Tag: ಪುಷ್ಪಾ ಅರುಣ್‌ ಕುಮಾರ್‌

  • ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ದೀಪಿಕಾ ದಾಸ್ (Deepika Das) ಬಗ್ಗೆ ನಾನು ಮಾತಾಡಿದ್ದು ನಿಜ. ಆದ್ರೆ ಆ ಬಗ್ಗೆ ಈಗ ನಾನು ಈಗ ಪ್ರತಿಕ್ರಿಯೆ ನೀಡಲ್ಲ. ಅದೆಲ್ಲದಕ್ಕೂ ನಾನು ಕೊಡುವ ಉತ್ತರ ಇಷ್ಟೇ ಎಂದು ಯಶ್‌ (Yash) ತಾಯಿ ಪುಷ್ಪ ಅರುಣ್‌ ಕುಮಾರ್‌ (Pushpa Arunkumar) ಹೇಳಿದ್ದಾರೆ.

    ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ತೆಲುಗು ಸಿನಿಮಾವನ್ನು ಕನ್ನಡಕ್ಕೆ ವಿತರಣೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಈ ವೇಳೆ ಪುಷ್ಪಮ್ಮ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ದೀಪಿಕಾ ದಾಸ್ ಬಗ್ಗೆ ವೈರಲ್ ಆದ ವಿಡಿಯೋ ಬಗ್ಗೆ ಹಾಗೂ ಅದಕ್ಕೆ ದೀಪಿಕಾ ದಾಸ್ ಪ್ರತಿಕ್ರಿಯೆ ಕೊಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಯಾವುದೇ ಪ್ರತಕ್ರಿಯೆ ನೀಡುವುದಿಲ್ಲ. ನಾವು ಅವರು ಬೇರೆ ಬೇರೆ ಅಲ್ಲ ಒಂದೇ ಕುಟುಂಬದವರು. ನಾವೆಲ್ಲ ಒಂದೇ ಕಡೆ ಇರ್ತಿವಿ. ಈ ವಿಷಯ ಜಾಲತಾಣದಲ್ಲಿ ವೈರಲ್ ಆದ ಮೇಲೆ ನನ್ನ ಮಗ ಯಶ್ ಈ ವಿಚಾರವಾಗಿ ನಮ್ಮ ಬಳಿ ಏನೂ ಮಾತಾಡಿಲ್ಲ. ಯಶ್ ಆಗಲಿ ಮತ್ತೊಬ್ಬರಾಗಲಿ ನನ್ನ ಕೇಳುವಷ್ಟು ಇಲ್ಲ. ನಾನು ಯಾವ ಕಾರಣಕ್ಕೆ ಮಾತ್ನಾಡಿದ್ದೇನೆ ಅನ್ನೋದು ಅವರಿಗೆ ಗೊತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂ.ಎನ್‌ಟಿಆರ್‌ಗಾಗಿ ಸಿದ್ಧಸೂತ್ರ ಮುರಿಯಲು ಸಜ್ಜಾದ ಪ್ರಶಾಂತ್ ನೀಲ್

     

    ಸದ್ಯ ತಮ್ಮ ಕೊತ್ತಲವಾಡಿ ಸಿನಿಮಾದ ವೇಳೆ ಎದುರಾದ ಸಮಸ್ಯೆಗಳನ್ನುಅರಿತುಕೊಂಡು ಸಿನಿಮಾ ತರಣೆಗೂ ಧುಮುಕಿದ್ದಾರೆ. ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ವಿತರಣೆ ಮಾಡುವ ಪ್ಲ್ಯಾನ್‌ ಹೊಂದಿರುವ ಪುಷ್ಪ ಅರುಣ್‌ಕುಮಾರ್ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

    PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ (Anushka Shetty) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಘಾಟಿ (Ghaati) ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

  • ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಯಶ್ ತಾಯಿ ಪುಷ್ಪಾ ವಿತರಕಿ

    ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಯಶ್ ತಾಯಿ ಪುಷ್ಪಾ ವಿತರಕಿ

    ಕೊತ್ತಲವಾಡಿ (Kothalavadi) ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಈಗ ವಿತರಣಾ ವಲಯಕ್ಕೆ ಅಡಿಯಿಟ್ಟಿದ್ದಾರೆ. ಯಶ್ ತಾಯಿಯ ಈ ನಡೆಯು ಸಿನಿ ಪ್ರಿಯರಿಗೆ ಅಚ್ಚರಿ ತಂದಿದೆ. ಒಂದೇ ಒಂದು ಸಿನಿಮಾ ಮಾಡಿರೋ ಪುಷ್ಪಾ, ವಿತರಣೆ ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಕೂಡ ಮೂಡಿದೆ.

    PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ (Anushka Shetty) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಘಾಟಿ (Ghaati) ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

    ಫಾಟಿ ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕೂಡ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ಚಿತ್ರ ನಿರ್ಮಾಣಕ್ಕೆ ಬಂದಾಗ ತಾವು ತೋರಿದ ಪ್ರೀತಿಗೆ ಅನಂತ ಧನ್ಯವಾದ. ಈಗ ವಿತರಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.

  • ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್

    ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್

    ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವವ ಪೈಕಿ ನಟ ರಾಕಿಂಗ್ ಸ್ಟಾರ್ ಯಶ್ (Yash) ಕೂಡ ಒಬ್ಬರು. ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arunkumar) ತಮ್ಮದೇ ಪಿಎ ಪ್ರೊಡಕ್ಷನ್ಸ್ ಸ್ಥಾಪಿಸಿ, ಈ ನಿರ್ಮಾಣ ಸಂಸ್ಥೆಯಡಿ ಕೊತ್ತಲವಾಡಿ (Kothalavadi) ಎಂಬ ಚೊಚ್ಚಲ ಚಿತ್ರ ನಿರ್ಮಿಸಿದ್ದಾರೆ. ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

    ಆಗಸ್ಟ್ 1ಕ್ಕೆ ಯಶ್ ತಾಯಿ ಪುಷ್ಪ ಅವರು ನಿರ್ಮಿಸಿರುವ ಚೊಚ್ಚಲ ಚಿತ್ರ ಕೊತ್ತಲವಾಡಿ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಯುವ ಪ್ರತಿಭೆ ಶ್ರೀರಾಜ್ ಅವರ ನಿರ್ದೇಶನ ಮೊದಲ ಚಿತ್ರ ಇದಾಗಿದ್ದು, ಪೃಥ್ವಿ ಅಂಬರ್ (Pruthvi Ambaar) ನಾಯಕನಾಗಿ ಹಾಗೂ ಕಿರುತೆರೆ ನಟಿ ಕಾವ್ಯಾ ಶೈವ (Kavya Shaiva) ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ ಮಾಡಿದ ಯಶ್‌

    ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಇಲ್ಲಿಯವರೆಗೂ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ‘ಕೊತ್ತಲವಾಡಿ’ ಚಿತ್ರದಲ್ಲಿ ಕಂಪ್ಲೀಟ್ ಮಾಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕೊತ್ತಲವಾಡಿ ಟೀಸರ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ: ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.