ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್: ತೆಲಂಗಾಣ ಹೈಕೋರ್ಟ್‌ನಲ್ಲಿ ನಡೆದಅಲ್ಲು ಅರ್ಜುನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ನಟನ ಪರ ವಕೀಲರು ಶಾರುಖ್ ಖಾನ್ (Shah Rukh Khan) ಅವರ ರಾಯೀಸ್ ಪ್ರಕರಣವನ್ನು ಉಲ್ಲೇಖಿಸಿದ್ದರು.
ಜಾಮೀನು ಅರ್ಜಿ ವಿಚಾರಣೆ ವೇಳೆ, ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯುವಂತೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಥಿಯೇಟರ್ ಆಡಳಿತಕ್ಕೆ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ ವಿಶೇಷ ಪ್ರದರ್ಶನಕ್ಕೆ ಹಾಜರಾಗದಂತೆ ನಟನಿಗೆ ತಿಳಿಸುವಂತೆ ಎಸ್‌ಎಚ್‌ಒ ಥಿಯೇಟರ್‌ಗೆ ತಿಳಿಸಿದ್ದರು ಎಂದು ಸರ್ಕಾರಿ ವಕೀಲರು ವಾದಿಸಿದರು.
ಇದಕ್ಕೆ ಅಲ್ಲು ಅರ್ಜುನ್ ಪರ ವಕೀಲರು, ಪೊಲೀಸರು ನೀಡಿದ ಸೂಚನೆಗಳು ಅಸ್ಪಷ್ಟವಾಗಿದೆ. ನಟನ ಉಪಸ್ಥಿತಿಯು ಸಾವಿಗೆ ಕಾರಣವಾಗುತ್ತದೆ ಎಂದು ಪೊಲೀಸರು ಸೂಚಿಸಿರಲಿಲ್ಲ. ನಟರು ತಮ್ಮ ಸಿನಿಮಾದ ಮೊದಲ ಪ್ರದರ್ಶನಗಳಿಗೆ ಹಾಜರಾಗುವುದು ಸಾಮಾನ್ಯ ಸಂಗತಿ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ರೇವಂತ್ ರೆಡ್ಡಿ ಹೆಸರು ಹೇಳದ್ದಕ್ಕೆ ಬಂಧನ – ಸಿಎಂ ವಿರುದ್ಧ ಸಿಡಿದ ಅಲ್ಲು ಅಭಿಮಾನಿಗಳು
ಸಂತ್ರಸ್ತರು ಕೆಳಗಿನ ಪ್ರದೇಶದಲ್ಲಿ ಸಿಲುಕಿದ್ದಾಗ ಕಾಲ್ತುಳಿತ ಸಂಭವಿಸಿದೆ ಎಂಬ ಆರೋಪವಿದೆ. ಕಾಲ್ತುಳಿತ ಸಂಭವಿಸಿದ ಸಮಯದಲ್ಲಿ ಅಲ್ಲು ಅರ್ಜುನ್ ಮೊದಲ ಮಹಡಿಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರು 2017ರಲ್ಲಿ ಬಿಡುಗಡೆಯಾದ ಶಾರುಖ್ ನಟನೆಯ ರಾಯಿಸ್ ಚಿತ್ರದ ಪ್ರಚಾರ ವೇಳೆ ನಡೆದ ಕಾಲ್ತುಳಿತ ಪ್ರಕರಣವನ್ನು ಉಲ್ಲೇಖಿಸಿ, ಗುಜರಾತ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಶಾರುಖ್ ಖಾನ್ ಅವರಿಗೆ ರಿಲೀಫ್ ನೀಡಿತ್ತು. ಸಂತ್ರಸ್ತನ ದುಡುಕಿನ ನಿರ್ಧಾರದಿಂದ ಈ ಘಟನೆ ಸಂಭವಿಸಿದೆ. ಈ ಘಟನೆಗೂ ಶಾರುಖ್ ಖಾನ್ ನೇರವಾದ ಸಂಬಂಧ ಏನು ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿತ್ತು ಎಂದು ಹೇಳಿ ಈ ಪ್ರಕರಣದ ತೀರ್ಪನ್ನು ಓದಿದರು. ಇದನ್ನೂ ಓದಿ:1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್ ಪಡೆದಿದ್ದ ಅಲ್ಲು ಅರ್ಜುನ್
ತೆಲಂಗಾಣ ಹೈಕೋರ್ಟ್ ಆದೇಶ ಏನು?
ಈ ಕೇಸಲ್ಲಿ ಹಾಕಿದ ಬಿಎನ್‌ಎಸ್ ಕಾಯ್ದೆ 105, 118(1)(3)) ಸೆಕ್ಷನ್‌ಗಳು ಅಲ್ಲು ಅರ್ಜುನ್‌ಗೆ ಅನ್ವಯ ಆಗುವುದಿಲ್ಲ. ನಟನಾದ ಮಾತ್ರಕ್ಕೆ ಸಾಮಾನ್ಯ ಪೌರರಿಗೆ ಅನ್ವಯವಾಗುವ ರಿಯಾಯ್ತಿಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ನಟ ಎಂಬ ಕಾರಣಕ್ಕೆ ಈ ಸೆಕ್ಷನ್‌ಗಳನ್ನು ಅನ್ವಯಿಸೋದು ಎಷ್ಟು ಸರಿ? ರೇವತಿ ಕುಟುಂಬದ ಬಗ್ಗೆ ಸಹಾನುಭೂತಿ ಇದೆ. ಹಾಗೆಂದ ಮಾತ್ರಕ್ಕೆ ಆರೋಪವನ್ನು ಒಬ್ಬರ ಮೇಲೆ ಹಾಕಲು ಬರುವುದಿಲ್ಲ. ನಟ ಅಲ್ಲು ಅರ್ಜುನ್‌ಗೆ ಕೂಡ ಜೀವಿಸುವ ಹಕ್ಕು ಇದೆ.
ಏನಿದು ರಾಯಿಸ್ ಕಲ್ತುಳಿತ ಪ್ರಕರಣ?
ಜನವರಿ 2017 ರಲ್ಲಿ ಶಾರುಖ್ ಮತ್ತು ಚಿತ್ರ ತಂಡ Raees ಪ್ರಚಾರದ ಭಾಗವಾಗಿ ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿತ್ತು. ವಡೋದರಾ ರೈಲು ನಿಲ್ದಾಣದಲ್ಲಿ ನಟನನ್ನು ನೋಡಲು 15,000 ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಗಾಯಗೊಂಡಿದ್ದರೆ ಒಬ್ಬರು ಸಾವನ್ನಪ್ಪಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಶಾರುಖ್ ಖಾನ್ ಮಾಡಿದ ತಪ್ಪು ಏನು? ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕುಗಳಿಲ್ಲ ಎಂದು ಅರ್ಥವಲ್ಲ. ಯಾರಾದರೂ ರೈಲಿನಲ್ಲಿ ಪ್ರಯಾಣಿಸಿದರೆ ಅವರಿಗೆ ವೈಯಕ್ತಿಕ ಗ್ಯಾರಂಟಿ ಇರುವುದಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯಂತೆ ಸೆಲೆಬ್ರಿಟಿಗೂ ಸಮಾನ ಹಕ್ಕುಗಳಿವೆ. ಶಾರುಖ್ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಎಂಬ ಕಾರಣಕ್ಕೆ ಎಲ್ಲರನ್ನೂ ನಿಯಂತ್ರಿಸಬಹುದು ಎಂದಲ್ಲ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತ್ತು.
ಏನಿದು ಅಲ್ಲು ಅರ್ಜುನ್ ಕೇಸ್?
ಡಿ. 4 ರಂದು ಪುಷ್ಪ 2 (Pushpa 2) ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒರ್ವ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು.
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೊಟೀಸಿಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಇಂದು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನಾಂಪಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಅಲ್ಲು ಅರ್ಜುನ್ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದರು.
ಹೈದರಾಬಾದ್: ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ (Sandhya Theatre Stampede Case) ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್ (Allu Arjun) ಅವರು ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಬಂಧನಕ್ಕೆ ಒಳಗಾದ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರನ್ನು ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಇದನ್ನೂ ಓದಿ: It’s Too Much, ಬೆಡ್ ರೂಮ್‌ವರೆಗೆ ಬಂದಿದ್ದು ಸರಿಯಲ್ಲ – ಪೊಲೀಸರ ವಿರುದ್ಧ ಅಲ್ಲು ಅರ್ಜುನ್ ಗರಂ
ಡಿ. 4 ರಂದು ‘ಪುಷ್ಪ 2’ ಸಿನಿಮಾ (Pushpa 2) ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒರ್ವ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಇದನ್ನೂ ಓದಿ: ನಟ ದರ್ಶನ್‌ಗೆ ಬಿಗ್ ರಿಲೀಫ್; 7 ತಿಂಗಳ ಬಳಿಕ ಜಾಮೀನು ಮಂಜೂರು
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಈ ನೋಟಿಸಿಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್ ಈ ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಅಲ್ಲು ಅರ್ಜುನ್ (Allu Arjun) ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 (Pushpa 2) ಅಂಗಳದಿಂದ ಎರಡನೇ ಹಾಡು (Song) ಬಿಡುಗಡೆಯಾಗಿದೆ. ದಿ ಕಪಲ್ ಸಾಂಗ್ ಗೆ ಪುಷ್ಪರಾಜ್ ಹಾಗೂ ಶ್ರೀವಲ್ಲಿ (Rashmika Mandanna) ಹೆಜ್ಜೆ ಹಾಕಿದ್ದಾರೆ. ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸೆಕೆಂಡ್ ಸಾಂಗ್ ಬಿಡುಗಡೆಯಾಗಿದೆ. ಕನ್ನಡದ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಆರು ಭಾಷೆಯ ಹಾಡಿಗೆ ಧ್ವನಿಯಾಗಿದ್ದಾರೆ.
ಪುಷ್ಪ ಸೀಕ್ವೆಲ್ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಈಗಾಗ್ಲೇ ಭಾರೀ ಸದ್ದು ಮಾಡಿದ್ದು, ಇದೀಗ ರಿಲೀಸ್ ಆಗಿರುವ ಸಾಂಗ್ ಕೂಡ ಸೆನ್ಸೇಷನ್ ಸೃಷ್ಟಿಸುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅದ್ಧೂರಿ ಸೆಟ್ ನಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರೀಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪುಷ್ಪ ಪುಷ್ಪ ಹಾಡು 100 ಮಿಲಿಯನ್ಸ್ ವೀಕ್ಷಣೆ ಕಂಡಿದೆ, ಕಪಲ್ ಸಾಂಗ್ ಕೂಡ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ. ತೆಲುಗಿನಲ್ಲಿ ‘ಸೂಸೆಕಿ..’ , ಕನ್ನಡದಲ್ಲಿ ‘ನೋಡೋಕ..’ ಎಂದು ಹಾಡು ಶುರುವಾಗುವ ಹಾಡು ಕೇಳುಗರಿಗೆ ಕಿಕ್ ಕೊಡುತ್ತಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರುವ ಪುಷ್ಪ 2 ಈ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಪುಷ್ಪ ಸಿನಿಮಾ ಶೂಟಿಂಗ್ ಸೆಟ್ ನಿಂದ ಅಲ್ಲು ಅರ್ಜುನ್ ಅವರ ಫೋಟೋವೊಂದು ಲೀಕ್ (Photo Leak) ಆಗಿದ್ದು, ಈ ಕೃತ್ಯ ಮಾಡಿದವರ ವಿರುದ್ಧ ಚಿತ್ರತಂಡ ಗರಂ ಆಗಿದೆ. ಅಲ್ಲು ಅರ್ಜುನ್ ಅವರು ಸೀರೆ ತೊಟ್ಟು ಶೂಟಿಂಗ್ ಗಾಗಿ ಕಾಯುತ್ತಿರುವ ಫೋಟೋ ಅದಾಗಿದ್ದು, ಸಿನಿಮಾದ ಪ್ರಮುಖ ದೃಶ್ಯದಲ್ಲಿ ಅವರು ಆ ರೀತಿ ಕಾಣಲಿದ್ದಾರಂತೆ. ಅದೇ ಫೋಟೋ ಇದೀಗ ಲೀಕ್ ಆಗಿ ಗುಟ್ಟು ರಟ್ಟು ಮಾಡಿದೆ.
ಈ ನಡುವೆ ಪುಷ್ಪ-2 ಬಿಡುಗಡೆ ಕುರಿತಂತೆ ಮತ್ತೊಂದು ಸ್ಪಷ್ಟನೆ ಬಂದಿದೆ. ಅಲ್ಲಿಗೆ ನಿಗದಿತ ದಿನಾಂಕದಂದೆ ಸಿನಿಮಾ ರಿಲೀಸ್ (Released) ಆಗುವುದು ಫಿಕ್ಸ್ ಆಗಿದೆ. ನಿನ್ನೆಯಷ್ಟೇ ನಿರ್ಮಾಣ ಸಂಸ್ಥೆಯು ಪೋಸ್ಟರ್ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ರಿಲೀಸ್ ಗೆ 200 ದಿನವಷ್ಟೇ ಬಾಕಿ ಎಂದು ಬರೆದಿತ್ತು. ಈ ಹಿಂದೆ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ ಎಂದು ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿತ್ತು. ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದರು. ಇದೀಗ ರಿಲೀಸ್ ಡೇಟ್ ಮುಂದೆ ಹೋಗಿದೆ ಎಂದು ಸುದ್ದಿಯನ್ನು ಹರಿಬಿಡಲಾಗಿದೆ. ಅಂದು ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ ಬರಲಿರುವ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಅಂತ ಸುದ್ದಿ ಆಗಿತ್ತು.
ಇಂಥದ್ದೊಂದು ಸುದ್ದಿ ಆದ ಬೆನ್ನಲ್ಲೇ ಸಿನಿಮಾ ತಂಡದಿಂದ ಸ್ಪಷ್ಟನೆ ಬಂದಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಮುಂದಕ್ಕೆ ಹಾಕಲ್ಲ ಅಂದಿದ್ದಾರೆ ನಿರ್ದೇಶಕರು. ಘೋಷಣೆ ಮಾಡಿದ ದಿನದಂದೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ತೊಟ್ಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.
ನಿರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ.
‘ಪುಷ್ಪ 2’ ದಿ ರೂಲ್ಸ್ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಖಬರ್ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು.
ಬಾಲಿವುಡ್ (Bollywood) ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗಾಗಿ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗ್ತಿರುವ ಪುಷ್ಪ-2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ.
ಪುಷ್ಪ ಸಿನಿಮಾ ಹಿಟ್ ಆಗಲು ‘ಹುಂ ಅಂಟವಾ ಮಾವ’ ಐಟಂ ಸಾಂಗ್ (Item Song) ಕೂಡ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಮಂತಾ ಈ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದರು. ಪಡ್ಡೆಗಳ ಹೃದಯದಲ್ಲಿ ಚಿಟ್ಟೆ ಹಾರಿಸಿದ್ದರು. ಈ ಹಾಡು ಹಿಟ್ ಆಗಿದ್ದರಿಂದ, ಚಿತ್ರದ ಗೆಲುವಿಗೂ ಅದು ಸಹಕಾರಿ ಆಯಿತು. ಪುಷ್ಪ 2ನಲ್ಲೂ ಅಂಥದ್ದೊಂದು ಫಾರ್ಮುಲಾವನ್ನು ಮತ್ತೆ ವರ್ಕ್ ಮಾಡುತ್ತಿದ್ದಾರೆ ನಿರ್ದೇಶಕರು. ಪುಷ್ಪ 2ನಲ್ಲೂ ಒಂದು ಐಟಂ ಸಾಂಗ್ ಇರಲಿದ್ದು, ಅದಕ್ಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಊವರ್ಶಿ ಬದಲು ಕನ್ನಡದ ನಟಿ ಶ್ರೀಲೀಲಾ (Sreeleela) ಡಾನ್ಸ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ತೆಲುಗು ಚಿತ್ರೋದ್ಯಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಸ್ಪರ್ಧೆಗೆ ಬಿದ್ದಿದ್ದಾರೆ. ರಶ್ಮಿಕಾಗೆ ಸಿಗಬೇಕಿದ್ದ ಹಲವು ಅವಕಾಶಗಳನ್ನು ಶ್ರೀಲೀಲಾ ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದರೆ, ಶ್ರೀಲೀಲಾ ಕೇವಲ ಐಟಂ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಹೊರ ಬೀಳದೇ ಇದ್ದರೂ, ಸುದ್ದಿಯಂತೂ ಸಖತ್ ಸೇಲ್ ಆಗುತ್ತಿದೆ.
ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾದ ಶೂಟಿಂಗ್ ಕುಂಟುತ್ತಾ ಸಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ (Climax) ದೃಶ್ಯದ ಚಿತ್ರೀಕರಣವನ್ನು ಮಾಡಲು ನಿರ್ದೇಶಕ ಸುಕುಮಾರನ್ (Sukumaran) ಪ್ಲ್ಯಾನ್ ಮಾಡಿದ್ದು, ಅದೊಂದು ರೋಮಾಂಚನಕಾರಿ ನೀಡುವಂತಹ ಸನ್ನಿವೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ (Swarnamukhi) ನದಿಯ ತೀರದಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಜೊತೆ ಫಾಸಿಲ್ ಕೂಡ ಭಾಗಿಯಾಗಲಿದ್ದಾರಂತೆ. ಈ ದೃಶ್ಯಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನವನ್ನು ಕಳ್ಳ ಮಾರ್ಗದಲ್ಲಿ ಸಾಗಿಸುವ ಪುಷ್ಪರಾಜನ ವಿರುದ್ಧ ಭನ್ವಿರ್ ಸಿಂಗ್ ಮಾಡುವ ದಾಳಿಯೇ ಕ್ಲೈಮ್ಯಾಕ್ಸ್ ದೃಶ್ಯ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್
ಈ ನಡುವೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.
ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಕಾಮನ್ ಡಿಪಿಯನ್ನು ರಿಲೀಸ್ ಮಾಡಿ ಶುಭ ಹಾರೈಸಿದ್ದರು ನಟಿ ಕೀರ್ತಿ ಸುರೇಶ್. ಇಂದು ಪುಷ್ಪಾ 2 ಚಿತ್ರತಂಡದಿಂದ ಉಡುಗೊರೆಯೊಂದು ಸಿಕ್ಕಿದೆ. ಈ ಹುಟ್ಟು ಹಬ್ಬಕ್ಕಾಗಿ ಪುಷ್ಪಾ 2 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ವಿಶ್ ಮಾಡಿದೆ.
ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಅಭಿಮಾನಿಗಳು ಈ ಲುಕ್ ಗೆ ಫಿದಾ ಆಗಿದ್ದು, ಶುಭಾಶಯಗಳ ಸುರಿಮಳೆಗೈದಿದ್ದಾರೆ. ರಶ್ಮಿಕಾ ಕೂಡ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೇ, ಪುಷ್ಪಾ 2 ತಂಡಕ್ಕೆ ವಿಶೇಷವಾದ ಕೃತಜ್ಞತೆಯನ್ನೂ ಅವರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್
ಪರಭಾಷೆಗಳಲ್ಲಿ ನಾನಾ ತರಹದ ಪಾತ್ರಗಳ ಮೂಲಕ ಮನಗೆದ್ದಿರುವ ನಟಿ ರಶ್ಮಿಕಾ, ಇದೀಗ ಮೊದಲ ಬಾರಿಗೆ Female Lead ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ನಟಿ ರಶ್ಮಿಕಾ, ಸೌತ್- ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಶೈನ್ ಆಗ್ತಿದ್ದಾರೆ. ಈವರೆಗೂ 18 ಸಿನಿಮಾಗಳಲ್ಲಿ ನಟಿಸಿರುವ ಪುಷ್ಪ ನಟಿ, ಇದೀಗ ಹೊಸ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಪ್ರತಿ ನಟಿಯ ಕನಸಾಗಿರುತ್ತದೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿ ಗೆದ್ದವರು ತೀರಾ ಕಡಿಮೆ ನಾಯಕಿಯರು. ನಯನತಾರಾ, ಅನುಷ್ಕಾ ಶೆಟ್ಟಿ, ಸಮಂತಾ (Samantha), ಇವರೆಲ್ಲರೂ ಫೀಮೇಲ್ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿ ಜಯ ಸಾಧಿಸಿದ್ದಾರೆ. ಇದೀಗ ಈ ಹಾದಿಯಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಇಟ್ಟಿದ್ದಾರೆ.
ಈಗಾಗಲೇ ಮಹಿಳಾ ಪ್ರಧಾನ ಚಿತ್ರದ ಕಥೆ ಕೇಳಿ ರಶ್ಮಿಕಾ ಓಕೆ ಎಂದಿದ್ದಾರೆ. ಮೊದಲ ಬಾರಿಗೆ ಸ್ತ್ರೀ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಅದಕ್ಕಾಗಿ ನಟಿ ಸಕಲ ತಯಾರಿ ಮಾಡ್ತಿದ್ದಾರೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ರಶ್ಮಿಕಾ, ಹೊಸ ಸಿನಿಮಾವನ್ನ ನಿರ್ಮಾಣ ಮಾಡ್ತಿದೆ.
ಅಲ್ಲು ಅರ್ಜುನ್ (Allu Arjun) ಮತ್ತು ಸುಕುಮಾರ್ (Sukumar) ಕಾಂಬಿನೇಷನ್ ನ ‘ಪುಷ್ಪ 2’ (Pushpa 2) ಸಿನಿಮಾದ ವೈಜಾಗ್ ಭಾಗದ ಚಿತ್ರೀಕರಣ ನಿನ್ನೆಯಷ್ಟೇ ಮುಗಿದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿರುವ ಅಲ್ಲು ಅರ್ಜುನ್ ‘ಥ್ಯಾಂಕ್ಸ್ ವೈಜಾಗ್’ ಎಂದು ಬರೆದುಕೊಂಡಿದ್ದಾರೆ. ಹಲವು ದಿನಗಳಿಂದ ಚಿತ್ರತಂಡ ಈ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಹಲವು ಮಹತ್ವದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ.
ವೈಜಾಗ್ ಬೀಚ್ ದಂಡೆಯ ಮೇಲೆ ಹಲವು ದೃಶ್ಯಗಳನ್ನು ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಮುಂದಿನ ಭಾಗದ ಚಿತ್ರೀಕರಣವನ್ನು ಹೈದರಾಬಾದ್ ನಲ್ಲಿ ಪ್ಲ್ಯಾನ್ ಮಾಡಲಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸಾಹಸ ಸನ್ನಿವೇಶಗಳನ್ನು ಕೂಡ ಚಿತ್ರೀಕರಣ ಮಾಡುವ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ಸುಕುಮಾರ್. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ
ಪುಷ್ಪ 2 ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಇನ್ನೂ ಹಲವು ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರಂತೆ ನಿರ್ದೇಶಕರು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಇನ್ನೂ ಹಲವು ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರಂತೆ. ಅಲ್ಲದೇ, ಪುಷ್ಪ 1 ರಲ್ಲಿ ಮಾಡಿದ್ದ ಅಷ್ಟೂ ತಪ್ಪುಗಳನ್ನು ಈ ಸಿನಿಮಾದಲ್ಲಿ ಸರಿ ಮಾಡಿಕೊಂಡಿದ್ದಾರಂತೆ ನಿರ್ದೇಶಕರು.
Live Tv
[brid partner=56869869 player=32851 video=960834 autoplay=true]
ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ನ ಪುಷ್ಪಾ 2 ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಸಿನಿಮಾ ತಂಡವು ಭರ್ಜರಿಯಾಗಿಯೇ ಚಿತ್ರೀಕರಣ ಆರಂಭಿಸಿದೆ. ಈ ನಡುವೆ ಸಿನಿಮಾ ಟೀಮ್ ನಿಂದ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಕೂಡ ನಟಿಸಲಿದ್ದು, ಕ್ಲೈಮ್ಯಾಕ್ಸ್ ಭಾಗದಲ್ಲಿ ಅವರು ಇರಲಿದ್ದಾರೆ ಎನ್ನುತ್ತಿವೆ ಮೂಲಗಳು.
ಈ ಹಿಂದೆ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಸ್ವತಃ ರಾಜಮೌಳಿ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದರು. ಆದರೆ, ಯಾವ ಸಿನಿಮಾ ಎಂದು ಅವರು ಹೇಳಿರಲಿಲ್ಲ. ಮೂಲಗಳ ಪ್ರಕಾರ ಪುಷ್ಪಾ 2 ಸಿನಿಮಾದಲ್ಲಿ ರಾಮ್ ಚರಣ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಇವರಿಗಾಗಿಯೇ ಆ ಪಾತ್ರವನ್ನು ಸೃಷ್ಟಿ ಮಾಡಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್
ಹಾಗಂತ ಬರೀ ಈ ಸಿನಿಮಾದಲ್ಲಿ ಮಾತ್ರ ರಾಮ್ ಚರಣ್ ನಟಿಸುತ್ತಿಲ್ಲ. ಪುಷ್ಪಾ 2 ನಂತರ ಸುಕುಮಾರ್ ಮತ್ತು ರಾಮ್ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ. ರಾಮ್ ಚರಣ್ ಕೂಡ ಶಂಕರ್ ಅವರ ಸಿನಿಮಾದಲ್ಲಿ ನಟಿಸಬೇಕಿದೆ. ಒಪ್ಪಿಕೊಂಡ ಪ್ರಾಜೆಕ್ಟ್ ಗಳನ್ನು ಮುಗಿಸಬೇಕಿದೆ. ಅವೆಲ್ಲವೂ ಮುಗಿದ ನಂತರ ಸುಕುಮಾರ್ ಅವರು ರಾಮ್ ಚರಣ್ ಅವರ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ.
Live Tv
[brid partner=56869869 player=32851 video=960834 autoplay=true]
ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ 2’ ಸಿನಿಮಾ ಯಾವಾಗಿಂದ ಸೆಟ್ಟೇರುತ್ತದೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಸುದ್ದಿಗಳು ಹೊರ ಬರುತ್ತಲೇ ಇವೆ. ಅವೆಲ್ಲವೂ ವಿವಾದಕ್ಕೆ ಕಾರಣವಾಗುತ್ತಿವೆ. ಈ ಹಿಂದೆ ಪುಷ್ಪಾ 2 ಸಿನಿಮಾದ ಕಥೆಯನ್ನೇ ನಿರ್ದೇಶಕರು ಬದಲಾಯಿಸುತ್ತಿದ್ದಾರೆ ಎಂದಾಯಿತು. ನಂತರ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಇರುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ರಶ್ಮಿಕಾ ಮಂದಣ್ಣ ಪಾತ್ರ ಸಿನಿಮಾದ ಅರ್ಧಕ್ಕೆ ಸಾಯುತ್ತದೆ ಎಂದೂ ಸುದ್ದಿ ಹೊರಬಿತ್ತು. ಇದೀಗ ಮತ್ತೊಂದು ರಣರೋಚಕ ವಿಷಯ ಹರಡಿದೆ.
ತೆಲುಗಿನ ಖ್ಯಾತ ನಟ ವಿಜಯ್ ಸೇತುಪತಿ ಪುಷ್ಪಾ 2 ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಪುಷ್ಪಾನನ್ನು ಹೆಡೆಮೂರಿ ಕಟ್ಟುವುದಕ್ಕೆ ಈ ಪೊಲೀಸ್ ಪಾತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಪುಷ್ಪಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಫಹಾದ್ ಫಾಸಿಲ್ ಸಮರ್ಥವಾಗಿ ನಿಭಾಯಿಸಿದ್ದರು. ಈ ಬಾರಿ ಅವರ ಪಾತ್ರ ಇರುತ್ತಾ ಇಲ್ಲವಾ ಎನ್ನುವುದೇ ಸಸ್ಪೆನ್ಸ್. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ವಿಜಯ್ ಸೇತುಪತಿಯ ಪಾತ್ರ ಎಂಟ್ರಿ ಆಗುತ್ತಿದ್ದಂತೆಯೇ ಫಹಾದ್ ಫಾಸಿಲ್ ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪೊಲೀಸ್ ಅಧಿಕಾರಿಯ ಪಾತ್ರವನ್ನು ತಾವು ಮಾಡಿದ್ದರಿಂದ, ಅದನ್ನೇ ಮುಂದುವರೆಸಿಕೊಂಡು ಹೋಗಬಹುದಿತ್ತಲ್ಲ ಎಂದು ಫಾಸಿಲ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಪಾತ್ರದ ಅವಶ್ಯಕತೆ ನನಗೆ ಕಾಣುತ್ತಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನುವುದು ಈಗಿರುವ ಸುದ್ದಿ.
Live Tv
[brid partner=56869869 player=32851 video=960834 autoplay=true]