Tag: ಪುಲ್ವಾಮಾ

  • ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಸಾಂತ್ವಾನ

    ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಸಾಂತ್ವಾನ

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಸಮೀಪದ ಗುಡಿಕೆರೆ ಕಾಲೋನಿಯ ಯೋಧ ಗುರು ಎಚ್(33) ಹುತಾತ್ಮರಾಗಿದ್ದು, ಜಿಲ್ಲಾಧಿಕಾರಿ ಎನ್ ಮಂಜುಶ್ರೀ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರು ಕುಟುಂಬಕ್ಕೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ನೆರವಿಗೆ ಸಿದ್ಧವಿದೆ. ಕುಟುಂಬಸ್ಥರು ಧೈರ್ಯವಾಗಿರಬೇಕು ಹಾಗೆಯೇ ಹೆಚಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿಕೊಂಡರು.

    ಮೃತರ ಶರೀರ ಇಂದು ಅಥವಾ ನಾಳೆ ಸ್ವ-ಗ್ರಾಮಕ್ಕೆ ವಾಪಸ್ಸಾಗಲಿದೆ. ಆದ್ರೆ ಇನ್ನೂ ನಾವು ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ. ಅದು ಬಂದ ನಂತರ ಇದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಅವರು ಹೇಳಿದರು.

    ಈಗಾಗಲೇ ನಾನು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂತ್ಯಕ್ರಿಯೆಗಾಗಿ ತಾಲೂಕು ಆಡಳಿತದಿಂದ ಎರಡು ಜಾಗವನ್ನು ಗುರುತಿಸಿದ್ದೇವೆ. ಎರಡರಲ್ಲಿ ಯಾವುದು ಸೂಕ್ತ ಎನ್ನುವುದನ್ನು ನೋಡಿ ಅಂತಿಮ ಮಾಡುತ್ತೇವೆ. ಗುರು ಹುತಾತ್ಮರಾದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ ದೆಹಲಿಯಲ್ಲಿರುವ ಸಿಆರ್ ಪಿ ಎಫ್ ಕಚೇರಿಗೆ ಕರೆ ಮಾಡಿ ಕೇಳಿದಾಗ ಸಾವಾಗಿರುವುದು ನಿಶ್ಚಿತ ಎಂಬ ಮಾಹಿತಿ ಲಭಿಸಿದೆ ಎಂದು ಅವರು ತಿಳಿಸಿದ್ರು.

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    https://www.youtube.com/watch?v=Cagqto-A9E0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ದಾಳಿ ನಡೆಯೋ ಬಗ್ಗೆ ಮೊದ್ಲೇ ಸಿಕ್ಕಿತ್ತಾ ಸುಳಿವು..?

    ಪುಲ್ವಾಮಾದಲ್ಲಿ ದಾಳಿ ನಡೆಯೋ ಬಗ್ಗೆ ಮೊದ್ಲೇ ಸಿಕ್ಕಿತ್ತಾ ಸುಳಿವು..?

    ಪುಲ್ವಾಮಾ: ಜಮ್ಮು ಕಾಶ್ಮೀರದ ಆವಂತಿಪುರದಲ್ಲಿ ಉಗ್ರ ನಡೆಸಿದ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿದೆಯಾ ಎನ್ನುವ ಚರ್ಚೆಯೊಂದು ಇದೀಗ ಎದ್ದಿದೆ.

    ಪುಲ್ವಾಮಾದಲ್ಲಿ ನಡೆದ ದಾಳಿ ಕಳೆದ 20 ವರ್ಷಗಳಲ್ಲಿಯೇ ನಡೆದ ಅತೀ ದೊಡ್ಡ ದಾಳಿಯಾಗಿದೆ. 2001ರಲ್ಲಿ ಶ್ರೀನಗರದಲ್ಲಿರುವ ಸಚಿವಾಲಯದ ಮುಂಭಾಗ ನಡೆಸಿದ ಬಾಂಬ್ ದಾಳಿಯಲ್ಲಿ 38 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಗುರುವಾರ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತು ಅನ್ನೋ ಚರ್ಚೆ ನಡೀತಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಭಾರತಕ್ಕಿತ್ತಾ ದಾಳಿಯ ಸುಳಿವು..?
    ಫೆ. 5ರಂದು ಪಾಕಿಸ್ತಾನದ ಕರಾಚಿಯಲ್ಲಿ ಜೈಶ್ ಎ ಮೊಹ್ಮದ್ ಸಂಘಟನೆಯ ಜಾಥಾ ನಡೆದಿತ್ತು. ಇದರಲ್ಲಿ ಉಗ್ರ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಕೂಡಾ ಭಾಗಿಯಾಗಿದ್ದನು. ಈ ವೇಳೆ ಭಾರತದಲ್ಲಿ ದಾಳಿ ನಡೆಸಲು 7 ಉಗ್ರರ ತಂಡಗಳನ್ನು ಕಳುಹಿಸೋದಾಗಿ ಘೋಷಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ರವೂಫ್ ಘೋಷಣೆಯ ಬೆನ್ನಲ್ಲೇ ಅಲರ್ಟ್ ಆಗಿದ್ದ ಭಾರತದ ಗುಪ್ತಚರ ಇಲಾಖೆ ಭಾರತದಲ್ಲಿ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತಯ್ಬಾ ದಾಳಿ ಬಗ್ಗೆ ಸುಳಿವು ನೀಡಿತ್ತು. ವಾಹನಗಳ ಮೂಲಕವೇ ದಾಳಿ ನಡೆಸೋದಾಗಿ ಉಗ್ರ ಸಂಘಟನೆಯ ದೂರವಾಣಿ ಕರೆಗಳ ಮೂಲಕ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು


    ಇತ್ತೀಚಿನ ದಿನಗಳಲ್ಲಿ 2 ಸಂಘಟನೆಗಳು ಒಟ್ಟಾಗಿ ಕಾರ್ಯಚರಣೆ ನಡೆಸುತ್ತಿದ್ದು, ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಆತ್ಮಾಹುತಿ ದಾಳಿಯ ಪ್ಲಾನ್ ಮಾಡಿ 44 ಮಂದಿ ಭಾರತದ ಅಮಾಯಕ ಯೋಧರನ್ನು ಬಲಿತೆಗೆದುಕೊಂಡಿದೆ.

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರು ಪೋಷಕರು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ರೆ, ಇತ್ತ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ಗುರು ಗೆಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಗ್ರ ಕೃತ್ಯವನ್ನು ಖಂಡಿಸಿ, ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ. ಗೆಳೆಯರಾಗಿದ್ದ ಯೋಧರೊಬ್ಬರು ಮಾತನಾಡಿ, ಗುರು ಭಾಯ್ ಓರ್ವ ಯೋಧ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು. ಆದ್ರೆ ಉಗ್ರರು ಈ ರೀತಿ ಮಾಡಿರುವುದು ತುಂಬಾನೇ ನೋವಾಗಿದೆ. ನಾನು ಕೂಡ ಓರ್ವ ಯೋಧನಾಗಿದ್ದೇನೆ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಬುಧವಾರವಷ್ಟೇ ಗುರು ನನ್ನ ಜೊತೆ ಫೋನಿನಲ್ಲಿ ಮಾತನಾಡಿ, ಡ್ಯೂಟಿಗೆ ಹೋಗ್ತಾ ಇದ್ದೀನಿ. 2 ನಿಮಿಷದ ಬಳಿಕ ಕರೆ ಮಾಡ್ತೀನಿ ಎಂದು ಹೇಳಿದ್ದನು. ಆದ್ರೆ ಮತ್ತೆ ಆತನ ಕರೆ ಬಂದೇ ಇಲ್ಲ ಎಂದು ಗುರವಿನ ಗೆಳೆಯ ಯೋದರೊಬ್ಬರು ಬೇಸರ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು ಮೂರು ದಿನಗಳ ಹಿಂದೆಯಷ್ಟೇ ತೆರಳಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಆದ್ರೆ ಇದೀಗ ಅವರು ಉಗ್ರನ ಕೃತ್ಯದಿಂದ ಹುತಾತ್ಮರಾಗಿದ್ದಾರೆ. ಈ ವಿಚಾರ ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಗೆಳೆಯರೊಬ್ಬರು ಒತ್ತಾಯಿಸಿದ್ರು. ಇದನ್ನೂ ಓದಿ: 44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!

    ನನ್ನ ಗೆಳೆಯ ನಂದೀಶ್ ಎಂಬವರು ಜಾರ್ಖಂಡ್ ನಲ್ಲಿ ಸಿಆರ್‍ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ ಎಂಬ ಮಾಹಿತಿ ನೀಡಿದ್ರು. ಆದ್ರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿಯಿಲ್ಲ. ಹೀಗಾಗಿ ªಅವರ ಮನೆಯವರಿಗೆ ವಿಷಯ ತಿಳಿಸಬೇಡ ಎಂದಿದ್ದರು. ಇನ್ನೊಬ್ಬರು ಚೆಲುರಾಜು ಎಂಬವರು ಕೂಡ ಅಲ್ಲೇ ಕೆಲಸ ನಿರ್ವಹಿಸುತ್ತಿಒದ್ದರು. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಕೂಡ ಗುರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ರು ಎಂದು ಮತ್ತೋರ್ವ ಗೆಳೆಯ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ..!

    ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ..!

    ಜಮ್ಮು-ಕಾಶ್ಮೀರ: ಆತ್ಮಾಹುತಿ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಪಾಕ್ ನಿಂದ ಮತ್ತೆ ಗುಂಡಿನ ದಾಳಿ ನಡೆದಿದೆ. ಜಮ್ಮು-ಕಾಶ್ಮೀರದ ಗಡಿಯ ಪೋಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.

    ಒಂದು ಕಡೆ ಪಾಕಿಸ್ತಾನ ನಮಗೂ ನಿನ್ನೆ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಇನ್ನೊಂದೆಡೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿರುವುದು ಇದೀಗ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ.

    ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಹೊಣೆಯನ್ನು ನಿಷೇಧಿತ ಜೈಶ್-ಇ-ಮೊಹಮದ್ ಸಂಘಟನೆ ಹೊತ್ತುಕೊಂಡಿದ್ದು, ಈ ಸಂಬಂಧ ವಿಡಿಯೋವನ್ನು ಹರಿಬಿಟ್ಟಿದೆ. ಆತ್ಮಾಹುತಿ ದಾಳಿಯನ್ನು ಆದಿಲ್ ಅಹ್ಮದ್ ದಾರ್ ನಡೆಸಿದ್ದು, ತನ್ನ ಕೃತ್ಯದ ಬಗ್ಗೆ ನರಹಂತಕ ಉಗ್ರ ವಿಡಿಯೋದಲ್ಲಿ ಕೊಚ್ಚಿಕೊಂಡಿದ್ದಾನೆ. ಕಾಶ್ಮೀರದ ಪುಲ್ವಾಮ ದಾಳಿ ಬಳಿಕ ಜೈಶ್-ಇ-ಮೊಹಮದ್ ಸಂಘಟನೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ದಾಳಿ ನಡೆಸುವ ಮುನ್ನವೇ ಆದಿಲ್ ದಾರ್, ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ಬೆಂಬಲಿಸುವಂತೆ ಕಾಶ್ಮೀರಿ ಮುಸ್ಲಿಮರಲ್ಲಿಯೂ ಆತ ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಬಿಡುಗಡೆ ಆಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಆದೀಲ್ ದಾರ್ ಹೇಳಿಕೊಂಡಿದ್ದಾನೆ.

    ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿಯ ಸಿಆರ್‍ಪಿಎಫ್ ಯೋಧರ 72ಕ್ಕೂ ಅಧಿಕ ವಾಹನಗಳನ್ನು ಸ್ಫೋಟಿಸುವ ಗುರಿಯನ್ನು ಸಂಘಟನೆ ಆದಿಲ್ ನಿಗೆ ನೀಡಿತ್ತು. ಪ್ರತಿಯೊಂದು ವಾಹನದಲ್ಲಿ ಸುಮಾರು 40ರಿಂದ 45 ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಉಗ್ರರು ಪಡೆದುಕೊಂಡಿದ್ದರು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    2016 ಸೆಪ್ಟೆಂಬರ್ ನಲ್ಲಿ ನಡೆದ ಉರಿ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಉರಿ ದಾಳಿಗೆ ಪ್ರತೀಕರವಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು.

    https://www.youtube.com/watch?v=iKU4BcVVdnE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ಸಂತೋಷ್ ದಿಂಡಗೂರು
    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ರಾಜ್ಯದ ಯೋಧರೊಬ್ಬರು ವೀರಮರಣವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಕಾಲೋನಿಯ ಗುರು.ಎಚ್. (33) ಹುತಾತ್ಮ ಯೋಧ.

    ಗುರು ಅವರು ಸಿಆರ್‌ಪಿಎಫ್‌ ನ 82ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2011ರಲ್ಲಿ ಸಿಆರ್‌ಪಿಎಫ್‌ ಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ್‍ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು.

    ಹುತಾತ್ಮ ಯೋಧ ಗುರು ಯಾರು?: ಗುಡಿಗೆರೆ ಕಾಲೋನಿಯ ಹೊನ್ನಯ್ಯ ಹಾಗೂ ಚಿಕ್ಕೋಳಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು. ಇವರಿಗೆ ಇಬ್ಬರು ತಮ್ಮಂದಿರಿದ್ದು ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಆನಂದ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರು ಅವರ ಅಪ್ಪ ಅಮ್ಮ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ದುಡಿಯುತ್ತಿದ್ದರು.

    ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಗುರು ಸಾವಿನ ಸುದ್ದಿ ಕೇಳಿ ಗುಡಿಗೆರೆ ಕಾಲೋನಿಯ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇಲ್ಲೇ ಬಂದ್ಬಿಡು ಅಂದಿದ್ದರಂತೆ ತಾಯಿ!: ಮೊನ್ನೆ ಫೆಬ್ರವರಿ 10ರಂದು ರಜೆ ಮುಗಿಸಿ ವಾಪಸ್ ತೆರಳುವ ಮುನ್ನ ಗುರು ತಾಯಿ ಚಿಕ್ಕೋಳಮ್ಮ, ಏನಕ್ಕೆ ಹೋಗ್ತೀಯಾ..? ಈ ಕೆಲಸ ಬಿಟ್ಟು ಬಿಡು, ಇಲ್ಲೇ ಇರು ಎಂದು ಗುರುವಿಗೆ ಕಿವಿ ಮಾತು ಹೇಳಿದ್ದರಂತೆ. ಆದರೆ ಇದಕ್ಕೆ ಗುರು, ನಾನು ದೇಶ ಸೇವೆ ಮಾಡಬೇಕು. ನನ್ನಂತ ತುಂಬಾ ಜನರು ಯೋಧರಿದ್ದಾರೆ. ನಾವು ಕೋಟ್ಯಂತರ ಜನರ ರಕ್ಷಣೆ ಮಾಡಬೇಕು. ನಾನು ಕೆಲಸ ಬಿಡಲ್ಲ ಎಂದು ಹೇಳಿದ್ದರಂತೆ. ಪುತ್ರನ ಸಾವಿನ ವಿಷಯ ತಿಳಿದು ತಂದೆ ಹೊನ್ನಯ್ಯ ಅಸ್ವಸ್ಥರಾಗಿದ್ದಾರೆ. ಸದ್ಯ ಗುರು ಪತ್ನಿ ಕಲಾವತಿ ತವರು ಮನೆಯಲ್ಲಿದ್ದು, ಸಂಬಂಧಿಕರ ಜೊತೆ ಗುಡಿಗೆರೆ ಕಾಲೋನಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    https://youtu.be/5JqTWRx0JWA

    ಘಟನೆ ವಿವರ: ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದ. ಈ ದಾಳಿಯಲ್ಲಿ ಇದುವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪುಲ್ವಾಮಾಗೆ ಭೇಟಿ ನೀಡಲಿದ್ದಾರೆ.

  • ಕಾಶ್ಮೀರದ CRPF ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ- ಐವರು ಯೋಧರು ಹುತಾತ್ಮ

    ಕಾಶ್ಮೀರದ CRPF ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ- ಐವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಮಾದಲ್ಲಿನ ಸಿಆರ್‍ಪಿಎಫ್ ತರಬೇತಿ ಕೇಂದ್ರದ ಮೇಲೆ ಮಧ್ಯರಾತ್ರಿ ಉಗ್ರರು ದಾಳಿ ನಡೆಸಿದ ಪರಿಣಾಮ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಉಗ್ರರನ್ನು ಯೋಧರು ಸದೆಬಡಿದಿದ್ದಾರೆ

    ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. 4 ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ಜೈಷ್ ಉಗ್ರ ನೂರ್ ಮಹಮ್ಮದ್ ತಂತ್ರೇನನ್ನು ಎನ್‍ಕೌಂಟರ್ ಮಾಡಲಾಗಿತ್ತು. ನವೆಂಬರ್‍ನಲ್ಲಿ ಇದೇ ತಂಡದ ಮೂವರು ಉಗ್ರರನನ್ನು ಹತ್ಯೆ ಮಾಡಲಾಗಿತ್ತು. ಅವರಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಸಝರ್‍ನ ಸಂಬಂಧಿಯೂ ಒಬ್ಬನಾಗಿದ್ದ.

    ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಉಗ್ರರು ಸಿಆರ್‍ಪಿಎಫ್ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ತರಬೇತಿ ಕೇಂದ್ರದ 185ನೇ ಬೆಟಾಲಿಯನ್‍ನ ಆವರಣದೊಳಗೆ ನುಗ್ಗುವ ಮುನ್ನ ಗ್ರೆನೇಡ್ ಎಸೆದು ಗುಂಡಿನ ದಾಳಿ ಆರಂಭಿಸಿದ್ದರು ಸ್ಟೇಷನ್‍ನಲ್ಲಿ ಎಷ್ಟು ಮಂದಿ ಸಿಆರ್‍ಪಿಎಫ್ ಯೊಧರನ್ನು ನಿಯೋಜಿಸಲಾಗಿತ್ತು ಎಂಬುದು ತಿಳಿದುಬಂದಿಲ್ಲ. ಆದ್ರೆ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆ ಶುರು ಮಾಡಲಾಯ್ತು.

    ಶೂಟೌಟ್‍ನ ಆರಂಭಿಕ ಗಂಟೆಗಳಲ್ಲಿ ಸಿಆರ್‍ಪಿಎಫ್ ಸಿಬ್ಬಂದಿ ಶರೀಫ್ ಉದ್ ದಿನ್ ಗನಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ರು. ನಂತರ ಎನ್‍ಕೌಂಟರ್‍ನಲ್ಲಿ ಯೋಧರಾದ ರಾಜೇಂದ್ರ ನೇನ್, ಪಿಕೆ ಪಾಂಡಾ ಬಲಿಯಾದ್ರು. ಕಟ್ಟಡದೊಳಗೆ ಸಿಲುಕಿದ್ದ ಅಧಿಕಾರಿ ಕುಲ್‍ದೀಪ್ ರೈ ಹೃದಯಾಘಾತದಿಂದ ಸಾವನ್ನಪ್ಪಿದ್ರು.

    ಉಗ್ರರು ಸಿಆರ್‍ಪಿಎಫ್ ಕೇಂದ್ರವನ್ನು ಟಾರ್ಗೆಟ್ ಮಾಡಿದ್ದಾರೆಂಬ ಎಚ್ಚರಿಕೆಯ ಮಧ್ಯೆಯೂ ಈ ದಾಳಿ ನಡೆಸಿದೆ. ದಾಳಿ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

    ಕಳೆದ 2-3 ದಿನಗಳಿಂದ ಉಗ್ರರು ದಾಳಿಗೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಮುಂಚೆ ಅವರಿಗೆ ಸೂಕ್ತ ಸ್ಥಳ ಹಾಗೂ ಸಮಯ ಸಿಕ್ಕಿರಲಿಲ್ಲ. ಹೀಗಾಗಿ ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್‍ಪಿ ವೈದ್ ಹೇಳಿದ್ದಾರೆ.

  • ಜಮ್ಮುವಿನ ಪುಲ್ವಾಮಾ ವಲಯದಲ್ಲಿ ಇಬ್ಬರು ಉಗ್ರರ ಎನ್‍ಕೌಂಟರ್

    ಜಮ್ಮುವಿನ ಪುಲ್ವಾಮಾ ವಲಯದಲ್ಲಿ ಇಬ್ಬರು ಉಗ್ರರ ಎನ್‍ಕೌಂಟರ್

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ವಲಯದಲ್ಲಿ ಉಗ್ರರ ಹಾಗೂ ಸೈನಿಕರ ನಡುವಿನ ಸಂಘರ್ಷ ಮುಂದುವರೆದಿದ್ದು, ಶುಕ್ರವಾರ ಇಬ್ಬರು ಉಗ್ರರರನ್ನು ಎನ್‍ಕೌಂಟರ್ ಮಾಡಲಾಗಿದೆ.

    ಪುಲ್ವಾಮಾ ವಲಯದ ಲಿಟ್ಟರ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಪಡೆದ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

    ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಸೈನಿಕ ವಿರುದ್ಧ ಮರುದಾಳಿಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈನಿಕರ ಗುಂಡಿಗೆ ವಾಸಿಂ ಷಾ ಮತ್ತು ಹಫಿಜ್ ನಿಸಾರ್ ಎಂಬ ಇಬ್ಬರು ಉಗ್ರರು ಹತರಾಗಿದ್ದು, ಈ ಇಬ್ಬರು ಲಷ್ಕರ್-ಇ-ತೊಯ್ಬಾ ಉಗ್ರಗಾಮಿಗಳಾಗಿದ್ದರು. ಹಲವು ಭಯೋತ್ಪಾದನ ಕೃತ್ಯಗಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಕಾರ್ಯಾಚರಣೆಯನ್ನು ಮುಂದುವರೆದಿರುವುದಾಗಿ ಮಾಹಿತಿ ಲಭಿಸಿದೆ.

    ಈ ಹಿಂದೆ ಆಗಸ್ಟ್ 28 ರಂದು ಪುಲ್ವಾಮಾ ಪ್ರದೇಶದಲ್ಲಿ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು, ಈ ಸಮಯದಲ್ಲಿ ಮನೆಯಲ್ಲಿ ಅಡಗಿ ಕುಳಿತ ಉಗ್ರರನ್ನು ಎನ್‍ಕೌಂಟರ್ ಮಾಡಲು ನಡೆದ ಕಾರ್ಯಾಚರಣೆಯಲ್ಲಿ 3 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ಭಾರತದ 8 ರಕ್ಷಣಾ ಪೊಲೀಸರು ದಾಳಿಯಲ್ಲಿ ಹುತಾತ್ಮರಾಗಿದ್ದರು.

    ಭಾರತದ ಸೈನಿಕರು ಹೆಚ್ಚು ಪ್ರಮಾಣದಲ್ಲಿ ಹುತಾತ್ಮರಾಗಲು ಪ್ರಮುಖ ಕಾರಣವೇನೆಂದರೆ, ಉಗ್ರರು ಅಡಗಿ ಕುಳಿತ ಕಟ್ಟಡದಲ್ಲಿ ನಾಗರೀಕರು ವಾಸಿಸುತ್ತಿದ್ದರು. ಹೀಗಾಗಿ ಅವರನ್ನು ಕಾರ್ಯಾಚರಣೆಯ ವೇಳೆ ಸ್ಥಳದಿಂದ ಹೊರತರುವ ಸಂದರ್ಭದಲ್ಲಿ ಉಗ್ರರು ದಾಳಿಯನ್ನು ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಧೀಕ್ಷಕ ವೈದ್ ತಿಳಿಸಿದ್ದರು.