿದ್ದರು. ಇನ್ನೂ ಪ್ರಚಾರಕೋಸ್ಕರ ನಾಚಪ್ಪ ಪತ್ರ ಬರೆದಿರಬಹುದು. ಅದಕ್ಕೆ ಜಾಸ್ತಿ ಮನ್ನಣೆ ಕೊಡೋ ಅವಶ್ಯಕತೆಯಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕ ಹೇಳಿಕೆ ನೀಡಿದ್ದರು.

    ಆವತ್ತು ನಾನು ಆಡಿದ ಮಾತಿಗೆ ಈಗಲೂ ಬದ್ಧನಿದ್ದೇನೆ. ನಮ್ಮ ಜಲ, ನಮ್ಮ ಭಾಷೆ, ನಮ್ಮ ರಾಜ್ಯವೇ ಮುಖ್ಯ. ನಮ್ಮ ವೈಯಕ್ತಿಕ ಹಿತಾಸ್ತಕಿ ಅಲ್ಲ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಾಗ ಅವರು ನಿರಾಕರಿಸಿದ್ದು, ಹಲವಾರು ವೇದಿಕೆಯಲ್ಲಿ ಕನ್ನಡ ಮತ್ತು ಕರ್ನಾಟಕವನ್ನು ಅವಮಾನಕಾರಿಯಾಗಿ ರಶ್ಮಿಕಾ ಮಾತನಾಡಿರೋದು ಇಂದಿಗೂ ಖಂಡಿಸುತ್ತೇನೆ. ಇವತ್ತಿಗೂ ಕರ್ನಾಟಕದ ಪರ ನಾನಿದ್ದೇನೆ ಅಂತ ಹೇಳಲಿ, ಆ ಬಗ್ಗೆ ನಾನು ತುಟಿಕ್ ಪುಟಿಕ್ ಎನ್ನಲ್ಲ ಎಂದಿದ್ದರು. ಹಾಗಾಗಿ ಈ ಹೇಳಿಕೆಯ ಬೆನ್ನಲ್ಲೇ ರವಿ ಗಣಿಗ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

  • ಸತತ 3 ಸಿನಿಮಾ, 500 ಕೋಟಿ ಕಲೆಕ್ಷನ್: ಯಾರು ಮಾಡಿರದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

    ಸತತ 3 ಸಿನಿಮಾ, 500 ಕೋಟಿ ಕಲೆಕ್ಷನ್: ಯಾರು ಮಾಡಿರದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸಕ್ಸಸ್‌ನಿಂದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ:ಈಗಲೂ ರಶ್ಮಿಕಾ ಕರ್ನಾಟಕದ ಪರ ಇದ್ದೀನಿ ಅಂದ್ರೆ ನಾನು ತುಟಿ ಬಿಚ್ಚಲ್ಲ: ಶಾಸಕ ರವಿ ಗಣಿಗ ಕಿಡಿ

    ರಶ್ಮಿಕಾ ಮಂದಣ್ಣ ಹೀರೋಗಳ ಪಾಲಿಗೆ ಲಕ್ಕಿ ನಟಿ ಎಂಬುದು ಮತ್ತೆ ಪ್ರೂವ್ ಆಗಿದೆ. ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಆ ಚಿತ್ರ ಹಿಟ್ ಎಂದೇ ಅರ್ಥ. ಇದೀಗ ಅವರು ನಟಿಸಿರುವ ಸತತ 3 ಸಿನಿಮಾಗಳು 500 ಕೋಟಿ ರೂ. ಕ್ಲಬ್ ಮಾಡಿದೆ. ಬ್ಯಾಕ್‌ ಟು ಬ್ಯಾಕ್‌ 3 ಸಿನಿಮಾಗಳ ಹಿಟ್‌ ಮೂಲಕ ಸಕ್ಸಸ್‌ಫುಲ್‌ ನಟಿಯಾಗಿದ್ದಾರೆ.

    ಹಿಂದಿ ವರ್ಷನ್‌ನಲ್ಲಿ ರಣ್‌ಬೀರ್ ಕಪೂರ್ ಜೊತೆಗಿನ ‘ಅನಿಮಲ್’ (Animal) 556.36 ಕೋಟಿ ರೂ, ಅಲ್ಲು ಅರ್ಜುನ್ ಜೊತೆಗಿನ ‘ಪುಷ್ಪ 2’ (Pushpa 2) 830 ಕೋಟಿ ರೂ, ವಿಕ್ಕಿ ಕೌಶಲ್ ಜೊತೆಗಿನ ‘ಛಾವಾ’ (Chhaava) 516 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದುವರೆಗೂ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ರಶ್ಮಿಕಾ ಮಾಡಿದ್ದಾರೆ.

    ಅಂದಹಾಗೆ, ‌’ದಿ ಗರ್ಲ್‌ಫ್ರೆಂಡ್’, ‘ಸಿಕಂದರ್’, ‘ರೈನ್‌ಬೋ’, ‘ಪುಷ್ಪ 3’ ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

  • ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಸಿಕ್ತು ಬಿಗ್ ನ್ಯೂಸ್

    ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಸಿಕ್ತು ಬಿಗ್ ನ್ಯೂಸ್

    ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹೀರೋಗಳ ಪಾಲಿಗೆ ಅದೃಷ್ಟದ ನಟಿಯಾಗಿದ್ದಾರೆ. ‘ಪುಷ್ಪ 2’, ‘ಛಾವಾ’ (Chhavva) ಸಿನಿಮಾಗಳ ಬಳಿಕ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ನಟಿ ಅಬ್ಬರಿಸಲು ರೆಡಿಯಾಗಿದ್ದಾರೆ. ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಬಿಗ್‌ ನ್ಯೂಸ್‌ವೊಂದು ಸಿಕ್ಕಿದೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ಐತಿಹಾಸಿಕ ಸಿನಿಮಾ ‘ಛಾವಾ’ ರಿಲೀಸ್ ಆಗಿರೋ ಬೆನ್ನಲ್ಲೇ ಧನುಷ್ (Dhanush) ಮತ್ತು ರಶ್ಮಿಕಾ ನಟನೆಯ ‘ಕುಬೇರ’ (Kubera) ಸಿನಿಮಾದ ರಿಲೀಸ್ ಡೇಟ್ ರಿವೀಲ್ ಆಗಿದೆ. ಇದೇ ಜೂನ್ 20ರಂದು ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

    ಇನ್ನೂ ಈ ಚಿತ್ರದಲ್ಲಿ ಧನುಷ್ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

    ‘ಪುಷ್ಪ 2’ ಚಿತ್ರದ ಬಿಗ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

  • ‘ಪುಷ್ಪ 2’ ವಿವಾದದ ಬಳಿಕ ಎಚ್ಚೆತ್ತ ಅಲ್ಲು ಅರ್ಜುನ್

    ‘ಪುಷ್ಪ 2’ ವಿವಾದದ ಬಳಿಕ ಎಚ್ಚೆತ್ತ ಅಲ್ಲು ಅರ್ಜುನ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ‘ಪುಷ್ಪ 2’ (Pushpa 2) ಕಾಲ್ತುಳಿತ ವಿವಾದದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ‘ಪುಷ್ಪ 2’ ಕಾಲ್ತುಳಿತ ಪ್ರಕರಣದ ವಿಚಾರದಲ್ಲಿ ಬೇಲ್‌ನಲ್ಲಿರುವ ಅಲ್ಲು ಅರ್ಜುನ್ (Allu Arjun) ಸದ್ಯ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮಗಾಗಿ ವಕ್ತಾರರನ್ನು ನೇಮಿಸಲು ಅವರು ಮುಂದಾಗಿದ್ದಾರೆ.

    ವಿವಾದಗಳಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳ ಜೊತೆ ಹಾಗೂ ಅಭಿಮಾನಿಗಳಿಗೆ ತಮ್ಮ ಸಿನಿಮಾಗಳ ಅಪ್‌ಡೇಟ್ ಕೊಡಲು ವಕ್ತಾರರನ್ನು ನೇಮಿಸೋದು ಸೂಕ್ತ ಎಂದು ನಟ ನಿರ್ಧರಿಸಿದ್ದು, ಇನ್ಮುಂದೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.

    ಇನ್ನೂ ‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್‌ಗೆ ಯಶಸ್ಸು ಕೊಟ್ಟಿದೆ. ಸಿನಿಮಾದ ಪ್ರೀಮಿಯರ್ ವೇಳೆ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆಯಿಂದ ಅಷ್ಟೇ ತೊಂದರೆ ಕೂಡ ಅನುಭವಿಸಿದರು. ಇದರಿಂದ ಅವರ ಬಗ್ಗೆ ಅನಾವಶ್ಯಕ ಸುದ್ದಿಗಳು ಮತ್ತು ಸಿನಿಮಾ ಬಗ್ಗೆ ತಪ್ಪು ಮಾಹಿತಿಗಳು ವೈರಲ್ ಆಗೋಕೆ ಶುರುವಾಯ್ತು. ಹಾಗಾಗಿ ಅಲ್ಲು ಅರ್ಜುನ್ ವಕ್ತಾರರನ್ನು ನೇಮಿಸಿಕೊಳ್ಳುವ ಪ್ಲ್ಯಾನ್‌ನಲ್ಲಿದ್ದಾರೆ. ಮಾರ್ಚ್‌ನಿಂದ ಇದು ಜಾರಿಗೆ ಬರಲಿದೆ ಎಂದು ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ, ಅಲ್ಲು ಅರ್ಜುನ್ ಆಪ್ತ ನಿರ್ಮಾಪಕ ಬನ್ನಿ ವಾಸ್ ರಿವೀಲ್ ಮಾಡಿದ್ದಾರೆ.

    ಇನ್ನೂ ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳ ಸಕ್ಸಸ್ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಜೊತೆ ಅಲ್ಲು ಅರ್ಜುನ್ ಕೈಜೋಡಿಸಿದ್ದಾರೆ. ಆ ನಂತರ ತಂದೆ ಅಲ್ಲು ಅರವಿಂದ್ ಬ್ಯಾನರ್‌ನಲ್ಲಿ ಹೊಸ ಸಿನಿಮಾ ಮಾಡಲಿದ್ದಾರೆ. ಬಳಿಕ ‘ಪುಷ್ಪ 3’ ಸಿನಿಮಾ ಶುರುವಾಗಲಿದೆ. ಪಾರ್ಟ್ 3 ಬರೋದು ಅಧಿಕೃತವಾಗಿದೆ. ಆದರೆ ಯಾವಾಗ? ಎಂಬುದು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.

  • ವ್ಹೀಲ್ ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್‌

    ವ್ಹೀಲ್ ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್‌

    ಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾದ ಹಿನ್ನೆಲೆ ನಡೆಯಲು ಕಷ್ಟಪಡುತ್ತಿರುವ ಸ್ಥಿತಿಯಲ್ಲಿ ಇಂದು (ಜ.22) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕುಂಟುತ್ತಾ ವ್ಹೀಲ್ ಚೇರ್‌ನಲ್ಲಿ ನಟಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.‌ ಇದನ್ನೂ ಓದಿ:BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ

    ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಕುಂಟುತ್ತಾ ಕಾರಿನಿಂದ ಇಳಿದು ವ್ಹೀಲ್ ಚೇರ್‌ನಲ್ಲಿ ಕೂರಲು ಹರಸಾಹಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾ ಕೆಲಸ ಮಾಡಲು ಹೈದರಾಬಾದ್‌ನಿಂದ ಮುಂಬೈಗೆ ಅವರು ತೆರಳಿದ್ದಾರೆ. ‘ಛಾವಾ’ ಸಿನಿಮಾಗೆ ಡಬ್ಬಿಂಗ್ ಮಾಡೋದ್ರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದೇನೇ ಇರಲಿ ಶ್ರೀವಲ್ಲಿ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾಗಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಜಿಮ್‌ನಲ್ಲಿ ನಾನು ಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರುತ್ತೇನೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ತಿಳಿದಿದೆ. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದರು.

    ಇನ್ನೂ ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.