Tag: ಪುಶ್ ಅಪ್

  • ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿಯ ವೀಡಿಯೋ ವೈರಲ್

    ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿಯ ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಮಂದಿರಾ ಬೇಡಿ ಬಳಿಕ ಇದೀಗ ಮತ್ತೊಬ್ಬ ನಟಿ ಸೀರೆಯಲ್ಲಿ ಪುಶ್ ಅಪ್ ಮಾಡಿ ಸುದ್ದಿಯಾಗಿದ್ದಾರೆ.

    ಹೌದು. ನಟಿ ಗುಲ್ ಪನಾಗ್ ಅವರು ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪುಶ್ ಅಪ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಂದಾದರೂ, ಎಲ್ಲಾದರೂ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಗುಲ್ ಪಾನಗ್ ಅಭಿಮಾನಿಗಳನ್ನು ಸ್ಫೂರ್ತಿಗೊಳಿಸಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.

     

    View this post on Instagram

     

    A post shared by Gul Panag (@gulpanag)

    ಪನಾಗ್ ಮಾತ್ರವಲ್ಲ ಇದಕ್ಕಿಂತ ಮೊದಲು ಕೆಲ ನಟಿಯರು ಕೂಡ ಸೀರೆಯಲ್ಲಿ ಪುಶ್ ಅಪ್ ಮಾಡಿದ್ದಾರೆ. ನಟಿ ಮಂದಿರಾ ಬೇಡಿ ಈ ಹಿಂದೆ ಸೀರೆಯಲ್ಲಿ ಪುಶ್ ಅಪ್ ಮಾಡಿ ವೀಡಿಯೋ ಮಾಡಿದ್ದರು. ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಮಂದಿರಾ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, ”ಉಡುಪು ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಅದು ಆಗಬೇಕು” ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿರಾಗೆ ನಿರೂಪಕ ಪುಶ್ ಅಪ್ ಮಾಡಲು ಸವಾಲು ನೀಡಿದ್ದರು. ಈ ವೇಳೆ ಮಂದಿರಾ ಏನೂ ಯೋಚಿಸದೇ ಸವಾಲನ್ನು ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದ್ದರು. ಕೆಲಸ ಏನೇ ಇರಲಿ, ಬಟ್ಟೆ ಯಾವುದೇ ಇರಲಿ, ಅದರ ಬಗ್ಗೆ ಯೋಚಿಸಬಾರದು ಎಂಬುದನ್ನು ತಿಳಿಸಿದ್ದರು.

     

    View this post on Instagram

     

    A post shared by Mandira Bedi (@mandirabedi)

  • 81ನೇ ಹುಟ್ಟುಹಬ್ಬದಂದು 15 ಪುಶ್-ಅಪ್ ಮಾಡಿದ ಅಜ್ಜಿ- ವೈರಲ್ ವಿಡಿಯೋ

    81ನೇ ಹುಟ್ಟುಹಬ್ಬದಂದು 15 ಪುಶ್-ಅಪ್ ಮಾಡಿದ ಅಜ್ಜಿ- ವೈರಲ್ ವಿಡಿಯೋ

    ನವದೆಹಲಿ: ಬಾಲಿವುಡ್ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿ ಉಷಾ ಸೋಮನ್ ಅವರು ಇತ್ತೀಚೆಗಷ್ಟೇ ತಮ್ಮ 81ನೇ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ಇದೇ ವೇಳೆ 15 ಪುಶ್ ಅಪ್ ಮಾಡಿ ಅಚ್ಚರಿಗೊಳಿಸಿದ್ದಾರೆ. ಸದ್ಯ ಉಷಾ ಸೋಮನ್ ಅವರ ಪುಶ್ ಅಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮಿಲಿಂದ್ ಸೋಮನ್ ಅವರು ತಮ್ಮ ಫಿಟ್ನೆಸ್ ಹಿಂದಿನ ಪ್ರೇರಣೆಯಾದ ವಿಡಿಯೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಉಷಾ ಸೋಮನ್ ಅವರು ಸೀರೆ ಉಟ್ಟು ಪುಶ್ ಅಪ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ತಮ್ಮ 81ನೇ ವಯಸ್ಸಿನಲ್ಲಿ ಉಷಾ ಸೋಮನ್ ಅವರು 15 ಪುಶ್ ಅಪ್ ಮಾಡಿ ನೋಡುಗರು ಹುಬ್ಬೆರಿಸುವಂತೆ ಮಾಡಿದ್ದಾರೆ.

    ಪುತ್ರ ಮಿಲಿಂದ್ ಸೋಮನ್ ಹಾಗೂ ಸೊಸೆ ಅಂಕಿತಾ ಕೊನ್ವಾರ್ ಅವರೊಂದಿಗೆ ಉಷಾ ಸೋಮನ್ ಅವರು ಜೂನ್ 3 ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸ್ವತಃ ಅಂಕಿತಾ ಅವರೇ ಮನೆಯಲ್ಲೇ ಕೇಕ್ ತಯಾರಿಸಿದ್ದಾರೆ. ‘ಲಾಕ್‍ಡೌನ್ ವೇಳೆ ಹುಟ್ಟುಹಬ್ಬದ ಸಂಭ್ರಮಾಚರಣೆ. 15 ಪುಶ್ ಅಪ್ ಮತ್ತು ಅಂಕಿತಾ ತಯಾರಿಸಿದ ಕೇಕ್‍ನೊಂದಿಗೆ ಪಾರ್ಟಿ’ ಎಂದು ಮಿಲಿಂದ್ ಸೋಮನ್ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಏಪ್ರಿಲ್‍ನಲ್ಲಿ ಅಂಕಿತಾ ಕೊನ್ವಾರ್ ಅವರು ಇನ್‍ಸ್ಟಾದಲ್ಲಿ ಉಷಾ ಸೋಮನ್ ಅವರೊಂದಿಗೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅಂಕಿತಾ ಮತ್ತು ಉಷಾ ಅವರು ಒಂದು ಕಾಲಿನ ಓಟ (ಕುಂಟಾನಿಲ್ಲೆ ಆಟ)ದಲ್ಲಿ ಭಾಗಿಯಾಗಿದ್ದರು. ‘ನಾನು 80 ವರ್ಷದ ವಯಸ್ಸಿನವರೆಗೂ ಬದುಕಿದ್ದರೇ ನನ್ನ ಏಕೈಕ ಆಸೆ ಒಂದೇ, ನಿಮ್ಮಂತೆ ಫಿಟ್ ಆಗಿರಬೇಕು. ನೀವು ಹಲವರಿಗೆ ಸ್ಫೂರ್ತಿಯಾಗಿದ್ದೀರಿ’ ಎಂದು ಅಂಕಿತಾ ಕೊನ್ವಾರ್ ಬರೆದುಕೊಂಡಿದ್ದರು.

    ವಿಶ್ವ ಅಮ್ಮಂದಿರ ದಿನದಂದು ವಿಡಿಯೋ ಹಂಚಿಕೊಂಡಿದ್ದ ಮಿಲಿಂದ್ ಸೋನಮ್ ಅವರು 80 ವರ್ಷದ ಉಷಾ ಸೋನಮ್ ಅವರ ವಿಡಿಯೋ ಹಂಚಿಕೊಂಡು ತಮ್ಮ ಫಿಟ್ನೆಸ್ ಹಿಂದಿನ ಸ್ಫೂರ್ತಿ ಇವರೇ ಎಂದು ತಾಯಿದೊಂದಿಗೆ ಪುಶ್ ಅಪ್ ಮಾಡುತ್ತಿದ್ದ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಉಷಾ ಸೋನಮ್ ಅವರು ಪುತ್ರನೊಂದಿಗೆ ಸ್ಫರ್ಧೆ ನಡೆಸುವಂತೆ ಪುಶ್ ಅಪ್ ಮಾಡಿದ್ದರು. ಮಿಲಿಂದ್ ಸೋನಮ್ ಮಾಡೆಲ್ ಕ್ಷೇತ್ರದಿಂದ ನಟನೆಗೆ ಕಾಲಿಟ್ಟವರು. ಅಷ್ಟೇ ಅಲ್ಲದೇ ಮ್ಯಾರಥಾನ್ ರನ್ನರ್ ಕೂಡ ಆಗಿದ್ದಾರೆ.

    ಅಂದಹಾಗೇ, ತಮ್ಮ 54ನೇ ವಯಸ್ಸಿನಲ್ಲಿ ಮಿಲಿಂದ್ ಅವರು 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗಗನಸಖಿ ಹಾಗೂ ತಮ್ಮ ಬಹುಕಾಲದ ಗೆಳತಿ 26 ವರ್ಷದ ಅಂಕಿತಾ ಕೊನ್ವಾರ್ ಅವರನ್ನು 2018ರಲ್ಲಿ ಕೈ ಹಿಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆ ಮಾಡಿದ್ದರೂ ಸಹ ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಪ್ರೂವ್ ಮಾಡ್ತಾ ಮಿಂಚುತ್ತಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಮ್ಯಾರಥಾನ್, ಟ್ರಕಿಂಗ್, ಟ್ರಾವೆಲ್ ಮತ್ತು ಹಬ್ಬಗಳು, ವಿಶೇಷ ಸಂದರ್ಭಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

  • ಪುಶ್ ಅಪ್ ಮಾಡಿ ಯೋಧರ ಕುಟುಂಬಗಳ ನೆರವಿಗೆ 15 ಲಕ್ಷ ದೇಣಿಗೆ ಸಂಗ್ರಹಿಸಿದ ಸಚಿನ್

    ಪುಶ್ ಅಪ್ ಮಾಡಿ ಯೋಧರ ಕುಟುಂಬಗಳ ನೆರವಿಗೆ 15 ಲಕ್ಷ ದೇಣಿಗೆ ಸಂಗ್ರಹಿಸಿದ ಸಚಿನ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ಕಾರ್ಯಕ್ರಮವನ್ನು ಆಯೋಜಿಸಿ ಮೊದಲ ದಿನವೇ 15 ಲಕ್ಷ ರೂ. ಹಣ ಸಂಗ್ರಹ ಮಾಡಿದ್ದಾರೆ.

    ದೆಹಲಿಯ ಮ್ಯಾರಾಥಾನ್ ನಲ್ಲಿ ಚಾಲನೆ ನೀಡಲು ಆಗಮಿಸಿದ್ದ ಸಚಿನ್ ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ 10 ಪುಶ್ ಅಪ್ ಮಾಡುವ ಕಿಪ್‍ಮೂವಿಂಗ್ ಪುಶ್ ಅಪ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲದೇ ಎಲ್ಲರೂ ಈ ಚಾಲೆಜ್ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜನರಿಂದ ಸಂಗ್ರಹಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲಾಗುತ್ತದೆ. ನಮ್ಮ ಕಾರ್ಯಕ್ರಮದ ಉದ್ದೇಶವನ್ನು ಅರ್ಥೈಸಿಕೊಂಡು ಬೆಂಬಲ ನೀಡುವುದಾಗಿ ನನಗೆ ನಂಬಿಕೆ ಇದೆ ಎಂದು ಸಚಿನ್ ವಿಶ್ವಾಸ ವ್ಯಕ್ತಪಡಿಸಿದರು.

    ಉಳಿದಂತೆ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮಕ್ಕಳು, ಯುವಕ, ಯುವತಿಯರು, ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಿದ್ದರು. ಸಚಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪುಶ್ ಅಪ್ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/BuSqf2OFFOv/?utm_source=ig_web_copy_link

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಮುಂಬೈ: ಫಿಟ್‍ನೆಸ್‍ನಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಮಂದಿರಾ ಈಗ ಇನ್‍ಸ್ಟಾಗ್ರಾಂ ಪೋಸ್ಟ್ ನಿಂದ ಮತ್ತೇ ಸುದ್ದಿಯಾಗಿದ್ದಾರೆ.

    ಮಂದಿರಾ ಕಾರ್ಯಕ್ರಮವೊಂದರಲ್ಲಿ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ಉಡುಪು ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಅದು ಆಗಬೇಕು” ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಂದಿರಾಗೆ ನಿರೂಪಕ ಪುಶ್ ಅಪ್ ಮಾಡಲು ಸವಾಲು ನೀಡಿದ್ದರು. ಮಂದಿರಾ ಏನೂ ಯೋಚಿಸದೇ ಸವಾಲನ್ನು ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದ್ದರು. ಕೆಲಸ ಏನೇ ಇರಲಿ, ಬಟ್ಟೆ ಯಾವುದೇ ಇರಲಿ, ಅದರ ಬಗ್ಗೆ ಯೋಚಿಸಬಾರದು ಎಂಬುದನ್ನು ತಿಳಿಸಿದ್ದಾರೆ.

    ಈ ಹಿಂದೆ ಕೂಡ ಮಂದಿರಾ ಬೇಡಿ ತನ್ನ ವರ್ಕೌಟ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್‍ವಾಲೇ ದುಲ್ಹಾನಿಯಾ ಲೇ ಜಾಯಾಂಗೆ ಸಿನಿಮಾದಲ್ಲಿ ಕಾಣಿಸಿಕೊಂಡ ಈ ನಟಿ ಹಲವು ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಐಪಿಎಲ್‍ನಲ್ಲಿ ನಿರೂಪಣೆ ಮಾಡಿದ್ದಾರೆ.