ಟಾಲಿವುಡ್‌ನಿಂದ ಧಮಾಕೇದಾರ್ ಸುದ್ದಿಯೊಂದು ಬಂದಿದೆ. ಅದುವೇ ಅಲ್ಲು ಅರ್ಜುನ್ (Allu Arjun) ಹಾಗೂ ಪ್ರಶಾಂತ್ ನೀಲ್ (Prashanth Neel) ಸೂಪರ್ ಕಾಂಬೋ ಸುದ್ದಿ.
ಹೌದು. ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಸುದ್ದಿ ವೈರಲ್ ಆಗಿದೆ. ಪ್ರಸ್ತುತ ಪ್ರಶಾಂತ್ ನೀಲ್ ಜೂ.ಎನ್‌ಟಿಆರ್ (Jr ntr) ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಅಟ್ಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಇಬ್ಬರ ವಿಭಿನ್ನ ಚಿತ್ರಗಳು ಮುಗಿದ ಬಳಿಕ ಪ್ರಶಾಂತ್ ನೀಲ್ ಜೊತೆಗೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದ್ದು ಈ ಚಿತ್ರಕ್ಕೆ `ರಾವಣಂ’ ಎಂಬ ಶೀರ್ಷಿಕೆ ಇಡಲಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಇದನ್ನೂ ಓದಿ: ಭದ್ರತೆಗೆ ಹೊಸ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್

ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಪ್ರಶಾಂತ್ ನೀಲ್ ಹಾಗೂ ಪುಷ್ಪ-2 (Pushpa 2) ಮೂಲಕ ಇಂಟರ್‌ನ್ಯಾಶನಲ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾ ಮೇಕರ್ಸ್ ಎಂದು ಹೆಸರು ಮಾಡಿದವರು. ಇಬ್ಬರು ಒಂದೇ ಚಿತ್ರಕ್ಕಾಗಿ ಕೈಜೋಡಿಸದ್ರೆ ಆ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಿಸೋದ್ರಲ್ಲಿ ಅನುಮಾನವೇ ಇಲ್ಲ. ಅಂದಹಾಗೆ ಈ ಸಿನಿಮಾವನ್ನ ಬಿಗ್ ಬಜೆಟ್‌ನಲ್ಲಿ ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್‌ರಾಜು ನಿರ್ಮಿಸಲಿದ್ದಾರೆ. ಸಿನಿಮಾ ಶುರುವಾಗೋದು ಇನ್ನೂ ಎರಡು ವರ್ಷದ ಬಳಿಕ ಎನ್ನಲಾಗುತ್ತಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

ಸಿನಿಮಾ ಆರಂಭಕ್ಕೂ ಮುನ್ನವೇ ಅಲ್ಲು ನೀಲ್ ಕಾಂಬಿನೇಶನ್ ಚಿತ್ರದ ಶೀರ್ಷಿಕೆ ರಿವೀಲ್ ಆಗಿರುವುದು ವಿಶೇಷ. ಸಾಮಾನ್ಯವಾಗಿ ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಆರಂಭದಲ್ಲೇ ಟೈಟಲ್ ರಿವೀಲ್ ಮಾಡೋದಿಲ್ಲ. ಕಾನ್ಸೆಪ್ಟ್ ಪ್ರಕಾರ ಮಾಡಲಾಗುತ್ತೆ. ಹೀಗಾಗಿ ಶೀರ್ಷಿಕೆ ವಿಚಾರಕ್ಕೆ ಗೊಂದಲ ಇದೆ. ಹಿಂದೆ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ತಾವು ಚಿತ್ರ ಮಾಡಬೇಕೆನ್ನುವ ಹೀರೋ ಜೊತೆ ಲವ್ ಆದ್ರೆ ಮಾತ್ರ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ರು. ಇದನ್ನೂ ಓದಿ: ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!
ಹೀಗಾಗಿ ನಿರ್ದೇಶಕ ನೀಲ್ ಆಯ್ಕೆ ಮಾಡಿಕೊಳ್ಳುವ ಹೀರೋ ಇಂಟ್ರೆಸ್ಟಿಂಗ್ ಆಗಿರ್ತಾರೆ. ಇದೀಗ ಅಲ್ಲು ಜೊತೆ ಪ್ರಶಾಂತ್ ನೀಲ್ ಕೈ ಜೋಡಿಸಿರುವುದು ಆರಂಭಿಕ ಮಾತುಕತೆಯಲ್ಲಿ ರಿವೀಲ್ ಆಗಿದೆ. ಇದನ್ನೂ ಓದಿ: ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ


ನ್ಯಾಷನಲ್ ಕ್ರಶ್ ರಶ್ಮಿಕಾ ಮಾದಕ ಲುಕ್‌ನಿಂದ ಇದೀಗ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಶ್ರೀವಲ್ಲಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಅವರ ಈ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ರಶ್ಮಿಕಾ ಪೋಸ್ಟ್‌ಗೆ ಹಾಟ್, ಸೆಕ್ಸಿ, ಬ್ಯೂಟಿ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇದನ್ನೂ ಓದಿ:
ರಶ್ಮಿಕಾ ಅವರು ಅವಾರ್ಡ್ ಕಾರ್ಯಕ್ರಮವೊಂದಕ್ಕೆ ಹಾಜರಿ ಹಾಕಿದ್ದರು. ಫಂಕ್ಷನ್ ತೆರಳುವ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಅದಷ್ಟೇ ಅಲ್ಲ, ಅವರು ಧರಿಸಿರುವ ಈ ಉಡುಗೆಗೆ ಪ್ರಶಂಸೆ ವ್ಯಕ್ತವಾಗಿದ್ದು, ಅದರ ಹಿಂದೆ ಹಲವರ ಶ್ರಮವಿದೆ. ಹಾಗಾಗಿ ಅವರ ಬಟ್ಟೆ ಡಿಸೈನ್ ಮಾಡಿದವರಿಗೆ, ಮೇಕಪ್ ಮಾಡುವರಿಗೆ ನಟಿ ಧನ್ಯವಾದ ಹೇಳಿದ್ದಾರೆ.
ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣ ಅವರು ಇದೀಗ ಸೌತ್ ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಹೊಸ ಮನೆ ಖರೀದಿಸೋದು ನಟಿಯ ಹಲವು ವರ್ಷಗಳ ಕನಸಾಗಿತ್ತು. ಅದರಂತೆ ಐಷಾರಾಮಿ ಮನೆ ಖರೀದಿಸಿ ಕುಟುಂಬ ಸಮೇತ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:
ಸತ್ಯನಾರಾಯಣ ವ್ರತ, ಹೋಮಗಳನ್ನು ಮಾಡಿಸಿದ್ದಾರೆ. ಮನೆಗೆ ‘ಶ್ರೀರಾಮ ಸಂಜೀವಿನಿ’ ಎಂದು ಮನೆಗೆ ಹೆಸರಿಟ್ಟಿದ್ದಾರೆ. ಗೃಹಪ್ರವೇಶದ ಖುಷಿಯಲ್ಲಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ರಂಗಸ್ಥಳಂ, ಕ್ಷಣಂ, ವಿಮಾನಂ, ಪುಷ್ಪ, ಪುಷ್ಪ 2 ಸಿನಿಮಾಗಳಲ್ಲಿ ಅನಸೂಯ ನಟಿಸಿದ್ದಾರೆ. ನಟಿ, ನಿರೂಪಕಿಯಾಗಿ ಅನಸೂಯ ಮೋಡಿ ಮಾಡಿದ್ದಾರೆ.







ಅಟ್ಲಿ ಜೊತೆಗಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ತ್ರಿಬಲ್ ರೋಲ್‌ನಲ್ಲಿ ನಟಿಸಲಿದ್ದಾರೆ. ಅವರ ಪಾತ್ರಕ್ಕೆ ವರ್ಕೌಟ್, ಫಿಟ್‌ನೆಸ್ ಅಗತ್ಯವಿದೆ. ಅದಕ್ಕಾಗಿ ಅವರು ದೇಹವನ್ನು ಹುರಿಗೊಳಿಸುವ ಅಗತ್ಯವಿದೆ. ಹೀಗಾಗಿ ಮಹೇಶ್ ಬಾಬು, ಜ್ಯೂ.ಎನ್‌ಟಿಆರ್‌ಗೆ ಫಿಟ್‌ನೆಸ್ ಟ್ರೈನರ್ ಆಗಿದ್ದ ಲಾಯ್ಡ್ ಸ್ಟೀವನ್ಸ್ ಅವರನ್ನು ಅಲ್ಲು ಅರ್ಜುನ್ ನೇಮಿಸಿಕೊಂಡಿದ್ದಾರೆ. ಲಾಯ್ಡ್ ಸ್ಟೀವನ್ಸ್ (Lloyd Stevens) ಅವರು ನಟನ ಜೊತೆಗಿನ ಫೋಟೋಗೆ ಲೋಡಿಂಗ್ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಅಪ್‌ಡೇಟ್ ಹೊರಬಿದ್ದಿದೆ. ಇದನ್ನೂ ಓದಿ:




‘ಪುಷ್ಪ 2’ ಸಕ್ಸಸ್ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡಲು ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಅದಕ್ಕಾಗಿ ಅಟ್ಲಿ ಜೊತೆ ವಿದೇಶಕ್ಕೆ ತೆರಳಿ VFX ತಂತ್ರಜ್ಞರೊಂದಿಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ವಿಎಫ್‌ಎಕ್ಸ್‌ಗಾಗಿ ನಟನ ಮುಖದ ಮತ್ತು ದೇಹದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಹಾಲಿವುಡ್ ರೇಂಜ್‌ನಲ್ಲಿ ಅದ್ಧೂರಿಯಾಗಿ ಗ್ರಾಫಿಕ್ಸ್ ಮೂಡಿ ಬರಲಿದೆ ಎಂಬ ಸುಳಿವು ಸಿಕ್ಕಿದೆ. ಇದನ್ನೂ ಓದಿ:
