Tag: ಪುಷ್ಪ ಸಿನಿಮಾ

  • ಸಮಂತಾ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ಲವ್ಲಿ ವಿಶ್

    ಸಮಂತಾ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ಲವ್ಲಿ ವಿಶ್

    ಟಾಲಿವುಡ್ ನಟಿ ಸಮಂತಾ (Samantha) ತಮ್ಮ ಹುಟ್ಟುಹಬ್ಬದ ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ತೆಲುಗಿನ ಆ್ಯಪಲ್ ಬ್ಯೂಟಿ ಸ್ಯಾಮ್‌ಗೆ ಹಲವು ನಟ-ನಟಿಯರು ಬರ್ತ್‌ಡೇಗೆ ವಿಶೇಷವಾಗಿ ಶುಭಕೋರಿದ್ದಾರೆ. ಇದೀಗ ವಿಜಯ್ ದೇವರಕೊಂಡ (Vijay Devarakonda) ತಮ್ಮ ಸಹ ನಟಿ ಸಮಂತಾಗೆ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ.

    ಹ್ಯಾಪಿ ಬರ್ತ್‌ಡೇ ಸಾಮಿ, ಸದಾ ಖುಷಿಯಾಗಿರಿ ಮತ್ತು ಆರೋಗ್ಯವಾಗಿರಿ ಎಂದು ವಿಜಯ್ ವಿಶೇಷವಾಗಿ ನಟಿಗೆ ಶುಭಕೋರಿದ್ದಾರೆ. ‘ಖುಷಿ’ ಸಿನಿಮಾ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಸಮಂತಾ ಜೊತೆ ಆತ್ಮೀಯವಾಗಿದ್ದ ಫೋಟೋಗಳನ್ನು ಶೇರ್‌ ಮಾಡಿ ಶುಭಹಾರೈಸಿದ್ದಾರೆ. ವಿಜಯ್ ಪೋಸ್ಟ್‌ಗೆ ಸ್ಯಾಮ್ ಕೂಡ ರಿಯಾಕ್ಟ್ ಮಾಡಿ, ಧನ್ಯವಾದ ತಿಳಿಸಿದ್ದಾರೆ.

    ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು. ಇದನ್ನೂ ಓದಿ:ಪರಭಾಷೆಯಲ್ಲಿ ಕನ್ನಡತಿ ರುಕ್ಮಿಣಿ ವಸಂತ್‌ಗೆ ಭಾರೀ ಬೇಡಿಕೆ

    ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹನಿ ಬನಿ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ಒಳ ಉಡುಪಿಲ್ಲದೆ ಎದೆ ಮೇಲೆ ಕೈಯಿಟ್ಟು ಹಾಟ್ ಪೋಸ್ ಕೊಟ್ಟ ಸ್ಯಾಮ್

    ಒಳ ಉಡುಪಿಲ್ಲದೆ ಎದೆ ಮೇಲೆ ಕೈಯಿಟ್ಟು ಹಾಟ್ ಪೋಸ್ ಕೊಟ್ಟ ಸ್ಯಾಮ್

    ಟಾಲಿವುಡ್ (Tollywood) ನಟಿ ಸಮಂತಾ (Samantha) ಇದೀಗ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಬ್ರಾ ಧರಿಸದೆ ಎದೆ ಮೇಲೆ ಕೈಯಿಟ್ಟು ಸಖತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಮಂತಾ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ಹಾಟ್ ಫೋಟೋಗಳನ್ನು (Photoshoot) ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಒಳ ಉಡುಪು ಧರಿಸಿದೇ ಬ್ಲೇಜರ್ ತೊಟ್ಟಿರುವ ಹಾಟ್ ಹಾಟ್ ಫೋಟೋಗಳನ್ನು ಸಮಂತಾ ಶೇರ್ ಮಾಡಿ ಗಂಡ್ ಹೈಕ್ಳ ನಿದ್ದೆ ಕದ್ದಿದ್ದಾರೆ. ಮಡಿವಂತಿಗೆ ಬಿಟ್ಟು ಪೋಸ್ ಕೊಟ್ಟಿದ್ದೀರಾ ಅಂದ್ಮೇಲೆ ಎದೆಯ ಮೇಲೆ ಯಾಕೆ ಕೈಯಿಟ್ಟುಕೊಂಡಿದ್ದೀರಾ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.‌ ಇದನ್ನೂ ಓದಿ:ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಬಾಲಿವುಡ್‌ಗೆ ಸಮಂತಾ ಬಲಗಾಲಿಟ್ಟು ಪಾದಾರ್ಪಣೆ ಮಾಡಿದ ಮೇಲೆ ಖದರ್ ಬದಲಾಗಿದೆ. ಬಾಲಿವುಡ್‌ಗೆ ತಕ್ಕಂತೆಯೇ ನಟಿ ತಮ್ಮ ಸ್ಟೈಲ್ ಬದಲಿಸಿಕೊಳ್ತಿದ್ದಾರೆ. ಗೌರಮ್ಮನಂತಿದ್ದ ಸಮಂತಾ ಬಹಳಷ್ಟು ಬದಲಾಗಿದ್ದಾರೆ. ಮೈ ಚಳಿ ಬಿಟ್ಟು ಕಮ್ಮಿ ಬಟ್ಟೆ ಧರಿಸಿ ಪೋಸ್ ಕೊಡುತ್ತಿದ್ದಾರೆ.

    ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ (Nagachaitanya)  ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

  • ಇನ್ಸ್ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ ರಶ್ಮಿಕಾ ಮಂದಣ್ಣ

    ಇನ್ಸ್ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ ರಶ್ಮಿಕಾ ಮಂದಣ್ಣ

    ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಲಕ್ಕಿ ನಟಿ, ಸಿನಿಮಾ-ಜಾಹಿರಾತು ಜಗತ್ತು ಎಲ್ಲಿ ನೋಡಿದ್ರೂ ರಶ್ಮಿಕಾದೇ ಹವಾ. ಇಂಟರ್‌ನೆಟ್‌ನಲ್ಲೂ ಶ್ರೀವಲ್ಲಿದೇ ದರ್ಬಾರ್. ಹೀಗಿರುವಾಗ ಸೋಷಿಯಲ್ ಮೀಡಿಯಾದ ಒಂದು ಪೋಸ್ಟ್‌ಗೆ ಪಡೆಯುವ ಸಂಭಾವನೇ ಎಷ್ಟು ಗೊತ್ತಾ? ವರ್ಷಕ್ಕೆ ಸೋಷಿಯಲ್ ಮೀಡಿಯಾದಿಂದ ಬರುವ ಆದಾಯ ಎಷ್ಟು ಎಂದು ತಿಳಿದರೆ, ನೀವು ಕೂಡ ಶಾಕ್ ಆಗ್ತೀರಾ. ಹೀಗೂ ಕಮಾಯಿ ಮಾಡಬಹುದಾ ಅಂತೀರಾ.

    ಹೆಸರು ಮಾಡಿದ್ರೆ ದುಡ್ಡು ತಾನಾಗಿ ತಾನೇ ಹುಡುಕಿಕೊಂಡು ಬರುತ್ತೆ ಅಂತ ತಿಳಿದವರು ಹೇಳ್ತಾರೆ. ಈ ವಿಚಾರ ನಟಿ ರಶ್ಮಿಕಾ ಜೀವನದಲ್ಲೂ ಸತ್ಯವಾಗಿದೆ. ಮೊದ ಮೊದಲು ಎಷ್ಟು ಸಂಭಾವನೇ ಪಡೆದ್ರು ಅನ್ನೋದಕ್ಕಿಂತ ಈಗ ರಶ್ಮಿಕಾ ಎಷ್ಟು ಸಂಪಾದನೇ ಮಾಡ್ತಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಜನ ಕಣ್ಣು ಬಿಟ್ಟುಕೊಂಡು ನೋಡ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಪಡೆಯುತ್ತಿರುವ ಸಂಭಾವನೇ ಕೋಟಿಗಳು ದಾಟಿದೆ. ಇನ್ನು ಬಹಳಷ್ಟು ಜಾಹಿರಾತುಗಳಿಗೂ ರಶ್ಮಿಕಾ ಬಣ್ಣ ಹಚ್ಚಿದ್ದಾರೆ ಆ ಕಂಪೆನಿಯವರು ರಶ್ಮಿಕಾ ಅಕೌಂಟ್‌ಗೆ ಒಳ್ಳೆಯ ಕಾಸು ಕೂಡ ಹಾಕಿದ್ದಾರೆ.

    ಶ್ರೀವಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಲು ಕೂಡ ಸಂಭಾವನೇ ಪಡಿತಾರಂತೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾನ 4 ಕೋಟಿ ಜನ ಫಾಲೋ ಮಾಡ್ತಾರೆ. ನಟಿ ಒಂದು ಪೋಸ್ಟ್ ಹಾಕಿದ್ದರೆ 10 ಲಕ್ಷ ಲೈಕ್ಸ್ ಪಕ್ಕಾ. ಇದನ್ನ ಕೆಲವು ಕಂಪನಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ರಶ್ಮಿಕಾ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮ್ಮ ಪ್ರಾಡೆಕ್ಟ್‌ಗಳನ್ನ ಪ್ರಮೋಟ್ ಮಾಡಿಸಲು ಮುಂದಾಗಿದ್ದಾರೆ. ಪುಷ್ಪ ನಟಿಗೆ ಒಳ್ಳೆಯ ಕಾಸು ಕೂಡ ಬರುತ್ತಿದೆಯಂತೆ. ಒಂದು ಪೋಸ್ಟ್‌ಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರಂತೆ. ಇದನ್ನೂ ಓದಿ:ಆಹ್ವಾನವಿದ್ರೂ ವರುಣ್ ಮದುವೆಗೆ ಹೋಗಲ್ಲ ಎಂದ ನಟಿ ರೇಣು ದೇಸಾಯಿ

    ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಮೂಲಕ ಗಮನ ಸೆಳೆದ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಅನಿಮಲ್’ (Animal) ಚಿತ್ರದ ರಿಲೀಸ್‌ಗೆ ನಟಿ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

    ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

    ರಾವಳಿ ನಟಿ ಕೃತಿ ಶೆಟ್ಟಿ (Kriti Shetty) ಅವರು ನಾಗಚೈತನ್ಯಗೆ ನಾಯಕಿಯಾಗಿ ‘ಕಸ್ಟಡಿ’ (Custody) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ಸಮಂತಾರಂತೆ ತಾವು ಐಟಂ ಡ್ಯಾನ್ಸ್ ಮಾಡಲ್ಲ ಅಂತಾ ಸಹನಟಿ ಸಮಂತಾಗೆ (Samantha) ಟಕ್ಕರ್ ಕೊಟ್ಟಿದ್ದಾರೆ.

    ಒಂದು ಕಾಲದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲೆಂದೇ ನಟಿಯರು ಇದ್ದರು. ಈಗ ಸ್ಟಾರ್ ನಾಯಕಿಯರೇ ಐಟಂ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಸಕ್ಸಸ್ ಕಂಡಿದ್ದಾರೆ. ತಮನ್ನಾ, ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಸಮಂತಾ ಸೇರಿದಂತೆ ಹಲವು ಐಟಂ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಇದನ್ನೂ ಓದಿ:ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಪ್ರಭಾಸ್ ದೇಣಿಗೆ

    ಇದೀಗ ‘ಕಸ್ಟಡಿ’ ಚಿತ್ರದ ಮೂಲಕ ಸದ್ದು ಮಾಡ್ತಿರುವ ನಾಗಚೈತನ್ಯ ಸಹನಟಿ ಕೃತಿಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ಉ ಅಂಟಾವಾ ಮಾವ ಹಾಡಿನ ಆಫರ್? ನಿಮಗೆ ಸಿಕ್ಕಿದ್ದರೆ ಒಪ್ಪಿಕೊಳ್ಳುತ್ತಿದ್ರಾ ಎಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಅವರು ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ನಾನು ಅಂಥ ಪಾತ್ರ ಒಪ್ಪಿಕೊಳ್ಳಲ್ಲ. ಆ ರೀತಿ ಪಾತ್ರದಲ್ಲಿ ನಟಿಸಲು ನನಗೆ ಕಷ್ಟ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೂ ಕೂಡ ಅವರಿಗೆ ಆ ಹಾಡಿನಲ್ಲಿ ಸಮಂತಾ ಅವರ ಪರ್ಫಾರ್ಮೆನ್ಸ್ ಇಷ್ಟ ಆಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    ತಮ್ಮ ಹೀರೋನ ಮಾಜಿ ಪತ್ನಿಯ ಬಗ್ಗೆ ನಟಿ ಕೃತಿ ಶೆಟ್ಟಿ ಧೈರ್ಯವಾಗಿ ಉತ್ತರ ನೀಡಿದ್ದಾರೆ. ಸಮಂತಾರಂತೆ ಐಟಂ ಹಾಡಿಗೆ ಹೆಜ್ಜೆ ಹಾಕಲ್ಲ ಎಂದಿದ್ದಾರೆ.

  • ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ `ಆರ್‌ಆರ್‌ಆರ್’ (RRR Film) ದೂರದ ಜಪಾನ್‌ನಲ್ಲಿ ಪ್ರಥಮ ಪ್ರದರ್ಶನ ಕಂಡ ಬೆನ್ನಲ್ಲೇ ಇದೀಗ `ಪುಷ್ಪ’ (Pushpa) ಚಿತ್ರದ ಪ್ರಿಮಿಯರ್ ಪ್ರದರ್ಶನಕ್ಕಾಗಿ ಮಾಸ್ಕೋಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ (Rashmika Mandanna) ಹಾರಿದ್ದಾರೆ. ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್‌ ಬಗ್ಗೆ ಆಕ್ರೋಶ ಹೊರಹಾಕಿರುವ ಬೆನ್ನಲ್ಲೇ ನಟಿ ವಿದೇಶಕ್ಕೆ ಹಾರಿದ್ದಾರೆ.

    `ಪುಷ್ಪ ದಿ ರೈಸ್’ ಟಾಲಿವುಡ್ ಮಾತ್ರವಲ್ಲದೇ ಬಹುಭಾಷೆಯಲ್ಲಿ ಈ ಸಿನಿಮಾ ಕಮಾಲ್ ಮಾಡಿತ್ತು. ಜೊತೆಗೆ ಕೋಟಿ ಕೋಟಿ ಲೂಟಿ ಮಾಡಿ, ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೀಗ `ಆರ್‌ಆರ್‌ಆರ್’ ಚಿತ್ರದ ಹಾದಿಯಲ್ಲೇ `ಪುಷ್ಪ ದಿ ರೈಸ್’ ಚಿತ್ರತಂಡ ಹೆಜ್ಜೆ ಇಡುತ್ತಿದೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ರಾಜಮೌಳಿ ನಿರ್ದೇಶನದ ಚಿತ್ರ `ಆರ್‌ಆರ್‌ಆರ್’ ಪ್ರದರ್ಶನವಾಗಿತ್ತು. ಇದೀಗ ದೂರದ ಮಾಸ್ಕೋದಲ್ಲಿ ಪುಷ್ಪ ಚಿತ್ರದ ಪ್ರಿಮಿಯರ್ ಪ್ರದರ್ಶನವಾಗಲಿದೆ. ಇದನ್ನೂ ಓದಿ: ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಡಿಸೆಂಬರ್ 1ರಂದು ಮಾಸ್ಕೋದಲ್ಲಿ ರಷ್ಯನ್ ಭಾಷೆಯಲ್ಲಿ `ಪುಷ್ಪ’ ತೆರೆಕಾಣಲಿದೆ. ಈ ಸಿನಿಮಾಗಾಗಿ ಪುಷ್ಪ ಮತ್ತು ಶ್ರೀವಲ್ಲಿ ಮಾಸ್ಕೋದಲ್ಲಿ ಈಗಾಗಲೇ ಬೀಡು ಬಿಟ್ಟಿದ್ದಾರೆ. ಚಿತ್ರತಂಡಕ್ಕೆ ಮಾಸ್ಕೋ ಜನರು ವೆಲ್‌ಕಮ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಪುಷ್ಪ’ ಸಿನಿಮಾ ರಷ್ಯನ್ ಭಾಷೆಯಲ್ಲಿ ಡಬ್ ಆಗಿದೆ. ಡಿಸೆಂಬರ್ 1ಕ್ಕೆ ಪ್ರದರ್ಶನವಾಗುತ್ತಿರುವ ಈ ಚಿತ್ರವನ್ನು ಮಾಸ್ಕೋ ಚಿತ್ರಪ್ರೇಮಿಗಳು ಅಪ್ಪಿ ಒಪ್ಪಿಕೊಳ್ಳತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ: ಮಾಲ್ಡೀವ್ಸ್‌ನಿಂದ ಸೆಲ್ಫಿ ಪೋಸ್ಟ್‌ ಮಾಡಿದ `ಪುಷ್ಪ’ ನಟಿ

    ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ: ಮಾಲ್ಡೀವ್ಸ್‌ನಿಂದ ಸೆಲ್ಫಿ ಪೋಸ್ಟ್‌ ಮಾಡಿದ `ಪುಷ್ಪ’ ನಟಿ

    ಚಿತ್ರರಂಗದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಜಯ್ ದೇವರಕೊಂಡ(Vijay Devarakonda)  ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. `ಲೈಗರ್’ ಸೋಲಿನ ಬೆನ್ನಲ್ಲೇ ವಿಜಯ್ ಮತ್ತು ರಶ್ಮಿಕಾ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ತನ್ನ ಸೆಲ್ಫಿ ಫೋಟೋವನ್ನ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಬಣ್ಣದ ಲೋಕದಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಅದೃಷ್ಟದ ನಟಿಯಾಗಿ ಹೊರಹೊಮ್ಮಿದ್ದಾರೆ. ಆಕೆ ಏನೇ ಮಾಡಿದ್ದರು ಸದಾ ಸುದ್ದಿಯಲ್ಲಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. `ಲೈಗರ್'(Liger Film) ಸೋಲಿನಿಂದ ಹತಾಶನಾಗಿರುವ ವಿಜಯ್ ರಶ್ಮಿಕಾ ಜೊತೆಯಾಗಿದ್ದಾರೆ. ಈಗ ಕೊಡಗಿನ ಬ್ಯೂಟಿ ರಶ್ಮಿಕಾ ಶೇರ್ ಮಾಡಿರುವ ಫೋಟೋ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ.

    ಮಾಲ್ಡೀವ್ಸ್‌ಗೆ ಚೆಂದದ ಜಾಗದಲ್ಲಿ ಕುಳಿತು ತಮ್ಮ ಸೆಲ್ಫಿ ಫೋಟೋವನ್ನ ರಶ್ಮಿಕಾ ಶೇರ್ ಮಾಡಿದ್ದಾರೆ. ನಟಿಯ ಫೋಟೋಗೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು `ನೀವೊಬ್ಬರೇ ಇಲ್ಲಾ ಎಂಬ ವಿಚಾರ ನಮಗೆ ಗೊತ್ತು’ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ವಿಜಯ್ ನಿಮ್ಮ ಒಟ್ಟಿಗೆ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಿಂದ ಡಿಸ್ಚಾರ್ಜ್‌: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ

    ಇನ್ನೂ `ಗುಡ್ ಬೈ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿಜಯ್ ಜೊತೆ ಮುಂಬೈಯಿಂದ ಮಾಲ್ಡೀವ್ಸ್‌ಗೆ ಹೋಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

    ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

    ನ್ನಡತಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಅವರ ಬರ್ತಡೇ ಪಾರ್ಟಿಯಲ್ಲಿ ಮಿರ ಮಿರ ಅಂತಾ ಮಿಂಚಿದ ನಂತರ ಈಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    ಸ್ಯಾಂಡಲ್‌ವುಡ್ ಸಿನಿಮಾದಿಂದ ದಕ್ಷಿಣ ಸಿನಿಮಾದತ್ತ ಮುಖ ಮಾಡಿದ ನಟಿ ರಶ್ಮಿಕಾ ಈಗ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ರಶ್ಮಿಕಾ ಈಗ ಎನೇ ಮಾಡಿದ್ರು ಸುದ್ದಿ, ಪ್ರತಿದಿನ ಒಂದಲ್ಲಾ ಒಂದು ಸುದ್ದಿಯಿಂದ ಸೌಂಡ್ ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ `ಪುಷ್ಪ’ ಬ್ಯೂಟಿ ರಶ್ಮಿಕಾ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಸದ್ಯ ರಶ್ಮಿಕಾ ಫಿಲ್ಮ್‌ಫೇರ್ ಭಾಗಿಯಾಗಿದ್ದು, ಕ್ಯಾಮೆರಾ ಕಣ್ಣಿಗೆ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿರೋ ರಶ್ಮಿಕಾ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಈಗ `ಪುಷ್ಪ’ ಹಾಡಿಗೆ ಹೆಜ್ಜೆ ಹಾಕಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ’ ಚಿತ್ರದ ಸಾಮಿ ಸಾಮಿ ಹಾಡಿಗೆ ʻಲೈಗರ್ʼ ಚಿತ್ರದ ನಟಿ ಅನನ್ಯಾ ಸೊಂಟ ಬಳುಕಿಸಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಅನನ್ಯಾ ಪಾಂಡೆ ಈಗ ದಕ್ಷಿಣದ ʻಪುಷ್ಪʼ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ಸೂಪರ್ ಹಿಟ್ ಸಾಂಗ್ ಸಾಮಿ ಸಾಮಿ ಹಾಡಿಗೆ ಲೈಗರ್ ನಟಿ ಅನನ್ಯಾ ಭರ್ಜರಿ ಆಗಿ ಕುಣಿದು ಕುಪ್ಪಳಿದಿದ್ದಾರೆ. ಅನನ್ಯಾ ಡ್ಯಾನ್ಸ್ ಸಾರಾ ಆಲಿ ಖಾನ್ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

    ಅನನ್ಯಾ ಮಾಡಿರೋ ಜಬರ್‌ದಸ್ತ್ ಡ್ಯಾನ್ಸ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಅನನ್ಯಾ ಸೊಂಟ ಬಳುಕಿಸಿರೋ ಪರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಭಾರತೀಯ ಸಿನಿಮಾ ರಂಗದಲ್ಲಿ ಎಲ್ಲೆಲ್ಲೂ ‘ಪುಷ್ಪ’ ಚಿತ್ರದ್ದೇ ಹಾವಳಿ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಈ ಸಿನಿಮಾ ಚಿತ್ರಕಥೆಗಿಂತಲೂ ಹೆಚ್ಚು ಫೇಮಸ್ ಆಗಿದ್ದ ಅದರ ಹಾಡುಗಳ ಮೂಲಕ. ಅದರಲ್ಲೂ ‘ಸಾಮಿ.. ಸಾಮಿ’ ಸಾಂಗ್ ದಾಖಲೆಯ ರೀತಿಯಲ್ಲಿ ರೀಚ್ ಆಯಿತು. ರೀಲ್ ನಲ್ಲಂತೂ ಮಿಲಿಯನ್ ಗಟ್ಟಲೇ ವಿಡಿಯೋ ಹರಿದಾಡಿತು. ಹೀಗಿತ್ತು ಚಿತ್ರದ ಹವಾ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ‘ಪುಷ್ಪ’ ಗೆಲುವಿನ ಹಿನ್ನೆಲೆಯಲ್ಲಿ ಶೀಘ್ರವಾಗಿ  ‘ಪುಷ್ಪ 2’ ಚಿತ್ರ ಕೂಡ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ. ಅದಕ್ಕೂ ಮೊದಲು ಕನ್ನಡದಲ್ಲಿ ‘ಪುಷ್ಪ 10’ ಸುದ್ದಿ ಹರಿದಾಡುತ್ತಿದೆ. ಅದೇನು ಅಂತ ನಟ ಸೃಜನ್ ಲೋಕೇಶ್ ಹೇಳಿದ್ದಾರೆ ಓದಿ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ತನ್ನ ಪಟಾಕಿ ಮಾತುಗಳ ಮೂಲಕವೇ ಫೇಮಸ್ ಆಗಿರುವ ಚೂಟಿ ಹುಡುಗಿ ವಂಶಿಕಾ. ಈಕೆ ನಟ ಮಾಸ್ಟರ್ ಆನಂದ್ ಅವರ ಪುತ್ರಿ. ಈ ಶೋನಲ್ಲಿ ಜಡ್ಜ್ ಆಗಿದ್ದಾರೆ ನಟ ಸೃಜನ್ ಲೋಕೇಶ್. ಈ ಶೋನಲ್ಲೇ ‘ಪುಷ್ಪ 10’ ಸಿನಿಮಾದ ಕುರಿತು ಪ್ರಸ್ತಾಪ ಆಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಈ ವಾರದ ಎಪಿಸೋಡ್ ನಲ್ಲಿ ವಂಶಿಕಾ ‘ಪುಷ್ಪ’ ಸಿನಿಮಾದ ಫೇಮಸ್ ಸಾಂಗ್ ‘ಸಾಮಿ.. ಸಾಮಿ..’ಗೆ ಡಾನ್ಸ್ ಮಾಡಿದರು. ಅದು ಥೇಟ್ ರಶ್ಮಿಕಾ ಮಂದಣ್ಣ ಹಾಕಿರುವ ರೀತಿಯಲ್ಲೇ ಸ್ಟೆಪ್ ಹಾಕಿದರು. ಅದನ್ನು ಕಂಡ ಸೃಜನ್ ಲೋಕೇಶ್ ‘ವಂಶಿಕಾ.. ಪುಷ್ಪ 10 ನಲ್ಲಿ ನೀನೇ ಹೀರೋಯಿನ್, ಫಿಕ್ಸ್’ ಎಂದು ಕೊಂಡಾಡಿದರು. ಎಲ್ಲರೂ ಚಪ್ಪಾಳೆ ತಟ್ಟಿ ಆ ಮಗುವಿಗೆ ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಪ್ರತಿ ಎಪಿಸೋಡ್ ನಲ್ಲೂ ಒಂದಲ ಒಂದು ವಿಶೇಷತೆಯನ್ನು ಪ್ರದರ್ಶಿಸುವ ವಂಶಿಕಾ, ಈ ಬಾರಿಯಂತೂ ಸಖತ್ ಮನರಂಜನೆ ಕೊಟ್ಟರು. ಒಂದು ರೀತಿಯಲ್ಲಿ ಆ ಕಾರ್ಯಕ್ರಮಕ್ಕೆ ಹೆಚ್ಚು ರಂಗು ತುಂಬುತ್ತಿರುವುದೇ ವಂಶಿಕಾ ಎನ್ನುವಷ್ಟರ ಮಟ್ಟಿ ಆ ಶೋವನ್ನು ಆಕೆ ಆವರಿಸಿಕೊಂಡಿದ್ದಾರೆ.

  • ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ

    ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ

    ಮುಂಬೈ: ಭಾರತ ತಂಡದ ಆಲ್‍ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ತನ್ನ ಅಜ್ಜಿ ಜೊತೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.

    ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಸ್ಟಾರ್ ನಟ-ನಟಿಯರು ಕೂಡ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ. ಇದೀಗ ಈ ಹಾಡಿಗೆ ಹೆಜ್ಜೆಹಾಕಿದವರ ಸಾಲಿಗೆ ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದು, ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿ ನನ್ನ ಪ್ರೀತಿಯ ಪುಷ್ಪ ನಾನಿ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

    ಪಾಂಡ್ಯ ಗಾಯಳುವಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ಇದೀಗ ಮತ್ತೆ ಫಿಟ್ ಆಗಿ ತಂಡಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಮನೆಯಲ್ಲಿ ಬಿಡುವಿನ ಸಮಯ ಕಳೆಯುತ್ತಿರುವ ಪಾಂಡ್ಯ ಕುಟುಂಬದ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಪಾಂಡ್ಯ ಪುಷ್ಟ ಹಾಡಿಗೆ ಹೆಜ್ಜೆ ಹಾಕುವ ಮೊದಲು ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ಡ್ಯಾನ್ಸ್ ಮಾಡಿ ವೀಡಿಯೋ ಹಂಚಿಕೊಂಡಿದ್ದರು. ಡೇವಿಡ್ ವಾರ್ನರ್ ಡ್ಯಾನ್ಸ್‌ಗೆ ಅಭಿಮಾನಿಗಳಿಂದ ಚಪ್ಪಾಳೆ ಹೊಡೆಸಿಕೊಂಡಿದ್ದಾರೆ.