Tag: ಪುಷ್ಪಾ ಸಿನಿಮಾ

  • ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಖತರ್ನಾಕ್ ಗ್ಯಾಂಗ್ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಶ್ವಾನವೊಂದು ಅವರ ಇಡೀ ಪ್ಲ್ಯಾನ್‍ನ್ನು ತಲೆಕೆಳಗೆ ಮಾಡಿಬಿಟ್ಟಿದೆ.

    ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಸೀನ್ ಅನ್ನು ಈಗ ನಕಲು ಮಾಡಿಕೊಂಡು ಖತರ್ನಾಕ್ ಗ್ಯಾಂಗ್‍ಗಳು ಕಳ್ಳತನ ಮಾಡಲಾರಂಭಿಸಿದೆ. ಈಗ ಅಂಥದ್ದೇ ಗ್ಯಾಂಗ್‍ನಿಂದ 28 ಲಕ್ಷ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಕ್ರೇಟ್ ಹಾಕಿ ಕೆಳಭಾಗದಲ್ಲಿ ರಕ್ತಚಂದನ ಹಾಕಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‍ನ್ನು ಅರಣ್ಯ ಇಲಾಖೆಯ ಗಾರ್ಡ್ ಮಲ್ಲಿಕಾರ್ಜುನ್ ಚೇಸ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಅವರ ಜೊತೆ ಇದ್ದ ಇಲಾಖೆ ಶ್ವಾನ ಸೀಸರ್ ಅಲಿಯಾಸ್ ಸ್ವೀಟಿ ಕೂಡ ಈ ಕಳ್ಳರನ್ನು ಚೇಸ್ ಮಾಡಿದೆ. ಗಾಬರಿಯಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಕಳ್ಳರು, ಬಯಲಿನಲ್ಲಿ ಗಾಡಿ ನಿಲ್ಲಿಸಿ ಗಾಡಿ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದಾರೆ. ಸದ್ಯ 28 ಲಕ್ಷ ಮೌಲ್ಯದ 497 ಕೆಜಿ ರಕ್ತಚಂದನ ಮರದ ತುಂಡು, 61 ಕೆಜಿ ಚಿಕ್ಕ ಚಕ್ಕೆಯನ್ನು ಜಪ್ತಿಮಾಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಡಿಸಿಎಫ್ ಗಂಗಾಧರ್, ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ಸದ್ಯ ಕಮ್ಮಗೊಂಡನಹಳ್ಳಿಯಲ್ಲಿ ರಕ್ತಚಂದನ ಇಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆಬೀಸಲಾಗಿದೆ.

  • ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ : ಪುನೀತ್ ಅಭಿಮಾನಿಗಳಿಂದ ರಶ್ಮಿಕಾಗೆ ಕ್ಲಾಸ್

    ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ : ಪುನೀತ್ ಅಭಿಮಾನಿಗಳಿಂದ ರಶ್ಮಿಕಾಗೆ ಕ್ಲಾಸ್

    ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ತಡಮಾಡಿ ವಿಶ್ ಮಾಡಿದ್ದ ರಶ್ಮಿಕಾ ಮಂದಣ್ಣ, ಇದೀಗ  ಅಲ್ಲು ಅರ್ಜುನ್ ಬರ್ತಡೇಗೆ ಬೆಳ್ಳಂಬೆಳಗ್ಗೆ ಶುಭಾಶಯ ಕೋರಿದ್ದಾರೆ. ರಶ್ಮಿಕಾ ಈ ನಡೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

    ಪುನೀತ್ ಅವರ ಜನ್ಮದಿನಕ್ಕೆ ಪುನೀತ್ ಅವರ ಜತೆ ನಟಿಸಿದ್ದ ಅಷ್ಟೂ ತಾರೆಯರು ಶುಭಾಶಯ ಕೋರಿದ್ದರು. ಕೋಟ್ಯಾಂತರ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿದ್ದರು. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಅಂದು ಶುಭಾಶಯ ಕೋರಿ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಹಾಗಾಗಿ ಪುನೀತ್ ಅಭಿಮಾನಿಗಳು ರಶ್ಮಿಕಾ ಮೇಲೆ ಗರಂ ಆಗಿದ್ದರು. ಪರಭಾಷಾ ನಟ ನಟಿಯರೆಲ್ಲ ಅಪ್ಪು ಅವರಿಗೆ ಶುಭಾಶಯ ಕೋರಿದ್ದಾರೆ. ರಶ್ಮಿಕಾ ಯಾಕೆ ಪೋಸ್ಟ್ ಮಾಡಿಲ್ಲ ಎಂದು ಸಖತ್ ಟ್ರೋಲ್ ಮಾಡಿದ್ದರು. ಒಂದು ದಿನದ ನಂತರ ಎಚ್ಚೆತ್ತುಕೊಂಡಿದ್ದ ರಶ್ಮಿಕಾ ‘ಶುಭಾಶಯ’ ಕೋರಿ ಟ್ವಿಟ್ ಮಾಡಿದ್ದರು. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

    ಇಂದು ಅಲ್ಲು ಅರ್ಜುನ್ ಅವರ ಜನ್ಮದಿನ. ಈ ಹುಟ್ಟು ಹಬ್ಬಕ್ಕೆ ಲವಲವಿಕೆಯಿಂದ ಶುಭಾಶಯ ಕೋರಿದ್ದಾರೆ ರಶ್ಮಿಕಾ. ‘ಹ್ಯಾಪಿ ಬರ್ತಡೇ ನನ್ನ ಪುಷ್ಪಾ..’ ಎಂದು ರೋಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ‘ಈ ಜಗತ್ತು ಈಗಾಗಲೇ ನಿಮ್ಮ ಪ್ರೀತಿಸುತ್ತಿದೆ. ಭಾರತದಲ್ಲಿಯ ಅಭಿಮಾನಿಗಳು ನಿಮ್ಮನ್ನು ಪ್ರೀತಿಸುತ್ತಲೇ ಇರುತ್ತಾರೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರ ಪ್ರೀತಿ ನಿಮಗೆ ಸಿಕ್ಕಿದೆ. ಟನ್ ಗಟ್ಟಲೇ ನಿಮಗೆ ಪ್ರೀತಿಯನ್ನುಕಳುಹಿಸುತ್ತೇನೆ’ ಎಂದು ಹೃದಯದಿಂದ ರಶ್ಮಿಕಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಪುಷ್ಪಾ ಸಿನಿಮಾದ ಸಕ್ಸಸ್ ನಂತರ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಗೆ ಭಾರೀ ಬೇಡಿಕೆ ಬಂದಿದೆ. ಅಲ್ಲದೇ, ಈ ಜೋಡಿಯ ಪುಷ್ಪಾ 2 ಸಿನಿಮಾ ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದೆ. ಪುಷ್ಪಾ ಬಂದ ನಂತರ ರಶ್ಮಿಕಾ ಅವರ ಸಂಭಾವನೆ ಕೂಡ  ಏರಿಕೆಯಾಗಿದೆ. ಹೀಗಾಗಿ ಅಲ್ಲು ಬಗ್ಗೆ ಅಷ್ಟೊಂದು ಭಾವನಾತ್ಮಕವಾಗಿ ರಶ್ಮಿಕಾ ಪೋಷ್ಟ್ ಮಾಡಿದ್ದಾರೆ.

  • ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸ್ಟುಡಿಯೋ ವಿಶ್

    ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸ್ಟುಡಿಯೋ ವಿಶ್

    ಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದ ನಂತರವೂ ಒಬ್ಬರಿಗೊಬ್ಬರು ಗೌರವಿಸುವುದನ್ನು ಮರೆತಿಲ್ಲ. ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಏನಾದರೂ ಕೆಟ್ಟ ಕಾಮೆಂಟ್ ಮಾಡಿದಾಗೆಲ್ಲ ರಶ್ಮಿಕಾ ಪರ ನಿಂತುಕೊಂಡು ರಕ್ಷಿತ್ ಮಾತನಾಡಿದ್ದಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮೇಲೆ ರಕ್ಷಿತ್ ಅವರಿಗೆ ಗೌರವವಿದೆ. ಈ ಕಾರಣಕ್ಕಾಗಿಯೇ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಅವರ ಒಡೆತನದ ಪರಮ್ ಸ್ಟುಡಿಯೋದಿಂದ ಹಾರೈಕೆಗಳನ್ನು ಟ್ವಿಟ್ ಮಾಡಲಾಗಿದೆ. ಅತೀ ಸುಂದರವಾದ ಫೋಟೋ ಹಾಕಿ ‘ಸ್ಟಾರ್ ಮತ್ತು ಸುಂದರವಾದ ನಟಿಗೆ ಶುಭಾಶಯಗಳು. ನಿಮ್ಮ ಜನುಮದಿನ ವಿಶೇಷ, ಸಿನಿಮಾದಿಂದ ಸಿನಿಮಾಗೆ ನಿಮ್ಮ ಅಸಾಧಾರಣ ಶಕ್ತಿಯನ್ನು ಪ್ರಸ್ತುತಪಡಿಸುತ್ತಿದ್ದೀರಿ’ ಎಂದು ಸುಂದರವಾದ ಸಾಲುಗಳ ಮೂಲಕ ರಶ್ಮಿಕಾ ಅವರನ್ನು ವರ್ಣನೆ ಮಾಡಲಾಗಿದೆ.

    ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್ ಅವರು ಎಂಗೇಜ್ ಮೆಂಟ್ ಮುರಿದು ಬಿದ್ದಾಗ ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುತ್ತಿದ್ದರು. ಪ್ರತಿ ಸಲವೂ ಅವರನ್ನು ಟ್ರೋಲ್ ಮಾಡುತ್ತಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಹೋಲಿಕೆ ಮಾಡಿ, ಬೈಯುತ್ತಿದ್ದರು. ಆಗೆಲ್ಲ ರಶ್ಮಿಕಾ ಪರವಾಗಿಯೇ ರಕ್ಷಿತ್ ನಿಂತಿದ್ದರು. ಯಾರೂ ಯಾರಿಗೂ ಕೆಟ್ಟದ್ದಾಗಿ ಮಾತನಾಡುವ ಹಕ್ಕಿಲ್ಲ. ಜೀವನದಲ್ಲಿ ಎಲ್ಲವೂ ನಡೆಯುವುದು ಸಹಜ. ನನ್ನ ಸಿನಿಮಾವನ್ನು ನೀವು ಪ್ರೀತಿಸುತ್ತಿದ್ದರೆ, ನನ್ನನ್ನು ಅಭಿಮಾನಿಸುತ್ತಿದ್ದರೆ, ಅವರನ್ನೂ ಗೌರವಿಸಿ ಎಂದಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ರಕ್ಷಿತ್ ಶೆಟ್ಟಿ ನಟನೆಯ ಮತ್ತು ನಿರ್ಮಾಣದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದವರು ರಶ್ಮಿಕಾ. ಚೊಚ್ಚಲು ಸಿನಿಮಾದಲ್ಲೇ ಅವರು ಸಿಕ್ಕಾಪಟ್ಟೆ ಫೇಮಸ್ ಆದರು. ಒಂದು ರೀತಿಯಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಸ್ಯಾಂಡಲ್ ವುಡ್ ಹಿಟ್ ಪೇರ್ ಆಯಿತು. ಅಲ್ಲಿಂದ ರಶ್ಮಿಕಾ ಕನ್ನಡದ ಬಹುತೇಕ ಸ್ಟಾರ್ ಗಳ ಜತೆ ನಟಿಸಿದರು. ಈ ನಡುವೆ ರಕ್ಷಿತ್ ಮತ್ತು ರಶ್ಮಿಕಾ ಪ್ರೇಮಗೀತೆ ಹಾಡಿದರು. ಗೆಳೆತನ ಪ್ರೇಮಕ್ಕೆ ತಿರುಗಿತು. ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ, ಈ ಬಂಧನ ತುಂಬಾ ದಿನ ಉಳಿಯಲಿಲ್ಲ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    2018ರಲ್ಲಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ತೆಲುಗು ಸಿನಿಮಾ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟರು. ವಿಜಯ್ ದೇವರಕೊಂಡ ಹೆಸರಿನ ಜತೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಡಿತು. ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವಲ್ಲಿಗೆ ಸುದ್ದಿ ಬೆಳೆಯಿತು. ಈ ಕುರಿತು ಇಬ್ಬರೂ ನಿರಾಕರಿಸಿದರೂ, ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಯನ್ನು ಸದಾ ಜೀವಂತವಾಗಿಡುತ್ತಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಸದ್ಯ ಬಾಲಿವುಡ್ ಗೂ ರಶ್ಮಿಕಾ ಹಾರಿದ್ದಾರೆ. ಅಲ್ಲಿಯೂ ಸ್ಟಾರ್ ನಟರ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ ಇದಕ್ಕೂ ಮೊದಲು ತಮಿಳು ಚಿತ್ರದಲ್ಲೂ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಪುಷ್ಪಾ’ ಸಿನಿಮಾ ರಶ್ಮಿಕಾ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತು. ಹೀಗಾಗಿ ದಕ್ಷಿಣದ ಸೂಪರ್ ಸ್ಟಾರ್ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ.